ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಕಾಮನ ಹುಯ್ಯಲ
ಬ್ರಹ್ಮಂಗೆ ದೂರುವೆನೆ?
ಸರಸ್ವತಿಯ ವಿಕಾರ.
ವಿಷ್ಣುವಿಂಗೆ ದೂರುವೆನೆ?
ಲಕ್ಷ್ಮಿಯ ವಿಕಾರ.
ರುದ್ರಂಗೆ ದೂರುವೆನೆ?
ದೇವಿಯ ವಿಕಾರ.
ಇನ್ನಾರಿಗೆ ದೂರುವೆ ಕಾಮನ ಹುಯ್ಯಲ? ಎಲ್ಲರೂ ತಮ್ಮ ತಮ್ಮ ಅವಸ್ಥೆಯ ಕಳೆಯಲಾರರು.
ಪರದೈವವೆಂಬಂತೆ ನಾನು ಹೇಳಾ ಗುಹೇಶ್ವರಾ?
ವಚನಾರ್ಥ:
ಜನರು ತಮಗೆ ಕಷ್ಟ ಬಂದಾಗ ಯಾರಲ್ಲಿ ಮೊರೆ ಇಡುತ್ತಾರೆ? ತ್ರಿಮೂರ್ತಿಗಳಲ್ಲಿ. ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ. ಪುರಾಣ ಕಥೆಗಳ ಪ್ರಕಾರ ಸರಸ್ವತಿ ಬ್ರಹ್ಮನ ಹೆಂಡತಿ. ಲಕ್ಷ್ಮಿ ವಿಷ್ಣುವಿನ ಹೆಂಡತಿ. ಹಾಗೆಯೇ ಶಕ್ತಿದೇವಿ ಶಂಕರನ ಹೆಂಡತಿ. ಅಂದರೆ ನಮ್ಮಂತೆಯೇ ತ್ರಿಮೂರ್ತಿಗಳೂ ಸಂಸಾರಿಗಳು ಅಂದಂತಾಯಿತು. ಸಂಸಾರ ಎಂದಾಕ್ಷಣ ಪ್ರೇಮ, ಕಾಮ, ವಿರಹ ಇತ್ಯಾದಿಗಳು. ಮನುಷ್ಯ ಈ ಸಂಸಾರದ ತೊಂದರೆಗಳಿಂದ ಹೊರಬರಲು ಯಾರಲ್ಲಿ ಪ್ರಾರ್ಥಿಸಬೇಕು? ಬ್ರಹ್ಮನಲ್ಲಿ ಅಂದರೆ ಆತನೂ ಸರಸ್ವತಿಯೊಂದಿಗಿನ ಸಂಸಾರದಲ್ಲಿ ವಿಕಾರಗೊಂಡವನೇ. ವಿಷ್ಣುವಿನಲ್ಲಿ ದೂರು ಸಲ್ಲಿಸೋಣ ಅಂದರೆ ಆತ ಲಕ್ಷ್ಮಿಯ ಪ್ರೇಮಪಾಶದಲ್ಲಿದ್ದಾನೆ. ರುದ್ರನಲ್ಲಿ ಮೊರೆಯಿಡೋಣ ಅಂದರೆ ಅವನು ಮಹಾಶಕ್ತಿದೇವಿಯ ಮೋಹದಲ್ಲಿದ್ದಾನೆ. ಇವರೆಲ್ಲರೂ ತಮ್ಮ ತಮ್ಮ ಅವಸ್ಥೆಯನ್ನೇ ಕಳೆಯಲಾರರು. ಹಾಗಾದರೆ ಇನ್ಯಾರಿಗೆ ದೂರಬೇಕು ನಮ್ಮ ಪ್ರೇಮ ಕಾಮಗಳ ಬವಣೆಯನ್ನು. ಆದ್ದರಿಂದ ನಮ್ಮಲ್ಲಿ ನಾವೇ ದೈವತ್ವವನ್ನು ಕಂಡುಕೊಳ್ಳಬೇಕು. ನಮಗೆ ಸರಿಕಂಡ ದಾರಿಯಲ್ಲಿ ನಡೆಯಬೇಕು.
ಪದ ಪ್ರಯೋಗಾರ್ಥ:
ಹುಯ್ಯಲು ಅಂದರೆ ಕೂಗಾಟ, ಬೊಬ್ಬೆ ಎಂದರ್ಥ. ಕಾಮನ ಹುಯ್ಯಲು ಅಂದರೆ ಮನುಷ್ಯನ ಕಾಮಾತುರತೆ. ಕಾಮ ನೈಸರ್ಗಿಕ ಕ್ರಿಯೆ. ಅದು ಸಹಜ ಕ್ರಿಯೆಯಾಗಬೇಕು. ಕಾಮ ಹುಯ್ಯಲಾಗಬಾರದು. ಮನುಷ್ಯ ಬಾಲ್ಯಾವಸ್ಥೆಯನ್ನು ದಾಟಿ ಯೌವನದಲ್ಲಿ ಬಾಳ ಸಂಗಾತಿಯನ್ನು ವರಿಸಿ ಮಕ್ಕಳನ್ನು ಪಡೆದ ನಂತರ ಕಾಮಾತುರತೆಯನ್ನು ಕಡಿಮೆ ಮಾಡಿಕೊಂಡು ಜೀವನದ ದೃಷ್ಟಿಯನ್ನು ಬದಲಿಸಿಕೊಳ್ಳಬೇಕೆಂದು ರಾಮಕೃಷ್ಣ ಪರಮಹಂಸರು ಹೇಳುತ್ತಿದ್ದರು. ಕಾಮವ ತೊರೆದಾತ, ಹೇಮವ ಜರೆದಾತ ಎಂದು ಶರಣನ ವ್ಯಕ್ತಿತ್ವವನ್ನು ಬಸವಣ್ಣ ಬಣ್ಣಿಸಿದ ವಚನವಿದೆ. “ಎಸೆಯದಿರು ಎಸೆಯದಿರು ಕಾಮಾ, ನಿನ್ನ ಬಾಣ ಹುಸಿಯಲೇಕೊ? ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ, ಮರಳಿ ಸುಡಲುಂಟೆ ಮರುಳು ಕಾಮಾ?” ಎಂದು ಅಲ್ಲಮನು ಕಾಮದೇವನನ್ನು ತಮಾಷೆ ಮಾಡಿದ ಪ್ರಸಂಗವಿದೆ. ಕಾಮಾತುರತೆ ಹೆಚ್ಚಾದಾಗ ಮನುಷ್ಯನು ಯಾವ ದೇವರಿಗೆ ದೂರಬೇಕು ಎಂದು ಪ್ರಶ್ನಿಸುವ ವಸ್ತು ವಿಷಯವುಳ್ಳ ಈ ವಚನದಲ್ಲಿ ಕಾಮನ ಹುಯ್ಯಲು ಎಂಬ ಪದ ಪರಿಣಾಮಕಾರಿಯಾಗಿ ಪ್ರಯೋಗಗೊಂಡಿದೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




