ಐಸಿಐಸಿಐ ಬ್ಯಾಂಕ್ ಭಾರೀ ದುಬಾರಿ; ಉಳಿತಾಯ ಖಾತೆಯ ಕನಿಷ್ಠ ಬ್ಯಾಲೆನ್ಸ್‌ 50,000 ರೂ.ಗೆ ಏರಿಕೆ

Date:

ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್‌ ಈಗ ಗ್ರಾಹಕರಿಗೆ, ಅದರಲ್ಲೂ ಉಳಿತಾಯ ಖಾತೆ ಹೊಂದಿರುವವರಿಗೆ ಭಾರೀ ದುಬಾರಿಯಾಗಿದೆ. ತನ್ನ ಎಲ್ಲ ಶಾಖೆಗಳಲ್ಲಿ ಉಳಿತಾಯ ಖಾತೆಗಳಲ್ಲಿ ಗ್ರಾಹಕರು ಹೊಂದಿರಬೇಕಿದ್ದ ಕನಿಷ್ಠ ಬ್ಯಾಲೆನ್ಸ್‌ ಮೊತ್ತವನ್ನು ಏರಿಕೆ ಮಾಡಿದೆ.

ಶನಿವಾರ, ಅಧಿಕೃತ ಪ್ರಕಟಣೆ ಹೊರಡಿಸಿರುವ ಬ್ಯಾಂಕ್‌, ಈ ನೂತನ ನಿಯಮವು ಆಗಸ್ಟ್‌ 1ರಿಂದಲೇ ಜಾರಿಗೆ ಬಂದಿದೆ ಎಂದು ತಿಳಿಸಿದೆ.

ಮೆಟ್ರೊ ಮತ್ತು ನಗರ ಪ್ರದೇಶಗಳ ಶಾಖೆಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು ತಮ್ಮ ಖಾತೆಗಳಲ್ಲಿ ಕನಿಷ್ಠ 50,000 ರೂ. ಬ್ಯಾಲೆನ್ಸ್‌ ಹೊಂದಿರಬೇಕು ಎಂದು ತಿಳಿಸಿದೆ. ಈ ಹಿಂದೆ, ಕನಿಷ್ಠ ಬ್ಯಾಲೆನ್ಸ್‌ ಪ್ರಮಾಣವು 10,000 ರೂ. ಇತ್ತು. ಇನ್ನು, ಅರೆ-ನಗರ ಪ್ರದೇಶಗಳಲ್ಲಿ ಕನಿಷ್ಠ ಬ್ಯಾಲೆನ್ಸ್‌ ಮೊತ್ತವು 5,000 ರೂ. ಇದ್ದದ್ದು, 25,000 ರೂ.ಗೆ ಹೆಚ್ಚಿಸಲಾಗಿದೆ. ಅಂತೆಯೇ, ಗ್ರಾಮೀಣ ಭಾಗದ ಶಾಖೆಗಳಲ್ಲಿದ್ದ ಕನಿಷ್ಠ ಬ್ಯಾಲೆನ್ಸ್‌ ಮಿತಿಯು 2,500 ರೂ.ನಿಂದ 10,000 ರೂ.ಗೆ ಏರಿಕೆ ಮಾಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿದ್ದರೆ ಮಾಸಿಕ 500 ರೂ. ದಂಡ ಅಥವಾ ಅಗತ್ಯವಿರುವ ಬ್ಯಾಲೆನ್ಸ್‌ ಮತ್ತು ನಿಜವಾದ ಬ್ಯಾಲೆನ್ಸ್ ನಡುವಿನ ಕೊರತೆಯ ಮೊತ್ತದಲ್ಲಿ 6% ಮೊತ್ತವನ್ನು ದಂಡವಾಗಿ ಕಡಿತ ಮಾಡಿಕೊಳ್ಳಲಾಗುತ್ತದೆ ಎಂದು ಸೂಚಿಸಿದೆ.

ಐಸಿಐಸಿಐ ಬ್ಯಾಂಕ್‌ ಜಾರಿಗೊಳಿಸಿರುವ ಹೊಸ ನಿಮಯವು ಗ್ರಾಮೀಣ, ಅರೆನಗರ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಹುಸಂಖ್ಯಾತರ ಕೃಷಿಕರು, ಕೂಲಿ ಕಾರ್ಮಿಕರು ಹಾಗೂ ಕಡಿಮೆ ವೇತನ ಪಡೆಯುತ್ತಿರುವ ಉದ್ಯೋಗಿಗಳ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಗಳಿವೆ. ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವವರಲ್ಲಿ ಹೆಚ್ಚಿನವರು ಕಾರ್ಮಿಕರು ಮತ್ತು ಕೂಲಿ ಕಾರ್ಮಿಕರೇ ಆಗಿದ್ದಾರೆ. ಇವರೆಲ್ಲರೂ, ಮಾಸಿಕ 50,000 ರೂ. ದುಡಿಮೆ ಮಾಡುವುದೇ ಸಾಧ್ಯವಿಲ್ಲ. ಹೀಗಿರುವಾಗ, ಕನಿಷ್ಠ ಬ್ಯಾಲೆನ್ಸ್‌ 50,000 ರೂ. ನಿರ್ವಹಿಸುವುದು ಕಷ್ಟ ಸಾಧ್ಯ. ಹೀಗಾಗಿ, ಹಲವಾರು ಗ್ರಾಹಕರು ಐಸಿಐಸಿಐ ಬ್ಯಾಂಕ್‌ನಿಂದ ವಿಮುಖರಾಗುವ ಸಾಧ್ಯತೆಯೂ ಇದೆ.

ಆದಾಗ್ಯೂ, ಕಡಿಮೆ ಆದಾಯ ಹೊಂದಿರುವ ಬಡಜನರನ್ನು ತನ್ನ ಶಾಖೆಗಳಿಂದ ಹೊರಗಿಡುವ ಉದ್ದೇಶದಿಂದಲೇ ಈ ಕ್ರಮವನ್ನು ಬ್ಯಾಂಕ್‌ ತೆಗೆದುಕೊಂಡಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ದೇಶದ ಎರಡನೇ ಅತಿದೊಡ್ಡ ಖಾಸಗಿ ಬ್ಯಾಂಕ್‌ ಆಗಿರುವ ಐಸಿಐಸಿಐನ ಈ ಕ್ರಮವು ವ್ಯಾಪಕ ಟೀಕೆಗೂ ಗುರಿಯಾಗಿದೆ. ಆದಾಗ್ಯೂ, ಬ್ಯಾಂಕ್ ತನ್ನ ಕ್ರಮ ಮತ್ತು ಎದುರಾಗಿರುವ ಟೀಕೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿನ್ನದ ಅಸಾಮಾನ್ಯ ಬೆಲೆ ಏರಿಕೆ; ಇದು ದರ ಇಳಿಕೆಯ ಸೂಚನೆಯೇ?

2026ರ ಜನವರಿ 29-30ರ ಹೊತ್ತಿಗೆ, ಅಮೆರಿಕದ ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು...

ಭಾರತದ ಮೇಲಿನ ಅಮೆರಿಕ ಸುಂಕ ಕಡಿತ; 18%ಗೆ ಇಳಿಕೆ; ಮತ್ತೆ ಮೇಲುಗೈ ಸಾಧಿಸಿದ ಟ್ರಂಪ್

ಭಾರತವು ರಷ್ಯಾದಿಂದ ತೈಲ ಆಮದನ್ನು ಕಡಿಮೆ ಮಾಡಿದ ಬೆನ್ನಲ್ಲೇ, ಭಾರತದ ಮೇಲೆ...

ಸುದ್ದಿ ವಿವರ | ಆರ್ಥಿಕ ಸಮೀಕ್ಷೆ ಎಂದರೇನು ಮತ್ತು ಅದು ಏಕೆ ಮುಖ್ಯ?

ಸಂಸತ್ತಿನಲ್ಲಿ ಜನವರಿ 29ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು...