ಕೃಷಿರಂಗ | ಗರ್ಭ ಧರಿಸಿದ ಪ್ರಾಣಿಗಳಿಗೂ ಆಹಾರದ ಬಯಕೆಗಳಿರುತ್ತವೆ!

Date:

ಪ್ರಾಣಿಗಳಲ್ಲಿ ಆಹಾರದ ಬಯಕೆಗಳ ಕುರಿತಂತೆ ಹೆಚ್ಚಿನ ಸಂಶೋಧನೆಗಳಾಗಿವೆ. ಬಯಕೆಗಳಿಗೆ ತಕ್ಕಂತೆ ಪ್ರಾಣಿಗಳು ವರ್ತಿಸುತ್ತವೆ. ಸಂಶೋಧನೆಗಳ ತಿರುಳು ಪಠ್ಯ ಪುಸ್ತಕಗಳಲ್ಲಿ ಸ್ಥಾನ ಪಡೆದಿದೆ. ಪಶುಪಾಲಕರಿಗೆ ಪಶು ಪ್ರಾಣಿಗಳ ಬಯಕೆಗಳನ್ನು ಸಂಕ್ಷಿಪ್ತವಾಗಿ ತಿಳಿಸಿಕೊಡುವ ಪ್ರಯತ್ನವಿದು.

ತುಂಬು ಗರ್ಭಿಣಿಯರಲ್ಲಿ ಬಯಕೆಗಳು ಸರ್ವೇಸಾಮಾನ್ಯ. ಬೆಳೆಯುತ್ತಿರುವ ಭ್ರೂಣಕ್ಕೆ ಕೆಲವು ಪೋಷಕಾಂಶಗಳು ಬೇಕಾಗುತ್ತವೆ. ಅವನ್ನು ಮಾತೃದೇಹ ಪೂರೈಸಬೇಕಾಗುತ್ತದೆ. ಗರ್ಭಿಣಿಯ ಮಿದುಳು ಅದಕ್ಕಾಗಿ ಬಯಕೆಗಳನ್ನು ಸೃಷ್ಟಿಸುತ್ತದೆ. ಆಗ ಮಹಿಳೆಯು ಕೆಲ ಪೋಷಕಾಂಶಗಳು ಹೆಚ್ಚಿರುವ ಆಹಾರಗಳನ್ನು ತಿನ್ನುವ ಬಯಕೆಯನ್ನು ವ್ಯಕ್ತಪಡಿಸುತ್ತಾಳೆ. ಗ್ರಾಮೀಣ ಪ್ರದೇಶದಲ್ಲಿ ಇದನ್ನು ‘ಬಯಕೆಗಳು’ ಎಂದು ಕರೆಯುತ್ತಾರೆ. ಅವು ಆಹಾರದ ಬಯಕೆಗಳು. ಇಂಗ್ಲೀಷಿನಲ್ಲಿ ‘Nutritional Wisdom’ ಎಂದು ಕರೆಯಲಾಗಿದೆ.

ಹೈಪೋಥಲಾಮಸ್ ಎಂಬ ಮಿದುಳಿನ ಒಂದು ಪುಟ್ಟ ಭಾಗವು ಇಂತಹ ಬಯಕೆಗಳನ್ನು ಸೃಷ್ಟಿಸುವ ಕೇಂದ್ರವಾಗಿರಬಹುದು. ಹಸಿವು, ನೀರಡಿಕೆ, ಲವಣಾಂಶಗಳ ಸಮತೋಲನ, ಆಹಾರ ಸೇವನೆಯ ತೃಪ್ತಿಯಂತಹ ನಿಗ್ರಹಿಕೆಯ ಪಾತ್ರವನ್ನು ಹೈಪೋಥಲಾಮಸ್ ನಿರ್ವಹಿಸುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಹೇಳುವುದಾದರೆ ಹಸಿವಿನ ಕೇಂದ್ರ, ನೀರಡಿಕೆಯ ಕೇಂದ್ರ, ಲವಣಾಂಶಗಳ ಸಮತೋಲನ ಕೇಂದ್ರ, ಆಹಾರ ಸೇವನೆಯ ತೃಪ್ತಿ ಕೇಂದ್ರ ಹಾಗೂ ಇನ್ನಿತರೆ ಕೇಂದ್ರಗಳು ಹೈಪೋಥಲಾಮಸ್‍ನಲ್ಲಿವೆ. ಅಂದಹಾಗೆ, ಒಬ್ಬ ವಯಸ್ಕ ಮನುಷ್ಯನಲ್ಲಿ ಹೈಪೋಥಲಾಮಸ್‍ನ ತೂಕ ಕೇವಲ ನಾಲ್ಕು ಗ್ರಾಂಗಳು. ಒಂದು ಅವರೆ ಕಾಳಿನ ಗಾತ್ರ ಮಾತ್ರ. ಒಮ್ಮೊಮ್ಮೆ ಬಾದಾಮಿ ಬೀಜದ ಗಾತ್ರಕ್ಕೆ ಹೋಲಿಸುವುದುಂಟು. ಆದರೆ, ಅದರ ಪಾತ್ರ ಹಲವು.

ಆದಿ, ಅನಾದಿ ಕಾಲದಲ್ಲಿ ಹಳ್ಳಿಗಾಡಿನ ಗರ್ಭಿಣಿ ಮಹಿಳೆಯರು ಕೆಮ್ಮಣ್ಣಿನ ಉಂಡೆಯನ್ನು ತಿನ್ನುತ್ತಿದ್ದರು. ಕೆಮ್ಮಣ್ಣಿನಲ್ಲಿ ಕಬ್ಬಿಣದ ಅಂಶವಿರುತ್ತದೆ. ತಾಯಿ ಮತ್ತು ಭ್ರೂಣ ಇಬ್ಬರಿಗೂ ಕೆಂಪು ರಕ್ತ ಕಣಗಳ ಹೀಮೋಗ್ಲೊಬಿನ್ ಉತ್ಪಾದನೆಗೆ ಕಬ್ಬಿಣದ ಅವಶ್ಯಕತೆಯಿರುತ್ತದೆ. ಕೆಲ ಮಹಿಳೆಯರಿಗೆ ಮಾವಿನ ಕಾಯಿ, ಹುಣಸೆ ಕಾಯಿ ಮತ್ತಿತರೆ ಹುಳಿಯಾದ ಹಣ್ಣುಗಳನ್ನು ತಿನ್ನುವ ತೀವ್ರ ಬಯಕೆ. ಅವುಗಳಲ್ಲಿ ಜೀವಸತ್ವ ಸಿ ಇರುತ್ತದೆ. ಅದು ಭ್ರೂಣದ ಬೆಳವಣಿಗೆಗೆ ಬೇಕು. ಇಂತಹ ಆಹಾರಗಳನ್ನು ಸೇವಿಸಲು ಮಹಿಳೆಯ ಮೆದುಳು ಸಂಕೇತಗಳನ್ನು ಹೊರಡಿಸುತ್ತದೆ. ಅದೊಂದು ರೀತಿಯ ಅಪೇಕ್ಷೆ, ಉತ್ಕಟೇಚ್ಛೆ ಅಥವಾ ಬಯಕೆ.

ನಿರ್ದಿಷ್ಟ ಪೋಷಕಾಂಶಗಳ ಕೊರತೆಯಾದಾಗಲೂ ಕೂಡ ಬಯಕೆಗಳ ಉತ್ಪತ್ತಿಯಾಗುತ್ತದೆ. ಮಹಿಳೆಯರ ಜೊತೆಗೆ ಗಂಡಸರಲ್ಲೂ ಕೆಲ ಬಯಕೆಗಳಿರುತ್ತವೆ. ಸಸಾರಜನಕಯುಕ್ತ ಪದಾರ್ಥಗಳು, ಸಿಹಿ ಪದಾರ್ಥಗಳನ್ನು ತಿನ್ನುವ ಬಯಕೆಯಾಗಬಹುದು. ಮಕ್ಕಳು ಮಣ್ಣು ತಿನ್ನುವುದು ಲವಣಗಳ ಕೊರತೆಯಿಂದಿರಬಹುದು.

ಮಾನವರಲ್ಲಿರುವಂತೆ ಪ್ರಾಣಿಗಳಲ್ಲೂ ಆಹಾರದ ಬಯಕೆಗಳಿವೆ. ಆಗ ಪ್ರಾಣಿಗಳ ವರ್ತನೆಗಳಲ್ಲಿ ತೀವ್ರತರವಾದ ಬದಲಾವಣೆಗಳು ಕಂಡುಬರುತ್ತದೆ. ಅಂತಹ ವರ್ತನೆಗಳನ್ನು ಪ್ರಾಣಿ ಸಾಕಣೆದಾರರು ಮತ್ತು ಪಶುಪಾಲಕರು ಅರಿತುಕೊಳ್ಳುವುದು ಲಾಭದಾಯಕ ಪಶುಸಂಗೋಪನೆಯ ದೃಷ್ಟಿಯಿಂದ ಒಳಿತು.

ಜಾನುವಾರುಗಳಲ್ಲಿ ಆಹಾರದ ಬಯಕೆಗಳು

ಪ್ರಾಣಿಗಳಲ್ಲಿ ಆಹಾರದ ಬಯಕೆಗಳ ಕುರಿತಂತೆ ಹೆಚ್ಚಿನ ಸಂಶೋಧನೆಗಳಾಗಿವೆ. ಬಯಕೆಗಳಿಗೆ ತಕ್ಕಂತೆ ಪ್ರಾಣಿಗಳು ವರ್ತಿಸುತ್ತವೆ. ಸಂಶೋಧನೆಗಳ ತಿರುಳು ಪಠ್ಯ ಪುಸ್ತಕಗಳಲ್ಲಿ ಸ್ಥಾನ ಪಡೆದಿದೆ. ಪಶುಪಾಲಕರಿಗೆ ಪಶು ಪ್ರಾಣಿಗಳ ಬಯಕೆಗಳನ್ನು ಸಂಕ್ಷಿಪ್ತವಾಗಿ ತಿಳಿಸಿಕೊಡುವ ಪ್ರಯತ್ನವಿದು.

eating ash

ಬೂದಿ ತಿನ್ನುವ ದನಗಳು: ದನಗಳಲ್ಲಿ ಲವಣಗಳ ಕೊರತೆಯಾದಾಗ ಅವುಗಳಿಗೆ ಬೂದಿ ತಿನ್ನುವ ಬಯಕೆಯಾಗುತ್ತದೆ. ಬೆಳೆಯುಳಿಕೆಗಳನ್ನು ಸುಟ್ಟ ಬೂದಿಯಲ್ಲಿ ಲವಣಗಳ ಅಂಶವಿರುತ್ತದೆ. ಜೊತೆಗೆ, ಕಲ್ಲು ಮಣ್ಣುಗಳನ್ನೂ ಇದೇ ಬಯಕೆಯ ಸಂದರ್ಭದಲ್ಲಿ ದನಗಳು ತಿನ್ನುತ್ತವೆ. ಇದೆಲ್ಲಾ ಹಳ್ಳಿಗಾಡಿನಲ್ಲಿ ತಿರುಗಾಡಿ ಮೇಯ್ದು ಬರುವ ದನಗಳಲ್ಲಿ ಕಂಡು ಬರುವ ಲಕ್ಷಣ.
ಲವಣಗಳ ಕೊರತೆ ತೀವ್ರವಾದಾಗ ಮಣ್ಣಿನ ಇಟ್ಟಿಗೆಯ ಚೂರುಗಳು, ಮಣ್ಣಿನ ಮಡಿಕೆಯ ಚೂರುಗಳು, ಕಲ್ಲಿನ ಚೂರುಗಳನ್ನು ಕಟಕಟನೆ ಜಗಿಯುವ ಸಂದರ್ಭಗಳು ನಾಡದನಗಳಲ್ಲಿ ಕಂಡುಬರುತ್ತವೆ. ಒಮ್ಮೊಮ್ಮೆ ಅಂತಹ ಚೂರುಗಳು ಅನ್ನನಾಳದಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ಪ್ರಾಣಕ್ಕೆ ಸಂಚಕಾರ ತರುತ್ತವೆ. ಅಂತಹ ಸಂದರ್ಭಗಳಲ್ಲಿ ಲವಣಗಳ ಪೂರೈಕೆಗೆ ರೈತರು ಒತ್ತು ನೀಡಬೇಕು.
ಕೊಟ್ಟೆಗೆಯಲ್ಲಿ ಕಟ್ಟಿ ಹಾಕಿದ ಕಡೆ ಸಿಕ್ಕ ಸಿಕ್ಕ ವಸ್ತುಗಳನ್ನು ನೆಕ್ಕುವುದು, ತನ್ನ ದೇಹವನ್ನು ನೆಕ್ಕಿ ನೆಕ್ಕಿ ಗಾಯ ಮಾಡಿಕೊಳ್ಳುವುದು ಲವಣಗಳ ಕೊರತೆಯ ಲಕ್ಷಣ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆಧುನಿಕ ಪಶುಪಾಲನೆಯಲ್ಲಿ ಮಿಶ್ರ ತಳಿಗಳ ಸಾಕಣೆಯಲ್ಲಿ ಲವಣ ಮಿಶ್ರಣ (Mineral mixture) ವನ್ನು ನೀಡುವ ಪದ್ದತಿಯಿದೆ. ಗಟ್ಟಿ ಆಹಾರದಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಲವಣಗಳನ್ನು ಬೆರೆಸಲಾಗಿರುತ್ತದೆ. ಲವಣ ನೆಕ್ಕು ಬಿಲ್ಲೆ (Salt Lick blocks) ಗಳನ್ನು ದನಗಳಿಗೆ ಒದಗಿಸಲಾಗುತ್ತಿದೆ. ಜೊತೆಗೆ ಅವುಗಳನ್ನು ಕಟ್ಟಿ ಸಾಕುವ ಅಥವಾ ಕೊಟ್ಟಿಗೆಯೊಳಗೆ ಸಾಕುವ ಪದ್ದತಿಯಿರುವುದರಿಂದ ಅಂತಹ ದನಗಳು ಬೂದಿ ಮತ್ತಿತರ ಆಹಾರೇತರ ಪದಾರ್ಥಗಳನ್ನು ತಿನ್ನುವ ಲಕ್ಷಣಗಳನ್ನು ತೋರಿಸುವುದಿಲ್ಲ. ದುಡಿಯುವ ದನಗಳ ಬೆವರಿನಲ್ಲಿ ಲವಣಗಳು ಹೊರಸೂಸುತ್ತವೆ. ದನಗಳಿಗೆ ಲವಣಗಳ ಹಸಿವು (Salt Appetite) ಉಂಟಾಗುತ್ತದೆ. ಮುಖ್ಯವಾಗಿ ಉಳುಮೆಯ ಕಾಲದಲ್ಲಿ ದನಗಳಿಗೆ ಲವಣಗಳ ಪೂರೈಕೆ ಅತ್ಯಗತ್ಯ. ಸ್ಥಳೀಯ ಸಾಂಪ್ರದಾಯಕ ಜ್ಞಾನದಂತೆ ರೈತರು ದುಡಿಯುವ ದನಗಳಿಗೆ ಅಡುಗೆಯ ಉಪ್ಪಿಗೆ ಲಘುವಾಗಿ ಹಸಿಮೆಣಿಸಿನ ಕಾಯಿಯನ್ನು ಜಜ್ಜಿ ಖಾರ ಬೆರೆಸಿ ನಾಲಗೆಯ ಮೇಲೆ ಉಜ್ಜಿ ಲವಣಗಳನ್ನು ಪೂರೈಸುವ ವಿಧಾನವಿದೆ.

Salt for cows

ಗರ್ಭದ ಕುರಿಗಳಲ್ಲಿ ಲವಣಗಳ ಬಯಕೆಗಳಿಲ್ಲ!

ಗರ್ಭದ ಕುರಿಗಳು ಲವಣಗಳ ಕೊರತೆಯಿಂದ ಬಳಲುತ್ತಿದ್ದರೆ ಅವುಗಳಲ್ಲಿ ಬಯಕೆಗಳು ಉದ್ಬವಿಸುವುದಿಲ್ಲ ಎಂಬುದು ಸಂಶೋಧನೆಗಳ ಸಾರ. ತಾಯಿ ಕುರಿ ತನ್ನ ಮರಿಗಳನ್ನು ಪಾಲನೆ ಮಾಡುವಾಗಲೂ ಇಂತಹ ಬಯಕೆಯನ್ನು ವ್ಯಕ್ತಪಡಿಸಲಾರವು ಎಂಬುದು ಸೋಜಿಗವೇ ಸರಿ. ಆದರೆ, ಬೇರೆ ಸಂದರ್ಭಗಳಲ್ಲಿ ಕುರಿಗಳಲ್ಲಿ ಲವಣಗಳ ಬಯಕೆಯಿರುತ್ತದೆ.

ಆನೆಗಳಲ್ಲಿ ಆಹಾರದ ಬಯಕೆಗಳು

ಆನೆಗಳಿಗೆ ಲವಣಗಳ ಕೊರತೆಯಾದಾಗ ಮಣ್ಣು ತಿನ್ನುವ ಬಯಕೆ ಉಂಟಾಗುತ್ತದೆ. ಆನೆಗಳಿಗೆ ಮುಖ್ಯವಾಗಿ ಸೋಡಿಯಂ, ಕ್ಯಾಲ್ಸಿಯಂ, ಮೆಗ್ನೀಶಿಯಂ, ಪೊಟ್ಯಾಶಿಯಂ ಲವಣಗಳ ಅವಶ್ಯಕತೆಯಿರುವಾಗ ಇಂತಹ ಬಯಕೆಯಾಗುತ್ತದೆ. ಗರ್ಭವತಿ ಆನೆಗಳಲ್ಲಿ ಮತ್ತು ಮರಿಗಳಿಗೆ ಹಾಲುಣಿಸುವ ಸಂದರ್ಭದಲ್ಲಿ ಮಣ್ಣು ತಿಂದು ಲವಣಗಳ ಅಗತ್ಯತೆಯನ್ನು ನೀಗಿಸಿಕೊಳ್ಳುವ ಬಯಕೆಯಾಗುತ್ತದೆ. ಇದನ್ನು ಜಿಯೋಪೇಜಿಯಾ (Geophagia) ಎಂದು ಕರೆಯಲಾಗಿದೆ. ಕ್ಯಾಲ್ಸಿಯಂ ಕೊರತೆಯಾದಾಗ ಮರದ ತೊಗಟೆಯನ್ನು ಸೀಳಿ ತಿನ್ನುತ್ತವೆ.

ಎಲಿಫೆಂಟ್

ಕೋಳಿಗಳಲ್ಲಿ ಆಹಾರದ ಬಯಕೆಗಳು

ಹಿತ್ತಲಲ್ಲಿ ಕೋಳಿ ಸಾಕಾಣಿಕೆ ಮಾಡುವ ಪದ್ದತಿಯಲ್ಲಿ ಕೋಳಿಗಳಲ್ಲಿ ಥಯಾಮಿನ್ (ಜೀವಸತ್ವ ಬಿ1) ಕೊರತೆಯಾದಾಗ ಹೆಚ್ಚು ಥಯಾಮಿನ್‍ಯುಕ್ತ ಆಹಾರ ಪದಾರ್ಥಗಳನ್ನು ಕೋಳಿಗಳು ಆಯ್ದು ತಿನ್ನುತ್ತವೆ. ಅದು ಆಹಾರ ಸೇವನೆಯ ಬುದ್ದಿವಂತಿಕೆ ಅಥವಾ ಬಯಕೆ. ಇಂತಹ ಬಯಕೆಯು ವನ್ಯ ಪಕ್ಷಿಗಳಲ್ಲಿ ಅಸ್ತಿತ್ವದಲ್ಲಿರಬಹುದೆಂದು ಗ್ರಹಿಸಬಹುದಾಗಿದೆ.

ಆದರೆ, ಆಧುನಿಕ ಕೋಳಿ ಸಾಕಾಣಿಕೆಯಲ್ಲಿ ಸಮತೋಲನ ಆಹಾರವನ್ನು ನೀಡಲಾಗುತ್ತಿದೆ. ಎಷ್ಟೆಂದರೆ, ಮನುಷ್ಯರಿಗೂ ಲಭ್ಯವಿಲ್ಲದಷ್ಟು ನಿಖರ ಪ್ರಮಾಣದಲ್ಲಿ ಸಮತೋಲನ ಆಹಾರವನ್ನು ಮಾಂಸದ ಕೋಳಿ ಉತ್ಪಾದನೆಯಲ್ಲಿ ಮತ್ತು ಮೊಟ್ಟೆ ಕೋಳಿ ಉತ್ಪಾದನೆಯಲ್ಲಿ ಪೂರೈಸುವಷ್ಟು ಪ್ರಗತಿಯು ಕೋಳಿ ಉದ್ಯಮದಲ್ಲಿ ನಡೆದಿದೆ.

ಇದನ್ನೂ ಓದಿ ಚದುರಿದ ಚಿತ್ರ | ಎಪ್‌ಸ್ಟೀನ್‌ ಫೈಲ್‌ ಮತ್ತು ಹೊಸ ಕಾಲದ ಅಮ್ಮಂದಿರ ಆತಂಕಗಳು

‘ಆಹಾರದ ಬಯಕೆಗಳು’ (Nutritional Wisdom) ಕುರಿತು ಇನ್ನೂ ಹೆಚ್ಚಿನ ಸಂಶೋಧನೆಗಳಾಗುತ್ತಿವೆ. ಲವಣಗಳು, ಜೀವಸತ್ವಗಳು, ಸಸಾರಜನಕ, ಶರ್ಕರಪಿಷ್ಟಗಳು, ಕೊಬ್ಬು ಮುಂತಾದ ಪದಾರ್ಥಗಳು ನೂರಾರು ಶರೀರ ಕ್ರಿಯೆಗಳಿಗೆ ಅತ್ಯಗತ್ಯ. ಪ್ರಾಣಿಗಳಲ್ಲಿ ಆಹಾರದ ಬಯಕೆಗಳನ್ನು ಅನುಭವಸ್ಥ ಪಶುಪಾಲಕರು ಗುರುತಿಸಿಕೊಳ್ಳುವ ಛಾತಿಯನ್ನು ಹೊಂದಿದ್ದಾರೆ. ನಿರ್ದಿಷ್ಟ ಆಹಾರ ಪದಾರ್ಥಗಳ ಕೊರತೆಯಿಂದ ಪ್ರಾಣಿಗಳು ಬಳಲದಿರಲು ಸಾಧ್ಯವಾದಷ್ಟೂ ಸಮತೋಲನ ಆಹಾರವನ್ನು ನೀಡುವುದು ಒಳಿತು. ಅದರಿಂದ ಉತ್ಪಾದನೆ ಹೆಚ್ಚಾಗುತ್ತದೆ.

WhatsApp Image 2025 07 22 at 12.22.50 PM
ಪ್ರೊ. ಎಂ. ನಾರಾಯಣ ಸ್ವಾಮಿ
+ posts

ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...