ಅಲ್ಲಮನ ಅನನ್ಯ ಪದಪ್ರಯೋಗಗಳು | ತಪವೆಂಬ ತಗಹು

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ತಪವೆಂಬ ತಗಹು
ತಪವೆಂಬುದು ತಗಹು
ನೇಮವೆಂಬುದು ಬಂಧನ
ಶೀಲವೆಂಬುದು ಸೂತಕ
ಭಾಷೆಯೆಂಬುದು ಪ್ರಾಣ ಘಾತಕ
ಇಂತೀ ಚತುರ್ವಿದದೊಳಗಲ್ಲ
ಗುಹೇಶ್ವರಾ
ನಿಮ್ಮ ಶರಣರು ಅಗ್ರಗಣ್ಯರು.

ಪದಾರ್ಥ:
ತಪ  =  ತಪಸ್ಸು
ತಗಹು  =  ಅಡ್ಡಿ, ಅಡೆತಡೆ
ಚತುರ್ವಿದ  =  ನಾಲ್ಕು ವಿಧ

ವಚನಾರ್ಥ:
ಮನುಷ್ಯ ತಾನು ಸನ್ಮಾರ್ಗದಲ್ಲಿ ಸಜ್ಜನನಾಗಿ ನಡೆಯಬೇಕೆಂದು ಆಶಿಸಿ ತನ್ನಷ್ಟಕ್ಕೆ ತಾನೇ ಸಾಂಪ್ರದಾಯಕ ರೀತಿ ರಿವಾಜುಗಳನ್ನು ತನ್ನಲ್ಲಿ ಸ್ವಯಂ ಸೃಷ್ಟಿಸಿಕೊಳ್ಳುವುದುಂಟು. ತಪಸ್ಸು, ನಿಯಮ, ಶೀಲ, ಭಾಷೆ ಇವುಗಳನ್ನು ಪಾಲಿಸಿ ಪರತತ್ವವನು ಅರಿವೆನೆಂಬ ಅವಸರದಲ್ಲಿ ಅವುಗಳ ಪಾಲನೆಯೇ ಹೊರೆಯಾಗುವ ಪ್ರಸಂಗ ಬರಬಹುದು. ತಪಸ್ಸು ಎಂದರೆ ವ್ರತ ನಿಯಮಗಳಿಂದ ದೇಹವನ್ನು ದಂಡಿಸುತ್ತ ಧ್ಯಾನ ಮಾಡುವುದು, ಮನಸ್ಸನ್ನು ಒಂದೇ ವಿಷಯದಲ್ಲಿ ಸ್ಥಿರವಾಗಿಡುವುದು, ಮನಸ್ಸಿನ ಏಕಾಗ್ರತೆ ಸಾಧಿಸುವುದು ಇವೆಲ್ಲಾ ಕೆಲವೊಮ್ಮೆ ಮುಕ್ತ ಚಿಂತನೆಗೆ ಅಡೆತಡೆ ಒಡ್ಡಬಲ್ಲವು. ಇಂತಹುದನ್ನು ಮಾಡು, ಇದನ್ನು ಮಾಡಕೂಡದು ಎಂಬ ನಿಯಮಗಳನ್ನು ಹೇರಿಕೊಂಡರೆ ಅದೇ ಬಂಧನವಾಗಿ ಬಾಧಿಸಬಲ್ಲುದು. ಶೀಲವೆಂಬುದು ಶ್ರೇಷ್ಠ ನಡವಳಿಕೆ. ಇದು ಅತಿಯಾದಾಗ ಮಡಿ ಮೈಲಿಗೆಗೆ ಎಡೆಮಾಡಿಕೊಟ್ಟು ಇತರರಿಂದ ದೂರವಿರಿಸುತ್ತದೆ. ಅದೇ ಒಂದು ಸೂತಕವಾಗುತ್ತದೆ. ಭಾಷೆಗಳು ಪ್ರಾಣಘಾತಕ ಎನ್ನುತ್ತಾರೆ. ಅಂದರೆ ಆಣೆ ಭಾಷೆಗಳು ನಮಗೆ ನಾವು ಹೇರಿಕೊಂಡ ನಿರ್ಬಂಧನೆಗಳು. ಈ ನಿರ್ಬಂಧನೆಗಳಿಂದ ಆ ಪರತತ್ವ ಸಾಧಿಸುತ್ತೇನೆ ಎನ್ನುವುದು ಭ್ರಮೆ. ತಪಸ್ಸು, ನಿಯಮ, ಶೀಲ, ಭಾಷೆಗಳ ಬಂಧನಕ್ಕೊಳಗಾಗದೆ ಮುಕ್ತ ಮತ್ತು ಶಕ್ತ ಜೀವನ ನಡೆಸುವ ಶರಣನೇ ಗಣ್ಯ, ಅವನೇ ಅಗ್ರಗಣ್ಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪದ ಪ್ರಯೋಗಾರ್ಥ:
ತಪಸ್ಸನ್ನು ಆಚರಿಸಿ ಪರತತ್ವದ ಬಗ್ಗೆ ಚಿಂತಿಸಿ ಮುಕ್ತಿಯನ್ನು ಪಡೆಯುತ್ತೇನೆ ಎಂಬುದು ಮನಸ್ಥಿತಿ. ನೀತಿ ನಿಯಮಗಳನ್ನು ಪಾಲಿಸಿ ಸನ್ಮಾರ್ಗದಲ್ಲಿ ನಡೆದರೆ ಮುಂದೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ. ಸುಗುಣಶೀಲ ನಡವಳಿಕೆಯನ್ನು ಅಳವಡಿಸಿಕೊಂಡೇ  ನಡೆಯುತ್ತೇನೆ ಎಂಬ ನಿಲುವು, ಆಣೆ ಹಾಕಿ ಭಾಷೆ ನೀಡಿ ಕೊಟ್ಟ ಮಾತಿಗೆ ಬದ್ದನಾಗಿಯೇ ಬದುಕುತ್ತೇನೆ ಎಂಬ ಛಲ ಒಮ್ಮೊಮ್ಮೆ ಮನುಷ್ಯನ ಸಹಜ ಜೀವನಕ್ಕೆ ಅಡ್ಡ ಬರಬಹುದು. ತಪಸ್ಸು ತೊಡಕಾಗಬಹುದು. “ಹೇ ದೇವಾ! ನಾಂ ನೇಮದಲಿ ನಡೆ ನೀನ್ ಸ್ವರ್ಗವೀವುದೇನೆ ಅದು ವರ್ತಕನ ಮಾತಾಯ್ತು, ನಿನ್ನ ದಯೆಯೆಲ್ಲಿ?” ಎಂಬ ಉಮರ್ ಖಯ್ಯಾಮ್ ಒಸಗೆಯಂತೆ ತಪಸ್ಸನ್ನು ಆಚರಿಸಿ, ನೇಮಗಳನ್ನು ಪಾಲಿಸಿ ದೈವದೊಂದಿಗೆ ವ್ಯವಹರಿಸುವ ಕೊಡು ಕೊಳ್ಳುವ ವ್ಯವದಾನ ಶರಣನಿಗಿರುವುದಿಲ್ಲ. ತಪವೆಂಬುದು ತಗಹು ಆಗದೆ ಅದು ಸಹಜ ಸಂವಾದವಾಗಬೇಕು. ಆಧುನಿಕ ಭಾಷೆಯಲ್ಲಿ ಹೇಳುವುದಾದರೆ T&C apply ಅನ್ನುವಂತಾಗಬಾರದು. ನೇಮಗಳು ಬಂಧನವಾಗಬಾರದು ಎಂದು ಅಲ್ಲಮ ನೀಡುವ ಸಂದೇಶದಲ್ಲಿ “ತಪವೆಂಬುದು ತಗಹು” ಅನನ್ಯವಾದ ಪದ ಪ್ರಯೋಗ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ 

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...