ಅಲ್ಲಮನ ಅನನ್ಯ ಪದಪ್ರಯೋಗಗಳು | ಕೆಂಡದ ಮಳೆ

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಕೆಂಡದ ಮಳೆ
ಕೆಂಡದ ಮಳೆ ಕರೆವಲ್ಲಿ
ಉದಕವಾಗಿರಬೇಕು.
ಜಲಪ್ರಳಯವಾದಲ್ಲಿ
ವಾಯುವಿನಂತಿರಬೇಕು.
ಮಹಾಪ್ರಳಯವಾದಲ್ಲಿ
ಆಕಾಶದಂತಿರಬೇಕು.
ಜಗತ್‍ಪ್ರಳಯವಾದಲ್ಲಿ
ತನ್ನ ತಾ ಬಿಡಬೇಕು.
ಗುಹೇಶ್ವರನೆಂಬ ಲಿಂಗ
ತಾನಾಗಿರಬೇಕು.

ವಚನಾರ್ಥ:
ಶರಣನ ದೃಢ ವ್ಯಕ್ತಿತ್ವವನ್ನು ದೃಢೀಕರಿಸಲು ಅಲ್ಲಮ ಬಳಸಿರುವ ನಾಲ್ಕು ಉಪಮೆಗಳು ವಚನದಲ್ಲಿವೆ. ಬಾಹ್ಯ ಜಗತ್ತಿನಲ್ಲಿ ಜರುಗುವ ಯಾವ ವಿಪತ್ತುಗಳೂ ಶರಣನ ಮೇಲೆ ಪರಿಣಾಮ ಬೀರುವುದಿಲ್ಲ. ಮೇಲಿನಿಂದ ಕೆಂಡದ ಮಳೆಗರೆದರೆ ಕೆಳಗೆ ನೀರಿನಂತೆ ನಿಂತು ಕೆಂಡಗಳನ್ನು ನಿಷ್ಕ್ರಿಯಗೊಳಿಸುತ್ತಾನೆ. ಅಂದರೆ ಸುತ್ತಲಿನ ಜನ ದ್ವೇಷ ಜ್ವಾಲೆಯನ್ನು ತನ್ನತ್ತ ಹರಿಸಿದರೆ ಶಾಂತಚಿತ್ತದಿಂದ ಎದುರಿಸುತ್ತಾನೆ. ನೀರಿನ ಪ್ರವಾಹಕ್ಕೆ ಸಿಲುಕಿದರೆ ಗಾಳಿಯ ಹಾಗೆ ಎತ್ತರದಲ್ಲಿ ನಿಲ್ಲುತ್ತಾನೆ. ಅಂದರೆ ಸಂಸಾರ ಸಾಗರದ ಸುಳಿಗೆ ಸಿಕ್ಕದ ಹಾಗೆ ಇರುತ್ತಾನೆ. ಮಹಾ ಪ್ರಳಯ ಘಟಿಸಿ ಭೂಮಿ ನಾಶವಾಗುತ್ತಿದ್ದರೆ ಮೇಲೆ ಆಕಾಶದಲ್ಲಿ ನಿಂತು ನೋಡುತ್ತಾನೆ. ಜಗತ್ತೇ ನಶಿಸಿ ಹೋಗುತ್ತಿರಲು ನಿರ್ಲಿಪ್ತನಾಗಿರುತ್ತಾನೆ. ಅಂದರೆ ತಾನು ನಾಶವಾಗಿ ಹೋಗುವ ಮರಣ ಸ್ಥಿತಿ ಬಂದಾಗಲೂ ಹೆದರದೆ ಬೆದರದೇ ಸ್ಥಾವರ ಲಿಂಗದಂತೆ ಸ್ಥಿರವಾಗಿರುತ್ತಾನೆ.

1945ರಲ್ಲಿ ನಡೆದ ಹಿರೋಶಿಮಾ-ನಾಗಸಾಕಿ ಬಾಂಬ್ ದುರಂತದಿಂದ ಚೇತರಿಸಿಕೊಂಡು ಜಪಾನ್ ದೇಶ ಪುಟಿದೆದ್ದಾಗ ಆ ದೇಶವನ್ನು ಅಭಿನಂದಿಸಿ ಬೇಂದ್ರೆ ಬರೆದ ಕವನದ ಸಾಲುಗಳನ್ನು ಇಲ್ಲಿ ಗಮನಿಸಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಭೂಮಿ ಭಂಗವಾದಡೇನು?
ಬಾನೆ ಕಡಿದು ಬಿದ್ದರೇನು?
ನೆಲಜಲ ಒಂದಾದಡೇನು?
ಒಂದೇ ಮಾತು ಬಲವೆಲ್ಲವು.
ಪ್ರಳಯಕೂ ಅವಿಭಾಜ್ಯವು, ನಮ್ಮಿ ಸಾಮ್ರಾಜ್ಯವು”

ಅಲ್ಲಮನು ಶರಣನ ದೃಢ ವ್ಯಕ್ತಿತ್ವವನ್ನು ವ್ಯಕ್ತಪಡಿಸಲು ಬಳಸಿರುವ ಉಪಮೆಗಳನ್ನೇ ಬೇಂದ್ರೆಯವರು ಜಪಾನೀಯರ ದೇಶ ಕಟ್ಟಿದ ಸಾಮರ್ಥ್ಯವನ್ನು ಬಣ್ಣಿಸಲು ಬಳಸಿದ್ದಾರೆ.

ಪದಪ್ರಯೋಗಾರ್ಥ:
ಕೆಂಡದ ಮಳೆ ಅಂದರೆ ಮಳೆಯಂತೆ ಬೆಂಕಿ ಧರೆಗಿಳಿದು ಸುರಿಯುವುದು. ಕೆಂಡದ ಮಳೆ ಕರೆಯುವುದು ಅನ್ನುವ ಪದ ಪ್ರಯೋಗವೇ ಅತ್ಯಂತ ಪರಿಣಾಮಕಾರಿಯಾದದ್ದು. ಉರಿಯುತ್ತಿರುವ ಬೆಂಕಿ ಕೆಂಡಗಳು ಮೇಲಿನಿಂದ ಸುರಿಯುತ್ತಿವೆ. ಹೇಗೆ ಸುರಿಯುತ್ತಿವೆ? ಮಳೆಯಂತೆ ಸುರಿಯುತ್ತಿವೆ. ಹಾಗೆ ಸುರಿದ ಕೆಂಡಗಳು ಭೂಮಿಗೆ ಬಂದಾಗ ಅಲ್ಲಿ ನಿಂತಿರುವ ನೀರಿನಲ್ಲಿ ಅಂದರೆ ಉದಕದಲ್ಲಿ ಬಿದ್ದು ನಿಷ್ಕ್ರಿಯವಾಗುತ್ತವೆ. ಕೆಂಡ, ಮಳೆ, ಕರೆ, ಉದಕ ಈ ಪದಗಳೆಲ್ಲ ಸನ್ನಿವೇಶದ ಭೀಕರತೆಯನ್ನು ಪರಿಣಾಮಕಾರಿಯಾಗಿ ಬಿಂಬಿಸುವಂತಹವು.

1977ರಲ್ಲಿ ಬಿಡುಗಡೆಯಾದ ‘ಬಯಲುದಾರಿ’ ಚಲನಚಿತ್ರಕ್ಕಾಗಿ ಚಿ. ಉದಯಶಂಕರ್ ರಚಿಸಿರುವ ‘ಬಾನಲ್ಲು ನೀನೇ ಭುವಿಯಲ್ಲು ನೀನೇ’ ಎಂಬ ಅತ್ಯಂತ ಜನಪ್ರಿಯ ಗೀತೆಯಲ್ಲಿ ಅಲ್ಲಮನ ಈ ವಚನದ ಪ್ರಭಾವ ಕಂಡು ಬರುತ್ತದೆ. “ಬಿರುಗಾಳಿ ಬೀಸಿ ಎದುರಾದರೇನು, ಭೂಕಂಪವಾಗಿ ನೆಲ ಬಿರಿದರೇನು, ಕಡಲೆಲ್ಲ ಹೊಮ್ಮಿ ಬಳಿ ಬಂದರೇನು, ಮಳೆಯಂತೆ ಬೆಂಕಿ ಧರೆಗಿಳಿದರೇನು” ಎಂಬ ಚರಣದಲ್ಲಿ ಬಿರುಗಾಳಿಯಾಗಿ ಬೀಸುವ ವಾಯು, ಪ್ರಳಯ ಸದೃಶ ಭೂಕಂಪ, ಕಡಲೆಲ್ಲ ಉಕ್ಕಿ ಜಲಪ್ರಳಯ, ಕೆಂಡದ ಮಳೆ ಇವೆಲ್ಲಾ ಅಲ್ಲಮನ ವಚನದ ಚಿತ್ರಣಗಳೇ. ವಚನ ಸಾಹಿತ್ಯದ ಹಲವಾರು ಸಾಲುಗಳನ್ನು ತಮ್ಮ ಗೀತೆ ರಚನೆಗೆ ಬಳಸಿಕೊಂಡಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಚಿ. ಉದಯಶಂಕರ್ ಅವರೇ ಹೇಳಿದ್ದರು. ಅಲ್ಲಮನ ವಚನಗಳಲ್ಲಿ ಅಂತಹ ಶಬ್ದಶಕ್ತಿಯಿದೆ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ 

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...