ಚಿನ್ನದ ಬೆಲೆ ವಿಪರೀತ ಏರಿಕೆ! ಬಡವರ ಪಾಲಿಗೆ ಬಂಗಾರ ಮರೀಚಿಕೆ

Date:

ದೇಶದಲ್ಲೇ ಪ್ರಥಮಬಾರಿಗೆ ಚಿನ್ನವು ವಿಪರೀತ ಏರಿಕೆ ಕಂಡಿದ್ದು, ಬಂಗಾರಪ್ರಿಯರ ನಿದ್ದೆಗೆಡಿಸಿದೆ. ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ದೇಶದಲ್ಲೇ ಮೊದಲು ₹86 ಸಾವಿರ ಗಡಿ ದಾಟಿ, ಇತಿಹಾಸದಲ್ಲೇ ಏರಿಕೆ ಕಂಡಿರದ ಮಟ್ಟ ತಲುಪಿದೆ. ವರ್ಷದ ಮೊದಲ ವಾರದಲ್ಲಿ 24K ಚಿನ್ನವು ಪ್ರತಿ 10ಗ್ರಾಂಗೆ ₹81,170 ಇತ್ತು. ಆದರೆ ಇಂದು ₹86,240ರ ಗಡಿದಾಟಿ ಗ್ರಾಹಕರಲ್ಲಿ ನಿರಾಸೆ ಮೂಡಿಸಿದೆ.

ಪ್ರತಿ ಗ್ರಾಂಗೆ ಕೇವಲ ಒಂದು ವಾರದಲ್ಲಿ 22k ಚಿನ್ನವು ₹435ರೂ ಏರಿಕೆಯಾದರೆ, ಅಪರಂಜಿ ಚಿನ್ನವು ಎರಡೇ ದಿನಗಳಲ್ಲಿ ₹220ಕ್ಕೆ ಏರಿಕೆಯಾಗಿದೆ. ಈಗಾಗಲೇ ಕಳೆದ ಆರು ತಿಂಗಳಿನಿಂದ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಚಿನ್ನದ ಬೆಲೆಯು ನಿರಾಸೆ ಮೂಡಿಸಿತ್ತು. ಆದರೆ ಇಂದಿಗೂ ನಿರಾಸೆ ಮುಂದುವರೆದಿದೆ.

ಕಳೆದ ಒಂದು ವರ್ಷಕ್ಕೆ ಹೋಲಿಸಿದರೆ ಅಪರಂಜಿ ಚಿನ್ನವು ಬರೋಬ್ಬರಿ ₹2,324 ಹೆಚ್ಚಾಗಿದೆ. ಚಿನ್ನದ ಮೇಲಿನ ಹೂಡಿಕೆದಾರರಿಗೆ ಒಂದು ವರ್ಷದಲ್ಲಿ ಸುಮಾರು ಶೇ.31ರಷ್ಟು ಗಳಿಕೆ ತರಿಸಿದೆ. ಆದರೆ ಈ ರೀತಿಯ ದಿಢೀರ್‌ ಏರಿಕೆಗೆ ಷೇರುಪೇಟೆಯ ವಿಪರೀತ ಇಳಿಕೆ ಅಥವಾ ತಲ್ಲಣಗಳೇ ಕಾರಣ ಎಂಬುದನ್ನು ಗಮನಿಸಬೇಕಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕಳೆದ ಆರು ತಿಂಗಳಿಂದ ಸುಮಾರು ಶೇ.10 ಕುಸಿತ ಕಂಡಿದೆ. ಇದಕ್ಕೆ ಮುಖ್ಯ ಕಾರಣ ವಿದೇಶಿ ಹೂಡಿಕೆದಾರರ ಹೊರ ಹರಿವು. ಚೀನಾದ ಷೇರು ಮಾರುಕಟ್ಟೆಯು ಹೂಡಿಕೆಗೆದಾರರಿಗೆ ಹೆಚ್ಚು ಆಸಕ್ತಿಯಿರುವ ಕಾರಣಕ್ಕೆ, ಭಾರತೀಯ ಮಾರುಕಟ್ಟೆಯಲ್ಲಿ ಈ ರೀತಿಯ ಗಣನೀಯ ಇಳಿಕೆ ಏರ್ಪಟ್ಟಿದೆ. ಹಾಗೂ ಹೂಡಿಕೆದಾರರು ಇಂತಹ ಸಮಯದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿ ತಮ್ಮ ಬಂಡವಾಳವನ್ನು ಸ್ಥಿರತೆ ಕಂಡುಕೊಳ್ಳುತ್ತಾರೆ ಎಂಬುದು ಷೇರು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ.

ಈ ಸುದ್ದಿ ಓದಿದ್ದೀರಾ? ದೆಹಲಿ ವಿಧಾನಸಭೆ ಚುನಾವಣೆ | ಬಿಜೆಪಿಗೆ ಬಹುಮತ ಎನ್ನುತ್ತೆ ಚುನಾವಣೋತ್ತರ ಸಮೀಕ್ಷೆ

ಒಟ್ಟಿನಲ್ಲಿ ಭಾರತೀಯ ಷೇರುಪೇಟೆಯಲ್ಲಿ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಗಂಭೀರ ತಲ್ಲಣಗಳು ಕಂಡುಬಂದಾಗ ಅಥವಾ ಕುಸಿತ ಕಂಡಾಗ ಅದನ್ನು ಸರಿದೂಗಿಸಲು ಚಿನ್ನವು ಏರಿಕೆಯಾಗುತ್ತದೆ. ಹಾಗಾಗಿ ಷೇರು ಮಾರುಕಟ್ಟೆಯು ಯಾವಾಗ ಸುಧಾರಿಸುತ್ತದೆ ಎಂಬುದನ್ನು ಎದುರು ನೋಡಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿನ್ನದ ಅಸಾಮಾನ್ಯ ಬೆಲೆ ಏರಿಕೆ; ಇದು ದರ ಇಳಿಕೆಯ ಸೂಚನೆಯೇ?

2026ರ ಜನವರಿ 29-30ರ ಹೊತ್ತಿಗೆ, ಅಮೆರಿಕದ ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು...

ಭಾರತದ ಮೇಲಿನ ಅಮೆರಿಕ ಸುಂಕ ಕಡಿತ; 18%ಗೆ ಇಳಿಕೆ; ಮತ್ತೆ ಮೇಲುಗೈ ಸಾಧಿಸಿದ ಟ್ರಂಪ್

ಭಾರತವು ರಷ್ಯಾದಿಂದ ತೈಲ ಆಮದನ್ನು ಕಡಿಮೆ ಮಾಡಿದ ಬೆನ್ನಲ್ಲೇ, ಭಾರತದ ಮೇಲೆ...

ಸುದ್ದಿ ವಿವರ | ಆರ್ಥಿಕ ಸಮೀಕ್ಷೆ ಎಂದರೇನು ಮತ್ತು ಅದು ಏಕೆ ಮುಖ್ಯ?

ಸಂಸತ್ತಿನಲ್ಲಿ ಜನವರಿ 29ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು...