ಭೂಮ್ತಾಯಿ | ಶ್ವಾನಪ್ರಿಯರೇ ಜೋಕೆ; ಹವಾಮಾನ ಬದಲಾವಣೆ ನಿಮ್ಮ ಮುದ್ದಿನ ನಾಯಿಮರಿಯನ್ನೂ ಬಿಡಲಾರದು

Date:

ಭೂಗೋಳದಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಿದ್ದಾಗ ಶ್ವಾನಗಳ ಮರಣ ಸಂಖ್ಯೆ ಹೆಚ್ಚಿತ್ತು. ಆಗ ಅಧ್ಯಯನ ಕೈಗೊಂಡ ವಿಜ್ಞಾನಿಗಳು ದತ್ತಾಂಶಗಳನ್ನು ಪರೀಕ್ಷಿಸಿ ತಾಪಮಾನ ಏರಿಕೆ ಮತ್ತು ನಾಯಿಗಳ ಮರಣಕ್ಕೂ ನೇರ ಸಂಬಂಧ ಇದೆ ಎಂಬುದನ್ನು ಕಂಡುಕೊಂಡರು.  ಅವರ ಪ್ರಕಾರ ಹೆಚ್ಚಿನ ತಾಪಮಾನದ ದಿನಗಳಲ್ಲಿ ಎಂದರೆ ತಾಪಮಾನ 32 ಡಿಗ್ರಿಗಿಂತಲೂ ಹೆಚ್ಚಿರುವ ದಿನಗಳಲ್ಲಿ ನಾಯಿಗಳ ಮರಣದ ಅಪಾಯ ಶೇಕಡಾ 10 ಕ್ಕೂ ಹೆಚ್ಚಾಗುತ್ತದೆ. ಅದೇ ರೀತಿ ತಾಪಮಾನ 25 ಡಿಗ್ರಿಗಿಂತ ಕೇವಲ ಒಂದು ಡಿಗ್ರಿ ಹೆಚ್ಚಾದರೂ, ಅಪಾಯದ ಪ್ರಮಾಣವು ಹೆಚ್ಚುತ್ತಾ ಹೋಗುತ್ತದೆ.

ಇವತ್ತಿನ ಜನರೇಶನ್‌ ಝಡ್‌ ಮತ್ತು ಮಿಲೇನಿಯಲ್‌ಗಳಲ್ಲಿ ʻಪೆಟ್‌ ಪೇರೆಂಟಿಂಗ್‌ ʼ ಎಂದರೆ, ಅವರು ಸಾಕುಪ್ರಾಣಿಗಳನ್ನು ದತ್ತು ಪಡೆಯುವ ಹಾಗು ತಮ್ಮದೇ ಮನೆಯ ಸದಸ್ಯ ಎಂಬಂತೆ ಅವುಗಳನ್ನು ಅಕ್ಕರೆಯಿಂದ ಸಾಕುವ  ಪ್ರವೃತ್ತಿ ಹೆಚ್ಚಾಗುತ್ತಿದೆ. ಅದರಲ್ಲೂ ಹೆಚ್ಚಾಗಿ ಈ ಶ್ವಾನಗಳಿಂದ ದೊರೆಯುವ ಅಪರಿಮಿತ, ನಿರ್ವ್ಯಾಜ್ಯ ಪ್ರೀತಿ, ಅವುಗಳ ಸಹಚರ್ಯ ಸ್ವತಂತ್ರ ಪ್ರವೃತ್ತಿಯ ಜೀವನ ನಡೆಸುವವರಿಗೆ ಹೆಚ್ಚು ಆಪ್ತ ಎಂದೆನಿಸುತ್ತಿದೆ. ಡುಯಲ್‌ ಇನ್‌ಕಮ್‌ ನೋ ಕಿಡ್ಸ್‌ (DINK) -ಡಿಂಕ್‌ ಕಪಲ್ಸ್‌ ಎಂದು ಕರೆಯಲ್ಪಡುವ ಜೋಡಿಗಳಿಗೂ ಸಾಕು ಪ್ರಾಣಿಗಳೇ ಮೊದಲ ಆದ್ಯತೆ. ಉಪಖಂಡ ಭಾರತದಲ್ಲಿ ಇಂದಿಗೂ ನಾಯಿಗಳೇ ಎಲ್ಲರ ಮುದ್ದಿನ ಪ್ರೀತಿಯ ಸಾಕು ಪ್ರಾಣಿಗಳು.

ಆದರೆ ಶ್ವಾನಪ್ರಿಯರಿಗೆ ಇಲ್ಲೊಂದು ಕಹಿ ಸುದ್ದಿ ಇದೆ. ಹವಾಮಾನ ಬದಲಾವಣೆ ತರುವ ಹೆಚ್ಚಿನ ತಾಪಮಾನ ಸಾಕು ನಾಯಿಗಳ ಜೀವಕ್ಕೇ ಕುತ್ತು ತರಬಹುದು ಎಂಬುದನ್ನು ಸಂಶೋಧನೆಯೊಂದು ಬಹಿರಂಗಗೊಳಿಸಿದೆ. ಭೂಗ್ರಹದ ತಾಪಮಾನ ಏರಿಕೆ ಸಾಕುಪ್ರಾಣಿಗಳಾದ ಈ ಶ್ವಾನಗಳ ಜೀವಕ್ಕೆ ಆಪತ್ತು ತರುವ ಸಾಧ್ಯತೆ ಶೇಕಡಾ ಹತ್ತರಷ್ಟಿದೆ ಎಂಬ ಅಚ್ಚರಿಯ ವಿಚಾರಗಳನ್ನು ಸಿಡ್ನಿಯ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದ (UNSW) ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಹೊರಗೆಡಹಿದ್ದಾರೆ. ಈ ಸಂಶೋಧನೆಯು ಹವಾಮಾನ ಬದಲಾವಣೆ ಕೇವಲ ಮನುಷ್ಯರಿಗೆ  ಮಾತ್ರವಲ್ಲ ಪ್ರಾಣಿಗಳಿಗೂ ಅಪಾಯಕಾರಿ ಎಂಬ ಕಳವಳಕಾರಿ ಅಂಶಗಳನ್ನು ಬಹಿರಂಗಪಡಿಸಿದೆ.

ಭೂಗೋಳದಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಿದ್ದಾಗ ಶ್ವಾನಗಳ ಮರಣ ಸಂಖ್ಯೆಯೂ ಹೆಚ್ಚಿತ್ತು. ಆಗ ಅಧ್ಯಯನ ಕೈಗೊಂಡ ವಿಜ್ಞಾನಿಗಳು ದತ್ತಾಂಶಗಳನ್ನು ಪರೀಕ್ಷಿಸಿ ತಾಪಮಾನ ಏರಿಕೆ ಮತ್ತು ನಾಯಿಗಳ ಮರಣಕ್ಕೂ ನೇರ ಸಂಬಂಧ ಇದೆ ಎಂಬುದನ್ನು ಕಂಡುಕೊಂಡರು.  ಅವರ ಪ್ರಕಾರ ಹೆಚ್ಚಿನ ತಾಪಮಾನದ ದಿನಗಳಲ್ಲಿ ಎಂದರೆ ತಾಪಮಾನ 32 ಡಿಗ್ರಿಗಿಂತಲೂ ಹೆಚ್ಚಿರುವ ದಿನಗಳಲ್ಲಿ ನಾಯಿಗಳ ಮರಣದ ಅಪಾಯ ಶೇಕಡಾ 10 ಕ್ಕೂ ಹೆಚ್ಚಾಗುತ್ತದೆ. ಅದೇ ರೀತಿ ತಾಪಮಾನ 25 ಡಿಗ್ರಿಗಿಂತ ಕೇವಲ ಒಂದು ಡಿಗ್ರಿ ಹೆಚ್ಚಾದರೂ, ಅಪಾಯದ ಪ್ರಮಾಣವು ಹೆಚ್ಚುತ್ತಾ ಹೋಗುತ್ತದೆ. ಹೀಗಾಗಿ ತಾಪಮಾನ ಹೆಚ್ಚಾಗಿರುವ ದಿನಗಳಲ್ಲಿ ನಾಯಿಗಳನ್ನು ತಂಪಾದ ವಾತಾವರಣದಲ್ಲಿ ಇರಿಸುವ ಬಗ್ಗೆ ಹಾಗು ಅವುಗಳಲ್ಲಿ ನಿರ್ಜಲೀಕರಣ ಉಂಟಾಗದಂತೆ ತಡೆಯುವಂತೆ ವರದಿ ಎಚ್ಚರಿಸುತ್ತದೆ.

ಸಾಕು ಪ್ರಾಣಿಗಳ ಮೇಲೆ ಮಾತ್ರವಲ್ಲದೆ ಹವಾಮಾನ ಬದಲಾವಣೆ ಪಕ್ಷಿಗಳ ವಲಸೆ, ಕೀಟಗಳ ಜೀವನ ಚಕ್ರ ಹಾಗು ಇತರೆ ಪ್ರಾಣಿಗಳ ಆಹಾರ ಚಕ್ರದ ಮೇಲೂ ಸಾಕಷ್ಟು ಆತಂಕಕಾರಿ ಪರಿಣಾಮಗಳನ್ನು ಬೀರುತ್ತವೆ. 

ನಾಯಿ ಮರಿ

ಪಕ್ಷಿಗಳ ವಲಸೆ ಮತ್ತು ಹವಾಮಾನ ಬದಲಾವಣೆ

ಕೀಟ ನಿಯಂತ್ರಣ ಮತ್ತು ಸಸ್ಯಗಳ ಸಂತಾನೋತ್ಪತ್ತಿಗೆ ಮೂಲವಾಗಿರುವ ಪಕ್ಷಿಗಳು ನಮ್ಮ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡಲು ಸದಾ ಶ್ರಮಿಸುತ್ತವೆ. ಮೊದಲಿನಿಂದಲೂ ಋತುಗಳು ಬದಲಾಗುವಾಗ ಪಕ್ಷಿಗಳು ತಮ್ಮ ಆವಾಸ ಸ್ಥಾನವನ್ನು ಬದಲಾಯಿಸಲು ವಲಸೆ ಮಾಡುತ್ತಲೇ ಬಂದಿವೆ. ಆದರೆ ಹವಾಮಾನ ಬದಲಾವಣೆ ಪಕ್ಷಿಗಳ ವಲಸೆಯ ಮೇಲೆ ವೈರುಧ್ಯ ಪರಿಣಾಮಗಳನ್ನು ಉಂಟುಮಾಡುತ್ತಿದೆ.

ಜಾಗತಿಕ ತಾಪಮಾನ ಹೆಚ್ಚಿದಂತೆಲ್ಲ ಹಕ್ಕಿಗಳ ಬದುಕು ಹೆಚ್ಚು ಹೆಚ್ಚು ಸವಾಲುಗಳನ್ನು ಎದುರಿಸಲು ಆರಂಭಿಸಿದೆ. ಹವಾಮಾನದ ಬದಲಾವಣೆಯಿಂದಾಗಿ ಹಕ್ಕಿಗಳು ಬದುಕುವ ಸ್ಥಳ, ಅವುಗಳ ಆಹಾರ ಮತ್ತು ವಲಸೆಯ ಮೇಲೆ ಪರಿಣಾಮ ಉಂಟಾಗುತ್ತಿದೆ. ಹೆಚ್ಚಿನ ಪಕ್ಷಿ ಪ್ರಬೇಧಗಳಿಗೆ ಈ ಬದಲಾವಣೆಗಳಿಗೆ ತ್ವರಿತವಾಗಿ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಕಡಿಮೆ ಸಂಖ್ಯೆಯಲ್ಲಿರುವ, ಸ್ಥಳೀಯ ಪ್ರಬೇಧಗಳು ನಶಿಸಲು ಮತ್ತು ಇದರಿಂದಾಗಿ ಪರಿಸರ ವ್ಯವಸ್ಥೆಯ ಸಮತೋಲನ ತಪ್ಪಲು ಕಾರಣವಾಗುತ್ತಿದೆ.

ಸಾಕಷ್ಟು ಹಿಂದಿನಿಂದಲೂ ನಮ್ಮಲ್ಲಿ ಇದುವರೆಗೂ ಇದ್ದ ನಂಬಿಕೆ ಎಂದರೆ- ಹಕ್ಕಿಗಳು ಖಂಡಗಳಾಚೆಗೆ ಹಾರಬಲ್ಲವು; ಇತರೆ ಪ್ರಾಣಿಗಳಿಗೆ ಹೋಲಿಸಿದಾಗ  ಹವಾಗುಣಕ್ಕೆ ಹೊಂದಿಕೊಳ್ಳಲು ಅವುಗಳಿಗೆ ಸುಲಭ ಸಾಧ್ಯ; ತಮಗೆ ಬೇಕಾದ ಹವಾಗುಣವನ್ನು ಹುಡುಕಿಕೊಂಡು ಹಾರುತ್ತಾ ಬೇರೆ ಬೇರೆ ಖಂಡಗಳನ್ನು ದೇಶಗಳನ್ನು ಸುತ್ತಿ ಬರುತ್ತವೆ ಎಂಬುದಾಗಿತ್ತು. ಮೊದಲು ಬೇಸಿಗೆಯಲ್ಲಿ ಹಕ್ಕಿಗಳು ಎತ್ತರದ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದವು ಕೂಡ. ಆದರೆ ಸರ್ವಖಂಡವ್ಯಾಪಿಯಾಗಿರುವ ಹವಾಮಾನ ಬದಲಾವಣೆ ಹಕ್ಕಿಗಳು ಅರಸಿ ಹೋಗಿರುವ ಹೊಸ ಆವಾಸದಲ್ಲಿಯೂ ತಾಪಮಾನವನ್ನು ಹೆಚ್ಚಿಸಿವೆ. ಆ ಪ್ರದೇಶಗಳು ಹಕ್ಕಿಗಳು ಅಲ್ಲಿಗೆ ವಲಸೆ ಹೋಗುವ ಮುನ್ನವೇ ಬಿಸಿಯಾಗುತ್ತಿವೆ. ಇವು ಪಕ್ಷಿಗಳ ಮೂಲ ಆವಾಸಕ್ಕೆ ಹೋಲಿಸಿದರೆ ಹೆಚ್ಚೇ ಇವೇ ಎನ್ನುತ್ತಿವೆ ದತ್ತಾಂಶಗಳು. ಇದೇ ಅಲ್ಲದೆ ಹಕ್ಕಿಗಳು ತಾವು ವಲಸೆ ಹೋಗಬೇಕಾಗಿದ್ದ ಪ್ರದೇಶದಲ್ಲಿನ ಅರಣ್ಯ ಪ್ರದೇಶಗಳು ಕೃಷಿ ಭೂಮಿಗಳಾಗಿ ಪರಿವರ್ತಿತವಾಗಿರುವುದು ಮತ್ತು ನಗರೀಕರಣದಿಂದಾಗಿಯೂ ಅಡೆತಡೆಗಳನ್ನು ಎದುರಿಸುತ್ತಿವೆ.

ಪಕ್ಷಿಗಳ ವಲಸೆ

 ತಾಪಮಾನದಲ್ಲಾಗುವ ತ್ವರಿತ ಬದಲಾವಣೆಗಳು ಪಕ್ಷಿಗಳ ಸಂತಾನೋತ್ಪತ್ತಿ ಮತ್ತು ಪಕ್ಷಿ ಪ್ರಬೇಧಗಳ ಅಸ್ತಿತ್ವಕ್ಕೆ ಅಪಾಯವನ್ನು ಒಡ್ಡುತ್ತವೆ.  ಪ್ರಸ್ತುತ ಸಂಶೋಧನೆಯ ಪ್ರಕಾರ, ಎಂಟನೇ ಒಂದು ಭಾಗದಷ್ಟು ಪಕ್ಷಿ ಪ್ರಬೇಧಗಳು ಅಳಿವಿನಂಚಿನಲ್ಲಿವೆ. ಮುಂಬರುವ ದಶಕಗಳಲ್ಲಿ ಅವು ವಿನಾಶದಂಚಿಗೆ ಸರಿಯಲಿವೆ. 2100ರ ವೇಳೆಗೆ ತಾಪಮಾನದಲ್ಲಿ ಈಗಿರುವು ತಾಪಮಾನಕ್ಕಿಂತ 3.5 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆ ಕಂಡುಬಂದರೆ ಸುಮಾರು 600ರಿಂದ 900 ಪಕ್ಷಿ ಪ್ರಬೇಧಗಳು ನಿರ್ನಾಮವಾಗಲಿವೆ. ಹೀಗೆ ಅಪಾಯದ ಅಂಚಿನಲ್ಲಿರುವ ಪಕ್ಷಿಗಳ ಪಟ್ಟಿ ಮಾಡಿದರೆ ಶೇಕಡಾ 89 ರಷ್ಟು ಹಕ್ಕಿಗಳು ಉಷ್ಣವಲಯದಲ್ಲಿಯೇ ಕಂಡುಬರುತ್ತವೆ.  ಸ್ನೋಬರ್ಡ್‌ನಂತಹ ಕೆಲವು ಉಷ್ಣವಲಯದ ಪರ್ವತ ಪಕ್ಷಿಗಳು ಅಲ್ಲಿಯ ವಾತಾವರಣಕ್ಕೆ ಸಂಪೂರ್ಣವಾಗಿ ಒಗ್ಗಿಕೊಂಡಿವೆ. ಅವುಗಳಿಗೆ ವಾತಾವರಣ ಬದಲಿಸಲು ಬೇರೆ ಪ್ರದೇಶಗಳಿಗೆ ವಲಸೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಹವಾಮಾನ ಬದಲಾವಣೆ ಅವುಗಳ ಮೇಲೆ ತೀವ್ರ ಪರಿಣಾಮವನ್ನು ಉಂಟುಮಾಡುತ್ತದೆ.

ಅದೇ ರೀತಿ ಧ್ರುವ ಪ್ರದೇಶಗಳಲ್ಲಿ ಕಂಡುಬರುವ ಆಡೆಲೀ ಪೆಂಗ್ವಿನ್ ತನ್ನ ಜೀವಿತಾವಧಿಯ ಉದ್ದಕ್ಕೂ ಸಮುದ್ರದ ಹಿಮದ ಮೇಲೆ ಅವಲಂಬಿತವಾಗಿದೆ. ಆದರೆ 1979 ರಿಂದ ಮೊದಲುಗೊಂಡು ಇಲ್ಲಿಯವರೆಗೂ ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್‌ನಲ್ಲಿ ಸಮುದ್ರ ಹಿಮವು  ತಾಪಮಾನ ಏರಿಕೆಯಿಂದ ಕರಗುತ್ತಿದೆ. ಕಡಿಮೆಯಾಗುತ್ತಿರುವ ಸಮುದ್ರದ ಹಿಮ, ಹಿಮನದಿ ಪ್ರದೇಶದಲ್ಲಿರುವ ಪ್ರಾಣಿಗಳ ಆವಾಸಸ್ಥಾನದ ವ್ಯಾಪ್ತಿಯನ್ನು ದಿನೇ ದಿನೇ ಸಂಕುಚಿತಗೊಳಿಸುತ್ತಿದೆ.  ಹೀಗಾಗಿ ಪೆಂಗ್ವಿನ್‌ಗಳು ತಮ್ಮ ಸಂತಾನೋತ್ಪತ್ತಿ ಸ್ಥಳಗಳನ್ನು  ದಕ್ಷಿಣಕ್ಕೆ ಸ್ಥಳಾಂತರಿಸುತ್ತಿವೆ. ಇದರೊಂದಿಗೆ  ಆಡೆಲೀ ಪೆಂಗ್ವಿನ್‌ಗಳ ಸಂಖ್ಯೆಯಲ್ಲಿ ಶೇಕಾಡಾ 40 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ.

ಹವಾಮಾನ ಬದಲಾವಣೆ ಮತ್ತು ಕೀಟಗಳು

ಹವಾಮಾನ ಬದಲಾವಣೆ ಕೀಟಗಳ ಮೇಲೆ ಉಂಟು ಮಾಡುವ ಪರಿಣಾಮಗಳು, ತಮ್ಮ ಸಂತಾನೋತ್ಪತ್ತಿಗಾಗಿ ಇವುಗಳನ್ನು ಆಶ್ರಯಿಸಿರುವ ಸಸ್ಯ ಪ್ರಬೇಧಗಳು ಹಾಗು ಪ್ರಾಣಿಗಳ ಆಹಾರ ಬೆಳೆಗಳು ಎಲ್ಲವು ಒಂದಕ್ಕೊಂದು ನೇರ ಸಂಬಂಧಗಳನ್ನು ಹೊಂದಿವೆ.  ಹವಾಮಾನ ಮಾದರಿಯು ಸ್ಥಳೀಯ ಸಸ್ಯ ಪ್ರಬೇಧಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಉಂಟುಮಾಡುತ್ತದೆ. ಅವುಗಳಲ್ಲಿ ಸ್ಥಳೀಯವಲ್ಲದ ಅನ್ಯ ಪ್ರಬೇಧದ ಸಸ್ಯಗಳ ಆಕ್ರಮಣ, ಸಸ್ಯಗಳಲ್ಲಿ ಹಣ್ಣು ಬಿಡುವಿಕೆ ಮತ್ತು ಹೂಬಿಡುವಿಕೆಯ ಅವಧಿಯಲ್ಲಿ ಬದಲಾವಣೆ ಮುಂತಾದವುಗಳು ಪ್ರಮುಖವಾದುವು. ಈ ಎಲ್ಲಾ ಬದಲಾವಣೆಗಳು ಪ್ರಾಣಿಗಳ ಆಹಾರ ಸಂಪನ್ಮೂಲಗಳ ಲಭ್ಯತೆಯ  ಮೇಲೆ ಸಾಕಷ್ಟು ವೈರುಧ್ಯ ಪರಿಣಾಮಗಳನ್ನು ಬೀರುತ್ತಿವೆ.

ಕೀಟಗಳು ಮತ್ತು ಸಸ್ಯ ಪ್ರಬೇಧಗಳ ಜೀವನ ಚಕ್ರದಲ್ಲಿ ಆಯಾ ಋತುಗಳಿಗೆ ಅನುಗುಣವಾಗಿ ಬದಲಾವಣೆಗಳು ಉಂಟಾಗುತ್ತವೆ.  ಆದರೆ ಅವುಗಳ ಜೀವನ ಚಕ್ರದಲ್ಲಿ ಕಾಲಾನುಕಾಲಕ್ಕೆ ಉಂಟಾಗುವ ಬದಲಾವಣೆಗಳು ಹೊರಗಿನ  ಹವಾಮಾನವನ್ನು ಅವಲಂಬಿಸಿವೆ. ಉದಾಹರಣೆಗೆ ಹವಾಮಾನ ಬದಲಾವಣೆ ಸಸ್ಯಗಳಲ್ಲಿ ಹೂಬಿಡುವ ಅವಧಿ ಮತ್ತು ಕೀಟಗಳಲ್ಲಿ ಚಿಟ್ಟೆಯ ಜೀವನಚಕ್ರ ಎಂದರೆ ಅದು ಮೊಟ್ಟೆಯೊಡೆದು ಹುಳು ಹೊರಬರುವ ಅವಧಿ ಎರಡರ ಮೇಲೂ ಪರಿಣಾಮ ಬೀರುತ್ತದೆ. ಈ ಎರಡೂ ಪ್ರಕ್ರಿಯೆಯ ಅವಧಿಯಲ್ಲಿ ಆಗುವ ಏರುಪೇರು ಜೀವವೈವಿಧ್ಯತೆಯ ಮೇಲೆ ಸಾಕಷ್ಟು ಪರಿಣಾಮವನ್ನು ಉಂಟುಮಾಡುತ್ತಿವೆ.

Global Warming 16694340863x2 1

ಹವಾಮಾನದಲ್ಲಿ ಉಂಟಾಗುತ್ತಿರುವ ಬದಲಾವಣೆಯು ಸಸ್ಯ ಪ್ರಬೇಧಗಳಲ್ಲಿ ಸಾಮಾನ್ಯವಾಗಿ ಅವು ಹೂ ಬಿಡುವ ಅವಧಿಗಿಂತ ಮುಂಚೆಯೇ ಎಂದರೆ ಅಂದಾಜು 26 ದಿನಗಳ ಮೊದಲೇ ಹೂಬಿಡುವಂತೆ ಮಾಡಿವೆ. ಅದೇ ಚಿಟ್ಟೆಗಳ ಜೀವನಚಕ್ರ ಈ ಹವಾಮಾನ ಬದಲಾವಣೆಗೆ ಸುಲಭವಾಗಿ ಸ್ಪಂದಿಸಲು ಸಾಧ್ಯವಾಗದೇ ಇರುವ ಕಾರಣ ಅವು ಮೊಟ್ಟೆಯೊಡೆದು, ಹುಳುವಾಗಿ, ಚಿಟ್ಟೆಯಾಗಿ ಹಾರುವ ಬೆಳವಣಿಗೆಯ ಹಂತ ಅಷ್ಟು ಶೀಘ್ರವಾಗಿ ಆಗುವುದಿಲ್ಲ. ಈ ಹೂಬಿಡುವ ಅವಧಿ ಮತ್ತು ಲಾರ್ವಾ ಮೊಟ್ಟೆಯೊಡೆದು ಚಿಟ್ಟೆಯಾಗಿ ಹೊರಬರುವ ಅವಧಿ ಒಟ್ಟೊಟ್ಟಿಗೇ ನಡೆದರೆ ಪರಾಗಸ್ಫರ್ಶ ಕ್ರಿಯೆ ಸುಲಭವಾಗಿ ನಡೆಯುತ್ತದೆ. ವಿಶ್ವದಾದ್ಯಂತ ಸುಮಾರು 35 ಶೇಕಡಾ ಆಹಾರ ಬೆಳೆಗಳು ತಮ್ಮ ಬೆಳವಣಿಗೆಗೆ ಪರಾಗಸ್ಫರ್ಶವನ್ನು ಅವಲಂಬಿಸಿವೆ. ಆದರೆ ಹವಾಮಾನ ಬದಲಾವಣೆ ಇವೆರಡರ ನಡುವಿನ ತಾಳಮೇಳವನ್ನು ಏರುಪೇರುಗೊಳಿಸುತ್ತಿದೆ.

ಹವಾಮಾನ ಬದಲಾವಣೆಯು ಚಿಟ್ಟೆಗಳ ಬೆಳವಣಿಗೆ, ಅವುಗಳ ಶರೀರದ ರಚನೆ ಮತ್ತು ಸಂತಾನೋತ್ಪತ್ತಿಯ ಮೇಲೂ ಪರಿಣಾಮ ಬೀರುತ್ತದೆ. ಹವಾಮಾನ ಬದಲಾವಣೆಯು ಬರ ಅಥವಾ ಪ್ರವಾಹದ ಮೂಲಕ ಲಾರ್ವಾಗಳ ಆಹಾರ ಸಸ್ಯಗಳ ಲಭ್ಯತೆಯ ಮೇಲೆಯೂ ಸಹ ಪರಿಣಾಮ ಬೀರುತ್ತದೆ. ಇದರಿಂದಾಗಿ ಹೆಣ್ಣು ಚಿಟ್ಟೆಗಳು ತಮ್ಮ ಮೊಟ್ಟೆಗಳನ್ನು ಇಡಲು ದೂರದವರೆಗೆ ಹಾರಾಡಬೇಕಾಗುತ್ತದೆ. ಒಗ್ಗುವ ಹವಾಮಾನ ಮತ್ತು ಆಹಾರವನ್ನು ಅರಸುತ್ತ ಹೊಸ ಸೂಕ್ತ ಆವಾಸಸ್ಥಾನಕ್ಕೆ ಚಿಟ್ಟೆಗಳು ಚಲಿಸಬಲ್ಲವು. ಆದರೆ ಎಲ್ಲಾ ಪ್ರಬೇಧಗಳಿಗೂ ಹೆಚ್ಚು ದೂರಕ್ಕೆ ಚಲಿಸಲು  ಸಾಧ್ಯವಾಗುವುದಿಲ್ಲ. ಇದು ಸೂಕ್ತ ಆವಾಸ ಸ್ಥಾನದ ಕೊರತೆ  ಮತ್ತು ಹೊಂದಿಕೊಳ್ಳಲು ಸಾಧ್ಯವಾಗದ ಕಾರಣ ಆ ಪ್ರಬೇಧದ ಅಳಿವಿಗೂ ಕಾರಣವಾಗಬಹುದು.

ಹವಾಮಾನ ಬದಲಾವಣೆ ಮತ್ತು ಪ್ರಾಣಿಗಳು

ಹವಾಮಾನ ಬದಲಾವಣೆ ಪ್ರಮುಖವಾಗಿ ಪ್ರಾಣಿಗಳಿಗೆ ಸಂಕಷ್ಟ ತರುವುದು ಅವುಗಳ ಆವಾಸಸ್ಥಾನದ ವಿನಾಶ ಮತ್ತು ನಂತರದಲ್ಲಿ ಪ್ರಬೇಧಗಳ ನಾಶದ ರೂಪದಲ್ಲಿ. ಪ್ರಾಣಿಗಳು ತಕ್ಷಣದ ತಾಪಮಾನ ಏರಿಕೆಗೆ ಹೊಂದಿಕೊಳ್ಳಲು ಹೆಣಗಾಡುತ್ತವೆ ಅಥವಾ ತಂಪಾದ ಪ್ರದೇಶಗಳಿಗೆ ವಲಸೆ ಹೋಗಬೇಕಾಗುತ್ತದೆ. ಉದಾಹರಣೆಗೆ ಉತ್ತರ ಅಮೆರಿಕದ ಪರ್ವತಗಳಲ್ಲಿ ವಾಸಿಸುವ ಸಣ್ಣ ಸಸ್ತನಿಯಾದ ಅಮೆರಿಕನ್ ಪಿಕಾ, ತಾಪಮಾನ ಏರಿಕೆಯಾದಂತೆ ಎತ್ತರದ ಮತ್ತು ತಂಪಾದ ಭೂಮಿಯನ್ನು ಅರಸುತ್ತಾ ವಲಸೆ ಹೋಗುತ್ತದೆ. ಹೀಗೆ ನಿರಂತರವಾಗಿ ತಂಪು ಭೂಮಿಯ ಮತ್ತು ಎತ್ತರದ ಪ್ರದೇಶದ ಹುಡುಕಾಟದ ಅದರ ವಲಸೆ ಕೊನೆಗೊಮ್ಮ ಆ ಪ್ರಬೇಧದ ವಿನಾಶಕ್ಕೆ ಕಾರಣವಾಗಬಹುದು. ಅದೇ ರೀತಿ ಹಿಮದ ಮೇಲೆ ಜೀವಿಸಲು ಹೊಂದಿಕೊಂಡಿರುವ ಪ್ರಾಣಿಗಳು, ಹಿಮದ ಹೊದಿಕೆಗಳು/ಕ್ಯಾಪ್‌ಗಳು ಸಂಪೂರ್ಣವಾಗಿ ಕರಗಿದಾಗ ಬದುಕುಳಿಯುವ ಸಾಧ್ಯತೆ ಕಡಿಮೆ.

OIP 3

ಇದಕ್ಕೆ ಉತ್ತಮ ನಿದರ್ಶನ ಉತ್ತರ ಧ್ರುವ (ಆರ್ಕ್ಟಿಕ್) ದಲ್ಲಿ ವಾಸಿಸುವ ಹಿಮಕರಡಿಗಳು. ಇವು ತಮ್ಮ ಆಹಾರಕ್ಕಾಗಿ ಮಂಜುಗಡ್ಡೆಯ  ಮೇಲಿರುವ ಸೀಲುಗಳನ್ನು ಅವಲಂಬಿಸಿವೆ. ಹವಾಮಾನ ಬದಲಾವಣೆಯಿಂದಾಗಿ, ಕರಗುವ ಮಂಜುಗಡ್ಡೆಯು ಹಿಮಕರಡಿಗಳಿಗೆ ತಮ್ಮ ಆಹಾರವನ್ನು ಹುಡುಕುವುದನ್ನು ದುಸ್ತರವನ್ನಾಗಿಸುತ್ತದೆ. ಹಿಮದ ಹಾಳೆಗಳ ಕರಗುವಿಕೆಯು ಕೇವಲ ಧ್ರುವಗಳಲ್ಲಿ ವಾಸಿಸುವ ಪ್ರಾಣಿಗಳ ಮೇಲೆ ಮಾತ್ರವಲ್ಲದೆ, ತಾಪಮಾನ ಏರಿಕೆಯಿಂದ ಉಂಟಾಗುವ ಸಮುದ್ರ ಮಟ್ಟದ ಏರಿಕೆಯಿಂದಾಗಿ ಕರಾವಳಿಯ ಪ್ರಾಣಿಗಳ ಆವಾಸಸ್ಥಾನಗಳನ್ನೂ ಧ್ವಂಸಮಾಡುತ್ತಿವೆ. ಸಮುದ್ರ ಆಮೆಗಳು ಕಡಲತೀರಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಆದರೆ ಹವಾಮಾನ ವೈಪರೀತ್ಯದಿಂದ ಸಮುದ್ರ ಮಟ್ಟದಲ್ಲಿ ಏರಿಕೆ ಉಂಟಾಗಿ ಕಡಲತೀರಗಳಲ್ಲಿ ಪ್ರವಾಹ ಉಂಟಾಗುವುದರಿಂದ ಮರಿ ಆಮೆಗಳು ಅಪಾಯಕ್ಕೆ ಸಿಲುಕುತ್ತಿವೆ. ಹೀಗೆ ಹವಾಮಾನ ಬದಲಾವಣೆಯು ಪ್ರಾಣಿಗಳ ಆವಾಸ ಸ್ಥಾನ, ಆಹಾರ ಮತ್ತು ನೀರಿನ ಮೂಲದ ಮೇಲೆ ಪರಿಣಾಮ ಬೀರುತ್ತಿರುವುದರಿಂದಾಗಿ  ಹಿಮ ಚಿರತೆಗಳು, ಹುಲಿಗಳು, ಗಂಗಾ ಡಾಲ್ಫಿನ್‌ಗಳು ಮತ್ತು ಗ್ರೇಟ್ ಇಂಡಿಯನ್ ಬಸ್ಟರ್ಡ್‌ನಂತಹ ಅಪರೂಪದ ಹಾಗು ಅಳಿವಿನಂಚಿನಲ್ಲಿರುವ ಪ್ರಬೇಧಗಳು ಹಲವಾರು ಸವಾಲುಗಳನ್ನು ಎದುರಿಸುತ್ತಿವೆ.

ಇದನ್ನೂ ಓದಿ ಭೂಮ್ತಾಯಿ | ಸಮುದ್ರ ಮಟ್ಟ ಏರಿಕೆ: ಕರಾವಳಿ ತೀರ ಪ್ರದೇಶಗಳಿಗೆ ತೀರದ ಆತಂಕ

ಹವಾಮಾನ ಬದಲಾವಣೆ ಮನುಷ್ಯನಿಂದಾಗಿ ಪ್ರಾಣಿ ಸಂಕುಲಕ್ಕೆ ಒದಗಿದ ಸಂಕಷ್ಟ. ಇದಕ್ಕೆ ಪರಿಹಾರ ಸಂಕಷ್ಟವನ್ನು ತಂದಿಟ್ಟ ನಮ್ಮ ಕೈಯಲ್ಲೇ ಇದೆ. ಪರಿಸರ ಪ್ರಜ್ಞೆಯೊಂದಿಗೆ  ನಮ್ಮ ವರ್ತನೆಯಲ್ಲಿಯೂ ಬದಲಾವಣೆ ಬಂದಾಗ ಮಾತ್ರ ಇದು ಸಾಧ್ಯವಾಗಬಲ್ಲುದು. ಆದರೆ ಪರಿಸರಕ್ಕೆ ಸಂಬಂಧಿಸಿದ ನೈತಿಕ ಪ್ರಜ್ಞೆಯ ವಿಷಯ ಬಂದಾಗ ನಮ್ಮಲ್ಲಿ ಸಿದ್ಧಾಂತ ಮತ್ತು ಕ್ರಿಯೆಗಳ ನಡುವೆ ಸಾಕಷ್ಟು ಅಂತರ ಬರುತ್ತದೆ. ಯಾವುದು ಸೂಕ್ತ ಎಂದು ಗೊತ್ತಿದ್ದರೂ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ನಮ್ಮನ್ನು ಇಚ್ಛಾಶಕ್ತಿಯ ಕೊರತೆ ತಡೆಯುತ್ತದೆ. ಆದರೆ ಸೃಷ್ಟಿಯಲ್ಲಿ ನಮ್ಮೊಂದಿಗಿನ ಸಹಜೀವಿಗಳು ನಮ್ಮೊಂದಿಗೆ ಬೇಕು ಎಂದಾದರೆ ಸಿದ್ಧಾಂತವನ್ನು ಅಳವಡಿಸಿಕೊಳ್ಳುವ ಮತ್ತು ಅನುಸರಿಸುವ ಕ್ರಿಯೆ ಬೇಕು.

WhatsApp Image 2025 11 17 at 3.57.02 PM
ಡಾ ಶ್ರೀನಿಧಿ ಅಡಿಗ
+ posts

ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಡಾ ಶ್ರೀನಿಧಿ ಅಡಿಗ
ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...