ಅಲ್ಲಮನ ಅನನ್ಯ ಪದಪ್ರಯೋಗಗಳು | ನಿರ್ಣಯವನರಿಯದ ಮನ

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ನಿರ್ಣಯವನರಿಯದ ಮನ
ನಿರ್ಣಯವನರಿಯದ ಮನವೆ,
ದುಗುಡವನಾಹಾರಗೊಂಡೆಯಲ್ಲಾ
ಮಾಯಾ ಸೂತ್ರವಿದೇನೊ!
ಕಂಗಳೊಳಗಣ ಕತ್ತಲೆ ತಿಳಿಯದಲ್ಲಾ!
ಬೆಳಗಿನೊಳಗಣ ಶೃಂಗಾರ ಬಳಲುತ್ತಿದ್ದುದು, ಗುಹೇಶ್ವರಾ.

ವಚನಾರ್ಥ:
ಇದು ಮನುಷ್ಯನ ಮನಸ್ಥಿತಿಯನ್ನು ಉದ್ದೇಶಿಸಿ ಬರೆದಿರುವ ವಚನ. ಮನುಷ್ಯನು ಬಾಲ್ಯ ಯೌವನಾವಸ್ಥೆಗಳನ್ನು ದಾಟಿ ಜೀವನದಲ್ಲಿ ಪ್ರಬುದ್ಧತೆ ಪಡೆದು ಭಕ್ತನಾಗುವುದಕ್ಕಿಂತ ಮುನ್ನ ತನ್ನ ಮನಸ್ಸನ್ನು ಹೇಗೆ ಸಿದ್ದಗೊಳಿಸಿಕೊಳ್ಳಬೇಕು ಎಂಬ ಚಿಂತನೆ ಇಲ್ಲಿದೆ. ತಾನು ಅನುಸರಿಸುತ್ತಿರುವ ಜೀವನ ಮಾರ್ಗ ಮತ್ತು ಕೈಗೊಂಡ ಕೆಲಸಗಳು ತನ್ನನ್ನು ಎತ್ತ ಕರೆದೊಯ್ಯಬಲ್ಲವು, ಅವು ಉಚಿತವೇ, ಅನುಚಿತವೇ ಎಂದು ಸ್ವಯಂ ನಿರ್ಣಯಿಸಲಾರದ ವ್ಯಕ್ತಿಯ ಮನಸ್ಸಿನಲ್ಲಿ ಹೆಜ್ಜೆ ಹೆಜ್ಜೆಗೂ ದುಗುಡವೆ  ಎದುರಾಗುತ್ತಿರುತ್ತದೆ. ದುಗುಡಕ್ಕೊಳಗಾದ ಮನಸ್ಸು ಸದಾ ಅಸ್ಥಿರವಾಗಿರುತ್ತದೆ. ಮನಸ್ಸು ಅಸ್ಥಿರವಾದರೆ ಮಾಯಾ ಕೋಲಾಹಲಕ್ಕೆ ವಶವಾಗುತ್ತದೆ. ಸೂತ್ರವಿರದ ಪಟವಾಗುತ್ತದೆ. ಜೀವನ ದೃಷ್ಟಿಯಲ್ಲಿ ಅಂಧಕಾರ ಆವರಿಸುತ್ತದೆ. ಜ್ಞಾನದ ಬೆಳಕಿನಲ್ಲಿ ಸಿಂಗಾರಗೊಂಡು ಬೆಳಗಬೇಕಾಗಿದ್ದ ಮನಸ್ಸು ದ್ವಂದ್ವಕ್ಕೊಳಗಾಗಿ ಬಳಲುತ್ತದೆ. ಭಕ್ತನಾಗುವುದಕ್ಕಿಂತ ಮುಂಚೆ ಮನುಷ್ಯ ದ್ವಂದ್ವಗಳಿಂದ ಮುಕ್ತನಾಗಬೇಕು.

ಪದ ಪ್ರಯೋಗಾರ್ಥ:
ನಿರ್ಣಯವನು ಅರಿಯದ ಮನವೆ, ದುಗುಡವನು ಆಹಾರಗೊಂಡೆಯಲ್ಲಾ! ಇದು ಸರ್ವಕಾಲಕ್ಕೂ ಸಲ್ಲುವ ಅರ್ಥವುಳ್ಳ ಸಾಲು. ಈ ವಚನವನ್ನು ಓದುವಾಗಲೆಲ್ಲ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಮಾಡುವ ನಮ್ಮ ಜನರ ಕಾರ್ಯ ಶೈಲಿ ನೆನಪಾಗುತ್ತದೆ. ಪ್ರಪಂಚದ ಯಾವುದೋ ಮೂಲೆಯಲ್ಲಿ ಯಾರೋ ತೆಗೆದುಕೊಳ್ಳುವ ನಿರ್ಣಯಗಳ ಅನುಸಾರವಾಗಿ ಕೆಲಸ ಮಾಡುವ ಇಲ್ಲಿಯ ಜನ ಯಾರೋ ವಿಧಿಸಿದ ಕಟ್ಟಳೆಗಳಿಗೆ ಅನುಗುಣವಾಗಿ ಹಗಲು ರಾತ್ರಿಯೆನ್ನದೆ ತಮ್ಮ ವ್ಯೆಯಕ್ತಿಕ ಜೀವನವನ್ನು ಒತ್ತೆ ಇಟ್ಟು ಸಂಬಳದ ಆಸೆಯಿಂದ ಯಾವಾಗಲೂ ಆತಂಕ ದುಗುಡಗಳಿಂದ ದುಡಿಯುತ್ತಿರುತ್ತಾರೆ. ಉದ್ಯೋಗದ ಬಗ್ಗೆ ನಿಶ್ಚಿತತೆ ಇಲ್ಲ. ಯಾವ ಸಮಯದಲ್ಲಾದರೂ ಕೆಲಸ ಕಳೆದುಕೊಳ್ಳಬಹುದು. ಇಂಗ್ಲಿಷ್ ಕಥೆಗಳಲ್ಲಿ ಬರುವ ಮ್ಯಾಜಿಕ್ ಕಾರ್ಪೆಟ್ ಮೇಲಣ ಪಯಣದಂತೆ. ಮಾಯಾ ಸೂತ್ರ. ನಿರ್ಣಯವನು ಅರಿಯದೆ ಕೆಲಸ ಮಾಡುವವನ ಮನಕ್ಕೆ ದುಗುಡವೇ ಆಹಾರ, ನಿರ್ಣಯವನು ಅರಿತು ಕಾಯಕ ಮಾಡುವ ಮನಕ್ಕೆ ನೆಮ್ಮದಿಯೇ ಆಹಾರ. “ಫುಡ್ ಫಾರ್ ಥಾಟ್” ಎಂಬ ಇಂಗ್ಲಿಷ್ ನುಡಿಗಟ್ಟಿನ ಸಮಾನ ಅರ್ಥದಲ್ಲಿ ಅಲ್ಲಮ ಆಗಿನ ಕಾಲದಲ್ಲೇ ಬಳಸಿರುವ “ಮನಕ್ಕೆ ದುಗುಡವೆ ಆಹಾರ” ಎಂಬ ಪದಪುಂಜ ಅನನ್ಯತೆಯ ವ್ಯಾಪ್ತಿಯನ್ನೂ ಮೀರಿ ನಿಲ್ಲುವ ಅತೀತವಾದ ಪದ ಪ್ರಯೋಗ. ಇದು ಕನ್ನಡ ಭಾಷೆಗಿರುವ ಕಸುವಿನ ಶಬ್ದಶಕ್ತಿಯ ಉದಾಹರಣೆ ಕೂಡಾ. ಸಿರಿಗನ್ನಡಂ ಗೆಲ್ಗೆ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ 

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...