ವಚನಯಾನ | ಬಸವಣ್ಣನವರು ದುಷ್ಟರನ್ನು ʼಎನ್ನವರುʼ ಎನ್ನಲಿಲ್ಲ

Date:

ಬಸವ ಸಂಸ್ಕೃತಿಯನ್ನು ದ್ವೇಷಿಸುವವರು ಬಸವಣ್ಣನವರ ವಚನಗಳನ್ನು ಅಪವಾಖ್ಯಾನಿಸುವ ನೀಚ ಕೃತ್ಯದಲ್ಲಿ ತೊಡಗಿದ್ದಾರೆ. ಬಸವಣ್ಣನವರ ‘ಇವನಾರವ, ಇವನಾರವ, ಎಂದೆನಿಸದಿರಯ್ಯಾ, ಇವ ನಮ್ಮವ ಎಂದೆನಿಸಯ್ಯಾ…’ ಎನ್ನುವ ವಚನವನ್ನು ಉಲ್ಲೇಖಿಸಿ ಬಸವಣ್ಣ ಎಲ್ಲರನ್ನೂ ನಮ್ಮವರೆಂದರೆ ಬಸವಾನುಯಾಯಿಗಳು ಬ್ರಾಹ್ಮಣವಾದಿಗಳನ್ನು ಟೀಕಿಸುತ್ತಾರೆ ಎಂದು ಕೆಲವರು ಕನವರಿಸುತ್ತಾರೆ

ಬಸವಣ್ಣನವರ ಕೆಲವು ವಚನಗಳು ಅಂದಿನ ಕಾಲಘಟ್ಟದ ಸಾಂದರ್ಭಿಕ ಅಭಿವ್ಯಕ್ತಿಗಳು. ಆದರೆ, ಇಂದು ಅವರ ವಚನಗಳನ್ನು ವೈದಿಕ ಹಾಗೂ ವೀರಶೈವ ವಿದ್ವಾಂಸರು (ವಿದ್ವಂಸಕರು) ತಮ್ಮ ಮೂಗಿನ ನೇರಕ್ಕೆ ಅರ್ಥೈಸುವ ದುಸ್ಸಾಹಸ ಮಾಡುತ್ತಿದ್ದಾರೆ. ಸರಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ನಂತರ ಸನಾತನಿ ಸಂತತಿ ಹಾಗೂ ವೀರಶೈವ ಆರಾಧ್ಯ ಪುರೋಹಿತರು ಮತಿಭ್ರಾಂತಿಗೆ ತುತ್ತಾದವರಂತೆ ವರ್ತಿಸುತ್ತಿದ್ದಾರೆ. ಬಸವಣ್ಣನವರು ಪ್ರತಿಪಾದಿಸಿದ ಸನಾತನಕ್ಕೆ ಪ್ರತಿದ್ವಂದ್ವಿಯಾಗಿರುವ ಅವೈದಿಕ ಸಂಸ್ಕೃತಿಯನ್ನು ಜನಮನದಲ್ಲಿ ಸಾರುವ ಉದ್ದೇಶದಿಂದ ಲಿಂಗಾಯತ ಮಠಾಧೀಶರ ಒಕ್ಕೂಟ ಸತತ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಬಸವ ಸಾಂಸ್ಕೃತಿಕ ಅಭಿಯಾನ 2025 ಅಕ್ಟೋಬರ್ 5 ರಂದು ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅರ್ಥಪೂರ್ಣವಾಗಿ ಸಮಾರೋಪಗೊಂಡಿತು. ನಲವತ್ತರಿಂದ ಐವತ್ತು ಸಾವಿರ ಬಸವ ಪ್ರಜ್ಞೆಯುಳ್ಳ ಅನುಯಾಯಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಸರ್ಕಾರದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮಠಾಧೀಶರು ಸತ್ಕರಿಸಿದರು. ಇದು ಸಾಂಪ್ರದಾಯವಾದಿ, ಬಸವದ್ವೇಷಿ ಬ್ರಾಹ್ಮಣವಾದಿಗಳು ಹಾಗೂ ವೀರಶೈವ ಪುರೋಹಿತ ಜಾತಿವಾದಿ ಮನಸ್ಥಿತಿಯನ್ನು ಕಸಿವಿಸಿಗೊಳಿಸಿತು. ಅಭಿಯಾನದ ಆರಂಭದಲ್ಲೆ ದಿಂಗಾಲೇಶ ಎನ್ನುವ ಜಾತಿವಾದಿಯ ನಿದ್ರೆ ಕಳೆದ ಕಾರಣ ಆತ ಹುಬ್ಬಳ್ಳಿಯಲ್ಲಿ ಈರಶವ-ಲಿಂಗಾಯತ ಏಕತಾ ಸಮೋಸಾ ಮಾಡಿ ತಿಂದು ತೇಗಿದ್ದು ನಾಡಿಗೆಲ್ಲ ತಿಳಿಯಿತು.

ಲಿಂಗಾಯತ ಧರ್ಮದ ನಿರಾಭಾರಿ ನಿರಂಜನ ವಿರಕ್ತ ಜಂಗಮ ಪೀಠಸ್ಥರು ತಮ್ಮ ಧರ್ಮ ತತ್ವ ಹಾಗೂ ಬಸವ ಸಂಸ್ಕೃತಿಯನ್ನು ಪ್ರಚಾರ ಮಾಡಿದರೆ ಸಾಂಪ್ರದಾಯವಾದಿ ಬ್ರಾಹ್ಮಣರು ಮತ್ತು ಅವರ ಮಾನಸಿಕ ಗುಲಾಮರು ಹಾಗೂ ಈರಶವ ಜಾತಿ ಜಂಗಮರಿಗೆ ಯಾಕೆ ಉರಿಯುತ್ತದೆ ಎನ್ನುವುದು ಬಿಡಿಸಿ ಹೇಳುವ ಅಗತ್ಯವಿಲ್ಲ. ಅಭಿಯಾನದ ಅಭೂತಪೂರ್ವ ಯಶಸ್ಸಿನಿಂದ ಮಾನಸಿಕ ರೋಗಿಯಂತಿರುವ ಕನೇರಿಯ ಕಾಡಸಿದ್ಧ ಎನ್ನುವ ಸಂಘ ಪರಿವಾರದ ಏಜೆಂಟ್ ಒಬ್ಬ ಲಿಂಗಾಯತ ಮಠಾಧೀಶರ ಕುರಿತು ಅನಾಗರಿಕವಾಗಿ ಹಲುಬಿದ್ದು ನಾಡೇ ನೋಡಿ ಅಸಹ್ಯಪಟ್ಟಿದೆ. ಆದರೆ, ತಮ್ಮದು ಉತ್ಕೃಷ್ಟ ಸಂಸ್ಕೃತಿ ಎಂದು ಬೀಗುವ ನಿಯೋಗ ಪದ್ಧತಿಯ ಉತ್ಪನ್ನಗಳು ಮಾತ್ರ ಕಾಡಸಿದ್ಧನನ್ನು ಸಮರ್ಥಿಸಿವೆ. ಹಾಗೆ ಮಾತನಾಡಿರುವುದು ಕನೇರಿ ಕಾಡಸಿದ್ಧನ ವೈಯಕ್ತಿಕ ಸಂಸ್ಕಾರವಾಗಿರದೆ, ಅದು ಬ್ರಾಹ್ಮಣವಾದಿಗಳ ಮೂಲ ಸಂಸ್ಕಾರವಾಗಿದೆ. ಯಾವಾಗಲೂ ತಮ್ಮದು ಉನ್ನತ ಆಚಾರ, ವಿಚಾರ, ಸಂಸ್ಕಾರವುಳ್ಳ ಮೌಲ್ಯಯುತ ಧರ್ಮ ಎಂದು ಹೇಳುವ ಬ್ರಾಹ್ಮಣವಾದಿಗಳು ಮತ್ತು ಅವರ ಗುಲಾಮಗಿರಿ ಮಾಡುವ ಕಾವಿಧಾರಿಗಳು ಕಾಡಸಿದ್ಧನಂತೆ ನೀಚ ಸಂಸ್ಕಾರದ ಪ್ರದರ್ಶಿಸುತ್ತಾರೆ. ಮಾತೆತ್ತಿದರೆ ‘ಯತ್ರ ನಾರ್ಯಂತು ಪೂಜತೆ..’, ಮಾತೃ ದೇವೋಭವಃ ಮುಂತಾಗಿ ಉಚ್ಛರಿಸುವ ಬ್ರಾಹ್ಮಣವಾದಿಗಳು ನೂರಾರು ಲಿಂಗಾಯತ ಮಠಾಧೀಶರ ತಾಯಂದಿರನ್ನು ಸೂಳೆಯರೆಂದು ಹೇಳಿರುವುದು ಸ್ತ್ರೀ ಕುಲವನ್ನು ಅವಮಾನಿಸಿದಂತೆ. ಇದನ್ನು ಮತಿಹೀನರಿಗೆ ಅರ್ಥ ಮಾಡಿಸಲಾಗದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
kaneri shree

ತನಗೆ ಒಪ್ಪಿತ ಧರ್ಮವನ್ನು ಅನುಸರಿಸಿ, ಆಚರಿಸುವ ಹಾಗೂ ಪ್ರಚಾರ ಮಾಡುವ ಹಕ್ಕು ಸಂವಿಧಾನವೇ ನೀಡಿರುವಾಗ ಮಠಾಧೀಶರು ಲಿಂಗಾಯತ ಧರ್ಮ ಪ್ರಚಾರ ಮಾಡಿದರೆ ಬ್ರಾಹ್ಮಣವಾದಿಗಳಿಗೆ ಉರಿದಿದ್ದೇಕೊ!. ಈ ನೆಲದ ಕಾನೂನು, ಸಂವಿಧಾನಗಳಿಗೆ ಗೌರವಿಸದ ಫ್ರಿಂಜ್ ಎಲೆಮೆಂಟ್‌ಗಳು ದೇಶದ್ರೋಹಿಗಳಲ್ಲದೆ ಬೇರೇನೂ ಅಲ್ಲ. ಅನ್ಯ ಧರ್ಮ ದ್ವೇಷವೆ ಮೈವೆತ್ತಂತಿರುವ ಬ್ರಾಹ್ಮಣವಾದಿಗಳು ಅನ್ಯ ಧರ್ಮ ಪ್ರಚಾರಕರನ್ನು ಮೆಟ್ಟಲ್ಲಿ ಹೊಡಿತೀನಿ ಎಂದರೆ ಬ್ರಾಹ್ಮಣ ಧರ್ಮದ ‘ಸರ್ವೆ ಜನ ಸುಖಿನೋಭವಂತು’ ಎನ್ನುವ ಮಾತಿಗೆ ಯಾವುದೇ ಮೌಲ್ಯವಿಲ್ಲ ಮತ್ತು ಅದೊಂದು ಗೂಂಡಾ ಸಂಸ್ಕೃತಿಯಲ್ಲದೇ ಮತ್ತೇನಲ್ಲ. ‘ಆತ್ಮಾನೋ ಮೋಕ್ಷಾರ್ಥಂ ಜಗತೇ ಹಿತಾಯಚ’ ಎನ್ನುವ ಮಾತು ಹೇಳುವ ಬ್ರಾಹ್ಮಣ ಧರ್ಮದವರು ಕನೇರಿ ಕಾಡಸಿದ್ಧನ ಹೀನ ಮಾತುಗಳು ಸಮರ್ಥಿಸಿದ್ದಾರೆ. ಮಠಾಧೀಶರ ತಾಯಂದಿರನ್ನು ಸೂಳೆಯರು ಎಂದಿರುವ ಕಾಡಸಿದ್ಧ ಮತ್ತು ಆತನ ಸಮರ್ಥಕರ ತಾಯಂದಿರನ್ನು ಯಾರಾದರೂ ಸೂಳೆ ಎಂದು ಕರೆದರೆ ಹೇಗನ್ನಿಸಿತ್ತದೆ? ಬಸವ ಸಂಸ್ಕೃತಿಯನ್ನು ದ್ವೇಷಿಸುವವರು ಬಸವಣ್ಣನವರ ವಚನಗಳನ್ನು ಅಪವಾಖ್ಯಾನಿಸುವ ನೀಚ ಕೃತ್ಯದಲ್ಲಿ ತೊಡಗಿದ್ದಾರೆ. ಬಸವಣ್ಣನವರ ‘ಇವನಾರವ, ಇವನಾರವ, ಎಂದೆನಿಸದಿರಯ್ಯಾ, ಇವ ನಮ್ಮವ ಎಂದೆನಿಸಯ್ಯಾ…’ ಎನ್ನುವ ವಚನವನ್ನು ಉಲ್ಲೇಖಿಸಿ ಬಸವಣ್ಣ ಎಲ್ಲರನ್ನು ನಮ್ಮವರೆಂದರೆ ಬಸವಾನುಯಾಯಿಗಳು ಬ್ರಾಹ್ಮಣವಾದಿಗಳನ್ನು ಟೀಕಿಸುತ್ತಾರೆ ಎಂದು ಕೆಲವು ಅರೆಬೆಂದ ಮಡಿಕೆಗಳು ಕನವರಿಸುತ್ತವೆ.

ಬ್ರಾಹ್ಮಣವಾದಿಗಳು ಹುಟ್ಟುಹಾಕಿರುವ ಜಾತಿ ವ್ಯವಸ್ಥೆಯಲ್ಲಿ ಹೀನ ಬದುಕು ಬಾಳುತ್ತಿದ್ದ ಶೋಷಿತ ವರ್ಗದ ಜನರನ್ನು ಜಾತಿಯ ಆಧಾರದಲ್ಲಿ ದೂರ ಇಡದೆ ಅವರನ್ನು ನಮ್ಮವರೆಂದು ಒಪ್ಪಿಕೊಳ್ಳಿ ಎನ್ನುವುದು ಬಸವಣ್ಣನವರ ವಚನದ ಭಾವವಾಗಿದೆ. ವಚನ ತಿರುಚುಕೋರರು ‘ವೀರಶೈವ ಹಾಗೂ ಲಿಂಗಾಯತ ಬೇರೆ ಬೇರೆ’ ಎನ್ನುವ ಬಸವವಾದಿಗಳನ್ನು ‘ಇವನಾರವ… ಎನ್ನುವ ಬಸವಣ್ಣನವರ ವಚನ ಪಾಲಿಸುತ್ತಿಲ್ಲ ಎಂದು ವಚನದ ಮೂಲಾರ್ಥವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸುತ್ತಾರೆ. ಬಸವಣ್ಣನವರಾಗಲಿ, ಶರಣರಾಗಲಿ ವಚನ ಸಂಸ್ಕೃತಿ ಒಪ್ಪಿಕೊಳ್ಳುವವರನ್ನು ಮಾತ್ರ ನಮ್ಮವರೆಂದು ಸ್ವೀಕರಿಸುತ್ತಾರೆ, ಉಳಿದವರನ್ನು ಭವಿಗಳು ಎಂದು ದೂರವಿಡುತ್ತಾರೆ. ವಚನ ಸಂಸ್ಕೃತಿ ಸ್ವೀಕರಿಸುವುದು ಎಂದರೆ ಜಾತಿ ವ್ಯವಸ್ಥೆಯನ್ನೂ ಒಳಗೊಂಡಂತೆ ಬ್ರಾಹ್ಮಣವಾದದ ಎಲ್ಲಾ ಬಗೆಯ ತಾರತಮ್ಯಗಳನ್ನು ನೀಗಿಕೊಳ್ಳುವುದು ಅಥವಾ ನಿರಾಕರಿಸುವುದು ಎಂದರ್ಥ. ‘ಭವಿಯನ್ನು ಭಕ್ತನಾಗಿಸಿದ ಬಸವಣ್ಣ…’ ಎಂದು ಬಸವಯೋಗಿ ಸಿದ್ಧರಾಮರು ಹೇಳಿದ್ದರ ಮರ್ಮ ವಚನ ಚಳವಳಿಗೆ ಆಕರ್ಷಿತರಾಗಿ ಬಂದ ಸಾಮಾನ್ಯ ಕಾರ್ಯಕರ್ತರಿಗೆ ವಚನ ಚಳವಳಿಯ ಮೂಲ ಉದ್ದೇಶಗಳನ್ನು ಮನದಟ್ಟು ಮಾಡಿಸಿ ಅವರನ್ನು ಸೈದ್ಧಾಂತಿಕವಾಗಿ ಗಟ್ಟಿಗೊಳಿಸುವುದು ಎಂದರ್ಥ. ಸಿದ್ಧರಾಮರ ಈ ವಚನದ ಭಾವವನ್ನು ನಮ್ಮ ಮಠಾಧೀಶರು ಹಾಗೂ ಅನುಭಾವಿಗಳು ಧಾರ್ಮಿಕ ಹಿನ್ನೆಲೆಯಲ್ಲಿ ಲಿಂಗ ಹಾಕಿಕೊಂಡವರು ಭಕ್ತರು, ಉಳಿದವರು ಭವಿಗಳು ಎಂದು ಅರ್ಥೈಸಿದ್ದಾರೆ.

ಈ ಅರ್ಥೈಸುವಿಕೆ ಅರ್ಧ ಸತ್ಯವಾಗಿದೆ. ಏಕೆಂದರೆ ವಚನ ಚಳವಳಿಯ ಸದಸ್ಯರು ಚಳವಳಿಯ ಧ್ಯೇಯೋದ್ದೇಶಗಳನ್ನು ಅರಿತು, ಒಪ್ಪಿಕೊಂಡು ಇಷ್ಟಲಿಂಗ ಧರಿಸುವುದು ಕಡ್ಡಾಯವಾಗಿತ್ತು. ಅಂದರೆ ವಚನ ಚಳುವಳಿಯ ಸದಸ್ಯರ ಕೊರಳಲ್ಲಿನ ಇಷ್ಟಲಿಂಗವು ಶರಣರ ಗುರುತಿನ ಪತ್ರ(ಐಡಿ) ಅಹುದು, ಅರಿವಿನ ಕುರುಹು, ಸಮಾನತೆಯ ಸಂಕೇತ, ಅನುಭಾವ ಸಾಧನೆಯ ಮಾಧ್ಯಮವೂ ಅಹುದು. ಶರಣರು ವಚನ ಚಳವಳಿಯನ್ನು ಯಾವ ಮುಲಾಜು, ರಾಜಿ, ಮರ್ಜಿಗಳಿಗೆ ಒಳಗಾಗದೆ ತೀವ್ರ ಸೈದ್ಧಾಂತಿಕ ತಳಹದಿಯಲ್ಲಿ ಸಂಘಟಿಸಿದ್ದಾರೆ. ಮುಗ್ಧ ಶೋಷಿತರನ್ನು ಮೇಲೆತ್ತುವ ಉದ್ದೇಶದಿಂದ ಆರಂಭಿಸಿದ ಶರಣರ ಚಳವಳಿಯನ್ನು ಅಂದು ತೀವ್ರವಾಗಿ ವಿರೋಧಿಸುವ ಜನರಿದ್ದರು, ಅವರು ಸಂತಾನ ಈ ಕಾಲದಲ್ಲೂ ಇದೆ. ಆ ಬಗೆಯ ಜನರನ್ನು ಬಸವಣ್ಣನವರು ಎಂದಿಗೂ ನಮ್ಮವರೆಂದು ಅಪ್ಪಿಕೊಂಡಿರಲಿಲ್ಲ. ಅಂದಿನ ಸಮಾಜದಲ್ಲಿ ಗಟ್ಟಿಯಾಗಿ ಬೇರೂರಿದ್ದ ವೈದಿಕ ಮೌಢ್ಯಗಳು ಹಾಗೂ ಅವುಗಳ ಸಮರ್ಥಕರನ್ನು ಬಸವಣ್ಣನವರು ಬಲವಾಗಿ ವಿರೋಧಿಸಿದ್ದಾರೆ ಹಾಗೂ ಅಂತವರಿಂದ ಗಾವುದ ಅಂತರ ಕಾಯ್ದುಕೊಂಡಿದ್ದಾರೆ. ಬಸವಣ್ಣನವರು ಕಂಡಕಂಡವರನ್ನೆಲ್ಲ ನಮ್ಮವರೆನ್ನದೆ ಯಾರನ್ನು ನಮ್ಮವರೆಂದು ಅಪ್ಪಿಕೊಳ್ಳುತ್ತಿದ್ದರು ಮತ್ತು ಯಾರನ್ನು ದೂರವಿಡುತ್ತಿದ್ದರು ಎಂಬುದು ತಿಳಿಯಬೇಕಾದರೆ ಅವರ ಈ ಕೆಳಗಿನ ವಚನವನ್ನು ಮತ್ತು ಅದರ ಭಾವಾರ್ಥವನ್ನು ನಾವು ಕೂಲಂಕಷವಾಗಿ ಪರಾಮರ್ಶಿಸಬೇಕು:

“ಆದಿಯಲಾಗಲಿ, ವೇದದಲಾಗಲಿ, ಶಾಸ್ತ್ರದಲಾಗಲಿ, ಸಮಯದಲಾಗಲಿ: ಎನ್ನವರೆನ್ನವರೆನ್ನವರೆನ್ನೆನು!
ಎನ್ನವರೆಂದರೆ ಸಂಗಾ ನಿಮ್ಮಲ್ಲಿಗೆ ದೂರ‌.
ಎನ್ನವರಾದರೆ ಜನ್ನಕ್ಕೆ ನಡೆವರೆ?
ಎನ್ನವರಲ್ಲ, ಕೂಡಲಸಂಗಾ ನಿಮ್ಮಾಣೆ‌.”

ಭಾವಾರ್ಥ

ವೇದ, ಶಾಸ್ತ್ರ, ಪುರಾಣ ಮುಂತಾದ ವೈದಿಕ ತತ್ವಶಾಸ್ತ್ರದಲ್ಲಿ ನಂಬಿಕೆ ಇಟ್ಟಿರುವವರನ್ನು ನನ್ನವರೆಂದು ಪರಿಗಣಿಸಲಾಗದು, ಅವರೆಂದಿಗೂ ನನ್ನವರಲ್ಲ. ವೈದಿಕ ಬ್ರಾಹ್ಮಣ್ಯವನ್ನು ಅನುಸರಿಸುವವರು, ಆಚರಿಸುವವರು ಹಾಗೂ ಪ್ರಚಾರ ಮಾಡುವವರು ನಮ್ಮವರು ಎಂದು ಅವರೊಂದಿಗೆ ರಾಜಿ-ಮರ್ಜಿ ಮಾಡಿಕೊಂಡೆನಾದರೆ, ಸಂಗಯ್ಯನೆಂಬ ಸತ್ಯದ ಮಾರ್ಗ ತ್ಯಜಿಸಿದಂತೆ. ವೈದಿಕ ಬ್ರಾಹ್ಮಣರು ನನ್ನವರೆಂದು ನಾನೆಂದಿಗೂ ಭಾವಿಸಲಾರೆ. ಅವರು ನನ್ನವರಾಗಿದ್ದರೆ ನಾನು ತ್ಯಜಿಸಿ ಬಂದಿರುವ ಕರ್ಮಲತೆಯಂತಿರುವ ಜನಿವಾರವನ್ನು ಅವರೇಕೆ ಧರಿಸುತ್ತಾರೆ, ನಾನು ದಿಕ್ಕರಿಸಿರುವ ಹೋಮ, ಹವನಗಳನ್ನು ಅವರೇಕೆ ಮಾಡುತ್ತಾರೆ ಎಂದು ಬಸವಣ್ಣನವರು ದಿಟ್ಟತನದಿಂದ ಪ್ರಶ್ನಿಸುತ್ತಾರೆ. ಹಾಗಾಗಿ, ನಾನು ದಿಕ್ಕರಿಸಿರುವ ಬ್ರಾಹ್ಮಣ್ಯ ಮತ್ತು ಅದರ ಲಾಂಛನವಾಗಿರುವ ಜನಿವಾರ ಧಾರಣೆ, ಹೋಮ, ಹವನ, ಯಜ್ಞ-ಯಾಗಗಳಂತಹ ಕರ್ಮಟ ಆಚರಣೆ ಮಾಡುವವರು ಯಾವತ್ತೂ ನಿನ್ನಾಣೆಗೂ ನನ್ನವರಲ್ಲ ಎಂದು ನಿಶ್ಚಯವಾಗಿ, ದೃಢ ಚಿತ್ತದಿಂದ ಬ್ರಾಹ್ಮಣ್ಯದ ನಂಟನ್ನು ಬಸವಣ್ಣನವರು ಕುಡಿದುಕೊಳ್ಳುತ್ತಾರೆ. ಬಸವಣ್ಣನವರ ಅನೇಕ ವಚನಗಳು ಸ್ಪಷ್ಟವಾಗಿ ಎಲ್ಲರನ್ನು ನಮ್ಮವರೆಂದು ಒಪ್ಪಿಕೊಳ್ಳುವುದಿಲ್ಲ. ‘ನ್ಯಾಯ, ನಿಷ್ಠುರಿ ನಾನು ದಾಕ್ಷಿಣ್ಯಪರನಲ್ಲ…’ ಎನ್ನುವ ಅವರ ನುಡಿಯು ಕೆಟ್ಟದ್ದು, ಒಳ್ಳೆಯದು ಎಲ್ಲವನ್ನು ಏಕೋಭಾವದಿಂದ ಸ್ವೀಕರಿಸುವ ವ್ಯಕ್ತಿತ್ವ ತಮ್ಮದಲ್ಲ ಎನ್ನುವುದನ್ನು ಸಾರಿ ಹೇಳುತ್ತದೆ.

ಟಿಪ್ಪಣಿ

ಬಸವಣ್ಣನವರು ಎಲ್ಲರನ್ನು ಅಪ್ಪಿಕೊಂಡಿದ್ದರು ಎನ್ನುವ ವೈದಿಕ ಹಾಗೂ ವೀರಶೈವ ಸಾಂಪ್ರದಾಯವಾದಿ ಮನಸ್ಥಿತಿಗಳ ಅವಕಾಶವಾದಿ ವ್ಯಾಖ್ಯಾನವು ಸಂಪೂರ್ಣ ಟೊಳ್ಳು. ಈ ಜನ ಅನುಕೂಲಸಿಂಧು ವಾದ ಮಂಡಿಸುವುದರಲ್ಲಿ ಪುರಾಣ ಕಾಲದಿಂದಲೂ ನಿಸ್ಸೀಮರು. ಇಡೀ ವಚನ ಚಳವಳಿ ವೈದಿಕ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಒಂದು ಮಹಾನ್ ಹೋರಾಟ. ಇಂದು ಮನುವಾದಿ ಬ್ರಾಹ್ಮಣರು ಹಾಗು ರಾಜಕೀಯ ಮತ್ತು ಇನ್ನಿತರ ಲಾಭಕ್ಕಾಗಿ ಅವರ ಬಾಲ ಬಡಿಯುವ ಗುಲಾಮರು ವಚನ ಚಳುವಳಿ ವೈದಿಕ ಬ್ರಾಹ್ಮಣ್ಯವನ್ನು ಯಾವತ್ತೂ ವಿರೋಧಿಸಲಿಲ್ಲ ಎಂದು ಸುಳ್ಳು ಹೇಳುವ ಭಂಡತನ ಪ್ರದರ್ಶಿಸುತ್ತಿದ್ದಾರೆ. ಸಮಾಜವನ್ನು ಪಟ್ಟಭದ್ರ ಪುರೋಹಿತಶಾಹಿಗಳು ಒಡೆದು ಆಳುತ್ತಿದ್ದ ಕಾಲದಲ್ಲಿ ಯಾರೆಲ್ಲ ತುಳಿತಕ್ಕೊಳಗಾಗಿದ್ದರೊ ಅವರನ್ನು ಬಸವಣ್ಣನವರು ‘ಇವ ನಮ್ಮವ..’ಎಂದು ಅಪ್ಪಿಕೊಂಡರೆ ಹೊರತು ಶೋಷಿತರನ್ನು ತುಳಿಯುವ ದುಷ್ಟರನ್ನಲ್ಲ. ಮೇಲಿನ ವಚನದಲ್ಲಿ ವೇದ, ಶಾಸ್ತ್ರ, ಯಜ್ಞ-ಯಾಗ ಸಮಯಾದಿಗಳಲ್ಲಿ ನಂಬಿಕೆ ಇಟ್ಟಿರುವ ಸಂಪ್ರದಾಯವಾದಿಗಳನ್ನು ನನ್ನವರೆನ್ನಲಾರೆ, ಹಾಗೆಂದರೆ ದೈವಕ್ಕೆ ದೂರ ಎನ್ನುತ್ತಾರೆ ಬಸವಣ್ಣ. ಸಾಂಪ್ರದಾಯವಾದಿಗಳು ನನ್ನವರಾಗಿದ್ದರೆ ಅವರೇಕೆ ಜನ್ನಕ್ಕೆ (ಜನಿವಾರ/ಯಜ್ಞೋಪವಿತ್/ಯಜ್ಞ-ಯಾಗ) ನಿಷ್ಟರು ಎಂದು ಬಸವಣ್ಣನವರು ನುಡಿಯುತ್ತಾರೆ. ಇಂತಹ ಜೀವವಿರೋಧಿ ಸಾಂಪ್ರದಾಯವಾದಿಗಳನ್ನು ಕೂಡಲಸಂಗಯ್ಯನ ಆಣೆಗೂ ಎನ್ನವರು ಎನ್ನಲಾರೆ ಎಂದು ಬಸವಣ್ಣನವರು ಪ್ರತಿಜ್ಞೆಯ ಧ್ವನಿಯಲ್ಲಿ ಮಾತನಾಡುತ್ತಾರೆ.

ವೈದಿಕತೆ ಈ ನೆಲದಲ್ಲಿ ಕರಾಳ ಹಾಗೂ ಕ್ರೂರ ಇತಿಹಾಸವನ್ನು ಹೊಂದಿದೆ. ಜಗತ್ತಿನ ಅತ್ಯಂತ ವಿಕೃತ ಹಾಗೂ ಕ್ರೂರ ಜನ ಮನುವಾದಿಗಳು. ಇವರು ತಮ್ಮ ಸ್ವಹಿತಾಸಕ್ತಿಗೆ ಅಪಾಯ ಬಂದಾಗ ಅತ್ಯಂತ ಅಪಾಯಕಾರಿಯಾಗಿ ವರ್ತಿಸುತ್ತಾರೆ. ಇವರ ಕ್ರೂರ ಸಿದ್ಧಾಂತವನ್ನು ವಿರೋಧಿಸಿ ಪರ್ಯಾಯ ಸಿದ್ಧಾಂತ ಪ್ರತಿಪಾದಿಸಿದ ಎಲ್ಲಾ ಪುಣ್ಯ ಪುರುಷರನ್ನು ಮುಗಿಸಿದ್ದಾರೆ. ಇವರ ಮೂರು ಪ್ರಮುಖ ಗುಣಲಕ್ಷಣಗಳು ಹೀಗಿವೆ:

1. ಮೊದಲು ವೈದಿಕ ಸಿದ್ಧಾಂತ ವಿರೋಧಿಸುವವರನ್ನು ಕೊಲೆ ಮಾಡಿಸಿ ಭೌತಿಕವಾಗಿ ಮುಗಿಸುತ್ತಾರೆ.
2. ಒಂದು ವೇಳೆ ಕೊಲೆ ಮಾಡಲು ಆಗದಿದ್ದರೆ ಆ ಮಹಾಪುರುಷರ ಕುರಿತು ನಿರಂತರ ಅಪಪ್ರಚಾರ ಹಾಗೂ ಚಾರಿತ್ರ್ಯ ವಧೆ ಮಾಡುತ್ತಾರೆ.
3. ಅದರ ನಂತರವೂ ಆ ಮಹಾಪುರುಷರು ಹೆಚ್ಚು ಹೆಚ್ಚು ಜನಪ್ರೀಯರಾದರೆ, ಆಗ ಅವರ ಇತಿಹಾಸ ಹಾಗೂ ಅವರು ಪ್ರತಿಪಾದಿಸಿದ ಸಿದ್ಧಾಂತಗಳನ್ನು ತಿರುಚುವ ಅಥವಾ ಕಲಬೆರಕೆ ಮಾಡುವ ಕೃತ್ಯಕ್ಕೆ ಮುಂದಾಗುತ್ತಾರೆ. ಆ ಮಹಾಪುರುಷರು ನಮ್ಮವರೆ, ಸನಾತನ ಧರ್ಮವನ್ನು ಸುಧಾರಣೆ ಮಾಡಿದ್ದಾರೆ, ಅವರು ಕುರಿತು ನಮಗೆ ಅಪಾರ ಗೌರವವಿದೆ ಎನ್ನುತ್ತ ಅವರನ್ನು ಹಾಗೂ ಅವರ ಸಿದ್ಧಾಂತಗಳನ್ನು ಮುನ್ನೆಲೆಗೆ ಬರದಂತೆ ತಡೆದು ವ್ಯವಸ್ಥಿತವಾಗಿ ಗೌಣಗೊಳಿಸುತ್ತಾರೆ‌. ಈ ಕೃತ್ಯವನ್ನು ಹಿಂದಿ ಭಾಷೆಯಲ್ಲಿ ‘ಕಲಮ್ ಕಸಾಯಿ’ ಎಂದು ಕರೆಯಲಾಗುತ್ತದೆ.

ಬಸವಣ್ಣ ಹಾಗೂ ವಚನ ಚಳವಳಿಯ ಕುರಿತು ಕರ್ನಾಟಕದಲ್ಲಿ ಈ ವರ್ತಮಾನದ ದಿನಗಳಲ್ಲಿ ವೈದಿಕರು ಅದನ್ನೇ ಮಾಡಲು ಅವಿಶ್ರಾಂತವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಅದು ಅಷ್ಟು ಸುಲಭವಾಗಿ ಈಡೇರುವುದಿಲ್ಲ. ಅದರಿಂದ ವೈದಿಕ ಬ್ರಾಹ್ಮಣರ ಕಪಟತನ ಬಯಲಾಗುವುದೇ ಹೊರತು ಹೆಚ್ಚಿನ ಪ್ರಯೋಜನವಾಗುವುದಿಲ್ಲ.

WhatsApp Image 2025 11 17 at 3.54.12 PM
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...