ಅಲ್ಲಮನ ಅನನ್ಯ ಪದಪ್ರಯೋಗಗಳು | ವಿಷಕ್ಕೆ ರುಚಿ

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ವಿಷಕ್ಕೆ ರುಚಿ

ಅಗ್ನಿಗೆ ತಂಪುಂಟೆ?
ವಿಷಕ್ಕೆ ರುಚಿಯುಂಟೆ ಹೇಳಾ?
ಕಂಗಳಿಗೆ ಮರೆಯುಂಟೆ ಹೇಳಾ ಲಿಂಗವೆ?
ದಾಳಿಕಾರಂಗೆ ಧರ್ಮವುಂಟೆ?
ಕಂಗಳಿಗೆ ಕರುಳುಂಟೆ?
ಗುಹೇಶ್ವರಾ
ನಿಮ್ಮ ಶರಣರು, ಮೂರು ಲೋಕವರಿಯೆ ನಿಶ್ಚಟರಯ್ಯಾ.

ಪದಾರ್ಥ:
ನಿಶ್ಚಟ = ಚಟವಿಲ್ಲದ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಚನಾರ್ಥ:

ಶರಣರು ಅಂದರೆ ಸಜ್ಜನರು, ಸದ್ಗುಣಿಗಳು, ಸಹೃದಯಿಗಳು, ಸದ್ಭಕ್ತರು. ಅಂತಹವರು ನನಗೆ ಪ್ರಿಯರಾಗಿರುತ್ತಾರೆ ಎಂದು ದೈವವೇ ನುಡಿದ ನುಡಿಯಿದೆ. ಯಾರು ಸಮಚಿತ್ತನಾಗಿರುವನೋ, ಯಾರಿಗೆ ವಿಷಯಾಸಕ್ತಿ ಇರುವುದಿಲ್ಲವೋ, ಯಾವುದೇ ವಿಧದಿಂದ ಶರೀರ ನಿರ್ವಾಹವಾಗುವುದರಲ್ಲಿ ಸದಾ ಸಂತುಷ್ಟನೋ ಅಂತಹ ಸ್ಥಿರಬುದ್ದಿಯುಳ್ಳ ಭಕ್ತಿಸಂಪನ್ನನು ನನಗೆ ಪ್ರಿಯನು ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ನುಡಿದ ಉಲ್ಲೇಖವಿದೆ. ಅಂತಹ ಭಕ್ತಿಸಂಪನ್ನ ಶರಣರಿಗೆ ಯಾವುದೇ ಚಟಗಳಿರುವುದಿಲ್ಲ. ಅವರು ನಿಶ್ಚಟರು. ಇದು ಮೂರು ಲೋಕಕ್ಕೆ ಗೊತ್ತಿರುವ ಮಾತು ಎಂಬುದು ಈ ವಚನದ ಪ್ರಸ್ತಾಪ. ಶರಣನಿಗೆ ಚಟ, ವ್ಯಸನ ಇರುವುದಿಲ್ಲ ಎಂದು ನಿರೂಪಿಸಲು ವಚನದಲ್ಲಿ ಬಳಸಿರುವ ಉದಾಹರಣೆಗಳು ಐದು.

(1) ಬೆಂಕಿ ತಂಪಾಗಿರುವುದಿಲ್ಲ.
(2) ವಿಷಕ್ಕೆ ರುಚಿಯಿರುವುದಿಲ್ಲ.
(3) ಕಣ್ ದೃಷ್ಟಿಯಿಂದ ಏನನ್ನೂ ಮರೆಮಾಚಲಾಗುವುದಿಲ್ಲ.
(4) ದರೋಡೆ ಮಾಡಿ ದೋಚುವವನಿಗೆ ಧರ್ಮ ದಾಕ್ಷಿಣ್ಯ ಇರುವುದಿಲ್ಲ.
(5) ಕಣ್ಣ ನೋಟಕ್ಕೆ ಒಳ್ಳೆಯ ದೃಶ್ಯ ಕೆಟ್ಟ ದೃಶ್ಯ ಎಂಬ ಭಾವನೆ ಇರುವುದಿಲ್ಲ.
ಅದರಂತೆ ಶರಣನಿಗೆ ಚಟ, ವ್ಯಸನ ಇರುವುದಿಲ್ಲ.

ಪದ ಪ್ರಯೋಗಾರ್ಥ:

ವಿಷಕ್ಕೆ ರುಚಿಯುಂಟೇ ಹೇಳಾ? ಇದು ಉತ್ತರವಿಲ್ಲದ ಪ್ರಶ್ನೆ. ವಿಷದ ರುಚಿಯ ಸವಿದವರಿಲ್ಲ. ಸವಿದು ಸುಖಿಸಿದವರಿಲ್ಲ. ಮನುಷ್ಯ ಕಂಡುಹಿಡಿದ ಮಹಾ ಕಾರ್ಕೋಟಕ ವಿಷ ಸಯನೈಡ್. ಇಲ್ಲಿಯವರೆಗೂ ಸಯನೈಡ್ ವಿಷದ ರುಚಿ ಎಲ್ಲಿಯೂ ಅಧಿಕೃತವಾಗಿ ದಾಖಲಾಗಿಲ್ಲ. ಸಯನೈಡ್ ಸೇವಿಸಿ ಅದರ ರುಚಿಯನ್ನು ವಿವರಿಸಿ ದಾಖಲಿಸಿ ಹೋಗುತ್ತೇನೆ ಎಂದು ಪ್ರಯತ್ನಿಸಿದವರು ಕ್ಷಣಮಾತ್ರದಲ್ಲಿ ಸತ್ತರೇ ಹೊರತು ವಿಷದ ರುಚಿಯನ್ನು ತಿಳಿಸಲಾಗಲಿಲ್ಲ. ಇದೇ ಅಲ್ಲಮನ ಪ್ರಶ್ನೆ.

ವಿಷಕ್ಕೆ ರುಚಿಯುಂಟೆ ಹೇಳಾ? ಅಗ್ನಿಗೆ ತಂಪಿಲ್ಲ, ದಾಳಿಕಾರನಿಗೆ ಧರ್ಮವಿಲ್ಲ ಎನ್ನುವ ದೃಷ್ಟಾಂತದ ಜೊತೆಯಲ್ಲೇ ವಿಷಕ್ಕೆ ರುಚಿಯಿಲ್ಲ ಎನ್ನುವ ಅಲ್ಲಮನ ಉಪಮೆ ಇಲ್ಲಿ ಅತ್ಯಂತ ಉಪಯುಕ್ತವಾಗಿ ಪ್ರಯೋಗಗೊಂಡಿದೆ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...