ಸುತ್ತಾಟ | ಕ್ಯಾಂಬೋಡಿಯಾದ ಅಂಗ್ಕೋರ್ ವಾಟ್‌ನಲ್ಲಿ ಬಹು ಸುಂದರ ಸೂರ್ಯೋದಯವನ್ನು ಅರಸುತ್ತ…

Date:

ಅಂಗ್ಕೋರ್ ವಾಟ್ ದೇವಾಲಯದ ಸೂರ್ಯೋದಯವನ್ನು ನೋಡುವುದು ಯಾವುದೇ ಪ್ರವಾಸಿಗನ ಜೀವನದಲ್ಲೇ ಮರೆಯಲಾಗದ ಅನುಭವ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಮುಂಜಾನೆ 4 ಗಂಟೆಗೇ ಎದ್ದು, ಶಾಂತತೆಯಿಂದ ತುಂಬಿರುವ ರಸ್ತೆಗಳ ಮೂಲಕ ದೇವಾಲಯ ಸಂಕೀರ್ಣದವರೆಗೆ ತಲುಪಬೇಕಾಗುತ್ತದೆ. ಇನ್ನೂ ಮುಗಿಲ ಮೇಲೆ ಮೂಡಿಲ್ಲದ ಬೆಳಕನ್ನು ಅರಸುತ್ತ, ತನ್ಮಧ್ಯೆ ಈ ದೇವಾಲಯದ ಭವ್ಯ ರೂಪವು ಮೋಹಕವಾಗಿ, ನಿಧಾನವಾಗಿ ತೆರೆದುಕೊಳ್ಳುತ್ತ ಹೋಗುವುದನ್ನು ನೋಡುವುದೇ ಒಂದು ವಿಹಂಗಮ ಅನುಭವ

ನಾವು ಓದಿದ ಪುಸ್ತಕಗಳು, ನಾವು ಭೇಟಿ ಮಾಡುವ ಪ್ರತಿಯೊಬ್ಬ ವ್ಯಕ್ತಿ, ನಾವು ಕೇಳುವ ಸಂಗೀತ, ನಾವು ನಡೆಯುವ ದಾರಿ, ನಾವು ನೋಡುವ ಸಿನಿಮಾ, ನಾವು ಮಾತನಾಡುವ ವ್ಯಕ್ತಿಗಳು, ನಾವು ನೋಡಿದ ಜಾಗಗಳು, ನಾವು ತಿನ್ನುವ ತಿನಸುಗಳು, ನಾವು ಕಲಿತ ಪಾಠಶಾಲೆ, ನಮ್ಮ ಸುತ್ತ ಮುತ್ತ ಕುಳಿತು, ನಮ್ಮೊಡನೆ ವ್ಯಾಸಂಗ ಮಾಡಿದ ಸಹಪಾಠಿಗಳು, ನಮ್ಮ ಹಳ್ಳಿ, ನಮ್ಮ ಸುತ್ತಮುತ್ತಲಿನ ಪರಿಸರ, ಹೀಗೆ “ನಾವು ಅನ್ನುವುದು” ಈ ಮೇಲಿನ ಎಲ್ಲ ಅಂಶಗಳ ಮೊತ್ತ. ‘We are the sum of our experiences’. ಈ ಮೇಲಿನದರಲ್ಲಿ ಯಾವುದೇ ಕೂಡ, ಯಾವುದೇ ಕಾಲಘಟದಲ್ಲಿ, ಎಲ್ಲಾದರೂ, ಒಂದಿಷ್ಟು ಬದಲಾಗಿದ್ದರೂ, ‘ಇವತ್ತು ಇರುವ ನಾವು, ನಮ್ಮ ಆಲೋಚನೆಗಳು, ನಮ್ಮ ವಿಚಾರ ದೃಷ್ಟಿ’ ಎಲ್ಲವೂ ಬೇರೆಯದ್ದೇ ಆಗಿರುತ್ತಿತ್ತು. ಇದು ಹೇಳಲು ಎಷ್ಟು ಸರಳವೋ, ಊಹಿಸಲು ಅಷ್ಟೇ ಕ್ಲಿಷ್ಟಕರ. ಹಾಗೆಯೇ ಕೆಲವೊಮ್ಮೆ ಒಂದು ಸಣ್ಣ ಘಟನೆ, ಒಂದು ಪುಸ್ತಕ, ಒಂದು ಹಾಡು, ಒಂದು ಸಂಭಾಷಣೆ, ನಮ್ಮ ವಿಚಾರಧಾರೆಯನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯುವುದು ಕೂಡ ಸಹಜ.

ನನ್ನ ಜೀವನದಲ್ಲಿ ಓದು, ಬೇರೆ ಬೇರೆ ವೃತ್ತಿಯ, ಕ್ಷೇತ್ರದ, ವಯಸ್ಸಿನ, ವಿಚಾರಧಾರೆಯ ವ್ಯಕ್ತಿಗಳ ಒಡನಾಟದ ಜೊತೆ ಜೊತೆಗೆ ಬಹು ಆಳವಾದ ಛಾಪನ್ನು, ಅನುಭವವನ್ನು ನೀಡಿದ ವಿಷಯ – ಸುತ್ತಾಟ. ಸಣ್ಣದಿರುವಾಗ, ಬಹಳ ಕುತೂಹಲಕಾರಿ ವಿಷಯವೆಂದರೆ, ಇತಿಹಾಸ ತರಗತಿಯಲ್ಲಿ ಬ್ಯಾಬಿಲೋನಿಯ, ಈಜಿಪ್ಟಿನ ನೈಲ್, ಸಿಂಧೂ ಕಣಿವೆ, ಇಂಕಾ ಈ ನಾಗರಿಕತೆಗಳ ಬಗ್ಗೆ ಪಾಠ ಓದುವಾಗ, ಮನದಲ್ಲಿ ಏಳುತಿದ್ದ ಪ್ರಶ್ನೆ ಅಂದಿನ ಜನರು ಹೇಗಿದ್ದಿರಬಹುದು? ಅದೇ ಈಜಿಪ್ಟಿನಲ್ಲಿ, ಬ್ಯಾಬಿಲೋನಿಯದಲ್ಲಿ , ಇಂಕದಲ್ಲಿ ಇವತ್ತು ಜನ ಹೇಗಿದ್ದಾರೆ? ಅಲ್ಲಿಯೂ ಹೆಣ್ಣು ಮಕ್ಕಳು ನಮ್ಮ ಹಾಗೆಯೇ ಲಂಗ ದಾವಣಿ ಧರಿಸುತ್ತಾರೆಯೇ? ಅಲ್ಲಿನವರು ನಮ್ಮ ಹಾಗೆಯೇ ನೀರು ದೋಸೆ, ಇಡ್ಲಿ ತಿನ್ನುವವರೇ? ಹೀಗೆ ನೂರೊಂದು ಆಲೋಚನೆಗಳು. ಏನೋ ಕುತೂಹಲ. ಆದರೆ ಆ ಕುತೂಹಲದ ಬೆನ್ನು ಹತ್ತುತ್ತ, ಎಲ್ಲಾ ಜಾಗಗಳನ್ನು ಸುತ್ತುವ ಆರ್ಥಿಕ ಪರಿಸ್ಥಿತಿ ಇರಲಿಲ್ಲ. ಆದರೆ, ದೊಡ್ಡವಳಾದ ಮೇಲೆ, ಈ ಎಲ್ಲ ಜಾಗವನ್ನು ನೋಡಬೇಕು, ಅಲ್ಲಿನ ಜನರನ್ನು ನೋಡಬೇಕು ಅಂತ ಆಲೋಚನೆ ಒಂದು ಯಾವಾಗಲೋ ಇತ್ತು.

ಇಂತಹುದೇ ಕುತೂಹಲ ಕ್ಯಾಂಬೋಡಿಯಾದ ಬಗ್ಗೆಯೂ ಇತ್ತು. ಇದಕ್ಕಾಗಿ ಕಾಂಬೋಡಿಯಾ ನೋಡಬೇಕು, ಅಲ್ಲಿನ ಜನರ ಜೀವನಶೈಲಿ, ಭಾಷೆ, ಸಮಾಜ, ಶಿಲ್ಪಕಲೆ, ಸಂಸ್ಕೃತಿ, ಇದನ್ನು ನೋಡುತ್ತಾ, ಪ್ರಪಂಚದಲ್ಲೇ ಬಹು ಪ್ರಸಿದ್ಧಿಯ, ಅಂಗ್ಕೊರ್ ವಾಟಿನ ಸೂರ್ಯೋದಯವನ್ನೂ ನೋಡಬೇಕು ಎನ್ನುತಿತ್ತು ಮನಸ್ಸು. ಭಾರತದಿಂದ ಬಹು ಸರಳವಾಗಿ, ಸುಲಭವಾಗಿ ಇಲ್ಲಿನ ವೀಸಾ ಕೂಡ ಸಿಗುತ್ತೆ, ಮತ್ತೆ, ಹಾಗೆಯೇ ಇತರ ಹೊರದೇಶಗಳಿಗೆ ಹೋಲಿಸಿದರೆ ಇಲ್ಲಿನ ಪ್ರಯಾಣದ ಖರ್ಚು ವೆಚ್ಚಗಳೂ ತುಂಬಾ ಕಡಿಮೆ. ಕ್ಯಾಂಬೋಡಿಯ ಕೂಡ ಪ್ರವಾಸೋದ್ಯಮವನ್ನು ಬಹಳಷ್ಟು ಪ್ರೋತ್ಸಾಹಿಸುವ ದೇಶ. ಆದುದರಿಂದಲೇ ಇಲ್ಲಿ ಪ್ರಯಾಣಿಸುವುದು ತುಂಬಾ ಸುರಕ್ಷಿತ ಕೂಡ.

WhatsApp Image 2025 07 18 at 1.43.44 PM

ಖ್ಮೇರ್ ಭಾಷೆಯಲ್ಲಿ ಅಂಗ್ಕೊರ್ ವಾಟ್ ಎಂದರೆ “ದೇವಾಲಯ ನಗರ” ಅಥವಾ “ದೇವಾಲಯಗಳ ನಗರ”. “ಅಂಗ್ಕೋರ್” ಎಂದರೆ “ನಗರ” ಅಥವಾ “ರಾಜಧಾನಿ” ಎಂದರ್ಥ, ಹಾಗೂ “ವಾಟ್” ಎಂದರೆ “ದೇವಾಲಯ”. ಕಾಂಬೋಡಿಯಾದಲ್ಲಿರುವ ಅಂಕೋರ್ ವಾಟ್, ಆಗ್ನೇಯ ಏಷ್ಯಾದ ಪ್ರಮುಖ ಪುರಾತತ್ತ್ವ ಶಾಸ್ತ್ರದ ಸ್ಥಳಗಳಲ್ಲಿ ಒಂದು ಎಂದೇ ಪರಿಗಣಿಸಲ್ಪಟ್ಟಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಅಂಗ್ಕೋರ್ ವಾಟ್ ವಿಶ್ವದ ಅತಿದೊಡ್ಡ ಧಾರ್ಮಿಕ ಸ್ಮಾರಕವೂ ಕೂಡ. ಮೂಲತಃ 12 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಸಂಕೀರ್ಣವು ಅದರ ಸಂಕೀರ್ಣವಾದ, ವಿಶಿಷ್ಟವಾದ ಬಾಸ್-ರಿಲೀಫ್‌ಗಳು, ಎತ್ತರದ ಗೋಪುರಗಳು ಮತ್ತು ಬೆರಗುಗೊಳಿಸುವ ಸೂರ್ಯೋದಯ ನೋಟಗಳಿಗೆ ಹೆಸರುವಾಸಿಯಾಗಿದೆ. ಅರಣ್ಯ ಪ್ರದೇಶ ಸೇರಿದಂತೆ ಸುಮಾರು 400 ಕಿ.ಮೀ. ಸ್ಕ್ವೇರ್ ರಷ್ಟು ವಿಸ್ತಾರವಾಗಿರುವ ಅಂಕೋರ್ ಪುರಾತತ್ವ ಉದ್ಯಾನವನವು ಕ್ರಿಸ್ತ ಶಕ 9 ರಿಂದ 15 ನೇ ಶತಮಾನದವರೆಗಿನ ಕಾಂಬೋಡಿಯವನ್ನಾಳಿದ ಖ್ಮೇರ್ ಸಾಮ್ರಾಜ್ಯದ ವಿವಿಧ ರಾಜಧಾನಿಗಳ ಭವ್ಯವಾದ ಅವಶೇಷಗಳ ಪ್ರತೀಕವಾಗಿ ನಿಂತಿದೆ. ಬಹು ಪ್ರಸಿದ್ಧ ಅಂಕೋರ್ ವಾಟ್ ದೇವಾಲಯ ಮತ್ತು ಅಂಕೋರ್ ಥಾಮ್‌ನಲ್ಲಿರುವ ಬಯೋನ್ ದೇವಾಲಯವು ಅದರ ಅಸಂಖ್ಯಾತ ಶಿಲ್ಪಕಲೆ ಅಲಂಕಾರಗಳಿಗೆ ಖ್ಯಾತಿ ಪಡೆದಿದೆ. ಈ ಸಾಂಕೇತಿಕ ತಾಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ರಕ್ಷಿಸಲು ಯುನೆಸ್ಕೋ ಹೆರಿಟೇಜ್ ಸೆಂಟರ್ ವ್ಯಾಪಕವಾದ ಕಾರ್ಯಕ್ರಮವನ್ನು ಸ್ಥಾಪಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಂಗ್ಕೋರ್ ವಾಟಿನ ಇನ್ನೊಂದು ಬಹು ಪ್ರಸಿದ್ಧ ಪ್ರವಾಸಿ ಆಕರ್ಷಣೆ – ಅಂಗ್ಕೊರ್ ವಾಟ್ ಅರ್ಧ ಮ್ಯಾರಾಥಾನ್- Angkor Wat Half Marathon (21 ಕಿಲೋಮೀಟರು, 10 ಕಿಲೋ ಮೀಟರ್ ಮತ್ತು 5 ಕಿಲೋಮೀಟರು). ಪ್ರತೀ ವರುಷ ಡಿಸೆಂಬರ್ ತಿಂಗಳಲ್ಲಿ ನಡೆಯುವ ಈ ಓಟ ಅಂತರರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಲ್ಪಟ್ಟಿದೆ. ಅಂಕೋರ್ ವಾಟ್ ಇಂಟರ್ನ್ಯಾಷನಲ್ ಹಾಫ್ ಮ್ಯಾರಥಾನ್ ಎನ್‌ಜಿಒ (Angkor Wat International Half Marathon NGO) 1996 ರಲ್ಲಿ ಪ್ರಾರಂಭಿಸಿದ ಈ ಓಟ, ಪ್ರಪಂಚದೆಲ್ಲೆಡೆಯಿಂದ ಓಟಗಾರರನ್ನು ಕರೆ ತರುತ್ತದೆ.

ಈ ಅರ್ಧ ಮ್ಯಾರಥಾನ್ ಕಾಂಬೋಡಿಯಾದಲ್ಲಿ ಸಿಬ್ಬಂದಿ ವಿರೋಧಿ ಗಣಿಗಳಿಂದ (ಸಿಬ್ಬಂದಿ ವಿರೋಧಿ ಗಣಿ ಎಂದರೆ ವ್ಯಕ್ತಿಯ ಉಪಸ್ಥಿತಿ, ಸಾಮೀಪ್ಯ ಅಥವಾ ಸಂಪರ್ಕದಿಂದ ಅವರನ್ನು ನಿಷ್ಕ್ರಿಯಗೊಳಿಸುವ, ಗಾಯಗೊಳಿಸುವ ಅಥವಾ ಕೊಲ್ಲುವ ಉದ್ದೇಶದಿಂದ ಸ್ಫೋಟಿಸಲು ವಿನ್ಯಾಸಗೊಳಿಸಲಾದ ಒಂದು ರೀತಿಯ ನೆಲಬಾಂಬ್. ಈ ಗಣಿಗಳು ವಾಹನಗಳನ್ನು ಹಾನಿಗೊಳಿಸಲು ಅಥವಾ ನಾಶಮಾಡಲು ವಿನ್ಯಾಸಗೊಳಿಸಲಾದ ಟ್ಯಾಂಕ್ ವಿರೋಧಿ ಗಣಿಗಳಿಗಿಂತ ಭಿನ್ನವಾಗಿವೆ. ಇದು ತುಂಬಾ ಅಪಾಯಕಾರಿ. ಕ್ಯಾಂಬೋಡಿಯಾ ಸರಕಾರ ಇದರ ಬಗ್ಗೆ ಕ್ರಮ ಕೈಗೊಂಡಿದ್ದರೂ, ಪ್ರತೀ ವರ್ಷ ಸರಿ ಸುಮಾರು 20 ಸಾವು ಹಾಗೂ ಗಾಯಗೊಂಡವರ ಸಂಖ್ಯೆ 50 (2016 ರ ಅಂಕಿ ಅಂಶಗಳ ಪ್ರಕಾರ)). ಇಂತಹ ಗಣಿಗಾರಿಕೆಯಿಂದ ಬಾದೆಗೊಳಗಾದ ಸಂತ್ರಸ್ತರಿಗೆ ಪರಿಹಾರವನ್ನು ನೀಡುವ ಸಲುವಾಗಿ ಆರಂಭವಾದ ಮ್ಯಾರಥಾನ್. ಮ್ಯಾರಥಾನ್ ಇಂದ ಹಾಗೂ ಅದರ ಸ್ಪಾನ್ಸರ್ ಗಳಿಂದ ಬರುವ ಹಣವನ್ನು ಈ ಸಂಸ್ತ್ರಸ್ತರ ನೆರವಿಗೆ ನೀಡಲಾಗುತ್ತದೆ. ಹಾಗೆಯೇ, ಈ ಓಟ ಪ್ರವಾಸೋದ್ಯಮವನ್ನು ಕೂಡ ಪ್ರೋತ್ಸಾಹಿಸುತ್ತದೆ. ಅನೇಕ ಜಪಾನಿನ ಓಟದ ಉತ್ಸಾಹಿಗಳ ಬೆಂಬಲದೊಂದಿಗೆ, ಅನೇಕ ಭೂಕುಸಿತ ಬಲಿಪಶುಗಳು ಭಾಗವಹಿಸುವ ಈ ಮಹಾನ್ ಅಂತರರಾಷ್ಟ್ರೀಯ ಓಟವು ವಿಶ್ವ ಪರಂಪರೆಯ ತಾಣವಾದ ಅಂಕೋರ್ ವಾಟ್‌ನ ಅವಶೇಷಗಳ ಒಳಗೆ ನಡೆಯುತ್ತದೆ ಮತ್ತು ಬಾಧಿತರಿಗೆ ಪ್ರೋತ್ಸಾಹ ಮತ್ತು ಭರವಸೆಯನ್ನು ನೀಡಲು ಹಾಗೂ “ಸಿಬ್ಬಂದಿ ವಿರೋಧಿ ಗಣಿಗಳ ಬಳಕೆಯ ಮೇಲಿನ ನಿಷೇಧ” ಕ್ಕೆ ಬೆಂಬಲ ನೀಡುವಂತೆ ಜಗತ್ತಿಗೆ ಮನವಿ ಮಾಡಲು ವಾರ್ಷಿಕವಾಗಿ ನಡೆಸಲಾಗುತ್ತಿದೆ. ಸಿಬ್ಬಂದಿ ವಿರೋಧಿ ಗಣಿಗಳ ತಯಾರಿಕೆ ಮತ್ತು ಅಮಾನವೀಯ ಬಳಕೆಯ ಮೇಲಿನ ನಿಷೇಧವನ್ನು ಬೆಂಬಲಿಸಲು ಪ್ರಪಂಚದಾದ್ಯಂತದಿಂದ ಓಟಗಾರರು ಇದರಲ್ಲಿ ಭಾಗವಹಿಸುತ್ತಾರೆ. ಪ್ರವೇಶ ಶುಲ್ಕಗಳು ಮತ್ತು ಹೆಚ್ಚುವರಿ ಆರ್ಥಿಕ ಬೆಂಬಲವು ಪ್ರಾಸ್ಥೆಟಿಕ್ ಅಂಗಗಳನ್ನು ಒದಗಿಸಲು, ಸಾಮಾಜಿಕ ಮರುಸಂಘಟನೆ ಕಾರ್ಯಕ್ರಮಗಳನ್ನು ಒದಗಿಸಲು ಮತ್ತು ಕಾಂಬೋಡಿಯಾದಲ್ಲಿ ಯಾವುದೇ ಗಂಭೀರ ಹೊಸ ರೋಗಗಳ ಶಿಕ್ಷಣ ಮತ್ತು ತಡೆಗಟ್ಟುವಿಕೆಯಂತಹ ಇತರ ಸಂಬಂಧಿತ ಮತ್ತು ಅಗತ್ಯವಿರುವ ಕಾರ್ಯಕ್ರಮಗಳನ್ನು ಬೆಂಬಲಿಸಲು ಉಪಯೋಗಿಸಲಾಗುತ್ತದೆ. ಹಾಗೇನೇ ಕಾಂಬೋಡಿಯಾದಾದ್ಯಂತ ಅಗತ್ಯವಿರುವ ಅನೇಕ ಸಮುದಾಯಗಳಿಗೆ ಇದು ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.

WhatsApp Image 2025 07 18 at 1.42.48 PM

ಹಾಗೆಯೇ, ನಿಮಗೆ ಓಡಲು ಇಷ್ಟವಿಲ್ಲ, ಅಥವಾ ಸಾಧ್ಯವಿಲ್ಲದಿದ್ದರೆ, 5 ಕಿಲೋಮೀಟರು ನಡೆಯುವ ವಿಭಾಗ ಕೂಡ ಇದೆ. ಇದಲ್ಲದೆ, ಇಲ್ಲಿ ರಿಕ್ಷಾಗಳು (ಟುಕ್ ಟುಕ್ ಎಂದು ಕರೆಯುತ್ತಾರೆ ) ಹೇರಳವಾಗಿ ಸಿಗುತ್ತವೆ, ಹಾಗಾಗಿ, ಇಲ್ಲಿನ ಈ ವಿಶಾಲವಾದ ಸಂಕೀರ್ಣವನ್ನು, ಅಮೋಘವಾದ ಶಿಲ್ಪಕಲೆ, ಪುರಾತನ ಕೆತ್ತನೆ, ಬೌದ್ಧ ವಿಗ್ರಹಗಳನ್ನು ನೋಡುವುದಕ್ಕೆ ಯಾವುದೇ ಅಡ್ಡಿಯಿಲ್ಲ.

ಈ ಓಟ ಒಂದು ಶಿಲ್ಪಕಲಾ ರಸದೌತಣ ಎಂದರೆ ತಪ್ಪಾಗಲಾರದು. ಇಡೀ ಅಂಗ್ಕೋರ್ ವಾಟಿನ 400 ಕಿಲೋಮೀಟರು ಸ್ಕ್ವೇರ್ ದೂರಕ್ಕೂ ಕಾಣಸಿಗುವ ಪುರಾತನ ಶಿಲ್ಪಗಳು, ಬುದ್ಧನ ವಿಗ್ರಹ, ಕೆತ್ತನೆಗಳು, ಕಪ್ಪು ಕಲ್ಲಿನಲ್ಲಿ ಕೆತ್ತಲ್ಪಟ್ಟ ಶಿಲ್ಪಿ ವಿಗ್ರಹಗಳು, ಇಡೀ ಪರಿಸರವೇ ಶಿಲ್ಪಕಲಾ ತಾಣವೆಂದೆನ್ನಿಸುತ್ತದೆ. ಈ ಓಟವು ಅಂಗ್ಕೋರ್ ಥಾಮ್‌ನ ದ್ವಾರ, ಬಯೋನ್, ಎಲಿಫೆಂಟ್ ಟೆರೇಸ್ , ಟ್ಯಾಫ್ರೋಮ್ ಹೀಗೆ ಎಲ್ಲವನ್ನೂ ನೋಡುತ್ತಾ, ಇದರ ಸುತ್ತಮುತ್ತದ ಪರಿಸರವನ್ನು ಸವಿಯುತ್ತ ಅರ್ಧ ಮ್ಯಾರಥಾನ್ ಮುಗಿಸಿದ್ದೇ ತಿಳಿಯುವುದಿಲ್ಲ.

ಒಂದು ಮುಂಜಾನೆಯನ್ನು ವಿಶ್ವಪ್ರಸಿದ್ಧ ಅಂಗ್ಕೋರ್ ವಾಟ್‌ನ ಸೂರ್ಯೋದಯಕ್ಕಾಗಿ ತಪ್ಪದೇ ಮೀಸಲಿಡಬೇಕು. ಶತ ಶತಮಾನಗಳ ಹಿಂದೆ ಕೆತ್ತಲ್ಪಟ್ಟ ಈ ಅಮೋಘ ದೇವಾಲಯದ ಶಿಲ್ಪಕಲಾಕೃತಿ, ಅದರ ಹಿಂದಿನಿಂದ ಮೆಲ್ಲಮೆಲ್ಲನೆ ಮೂಡುವ ಸೂರ್ಯ, ತನ್ನ ಕೆಂಪನ್ನು ಹಬ್ಬುತ್ತಾ ಮೇಲೇಳುವ ಪರಿ, ಮುಂದೆ ಹರಡಿರುವ ತಂಪಾದ ಕೊಳದಲ್ಲಿ ಕಾಣುವ ದೇವಾಲಯದ ಪ್ರತಿಬಿಂಬ, ನಸುಕೆಂಪು ಬೆಳಕಿನಲ್ಲಿ ಹೊಳೆಯುವ ಗೋಪುರಗಳು, ಸುತ್ತಲಿನ ಹಚ್ಚ ಹಸಿರು – all combine to create a breathtaking spectacle. ಅಂಗ್ಕೋರ್ ವಾಟ್ ದೇವಾಲಯದ ಸೂರ್ಯೋದಯವನ್ನು ನೋಡುವುದು ಯಾವುದೇ ಪ್ರವಾಸಿಗನ ಜೀವನದಲ್ಲೇ ಮರೆಯಲಾಗದ ಅನುಭವ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಮುಂಜಾನೆ ೪ ಗಂಟೆಗೇ ಎದ್ದು, ಶಾಂತತೆಯಿಂದ ತುಂಬಿರುವ ರಸ್ತೆಗಳ ಮೂಲಕ ದೇವಾಲಯ ಸಂಕೀರ್ಣದವರೆಗೆ ತಲುಪಬೇಕಾಗುತ್ತದೆ. ಇನ್ನೂ ಮುಗಿಲ ಮೇಲೆ ಮೂಡಿಲ್ಲದ ಬೆಳಕನ್ನು ಅರಸುತ್ತ, ತನ್ಮಧ್ಯೆ ಈ ದೇವಾಲಯದ ಭವ್ಯ ರೂಪವು ಮೋಹಕವಾಗಿ, ನಿಧಾನವಾಗಿ ತೆರೆದುಕೊಳ್ಳುತ್ತ ಹೋಗುವುದನ್ನು ನೋಡುವುದೇ ಒಂದು ವಿಹಂಗಮ ಅನುಭವ.

ಶತಮಾನಗಳ ಹಿಂದೆಯೇ ಕಪ್ಪು ಕಲ್ಲಿನಲ್ಲಿ ಕೆತ್ತಲ್ಪಟ್ಟ ಈ ದೇವಾಲಯ, ತನ್ನ ಶಿಲ್ಪವೈಭವದಿಂದ ಈಗಲೂ ಜೀವಂತವಾಗಿದೆ ಎಂಬ ಭಾವನೆ ಉಂಟುಮಾಡುತ್ತದೆ. ಹಿಂದಿನಿಂದ ಮೋಡದ ಅಂಚಿನಲ್ಲಿ ಮೂಡುವ ಸೂರ್ಯ, ತನ್ನ ಮೃದುವಾದ ಕಿರಣಗಳನ್ನು ದೇವಾಲಯದ ಮೇಲ್ಭಾಗಕ್ಕೆ ಹರಡುತ್ತಾ, ದೇವಾಲಯದ ಗೋಪುರಗಳನ್ನು ಹೊಳೆಯುವಂತೆ ಮಾಡುತ್ತದೆ. ಆ ಕೆಂಪು ಹೊಳಪು, ದೇವಾಲಯ ಸಂಕೀರ್ಣದ ಮುಂಭಾಗದಲ್ಲಿರುವ ಕೊಳದ ಮೇಲೆ ಹರಡುತ್ತಾ, ದೇವಾಲಯದ ಮುಂಭಾಗದಲ್ಲಿ ಹಸಿರಾಗಿ ಹರಡಿರುವ ಹಚ್ಚ ಹಸುರಿನ ಹುಲ್ಲಿನ ವಿಶಾಲವಾದ ಅಂಗಳ, ಅದರ ನಡುವೆ ತಂಪಾಗಿ ಹರಡಿರುವ ಕೊಳ ಮತ್ತು ಅದರಲ್ಲಿ ಸ್ಪಷ್ಟವಾಗಿ ಕಾಣುವ ದೇವಾಲಯದ ಪ್ರತಿಬಿಂಬ – ಈ ಎಲ್ಲವನ್ನೂ ಸೂರ್ಯನ ನಸುಕಿನ ಬೆಳಕು ಕೊಂಚ ಕೊಂಚನೆ ಸ್ಪರ್ಶಿಸುತ್ತಾ ಬರುತ್ತಿದ್ದಂತೆ, ಹಚ್ಚ ಹಸಿರಿನ ಹುಲ್ಲುಗಾವಲು, ಕೊಳದ ತೀರದಲ್ಲಿ ನಿಂತು ಈ ಕ್ಷಣವನ್ನು ಕಣ್ಣು ತುಂಬಿಕೊಳ್ಳುವ ಪ್ರವಾಸಿಗರು, ಹಕ್ಕಿಗಳ ಚಿಲಿಪಿಲಿ ಧ್ವನಿ, ಕ್ಯಾಮೆರಾದ ಕ್ಲಿಕ್ಕು, ಆಕಾಶದಲ್ಲಿ ನಿಧಾನವಾಗಿ ಬಿಳುಪಾಗುತ್ತಿರುವ ತೆಳು ಮೋಡಗಳು, all add layers of silence, movement, and memory. ಇವೆಲ್ಲವೂ ಈ ಸ್ಥಳವನ್ನು ಒಂದು ಫೋಟೋಗ್ರಾಫಿಕ್ ನೆನಪನ್ನಾಗಿ ಮಾರ್ಪಡಿಸುತ್ತವೆ. ಈ ಕ್ಷಣದಲ್ಲಿ, ಕಾಲ ನಿಂತಿರುವಂತೆ ಅನಿಸುತ್ತದೆ. ಇಡೀ ದೃಶ್ಯವು ಶಾಂತತೆಯ ಪ್ರತೀಕವಾಗಿ ಭಾಸವಾಗುತ್ತದೆ. ಇದು ಕೇವಲ ಒಂದು ದೃಶ್ಯವಲ್ಲ, ಇದು ನೋಡುಗನ ಮನಸ್ಸನ್ನು ಪ್ರಫುಲ್ಲವಾಗಿಸುವ, ಆಂತರಿಕ ಶಾಂತಿಯನ್ನು ನೀಡುವ ಅನುಭವ.

WhatsApp Image 2025 07 18 at 1.36.02 PM

ಶತಮಾನಗಳ ಹಿಂದೆಯೇ ಕಪ್ಪು ಕಲ್ಲಿನಲ್ಲಿ ಕೆತ್ತಲ್ಪಟ್ಟ ಈ ದೇವಾಲಯ, ತನ್ನ ಶಿಲ್ಪ ವೈಭವದಿಂದ ಇಂದಿಗೂ ಜೀವಂತವಾಗಿ ನಮ್ಮೊಂದಿಗೆ ಮಾತನಾಡುತ್ತಲೇ ಇರುತ್ತದೆ. ಹಿಂದಿನಿಂದ ಕಿರಣ ಹರಡುತ್ತಿರುವ ಸೂರ್ಯ, ದೇವಾಲಯದ ಗೋಪುರಗಳ ಮೇಲೆ ತನ್ನ ಕೆಂಪು ಹೊಳಪನ್ನು ಎರೆಯುತ್ತಾ, ಕೊಳದ ನೀರಿನ ಮೇಲೆ ಪ್ರತಿಬಿಂಬಿಸುತ್ತಾ, ನಗು ಹಬ್ಬಿದಂತೆ ದೇವಾಲಯದ ಮುಖವನ್ನು ಆರಾಧ್ಯವಾಗಿ ತೋರಿಸುತ್ತದೆ. ಇಲ್ಲಿ ಕಾಣುವುದು ಕೇವಲ ಪ್ರಕೃತಿಯ ನೋಟವಲ್ಲ, ಅದು ಭೂತದಲ್ಲಿ ಜೀವಿಸಿದ ಒಂದು ಇಡೀ ಸಂಸ್ಕೃತಿಯ ಪುನರುದಯವನ್ನೂ ಪ್ರತಿಬಿಂಬಿಸುತ್ತಿತ್ತು.

ಅಂಗ್ಕೋರ್ ವಾಟ್ ಪ್ರವಾಸವೇ ಒಂದು ಪಾಠ. ಇತಿಹಾಸ, ಶಿಲ್ಪಕಲೆ, ಶ್ರದ್ಧೆ ಮತ್ತು ಈ ಕೆತ್ತನೆಯ ಹಿಂದಿದ್ದ ನೂರಾರು ಶಿಲ್ಪಿಗಳ ಜೀವಂತ ಸಂವಹನ. ನಾನು ಆ ಅಪ್ರತಿಮ ದೇವಾಲಯದ ಮುಂಭಾಗ ನಿಂತು ಸೂರ್ಯೋದಯ ವೀಕ್ಷಿಸಿದ ಕ್ಷಣ, ಕೇವಲ ದೃಶ್ಯಾನಂದವಲ್ಲ, ಅದು ಒಂದು ಆಂತರಿಕ ಶಾಂತತೆಯ ಅನುಭವವಾಗಿತ್ತು. ಹಾಗೆಯೇ ಶತಮಾನಗಳ ಹಿಂದೆ ಅಜರಾಮರ ಆಗಬೇಕೆಂದು ಕನಸು ಹೊತ್ತುಕೊಂಡು ಅಂದಿನ ರಾಜರು ಕಟ್ಟಿಸಿದ ಈ ಸ್ಮಾರಕಗಳು ಬರಿಯ ಅವಶೇಷಗಳಾಗಿ ನಿಂತಿರುವುದು ನೋಡಿದರೆ, ಯಾವುದೂ ಈ ಲೋಕದಲ್ಲಿ ಸ್ಥಿರವಲ್ಲ ಅನ್ನುವ ಭಾವನೆ ಕೂಡ ಬಾರದೆ ಇರದು.

ಆ ಶಿಲ್ಪಕಲೆಯ ಭವ್ಯತೆಯ ಮಧ್ಯೆ ನಾನು ಓಡಿದ ಹಾಫ್ ಮ್ಯಾರಥಾನ್, ಆ ಓಟದ ಪ್ರತಿ ಹೆಜ್ಜೆಯೂ ಆ ನೆಲದ ಗಂಭೀರತೆಗೆ, ಸರಳತೆಗೆ, ಸಾಮಾನ್ಯರ ಸಮರ್ಪಿತ ಜೀವನಕ್ಕೆ ಸಾಕ್ಷಿಯಾಗಿತ್ತು. ನನ್ನ ದೇಹ ಓಡುತ್ತಿದ್ದರೂ, ಮನಸ್ಸು ಹಿಂದಿನ ಶತಮಾನಗಳಲ್ಲಿ ತಿರುಗಾಡುತ್ತಿತ್ತು. ಓಟ ನನ್ನನ್ನು ದೈಹಿಕವಾಗಿ ಬಳಿಸಿದರೂ, ಮನಸ್ಸನ್ನು ಆಲೋಚನೆಗಳ ಅಂಗಳಕ್ಕೆ ಕೊಂಡೊಯ್ದಿತ್ತು . ಅಂಗ್ಕೋರ್ ವಾಟಿಗೆ ಓರ್ವ ಪ್ರವಾಸಿಗಳಾಗಿ ಹೋಗಿದ್ದರೂ, ಓರ್ವ ಓದುಗ, ಓಟಗಾರ, ಕಲೆಗಾಗಿ ಹಂಬಲಿಸುವ ನನ್ನಲ್ಲಿ ಅಲ್ಲಿ ಸಾಗಿದ ಪ್ರತಿಯೊಂದು ಹಾದಿ, ಕಂಡ ಪ್ರತಿಯೊಂದು ಶಿಲ್ಪ, ಆ ಹಳೆಯ ಕಲ್ಲುಗಳಲ್ಲಿ ಜೀರ್ಣಿಸಿದ ಪ್ರತಿಯೊಂದು ಕತೆ, ಹೊಸ ಚಿಂತನೆಯನ್ನು ಮೂಡಿಸಿದ್ದವು. ಅಂಗ್ಕೋರ್ ವಾಟ್ ನನ್ನಲ್ಲಿ ಕೇವಲ ಪಾರಂಪರ್ಯದ ಪ್ರಭಾವ, ಮಾನವ ಸಾಮರ್ಥ್ಯದ ಪರಾಕಾಷ್ಠೆ ಮತ್ತು ನಿಸ್ಸೀಮ ಶ್ರದ್ಧೆಯ ದೀಪವನ್ನಷ್ಟೇ ಅಲ್ಲ, ಬದಲಿಗೆ ಇದರ ಹಿಂದೆ ಶ್ರಮ ಪಟ್ಟ ಅಸಂಖ್ಯಾತ ಜೀವಗಳು, ಅವರ ಹೋರಾಟದ ಬದುಕಿನ ಬಗ್ಗೆ ಕೂಡ ಆಲೋಚಿಸುವಂತೆ ಮಾಡಿತ್ತು.

ಪ್ರತಿಯೊಂದು ಶಿಲಾಪಟಿಕೆಯಲ್ಲಿ ಮೂಡಿರುವ ತಪಸ್ಸು, ಶ್ರದ್ಧೆ, ಶ್ರಮ, ಇವೆಲ್ಲವೂ ಕಾಲವನ್ನು ಮೀರಿ ಮಾತನಾಡುತ್ತವೆ. ಶತ ಶತಮಾನಗಳ ಹಿಂದಿನ ಮನುಷ್ಯರು ನಡೆಸಿದ ಸಂಸ್ಕೃತಿ, ಕಟ್ಟಡಗಳು, ದೇವತೆಗಳ ಕಲ್ಪನೆ, all represent a civilisation that once dreamed grandly and lived with purpose. ಹಾಗೆಯೇ ಇಂದು ಅದೊಂದು ಅವಶೇಷ ಮಾತ್ರ. ಅದರ ಬದಲಿಗೆ ಅಂದಿನ ರಾಜರುಗಳು, ಜನ ಪೂರಕ, ಸಾಮಾನ್ಯ ವರ್ಗಕ್ಕೆ ಬೇಕಾದ ಸವಲತ್ತು (ಕುಡಿಯುವ ನೀರು, ಉಳಿದು ಕೊಳ್ಳಲು ಮನೆ, ನಡೆದಾಡುವ ದಾರಿ, ಶಿಕ್ಷಣ, ಆರೋಗ್ಯ) ಇದರ ಬಗ್ಗೆ ಒತ್ತು ಕೊಟ್ಟಿದ್ದರೆ , ಬಹುಶ ಬೇರೆಯೇ ಒಂದು ಪ್ರಪಂಚವನ್ನು ನೋಡುತ್ತಿದ್ದೇವೆಯೋ ಏನೋ ಅನ್ನುವ ಆಲೋಚನೆಯೂ ಬಂದಿತ್ತು. ಆದರೆ ಸಾಮಾನ್ಯ ಜನರಿಂದ ಕೆತ್ತಲ್ಪಟ್ಟ ಇತಿಹಾಸ ಸಾಮಾನ್ಯ ಜನರಿಗೆ ಏನನ್ನೂ ನೀಡಿರಲಿಲ್ಲ ಎನ್ನುವುದೂ ಕೂಡ ಆ ಶತಮಾನದ ಸಾರ್ವಕಾಲಿಕ ಸತ್ಯ.

ಪ್ರಯಾಣದ ಆರಂಭದಲ್ಲಿ ನಾನು ಒಂದು ಹೊಸ ದೇಶವನ್ನು ಅರಿಯಲೆಂದು ಬಂದಿದ್ದೆ. ಆದರೆ ಹಿಂದೆ ಹೊರಟಾಗ ನನ್ನ ಜೊತೆಗೆ ಇಲ್ಲಿನ ಮಣ್ಣು, ಜನ, ಜನರ ತ್ಯಾಗ, ಹೋರಾಟ, ಶಿಲ್ಪ, ಶ್ರದ್ಧೆ – all reshaped my thoughts quietly.

ಕಾಂಬೋಡಿಯಾದ ಇತಿಹಾಸದ ಘಾವಗಳು, ಅದರ ಮೇಲೆ ಕಾಲಮಿತಿ ಮೀರಿ ಉಳಿದಿರುವ ಸೌಂದರ್ಯ, ಮತ್ತು ಆ ಸೌಂದರ್ಯವನ್ನು ಪ್ರತಿದಿನವೂ ಹೊಸದಾಗಿ ಅರಸುತ್ತಿರುವ ಜನರು, all stand as testimony that while time can destroy kingdoms, it cannot erase memory. ಹಾಗೆಯೇ ಇತಿಹಾಸ ಬರಿಯ ರಾಜರ ಕಥೆಯಾಗಿ ಉಳಿಯದೆ ಸಾಮಾನ್ಯರ ಕಥೆಯಾಗುವುದು ಯಾವಾಗ ಎನ್ನುವ ಪ್ರಶ್ನೆಯೂ ನನ್ನನ್ನು ಕಾಡಿತ್ತು.

WhatsApp Image 2025 07 18 at 1.51.13 PM
WhatsApp Image 2025 11 17 at 5.26.24 PM
ಸುಚಿತ್ರಾ ಎಸ್‌ ಎ
+ posts

ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಸುಚಿತ್ರಾ ಎಸ್‌ ಎ
ಸುಚಿತ್ರಾ ಎಸ್‌ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...