ಅಲ್ಲಮನ ಅನನ್ಯ ಪದಪ್ರಯೋಗಗಳು | ಆಡುತ್ತಾಡುತ್ತ 

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಆಡುತ್ತಾಡುತ್ತ 
ಅದು ಮಂದರ ಗಿರಿಯ ಕೋಡು,
ಬ್ರಹ್ಮಶಿಖಿ, ಬೇಡಿತ್ತನೀವ ವರದಾನಿಯನೇನೆಂಬೆನು?
ಆಡುತ್ತಾಡುತ್ತ ಅನಲನುರಿದು
ಎರಡೊಂದಾದ ಪರಿಯ ನೋಡಾ.
ನೋಡುತ್ತ ನೋಡುತ್ತ
ಅನಲನಲ್ಲಿಯೆ ಅವಿತು ಕೂಡಿದ
ಮಹಾಘನವನೇನೆಂಬೆ ಗುಹೇಶ್ವರಾ.

ವಚನಾರ್ಥ:
ಮಂದಾರ ಗಿರಿ ಎಂದರೆ ಪುರಾಣ ಪುಣ್ಯಕಥೆಗಳಲ್ಲಿ ಬರುವ ಒಂದು ಪರ್ವತದ ಹೆಸರು. ಮನಸ್ಸನ್ನು ಇಲ್ಲಿ ಮಂದಾರ ಗಿರಿಗೆ ಹೋಲಿಸಲಾಗಿದೆ. ಪರ್ವತದ ತುತ್ತತುದಿಯಲ್ಲಿ ಕೋಡು. ಆ ಕೋಡು ಯಾವುದೆಂದರೆ ಮನಸ್ಸಿನ ಕ್ರಿಯಾಶೀಲತೆ. ಅದು ಬ್ರಹ್ಮಶಿಖಿ ಅಂದರೆ ಮನಸ್ಸಿನ ಬ್ರಹ್ಮನಾಳದ ಅಗ್ರಭಾಗ. ಅಲ್ಲಿ ಪ್ರಾಣಲಿಂಗವು ನೆಲೆಗೊಂಡಿದೆ. ಕ್ರಿಯಾಶೀಲ ಮನಸ್ಸನ್ನು ಸಮರ್ಪಕವಾಗಿ ದುಡಿತಕ್ಕೆ ಒಳಪಡಿಸಿದರೆ ಪ್ರಾಣಲಿಂಗದ ಕೃಪೆಯಾಗಿ ವರದಾನವಾಗುತ್ತದೆ. ಅಂದುಕೊಂಡದ್ದು ಆಗೇ ತೀರುತ್ತದೆ. ಅಂತಹ ಶರಣನು ಆಡುತ್ತಾಡುತ್ತ ತನಗರಿವಿಲ್ಲದೆಯೇ ಬೆಂಕಿಯ ಶಾಖಕ್ಕೆ ಉದ್ದೀಪನಗೊಂದು ಬೆಳಗುವ ಜ್ಯೋತಿಯಂತೆ ಪ್ರಾಣಲಿಂಗದಲ್ಲಿ ಒಂದಾಗುತ್ತಾನೆ. ಅದು ಎರಡೊಂದಾಗುವ ಬಗೆ. ಆಡುತ್ತಾಡುತ್ತ ಹೋದವ ನೋಡುತ್ತ ನೋಡುತ್ತಲೇ ಆ ಪ್ರಾಣಲಿಂಗದ ಪ್ರಭೆಯಲ್ಲಿ ಅವಿತು ಹೋಗುತ್ತಾನೆ. ಅದುವೇ ಮಹಾಘನ.

ಪದಪ್ರಯೋಗಾರ್ಥ:
ಆಡುತ್ತಾಡುತ್ತ ಎಂಬುದು ವಚನದಲ್ಲಿರುವ ಅನನ್ಯ ಪದ. ಈ ಪದ ಅಲ್ಲಮನ ಇದೊಂದೇ ವಚನದಲ್ಲಿ ಮಾತ್ರ ಬಳಕೆ ಆಗಿದೆ. ಆಡುತ್ತಾಡುತ್ತ ಪದವನ್ನು ಹಿಂಬಾಲಿಸುತ್ತ ನೋಡುತ್ತ ನೋಡುತ್ತ ಎಂಬ ಪದ ವಚನದಲ್ಲಿ ಬರುತ್ತದೆ. ಅಲ್ಲಮನಿಂದ ಪ್ರಯೋಗಿಸಲ್ಪಟ್ಟ ಈ ಪದಗಳಿಗೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅವ್ಯಕ್ತವಾದ ಅಗ್ರಸ್ಥಾನವಿದೆ. ಆಡುತ್ತಾಡುತ್ತ ಅಂದರೆ ಪ್ರಜ್ಞಾಪೂರ್ವಕ ಪ್ರಯತ್ನವಿಲ್ಲದೆ ನಡೆದುಹೋಗುವ ಘಟನೆ. ಸುಖಾಸುಮ್ಮನೆ ಕಷ್ಟಕ್ಕೆ ಒಳಗಾಗುವವರಿಗೆ “ಆಡುತ್ತಾಡುತ್ತ ಅಡವಿ ಸೇರಿದರು” ಅಂತ ಗಾದೆ ಹೇಳುತ್ತಾರೆ. ಆಡುತ್ತಾಡುತ್ತ ಎಂಬ ಪದ ಬೇಂದ್ರೆಯವರ ಮರುಳುಗೊಳಿಸುವ ಮಹಾಕವನ “ಮರುಳುಸಿದ್ದರ ಮಾಯಾಕಿನ್ನರಿ”ಯಲ್ಲಿ ಹೀಗೆ ಬಳಕೆಯಾಗಿದೆ. ಮರುಳು ಮಾಡಾಕ ಹೋಗಿ ಮರುಳಸಿದ್ಧನ ನಾರಿ ಮರುಳಾಗ್ಯಾಳ ಜಂಗಮಯ್ಯಗೆ “ಆಡುತಾಡುತ” ಬಂದು ಸಿಂಗಾರಸೊಳ್ಳೀ ಹಾಂಗ ಹಾಡಿಲೆ ಕಿವಿಗಲ್ಲ ಕಡಿದ್ಯೇನ… ಇನ್ನೂ ಮುಂದುವರಿದು ಬೇಂದ್ರೆ ಬೇರೊಂದು ಕವನ ಸಂದರ್ಭದಲ್ಲಿ ಮನುಷ್ಯನ ಜೀವಿತವು ಕಳೆದು ಹೋಗುವ ಪರಿಯನ್ನು ಆಡುತ್ತಾಡುತ್ತ ಆಯುಷ್ಯ ಎಂದು ಕರೆದಿದ್ದಾರೆ. ಇದೇ ಪದವನ್ನು ಆಧರಿಸಿ ಮತ್ತು ಆರಾಧಿಸಿ ಗಿರೀಶ್ ಕಾರ್ನಾಡ್ ತಮ್ಮ ಆತ್ಮಕಥೆಯನ್ನು “ಆಡಾಡತ ಆಯುಷ್ಯ” ಎಂದು ಹೆಸರಿಸಿ ಬೇಂದ್ರೆಯವರ ಸಾಹಿತ್ಯಕ್ಕೆ ಮರುಳಾಗಿ ಹೋಗಿ ತಾವು ಈ ಪದವನ್ನು ಬಳಸಿದ್ದೇನೆ ಎಂದಿದ್ದಾರೆ. ಹಾಗೆಯೇ ಮುಂದುವರೆದ ಕಾರ್ನಾಡ್ ಮುಂದೆ ತಮ್ಮ ಆತ್ಮಕಥೆಯ ಉತ್ತರಾರ್ಧ ಪ್ರಕಟವಾದಲ್ಲಿ ಅದಕ್ಕೆ “ನೋಡುತ್ತ ನೋಡುತ್ತ” ದಿನಮಾನ ಅಂತ ಹೆಸರಿಡುತ್ತೇನೆ ಎಂದು ಹೇಳಿದ್ದರು. ಕನ್ನಡದ ಜ್ಞಾನಪೀಠರು ಮರುಳಾದ ಆಡುತ್ತಾಡುತ್ತ, ನೋಡುತ್ತ ನೋಡುತ್ತ ಪದಗಳ ಮೂಲಪೀಠ ಅಲ್ಲಮನ ವಚನವೇ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ 

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...