ಕಳೆದ ಒಂದು ದಶಕದಲ್ಲಿ ಭಾರತದ ವಿದೇಶಿ ಹೂಡಿಕೆಯಲ್ಲಿ ಭಾರಿ ಇಳಿಕೆ; ಈ ಕುರಿತು ಚಿಂತಿಸಬೇಕೆ?

Date:

ದೇಶದ ಕಾರ್ಪೊರೇಟ್‌ ವಲಯದ ವಿದೇಶಿ ಹೂಡಿಕೆ (FIIs)ಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡು ಬಂದಿದ್ದು, ಮುಂದಿನ ಷೇರು ಮಾರುಕಟ್ಟೆಯ ಹಾದಿಯಲ್ಲಿ ಸಾಕಷ್ಟು ಏರಿಳಿತಗಳು ಕಂಡುಬರುವ ನಿರೀಕ್ಷೆಗಳು ಎಲ್ಲೆಡೆ ಮೂಡುತ್ತಿವೆ. ಇದಕ್ಕೆ ದೇಶದ ಈಕ್ವಿಟಿ ಮಾರುಕಟ್ಟೆಯ ವಿಪರೀತ ಏರಿಕೆಯು ಒಂದು ಕಾರಣವಾಗಿದ್ದರೆ, ಚೀನಾದ ಮಾರುಕಟ್ಟೆಯಲ್ಲಿನ ಉತ್ತಮ ಸ್ಥಿತಿಯು ಹೂಡಿಕೆದಾರರನ್ನು ಆಕರ್ಷಿಸಿರುವುದು ಮತ್ತೊಂದು ಕಾರಣವಾಗಿದೆ.

ಕಳೆದ 7 ತಿಂಗಳಲ್ಲಿ ವಿದೇಶಿ ಹೂಡಿಕೆಯ ಹೊರ ಹರಿವು ವಿಪರೀತ ಏರುತಿದ್ದು, ಸುಮಾರು 3.40 ಲಕ್ಷ ಕೋಟಿ ಹಣವನ್ನು ಹಿಂತೆಗೆದು ಚಿನ್ನ ಮತ್ತು ವಿದೇಶಿ ಹೂಡಿಕೆ ಸೇರಿದಂತೆ, ಸರ್ಕಾರಿ ಬಾಂಡ್‌ಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.

ಇದನ್ನು ಓದಿದ್ದೀರಾ? ಆರ್ಥಿಕ ಹಿಂಜರಿತ ಭೀತಿ: ಅಮೆರಿಕ ಷೇರು ಮಾರುಕಟ್ಟೆ ಕುಸಿತ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದರೂ ಭಾರತೀಯ ಷೇರುಮಾರುಕಟ್ಟೆಯು ಈಗ ವಿದೇಶಿ ಹೂಡಿಕೆಗಳಿಗೆ ಅವಲಂಬಿತವಾಗದೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು(DIIs) ಮತ್ತು ಚಿಲ್ಲರೆ ಹೂಡಿಕೆದಾರರು(Retail Investor) ಮಾರುಕಟ್ಟೆಯಲ್ಲಿ ತಮ್ಮ ಪಾತ್ರವನ್ನು ಗಣನೀಯವಾಗಿ ವಿಸ್ತರಿಸುತ್ತಿದ್ದಾರೆ. ಆದರೆ ವಿದೇಶಿರ ಬಂಡವಾಳಕ್ಕೂ ನಮ್ಮಲ್ಲಿನ ಹೂಡಿಕೆಗೂ ಅಂತರ ದಿನೇ ದಿನೇ ಕಡಿಮೆಯಾಗುತ್ತಿದೆ.

2014ರಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆಯು(FIIs) ಗರಿಷ್ಠ ಮಟ್ಟದಲ್ಲಿ ಭಾರತೀಯ ಷೇರುಗಳಲ್ಲಿ ಮಾಲಿಕತ್ವ ಹೊಂದಿದ್ದರು. ಬಳಿಕ ಅವರ ಮಾಲಿಕತ್ವ ಕ್ರಮೇಣ ಇಳಿದು ಕಳೆದ 10 ವರ್ಷಗಳಲ್ಲಿ ಅತ್ಯಲ್ಪ ಮಟ್ಟವನ್ನು ತಲುಪುತ್ತಲೇ ಇದೆ. ಆದರೆ ಈ ಅವಧಿಯಲ್ಲಿ ಸೆನ್ಸೆಕ್ಸ್ ಮೂರರಷ್ಟು ಏರಿಕೆಯಾಗಿದ್ದು, ಹಲವಾರು ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳು 500% ರಿಂದ 1000% ವರೆಗೂ ರಿಟರ್ನ್ ನೀಡಿವೆ.

ಭಾರತೀಯ ಹೂಡಿಕೆದಾರರಿಂದ ಷೇರು ಮಾರುಕಟ್ಟೆಗೆ ಉತ್ಸಾಹಪೂರಿತ ಹಣದ ಹರಿವು ಮುಂದುವರಿಯುವ ನಿರೀಕ್ಷೆಯಿದ್ದು, ಈಗ ಹೆಚ್ಚು ಸ್ಥಿರ ಮತ್ತು ಸ್ವಾವಲಂಬಿ ಮಾರ್ಗದತ್ತ ಸಾಗುತ್ತಿದೆ. ಜೊತೆಗೆ ದೀರ್ಘಾವಧಿಯಲ್ಲಿ ಬೆಳವಣಿಗೆಗೆ ಬೇಕಾದ ಉತ್ತಮ ವಾತಾವರಣವು ವೃದ್ದಿಸಬಹುದು ಎಂಬುದನ್ನು ಗಮನದಲ್ಲಿ ಇಡಬಹುದಾಗಿದೆ.

ಮುಂದಿನ 10–20 ವರ್ಷಗಳ ಭಾರತ ಅಭಿವೃದ್ಧಿಯಲ್ಲಿ ಉತ್ತಮ ಕಾರ್ಪೊರೇಟ್‌ ಮತ್ತು ಕೆಲವು ಸರ್ಕಾರಿ ವಲಯದಲ್ಲಿ, ಅಭಿವೃದ್ಧಿ ಹಾದಿಯು ಉತ್ತಮ ಸ್ಥಿತಿಯಿಂದ ಕೂಡಿರುತ್ತದೆ ಎಂದು ಹೇಳಬಹುದು. ವಿದೇಶಿ ಹೂಡಿಕೆಗೆ ಅನುಕೂಲರ ಪರಿಸರವನ್ನು ಗಟ್ಟಿಗೊಳಿಸುವುದರ ಜೊತೆಗೆ, ಅಂತರಿಕ ಹೂಡಿಕೆದಾರರನ್ನು ಸದೃಢಗೊಳಿಲು ಬೇಕಾದ ಕ್ರಮಗಳನ್ನು ಸರ್ಕಾರಗಳೂ ಕೈಗೊಳ್ಳಬೇಕಿದೆ. ಆಗ ಮಾತ್ರ ಭಾರತದ ಷೇರು ಮಾರುಕಟ್ಟೆಯ ಭವಿಷ್ಯ ಸುಸ್ಥಿರತೆಯಿಂದ ಮುನ್ನಡೆಯಲಿದೆ.

kudroli

ಬರಹ: ಸಲಾಹುದ್ದೀನ್ ಕುದ್ರೋಳಿ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿನ್ನದ ಅಸಾಮಾನ್ಯ ಬೆಲೆ ಏರಿಕೆ; ಇದು ದರ ಇಳಿಕೆಯ ಸೂಚನೆಯೇ?

2026ರ ಜನವರಿ 29-30ರ ಹೊತ್ತಿಗೆ, ಅಮೆರಿಕದ ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು...

ಭಾರತದ ಮೇಲಿನ ಅಮೆರಿಕ ಸುಂಕ ಕಡಿತ; 18%ಗೆ ಇಳಿಕೆ; ಮತ್ತೆ ಮೇಲುಗೈ ಸಾಧಿಸಿದ ಟ್ರಂಪ್

ಭಾರತವು ರಷ್ಯಾದಿಂದ ತೈಲ ಆಮದನ್ನು ಕಡಿಮೆ ಮಾಡಿದ ಬೆನ್ನಲ್ಲೇ, ಭಾರತದ ಮೇಲೆ...

ಸುದ್ದಿ ವಿವರ | ಆರ್ಥಿಕ ಸಮೀಕ್ಷೆ ಎಂದರೇನು ಮತ್ತು ಅದು ಏಕೆ ಮುಖ್ಯ?

ಸಂಸತ್ತಿನಲ್ಲಿ ಜನವರಿ 29ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು...