ಕಾಲಮಾನ | ಬಾನು ಮುಷ್ತಾಕ್‌ ದಸರಾ ಉದ್ಘಾಟನೆ- ವಿವಾದಗಳ ಸುತ್ತಮುತ್ತ

Date:

ಎಲ್ಲ ವಿಷಯಗಳಲ್ಲಿ ಬಿಜೆಪಿ ನಾಯಕರು ಮತ್ತು ಬಲಪಂಥೀಯರು ಮತದ ಆಯಾಮವನ್ನು ಹುಡುಕುವುದು ಅವರ ರಾಜಕಾರಣದ ಜಾಯಮಾನವಾಗಿದೆ. ಅದು ಖಂಡನೀಯ ವಿಚಾರ. ಕೋಮು ಸಾಮರಸ್ಯಕ್ಕೆ ಭಂಗವನ್ನು ಉಂಟುಮಾಡುವಂತಹ ಅವರ ಪ್ರಯತ್ನಗಳು ಎಲ್ಲ ಸಂದರ್ಭಗಳಲ್ಲಿ ಯಶಸ್ವಿಯಾಗುವುದಿಲ್ಲ! ನಮ್ಮದು ಬಹುತ್ವದ ದೇಶ. ಈ ಆಯಾಮವೇ ನಮ್ಮ ಬೆನ್ನೆಲುಬು.

ವರ್ಷದ ದಸರಾ ಮಹೋತ್ಸವವನ್ನು ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ ಉದ್ಘಾಟನೆ ಮಾಡುವುರೆಂದು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಆಗಸ್ಟ್‌ 22, 2025ರಂದು ಘೋಷಿಸಿದರು. ತಕ್ಷಣ ಶುರುವಾಯಿತು ಬಿಜೆಪಿ ನಾಯಕರು ಮತ್ತು ಬಲಪಂಥೀಯ ಹಿಂಬಾಲಕರ ವತಾರ. ಪುಂಖಾನುಪುಂಖವಾಗಿ ಉಚ್ಛಾಟಿಸಲ್ಪಟ್ಟಿರುವ ಬಿಜೆಪಿ ನಾಯಕ ಬಸನಗೌಡ ಯತ್ನಾಳ್‌, ಒಕ್ಕೂಟ ಸರ್ಕಾರದಲ್ಲಿ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ, ಸಂಸದ ತೇಜಸ್ವಿ ಸೂರ್ಯ, ಮಾಜಿ ಸಂಸದ ಪ್ರತಾಪ ಸಿಂಹ, ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌, ಶಾಸಕ ಮುನಿರತ್ನ ಮತ್ತು ಇತರರು ರಾಜ್ಯ ಸರ್ಕಾರದ ಈ ತೀರ್ಮಾನವನ್ನು ಖಂಡಿಸಿದರು.

ಮೈಸೂರು ಮತ್ತು ಕೊಡಗಿನ ಸಂಸದರಾಗಿರುವ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮೊದಲು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದರು. ಆದರೆ ನಂತರ ಸ್ವಲ್ಪ ಯೂಟರ್ನ್‌ ಹೊಡೆದರು. “ಉದ್ಘಾಟನಾ ಸಮಾರಂಭದ ಮುನ್ನ ಬಾನು ಮುಷ್ತಾಕ್‌ ತಾಯಿ ಭುವನೇಶ್ವರಿ ಮತ್ತು ಚಾಮುಂಡೇಶ್ವರಿ ಬಗೆಗೆ ಇರುವ ತಮ್ಮ ಗೌರವವನ್ನು ಸ್ಪಷ್ಟೀಕರಿಸಬೇಕು. ಏಕೆಂದರೆ ಅವರು ಹಿಂದೆ ತಾಯಿ ಭುವನೇಶ್ವರಿ ಬಗೆಗೆ ನೀಡಿರುವ ಹೇಳಿಕೆಗಳು ನಮ್ಮ ಗಮನಕ್ಕೆ ಬಂದಿವೆ” ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು. ಅವರ ಈ ಬದಲಾದ ವರಸೆಗೆ ಎಲ್ಲಿಂದ ಒತ್ತಡ ಬಂದಿರಬಹುದು ಎಂಬುದು ಊಹೆಗೆ ನಿಲುಕದ ಸಂಗತಿಯಲ್ಲ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಿಜೆಪಿ ನಾಯಕರು ಮತ್ತು ಬಲಪಂಥೀಯರ ಮೇಲೆ ಪ್ರಸ್ತಾಪಿಸಿರುವ ಖಂಡನೆ ಹಾಗೂ ವಿರೋಧಕ್ಕೆ ಮುಖ್ಯ ಕಾರಣ- ಬಾನು ಮುಷ್ತಾಕ್‌ ಅವರ ಮುಸಲ್ಮಾನ ಅಸ್ಮಿತೆ ಎನ್ನುವ ಸತ್ಯಕ್ಕೆ ಕನ್ನಡಿ ಹಿಡಿಯಬೇಕಿಲ್ಲ! ಬಾನು ಮುಷ್ತಾಕ್‌ ಅವರು ವಕೀಲೆ, ಸಾಮಾಜಿಕ/ಕನ್ನಡ ಭಾಷೆಯ ಹೋರಾಟಗಾರ್ತಿ, ತಮ್ಮ ಮತದೊಳಗಿನ ಸುಧಾರಣೆಗಳ ಗಟ್ಟಿದನಿ ಎಂಬಿತ್ಯಾದಿ ಅವರ ಇತರ ಅಸ್ಮಿತೆಗಳನ್ನು ಬೇಕೆಂತಲೇ ಪರಿಗಣಿಸಲಾಗುವುದಿಲ್ಲ ಎಂಬುದು ನಮ್ಮ ಮುಂದಿರುವ ಕಟು ವಾಸ್ತವ! ಅವರಿಗೆ ಪ್ರತಿಷ್ಠಿತ ಬೂಕರ್‌ ಪ್ರಶಸ್ತಿಯನ್ನು ನೀಡಿದಾಗ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ಕೋರಲಿಲ್ಲ! ಹಾಗೆಯೇ ಬಿಜೆಪಿ ಪಕ್ಷದ ಧುರೀಣರು ಮತ್ತು ನಮ್ಮ ರಾಜ್ಯದ ಬಿಜೆಪಿ ನಾಯಕರು ಸಹ .

ಮೋದಿ ಸಣ್ಣ ಪುಟ್ಟ ಘಟನೆಗಳ ಬಗೆಗೆ ತಮ್ಮ ಅನಿಸಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸುತ್ತಾರೆ. ಹಾಗೆಯೇ ಸಣ್ಣ ಸಾಧನೆಯಿಂದ ಹಿಡಿದು ದೊಡ್ಡದವುಗಳ ಬಗೆಗೆ ಅವರು ಅಭಿನಂದನೆಗಳು ಹಾಗೂ ಶುಭಾಶಯಗಳನ್ನು ತಿಳಿಸಿರುವ ಅನೇಕ ಉದಾಹರಣೆಗಳಿವೆ. ಆದರೆ ಅವರು 2016ರಲ್ಲಿ ಸಫಾಯಿ ಕರ್ಮಚಾರಿ ಆಂದೋಲನದ ಸಂಸ್ಥಾಪಕ ಬೆಝ್‌ವಾಡ ವಿಲ್ಸನ್‌, ಕರ್ನಾಟಕ ಸಂಗೀತದ ಖ್ಯಾತ ಗಾಯಕ ಟಿ ಎಂ ಕೃಷ್ಣ ಮತ್ತು 2019ರಲ್ಲಿ ಹಿಂದಿ ಭಾಷೆಯ ಹೆಸರುವಾಸಿ ಪತ್ರಕರ್ತ ರವೀಶ್‌ ಕುಮಾರ್‌ ಅವರಿಗೆ ರೆಮನ್‌ ಮ್ಯಾಗ್ಸೆಸೆ ಪ್ರಶಸ್ತಿಯನ್ನು ನೀಡಿದಾಗ ಶ್ಲಾಘಿಸಲಿಲ್ಲ ಹಾಗೂ ಶುಭಾಶಯಗಳನ್ನು ರವಾನಿಸಲಿಲ್ಲ! ಗೀತಾಂಜಲಿ ಶ್ರೀ ತಮ್ಮ ʼಮರಳಿನ ಸಮಾಧಿʼಎಂಬ ಹಿಂದಿ ಕಾದಂಬರಿಗೆ 2022ರಲ್ಲಿ ಬೂಕರ್‌ ಪ್ರಶಸ್ತಿಯನ್ನು ಪಡೆದರು. ಈ ಪ್ರಶಸ್ತಿಗೆ ಭಾಜನರಾದ ಭಾರತದ ಮೊದಲ ಬರಹಗಾರ್ತಿ ಎಂಬುದು ಅವರ ಹೆಗ್ಗಳಿಕೆಯಾಗಿತ್ತು. ಆ ಸಂದರ್ಭದಲ್ಲೂ ಮೋದಿ ಮುಗುಮ್ಮಾಗಿದ್ದರು! ಇಷ್ಟಕ್ಕೂ ಮೇಲೆ ಪ್ರಸ್ತಾಪಿಸಿರುವ ಪ್ರಶಸ್ತಿ ವಿಜೇತರು ನಮ್ಮ ಸಾಮಾಜಿಕ ಸ್ವಾಸ್ಥ್ಯಕ್ಕೆ ಸಮಾನತೆ ಹಾಗೂ ಕೋಮು ಸಾಮರಸ್ಯ ಮುಖ್ಯ ಎಂಬ ವಿಷಯವನ್ನು ಪ್ರತಿಪಾದಿಸುತ್ತ ಬಂದವರು.

ನಿಸಾರ್

2017ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕನ್ನಡದ ಪ್ರಸಿದ್ಧ ಸಾಹಿತಿ ಕೆ ಎಸ್‌ ನಿಸಾರ್‌ ಅಹಮ್ಮದ್‌ ದಸರಾ ಹಬ್ಬದ ಉದ್ಘಾಟನೆಯನ್ನು ಚಾಮುಂಡೇಶ್ವರಿ ವಿಗ್ರಹದ ಮೇಲೆ ಪುಷ್ಪಗಳನ್ನು ಹಾಕುವುದರ ಮೂಲಕ ಮಾಡಿದರು. ಆಗಲೂ ಅವರು ಮುಸಲ್ಮಾನರಾಗಿದ್ದರು ಎಂಬ ಕಾರಣದಿಂದ ಕೆಲವು ಅಪಸ್ವರಗಳು ಎದ್ದವು. ಆದರೆ 2013ರಲ್ಲಿ ಬಂಡಾಯ ಸಾಹಿತ್ಯದ ಖ್ಯಾತ ಬರಹಗಾರ ಬರಗೂರು ರಾಮಚಂದ್ರಪ್ಪ ಯಾವ ತೆರನಾದ ಮತೀಯ ಆಚರಣೆಗಳನ್ನು ಮಾಡದೆ ದಸರಾ ಉದ್ಘಾಟನೆಯನ್ನು ಮಾಡಿದರು.

ಕೆಲವು ಬಿಜೆಪಿ ನಾಯಕರು ಮತ್ತು ಬಲಪಂಥೀಯ ಹಿಂಬಾಲಕರು ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರಿನಲ್ಲಿ ಜನವರಿ 2023ರಲ್ಲಿ ಜರುಗಿದ ಜನಸಾಹಿತ್ಯ ಸಮ್ಮೇಳನದಲ್ಲಿ (ಇದು ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ನಡೆದ ಕಾರ್ಯಕ್ರಮವಾಗಿತ್ತು. ಇದಕ್ಕೆ ಒಂದು ಕಾರಣ ಹಾವೇರಿ ಸಮ್ಮೇಳನದಲ್ಲಿ ಮುಸಲ್ಮಾನ ಸಾಹತಿಗಳಿಗೆ ಯಾವ ಬಗೆಯ ಅವಕಾಶವನ್ನೂ ಕಲ್ಪಿಸಿರಲಿಲ್ಲ) ಬಾನು ಮುಷ್ತಾಕ್‌ ಮಾಡಿದ ಭಾಷಣದ ಒಂದು ಭಾಗವನ್ನು ತಮ್ಮ ಸ್ಥಾಪಿತ ಹಿತಾಸಕ್ತಿಗಳ ಭಾಗವಾಗಿ ಹಂಚಿಕೊಳ್ಳುತ್ತಿದ್ದಾರೆ. ಆ ವಿಡಿಯೋದಲ್ಲಿ ಬಾನು ಮುಷ್ತಾಕ್‌, “ಒಬ್ಬ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯಾಗಿ ನಾನು ಕನ್ನಡದ ಬಗೆಗಿನ ನನ್ನ ಅರ್ಥೈಸುವಿಕೆಯನ್ನು ತಿಳಿಸುತ್ತೇನೆ. ಅದು ನಿಮಗೆ ಇಷ್ಟವಾಗುತ್ತದೋ, ಇಲ್ಲವೋ ನನಗೆ ತಿಳಿದಿಲ್ಲ. ನೀವು ಬಾನು ಮುಷ್ತಾಕ್‌ ಅಥವಾ ಆಕೆಯ ಕುಟುಂಬಕ್ಕೆ ಆ ಭಾಷೆಯನ್ನು ಮಾತನಾಡಲು ಅವಕಾಶವನ್ನು ನೀಡಿಲ್ಲ. ನೀವು ಕನ್ನಡ ಭಾಷೆಯನ್ನು ಕನ್ನಡ ಭುವನೇಶ್ವರಿಯನ್ನಾಗಿ ಮಾಡಿದ್ದೀರಿ. ನೀವು ಕನ್ನಡದ ಬಾವುಟಕ್ಕೆ ಅರಿಶಿಣ ಮತ್ತು ಕುಂಕುಮವನ್ನು ನೀಡಿ ಆಕೆಯನ್ನು ಪೀಠದ ಮೇಲೆ ಕುಳ್ಳಿರಿಸುವಿರಿ. ಇದರಿಂದ ನಾನು ಎಲ್ಲಿದ್ದೇನೆ? ನಾನು ಏನನ್ನು ನೋಡಬೇಕು? ನಾನು ಹೇಗೆ ಭಾಗವಹಿಸಬೇಕು? ನನ್ನನ್ನು ಹೊರಗಿಡುವ ಕಾರ್ಯ ತುಂಬ ಸಮಯದ ಹಿಂದೆ ಶುರುವಾಯತು. ಈಗ ಸಮಾಪ್ತಿಗೊಳ್ಳುತ್ತಿದೆ. ಈ ವಿಷಯದ ಬಗೆಗೆ ನೀವು ಯೋಚಿಸಬೇಕು.”

ಬಾನು ಮುಷ್ತಾಕ್‌ ಅವರು ಆಡಿದ ಮೇಲಿನ ಮಾತುಗಳನ್ನು ಅವುಗಳ ಹಿನ್ನೆಲೆ ಮತ್ತು ಸಂದರ್ಭವನ್ನು ಗಣನೆಗೆ ತೆಗೆದುಕೊಂಡು ವಿಶ್ಲೇಷಿಸಬೇಕು. ಒಬ್ಬ ಮಹಿಳೆಯಾಗಿ ಅವರು ಹಾವೇರಿ ಸಮ್ಮೇಳನ ಮುಸಲ್ಮಾನ ಬರಹಗಾರರಿಗೆ ವೇದಿಕೆಯನ್ನು ನಿರಾಕರಿಸಿದ್ದರ ಬಗೆಗೆ ಯಾವ ಬಗೆಯಲ್ಲಿ ಸ್ಪಂದಿಸಿದರು ಎಂಬುದು ಕೂಡ ಗಮನಿಸತಕ್ಕದ್ದು. ತಾಯಿ ಭುವನೇಶ್ವರಿ ಕಲ್ಪನೆಯ ಬಗೆಗೆ ಕೆಲವು ಪುರೋಗಾಮಿ, ಬಂಡಾಯ, ದಲಿತ ಲೇಖಕರು ಮತ್ತು ಚಿಂತಕರು ತಮ್ಮ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದಾರೆ. ಒಂದು ಭಾಷೆಯನ್ನು ದೇವತೆಯ ಜೊತೆ ಸಮೀಕರಿಸುವುದಕ್ಕೆ ಅವರಿಗೆ ಸಹಮತವಿಲ್ಲ. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ 50 ವರ್ಷಗಳ ಸಂಭ್ರಮಾಚರಣೆಯಲ್ಲಿ ವಿಧಾನ ಸೌಧದ ಪ್ರಾಂಗಣದಲ್ಲಿ ಭುವನೇಶ್ವರಿ ಪ್ರತಿಮೆಯನ್ನು ಸ್ಥಾಪಿಸಲು ಬಂಜಗರೆ ಜಯಪ್ರಕಾಶ್‌ ಮತ್ತು ಇತರ ಕೆಲವು ಲೇಖಕರು ತಮ್ಮ ಆಕ್ಷೇಪಣೆಯನ್ನು ಸರ್ಕಾರಕ್ಕೆ ತಿಳಿಸಿದ್ದರು. ಆದಾಗ್ಯೂ ಕರ್ನಾಟಕದ ಭೂಪಟದ ಎದುರು ಕುಳಿತಿರುವ, 25 ಅಡಿಗಳ ಎತ್ತರದ ಭುವನೇಶ್ವರಿಯ ಕಂಚಿನ ಪ್ರತಿಮೆ ಈಗ ವಿಧಾನ ಸೌಧದ ಪಶ್ಚಿಮ ದ್ವಾರದಲ್ಲಿದೆ.

ತಮಗೆ ದಸರಾ ಮಹೋತ್ಸವದ ಉದ್ಘಾಟನೆಯನ್ನು ಮಾಡಬೇಕೆಂಬ ರಾಜ್ಯ ಸರ್ಕಾರದ ಆಹ್ವಾನ ಕುರಿತು ಬಾನು ಮುಷ್ತಾಕ್‌ “ ದಸರಾ ಮಹೋತ್ಸವವನ್ನು ಉದ್ಘಾಟಿಸುವುದು ನನಗೆ ಗೌರವದ ವಿಷಯ. ದಸರಾ ಎಲ್ಲರ ಹಬ್ಬ. ಅದು ನಾಡಹಬ್ಬ. ನಮ್ಮ ನಾಡು ಮತ್ತು ಭಾಷೆಯ ಬಗೆಗೆ ನಮಗೆ ಆದರವಿರಬೇಕು. ಅವುಗಳ ಶ್ರೇಯಸ್ಸಿಗೆ ಶ್ರಮಿಸಬೇಕು. ನಾಡಹಬ್ಬ ಎಂಬುದು ನಮ್ಮ ರಾಜ್ಯ ಹಾಗೂ ದೇಶದ ದೊಡ್ಡ ಸಂಭ್ರಮಾಚರಣೆ. ಚಾಮುಂಡೇಶ್ವರಿಯನ್ನು ತಾಯಿ ಮತ್ತು ದಸರಾವನ್ನು ನಾಡಹಬ್ಬ ಎಂದು ಕರೆಯುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಹೀಗಾಗಿ ಅವು ನನ್ನ ಮನಸ್ಸಿಗೆ ಹತ್ತಿರವಾದ ಸಂಗತಿಗಳಾಗಿವೆ. ನಾನು ಚಿಕ್ಕವಳಾಗಿದ್ದಾಗ ನಮ್ಮ ತಂದೆ-ತಾಯಿಯ ಜೊತೆ ಜಂಬೂ ಸವಾರಿಯನ್ನು ನೋಡಲು ಹೋಗುತ್ತಿದ್ದೆ. ದಸರಾದ ಉದ್ಘಾಟನೆಯನ್ನು ಮಾಡಲು ನನ್ನನ್ನು ಆಹ್ವಾನಿಸಿರುವುದು ನನಗೆ ಸಂತಸದ ವಿಚಾರವಾಗಿದೆ“ ಎಂದು ಹೇಳಿದ್ದಾರೆ.‌

ನಾಲ್ವಡಿ ಕೃಷ್ಣರಾಜ ಒಡೆಯರ್

ʼನಾಲ್ವಡಿ ಕೃಷ್ಣರಾಜ ಒಡೆಯರ್‌ ಮತ್ತು ಆಧುನಿಕ ಮೈಸೂರುʼ ಎಂಬ ತಮ್ಮ ಪುಸ್ತಕದ ಪುಟ 216ರಲ್ಲಿಇತಿಹಾಸಜ್ಞರಾದ ಪ್ರೊ ಎಸ್‌ ಚಂದ್ರಶೇಖರ್‌ ಅವರು ಹೀಗೆಂದು ದಾಖಲಿಸಿದ್ದಾರೆ: ʼಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಅಕ್ಟೋಬರ್‌ 27, 1927ರಂದು ನಡೆದ ದಸರಾ ಮಹೋತ್ಸವದ ಸಂದರ್ಭದಲ್ಲಿ ಮಿರ್ಜಾ(ಆಗಿನ ದಿವಾನರಾಗಿದ್ದ ಮಿರ್ಝಾ ಇಸ್ಮಾಯಿಲ್)‌ ಅವರನ್ನು ಆನೆ ಅಂಬಾರಿಯ ಮೇಲೆ ಕುಳ್ಳಿರಿಸಿಕೊಂಡು ಮೈಸೂರಿನ ರಾಜಮಾರ್ಗಗಳಲ್ಲಿ ಮೆರವಣಿಗೆ ಹೊರಟಿದ್ದು ಸಂಪ್ರದಾಯಕ್ಕೆ, ಧರ್ಮಕ್ಕೆ ಆದ ಅಪಚಾರವೆಂದು ಬಗೆಯಲಾಯಿತು. ಅಲ್ಲಿಯವರೆಗೆ ಯಾರಿಗೂ ಸಿಗದ ಗೌರವ ಒಬ್ಬ ಮುಸಲ್ಮಾನನಿಗೆ ದೊರೆತದ್ದು ಕೆಲವು ಜಾತಿವಾದಿ ಧರ್ಮಾಂಧರಿಗೆ ಸಹಿಸಲಾಗದೆ ಅಂಬಾರಿಯ ಕಡೆಗೆ ಚಪ್ಪಲಿಗಳನ್ನೂ ಎಸೆದು, ಅಂಬಾರಿ ಹೊತ್ತಿದ್ದ ಆನೆಯನ್ನು ಬೆದರಿಸುವಂತಹ ಕೃತ್ಯವೂ ನಡೆದಿತ್ತು. ಮತೀಯ ಕಿಡಿ ಹಚ್ಚಲು ಇದೂ ಒಂದು ಕಾರಣವಾಯಿತು. ಆದರೆ ಬೆಂಗಳೂರು ಗಲಭೆಗಳು ಆದ ನಂತರ ಅಂದರೆ ಮರುವರ್ಷವೇ ನಾಲ್ವಡಿಯವರು ಮತ್ತೊಮ್ಮೆ ಮಿರ್ಜಾರನ್ನು ಅಂಬಾರಿ ಮೇಲೆ ಕೂರಿಸಿ ತಮ್ಮ ವಿಶ್ವಾಸವನ್ನು ಮರೆದರು. ಮಹಾರಾಜರು ಧೃತಿಗೆಡಲಿಲ್ಲ. ಮಿರ್ಜಾ ಅವರಿಗೂ ಧೈರ್ಯ ತುಂಬಿ ತಮ್ಮ ಬೆಂಬಲ ವ್ಯಕ್ತಪಡಿಸಿ, ಒಂದು ಪತ್ರವನ್ನೂ ಬರೆದರು.ʼ ಅರಸೊತ್ತಿಗೆಯ ಒಬ್ಬ ಮಹಾರಾಜರ ನಡವಳಿಕೆಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಕೆಲವು ನಾಯಕರ ಕೃತ್ಯಗಳಿಗೂ ಎಷ್ಟು ವ್ಯತ್ಯಾಸಗಳಿವೆ ಅಲ್ಲವೆ?

ಇದನ್ನೂ ಓದಿ ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ವಿರೋಧ; ಬಿಜೆಪಿಯ ಸ್ತ್ರೀ, ಮುಸ್ಲಿಂ ದ್ವೇಷದ ಅನಾವರಣ

ಎಲ್ಲ ವಿಷಯಗಳಲ್ಲಿ ಬಿಜೆಪಿ ನಾಯಕರು ಮತ್ತು ಬಲಪಂಥೀಯರು ಮತದ ಆಯಾಮವನ್ನು ಹುಡುಕುವುದು ಅವರ ರಾಜಕಾರಣದ ಜಾಯಮಾನವಾಗಿದೆ. ಅದು ಖಂಡನೀಯ ವಿಚಾರ. ಕೋಮು ಸಾಮರಸ್ಯಕ್ಕೆ ಭಂಗವನ್ನು ಉಂಟುಮಾಡುವಂತಹ ಅವರ ಪ್ರಯತ್ನಗಳು ಎಲ್ಲ ಸಂದರ್ಭಗಳಲ್ಲಿ ಯಶಸ್ವಿಯಾಗುವುದಿಲ್ಲ! ನಮ್ಮದು ಬಹುತ್ವದ ದೇಶ. ಈ ಆಯಾಮವೇ ನಮ್ಮ ಬೆನ್ನೆಲುಬು. “ಸರ್ವ ಜನಾಂಗದ ಶಾಂತಿಯ ತೋಟ” ಎಂಬ ಮಾತುಗಳನ್ನಾಡಿದ ಕುವೆಂಪು ಅವರ ಸದಾಶಯದ ಮಾರ್ಗದಲ್ಲಿ ನಮ್ಮ ನಾಡಹಬ್ಬ-ದಸರಾ ಜರುಗಲಿ.

WhatsApp Image 2025 11 17 at 4.18.26 PM
ಮ ಶ್ರೀ ಮುರಳಿ ಕೃಷ್ಣ
+ posts

ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...