ಅಲ್ಲಮನ ಅನನ್ಯ ಪದಪ್ರಯೋಗಗಳು | ಭ್ರಮರ ಕೀಟ ನ್ಯಾಯ 

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಭ್ರಮರ ಕೀಟ ನ್ಯಾಯ
ಗುರುವಿನ ಪರಿ ವಿಪರೀತವಾಯಿತ್ತಯ್ಯಾ, ಭ್ರಮರ ಕೀಟ ನ್ಯಾಯದಂತಾಯಿತ್ತು.
ಗುರು ತನ್ನ ನೆನೆವನ್ನಬರ
ಎನ್ನನಾ ಗುರುವ ಮಾಡಿದನು.
ಇನ್ನು ಶಿಷ್ಯನಾಗಿ ಶ್ರೀಗುರುವ
ಪೂಜಿಸುವರಾರು ಹೇಳಾ ಗುಹೇಶ್ವರಾ?

ಪದಾರ್ಥ:
ಭ್ರಮರ  =  ದುಂಬಿ, ಭೃಂಗ
ಕೀಟ  =  ಹುಳು
ನ್ಯಾಯ  = ಸನ್ನಿವೇಶ
ನೆನೆವನ್ನಬರ  = ನೆನೆಯುವ ಪ್ರಕ್ರಿಯೆ

ವಚನಾರ್ಥ:
ಗುರು ಶಿಷ್ಯ ಸಂಬಂಧದ ನೆಲೆಯಲ್ಲಿ ಬರೆದ ವಚನ. ಗುರು ಶಿಷ್ಯರ ನಡುವಿನ ಪರಸ್ಪರ ಪ್ರಭಾವದ ಪ್ರಖರತೆ ಹೇಗಿರುತ್ತದೆ ಎಂದರೆ ಕಾಲಂತರದಲ್ಲಿ ಯಾರಿಗೆ ಯಾರು ಗುರು, ಯಾರಿಗೆ ಯಾರು ಶಿಷ್ಯ ಎಂಬ ವ್ಯತ್ಯಾಸವೇ ತೊಡೆದು ಹೋಗುವಂತ ಸನ್ನಿವೇಶ ನಿರ್ಮಾಣವಾಗುತ್ತದೆ. ಶಿಷ್ಯನ ಮೇಲೆ ಗುರುವಿನ ಪ್ರಭಾವದ ಪರಿಯು ಎಷ್ಟು ವಿಪರೀತಕ್ಕೆ ಹೋಗುತ್ತದೆ ಅಂದರೆ ಗುರುವು ತನ್ನನ್ನು ಸದಾ ನೆನೆಯುವ ಶಿಷ್ಯನನ್ನು ತನ್ನಂತೆಯೇ ಗುರುವನ್ನಾಗಿ ಮಾಡುವನು. ಇದು ಅಲ್ಲಮ ಕಂಡ ಬೆರಗು. ಕೀಟವೊಂದು ಭ್ರಮರದ ಸತತ ಸಂಪರ್ಕದಲ್ಲಿದ್ದಾಗ ಭ್ರಮರದ ಝೇಂಕಾರವನ್ನು ಕೇಳುತ್ತಾ ಕೇಳುತ್ತಾ ತಾನೇ ಭ್ರಮರದಂತೆ ಭ್ರಮಿಸುತ್ತಾ ತನ್ನ ವರ್ತನೆಯನ್ನು ಪರಿವರ್ತಿಸಿಕೊಳ್ಳುವ ಪರಿಯೇ ಭ್ರಮರ ಕೀಟ ನ್ಯಾಯ. ಆರಂಭದಲ್ಲಿ ಗುಹೇಶ್ವರನೇ ಭ್ರಮರ, ಅಲ್ಲಮನೆ ಕೀಟ. ನಂತರದಲ್ಲಿ ಭ್ರಮರ ಕೀಟ ನ್ಯಾಯದ ಪ್ರಕಾರ ಗುಹೇಶ್ವರನೂ ಭ್ರಮರ, ಅಲ್ಲಮನೂ ಭ್ರಮರ. ಅದು ಜ್ಞಾನದ ಭ್ರಮಾಲೋಕ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪದ ಪ್ರಯೋಗಾರ್ಥ:
ಭ್ರಮರ ಕೀಟ ನ್ಯಾಯ ಎಂದರೆ ಜೀರುಂಡೆಯು ಭ್ರಮರವನ್ನು ಧ್ಯಾನಿಸುತ್ತಾ ಅದನ್ನೇ ನೆನಪಿಸಿಕೊಳ್ಳುತ್ತಾ ಕೊನೆಗೆ ತಾನೂ ಭ್ರಮರೆಯಾಗುವ ನ್ಯಾಯ. ಇದು ಒಂದು ರೀತಿಯ ರೂಪಾಂತರದ ಸನ್ನಿವೇಶ. ಇದರಲ್ಲಿ ಒಂದು ವಸ್ತುವನ್ನು ಸತತವಾಗಿ ಧ್ಯಾನಿಸುವುದರಿಂದ ಅಥವಾ ಅದರ ಬಗ್ಗೆ ಯೋಚಿಸುವುದರಿಂದ ಅದನ್ನೇ ಹೋಲುವಂತಾಗುವುದು ಅಥವಾ ಅದರಂತೆ ಬದಲಾಗುವುದು ಎಂದು ಹೇಳಲಾಗುತ್ತದೆ.

ಸಂಸ್ಕೃತದಲ್ಲಿ ಇದನ್ನು “ಮೃತ್ತಿಕಾತ: ಕೀಟಮ್ ಆನಯತಿ, ತತಃ ಕರ್ಣಯೋ ರ್ಝೇಂಕಾರಂ ಕೃತ್ವಾ ಆತ್ಮಸಾದೃಶಂ ಕರೋತಿ” ಎಂದು ಹೇಳುತ್ತಾರೆ. ಇದರ ಅರ್ಥ, ಮಣ್ಣಿನಿಂದ ಒಂದು ಕೀಟವನ್ನು ಮೇಲಕ್ಕೆ ತಂದು ಅದರ ಕಿವಿಯಲ್ಲಿ ಝೇಂಕಾರವನ್ನು ಮಾಡುತ್ತಾ ತಾನು ಭ್ರಮರೆಯಾಗುವಂತೆ ಮಾಡುತ್ತದೆ. ಗುರುವನ್ನು ಆರಾಧಿಸುವ, ಧ್ಯಾನಿಸುವ ಶಿಷ್ಯನು ಕೊನೆಗೆ ಗುರುಗಳಂತೆಯೇ ಆಗುತ್ತಾನೆ ಎಂಬುದು ಇದರ ತಾತ್ಪರ್ಯ. ಮೂಲ ಸಂಸ್ಕೃತದ ನುಡಿಗಟ್ಟನ್ನು ಕನ್ನಡದಲ್ಲಿ ತಂದು ವಚನದಲ್ಲಿ ಕರಾರುವಾಕ್ಕಾಗಿ ಬಳಸಿ ವಿಷಯ ನಿರೂಪಣೆ ಮಾಡಿ “ಭ್ರಮರ ಕೀಟ ನ್ಯಾಯ” ಎಂಬ ಅದ್ಭುತ ಕಲ್ಪನೆಗೆ ನ್ಯಾಯ ಒದಗಿಸಿರುವುದು ಅಲ್ಲಮನ ಅನನ್ಯ ಪದಪ್ರಯೋಗ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ 

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...

ಚದುರಿದ ಚಿತ್ರ | ಮುಟ್ಟು, ಲಜ್ಜೆ ಮತ್ತು ನಮ್ಮ‌ ಪೂರ್ವಗ್ರಹಗಳು

ವಿಜ್ಞಾನ, ವೈಚಾರಿಕತೆ, ಆಧುನೀಕರಣ ಮುಂತಾಗಿ ನಾವೆಷ್ಟೇ ಮಾತನಾಡಿಕೊಂಡರೂ, ಬದಲಾಗಿದ್ದೇವೆ ಎಂದೆಲ್ಲಾ...