ಈ ದಿನ ಸಂಪಾದಕೀಯ | ಇಸ್ಲಾಮ್ ದ್ವೇಷ ಮತ್ತು ಯಹೂದಿ ದ್ವೇಷ ಒಂದಕ್ಕೆ ಮತ್ತೊಂದು ಎಣ್ಣೆ ಎರೆಯುತ್ತಿವೆಯೇ?

Date:

ನಿಜವಾದ ಧರ್ಮಗಳು ಕೂಡಿಸಬೇಕೇ ವಿನಾ ಒಡೆಯಕೂಡದು. ಮೇಲು ಕೀಳನ್ನು ಬಿತ್ತಕೂಡದು. ಪ್ರೀತಿಯನ್ನು ಸಹಬಾಳ್ವೆಯನ್ನು ಕಲಿಸಬೇಕೇ ವಿನಾ ದ್ವೇಷದ ಕೊಳೆಯನ್ನು ಮೆದುಳುಗಳಿಗೆ ತುರುಕಬಾರದು. ಅಡಾಲ್ಫ್ ಹಿಟ್ಲರ್ ಜರ್ಮನಿಯಲ್ಲಿ ಇದೇ ದ್ವೇಷವನ್ನು ಯಹೂದಿಗಳ ವಿರುದ್ಧ ತುಂಬಿದ. ನರಮೇಧಗಳನ್ನು ನಡೆಸಿದ. ಬಹುತೇಕ ಜರ್ಮನರು ತಮ್ಮ ಈ ಗತದ ಕುರಿತು ತೀವ್ರ ದುಗುಡ ವಿಷಾದ ಪಶ್ಚಾತ್ತಾಪಭರಿತರಾಗಿದ್ದಾರೆ.

ನಂಜು, ದ್ವೇಷ, ಯುದ್ಧ, ಧಾರ್ಮಿಕ ಉಗ್ರವಾದಗಳಿಂದಾಗಿ ಈ ಜಗತ್ತಿನ ಯಾವ ಮೂಲೆಯೂ ಸುರಕ್ಷಿತವಲ್ಲ ಎಂಬ ಅಂಶವನ್ನು ಆಸ್ಟ್ರೇಲಿಯಾ ರಾಜಧಾನಿ ಸಿಡ್ನಿಯಲ್ಲಿ ಕೆಲ ದಿನಗಳ ಹಿಂದೆ ಜರುಗಿದ ಭೀಕರ ನರಮೇಧ ಎತ್ತಿ ತೋರಿದೆ. ಬೊಂಡಿ ಸಮುದ್ರ ತೀರದ ಸಂಜೆಯ ಸೂರ್ಯಾಸ್ತದ ಹೊಂಬೆಳಕಿನಲ್ಲಿ ಮೀಯುತ್ತಿದ್ದ ಅಮಾಯಕ ಯಹೂದಿಗಳು ರಕ್ತದೋಕುಳಿಯಲ್ಲಿ ಮುಳುಗಿ ಮಸಣದ ಪಾಲಾದರು. ಬಲಿಯಾದವರು ಯಹೂದಿಗಳಾದರೆ ಹಂತಕರು ಮುಸಲ್ಮಾನ ಧರ್ಮಕ್ಕೆ ಸೇರಿದವರು. ಭಾರತೀಯ ಪಾಸ್ಪೋರ್ಟ್ ಹೊಂದಿದ್ದವರು. ಕೊಲ್ಲುವ ಕೈ ಮುಸಲ್ಮಾನ ಧರ್ಮಕ್ಕೆ ಸೇರಿದ್ದರೆ ಕಾಯ್ದ ಕೈ ಕೂಡ ಮುಸಲ್ಮಾನನದೇ ಆಗಿತ್ತು. ಸಿರಿಯಾ ದೇಶದ ಸಂಜಾತ ಅಹ್ಮದ್ ಅಲ್ ಅಹ್ಮದ್. ಉಗ್ರನೊಬ್ಬನ ಕೈಯಿಂದ ಅಸ್ತ್ರವನ್ನು ಕಿತ್ತುಕೊಂಡು ನಿರಾಯುಧಗೊಳಿಸಿದ್ದು ಒಬ್ಬ ಅಹ್ಮದ್ ಎಂಬುದನ್ನು ಮರೆಯಬಾರದು. ಆಸ್ಪತ್ರೆಯಲ್ಲಿರುವ ಹಣ್ಣಿನ ವ್ಯಾಪಾರಿ ಅಹ್ಮದ್ ನ ಚಿಕಿತ್ಸೆಗೆಂದು ಜಗತ್ತಿನ ಮೂಲೆ ಮೂಲೆಯಲ್ಲಿರುವ ಯಹೂದಿಗಳು ನಿಧಿ ಸಂಗ್ರಹಿಸುತ್ತಿರುವುದು ಕಡುಗತ್ತಲಲ್ಲಿ ಕಂಡಿರುವ ಬೆಳಕಿನ ಕಿರಣ. ಉಗ್ರರು ಭಾರತೀಯರ ಲೆಕ್ಕಕ್ಕೆ ಸೇರಿಸುತ್ತೀರಾದರೆ ಮತ್ತೊಬ್ಬ ಉಗ್ರನನ್ನು ನೆಲಕ್ಕೆ ಕೆಡವಿದವನು, ಬಂದೂಕು ಚಲಾಯಿಸದಂತೆ ತಡೆದು ಕೈಗೆ ಕೋಳ ತೊಡಿಸಲು ನೆರವಾದವನೂ ಭಾರತೀಯನೇ. ಆತನ ಹೆಸರು ಅಮನ್ ದೀಪ್ ಸಿಂಗ್ ಬೋಲಾ. ಪಂಜಾಬಿ ಕೂಡ ಫಾರಸಿ ಭಾಷೆಯಿಂದ ಬಹುವಾಗಿ ಪ್ರಭಾವಿತವಾಗಿರುವ ಭಾಷೆ. ಪಂಜಾಬಿ ಮತ್ತು ಹಿಂದಿಯಲ್ಲಿ ಅಮನ್ ಪದದ ಅರ್ಥ ಶಾಂತಿ ಎಂದು.

ದ್ವೇಷವನ್ನು ದ್ವೇಷದಿಂದ ಗೆಲ್ಲುವುದು ಸಾಧ್ಯವಿಲ್ಲ. ಅದರ ಅಗತ್ಯವೂ ಇಲ್ಲ. ಎದೆಯಲ್ಲಿ ಅನುಕಂಪದ ಪಸೆ ಉಳಿದಿರಬೇಕು. ಪ್ರೀತಿಗೆ ಜಾಗವಿರಬೇಕು. ಒಬ್ಬರಿಗೊಬ್ಬರ ಆಸೆಯಿಲ್ಲದೆ ಬದುಕು ನಡೆಯದು. ಒಬ್ಬರು ಮತ್ತೊಬ್ಬರ ನೆರವಿಲ್ಲದೆ ಜೀವಿಸಲಾರೆವು. ಈ ಸತ್ಯವಚನವು ಇನ್ನೆಂದಿಗಿಂತಲೂ, ಇಂದು ಈಗ ಬಹುಮುಖ್ಯ ಮತ್ತು ತೀವ್ರ ಪ್ರಸ್ತುತ ಎಂದಿದ್ದಾನೆ ಬೋಲಾ. ಜಗತ್ತಿನ ಬಹುದೊಡ್ಡ ಜ್ಞಾನಿಯಂತೆ ನಡೆದು ನುಡಿದಿದ್ದಾನೆ. ಶರಣರು ನುಡಿದಂತೆ ನಡೆದರು. ಸತ್ಯ ನ್ಯಾಯ ಪ್ರೀತಿ ಸಮಾನತೆಯ ಸಂದೇಶವನ್ನು ಸಾರಿದರು. ದ್ವೇಷವನ್ನು ತಲೆಗೆ ತುಂಬುವುದು ಸುಲಭ, ಪ್ರೀತಿಯನ್ನು ಕಲಿಸುವುದು ಕಷ್ಟ ಎಂಬುದು ಇತಿಹಾಸ ನಮ್ಮ ಮುಂದೆ ಹರವಿರುವ ಕಡು ವಾಸ್ತವ. ಅಮಲು ಅಮಲಿನ ಪದಾರ್ಥಗಳಿಂದ ಮಾತ್ರವೇ ಮೈಗೆ ಮಿದುಳಿಗೆ ಏರುವುದಿಲ್ಲ. ನಮ್ಮ ಅರಿವಿಗೇ ಬಾರದಂತೆ ನಮ್ಮ ನರಮಂಡಲಕ್ಕೆ ತುಂಬುವ ನಂಜು ಕೂಡ ಅಮಲು. ಈ ಅಮಲು ಕೂಡ ಮೈಗೆ ಮಿದುಳಿಗೆ ಹಾನಿ ಮಾಡುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಮ್ಮ ಅಧಿಕಾರ ರಾಜಕಾರಣದ ಮಹದಾಸೆಗಳನ್ನು ಈಡೇರಿಸಿಕೊಳ್ಳುವ ಕೇಡಿನ ಹಿತಾಸಕ್ತಿಗಳು ಒಡೆಯುವಲ್ಲಿ ತೊಡಗುತ್ತವೆಯೇ ವಿನಾ ಕೂಡಿಸುವಲ್ಲಿ ಅಲ್ಲ. ನಾವು ಕೂಡಿ ಬಾಳಿದ್ದರೆ ಪರಕೀಯರು ಬಂದು ನಮ್ಮನ್ನು ನೂರಾರು ವರ್ಷಗಟ್ಟಲೆ ಆಳುವುದು ಸಾಧ್ಯವಿತ್ತೇ?

ನಿಜವಾದ ಧರ್ಮಗಳು ಕೂಡಿಸಬೇಕೇ ವಿನಾ ಒಡೆಯಕೂಡದು. ಮೇಲು ಕೀಳನ್ನು ಬಿತ್ತಕೂಡದು. ಪ್ರೀತಿಯನ್ನು ಸಹಬಾಳ್ವೆಯನ್ನು ಕಲಿಸಬೇಕೇ ವಿನಾ ದ್ವೇಷದ ಕೊಳೆಯನ್ನು ಮೆದುಳುಗಳಿಗೆ ತುರುಕಬಾರದು. ಅಡಾಲ್ಫ್ ಹಿಟ್ಲರ್ ಜರ್ಮನಿಯಲ್ಲಿ ಇದೇ ದ್ವೇಷವನ್ನು ಯಹೂದಿಗಳ ವಿರುದ್ಧ ತುಂಬಿದ. ನರಮೇಧಗಳನ್ನು ನಡೆಸಿದ. ಬಹುತೇಕ ಜರ್ಮನರು ತಮ್ಮ ಈ ಗತದ ಕುರಿತು ತೀವ್ರ ದುಗುಡ ವಿಷಾದ ಪಶ್ಚಾತ್ತಾಪಭರಿತರಾಗಿದ್ದಾರೆ. ಯಾವ ಯಹೂದಿಗಳು ದ್ವೇಷದ ಮತ್ತು ಶ್ರೇಷ್ಠತೆ ಕನಿಷ್ಠತೆಯ ವ್ಯಸನದ ಬಲಿಪಶುಗಳಾಗಿದ್ದರೋ, ಅದೇ ಯಹೂದಿಗಳ ದೇಶ ಇಸ್ರೇಲ್ ಇಂದು ಇಸ್ಲಾಮಿನ ಕಡು ದ್ವೇಷಿಯಾಗಿದೆ. ತನಗೊಂದು ಬಲಿಪಶುವನ್ನು ಹುಡುಕಿಕೊಂಡಿದೆ. ಶೋಷಿತನೇ ಶೋಷಕನಾದ ವಿಡಂಬನೆಯಿದು. ಪ್ಯಾಲೆಸ್ತೀನನ್ನು ಆಕ್ರಮಿಸಿಕೊಂಡು ತನ್ನದೊಂದು ಸ್ವತಂತ್ರ ದೇಶ ಕಟ್ಟಿಕೊಂಡ ಇಸ್ರೇಲ್, ಪ್ಯಾಲೆಸ್ತೀನೀಯರ ಬೇಟೆಯಾಡಿ ಅವರ ಸಂತತಿಯನ್ನೇ ಅಳಿಸಿ ಹಾಕುವ ಕ್ರೂರ ಯೋಜನೆಯನ್ನು ದಶಕಗಳಿಂದ ಜಾರಿಯಲ್ಲಿಟ್ಟಿದೆ. ಪರಮಕ್ರೂರಿಯಾಗಿ ವರ್ತಿಸಿದೆ.

ಬೊಂಡಿ ಸಮುದ್ರ ತಟದಲ್ಲಿ ನಡೆದ ಯಹೂದಿಗಳ ನರಮೇಧವನ್ನು ಅತ್ಯಂತ ಕಟುವಾಗಿ ಖಂಡಿಸಲೇಬೇಕು. ಯಾವ ಕಾರಣಕ್ಕೂ ಅಸಮರ್ಥನೀಯ ಅಮಾನವೀಯ ಕುತ್ಯವಿದು. ಯಹೂದಿ ದ್ವೇಷದ ಕುಕೃತ್ಯವಿದು ಎಂಬುದರಲ್ಲಿ ಅನುಮಾನವೇ ಇಲ್ಲ. ಯಹೂದಿ ದ್ವೇಷವನ್ನು ತುರ್ತಾಗಿ ತಡೆಯಬೇಕಿದೆ  ಆದರೆ ಈ ಸ್ಥಿತಿಯನ್ನು ಇಸ್ರೇಲ್ ತಾನಾಗಿ ಕರೆದು ಮೈಮೇಲೆ ಎಳೆದುಕೊಂಡಿಲ್ಲವೇ ಎಂಬ ಕುರಿತು ನಿಂತು ಧೇನಿಸಬೇಕಿದೆ. ಪ್ಯಾಲೆಸ್ತೀನೀಯರ ನಾಡನ್ನು ಕಿತ್ತುಕೊಂಡು ಅವರನ್ನು ಬಯಲು ಬಂದೀಖಾನೆಯಲ್ಲಿರಿಸಿ ಅನ್ನ ನೀರು ನೆರಳಿಗಾಗಿ ಹಾಹಾಕಾರಪಡುವಂತೆ ಮಾಡಿರುವ ಇಸ್ರೇಲಿನ ಕೃತ್ಯವನ್ನು ಖಂಡಿಸುವ ನಿಚ್ಚಳ ನಿಲುವು ಆಸ್ಟ್ರೇಲಿಯಾ ದೇಶದ್ದು. ಈ ನಿಲುವೇ ದಾಳಿಗೆ ಕಾರಣವೆಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ ನೇತನ್ಯಾಹು ಆಪಾದಿಸಿರುವುದು ಸರಿಯಲ್ಲ. ಈ ಅವಸರದ ಹೇಳಿಕೆ ಕೂಡ ಇಸ್ಲಾಮ್ ದ್ವೇಷಕ್ಕೆ ಎಣ್ಣೆ ಎರಚುವ ನಡೆ. ಇಸ್ಲಾಮ್ ದ್ವೇಷ ಮತ್ತು ಯಹೂದಿ ದ್ವೇಷ ಒಂದನ್ನು ಮತ್ತೊಂದು ಕೆರಳಿಸಿ ಬೆಳೆಸುವ ಕೇಡುಗಳು. ಇವು ವಿಶ್ವದ ಎಲ್ಲೆಡೆಗೆ ವ್ಯಾಪಿಸಿ ಹಬ್ಬಿವೆ. ಹಲವು ರೂಪಗಳನ್ನು ತಳೆದು ಅಬ್ಬರಿಸಿವೆ. ಇಸ್ಲಾಮ್ ದ್ವೇಷವು, ಯಹೂದಿ ದ್ವೇಷಕ್ಕೆ ಸಮರ್ಥನೆ ಅಲ್ಲ, ಹಾಗೆಯೇ ಯಹೂದಿ ದ್ವೇಷದ ಕಾರಣ ನೀಡಿ, ಇಸ್ಲಾಮ್ ದ್ವೇಷ ಸರಿಯೆಂದು ಹೇಳಲು ಬಾರದು. ಯಹೂದಿ ದ್ವೇಷಕ್ಕಿಂತ ದಟ್ಟವಾಗಿ ವ್ಯಾಪಕವಾಗಿ ಆವರಿಸಿರುವ ಕೇಡು ಇಸ್ಲಾಮ್ ದ್ವೇಷ. ವಿಶೇಷವಾಗಿ ಯೂರೋಪ್ ಮತ್ತು ಅಮೆರಿಕೆಯಲ್ಲಿ ಹೊತ್ತಿರುವ ಈ ಇಸ್ಲಾಮ್ ದ್ವೇಷದ ಬೆಂಕಿ ಆತ್ಮಘಾತಕ.  ಆಸ್ಟ್ರೇಲಿಯಾದ ಬಂದೂಕು ಕಾಯಿದೆ ಕಾನೂನುಗಳು ಅಮೆರಿಕೆಯ ಬಂದೂಕು ಕಾಯಿದೆಗಳಷ್ಟು ಸಡಿಲವಲ್ಲ. ಆದರೆ ಈ ಘಟನೆಯ ನಂತರ ಈ ಕಾಯಿದೆಗಳನ್ನು ಇನ್ನಷ್ಟು ಬಿಗಿ ಮಾಡುವುದಾಗಿ ಆಸ್ಟ್ರೇಲಿಯಾ ಹೇಳಿದೆ. ಈ ಉಗ್ರರ ದಾಳಿಯ ಹಿಂದ ಇಸ್ರೇಲಿನ ಇಸ್ಲಾಮ್ ದ್ವೇಷ ಮತ್ತು ಅಸಂಖ್ಯ ಪರಮಕ್ರೂರ ಕೃತ್ಯಗಳು ದ್ವೇಷದ ಬೀಜವನ್ನು ಬಿತ್ತಿವೆಯೇ ವಿನಾ ಪ್ರೀತಿಯ ಸಸಿಗಳನ್ನಲ್ಲ. ಬೆಂಕಿಯಿಂದ ಬೆಂಕಿಯನ್ನು ನಂದಿಸುವುದು ಅಡವಿಗಳ ಕಾಳ್ಗಿಚ್ಚಿನ ಪರಿಸ್ಥಿತಿಯಲ್ಲಿ ನಿಜ. ಆದರೆ ಮನುಷ್ಯರು ಬದುಕುವ ಸಮಾಜಗಳಲ್ಲಿ ಅಲ್ಲ. ಅಲ್ಲಿ ದ್ವೇಷದಿಂದ ದ್ವೇಷವನ್ನು ಆರಿಸುವುದು ಸಾಧ್ಯವಿಲ್ಲ ಎಂಬುದು ಕಾಲ ಕಾಲಕ್ಕೆ ಸಾಬೀತಾಗುತ್ತಲೇ ಬಂದಿದೆ.

ಆದರೆ ದ್ವೇಷದಿಂದ ದ್ವೇಷವನ್ನು ನಂದಿಸಲು ಹೊರಟಿರುವ ಮನುಕುಲ ಮರಳಿ ಅಂಧಯುಗದತ್ತ ಧಾವಿಸುತ್ತಿದೆ. ಅಮನ್ ಪ್ರೀತ್ ಸಿಂಗ್ ಬೋಲಾ ಮತ್ತು ಅಹ್ಮದ್ ಅಲ್ ಅಹ್ಮದ್ ಅವರೇ ಬೆಳಕಿನ ಕಿರಣಗಳು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....