ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಪೂರ್ವಾಚಾರಿ
ಆಯತದಲ್ಲಿ ಪೂರ್ವಾಚಾರಿಯ ಕಂಡೆ
ಸ್ವಾಯತದಲ್ಲಿ ಪೂರ್ವಾಚಾರಿಯ ಕಂಡೆ
ಸನ್ನಿಹಿತದಲ್ಲಿ ಪೂರ್ವಾಚಾರಿಯ ಕಂಡೆ
ಗುಹೇಶ್ವರಲಿಂಗದಲ್ಲಿ ಪೂರ್ವಾಚಾರಿ ಸಂಗನಬಸವಣ್ಣನ,
ಶ್ರೀಪಾದಕ್ಕೆ ನಮೋ ನಮೋ ಎಂಬೆನು.
ವಚನಾರ್ಥ:
ಬಸವಣ್ಣನನ್ನು ಬಣ್ಣಿಸಿ ಅಲ್ಲಮ ಬರೆದ ವಚನವಿದು. ಆಯತ, ಸ್ವಾಯತ, ಸನ್ನಿಹಿತದಲ್ಲಿ ಪೂರ್ವಾಚಾರಿ ಸಂಗನ ಬಸವಣ್ಣನ ಕಂಡೆ ಎಂದು ಅಲ್ಲಮ ಆಡುವ ಮಾತುಗಳಿವು. ಪೂರ್ವದಲ್ಲಿ ಅಂದರೆ ಮೊದಲಿಗನಾಗಿ, ಆಚಾರ ಅಂದರೆ ಕೆಲಸವನ್ನು ಮಾಡುವವನು ಪೂರ್ವಾಚಾರಿ. ಇಂಗ್ಲಿಷಿನಲ್ಲಿ ಪಯನೀರ್ ಎಂದಂತೆ. ಆಯತ ಅಂದರೆ ಲಿಂಗ ದೀಕ್ಷೆ ಪಡೆಯುವುದು, ಸ್ವಾಯತ ಅಂದರೆ ಲಿಂಗವನ್ನು ಧ್ಯಾನಿಸುವುದು, ಸನ್ನಿಹಿತ ಅಂದರೆ ದೀಕ್ಷೆ ಪಡೆದ ಲಿಂಗವನ್ನು ತನ್ನಲ್ಲಿ ಅಂತರ್ಗತಗೊಳಿಸಿಕೊಳ್ಳುವುದು ಈ ಎಲ್ಲದರಲ್ಲಿ ಬಸವಣ್ಣನೇ ಮೊದಲಿಗ. ಬಸವಣ್ಣನೇ ಪೂರ್ವಾಚಾರಿ. ಬಸವಣ್ಣ ಪೂಜನೀಯ. ಪೂರ್ವಾಚಾರಿ ಎಂಬ ವಿಶಿಷ್ಟ ಪದ ಅಲ್ಲಮನ ಅನನ್ಯವಾದ ಪದಾನ್ವೇಷಣೆ.
ಪದಪ್ರಯೋಗಾರ್ಥ:
ಪೂರ್ವಾಚಾರಿ ಅಂದರೆ ಪ್ರವರ್ತಕ. ಯಾವುದೇ ಕೆಲಸ ಮಾಡುವಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿ ಇರುವವ. ಶರಣ ಪರಂಪರೆಯನ್ನು ಹುಟ್ಟು ಹಾಕುವಲ್ಲಿ ಬಸವಣ್ಣನೇ ಪೂರ್ವಾಚಾರಿ. ಹಾಗಾಗಿ ಬಸವಣ್ಣ ಆಚಾರ್ಯ ಪುರುಷ. ಇದನ್ನು ಅಲ್ಲಮನಂಥ ಮೇರು ವ್ಯಕ್ತಿತ್ವದ ಅಧ್ಯಾತ್ಮ ಸಾಧಕನೇ ನಮೋ ನಮೋ ಎಂದು ಬಸವಣ್ಣನನ್ನು ಉದ್ದೇಶಿಸಿ ಹೇಳಿರುವುದು. ಬಸವಣ್ಣ ಕಾಯಕ ಸಿದ್ಧಾಂತದ ಪ್ರತಿಪಾದನೆಯಲ್ಲಿ ಪೂರ್ವಾಚಾರಿ. ಜಾತಿ, ಧರ್ಮ, ಹೆಣ್ಣು, ಗಂಡು, ಬಡತನ, ಸಿರಿತನ ಭೇದವಿಲ್ಲದೆ ಎಲ್ಲರೂ ಸಮಾನರು ಎಂದು ಹೇಳಿ ಅನುಭವ ಮಂಟಪ ಕಟ್ಟಿದ ಪೂರ್ವಾಚಾರಿ. ಧಾರ್ಮಿಕ, ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ರಂಗಗಳಲ್ಲಿ ಬಸವಣ್ಣ ಮಾಡಿದ ಪೂರ್ವಾಚಾರಿ ಕೆಲಸಗಳನ್ನು ಪುರಸ್ಕರಿಸಿ ಕರ್ನಾಟಕ ಸರ್ಕಾರ “ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದು ಅಧಿಕೃತ ಘೋಷಣೆ ಮಾಡಿದೆ. ಬಸವಣ್ಣನ ಪೂರ್ವಾಚಾರಿತನವನ್ನು ಕುವೆಂಪು ಅನುಮೋದಿಸಿದ್ದು ಹೀಗೆ: “ಕಾರ್ತಿಕದ ಕತ್ತಲಲ್ಲಿ ಆಕಾಶ ದೀಪವಾಗಿ ನೀ ಬಂದೆ ಬಟ್ಟೆಗೆಟ್ಟವರಿಗೊಂದು ದೊಂದು ದಿಕ್ಕಾಗಿ ಎಂಟು ಶತಮಾನಗಳ ಹಿಂದೆ ಅಗ್ನಿ ಖಡ್ಗವನಾಂತು ಓ ಅಧ್ಯಾತ್ಮ ಕ್ರಾಂತಿ ವೀರ ದೇವ ದಯೆಯೊಂದು ಹೇ ಧೀರಾವತಾರ ಶ್ರೀ ಗುರು ಬಸವೇಶ್ವರ”.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




