5 ಸಾವಿರ ಹೂಡಿಕೆ ಮಾಡಿ ಕೋಟಿ ಗಳಿಸಲು ಎಷ್ಟು ಸಮಯ ಬೇಕು ಗೊತ್ತೇ?

Date:

ಅತ್ಯಂತ ಕಡಿಮೆ ಆದಾಯ, ಕಡಿಮೆ ಉಳಿತಾಯ, ತೀರ ಸಣ್ಣ ಸಂಬಳ ತೆಗೆದುಕೊಳ್ಳುವ ಅನೇಕರು ಕೋಟಿ ಹಣ ಗಳಿಸಬಹುದೇ ಎಂಬ ಪ್ರಶ್ನೆಯು ಎಲ್ಲರಲ್ಲೂ ಅಸಾಧ್ಯದ ಮನೋಭಾವವನ್ನು ಉಂಟುಮಾಡಬಹದು. ಆದರೆ ಅದು ಅಸಾಧ್ಯವೇನೂ ಅಲ್ಲ. ಖಂಡಿತವಾಗಿಯೂ ಸಾಧ್ಯ!

Systematic investment plan(SIP) ಮೂಲಕ ಮ್ಯೂಚುಯಲ್‌ ಫಂಡ್‌ನಲ್ಲಿ ಹೂಡಿಕೆ ಪ್ರಾರಂಭಿಸಿದ ಸಾವಿರಾರು ಜನರು ಕಂಪೌಂಡ್‌ ಇಂಟ್ರೆಸ್ಟ್‌ ಮೂಲಕ ಕೋಟಿಗೂ ಅಧಿಕ ಹಣವನ್ನು ಗಳಿಸಿದ್ದಾರೆ. ಇಂತಹ ಸಣ್ಣ ಉಳಿತಾಯದಾರರೂ ದೀರ್ಘಾವಧಿ ಹೂಡಿಕೆ ಮಾಡಿ ತಮ್ಮ ಗುರಿ ತಲುಪುವ ಉತ್ತಮ ವ್ಯವಸ್ಥೆಯನ್ನು SIPಯಲ್ಲಿ ಕಂಡುಕೊಂಡಿದ್ದಾರೆ.

ತಿಂಗಳಿಗೆ ₹5,000 ಹೂಡಿಕೆ ಮಾಡುತ್ತ ವಾರ್ಷಿಕ 12% ಕನಿಷ್ಟ ರಿಟರ್ನ್‌ ಗಳಿಸಿದರೂ 27 ವರ್ಷಗಳಲ್ಲಿ 1.08 ಕೋಟಿ ಹಣ ಗಳಿಸಬಹುದಾಗಿದೆ. ಇದೇ ರೀತಿಯಲ್ಲಿ ತಿಂಗಳಿಗೆ ₹10,000 ಹೂಡಿಕೆ ಮಾಡುತ್ತ ಬಂದರೆ 12% ರಿಟರ್ನ್‌ನಂತೆಯೇ ಒಂದು ಕೋಟಿ ಗಳಿಸಲು 21 ವರ್ಷಗಳನ್ನು ತೆಗೆದುಕೊಳ್ಳುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಮಾದರಿಯಲ್ಲೇ ಇನ್ನೂ ಹೆಚ್ಚು ಹೂಡಿಕೆ ಮಾಡುವ ಸಾಮರ್ಥ್ಯವಿರುವವರು ತಿಂಗಳಿಗೆ ₹15,000 ಹೂಡಿಕೆ ಮಾಡುವುದಾದರೇ ಕೇವಲ 18ವರ್ಷಗಳಲ್ಲಿ 1.06 ಕೋಟಿ ರೂ.ಗಳನ್ನು ಗಳಿಸಬಹುದು. ತಿಂಗಳಿಗೆ ₹20,000ದಂತೆ ಹೂಡಿಕೆ ಮಾಡಿದಲ್ಲಿ ಕೇವಲ 16 ವರ್ಷಗಳಲ್ಲಿ 1.09 ಕೋಟಿಯನ್ನು ಗಳಿಸಬಹುದು.

ವರ್ಷಕ್ಕೆ 15% ಗಿಂತಲೂ ಹೆಚ್ಚು ರಿಟರ್ನ್ಸ್‌ ಕೊಟ್ಟಿರುವ ಮ್ಯೂಚುವಲ್‌ ಫಂಡ್‌ಗಳು ಇವೆ. ಆದರೆ ಕನಿಷ್ಟ 12%ರಂತೆ ಈ ಕೆಳಗಿನ ಕೋಷ್ಟಕದಲ್ಲಿ ಲೆಕ್ಕಾಚಾರವನ್ನು ನೋಡಬಹುದು.

ಮಾಸಿಕ ಹೂಡಿಕೆಹೂಡಿಕೆ ಮಾಡಿದ ವರ್ಷಗಳುಹೂಡಿಕೆ ಮಾಡಿದ ಒಟ್ಟು ಮೊತ್ತಹೂಡಿಕೆಯಿಂದ ಬಂದ ರಿಟರ್ನ್ಸ್‌ಒಟ್ಟು ಮೊತ್ತ
5,0002716,20,00091,91,5651,08,11,565
10,0002125,20,00079,10,0671,04,30,067
15,0001832,40,00074,35,9291,06,75,929
20,0001638,40,00070,76,1931,09,16,193
25,0001442,00,00061,38,5021,03,38,502
30,0001346,80,00060,55,0071,07,35,007

ಸೂಚನೆ: ಸ್ಟಾಕ್‌ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವುದು ಮತ್ತು ಟ್ರೇಡಿಂಗ್‌ ಮಾಡುವುದನ್ನು ಹಣಕಾಸು ತಜ್ಞರ ಸಲಹೆಯಂತೆ ಮಾಡಿದರೆ ಉತ್ತಮ. ಇಲ್ಲಿನ ಮಾಹಿತಿಯು ಹೂಡಿಕೆಗೆ ಸಂಬಂಧಿಸಿದ ಮಾಹಿತಿಗಾಗಿ ಮಾತ್ರ.

rajanikant
ರಜನಿಕಾಂತ ಚಟ್ಟೇನಹಳ್ಳಿ
+ posts

ಮಂಡ್ಯ ಜಿಲ್ಲೆಯ ಚಟ್ಟೇನಹಳ್ಳಿಯವರಾದ ರಜನಿಕಾಂತ ಅವರು ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡವರು.

ಪೋಸ್ಟ್ ಹಂಚಿಕೊಳ್ಳಿ:

ರಜನಿಕಾಂತ ಚಟ್ಟೇನಹಳ್ಳಿ
ರಜನಿಕಾಂತ ಚಟ್ಟೇನಹಳ್ಳಿ
ಮಂಡ್ಯ ಜಿಲ್ಲೆಯ ಚಟ್ಟೇನಹಳ್ಳಿಯವರಾದ ರಜನಿಕಾಂತ ಅವರು ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡವರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿನ್ನದ ಅಸಾಮಾನ್ಯ ಬೆಲೆ ಏರಿಕೆ; ಇದು ದರ ಇಳಿಕೆಯ ಸೂಚನೆಯೇ?

2026ರ ಜನವರಿ 29-30ರ ಹೊತ್ತಿಗೆ, ಅಮೆರಿಕದ ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು...

ಭಾರತದ ಮೇಲಿನ ಅಮೆರಿಕ ಸುಂಕ ಕಡಿತ; 18%ಗೆ ಇಳಿಕೆ; ಮತ್ತೆ ಮೇಲುಗೈ ಸಾಧಿಸಿದ ಟ್ರಂಪ್

ಭಾರತವು ರಷ್ಯಾದಿಂದ ತೈಲ ಆಮದನ್ನು ಕಡಿಮೆ ಮಾಡಿದ ಬೆನ್ನಲ್ಲೇ, ಭಾರತದ ಮೇಲೆ...

ಸುದ್ದಿ ವಿವರ | ಆರ್ಥಿಕ ಸಮೀಕ್ಷೆ ಎಂದರೇನು ಮತ್ತು ಅದು ಏಕೆ ಮುಖ್ಯ?

ಸಂಸತ್ತಿನಲ್ಲಿ ಜನವರಿ 29ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು...