ಕಾಲಮಾನ | ಕೊಂದವರು ಯಾರು ಎಂಬ ನ್ಯಾಯವಾದ ಪ್ರಶ್ನೆಗೆ ಉತ್ತರ ದೊರಕೀತೇ?

Date:

ನಿರ್ಭಯಾ ಪ್ರಕರಣ ಜರುಗಿದ ಸುಮಾರು ಎರಡು ತಿಂಗಳ ಹಿಂದೆ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಸಂಭವಿಸಿತ್ತು. ಸ್ಥಳೀಯ ಮೀಡಿಯಾ ಬಿಟ್ಟರೆ, ರಾಷ್ಟ್ರೀಯ ಮಟ್ಟದಲ್ಲಿ ಈ ಸುದ್ದಿ ಎಷ್ಟು ಪ್ರಸಾರವಾಯಿತು? ಆಗಿದ್ದರೂ, ತುಂಬ ಸಣ್ಣ ಮಟ್ಟದಲ್ಲಿ ಆಗಿರಬಹುದಾದ ಸಾಧ್ಯತೆಯೇ ಹೆಚ್ಚು. ಕರ್ನಾಟಕದಲ್ಲಿ ಧರ್ಮಸ್ಥಳ ಒಂದು ಸಣ್ಣ ಸ್ಥಳ. ಆದರೆ ತೀರ್ಥಕ್ಷೇತ್ರವಾಗಿರುವುದರಿಂದ ಖ್ಯಾತಿಯನ್ನು ಪಡೆದಿದೆ.

ಡಿಸೆಂಬರ್‌ 16, 2012ರ ರಾತ್ರಿ ದಕ್ಷಿಣ ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ಖಾಸಗಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಇಪ್ಪತ್ತ್ಮೂರು ವರ್ಷದ, ಫಿಸಿಯೊ ಥೆರಪಿ ವಿದ್ಯಾರ್ಥಿನಿ ಮೇಲೆ ಡ್ರೈವರ್‌ ಸೇರಿದಂತೆ ಆರು ಮಂದಿ (ಇದರಲ್ಲಿ ಒಬ್ಬ ಅಪ್ರಾಪ್ತ ವಯಸ್ಸಿನ ಕಿಶೋರ ಕೂಡ ಇದ್ದ) ದಾರುಣ ಅತ್ಯಾಚಾರವನ್ನು ಮಾಡಿದರು. ಆಕೆಯ ಮೇಲೆ ಮತ್ತು ಜೊತೆಗಿದ್ದ ಸ್ನೇಹಿತನ ಮೇಲೆ ಐರನ್‌ ರಾಡಿನಿಂದ ತೀವ್ರವಾಗಿ ಪ್ರಹಾರವನ್ನು ಮಾಡಲಾಯಿತು. ಗ್ಯಾಂಗ್‌ ರೇಪ್‌ ಚಲಿಸುತ್ತಿದ್ದ ಬಸ್‌ನಲ್ಲೇ ಆಯಿತು. ಇಬ್ಬರನ್ನು ವಿವಸ್ತ್ರಗೊಳಿಸಿ ಬಸ್ಸಿನಿಂದ ಹೊರದಬ್ಬಲಾಯಿತು. ದಾರಿಹೋಕರ ಸಹಾಯದಿಂದ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ಸೇರಿಸಲಾಯಿತು. ಆ ಯುವತಿಯ ದೇಹದ ಆಂತರಿಕ ಭಾಗಗಳಿಗೆ ತೀವ್ರ ಪಟ್ಟಾಗಿತ್ತು. ಹೀಗಾಗಿ, ವಿಶೇಷ ಚಿಕಿತ್ಸೆಗಾಗಿ ಆಕೆಯನ್ನು ಸಿಂಗಾಪುರದ ಮೌಂಟ್‌ ಎಲಿಜಬೆತ್‌ ಆಸ್ಪತ್ರೆಗೆ ವಿಮಾನದ ಮೂಲಕ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಡಿಸೆಂಬರ್‌ 29ರಂದು ಅಸುನೀಗಿದಳು.

ಈ ದಾರುಣ, ಅಮಾನವೀಯ ಘಟನೆಯ ವಿರುದ್ಧ ದೇಶಾದ್ಯಂತ ನಾನಾ ತೆರನಾದ ಪ್ರತಿಭಟನೆಗಳು ಜರುಗಿದವು. ಆಗ ದೆಹಲಿಯನ್ನು ಆಳುತ್ತಿದ್ದ ಕಾಂಗ್ರೆಸ್‌ ಸರ್ಕಾರ ತೀವ್ರ ಟೀಕೆಗಳನ್ನು ಎದುರಿಸಬೇಕಾಯಿತು. ನಂತರ ಕೇಂದ್ರದಲ್ಲಿ ಆಳುತ್ತಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 2013ರಲ್ಲಿ ಪರಿಷ್ಕೃತ ಅಪರಾಧಿ ಕಾನೂನನ್ನು ಜಾರಿ ಮಾಡಿತು. ಹಾಗೆಯೇ ಬಾಲಾಪರಾಧಿ ಕಾನೂನಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. ಇವೆರಡೂ ಕಾನೂನುಗಳಲ್ಲಿ ಅತ್ಯಾಚಾರಿಗಳಿಗೆ ಹೆಚ್ಚಿನ ಶಿಕ್ಷೆ ನೀಡುವ ವಿಧಿಗಳನ್ನು ಅಳವಡಿಸಲಾಯಿತು. ಇದು ನಿರ್ಭಯಾ ಪ್ರಕರಣದ ತಿರುಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಿರ್ಭಯಾ ಪ್ರಸಂಗಕ್ಕೂ ಧರ್ಮಸ್ಥಳದಲ್ಲಿ ಕಳೆದ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲದಿಂದ ಜರಗುತ್ತ ಬಂದಿರುವ ಕೆಲವು ಹೆಣ್ಣು ಮಕ್ಕಳ, ಮಹಿಳೆಯರ ಅತ್ಯಾಚಾರ, ಕೊಲೆ, ಅಕ್ರಮ ರೀತಿಯಲ್ಲಿ ಅಂತಹವರ ದೇಹಗಳ ಹೂಳುವಿಕೆ ಇತ್ಯಾದಿಗಳಿಗೂ ಏನು ಸಂಬಂಧವಿದೆ ಎಂಬ ಪ್ರಶ್ನೆ ಏಳಬಹುದು. ಒಂದು ಪ್ರಕರಣವನ್ನು ಗಮನಿಸೋಣ. ಅಕ್ಟೋಬರ್‌ 9, 2012ರಂದು ಧರ್ಮಸ್ಥಳದಲ್ಲಿ ಸೌಜನ್ಯ ಎಂಬ ಹದಿನೇಳು ವರ್ಷದ ವಿದ್ಯಾರ್ಥಿನಿ ಸಂಜೆ 4.30ರ ಸಮಯದಲ್ಲಿ ಮಣ್ಣಸಂಕ ಬಸ್ ಸ್ಟಾಪಿನಲ್ಲಿ ಇಳಿದು ಪಾಂಗಳದ ತನ್ನ ಮನೆಯ ಹಾದಿ ಹಿಡಿದಿದ್ದಳು. ಇಳಿಸಂಜೆ ಆರಾದರೂ ಮಗಳು ಮನೆ ತಲುಪಿಲ್ಲ. ಸಂಬಂಧಿಗಳು ಹುಡುಕಾಟ ನಡೆಸಿದರೂ ಏನೂ ಗೊತ್ತಾಗಲಿಲ್ಲ. ಮಾರನೆಯ ದಿನ ಆಕೆಯ ಮೃತ ದೇಹ ಪೊದೆಯೊಂದರ ಬಳಿ ದೊರಕಿತು. ಆಕೆಯ ಮೇಲೆ ಅತ್ಯಾಚಾರ ಎಸಗಿ, ಕೊಲ್ಲಲಾಗಿತ್ತು. ಆಕೆಯ ಮರ್ಮಾಂಗದಲ್ಲಿ ಸುಮಾರು ಆರು ಇಂಚು ಮರಳನ್ನು ತುಂಬಲಾಗಿತ್ತು ಎಂದು ಹೇಳಲಾಗುತ್ತದೆ. ಈ ಬರ್ಬರತೆಯ ಹಿಂದೆ ಇದ್ದ ದುರುದ್ದೇಶ: ಸಾಕ್ಷಿ ಸಿಗಬಾರದು ಎಂಬುದಾಗಿತ್ತು!

ನಿರ್ಭಯಾ ಪ್ರಕರಣ ಜರುಗಿದ ಸುಮಾರು ಎರಡು ತಿಂಗಳ ಹಿಂದೆ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಸಂಭವಿಸಿತ್ತು. ಸ್ಥಳೀಯ ಮೀಡಿಯಾ ಬಿಟ್ಟರೆ, ರಾಷ್ಟ್ರೀಯ ಮಟ್ಟದಲ್ಲಿ ಈ ಸುದ್ದಿ ಎಷ್ಟು ಪ್ರಸಾರವಾಯಿತು? ಆಗಿದ್ದರೂ, ತುಂಬ ಸಣ್ಣ ಮಟ್ಟದಲ್ಲಿ ಆಗಿರಬಹುದಾದ ಸಾಧ್ಯತೆಯೇ ಹೆಚ್ಚು. ಕರ್ನಾಟಕದಲ್ಲಿ ಧರ್ಮಸ್ಥಳ ಒಂದು ಸಣ್ಣ ಸ್ಥಳ. ಆದರೆ ತೀರ್ಥಕ್ಷೇತ್ರವಾಗಿರುವುದರಿಂದ ಖ್ಯಾತಿಯನ್ನು ಪಡೆದಿದೆ. ನಮ್ಮ ರಾಷ್ಟ್ರದ ರಾಜಧಾನಿಯಾದ ದೆಹಲಿಯಲ್ಲಿ ನಿರ್ಭಯಾ ಪ್ರಕರಣ ಜರುಗಿದ್ದರಿಂದ ಅದು ವ್ಯಾಪಕ ರೀತಿಯಲ್ಲಿ ಮೀಡಿಯಾದಲ್ಲಿ ಪ್ರಸಾರವಾಯಿತು! ಆದರೆ ಈ ಪರಿಯ ಮೀಡಿಯಾ ಸ್ಪಂದನ ನಮ್ಮ ರಾಷ್ಟ್ರದ, ದೆಹಲಿಯಿಂದ ತುಂಬ ದೂರವಿರುವ ಪ್ರದೇಶಗಳ ಘಟನೆಗಳಿಗೆ ಸಿಗುವುದಿಲ್ಲ ಎಂಬುದು ನಮ್ಮ ಮುಂದಿರುವ ಕಟು ವಾಸ್ತವ!

ಸೌಜನ್ಯ ಪ್ರಕರಣ ಸಂಬಂಧಿಸಿದಂತೆ ತಕ್ಷಣ ನಿರ್ಭಯಾ ಪ್ರಕರಣದ ರೀತಿಯಲ್ಲಿ ಗುರುತಿಸುವಂತಹ ಪ್ರತಿಭಟನೆಗಳು ಜರುಗಲಿಲ್ಲ ಎಂದರೆ ತಪ್ಪಾಗುವುದಿಲ್ಲ. ಆದರೆ ನಂತರ ಮಹಿಳಾ ಮತ್ತು ಸ್ಥಳೀಯ ಕೆಲವು ಸಂಘಟನೆಗಳು ಮಧ್ಯಪ್ರವೇಶ ಮಾಡಿ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡವು. ಈ ಕೇಸ್ಗೆ ಸಂಬಂಧಿಸಿದಂತೆ ಮೊದಲು ಬೆಳ್ತಂಗಡಿ ಪೊಲೀಸ್‌, ಸಿಐಡಿ, ಸಿಬಿಐ ತನಿಖೆಯನ್ನು ನಡೆಸಿದವು. ಸಿಬಿಐ ಸಂತೋಷ್‌ ರಾವ್‌ ಎಂಬ ವ್ಯಕ್ತಿಯನ್ನು ಆರೋಪಿ ಎಂದು ಹೆಸರಿಸಿತು. ಆದರೆ ನಂತರ ವಿಶೇಷ ಸಿಬಿಐ ಕೋರ್ಟ್‌ ಜೂನ್‌ 2023ರಲ್ಲಿ ನಿರ್ದೋಷಿ ಎಂಬ ತೀರ್ಪನ್ನು ನೀಡಿತು! ಈ ಪ್ರಕರಣ ಕುರಿತಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಅಕ್ವಿಟಲ್‌ ಕಮಿಟಿ ರಚನೆಯ ಪ್ರಸ್ತಾಪ ಕೂಡ ತೀರ್ಪಿನಲ್ಲಿದೆ. ಆದರೆ ರಾಜ್ಯ ಸರ್ಕಾರ ಈ ವಿಷಯದಲ್ಲಿ ಏನು ಕ್ರಮವನ್ನು ತೆಗೆದುಕೊಂಡಿದೆ ಎಂಬುದು ಸಾರ್ವಜನಿಕರಿಗೆ ತಿಳಿದು ಬಂದಿಲ್ಲ!

ಸೌಜನ್ಯ ಮಾತ್ರವಲ್ಲದೇ, ಧರ್ಮಸ್ಥಳದಲ್ಲಿ ವೇದವಲ್ಲಿ(1979), ಪದ್ಮಲತಾ(1986), ಆನೆ ಮಾವುತ ನಾರಾಯಣ ಮತ್ತು ಆತನ ತಂಗಿ ಯಮುನಾ(2012)ರ ಅತ್ಯಾಚಾರ/ಕೊಲೆಗಳು ಜರುಗಿವೆ. ಇಷ್ಟು ಮಾತ್ರವಲ್ಲ, ಇನ್ನು ಅನೇಕ ಇಂತಹ ಹೃದಯವಿದ್ರಾವಕ ಪ್ರಕರಣಗಳು ಜರುಗಿವೆ. ಒಬ್ಬ ಮುಸುಕುಧಾರಿ ವ್ಯಕ್ತಿ ತಾನು ಧರ್ಮಸ್ಥಳದಲ್ಲಿ ನೂರಾರು ಹೆಣ್ಣುಮಕ್ಕಳ, ಮಹಿಳೆಯರ ಶವಗಳನ್ನು ಹೂತಿದ್ದೇನೆ ಎಂದು ಹೇಳಿ ಒಂದು ತಲೆ ಬುರುಡೆಯನ್ನು ಪೊಲೀಸರಿಗೆ ನೀಡಿದ ಹಿನ್ನೆಲೆಯಲ್ಲಿ ಜುಲೈ 14ರಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಧರ್ಮಸ್ಥಳ ಪ್ರದೇಶದಲ್ಲಿ ಜರುಗಿವೆ ಎನ್ನಲಾಗುವ ಸಂಶಯಾಸ್ಪದ ಮಹಿಳೆಯರ ಮರಣಗಳ ಬಗೆಗೆ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂಬ ಒಂದು ಪತ್ರವನ್ನು ಮುಖ್ಯಮಂತ್ರಿಗೆ ಬರೆದರು. ನಂತರ ಜುಲೈ 19ರಂದು ರಾಜ್ಯ ಸರ್ಕಾರ SITಯನ್ನು ರಚಿಸಿತು. ನಂತರದ ಬೆಳವಣಿಗೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗಳಿಗೆ ವಿಷಯ-ವಿನಿಮಯಗಳಿಗೆ ಈಡಾಗಿವೆ.

ಧರ್ಮಸ್ಥಳದಲ್ಲಿ ಕಳೆದ ಸುಮಾರು ಐದು ದಶಕಗಳಿಂದ ಸಂಭವಿಸಿರುವ ಮಹಿಳೆಯರ, ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ, ಅಕ್ರಮ ಹೂಳುವಿಕೆ, ಕಾಣೆಯಾಗುವಿಕೆ ಇತ್ಯಾದಿ ವಿಷಯಗಳ ಬಗೆಗೆ ಸಂತ್ರಸ್ಥರ ಕುಟುಂಬಗಳಿಗೆ ನ್ಯಾಯವನ್ನು ಒದಗಿಸಲು, ಮಹಿಳೆಯರ ಭದ್ರತೆ, ಘನತೆಯ ಬದುಕು ಮತ್ತು ಕಾನೂನುಗಳ ರಕ್ಷಣೆಯನ್ನು ಆಗ್ರಹಿಸಲು ಕೊಂದವರುಯಾರು ಎಂಬ ಸಂಘಟನೆ ಡಿಸೆಂಬರ್‌ 16ರಂದು ಬೆಳ್ತಂಗಡಿಯಲ್ಲಿ ಮಹಿಳಾ ನ್ಯಾಯಸಮಾವೇಶ ಮತ್ತು ಜಾಥಾ ಏರ್ಪಡಿಸಿದೆ. ಮಹಿಳೆಯರ ಹಕ್ಕುಗಳು ಹಾಗೂ ಆಶೋತ್ತರಗಳಿಗೆ ದುಡಿಯುತ್ತಿರುವ ಅನೇಕ ಸಂಘಗಳು, ಸಂಸ್ಥೆಗಳು ಒಂದಾಗಿ ಸೇರಿ ಸಂಯುಕ್ತ ಹೋರಾಟವನ್ನು ಹಮ್ಮಿಕೊಂಡಿದೆ. ಇದು ಅನೇಕ ತೆರನಾದ ಕಾರ್ಯಕ್ರಮಗಳನ್ನು ರೂಪಿಸುತ್ತ ಬಂದಿದೆ.

ಈ ಸಂದರ್ಭದಲ್ಲಿ, ಕೊಂದವರುಯಾರು ಸಂಘಟನೆ ಮಂಡಿಸಿರುವ ಪ್ರಶ್ನೆಗಳು ಹೀಗಿವೆ:

  • ಧರ್ಮಸ್ಥಳದಲ್ಲಿ ಜರುಗಿರುವ ಮಹಿಳೆಯರ ಮೇಲಿನ ಅನ್ಯಾಯದ ವಿರುದ್ಧ ಈಗಲಾದರೂ ನಾವೆಲ್ಲ ಮೌನ ಮುರಿಯಬೇಕಲ್ಲವೇ?
  • ಪೊಲೀಸರು ಅಪರಾಧಿಗಳನ್ನು ಪತ್ತೆಹಚ್ಚದೆ ಪ್ರಕರಣಗಳನ್ನು ಮುಚ್ಚಿಹಾಕಿರುವುದು ಏಕೆ?
  • ಮಹಿಳೆಯರ ಮೇಲೆ ಅತ್ಯಾಚಾರವಾದಾಗ, ಪೊಲೀಸರು ವೈದ್ಯಕೀಯ ವರದಿಯ ಸಾಕ್ಷ್ಯವನ್ನು ರಕ್ಷಿಸಲಿಲ್ಲವೇಕೆ?
  • ಈ ಸಾವುಗಳಿಗೆ ಕಾರಣ ಯಾರು? ಆರೋಪಿಗಳ ವಿಚಾರಣೆ ಯಾಕಿಲ್ಲ? ಅಪರಾಧಿಗಳನ್ನು ನಮ್ಮ ಪೊಲೀಸ್‌ ಇಲಾಖೆ ಪತ್ತೆಹಚ್ಚಲಾರದೇ? ಇಡೀ ಪೊಲೀಸ್‌ ವ್ಯವಸ್ಥೆಗೆ ಇದರಿಂದ ಕಪ್ಪುಚುಕ್ಕೆಯಾಗಿಲ್ಲವೇ?
  • ಇದರ ಹಿಂದೆ ಯಾವ ಕಾಣದ ಶಕ್ತಿಗಳ ಕೈವಾಡವಿದೆ?
  • ನೇತ್ರಾವತಿ ಸ್ನಾನಘಟ್ಟದಲ್ಲಿ ಅಸಹಜ ಸಾವುಗಳಾಗುತ್ತವೆ ಎಂದಾಗ, ಅಲ್ಲಿ ಇಲ್ಲಿಯವರೆಗೆ ಪೊಲೀಸ್‌ ಭದ್ರತೆ ಏಕಿಲ್ಲ?
  • ಬೇರೆಡೆ ಹೋಲಿಸಿದಾಗ, ಬೆಳ್ತಂಗಡಿಯ ಪೊಲೀಸ್‌ ಠಾಣೆಯ ಧರ್ಮಸ್ಥಳದ ವ್ಯಾಪ್ತಿಯಲ್ಲೇ ಆತ್ಮಹತ್ಯೆಗಳು (2001-2012) ದಾಖಲಾಗಿರುವುದು ಏಕೆ?
  • ಹೆಣ್ಣುಮಕ್ಕಳ ಜೀವ ಎಂದರೆ ನಮ್ಮ ವ್ಯವಸ್ಥೆಗೆ ಇಷ್ಟೊಂದು ಅಗ್ಗವೇ? ಅಮಾಯಕರ ಸಾವಿಗೆ ನ್ಯಾಯ ಬೇಡವೇ?
  • ಹೆಣ್ಣುಮಕ್ಕಳ ಸಾವುಗಳನ್ನು ರಾಜಕೀಯಕ್ಕೆ ಗುರಿಮಾಡುವುದು ಏಕೆ?
  • ಮನಷತ್ಯವಿಲ್ಲದೆ ಹೆಣ್ಣು ಮಕ್ಕಳನ್ನು ಕ್ರೂರವಾಗಿ ಹಿಂಸಿಸಿ ಕೊಂದವರು ಯಾರು?
  • ಈ ಎಲ್ಲ ಸಾವುಗಳಿಗೆ ಕಾರಣ ಯಾರು ಎಂದು ನ್ಯಾಯ ಕೇಳಿದವರು ಧರ್ಮದ್ರೋಹಿಗಳೇ?
  • ದೂರುದಾರರನ್ನು, ಸಾಕ್ಷಿದಾರರನ್ನು ಬೆದರಿಸುವ ಪೊಲೀಸರು SITಯಲ್ಲಿದ್ದರೇ ನೊಂದವರಿಗೆ ನ್ಯಾಯ ಸಿಗುವದೇ?
  • SITಯಲ್ಲಿ ಯಾರದೇ, ಯಾವುದೇ ಬಗೆಯ ಒತ್ತಡಕ್ಕೆ ಮಣಿಯದ ಕರ್ತವ್ಯನಿಷ್ಠ, ಪ್ರಾಮಾಣಿಕ ಪೊಲೀಸರು ಮಾತ್ರ ಇರಬೇಕಲ್ಲವೇ?
  • ಯಾವ ಬಲಾಢ್ಯರೂ SIT ಮೇಲೆ ಪ್ರಭಾವವನ್ನು ಬೀರದಂತೆ ನಿಷ್ಪಕ್ಷಪಾತ ತನಿಖೆ ಆಗಬೇಕಲ್ಲವೇ?
  • ಸೌಜನ್ಯ ಪ್ರಕರಣದಲ್ಲಿ ಸಿಬಿಐ ಕೋರ್ಟಿನ ಆದೇಶದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕಲ್ಲವೇ?

ಧರ್ಮಸ್ಥಳದ ಚರಿತ್ರೆಯ ಈ ಕರಾಳ ಭಾಗ, ನಮ್ಮ ಸಮಾಜ ಇನ್ನೂ ಅರೆ-ಊಳಿಗಮಾನ್ಯ ವ್ಯವಸ್ಥೆಯನ್ನು ಢಾಳಾಗಿಯೇ ಉಳಿಸಿಕೊಂಡಿದೆ ಎಂಬುದನ್ನು ತೋರಿಸುತ್ತದೆ. “ಮಹಿಳೆಯರಿಗೆ ದೇವಿ ಪಟ್ಟ ಕೊಟ್ಟಿದೆ ನಮ್ಮ ಸಂಸ್ಕೃತಿ” ಎಂದು ಬೀಗುವ ಅನೇಕರು ಇದ್ದಾರೆ. ಅಂತಹವರು ಒಂದು ಪ್ರಸಿದ್ಧ ಮತಧಾರ್ಮಿಕ ಕ್ಷೇತ್ರದಲ್ಲ ಹೆಣ್ಣು ಮಕ್ಕಳ, ಮಹಿಳೆಯರ ಮೇಲೆ ಆಗಿರುವ ಬೀಭತ್ಸ ಕ್ರೌರ್ಯವನ್ನು ಖಂಡಿಸದಿರುವುದೇ ಜಾಸ್ತಿ. ಇದರ ಬದಲು, ಆ ಕ್ಷೇತ್ರಕ್ಕೆ ಕಪ್ಪು ಮಸಿಬಳಿದು, ಒಂದು ಬಹುಸಂಖ್ಯಾತ ಮತವನ್ನು ಆಕ್ರಮಣಗಳಿಗೆ ಗುರಿಮಾಡಲಾಗುತ್ತಿದೆ ಎಂದು ಅವರು ಹುಯಿಲೆಬ್ಬಿಸುತ್ತಾರೆ. ಇದರ ಹಿಂದೆ ಮತ, ರಾಜಕೀಯ ಮತ್ತು ಮಾಧ್ಯಮ ರಂಗಗಳ ಪಟ್ಟಭದ್ರ ಹಿತಾಸಕ್ತಿಗಳ ಪಾತ್ರವಿದೆ. ಇನ್ನೊಂದು ವಿಷಯ: ಅತ್ಯಾಚಾರ, ಕೊಲೆಗಳಿಗೆ ಈಡಾದ ಹೆಣ್ಚು ಮಕ್ಕಳು, ಮಹಿಳೆಯರು ಸೇರಿದ ಜಾತಿಗಳ ಯಾವ ಸಂಘಟನೆಗಳು ಸಂತ್ರಸ್ಥ ಕುಟುಂಬದವರ ಪರವಾಗಿ ನಿಂತಿಲ್ಲ!

ಧರ್ಮಸ್ಥಳದಲ್ಲಿ ಅತ್ಯಾಚಾರ, ಕೊಲೆಯಾದ ಮಹಿಳೆಯರು, ಹೆಣ್ಣು ಮಕ್ಕಳ ಕುಟುಂಬಸ್ಥರಿಗೆ ನ್ಯಾಯ ದೊರಕಬೇಕು. ಹೀಗೆ ಆಗಬೇಕೆಂದು ಆಗ್ರಹಿಸಿ, ಸೂಕ್ತ ರೀತಿಯಲ್ಲಿ ಸ್ಪಂದಿಸುವುದು ಎಲ್ಲ ಪ್ರಜ್ಞಾವಂತ ಪ್ರಜೆಗಳ ಜವಾಬ್ದಾರಿಯಾಗಿದೆ.

WhatsApp Image 2025 11 17 at 4.18.26 PM
ಮ ಶ್ರೀ ಮುರಳಿ ಕೃಷ್ಣ
+ posts

ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...