ವಚನಯಾನ | ಗೋತ್ರ ಪುರುಷರ ಜಾತಿಮೂಲ ಹಾಗೂ ಬ್ರಾಹ್ಮಣರ ಜಾತಿ ಶ್ರೇಷ್ಠತೆ

Date:

ಬ್ರಾಹ್ಮಣರು ಉಳಿದ ಭಾರತೀಯರಿಗಿಂತ ತಮ್ಮದು ಶ್ರೇಷ್ಠ ರಕ್ತವೆಂದು ಎಲ್ಲರನ್ನು ನಂಬಿಸಲು ಪ್ರಯತ್ನಿಸುತ್ತಾರೆ. ತಮ್ಮನ್ನು ತಾವು ಸಪ್ತ ಋಷಿಗಳ ಗೋತ್ರಗಳ ಮೂಲಕ ಗುರುತಿಸಿಕೊಳ್ಳುತ್ತಾರೆ. ಭಾರತದಲ್ಲಿ ದೇವಸ್ಥಾನಗಳು ಇಂದಿಗೂ ಬ್ರಾಹ್ಮಣರ ನಿಯಂತ್ರಣದಲ್ಲಿವೆ. ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡಿಸುವಾಗ ಬ್ರಾಹ್ಮಣ ಅರ್ಚಕರು ಭಕ್ತರ ಗೋತ್ರವನ್ನು ಕೇಳುತ್ತಾರೆ.

ನಮ್ಮ ದೇಶದಲ್ಲಿ ವಾಸಿಸುವ ಎಲ್ಲರನ್ನು ಹಿಂದೂಗಳೆಂದು ಭೌಗೋಳಿಕವಾಗಿ ಗುರುತಿಸಲಾಗುತ್ತದೆ. ಆರ್ಯ ವೈದಿಕರು ತಮ್ಮನ್ನು ತಾವು ಎಂದಿಗೂ ಹಿಂದೂಗಳೆಂದು ಗುರುತಿಸಿಕೊಳ್ಳದೆ ಬ್ರಾಹ್ಮಣರೆಂದು ಗುರುತಿಸಿಕೊಳ್ಳುತ್ತಾರೆ. ಬ್ರಾಹ್ಮಣರು ಪ್ರಾಚೀನ ಕಾಲದಿಂದ ಈ ದೇಶದ ಜನರೊಂದಿಗೆ ಬೆರೆಯದೆ ಪ್ರತ್ಯೇಕತೆಯನ್ನು ಪಾಲಿಸಿಕೊಂಡು ಬಂದಿದ್ದಾರೆ. ರಾಜಸತ್ತೆಗಳ ಕಾಲದಲ್ಲಿ ಅವರ ಸ್ವಹಿತಾಸಕ್ತಿಗೆ ಯಾವುದೆ ತೊಂದರೆ ಆಗಿರಲಿಲ್ಲ, ಕಾರಣ, ರಾಜ್ಯಾಡಳಿತ ಅವರೇ ನಿಯಂತ್ರಿಸುತ್ತಿದ್ದರು‌. ದೇಶಕ್ಕೆ ಸ್ವಾತಂತ್ರ ಸಿಕ್ಕು ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬರುವ ಲಕ್ಷಣಗಳನ್ನು ಗಮನಿಸಿದ ಆರ್ಯ ವೈದಿಕರು ತಾವು ಈ ದೇಶದಲ್ಲಿ ಒಂಟಿ ಆಗುತ್ತೇವೆ ಎನ್ನುವ ಆತಂಕದಿಂದ ಇಪ್ಪತ್ತನೇ ಶತಮಾನದ ಆರಂಭದಲ್ಲಿ ಹಿಂದುತ್ವದ ಪರಿಕಲ್ಪನೆಯನ್ನು ಹುಟ್ಟುಹಾಕಿ ಮುಸ್ಲಿಮ್ ಮತ್ತು ಕ್ರೈಸ್ತರನ್ನು ಹೊರತುಪಡಿಸಿ ಉಳಿದವರನ್ನೆಲ್ಲಾ ಹಿಂದೂಗಳು ಎಂದು ಕರೆಯುತ್ತಾರೆ. ಬ್ರಿಟಿಷರೊಡನೆ ಹೊಂದಾಣಿಕೆ ಮಾಡಿಕೊಂಡು ದೇಶದ ಸ್ವಾತಂತ್ರ ಹೋರಾಟವನ್ನು ದಿಕ್ಕು ತಪ್ಪಿಸುತ್ತಾ ಸ್ವರಾಜ್ಯದ ಅವಕಾಶವನ್ನು ಸಾಧ್ಯವಾದಷ್ಟು ಮುಂದೂಡುತ್ತಾರೆ. ಈಗಲೂ ಸಹ ಬ್ರಾಹ್ಮಣರು ರಾಜಕೀಯ ಹಿಂದುಗಳೇ ಹೊರತು ಧಾರ್ಮಿಕ ಹಿಂದೂಗಳಲ್ಲ, ಕಾರಣ ಹಿಂದೂ ಒಂದು ಧರ್ಮವಲ್ಲ. ಭಾರತದಲ್ಲಿ ವಾಸಿಸುವ ಬಹುತೇಕ ಜನಾಂಗಗಳು ತಮ್ಮದೆಯಾದ ಪ್ರತ್ಯೇಕ ಧಾರ್ಮಿಕ ನಂಬಿಕೆ, ಹಾಗೂ ಆಚರಣೆಗಳನ್ನು ಹೊಂದಿದ್ದಾರೆ. ಹಾಗಾಗಿ ಭಾರತೀಯರಿಗೆ ಏಕಮೇವ ಧರ್ಮದ ಚೌಕಟ್ಟು ಇರುವುದಿಲ್ಲ. ಹಿಂದೂ ಎನ್ನುವುದು ಬ್ರಾಹ್ಮಣರ ಅಸ್ತಿತ್ವವನ್ನು ಕಾಯುವ ರಾಜಕೀಯ ಪಾರಿಭಾಷೆಯೆ ಹೊರತು ಧರ್ಮವಲ್ಲ.

vachanayana

ಬ್ರಾಹ್ಮಣರು ಉಳಿದ ಭಾರತೀಯರಿಗಿಂತ ತಮ್ಮದು ಶ್ರೇಷ್ಠ ರಕ್ತವೆಂದು ಎಲ್ಲರನ್ನು ನಂಬಿಸಲು ಪ್ರಯತ್ನಿಸುತ್ತಾರೆ. ತಮ್ಮನ್ನು ತಾವು ಸಪ್ತ ಋಷಿಗಳ ಗೋತ್ರಗಳ ಮೂಲಕ ಗುರುತಿಸಿಕೊಳ್ಳುತ್ತಾರೆ. ಭಾರತದಲ್ಲಿ ದೇವಸ್ಥಾನಗಳು ಇಂದಿಗೂ ಬ್ರಾಹ್ಮಣರ ನಿಯಂತ್ರಣದಲ್ಲಿವೆ. ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡಿಸುವಾಗ ಬ್ರಾಹ್ಮಣ ಅರ್ಚಕರು ಭಕ್ತರ ಗೋತ್ರವನ್ನು ಕೇಳುತ್ತಾರೆ. ಭಾರತೀಯರಲ್ಲಿ ಶೇಕಡ 95ರಷ್ಟು ಜನರು ಗೋತ್ರ ರಹಿತರಾಗಿದ್ದಾರೆ, ಅರ್ಥಾತ್ ಅವೈದಿಕರಾಗಿದ್ದಾರೆ. ವೇದಗಳನ್ನು ಪ್ರಮಾಣವಾಗಿ ನಂಬುವವರು ಮಾತ್ರ ವೈದಿಕರು, ಅರ್ಥಾತ್ ಬ್ರಾಹ್ಮಣರು, ಅರ್ಥಾತ್ ಬ್ರಾಹ್ಮಣರ ರಾಜಕೀಯ ಪಾರಿಭಾಷೆಯಲ್ಲಿ ಹಿಂದೂಗಳು. ಅಂದರೆ, ಶೇಕಡ 95ರಷ್ಟು ಜನರು ಅವೈದಿಕರು, ವೇದಪ್ರಾಮಣ್ಯ ನಂಬದವರು, ಅಂದರೆ ಅವರಾರೂ ಧಾರ್ಮಿಕವಾಗಿ ಹಿಂದೂಗಳಲ್ಲ. ದೇವಸ್ಥಾನಕ್ಕೆ ಬರುವ ಅವೈದಿಕ ಭಕ್ತರಿಗೆ ಗೋತ್ರಗಳು ಕೇಳುವುದರ ಹಿಂದಿನ ಕಾರಣ, ಅವರ ಜಾತಿ ಗುರುತಿಸುವುದೆ ಆಗಿದೆ. ಗೋತ್ರರಹಿತರು ಅರ್ಚಕನೊಬ್ಬ ತನ್ನ ಗೋತ್ರ ಕೇಳಿದಾಗ ಅನುಭವಿಸುವ ಮಾನಸಿಕ ಯಾತನೆ ಊಹಿಸಲು ಸಾಧ್ಯವಿಲ್ಲ. ಇದು ಭಾರತದಲ್ಲಿ ಬ್ರಾಹ್ಮಣ್ಯ ಹುಟ್ಟುಹಾಕಿರುವ ಜಾತಿ ತಾರತಮ್ಯದ ಮಾದರಿ. ಈ ಜಾತಿ ಶ್ರೇಷ್ಠತೆಯ ಹಂಗನ್ನು ಹುರಿದುಕೊಂಡು ಬಸವಣ್ಣನವರು ಬ್ರಾಹ್ಮಣ್ಯದಿಂದ ಹೊರಬರುತ್ತಾರೆ. ಗೋತ್ರದ ಗತ್ತನ್ನು ನಿರಾಕರಿಸಿ “ಮಾದಾರ ಚೆನ್ನಯ್ಯ ನನ್ನ ಗೋತ್ರ ಪುರುಷ” ಎಂದು ವೈದಿಕರಿಗೆ ಸವಾಲು ಹಾಕುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಮಗೆ ಗೋತ್ರಗಳಿವೆ, ಅವು ಕಾಲ್ಪನಿಕ ಪುರಾಣದ ಗೋತ್ರ ಪುರುಷರಿಂದ ಗುರುತಿಸಲ್ಪಡುತ್ತವೆ, ಹಾಗಾಗಿ ನಾವು ಉಳಿದವರಿಗಿಂತ ಉತ್ತಮರು ಎಂದು ಗರ್ವದಿಂದ ಮೆರೆಯುತ್ತಿದ್ದ ಬ್ರಾಹ್ಮಣರ ಗೋತ್ರಗಳು ಹಾಗು ಅದಕ್ಕೆ ಕಾರಣರಾಗಿರುವ ಗೋತ್ರ ಪುರುಷರ ಜಾತಿಯ ಗುಟ್ಟನ್ನು ಬಸವಣ್ಣನವರು ಸಾರ್ವಜನಿಕವಾಗಿ ಹರಾಜು ಹಾಕುತ್ತಾರೆ. ಉತ್ತಮ ಜಾತಿಯವರು ತಾವೆಂಬ ಜಂಭದಿಂದ ಸೊಕ್ಕಿದ್ದ ದ್ವಿಜರನ್ನು ಬಸವಣ್ಣಾದಿ ಎಲ್ಲಾ ಶರಣರು ಕಟುವಾಗಿ ಟೀಕಿಸುತ್ತಾರೆ, ಅವರ ಜಾತಿ ಅಹಮ್ಮಿಕೆಗೆ ಕಾರಣವಾಗಿದ್ದು ಋಷಿಗಳ ಜಾತಿಯನ್ನೆ ಬಯಲುಗೊಳಿಸುತ್ತಾರೆ. ಬಸವಯೋಗಿ ಸಿದ್ಧರಾಮರು ತಮ್ಮ ಒಂದು ವಚನದಲ್ಲಿ “ಮುನಿಗಣ ನೋಡುವಡೆ ಕುಲಹೀನರು” ಎಂದು ತೀಕ್ಷ್ಣವಾಗಿ ಬ್ರಾಹ್ಮಣ್ಯದ ಗರ್ವವನ್ನು ಹೀಗಳೆಯುತ್ತಾರೆ, “ವಿಪ್ರರ ಮನೆಯ ಎಣ್ಣೆ ಹೋಳಿಗೆ ಶರಣರ ಮನೆಯ ಶ್ವಾನವೂ ಮೂಸದು” ಎಂದು ಚೆನ್ನಬಸವಣ್ಣನವರು ಬ್ರಾಹ್ಮಣ ಶ್ರೇಷ್ಠತೆಯನ್ನು ಹೊಡೆದುಹಾಕುತ್ತಾರೆ. “ಹೊಲೆಯರ ಹೊಟ್ಟೆಯಲ್ಲಿ ವಿಪ್ರರು ಹುಟ್ಟಿ ಗೋಮಾಂಸ ತಿಂದರೆನ್ನುವುದಕ್ಕೆ ಇದೇ ದೃಷ್ಟ” ಎಂದು ಬಸವಣ್ಣನವರು ವಿಪ್ರರ ಬಣ್ಣ ಬಯಲು ಮಾಡುತ್ತಾರೆ. ವಚನ ಚಳವಳಿಯ ಉದ್ದಕ್ಕೂ ಶರಣರು ಜಾತಿ ವ್ಯವಸ್ಥೆಯನ್ನು ಹಂದರವನ್ನು ಹರಿದು ಹಾಕುತ್ತಾ, ಬ್ರಾಹ್ಮಣ್ಯದ ಜನಕರ ಡಾಂಭಿಕತೆಯನ್ನು, ಹುಸಿ ಅಹಂ ಅನ್ನು ಹುಡಿಗೊಳಿಸುತ್ತಾರೆ. ಕನಕದಾಸರು ಸಹ “ಕುಲಕುಲಕುಲವೆಂದು ಹೊಡೆದಾಡುವ ಅಣ್ಣಗಳಿರಾ, ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ ಎಂದು ಪ್ರಶ್ನಿಸಿದ್ದಾರೆ. ಬಸವಣ್ಣನವರು ತಮ್ಮ ಈ ಕೆಳಗಿನ ವಚನದಲ್ಲಿ ಬ್ರಾಹ್ಮಣರ ಗೋತ್ರ ಪುರುಷರ ಚಾತಕವನ್ನೇ ಬಿಚ್ಚಿಟ್ಟಿದ್ದಾರೆ:

“ವ್ಯಾಸ ಬೋವಿತಿಯ ಮಗ,
ಮಾರ್ಕಂಡೇಯ ಮಾತಂಗಿಯ ಮಗ,
ಮಂಡೋದರಿ ಕಪ್ಪೆಯ ಮಗಳು.
ಕುಲವನರಸದಿರಿಂ ಭೋ!
ಕುಲದಿಂದ ಮುನ್ನೇನಾದಿರಿಂ ಭೋ!
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮುಚ್ಚಿಗ,
ಕಶ್ಯಪ ಕಮ್ಮಾರ, ಕೌಂಡಿನ್ಯನೆಂಬ ಋಷಿ
ಮೂರು ಭುವನರಿಯದೆ ನಾವಿದ ಕಾಣಿ ಭೋ!
ನಮ್ಮ ಕೂಡಲಸಂಗನ ವಚನವಿಂತೆಂದುದು
ಶ್ವಪಚೋಪಿಯಾದಡೇನು, ಶಿವಭಕ್ತನೆ ಕುಲಜಂ ಭೋ!”

ಭಾವಾರ್ಥ

ಪುರಾಣ ಪ್ರಸಿದ್ಧ ಕಾಲ್ಪನಿಕ ಋಷಿಮುನಿಗಳೆಲ್ಲ ಹುಟ್ಟಿದುದು ಉತ್ತಮವಲ್ಲದ ಕುಲದಲ್ಲಿ. ಮಹಾಭಾರತ ಬರೆದ ಎನ್ನಲಾಗುವ ವ್ಯಾಸ ಬೋಯಿತಿಯ (ಬೆಸ್ತರ ಮಹಿಳೆ) ಮಗ, ಮಾರ್ಕಂಡೇಯ ಮಾತಂಗಿಯ ಮಗ. ಅದರಂತೆ ರಾವಣನ ಹೆಂಡತಿ ಮಂಡೋದರಿ ಕಪ್ಪೆಯ ಮಗಳು, ಇನ್ನು ಕೆಲವು ಮುನಿಗಣಂಗಳು ಬೇಡರು, ಚಮ್ಮಾರರು, ಕಮ್ಮಾರರು, ಕ್ಷೌರಿಕ ಮುಂತಾದ ಬ್ರಾಹ್ಮಣರಿಂದ ಕೀಳೆಂದು ಕರೆಯಲ್ಪಡುವ ಜಾತಿಗಳಲ್ಲಿ ಹುಟ್ಟಿದವರು. ಅವರೆಲ್ಲರೂ ತಮ್ಮ ವಿಶೇಷ ಸಾಧನೆಗಳಿಂದ ಪುರಾಣಗಳಲ್ಲಿ ಚಿತ್ರಿತರಾದವರು. ಮನುಷ್ಯನಿಗೆ ಹುಟ್ಟಿನಿಂದ ಶ್ರೇಷ್ಠತೆ ಬರುವುದಿಲ್ಲ, ಅವರ ಸಾಧನೆಯಿಂದ ಬರುತ್ತದೆ. ತಾವು ಮಾತ್ರ ಉತ್ತಮರು ಎಂದು ಮೆರೆಯುವವರ ಗೋತ್ರ ಪುರುಷರು ಯಾವ ಜಾತಿಯವರಾಗಿದ್ದರು ಎಂದು ಬಸವಣ್ಣನವರು ಬ್ರಾಹ್ಮಣರ ಗೋತ್ರ ಪುರುಷರ ಜಾತಿಯನ್ನು ಉಲ್ಲೇಖಿಸಿ “ಕುಲದಿಂದ ಮುನ್ನೇನಾದಿಂ ಭೊ” ಎಂದು ಅಣಕಿಸುತ್ತಾರೆ. ತಮ್ಮ ಜಾತಿಯ ಅಹಮ್ಮಿಕೆ, ಗೋತ್ರದ ಸೊಕ್ಕಿನಿಂದ ಉಳಿದವರನ್ನು ಕೀಳಾಗಿ ಕಾಣುತ್ತಿದ್ದವರ ಕುಲಹೀನತೆಯನ್ನು ಎತ್ತಿ ಆಡುತ್ತಾರೆ. ಬ್ರಾಹ್ಮಣರು ಯಾವ ಗೋತ್ರದವರಾದರೇನು ಶರಣರ ದೃಷ್ಟಿಯಲ್ಲಿ ಅವರು ಅತ್ಯಂತ ಕುಲಹೀನರು. ಉಳಿದವರು, ಅಂದರೆ, ವಿಶೇಷವಾಗಿ ಶರಣರು ನಿರಾಕಾರ ಶಿವನ ಭಕ್ತರು, ಹಾಗಾಗಿ ಅವರೆ ನಿಜವಾದ ಕುಲಜರು ಎಂದು ಬಸವಣ್ಣನವರು ಶರಣ ಸಮಾಜದ ಘನತೆಯನ್ನು ಎತ್ತಿ ಹಿಡಿಯುತ್ತಾರೆ. ವರ್ಣ, ವರ್ಗ, ಜಾತಿ, ಕುಲಗಳ ಭೇದಭಾವವನ್ನು ದಿಕ್ಕರಿಸಿ ಸರ್ವಸಮಾನತೆಯ ಸಮಾಜವನ್ನು ಪ್ರತಿಪಾದಿಸುವ ಬಸವಣ್ಣನವರ ವಿಶ್ವಮಾನವ ದೃಷ್ಟಿ ಇಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ.

ಟಿಪ್ಪಣಿ

ಬಸವಣ್ಣನವರು ತಮ್ಮ ಮೇಲಿನ ವಚನದಲ್ಲಿ ಗೋತ್ರ ಪುರುಷರ ಹಿನ್ನೆಲೆ ಹಾಗು ಜಾತಿ ಮೂಲವನ್ನು ಗುರಿಯಾಗಿಸಿಕೊಂಡು ಬ್ರಾಹ್ಮಣರ ಜಾತಿ ಅಹಮ್ಮಿಕೆಯನ್ನು ಲೇವಡಿ ಮಾಡಿದ್ದಾರೆ. ಈ ಗೋತ್ರ ಪುರುಷರು ಹಾಗು ಬ್ರಾಹ್ಮಣರು ಗೌರವಿಸುವ ಋಷಿ, ಮುನಿಗಳ ಜಾತಿ ಹಿನ್ನೆಲೆಯು ಈ ಕೆಳಗಿನಂತಿದೆ:

ವ್ಯಾಸ: ಈತ ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ ಎಂಬ ನಂಬಿಕೆಯ ಆಧಾರದಲ್ಲಿ “ವೇದವ್ಯಾಸ” ಎಂದು ಕರೆಯಲಾಗುತ್ತದೆ. ವ್ಯಾಸ ಮಹಾಭಾರತ ಕಾವ್ಯ, ಹದಿನೆಂಟು ಪುರಾಣಗಳು ಮತ್ತು ಬ್ರಹ್ಮಸೂತ್ರಗಳಂತಹ ಕೃತಿಗಳನ್ನು ರಚಿಸಿದ್ದಾನೆ ಎಂಬುದು ನಂಬಿಕೆ. ವ್ಯಾಸನನ್ನು ಕೃಷ್ಣ ದ್ವೈಪಾಯನ ಎಂದೂ ಕರೆಯುತ್ತಾರೆ. ವ್ಯಾಸನಲ್ಲಿ ನಿಯೋಗ ಪದ್ಧತಿಯಿಂದ ಹುಟ್ಟಿದವರಿಗೆ ಕೌರವರು ಮತ್ತು ಪಾಂಡವರು ಎನ್ನುತ್ತಾರೆ. ಈ ವ್ಯಾಸ ಒಬ್ಬ ಅಂಬಿಗರ ಜಾತಿಯ ಮತ್ಸ್ಯಕನ್ಯೆ ಮತ್ತು ಪರಾಶರ ಮುನಿಯ ಪ್ರೇಮದಿಂದ ಹುಟ್ಟಿದಾತ. ಮುಂದೆ ಆ ಮತ್ಸ್ಯಕನ್ಯೆ ಮತ್ತೊಬ್ಬ ಪುರುಷ (ಭೀಷ್ಮನ ತಂದೆ) ನನ್ನು ಪ್ರೇಮಿಸಿ ಮದುವೆಯಾಗುತ್ತಾಳೆ. ಇದು ವ್ಯಾಸನ ಭಯಂಕರ ಹಿನ್ನೆಲೆ.

Gotras

ಮಾರ್ಕಂಡೇಯ: ಈತನದ್ದು ವೈದಿಕ ಪುರಾಣಗಳಲ್ಲಿ ಬರುವ ಪ್ರಸಿದ್ಧ ಋಷಿಬಾಲಕನ ಪಾತ್ರ. ವೈದಿಕ ಪುರಾಣಗಳ ಪ್ರಕಾರ ಮಾರ್ಕಂಡೇಯನು ಮಹರ್ಷಿ ಭ್ರುಗು ಮತ್ತು ಖ್ಯಾತಿ ದೇವಿ (ಧಕ್ಷ ಪ್ರಜಾಪತಿಯ ಮಗಳು) ಯವರ ವಂಶದಲ್ಲಿ ಹುಟ್ಟಿದವನು. ಈತ ಬ್ರಾಹ್ಮಣರಿಂದ ಕರೆಯಲ್ಪಡುವ ಕೀಳು ಕುಲದ ಮಾತಂಗಿಯ ಮಗ ಎನ್ನುವುದು ಪ್ರತೀತಿ.

ಮಂಡೋದರಿ: ಈಕೆ ಕಪ್ಪೆಯ ಮಗಳು ಎಂದು ಕೆಲವು ಜೈನ ಸಾಹಿತ್ಯ ಮತ್ತು ವಚನ ಸಾಹಿತ್ಯದಲ್ಲಿ ಪ್ರಸ್ತಾಪವಾಗಿದೆ. ಆದಾಗ್ಯೂ, ರಾಮಾಯಣದಲ್ಲಿ ಈಕೆ, ಮಾಯಾಸುರ ಮತ್ತು ಹೇಮಾ ಎಂಬ ಅಪ್ಸರೆಯರ ಮಗಳು ಎನ್ನಲಾಗುತ್ತದೆ. ಬಸವಣ್ಣನವರ ವಚನದಲ್ಲಿ ಅವಳನ್ನು “ಕಪ್ಪೆಯ ಮಗಳು” ಎಂದಿರುವ ಕಾರಣ, ಹಿಂದಿನ ಜನ್ಮದಲ್ಲಿ ಮಂಡೋದರಿಯು ಮಧುರಾ ಎಂಬ ಅಪ್ಸರೆಯಾಗಿದ್ದಳಂತೆ, ಶಿವನೊಡನೆ ಸಂಭೋಗಿಸಲು ಈಕೆ ಪ್ರಯತ್ನಿಸಿದಾಗ ಪಾರ್ವತಿಯ ಶಾಪದಿಂದ ಕಪ್ಪೆಯಾಗಿ ಕೆಲವು ಕಾಲ ಬದುಕಿದ್ದಳಂತೆ.

ಅಗಸ್ತ್ಯ: ಅಗಸ್ತ್ಯ ಸಪ್ತರ್ಷಿಗಳಲ್ಲಿ ಒಬ್ಬ ಪ್ರಸಿದ್ಧ ಋಷಿ. ಯಾವುದೊ ಋಷಿಯ ಉದ್ರೇಕದಿಂದ ಸ್ಖಲಿಸಿದ ವೀರ್ಯವನ್ನು ಮಡಿಕೆಯಲ್ಲಿ ಇಟ್ಟಿದ್ದರಂತೆ. ಕುಂಭದಿಂದ ಹುಟ್ಟಿದ್ದರಿಂದ ಈತನನ್ನು ‘ಕುಂಭಸಂಭವ’ ಎಂದೂ ಕರೆಯುತ್ತಾರೆ. ಈ ಸಂಗತಿಯನ್ನು ಸನಾತನಿಗಳು ಪ್ರಣಾಳ ಶಿಸು ತಂತ್ರಜ್ಞಾನಕ್ಕೆ ಹೋಲಿಸಿಕೊಂಡು ಸಂಭ್ರಮಪಡುತ್ತಾರೆ. ಅಗಸ್ತ್ಯ ಕಬ್ಬಿಲ ಜಾತಿಯವನು ಎನ್ನುತ್ತಾರೆ ಬಸವಣ್ಣನವರು. ಕಬ್ಬಿಲ ಎಂದರೆ ಚರ್ಮವನ್ನು ಹೊಲಿಯುವ ಕುಲದವನು ಎಂದು ಅರ್ಥೈಸುತ್ತದೆ. ಇದು ಶ್ರೇಷ್ಠ ಋಷಿಮುನಿಗಳ ಕುಲವನ್ನು ಸೂಚಿಸುತ್ತದೆ.

ದುರ್ವಾಸ: ದುರ್ವಾಸ ಋಷಿ ಅತ್ರಿ ಮತ್ತು ಅನಸೂಯರ ಮಗನೆಂದು ಹೇಳಲಾಗುತ್ತದೆ. ಈ ದೂರ್ವಾಸ ಕೋಪದಿಂದ ಶಾಪ ಕೊಡುವ ಪೆಕ್ಯೂಲಿಯರ್ ಪೌರಾಣಿಕ ಪಾತ್ರ. ಬಸವಣ್ಣನವರು ದುರ್ವಾಸ ಮುಚ್ಚಿಗ ಎನ್ನುವ ಕೀಳು ಕುಲದಲ್ಲಿ ಹುಟ್ಟಿದವ ಎನ್ನುತ್ತಾರೆ.

ಕಶ್ಯಪ: ಕಶ್ಯಪ ಸಪ್ತಋಷಿಗಳಲ್ಲಿ ಒಬ್ಬನಾಗಿದ್ದು ಈತ ಸುರ, ಅಸುರ, ನಾಗರ, ಗಂಧರ್ವ ಮುಂತಾದವರಿಗೆ ಪಿತಾಮಹನೆಂದು ಪರಿಗಣಿಸಲ್ಪಡುತ್ತಾನೆ. ಈತ ಮರೀಚಿ ಮತ್ತು ಕಲಾ ಋಷಿ ದಂಪತಿಢಳ ಮಗನಾಗಿದ್ದು, ಹದಿಮೂರು ಜನ ಹೆಂಡಿರನ್ನು ಹೊಂದಿದ್ದನಂತೆ. ಕಶ್ಯಪ ಗೋತ್ರದ ಬ್ರಾಹ್ಮಣರನ್ನು ಉಳಿದ ಗೋತ್ರದ ಬ್ರಾಹ್ಮಣರು ಅತ್ಯಂತ ಕೀಳಾಗಿ ಕಾಣುತ್ತಾರೆ. ಬಸವಣ್ಣನವರು ಈತ ಕಮ್ಮಾರ ಜಾತಿಗೆ ಸೇರಿದವನು ಎಂದಿದ್ದಾರೆ. “ಕಮ್ಮಾರ” ಎಂಬ ಪದ ಈತನ ಹೆಸರಿನೊಂದಿಗೆ ಸೇರಿರುವುದು ಒಂದು ನಿರ್ದಿಷ್ಟ ವೃತ್ತಿಯ ಮೂಲವನ್ನು ಸೂಚಿಸುತ್ತದೆ, ಇದು ಪುರಾತನ ಗ್ರೀಕ್ ಕತೆಗಳಲ್ಲಿನ “ಕ್ಯಾಸ್ಪೀರಿಯಾ” ಅಥವಾ “ಕಾಸ್ಪಟೈರೋಸ್” ಎಂಬ ಹೆಸರಿನೊಂದಿಗೆ ಸಂಬಂಧ ಹೊಂದಿದೆ ಎನ್ನಲಾಗುತ್ತದೆ.

ಕೌಂಡಿನ್ಯ: ಕೌಂಡಿನ್ಯ ಗೋತ್ರವು ವಿಶೇಷವಾಗಿ ಪೂರ್ವ ಕರಾವಳಿ ಪ್ರದೇಶದ ಬ್ರಾಹ್ಮಣರಲ್ಲಿ ಕಂಡುಬರುತ್ತದೆ. ಇದು ಕೌಂಡಿನ್ಯ ಋಷಿಗೆ ಸಂಬಂಧಿಸಿದೆ. ಕೌಂಡಿನ್ಯ ಋಷಿಯನ್ನು ಚರಕ ಸಂಹಿತೆ, ಸತ್ಪಥ ಬ್ರಾಹ್ಮಣ, ಮತ್ತು ಪಾಣಿನಿ ಅಷ್ಟಾಧ್ಯಾಯಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಬಸವಣ್ಣನವರು ಈತ ನಾವಿದ(ಹಡಪದ) ಜಾತಿಯವನು ಎಂದು ಹೇಳಿದ್ದಾರೆ.

ವಚನಯಾನ | ಬಸವಣ್ಣನವರು ದುಷ್ಟರನ್ನು ʼಎನ್ನವರುʼ ಎನ್ನಲಿಲ್ಲ

ಈ ಎಲ್ಲಾ ಋಷಿ ಮುನಿಗಳು ಹಾಗೂ ಗೋತ್ರ ಪುರುಷರ ಜಾತಿಯ ಮೂಲಗಳ ಕುರಿತು ತಾರ್ಕಿಕವಾಗಿ ಪ್ರಶ್ನೆ ಎತ್ತಿರುವ ಬಸವಣ್ಣನವರು ಮೇಲಿನ ತಮ್ಮ ವಚನದಲ್ಲಿ ಬ್ರಾಹ್ಮಣರ ಜಾತಿ ಮೂಲವನ್ನು ಕೆದಕಿ ಅವರ ಶ್ರೇಷ್ಠತೆಯ ವ್ಯಸನವನ್ನು ಅರ್ಥಪೂರ್ಣವಾಗಿ ವಿಡಂಬಿಸಿದ್ದಾರೆ. ಇದೇ ಕಾರಣದಿಂದ ಬ್ರಾಹ್ಮಣರು ಇಂದಿಗೂ ಬಸವಣ್ಣನವರನ್ನು ಮಾತ್ರವಲ್ಲದೆ ಲಿಂಗಾಯತರನ್ನು ಸಹ ನಖಶಿಖಾಂತ ದ್ವೇಷಿಸುತ್ತಾರೆ.

WhatsApp Image 2025 11 17 at 3.54.12 PM
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...