ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಟಕೂಟವೆಂಬ ಕೀರ್ತಿವಾರ್ತೆ

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಮಾಟಕೂಟವೆಂಬ ಕೀರ್ತಿವಾರ್ತೆ

ತನುವಿನಲ್ಲಿ ತನು ಸವೆಯದು,
ಮನದಲ್ಲಿ ಮನ ಸವೆಯದು,
ಧನದಲ್ಲಿ ಧನ ಸವೆಯದು.
ಭಕ್ತಿಯುಕ್ತಿಯ ಮಾತು ನಿನಗೇಕೆ ಹೇಳಾ ಬಸವಾ?
ಮಾಟಕೂಟವೆಂಬ ಕೀರ್ತಿವಾರ್ತೆಗೆ ಸಿಲುಕಿ ಜಂಗಮವೆ ಲಿಂಗವೆಂಬುದ ಮರೆತೆಯೆಲ್ಲಾ ಬಸವಣ್ಣಾ.
ಗುಹೇಶ್ವರನ ಶರಣರಿಗೆ ತ್ರಿಕರಣವನೊಪ್ಪಿಸಿದಲ್ಲದೆ ಭಕ್ತನಾಗಬಾರದು ಕಾಣಾ ಸಂಗನಬಸವಣ್ಣಾ.

ಪದಾರ್ಥ:
ಮಾಟಕೂಟ = ಪವಾಡ
ಕೀರ್ತಿವಾರ್ತೆ = ಪ್ರಸಿದ್ಧ
ತ್ರಿಕರಣ = ತನು, ಮನ, ಮಾತು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಚನಾರ್ಥ:
ಬಸವಣ್ಣನು ಕಲ್ಯಾಣದಲ್ಲಿ ತಾನು ಸ್ಥಾಪಿಸಿದ್ದ ಅನುಭವ ಮಂಟಪಕ್ಕೆ ಅಧ್ಯಕ್ಷನಾಗಲು ಅಲ್ಲಮನನ್ನು ಆಹ್ವಾನಿಸಲು ಬಂದಾಗ ಬಸವಣ್ಣನ ವ್ಯಕ್ತಿತ್ವವನ್ನು ಪರೀಕ್ಷಿಸಲು ಅಲ್ಲಮ ನಡೆಸುವ ನೇರ ಸಂದರ್ಶನ ಸಂವಾದ ಈ ವಚನದಲ್ಲಿದೆ. ತನು ಮನ ಧನಗಳನ್ನು ತನಗಾಗಿ ಸವೆಸುತ್ತಾ ಭಕ್ತಿ ಎಂಬ ಯುಕ್ತಿಯ ಮಾಡುತ್ತಿದ್ದೀಯ ಬಸವಾ ಎಂದು ಅಲ್ಲಮ ಬಸವಣ್ಣನನ್ನು ಮೂದಲಿಸುವ ಪ್ರಸಂಗ ಇಲ್ಲಿದೆ. ಅನುಭವ ಮಂಟಪದ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳುವ ಮುನ್ನ ಬಸವಣ್ಣನನ್ನು ಅಲ್ಲಮ ಪ್ರಶ್ನಿಸಿರುವ ಹಲವಾರು ವಚನಗಳಿವೆ. “ಪ್ರಶ್ನಿಸದೆ ಏನನ್ನೂ ಒಪ್ಪಬೇಡಿ” ಎಂದು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಎಚ್. ನರಸಿಂಹಯ್ಯನವರು ಬರೆಸಿರುವ ಸಂದೇಶ ವಾಕ್ಯ ಇಲ್ಲಿ ಉಲ್ಲೇಖಾರ್ಹವಾಗುತ್ತದೆ. ಬಸವಣ್ಣನ ಉತ್ತರದಿಂದ ತೃಪ್ತನಾದ ಅಲ್ಲಮಪ್ರಭು ಮುಂದೆ ಅನುಭವಮಂಟಪದ ಅಧ್ಯಕ್ಷನಾಗಿ ಶೂನ್ಯಸಿಂಹಾಸನಾಧೀಶ್ವರನಾದದ್ದು ಇತಿಹಾಸ.

ಪದಪ್ರಯೋಗಾರ್ಥ:
ಬಸವಣ್ಣನ ಜನಪ್ರಿಯತೆ ಹೆಚ್ಚಿದಂತೆಲ್ಲ ಮಾನವನಾಗಿದ್ದ ಬಸವಣ್ಣ ಜನಸಾಮಾನ್ಯರ ದೃಷ್ಟಿಯಲ್ಲಿ ದೇವಮಾನವನಾದ. ಬಸವಣ್ಣ ಪವಾಡ ಪುರುಷ ಎಂದು ಜನ ನಂಬಲಾರಂಭಿಸಿದರು. ಬಸವಣ್ಣ ಗಣಿತದಲ್ಲಿ ನಿಸ್ಸೀಮನಾಗಿದ್ದ. ಬಸವಣ್ಣ ನಿರ್ವಹಿಸುತ್ತಿದ್ದ ಇಡೀ ರಾಜ್ಯದ ಆದಾಯ ಖರ್ಚುಗಳ ಲೆಕ್ಕ ತಪ್ಪಿಲ್ಲದೆ ತಾಳೆಯಾಗುತ್ತಿತ್ತು. ಇದನ್ನು ಜನ ಪವಾಡ ಎನ್ನುತಿದ್ದರು. ರಾಜ್ಯ ಖಜಾನೆಯಲ್ಲಿದ್ದ ಹಣ ಬಸವಣ್ಣ ಬರೆಯುತಿದ್ದ ಲೆಕ್ಕಕ್ಕೆ ತಂತಾನೆ ಸರಿದೂಗಿ ಹೊಂದಿಸಿಕೊಳ್ಳುತ್ತದೆ ಎಂಬ ಕಥೆಗಳು ಜನರ ಬಾಯಲ್ಲಿ ಹರಿದಾಡುತ್ತಿದ್ದವು. ಇವೆಲ್ಲ ಮಾಟ ಮಂತ್ರದ ಆಟ ಅನ್ನುವಂತಾಯಿತು. ಬಸವಣ್ಣ ಲೆಕ್ಕ ನಿರ್ವಹಿಸುತ್ತಿದ್ದ ಪರಿ ಒಂದು ತೆರನಾದ ಮ್ಯಾಜಿಕ್‌ನಂತೆ ಇರುತ್ತಿದ್ದುದನ್ನು ಬೇಂದ್ರೆಯವರು ಬರೆದಿರುವ ಬಸವಣ್ಣನ ಜೀವನಗಾಥೆಯ ನಾಟಕ “ತಲೆದಂಡ”ದಲ್ಲಿ ವರ್ಣಿಸಿದ್ದಾರೆ.

ಜನರ ಇಂತಹ ಕಾಲ್ಪನಿಕ ಕಥೆಗಳಿಂದ ಮಾಟಕೂಟವೆಂಬ ಕೀರ್ತಿವಾರ್ತೆಗೆ ಬಸವಣ್ಣ ಸಿಲುಕಿಹೋದ. ಇದನ್ನೇ ಅಲ್ಲಮನು ಬಸವಣ್ಣನನ್ನು ಮೂದಲಿಸಲು ಬಳಸಿದ ಪದಪ್ರಯೋಗ “ಮಾಟಕೂಟವೆಂಬ ಕೀರ್ತಿವಾರ್ತೆ.” ಮಾಟ, ಕೂಟ, ಕೀರ್ತಿ, ವಾರ್ತೆ ಇವೆಲ್ಲಾ ಬಹಳ ಶಕ್ತಿಶಾಲಿ ಪದಗಳು.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...