ಕಾಲಮಾನ | ಕೊನೆಯುಸಿರಿನವರೆಗೂ ಸಮಸಮಾಜದ ಹೋರಾಟಕ್ಕೆ ಬದ್ಧರಾಗಿದ್ದ ಆರ್‌ ನಲ್ಲಕಣ್ಣು

Date:

ಅವರು ಪರಿಸರ ಸಂರಕ್ಷಣೆಯ ಹೋರಾಟಗಾರರೂ ಆಗಿದ್ದರು. ತಾಮ್ರಭರಣಿ ನದಿಯನ್ನು ಹಾಳುಗೆಡವುತ್ತಿದ್ದ ಮರಳು ಮಾಫಿಯ ವಿರುದ್ಧ ಹೋರಾಟವನ್ನು ಮಾಡಿದರು. ಮದರಾಸು ಉಚ್ಚನ್ಯಾಯಾಲಯದ ಮಧುರೈ ಬೆಂಚ್‌ ಮುಂದೆ ಖುದ್ದಾಗಿ ಹಾಜರಾಗಿ ಆ ನದಿಯ ದಡಗಳಲ್ಲಿ ಮರಳು ಗಣಿಗಾರಿಕೆ ವಿರುದ್ಧ ನಿಷೇಧ ಕ್ರಮ ಜಾರಿಯಾಗುವಂತೆ ನೋಡಿಕೊಂಡರು.

ಅಯ್ಯಾ ನಲ್ಲಕಣ್ಣು ಅಥವಾ ಆರ್‌ಎನ್‌ಕೆ ಎಂದು ಗೌರವ ಹಾಗೂ ಪ್ರೀತಿಯಿಂದ ಸಂಬೋಧಿಸಲ್ಪಡುತ್ತಿದ್ದ ತಮಿಳುನಾಡಿನ ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಐ)ದ ಹಿರಿಯ ನಾಯಕ ಆರ್‌ ನಲ್ಲಕಣ್ಣು ಇಂದು (ಫೆಬ್ರವರಿ 26, 2026) ತಮ್ಮ 101ನೇ ವಯಸ್ಸಿನಲ್ಲಿ ಚೆನ್ನೈನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು.

ಡಿಸೆಂಬರ್‌ 26, 1925ರಂದು ಆಗಿನ ತಿರುನಲ್ವೇಲಿ ಮತ್ತು ಇಂದಿನ ತೂತ್ತುಕುಡಿ ಜಿಲ್ಲೆಯ ಶ್ರೀ ವೈಕುಂಡಂನ ಒಂದು ಕೃಷಿ ಕುಟುಂಬದಲ್ಲಿ ಜನಿಸಿದ ನಲ್ಲಕಣ್ಣು ಶಾಲೆಯಲ್ಲಿದ್ದಾಗಲೇ ಅಂದರೆ ತಮ್ಮ ಹದಿನೈದನೇ ವಯಸ್ಸಿನಲ್ಲೇ ಎರಡನೇ ವಿಶ್ವಯುದ್ಧದ ಸಮಯದಲ್ಲಿ ಬ್ರಿಟೀಷರ ಪರವಾಗಿದ್ದ ನಾಟಕವನ್ನು ವಿರೋಧಿಸಿದರು. ಮಹಾತ್ಮ ಗಾಂಧೀಜಿ ಬ್ರಿಟೀಷರ ಯುದ್ಧಕ್ಕೆ ಬೆಂಬಲವನ್ನು ನೀಡಬಾರದೆಂಬ ಕರೆಗೆ ಓಗೊಟ್ಟು ಅವರು ಈ ಪರಿಯ ನಿಲುವನ್ನು ತೆಗೆದುಕೊಂಡರು. ಪ್ರತಿಭಟನೆಯಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಮುಗಿಬಿದ್ದರು. ಮಾರನೆಯ ದಿನ ಧೃತಿಗೆಡದ ನಲ್ಲಕಣ್ಣು ಪುನಃ ಆಂದೋಲನಕ್ಕೆ ನೇತೃತ್ವವನ್ನು ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಾರಂಭದಲ್ಲಿ ಕಾಂಗ್ರೆಸ್‌ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ನಲ್ಲಕಣ್ಣು ಜವಾಹರ ಲಾಲ್ ನೆಹರೂರವರ ಸಮಾಜವಾದಿ ಆಲೋಚನೆಗಳಿಂದ ಪ್ರಭಾವಿತರಾಗಿದ್ದರು. 1943ರಲ್ಲಿ, ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿ ಭಾರತ ಕಮ್ಯುನಿಸ್ಟ್‌ ಪಕ್ಷಕ್ಕೆ ಸೇರಿದರು. 1946ರಲ್ಲಿ ಚೆನ್ನೈಗೆ ಸ್ಥಳಾಂತರಗೊಂಡರು. ಪಕ್ಷದ ಮುಖವಾಣಿಯಾಗಿದ್ದ ಜನಶಕ್ತಿಯಲ್ಲಿ ಅಗ ಯುದ್ಧದ ಕಾರಣದಿಂದ ಉಂಟಾಗಿದ್ದ ಕ್ಷಾಮದ ಪರಿಸ್ಥಿತಿಯಲ್ಲಿ, ಪಥಿಣಿಕೋಟೈ ಎಂಬ ಸ್ಥಳದಲ್ಲಿನ ಅಕ್ಕಿಯ ದೊಡ್ಡಮಟ್ಟದ ಅಕ್ರಮ ದಾಸ್ತಾನಿನ ಮಾಹಿತಿಯನ್ನು ಹೊರಗೆಡವಿದರು. ಇದರಿಂದ ಸಾವಿರಗಟ್ಟಲೆ ಅಕ್ಕಿ ಮೂಟೆಗಳು ಹೊರಬಂದವು. ಹಸಿವಿನಿಂದ ತತ್ತರಿಸುತ್ತಿದ್ದ ಜನರು ಸ್ವಲ್ಪ ನೆಮ್ಮದಿಯಿಂದ ಉಸಿರಾಡಿದರು.

ಸ್ವಾತಂತ್ರ್ಯದ ತರುವಾಯ ಭಾರತ ಸರ್ಕಾರ ಕಮ್ಯುನಿಸ್ಟರನ್ನು ಬಗ್ಗುಬಡಿಯಲು ಮುಂದಾಯಿತು. ಅದು ಸಿಪಿಐನ್ನು ನಿಷೇಧಿಸಿತು. 1950ರ ನೆಲ್ಲೈ (ತಿರುನಲ್ವೇಲಿ) ಪಿತೂರಿ ಪ್ರಕರಣದಲ್ಲಿ ಅವರನ್ನು ಆಪಾದಿತರೆಂದು ಘೋಷಿಸಲಾಯಿತು. ಸಶಸ್ತ್ರ ಹೋರಾಟದ ಮೂಲಕ ಸರ್ಕಾರವನ್ನು ಉರುಳಿಸುವ ಉದ್ದೇಶವನ್ನು ಅವರು ಮತ್ತು ಇತರ ನಾಯಕರು ಹೊಂದಿದ್ದರು ಎಂಬ ಆಪಾದನೆಯನ್ನು ಹೊರಿಸಿ ಅವರನ್ನು ಜೈಲಿಗೆ ತಳ್ಳಲಾಯಿತು. ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. ಬಂಧನದ ಅವಧಿಯನ್ನು ಕಡಿತಗೊಳಿಸಿದ ಕಾರಣದಿಂದ ಅವರು ಏಳು ವರ್ಷ ಜೈಲಿನಲ್ಲಿ ಕಳೆದರು. ಜೈಲಿನಲ್ಲಿದ್ದಾಗ ಅವರಿಗೆ ಹಿಂಸೆಯನ್ನು ನೀಡಲಾಯಿತು. ಒಮ್ಮೆ ಅವರನ್ನು ತಲೆಕೆಳಗಾಗಿ ನೇತಾಡುವಂತೆ ಮಾಡಿ ಅವರ ಮೀಸೆಯನ್ನು ಸಿಗರೇಟಿನಿಂದ ಸುಡಲಾಯಿತು. ಅನೇಕ ವರ್ಷಗಳ ತರುವಾಯ ಅವರು, “ನನಗೇನೂ ಮೀಸೆಯ ಮೇಲೆ ಮೋಹವಿರಲಿಲ್ಲ. ನನ್ನ ಕೆನ್ನೆಯ ಮೇಲಿದ್ದ ಮಚ್ಚೆಯನ್ನು ಮರೆಮಾಚಲು ದಪ್ಪ ಮೀಸೆಯನ್ನು ಬೆಳೆಸಿದ್ದೆ…” ಎಂದು ಮಂದಹಾಸ ಬೀರುತ್ತ ಹೇಳಿದ್ದರು. ಜೈಲಿನಲ್ಲಿದ್ದಾಗ ಸಹಕೈದಿಗಳ ಹಕ್ಕುಗಳ ಬಗೆಗೆ, ಅದರಲ್ಲೂ ಮುಖ್ಯವಾಗಿ ಶಿಕ್ಷಣ ಕುರಿತು ಹೋರಾಟವನ್ನು ಮಾಡಿದರು.

1956ರಲ್ಲಿ ಬಿಡುಗಡೆಗೊಂಡ ತರುವಾಯ ಅವರು ಪಕ್ಷದ ಪೂರ್ಣಾವಧಿ ಕಾರ್ಯಕರ್ತರಾದರು. ನಂತರ ಕೃಷಿ ಕಾರ್ಮಿಕರನ್ನು ಸಂಘಟಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರು. ದುಡಿಯುವ ಮಂದಿ, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಸಮಾಜದಲ್ಲಿ ಅಂಚಿಗೆ ತಳ್ಳಲ್ಪಟ್ಟವರ ಹಿತದಲ್ಲಿ ಅವಿರತವಾಗಿ ಹೋರಾಡುವುದಕ್ಕೆ ಮುಂದಾದರು. 1992ರಿಂದ 2005ರವರೆಗೆ ಪಕ್ಷದ ತಮಿಳುನಾಡು ಘಟಕದ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 1967 ಮತ್ತು 1977ರಲ್ಲಿ ತಿರುನಲ್ವೇಲಿ ಜಿಲ್ಲೆಯ ಅಂಬಸಮುದ್ರಂ ಕ್ಷೇತ್ರದಿಂದ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. 1999ರಲ್ಲಿ ಕೊಯಂಬತ್ತೂರಿನಿಂದ ಲೋಕಸಭೆಗೆ ಸ್ಪರ್ಧಿಸಿ ಪರಾಭವಗೊಂಡರು. ಆದರೂ ಅವರು ಅನೇಕ ಸಮಾಜಮುಖಿ ಹೋರಾಟಗಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಅವರು ಪರಿಸರ ಸಂರಕ್ಷಣೆಯ ಹೋರಾಟಗಾರರೂ ಆಗಿದ್ದರು. ತಾಮ್ರಭರಣಿ ನದಿಯನ್ನು ಹಾಳುಗೆಡವುತ್ತಿದ್ದ ಮರಳು ಮಾಫಿಯ ವಿರುದ್ಧ ಹೋರಾಟವನ್ನು ಮಾಡಿದರು. ಮದರಾಸು ಉಚ್ಚನ್ಯಾಯಾಲಯದ ಮಧುರೈ ಬೆಂಚ್‌ ಮುಂದೆ ಖುದ್ದಾಗಿ ಹಾಜರಾಗಿ ಆ ನದಿಯ ದಡಗಳಲ್ಲಿ ಮರಳು ಗಣಿಗಾರಿಕೆ ವಿರುದ್ಧ ನಿಷೇಧ ಕ್ರಮ ಜಾರಿಯಾಗುವಂತೆ ನೋಡಿಕೊಂಡರು. ಶ್ರೀವೈಕುಂಡಂ ಸೇತುವೆ ಪ್ರದೇಶದಲ್ಲಿ ಜರುಗುತ್ತಿದ್ದ ಅಕ್ರಮ ಚಟುವಟಿಕೆಗಳ ವಿರುದ್ಧ ಕೇಸುಗಳನ್ನು ಫೈಲ್‌ ಮಾಡಿದರು. ಕೆಲವು ವರ್ಷಗಳ ಹಿಂದೆ ಚೆನ್ನೈನಲ್ಲಿ ಪ್ರವಾಹ ಉಂಟಾದಾಗ, ಅವರ ಮನೆ ಕೂಡ ಜಲಾವೃತಗೊಂಡಿತು. ಅವರನ್ನು ರಕ್ಷಿಸಲು ಮುಂದಾದಾಗ, ಅವರು “ ಈ ಪ್ರದೇಶದ ಎಲ್ಲರನ್ನೂ ರಕ್ಷಿಸುವವರೆಗೆ ನಾನು ದೋಣಿಯನ್ನು ಹತ್ತುವುದಿಲ್ಲ….” ಎಂದು ಘೋಷಿಸಿದರು!

ತುಂಬ ಸರಳ ಜೀವನವನ್ನು ನಡೆಸುತ್ತಿದ್ದ ನಲ್ಲಕಣ್ಣು ಅವರಿಗೆ ಸ್ವಂತ ಮನೆಯಿರಲಿಲ್ಲ; ಕಾರು ಕೂಡ. ಆಟೋಗಳಲ್ಲಿ ಓಡಾಡುತ್ತಿದ್ದರು. 2007ರಿಂದ ಚೆನೈನ ತಮಿಳುನಾಡು ಹೌಸಿಂಗ್‌ ಬೋರ್ಡಿನ ಒಂದು ಫ್ಲಾಟಿನಲ್ಲಿ ವಾಸಿಸುತ್ತಿದ್ದರು. ಅಧಿಕಾರಿಗಳು ಅವರಿಂದ ಬಾಡಿಗೆಯನ್ನು ನಿರೀಕ್ಷಿಸದಿದ್ದರೂ, ಅವರು ರೂ 4500/- ಬಾಡಿಗೆಯನ್ನು ಪ್ರತಿ ತಿಂಗಳು ನೀಡುತ್ತಿದ್ದರು. ನಂತರ ಅವರು ಕೆ ಕೆ ನಗರದ ಒಂದು ಬಾಡಿಗೆ ಮನೆಯಲ್ಲಿ ವಾಸ್ತವ್ಯವನ್ನು ಹೂಡಿದರು.

ಅವರ ಎಂಬತ್ತನೆಯ ಹುಟ್ಟುಹಬ್ಬಕ್ಕೆ ಪಕ್ಷದ ಸಂಗಾತಿಗಳು ತಮಿಳುನಾಡಿನಾದ್ಯಂತ ರೂ. 1 ಕೋಟಿ ಹಣವನ್ನು ಸಂಗ್ರಹಿಸಿದರು. ಆದರೆ ಅವರು ಇಡೀ ಮೊತ್ತವನ್ನು ಪಕ್ಷಕ್ಕೆ ದೇಣಿಗೆಯಾಗಿ ನೀಡಿದರು. ತಮಿಳುನಾಡು ಸರ್ಕಾರ ಅವರಿಗೆ ಅಂಬೇಡ್ಕರ್‌ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಆಗ ದೊರೆತ ರೂ. 1 ಲಕ್ಷ ಮೊತ್ತವನ್ನು, ಅರ್ಧ ಪಕ್ಷಕ್ಕೆ ಮತ್ತು ಇನ್ನರ್ಧ ಕೃಷಿ ಕಾರ್ಮಿಕರ ಸಂಘಕ್ಕೆ ನೀಡಿದರು!

nallakannu
ಸರ್ಕಾರದ ಪ್ರಶಸ್ತಿ ಪಡೆದ ಸಂದರ್ಭ

2022ರ ಸ್ವಾತಂತ್ರ್ಯ ದಿನದಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಗೆ ʼತಗೈಸಾಲ್‌ ತಮಿಳರ್‌ ವಿರುದುʼ (ವಿಶಿಷ್ಟ ತಮಿಳಗ ಪ್ರಶಸ್ತಿ) ನೀಡಿದರು. ಆ ಸಂದರ್ಭದಲ್ಲಿ ದೊರೆತ ರೂ.10 ಲಕ್ಷ ಪ್ರಶಸ್ತಿ ಹಣದ ಜೊತೆ ತಮ್ಮ ರೂ. 5000 ಸೇರಿಸಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ಕೊಟ್ಟುಬಿಟ್ಟರು!

ನಲ್ಲಕಣ್ಣು ಸಿಪಿಐ ನಾಯಕ ನೆಲೈನ ಅಣ್ಣಾಸ್ವಾಮಿ ಎಂಬವರ ಮಗಳು ರಂಜಿತಂ ಅಮ್ಮಾಳ್‌ ಅವರನ್ನು ವರಿಸಿದ್ದರು. ಮಡದಿಯನ್ನು ಅವರು 2016ರಲ್ಲಿ ಕಳೆದುಕೊಂಡರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಪ್ರತಿ ವರ್ಷ ಅವರು ಹುಟ್ಟಿದ ದಿನದಂದು ಎಂ ಕೆ ಸ್ಟಾಲಿನ್‌ ಮತ್ತು ಇತರ ಕೆಲವು ನಾಯಕರು ಅವರ ನಿವಾಸಕ್ಕೆ ಭೇಟಿ ನೀಡಿ, ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದರು. ಪಕ್ಷಬೇಧವನ್ನು ಮರೆತು ಎಲ್ಲ ನಾಯಕರು ಅವರನ್ನು ಗೌರವದಿಂದ ಕಾಣುತ್ತಿದ್ದರು. ಯುವ ಸಂಗಾತಿಗಳಿಗೆ ಮಾದರಿ ಮಾರ್ಗದರ್ಶಿಯಾಗಿದ್ದರು. ಸಾರ್ವಜನಿಕ ಜೀವನದಲ್ಲಿ ಹೇಗೆ ಇರಬೇಕು ಎಂಬುದರ ಉದಾತ್ತ ನಿದರ್ಶನವಾಗಿ ನಲ್ಲಕಣ್ಣು ಬಾಳಿ, ಬದುಕಿದರು. ನಾಳೆ ಅವರಿಚ್ಛೆಯಂತೆ ಅವರ ದೇಹವನ್ನು ಆಸ್ಪತ್ರೆಗೆ ದಾನವಾಗಿ ನೀಡಲಾಗುತ್ತದೆ.

ಈ ಬರಹಗಾರನಿಗೆ ಸುಮಾರು 21-22 ವರ್ಷಗಳ ಹಿಂದೆ ನಲ್ಲಕಣ್ಣು ಅವರನ್ನು ಬೆಂಗಳೂರಿನಲ್ಲಿ ಒಮ್ಮೆ ಭೇಟಿ ಮಾಡುವ ಸಂದರ್ಭ ಒದಗಿತ್ತು. ಆತನ ಜೊತೆ, ಒಂದು ಬಿಳಿ ಮುಂಡು ಮತ್ತು ಅರ್ಧ ತೋಳಿನ ಬಿಳಿ ಶರ್ಟ್‌ ಧರಿಸಿದ್ದ ಅವರು ತಮ್ಮ ತುಸು ಗಡಸು ಎನ್ನಬಹುದಾದ ದನಿಯ ಮೂಲಕ ಕೆಲಕಾಲ ಮಾತನಾಡಿದ್ದರು.

ಕೊನೆಯವರೆಗೂ ಸಮಸಮಾಜಕ್ಕಾಗಿ ಶ್ರಮಿಸಿದ ನಲ್ಲಕಣ್ಣು ಇನ್ನು ನೆನಪು ಮಾತ್ರ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪಥಿಕರಾಗಿ, ಪ್ರಜ್ಞಾಪೂರ್ವಕವಾಗಿ ಮುನ್ನಡೆಯುವುದೇ ಅವರಿಗೆ ನೀಡುವ ಸಾರ್ಧಕ ಶ್ರದ್ಧಾಂಜಲಿ. ಅವರಿಗೆ ಆದರಪೂರ್ವಕ ವಿದಾಯ ಮತ್ತು ನಮನಗಳು.

WhatsApp Image 2025 11 17 at 4.18.26 PM
ಮ ಶ್ರೀ ಮುರಳಿ ಕೃಷ್ಣ
+ posts

ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...