ಈ ದಿನ ಸಂಪಾದಕೀಯ | ಹಿಂದುಳಿದ ವರ್ಗಗಳ ಹಿತಕ್ಕೆ ಕೊಳ್ಳಿ ಇಡಲು ಹೊರಟ ಬಿಜೆಪಿ

Date:

ಒಬಿಸಿಗಳ ಉನ್ನತಿಗಾಗಿ ಮಾಡುವ ಯಾವುದೇ ಕೆಲಸವನ್ನು ಆರಂಭದಲ್ಲೇ ಅಧ್ವಾನ ಮಾಡಲು ಯತ್ನಿಸುತ್ತಿರುವ ಬಿಜೆಪಿಯವರು ನಿಜಕ್ಕೂ ಒಬಿಸಿಗಳ ಹಿತಕಾಯಬಲ್ಲರೇ ಎಂದು ಪ್ರಶ್ನಿಸಬೇಕಾಗಿದೆ. 

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಮಗ್ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಹಳ್ಳಹಿಡಿಸುವ ಪ್ರಯತ್ನಗಳು ನಿರಂತರ ನಡೆಯುತ್ತಿವೆ. ಕಾಂತರಾಜ ಆಯೋಗ ಮಾಡಿದ್ದ ಮೊದಲ ಸಮೀಕ್ಷೆಯ ವಿರುದ್ಧ ಅಸಹನೆ ಬಿತ್ತಲಾಯಿತು. ಆ ವರದಿಯನ್ನು ಆಧರಿಸಿ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ ವರದಿ ಕೊಟ್ಟಾಗಲೂ ತಕರಾರುಗಳನ್ನು ಎತ್ತಲಾಯಿತು. ಮೊದಲನೆಯದ್ದು ಸರಿ ಇಲ್ಲ ಎಂಬ ಟೀಕೆಗಳು ದೊಡ್ಡದಾದ ಬಳಿಕ, ಮತ್ತೊಂದು ಸಮೀಕ್ಷೆ ಮಾಡಿಸಲು ರಾಜ್ಯ ಸರ್ಕಾರ ಮುಂದಾಯಿತು. ಆದರೆ ಇದನ್ನೂ ಹೇಗಾದರೂ ತಡೆಯುವ ಎಲ್ಲ ರೀತಿಯ ಪಿತೂರಿಗಳು ನಡೆಯುತ್ತಿರುವುದು ಸ್ಪಷ್ಟವಾಗಿ ಕಾಡುತ್ತಿದೆ.

ಮೊದಲ ಸಮೀಕ್ಷೆಯ ಸಂದರ್ಭದಲ್ಲೂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಈಗ ಸಮೀಕ್ಷೆ ನಡೆಯುವಾಗಲೂ “ಸಮೀಕ್ಷೆ ಅವೈಜ್ಞಾನಿಕವಾಗಿದೆ, ಹೆಚ್ಚು ಜಾತಿಗಳನ್ನು ಸೇರಿಸಲಾಗಿದೆ, ಇದು ಸಮೀಕ್ಷೆಯ ಹೆಸರಲ್ಲಿ ನಡೆಯುತ್ತಿರುವ ಜಾತಿ ಗಣತಿ, ಇಂತಹ ಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ, ಇದು ಕೇಂದ್ರ ಸರ್ಕಾರದ ವ್ಯಾಪ್ತಿಯ ಬರುವ ಕೆಲಸ” ಎಂದು ಆಕ್ಷೇಪಿಸಲಾಯಿತು. ಆದರೆ ಹೈಕೋರ್ಟ್ ಸಮೀಕ್ಷೆಯನ್ನು ತಡೆಯಲು ಸಾಧ್ಯವಿಲ್ಲ ಎಂದರೂ, “ಡೇಟಾವನ್ನು ಸಂರಕ್ಷಿಸಬೇಕು, ಸೋರಿಕೆ ಮಾಡಬಾರದು ಹಾಗೂ ಜನರು ಸ್ವಯಂಪ್ರೇರಿತವಾಗಿ ಮಾಹಿತಿ ನೀಡಬಹುದು, ಅವರನ್ನು ಒತ್ತಾಯ ಮಾಡಬಾರದು” ಎಂದು ನಿರ್ದೇಶಿಸಿತು.

ಹೈಕೋರ್ಟ್‌ ನೀಡಿರುವ ಸೂಚನೆಗಳನ್ನೇ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಬಿಜೆಪಿ ಮತ್ತು ಅದರ ನಾಯಕರು, ”ನಮ್ಮ ಮನೆಗೆ ಬಂದರೆ, ನಾನು ಮಾಹಿತಿ ಕೊಡುವುದಿಲ್ಲ. ನಿಮ್ಮ ಮನೆಗೆ ಬಂದಾಗ ಮಾಹಿತಿ ಕೊಡಲು ನಿರಾಕರಿಸಿ. ನೀವು ಕೊಡುವ ಮಾಹಿತಿಗೆ ಸುರಕ್ಷತೆ ಇಲ್ಲ, ಅದನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತದೆ” ಎಂದು ಅಪಪ್ರಚಾರ ಮಾಡಲು ಶುರು ಮಾಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇಂತಹ ಪಿತೂರಿಗೆ ಮುನ್ನುಡಿ ಬರೆದಿದ್ದಾರೆ. ಇದರ ಮುಂದುವರಿದ ಭಾಗವಾಗಿ ಸಂಸದ ತೇಜಸ್ವಿ ಸೂರ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ಇತರರು ಮಾತನಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

“ಸಮೀಕ್ಷೆಗೆ ನಿರಾಕರಿಸಿ” ಎಂದು ಪ್ರಚಾರ ಮಾಡುತ್ತಿರುವವರೇ ಮುಂದೊಂದು ದಿನ, “ಎಲ್ಲ ಜನರು ಸಮೀಕ್ಷೆಗೆ ಒಳಪಟ್ಟಿಲ್ಲ.‌ ಹೀಗಾಗಿ ಇದು ಅವೈಜ್ಞಾನಿಕ” ಎಂದು ತಕರಾರು ತೆಗೆದು ಮತ್ತೊಮ್ಮೆ ಒಬಿಸಿಗಳ ಅನ್ನದ ಬಟ್ಟಲಿಗೆ ಮಣ್ಣು ಸುರಿಯುವ ಸಾಧ್ಯತೆ ಗೋಚರಿಸುತ್ತಿದೆ. ಯಾವ ಜಾತಿಯ ಸ್ಥಿತಿ ಹೇಗಿದೆ ಎಂಬುದನ್ನು ದಾಖಲಿಸದಂತೆ ತಡೆಯುವುದೇ ಈ ಅಪಪ್ರಚಾರದ ಉದ್ದೇಶದಂತೆ ಕಾಣುತ್ತಿದೆ.

ರಾಜ್ಯ ಸರ್ಕಾರಕ್ಕೆ ಜಾತಿಗಳ ವಾಸ್ತವ ಸ್ಥಿತಿಗಳ ಅರಿವಿರುತ್ತದೆ. ಕೇಂದ್ರ ಸರ್ಕಾರ ಮಾಡುವ ಸಮೀಕ್ಷೆಯು ತಲೆ ಎಣಿಕೆಗೆ ಸೀಮಿತವಾದರೆ, ರಾಜ್ಯ ಸರ್ಕಾರ ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳನ್ನು ಸರಿಯಾಗಿ ಅಳೆಯಲು ಸಾಧ್ಯ. ತಲೆ ಎಣಿಕೆಗೂ ಸಮೀಕ್ಷೆಗೂ ಇರುವ ವ್ಯತ್ಯಾಸವನ್ನು ಗಮನಿಸಬೇಕು. ರಾಜ್ಯಗಳಲ್ಲಿ ಸ್ಥಾಪನೆಯಾಗುವ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಗಳು ಕಾಲಕಾಲಕ್ಕೆ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಳನ್ನು ನಡೆಸಬೇಕು ಎಂದು ಇಂದ್ರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿದೆ. ದುರದೃಷ್ಟವಶಾತ್ ಬಿಜೆಪಿಯವರು ಈ ವಿಚಾರವನ್ನು ಮರೆಮಾಚಿ, ತಪ್ಪು ಕಲ್ಪನೆಯನ್ನು ಬಿತ್ತುವ ಆಟವಾಡುತ್ತಿದ್ದಾರೆ.

ಬಿಜೆಪಿ ಮತ್ತು ಸಂಘಪರಿವಾರದ ಇತಿಹಾಸವನ್ನು ನೋಡಿದರೆ ಅವರು ಎಂದಿಗೂ ಜಾತಿ ಸಮೀಕ್ಷೆಯಂತಹ ಸಾಮಾಜಿಕ ಪರಿವರ್ತನಾ ಕಾರ್ಯಕ್ರಮಗಳ ಬಗ್ಗೆ ಒಲುವು ಹೊಂದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮಂಡಲ್ ಆಯೋಗದ ವರದಿ ಜಾರಿಗೆ ಬರುವ ಹೊತ್ತಿನಲ್ಲಿ ಕಮಂಡಲ ರಾಜಕಾರಣ ಶುರು ಮಾಡಿದ್ದೇ ಒಬಿಸಿಗಳನ್ನು ದಿಕ್ಕು ತಪ್ಪಿಸಲು ಎಂಬುದು ವಾಸ್ತವ. ಮಂಡಲ್‌ ವರದಿ ಒಬಿಸಿಗಳಿಗೆ ಮರಣ ಶಾಸನ ಎಂಬಂತೆ ಬಿಂಬಿಸಿ, ಒಬಿಸಿಗಳನ್ನು ದಿಕ್ಕು ತಪ್ಪಿಸಿದ್ದು ಇದೇ ಸಂಘಪರಿವಾರ. 2024ರ ಲೋಕಸಭಾ ಚುನಾವಣೆಯವರೆಗೂ ಜಾತಿ ಗಣತಿಯಂತಹ ವಿಚಾರದಲ್ಲಿ ಬಿಜೆಪಿಯ ನಿಲುವು ವ್ಯತಿರಿಕ್ತವಾಗಿಯೇ ಇತ್ತು. ರಾಹುಲ್ ಗಾಂಧಿಯವರು ಜಾತಿ ಸಮೀಕ್ಷೆಯ ಪರ ಮಾತನಾಡುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ, “ಇದೊಂದು ಮಾವೋವಾದಿ ಪ್ರಣೀತ ಆಲೋಚನೆ, ಹಿಂದೂ ಸಮಾಜವನ್ನು ಒಡೆಯುವ ಕೆಲಸ” ಎಂದು ಬಿಂಬಿಸಿದ್ದರು. ಬಿಹಾರ ಚುನಾವಣೆಯ ಹೊಸ್ತಿಲಲ್ಲಿ ಜಾತಿ ಗಣತಿಯ ಪರ ಮಾತನಾಡಿದ ಬಿಜೆಪಿಯವರದ್ದು ಬೂಟಾಟಿಕೆಯ ಪರಮಾವಧಿಯಾಗಿತ್ತು. ಬಿಹಾರ ರಾಜ್ಯ ಸರ್ಕಾರ ಮಾಡಿರುವ ಜಾತಿ ಸಮೀಕ್ಷೆಯನ್ನು ಒಪ್ಪುವ ಬಿಜೆಪಿ, ಕರ್ನಾಟಕದ ವಿಚಾರಕ್ಕೆ ಬಂದಾಗ ಇಬ್ಬಂದಿತನ ಪ್ರದರ್ಶಿಸುತ್ತಿದೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಮಂಡಲ್ ವರದಿ ಯಾರ ಪರ ಇದೆ ಎಂಬುದನ್ನು ಅರಿಯದೆ ಮಂಡಲ್ ವಿರೋಧಿ ಹೋರಾಟದಲ್ಲಿ ಸುಮಾರು 250ಕ್ಕೂ ಹೆಚ್ಚು ಒಬಿಸಿಗಳು ಆತ್ಮಾಹುತಿಯಾದರು. ಈಗಲೂ ಒಬಿಸಿಗಳನ್ನು ವಂಚಿಸಲು ಸಂಘಪರಿವಾರದ ಮಂದಿ ಮುಂದಾಗಿದ್ದಾರೆ. ಒಬಿಸಿಗಳು ಇತಿಹಾಸದಿಂದ ಪಾಠ ಕಲಿಯಬೇಕಾದ ತುರ್ತು ಎದುರಾಗಿದೆ. ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಯಾವುದೇ ಸಮೀಕ್ಷೆ, ಗಣತಿಯ ವಿರುದ್ಧ ಇಂತಹ ಪಿತೂರಿಗಳನ್ನು ಜಾತಿವಾದಿ ಬಲಾಢ್ಯರು ಮಾಡುತ್ತಲೇ ಬಂದಿದ್ದಾರೆ. ಈಗ ಒಬಿಸಿಗಳು ಒಂದಾಗದಿದ್ದರೆ, ತಮ್ಮನ್ನು ಇಷ್ಟು ಕಾಲ ಕಾಲಾಳುಗಳನ್ನಾಡಿ ನೋಡಿದವರಿಗೆ ಬಲಿಪಶುಗಳಾಗಿಯೇ ಮುಂದುವರಿಯುತ್ತಾರೆ.

ಜಾತಿ ಸಮೀಕ್ಷೆ ನಡೆದು, ಅದರ ಅನ್ವಯ ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸುವ ಹೊತ್ತಿಗೆ ಸಾಕಷ್ಟು ಅಪಪ್ರಚಾರ ನಡೆಯುವುದಂತೂ ಸತ್ಯ. ಮೊದಲ ಸಮೀಕ್ಷೆಯ ವರದಿಯು ಒಬಿಸಿಗಳ ಒಗ್ಗಟ್ಟಿನ ಕೊರತೆಯಿಂದಾಗಿ ಮೂಲೆಗೆ ಸೇರಿತು ಎಂದು ಎಚ್ಚೆತ್ತುಕೊಳ್ಳುವ ಸೂಚನೆಯನ್ನು ಒಬಿಸಿ ನಾಯಕರು ನೀಡಿದ್ದಾರೆ. ಜಾತಿ ಸಮೀಕ್ಷೆಯ ಪರ ಬಲವಾಗಿ ನಿಂತು, ಸಿದ್ದರಾಮಯ್ಯನವರನ್ನು ಬೆಂಬಲಿಸುವ ಮಾತುಗಳನ್ನಾಡಿದ್ದಾರೆ. ಆದರೆ ಇಷ್ಟೇ ಸಾಲದು. ಬಹುದೊಡ್ಡ ಸಂಖ್ಯಾಬಲವನ್ನು ಹೊಂದಿರುವ ಹಿಂದುಳಿದ ವರ್ಗಗಳಲ್ಲಿ ಕಾಣುವ ಅಸಂಘಟನೆಯೇ ಜಾತಿ ಸಮೀಕ್ಷೆಯನ್ನು ದಿಕ್ಕುತಪ್ಪಿಸುವ ಹುನ್ನಾರಗಳಿಗೆ ಆಸ್ಪದ ನೀಡಿದೆ. ಒಬಿಸಿಗಳ ಉನ್ನತಿಗಾಗಿ ಮಾಡುವ ಯಾವುದೇ ಕೆಲಸವನ್ನು ಆರಂಭದಲ್ಲೇ ಅಧ್ವಾನ ಮಾಡಲು ಯತ್ನಿಸುತ್ತಿರುವ ಬಿಜೆಪಿಯವರು ನಿಜಕ್ಕೂ ಒಬಿಸಿಗಳ ಹಿತಕಾಯಬಲ್ಲರೇ ಎಂದು ಪ್ರಶ್ನಿಸಬೇಕಾಗಿದೆ. ಇಲ್ಲವಾದರೆ ಇಂತಹ ಆಕ್ಷೇಪಗಳನ್ನು ತರುವ ಮೂಲಕ ಒಬಿಸಿಗಳ ನಿಜ ಸ್ಥಿತಿ ಅನಾವರಣವಾಗುವುದಕ್ಕೆ ತೊಡರುಗಾಲು ಹಾಕುತ್ತಲೇ ಇರುತ್ತಾರೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....