ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ರೂಪ ನಿರೂಪ
ರೂಪನೆ ಕಂಡರು, ನಿರೂಪನೆ ಕಾಣರು.
ತನುವನೆ ಕಂಡರು, ಅನುವನೆ ಕಾಣರು.
ಆಚಾರವನೆ ಕಂಡರು, ವಿಚಾರವನೆ ಕಾಣರು.
ಗುಹೇಶ್ವರಾ, ನಿಮ್ಮ ಕುರುಹನೆ ಕಂಡರು, ಕೂಡಲರಿಯದೆ ಕೆಟ್ಟರು!
ವಚನಾರ್ಥ:
ನಿಮ್ಮನ್ನು ಕೂಡಲರಿಯದೆ ಕೆಟ್ಟರು ಎಂದು ಹೇಳುವುದು ಅಲ್ಲಮನ ವಚನದ ಉದ್ದೇಶ. ಕೂಡುವುದು ಅಂದರೆ ಒಂದಾಗುವುದು, ಐಕ್ಯನಾಗುವುದು ಎಂದರ್ಥ. ಯಾರು ಕೆಟ್ಟರು, ಹೇಗೆ ಕೆಟ್ಟರು ಎಂಬುದಕ್ಕೆ ಅಲ್ಲಮನೇ ನೀಡುವ ಪಟ್ಟಿ ಸಹಿತ ವಿವರಣೆ ಇದೆ. ರೂಪವನ್ನು ಕಾಣುವವರು ಕೆಟ್ಟರು. ಕಣ್ಣಿಗೆ ಕಾಣುವ ಈ ಜಗತ್ತಿನ ವಿವಿಧ ಪ್ರಲೋಭನೆಗಳಿಗೆ ಒಳಗಾಗಿ ಕೆಟ್ಟರು. ಕಣ್ಣಿಗೆ ಕಾಣದ ನಿರೂಪನಾದ ರೂಪವಿಲ್ಲದ ಪರಮಾತ್ಮನ ಕಾಣದೆ ಕೆಟ್ಟರು. ತನುವನ್ನು ಅಂದರೆ ದೇಹವನ್ನು ಮೋಹಿಸಿ ಕೆಟ್ಟರು. ತನುವಿನೊಳಗೆ ಅನುವಾಗಿ ನೆಲೆಸಿರುವ ಅವನನ್ನು ಕಾಣದೆ ಕೆಟ್ಟರು. ಆಚಾರ, ಆಚರಣೆ, ಮಡಿ ಮೈಲಿಗೆ ಸಂಪ್ರದಾಯ ಇತ್ಯಾದಿಗಳಲ್ಲೇ ಮೈಮರೆತು ತನ್ನ ತಾನಾರೆಂದು ವಿಚಾರಿಸಿ ತನ್ನರಿವ ಅರಿಯದೆ ಕೆಟ್ಟರು. ದೇವರು ಎಲ್ಲಿದ್ದಾನೆ, ಹೇಗಿದ್ದಾನೆ ಎಂಬ ಅವನ ಕುರುಹನ್ನು ಹುಡುಕುತ್ತ ಹೋಗಿ ಎಲ್ಲೆಲ್ಲೂ ಎಲ್ಲದರಲ್ಲೂ ವ್ಯಾಪಿಸಿಕೊಂಡಿರುವ ಅವನನ್ನು ಕೂಡಲು ಅರಿಯದೆ ಕೆಟ್ಟರು.
ಪದಪ್ರಯೋಗಾರ್ಥ:
ರೂಪ-ನಿರೂಪ, ತನು-ಅನು, ಆಚಾರ-ವಿಚಾರ, ಕುರುಹು-ಕೂಡಲು ಇವು ವಚನದಲ್ಲಿ ಕಾಣಸಿಗುವ ಅನನ್ಯ ಪದ ಜೋಡಣೆಗಳು. ಏನನ್ನು ಕಂಡು ಕೆಟ್ಟರೋ ಮತ್ತು ಏನನ್ನು ಕಾಣದೆ ಕೆಟ್ಟರೋ ಅವುಗಳನ್ನು ಒಂದು ಸಿದ್ದಪಟ್ಟಿ ಮಾಡಿಕೊಡುವಂತಹ ಉದ್ದೇಶ ವಚನದಲ್ಲಿದೆ. ರೂಪ, ತನು, ಆಚಾರ, ಕುರುಹು ಇವು ಕಣ್ಣಿಗೆ ಕಂಡಂತಹವು. ವಿರೂಪ, ಅನು, ವಿಚಾರ ಇವು ಕಣ್ಣಿಗೆ ಕಾಣದೆ ಹೋದಂತಹವು. ಇವೆರಡನ್ನು ಜೋಡಣೆ ಮಾಡಿ ಪ್ರಾಸಬದ್ದವಾಗಿ ಹೆಣೆದು ವಚನದಲ್ಲಿ ಪ್ರಯೋಗಿಸಿರುವ ಪ್ರಕ್ರಿಯೆಯೇ ಅನನ್ಯವಾಗಿದೆ. ಕಂಡರು, ಕಾಣರು ಎಂಬ ಪದಗಳು ಪ್ರತಿ ಸಾಲಿನಲ್ಲಿ ಆಯಕಟ್ಟಾಗಿ ನಿಂತು ವಚನದ ವಿಷಯ ಮಂಡನೆಗೆ ಕಳೆಗಟ್ಟುತ್ತವೆ. ಕಂಡದ್ದು, ಕಾಣದ್ದು ಕಡೆಯಲ್ಲಿ “ಕೆಟ್ಟರು” ಎಂಬಲ್ಲಿ ಕೊನೆಗೊಂಡು ವಚನದ ಸಂದೇಶವನ್ನು ತಲುಪಿಸುತ್ತದೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




