ಈ ದಿನ ಸಂಪಾದಕೀಯ | ಅಲೆಮಾರಿಗಳ ಛಲಕ್ಕೊಂದು ಸಲಾಂ; ಮಾತು ತಪ್ಪದಿರಲಿ ಸರ್ಕಾರ

Date:

ಅಲೆಮಾರಿಗಳನ್ನು ಕೋಮು ಕಾಲಾಳುಗಳನ್ನಾಗಿ ಮಾಡಲು ಸಂಘಪರಿವಾರದ ಒಂದು ಪಡೆ ಸಕ್ರಿಯವಾಗಿರುವ ಹೊತ್ತಿನಲ್ಲಿ, ಇಂತಹ ಪಿತೂರಿಗಳಿಗೆ ಅಲೆಮಾರಿ ಮುಖಂಡರು ದೊಡ್ಡ ತಡೆಗೋಡೆಯಾಗಿದ್ದಾರೆ ಎಂದು ಸರ್ಕಾರ ಅರಿತುಕೊಳ್ಳಬೇಕಿದೆ

‘ಸಾಹೇಬರಿಗೆ ಈ ವಿಚಾರ ಇಷ್ಟವಿರಲಿಲ್ಲ. ಅವರು ಒಲ್ಲದ ಮನಸ್ಸಿನಿಂದಲೇ ಇದನ್ನು ಒಪ್ಪಿಕೊಂಡರು. ಅಲೆಮಾರಿಗಳಿಗೆ ಭಾರೀ ಮೋಸವಾಗುತ್ತಿದೆ ಎಂಬುದು ಅವರಿಗೆ ಗೊತ್ತಿತ್ತು’- ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆ ದಿನ ಹತ್ತಿರದಿಂದ ನೋಡಿದ ಆಪ್ತರು ಹೇಳುವ ಮಾತು. ಆಗಸ್ಟ್ 19ರ ರಾತ್ರಿ ಒಂಬತ್ತೂವರೆವರೆಗೆ ನಡೆದ ಕ್ಯಾಬಿನೆಟ್‌ ಸಭೆ, ಅಲೆಮಾರಿಗಳ ಜೋಪಡಿಗಳನ್ನು ಕಿತ್ತು ಬೀಸಾಡಿದಂತಿತ್ತು. ಜಸ್ಟಿಸ್ ಎಚ್.ಎನ್‌. ನಾಗಮೋಹನ ದಾಸ್ ಅವರ ಆಯೋಗದ ವರದಿಯನ್ನು ತೀವ್ರ ಪರಿಷ್ಕರಣೆ ಮಾಡಿ, ಬಲಾಢ್ಯರಿದ್ದ ‘ಸಿ’ ಗುಂಪಿಗೆ ಅಲೆಮಾರಿಗಳನ್ನು ಸರ್ಕಾರ ಸೇರಿಸಿತ್ತು. ಅತಿ ಸೂಕ್ಷ್ಮ ಅಸ್ಪೃಶ್ಯ ಅಲೆಮಾರಿಗಳ ಪರ ಒಳಮೀಸಲಾತಿಯ ಹಿರಿಯ ಹೋರಾಟಗಾರರೆಲ್ಲ ಮತ್ತೆ ಹೋರಾಟ ಮುಂದುವರಿಸಿದರು. ಸಿದ್ದರಾಮಯ್ಯನವರನ್ನು ಭೇಟಿ ಮಾಡಿದರು. “ಇದೊಂದು ರಾಜಕೀಯ ನಿರ್ಧಾರ” ಎಂದು ಹೇಳಿದ ಮುಖ್ಯಮಂತ್ರಿಯವರಿಗೆ, ಇಲ್ಲಿ ಮಹಾಮೋಸವಾಗಿದೆ ಎಂಬುದು ತಿಳಿದಿತ್ತು.

ಬಹುಶಃ ಕರ್ನಾಟಕದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಬೃಹತ್ ಹೋರಾಟವನ್ನು ಅಲೆಮಾರಿಗಳು ಸಂಘಟಿಸಿದರು. ತಮ್ಮ ಅನ್ನದ ಬಟ್ಟಲಿಗಾಗಿ ಒತ್ತಾಯಿಸಿ, ರಾಜ್ಯದ ಮೂಲೆ ಮೂಲೆಯಿಂದ ಬೆಂಗಳೂರಿಗೆ ಹರಿದು ಬಂದರು. ಅಲೆಮಾರಿಗಳ ಮಹಾ ಒಕ್ಕೂಟ ಅದರ ನೇತೃತ್ವ ವಹಿಸಿತ್ತು. ಆದರೆ ರಾಜ್ಯ ಸರ್ಕಾರ ಜಪ್ಪೆನ್ನಲಿಲ್ಲ. ಹೋರಾಟ ಮುಂದುವರಿಸುವುದಷ್ಟೇ ಅಲ್ಲದೆ, ಕೆಲವು ಅಲೆಮಾರಿಗಳು ಹೈಕೋರ್ಟ್‌ ಮೆಟ್ಟಿಲೇರಿದರು. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಲು ನಿರ್ಧರಿಸಿದರು. ಭಿಕ್ಷಾಟನೆ ಮಾಡಿ ಕೂಡಿಟ್ಟ ಹಣದಲ್ಲಿ ದೆಹಲಿಗೆ ಹೊರಟು, ಗಾಂಧಿ ಜಯಂತಿಯಂದು ಧರಣಿಗೆ ಕುಳಿತರು. ಹೋರಾಟದ ಸ್ಥಳ ಜಂತರ್ ಮಂತರ್ ಅಷ್ಟೇ ಅಲ್ಲದೆ ಕಾಂಗ್ರೆಸ್ ಕಚೇರಿಗೂ ಮುತ್ತಿಗೆ ಹಾಕುವ ನಿರ್ಧಾರ ಮಾಡಿದರು. ದೆಹಲಿಯಲ್ಲಿರುವ ಫ್ಯಾಸಿಸ್ಟ್ ಮನಸ್ಥಿತಿಯ ಪೊಲೀಸ್‌ ವ್ಯವಸ್ಥೆಯು, ನಿರುಪದ್ರವಿ ಅಲೆಮಾರಿಗಳನ್ನು ಹೊಸಕಿ ಹಾಕಿಬಿಡುತ್ತದೆಂಬ ಎಚ್ಚರಿಕೆ ಮತ್ತು ಆತಂಕ ಹೋರಾಟಗಾರರಿಗಿತ್ತು. ಎಲ್ಲ ಸಂಕಷ್ಟಗಳ ನಡುವೆ ಚಳವಳಿ ಮುಂದುವರಿಸಿದರು. ಮಾಧ್ಯಮಗಳಲ್ಲಿಯೂ ವರದಿಯಾಯಿತು. ರಾಹುಲ್ ಗಾಂಧಿಯವರಿಗೆ ವಿಷಯ ಮುಟ್ಟಿತು. ಅವರು ಹೊರಗಡೆ ಇದ್ದ ಕಾರಣ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಅಲೆಮಾರಿ ನಿಯೋಗದೊಂದಿಗೆ ಸಭೆ ನಡೆಸಿದರು. “ದೀಪಾವಳಿಯ ಬಳಿಕ ಅಲೆಮಾರಿಗಳಿಗೆ ಶೇ.1ರಷ್ಟು ಮೀಸಲಾತಿ ಜಾರಿಗೊಳಿಸಲು ನಿರ್ಧರಿಸಲಾಗುವುದು” ಎಂಬ ಭರವಸೆ ಅಲೆಮಾರಿಗಳಿಗೆ ಸಿಕ್ಕಿತು. ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ. ಮಹದೇವಪ್ಪನವರು ಅಲೆಮಾರಿಗಳಿಗೆ ಕರೆ ಮಾಡಿ, “ದಯವಿಟ್ಟು, ಕರ್ನಾಟಕಕ್ಕೆ ವಾಪಸ್ ಬನ್ನಿ, ನಿಮಗೆ ನ್ಯಾಯ ದೊರಕಿಸುತ್ತೇವೆ” ಎಂದು ಭರವಸೆ ಇತ್ತರು. ದೆಹಲಿ ಹೋರಾಟ ಕೈಬಿಡುವ ನಿರ್ಧಾರವನ್ನು ಅಕ್ಟೋಬರ್‌ 15ರಂದು ಕೈಗೊಂಡ ಹೋರಾಟಗಾರರು, ಬೆಂಗಳೂರಿಗೆ ಮರಳಿದರು.

ಕೊಟ್ಟಿದ್ದ ಮಾತಿಗನುಗುಣವಾಗಿ ಅಕ್ಟೋಬರ್ 31ರಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಅಲೆಮಾರಿ ಮುಖಂಡರ ಸಭೆ ನಡೆದಿದೆ. ಅಲೆಮಾರಿಗಳ ನಿಯೋಗ ಮೂರು ಒತ್ತಾಯಗಳನ್ನು ಸರ್ಕಾರದ ಮುಂದೆ ಇಟ್ಟಿದೆ. ಒಂದು: ಜಸ್ಟಿಸ್ ನಾಗಮೋಹನ ದಾಸ್‌ ವರದಿ ಶಿಫಾರಸ್ಸಿನಂತೆ ‘ಎ’ ಕೆಟಗರಿಯಲ್ಲಿ ಶೇ. 1ರಷ್ಟು ಮೀಸಲಾತಿ ಜಾರಿ ಮಾಡಬೇಕು. ಎರಡು: 49+10 ಅಲೆಮಾರಿ ಜನಜಾತಿಗಳಿಗೆ ಪ್ರತ್ಯೇಕ ನಿಗಮವನ್ನು ಸ್ಥಾಪಿಸಬೇಕು. ಮೂರು: ದೊಡ್ಡ ಪ್ರಮಾಣದಲ್ಲಿ ಗಡೆಗಣನೆಗೆ ಒಳಗಾಗಿರುವ ಸಮುದಾಯವನ್ನು ಸಮಗ್ರ ರೀತಿಯಲ್ಲಿ ಮೇಲೆತ್ತುವ ಸಲುವಾಗಿ ವಿಶೇಷ ಆರ್ಥಿಕ ಪ್ಯಾಕೇಜ್‌ ನೀಡಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಸಂಘಪರಿವಾರದ ಹುನ್ನಾರಗಳನ್ನು ಅರಿತ ದಲಿತರು

ಮೂರು ಒತ್ತಾಯಗಳನ್ನು ಕೂಲಂಕಷವಾಗಿ ಆಲಿಸಿದ ಸಿದ್ದರಾಮಯ್ಯ ಮತ್ತು ಎಚ್‌.ಸಿ ಮಹದೇವಪ್ಪ ಅವರು ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. “ಇಷ್ಟೆಲ್ಲ ನಡೆದಿದ್ದರೂ ನೀವು ಬಹಳ ಜವಾಬ್ದಾರಿಯಿಂದ ಹೋರಾಟವನ್ನು ನಡೆಸಿಕೊಂಡು ಬಂದಿದ್ದೀರಿ, ಸಮಸ್ಯೆಯನ್ನು ಪರಿಹರಿಸುವ ಸೂಕ್ತ ಮಾರ್ಗೋಪಾಯಗಳನ್ನು ಹುಡುಕಿ ಸರ್ಕಾರಕ್ಕೂ ಸಲಹೆ ಕೊಡುತ್ತಿದ್ದೀರಿ. ನೀವು ಬಹಳ ತಾಳ್ಮೆ ಮತ್ತು ಸಂಯಮದಿಂದ ಈ ಹೋರಾಟವನ್ನು ನಡೆಸಿದಿರಿ. ಅದಕ್ಕಾಗಿ ಸಮುದಾಯದವರಿಗೂ ಮತ್ತು ಸಮಿತಿಗೂ ಧನ್ಯವಾದ” ಎಂದಿದ್ದಾರೆ.

ಮುಂದುವರಿದು, “ನೀವು ಇಟ್ಟಿರುವ ಮೂರೂ ಹಕ್ಕೊತ್ತಾಯಗಳಿಗೆ ನಮ್ಮ ತಾತ್ವಿಕವಾದ ಒಪ್ಪಿಗೆ ಇದೆ. ನೀವು ಹೇಳಿದ ಹಾಗೆ ಖಂಡಿತವಾಗಿ ಪ್ರತ್ಯೇಕ ನಿಗಮವನ್ನು ಮಾಡಬಹುದು, ವಿಶೇಷ ಆರ್ಥಿಕ ಪ್ಯಾಕೇಜ್‌ ನೀಡಬಹುದು ಮತ್ತು ನೀಡಲೇಬೇಕು; ಅದು ನಮ್ಮ ಕರ್ತವ್ಯ. ಅದನ್ನು ನಾವು ಖಂಡಿತ ಮಾಡುತ್ತೇವೆ. ಈಗ ಆಗಿರುವ ಒಳಮೀಸಲಾತಿ ವರ್ಗೀಕರಣವು ನಾವು ಸಂತಸದಿಂದ ಮಾಡಿದ್ದಲ್ಲ, ಈ ಸಮಸ್ಯೆಯನ್ನು ಬಗೆಹರಿಸಲು ಒಂದು ಇಕ್ಕಟ್ಟಿನ ಸಂದರ್ಭದಲ್ಲಿ ನಾವು ಮಾಡಿದ ತಾತ್ಕಾಲಿಕ ತೀರ್ಮಾನವಾಗಿತ್ತು. ಅದನ್ನು ಶಾಶ್ವತ ಆಯೋಗದ ಮುಂದೆ ಇಟ್ಟು, ಚರ್ಚಿಸಿ ಸೂಕ್ತವಾದ ಬದಲಾವಣೆ ಮಾಡಬೇಕು ಎನ್ನುವುದು ಸರ್ಕಾರದ ನಿಲುವಾಗಿತ್ತು. ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ವಿಚಾರವನ್ನು ಹೇಗೆ ಬಗೆಹರಿಸಬೇಕು ಎನ್ನುವ ಮಾರ್ಗೋಪಾಯಗಳನ್ನು ಸೂಚಿಸಿದ್ದೀರಿ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲು ನಮಗೆ ಸ್ವಲ್ಪ ಕಾಲಾವಕಾಶ ಬೇಕು. ಸರ್ಕಾರದ ಮೇಲೆ ವಿಶ್ವಾಸ ಇಡಿ. ಅಲೆಮಾರಿಗಳನ್ನು ಸರ್ಕಾರ ಕೈಬಿಡುವುದಿಲ್ಲ. ಆದರೆ ಚರ್ಚಿಸಿ ಶೇ.1ರಷ್ಟು ಮೀಸಲಾತಿಯನ್ನು ಜಾರಿಗೊಳಿಸುತ್ತೇವೆ” ಎಂದಿದ್ದಾರೆ.

ಸಮಸ್ಯೆ ಬಗೆಹರಿಯುವವರೆಗೆ ಯಾವುದೇ ನೇಮಕಾತಿ ನಡೆಸಬಾರದೆಂದು ಅಲೆಮಾರಿ ಮುಖಂಡರು ಒತ್ತಾಯಿಸಿದಾಗ, ಸಭೆಯಲ್ಲಿ ಹಾಜರಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, “ಖಂಡಿತವಾಗಿಯೂ ನಿಮ್ಮ ಆತಂಕವನ್ನು ಗಮನದಲ್ಲಿಟ್ಟುಕೊಂಡು ನೇಮಕಾತಿ ಆಗೋದಕ್ಕಿಂತ ಮೊದಲೇ ಸಮಸ್ಯೆ ಬಗೆಹರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ” ಎಂದು ತಿಳಿಸಿದ್ದಾರೆ.

ಮತ್ತೆ ಮಾತನಾಡಿರುವ ಸಿಎಂ, “ದಯವಿಟ್ಟು ಸರ್ಕಾರದ ಮೇಲೆ ವಿಶ್ವಾಸ ಇಡಿ, ಹೈಕೋರ್ಟ್‌ನಲ್ಲಿ ಹಾಕಿರುವ ಮೊಕದ್ದಮೆ ವಾಪಸ್ ಪಡೆದುಕೊಳ್ಳಿ. ನಾವು ಖಂಡಿತವಾಗಿಯೂ ಸಮುದಾಯವನ್ನು ಕೈ ಬಿಡದೆ ಸಮಸ್ಯೆಯನ್ನು ಬಗೆಹರಿಸುತ್ತೇವೆ” ಎಂದು ಕೋರಿದ್ದಾರೆ. ಮುಖ್ಯಮಂತ್ರಿಯವರ ಮಾತನ್ನು ಆಲಿಸಿದ ಮುಖಂಡರು, “ನಿಮ್ಮ ಮಾತನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತೇವೆ. ಆದರೆ ಸರ್ಕಾರದಿಂದ ನಮಗೆ ಸ್ಪಷ್ಟವಾದ ಆದೇಶ ಬರಬೇಕು. ಅಲ್ಲಿಯ ತನಕ ನೀವು ಯಾವುದೇ ರೀತಿಯ ಉದ್ಯೋಗ ಭರ್ತಿ ಮಾಡಬಾರದು” ಎಂದು ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಕಾಂಗ್ರೆಸ್‌ಗಷ್ಟೇ ಅಲ್ಲ, ಸಮಾಜಕ್ಕೆ ಅರ್ಥವಾಗಿದೆಯೇ ಆರ್‌ಎಸ್‌ಎಸ್ ಅಜೆಂಡಾ?

ಒಳಮೀಸಲಾತಿಯ ಗೊಂದಲಗಳನ್ನು ಪರಿಹರಿಸದೆ ಯಾವುದೇ ನೇಮಕಾತಿ ಮಾಡುವುದಿಲ್ಲ ಎಂಬ ಭರವಸೆಯು ಸರ್ಕಾರದಿಂದ ಬಂದಿದೆ. ಸಿದ್ದರಾಮಯ್ಯನವರು ಮಾತು ಕೊಟ್ಟರೆ ತಪ್ಪುವುದಿಲ್ಲ ಎಂಬ ಮಾತು ರಾಜಕೀಯ ವಲಯದಲ್ಲಿದೆ. ಆದರೆ ಇದೆಲ್ಲ ಶೀಘ್ರದಲ್ಲೇ ಆಗಬೇಕು ಮತ್ತು ಅದಕ್ಕೆಲ್ಲ ಕಾಲಮಿತಿ ಇರಬೇಕು. ಅಲೆಮಾರಿಗಳನ್ನು ಇನ್ನೂ ಅಲೆದಾಡಿಸಿದ್ದು ಸಾಕು ಎಂದು ಎಲ್ಲ ಸಚಿವರಿಗೂ ಅನಿಸಬೇಕು. ನ್ಯಾಯ ಅವರ ಪರವಾಗಿದೆ ಎಂಬುದು ಸರ್ಕಾರಕ್ಕೂ ಗೊತ್ತಿದೆ. ಹೀಗಾಗಿಯೇ ಕೇಸ್ ವಾಪಸ್ ಪಡೆಯುವಂತೆ ಮನವಿ ಮಾಡುತ್ತಿದೆ. ಸರ್ಕಾರದ ಭರವಸೆಯನ್ನು ನಂಬಿ, ಫ್ರೀಡಂ ಪಾರ್ಕ್‌ ಹೋರಾಟವನ್ನೂ ಅಲೆಮಾರಿಗಳು ನಿಲ್ಲಿಸಿದ್ದಾರೆ.

ಇಡೀ ಕರ್ನಾಟಕದ ಚರಿತ್ರೆಯಲ್ಲಿ ಮೊಟ್ಟಮೊದಲಿಗೆ ಅಲೆಮಾರಿಗಳನ್ನು ಈ ಹೋರಾಟ ಒಗ್ಗೂಡಿಸಿ, ಶಕ್ತಿ ಪ್ರದರ್ಶನವನ್ನೂ ಮಾಡಿಸಿತು ಎಂಬುದು ಸತ್ಯ. ಇಂತಹ ಮೈಕ್ರೊ ಕಮ್ಯುನಿಟಿಗಳನ್ನು ಬದಿಗಿರಿಸಿದರೆ, ಮುಂದಾಗುವ ಅನಾಹುತಗಳನ್ನು ಕಾಂಗ್ರೆಸ್ ನಾಯಕರು ಅರಿತುಕೊಳ್ಳಬೇಕಿದೆ. ಅಲೆಮಾರಿಗಳನ್ನು ಕೋಮು ಕಾಲಾಳುಗಳನ್ನಾಗಿ ಮಾಡಲು ಸಂಘಪರಿವಾರದ ಒಂದು ಪಡೆ ಸಕ್ರಿಯವಾಗಿರುವ ಹೊತ್ತಿನಲ್ಲಿ, ಇಂತಹ ಪಿತೂರಿಗಳಿಗೆ ಅಲೆಮಾರಿಗಳು ಬಲಿಯಾಗಬಾರದೆಂಬ ಎಚ್ಚರಿಕೆಯನ್ನೂ ಇಟ್ಟುಕೊಂಡು, ತಮ್ಮ ಸಾಂವಿಧಾನಿಕ ಹಕ್ಕುಗಳಾಗಿ ಮುನ್ನಡೆಯುತ್ತಿರುವ ಅಲೆಮಾರಿ ಮುಖಂಡರ ಆಂತರ್ಯ, ತಾಳ್ಮೆ, ಪ್ರಜಾಸತ್ತಾತ್ಮಕ ನಡೆ, ಬುದ್ಧನಂತಹ ಕಾರುಣ್ಯವನ್ನು ಸರ್ಕಾರ ಹೃದಯದಿಂದ ನೋಡಬೇಕಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....