ಈ ದಿನ ಸಂಪಾದಕೀಯ | ‘ಕೊಟ್ಟ ಮಾತು’ ಗದ್ದಲ ಸೃಷ್ಟಿಸಿದ ಬಳಿಕ ಎಚ್ಚೆತ್ತ ಕಾಂಗ್ರೆಸ್

Date:

ಅಧಿಕಾರಕ್ಕಾಗಿ ಈ ಹಿಂದೆ ನಡೆದಿರುವಷ್ಟು ಬಹಿರಂಗ ಬಣರಾಜಕಾರಣ ಈಗಿನ ಕಾಂಗ್ರೆಸ್‌ ಸರ್ಕಾರದಲ್ಲಿ ಇಲ್ಲವಾದರೂ ಇಡುವ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆ ವಹಿಸಿದಂತೆ ಕಾಣುತ್ತಿಲ್ಲ. ಸದ್ಯ ಎದ್ದಿರುವ ಬಿರುಕು ಮುಚ್ಚುವ ಪ್ರಯತ್ನವಂತೂ ನಡೆದಿದೆ.

ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಕಾಣಿಸಿಕೊಂಡ ಎರಡು ಪೋಸ್ಟ್‌ಗಳು ಕಾಂಗ್ರೆಸ್‌ನೊಳಗೆ ಎಲ್ಲವೂ ಸರಿ ಇಲ್ಲ ಎಂಬ ‘ಸಂದೇಶ’ವನ್ನು ರವಾನಿಸಿದ್ದವು. ಕಾಂಗ್ರೆಸ್‌ನೊಳಗಿನ ಬಣರಾಜಕಾರಣದ ಹೊಗೆ ಹೊರಹೊಮ್ಮಿದ್ದು ಢಾಳಾಗಿ ಕಾಣಿಸಿತ್ತು.

‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ’ ಎಂಬ ಸಂದೇಶದ ಪೋಸ್ಟ್‌ ಡಿ.ಕೆ.ಶಿವಕುಮಾರ್ ಅವರ ಖಾತೆಯಲ್ಲಿ ಹಂಚಿಕೆಯಾಯಿತು. ‘ಇದು ನನ್ನ ಅಭಿಪ್ರಾಯವಲ್ಲ’ ಎಂದು ಅವರು ಸ್ಪಷ್ಟನೆ ನೀಡಿದರೂ ಅವರ ಪೋಸ್ಟ್‌ ಹಾಗೆಯೇ ಉಳಿದಿದೆ. ಇದು ಸಿದ್ದರಾಮಯ್ಯನವರನ್ನೇ ಉದ್ದೇಶಿಸಿ ಆಡಿದ್ದ ಮಾತು ಎಂಬಂತೆ ಮುಖ್ಯಮಂತ್ರಿಯವರ ಖಾತೆಯಿಂದಲೂ ‘ಕೊಟ್ಟ ಮಾತು’ ಕುರಿತ ಪೋಸ್ಟ್‌ ರವಾನೆಯಾಯಿತು. “ಕರ್ನಾಟಕದ ಜನರಿಗೆ ನಾವು ಕೊಟ್ಟ ಮಾತು ಘೋಷವಾಕ್ಯವಷ್ಟೇ ಅಲ್ಲ. ಅದೇ ನಮ್ಮ ಪ್ರಪಂಚ” ಎಂದಿತ್ತು ಸಿದ್ದರಾಮಯ್ಯನವರ ಖಾತೆ. ಇಬ್ಬರು ನಾಯಕರಿಗೂ ತಮ್ಮ ಖಾತೆಗಳಲ್ಲಿ ಇಂತಹ ವಿಚಾರಗಳು ಹಂಚಿಕೆಯಾಗಿವೆ ಎಂಬ ಮಾಹಿತಿ ಇತ್ತೋ, ಇರಲಿಲ್ಲವೋ ಅಥವಾ ಖಾತೆಗಳನ್ನು ನಿರ್ವಹಿಸುವವರು ಈ ಪೋಸ್ಟ್‌ಗಳನ್ನು ಹಾಕಿದರೋ ಬೇರೆಯೇ ಪ್ರಶ್ನೆ. ಅವರವರ ಖಾತೆಗೆ ಅವರೇ ಜವಾಬ್ದಾರರು. ಆದರೆ ಈ ‘ಕೊಟ್ಟ ಮಾತಿನ ಸಮರ’ ಕೊಟ್ಟ ಸಂದೇಶ ಕಾಂಗ್ರೆಸ್ಸಿಗೆ ಒಳಿತು ಮಾಡುವುದಿಲ್ಲ ಎಂದು ಇಬ್ಬರು ನಾಯಕರಿಗೂ ಅರ್ಥವಾದಂತೆ ಕಾಣುತ್ತದೆ.

ಕರ್ನಾಟಕದ ರಾಜಕೀಯ ಇತಿಹಾಸವನ್ನು ನೋಡಿದರೆ ‘ಬಣರಾಜಕಾರಣ’ ಮತ್ತು ‘ಅಧಿಕಾರ ಹಸ್ತಾಂತರ’ದ ಕಿತ್ತಾಟಗಳು ಹೊಸದೇನೂ ಅಲ್ಲ. ಆದರೆ ಇಂಥವುಗಳನ್ನು ನೋಡಿ ಬೇಸತ್ತ ಮತದಾರರು ಪದೇ ಪದೇ ಸರ್ಕಾರಗಳನ್ನು ಬದಲಿಸಿರುವುದನ್ನು ರಾಜಕಾರಣಿಗಳಿಗೆ ಹೊಸದಾಗಿ ಹೇಳಬೇಕಿಲ್ಲ. ಅಧಿಕಾರಕ್ಕಾಗಿ ಈ ಹಿಂದೆ ನಡೆದಿರುವಷ್ಟು ಬಹಿರಂಗ ಬಣರಾಜಕಾರಣ ಈಗಿನ ಕಾಂಗ್ರೆಸ್‌ ಸರ್ಕಾರದಲ್ಲಿ ಇಲ್ಲವಾದರೂ ಇಡುವ ಪ್ರತಿ ಹೆಜ್ಜೆಯಲ್ಲೂ ಮತ್ತಷ್ಟು ಸೂಕ್ಷ್ಮತೆ ಇರಬೇಕಾಗುತ್ತದೆ. ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಸೌಂದರ್ಯವಾದರೂ ಅವುಗಳು ಯಾರನ್ನೋ ಬಲಿಪಡೆಯುವ ಮಟ್ಟಕ್ಕೆ ಬೆಳೆಸಬೇಕೆಂಬ ಇರಾದೆ ಪಕ್ಷಪಾತಿ ಮಾಧ್ಯಮಗಳಿಗೆ ಇದೆಯೆಂಬುದು ಕಾಂಗ್ರೆಸ್‌ ನಾಯಕರಿಗೆ ಅಂತಿಮವಾಗಿ ಅರ್ಥವಾದಂತೆ ಕಾಣುತ್ತದೆ. ಇಲ್ಲದೆ ಇರುವ ವೈಷಮ್ಯವನ್ನು ಬೆಳೆಸುವ ಮಟ್ಟಕ್ಕೆ ವಿರೋಧ ಪಕ್ಷಗಳು ಯತ್ನಿಸುತ್ತಿರುತ್ತವೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವುದಾಗಿ ವಿರೋಧ ಪಕ್ಷದ ನಾಯಕರು ಪ್ರತಿಕ್ರಿಯಿಸಿದ್ದು ಕಾಂಗ್ರೆಸ್‌ ನಾಯಕರನ್ನು ಬಡಿದೆಚ್ಚರಿಸಿದಂತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಹಾರಾಡುವ ಮೋದಿಗೆ ಲಗಾಮು ಹಾಕಲಿದೆಯೇ ತಮಿಳುನಾಡು?

ಒಂದು ತಿಂಗಳಿಂದ ತೆರೆಮರೆಯಲ್ಲಿ ನಡೆಯುತ್ತಿದ್ದ ಮತ್ತು ಮಾಧ್ಯಮಗಳು ಅದನ್ನೇ ದೊಡ್ಡದಾಗಿ ಚಿತ್ರಿಸಿ ಚಳಿ ಕಾಯಿಸಿಕೊಳ್ಳುತ್ತಿದ್ದ ಹೊತ್ತಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಂದು ಬೆಳಗಿನ ಉಪಾಹಾರ ಸೇವಿಸಿ, ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಮೊದಲಿಗೆ ಮಾತನಾಡಿರುವ ಸಿದ್ದರಾಮಯ್ಯ, ”ಹೈಕಮಾಂಡ್ ಹೇಳಿದಂತೆ ನಾವಿಬ್ಬರೂ ಕೇಳುತ್ತೇವೆ. ಗೊಂದಲಗಳನ್ನು ತಿಳಿಗೊಳಿಸುವಂತೆ ಸೂಚನೆ ನೀಡಿದ್ದಾರೆ. ನಾಳೆಯಿಂದ ಯಾವುದೇ ಗೊಂದಲ ಇರುವುದಿಲ್ಲ. ಈಗಲೂ ಇಲ್ಲ. ಆದರೆ ಗೊಂದಲ ಸೃಷ್ಟಿಯಾಗಿದೆ. ಕೆಲವು ಮೀಡಿಯಾ ಮಂದಿಯೇ ಇದಕ್ಕೆಲ್ಲ ಕಾರಣ” ಎಂದಿದ್ದಾರೆ. ಸಿಎಂ ಮಾತಿಗೆ ಸಂಪೂರ್ಣ ಸಹಮತ ವ್ಯಕ್ತಪಡಿಸಿರುವ ಡಿ.ಕೆ. ಶಿವಕುಮಾರ್, ”ನಮ್ಮಲ್ಲಿ ಯಾವುದೇ ಗುಂಪುಗಳು ಇಲ್ಲ. ಅದರ ಅವಶ್ಯಕತೆಯೂ ಇಲ್ಲ. ಇರುವುದು ಒಂದೇ ಗುಂಪು- ಅದು ಕಾಂಗ್ರೆಸ್ ಗುಂಪು. ಕೃಷ್ಣ ಅವರ ಕಾಲದಲ್ಲೂ ಗುಂಪುಗಾರಿಕೆಗೆ ಅವಕಾಶವನ್ನು ನಾನು ಕೊಟ್ಟಿರಲಿಲ್ಲ. ಹೈಕಮಾಂಡ್ ಹೇಳಿದಂತೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ಪಕ್ಷವನ್ನು ಶಕ್ತಿಶಾಲಿಯಾಗಿ ಬೆಳೆಸುವುದು ನಮ್ಮಿಬ್ಬರ ಕರ್ತವ್ಯ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಮಾಧ್ಯಮಗಳ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಸಿಟ್ಟಿಗೆದ್ದದ್ದು ಏಕೆ?

ಚಳಿಗಾಲದ ಅಧಿವೇಶನದಲ್ಲಿ ಆಗಬಹುದಾದ ಭಾರೀ ಮುಜುಗರದಿಂದ ಕಾಂಗ್ರೆಸ್ ನಾಯಕರು ಪಾರಾದಂತೆ ಕಾಣುತ್ತಿದೆ. “2028ರ ವಿಧಾನಸಭಾ ಚುನಾವಣೆಯೇ ನಮ್ಮ ಗುರಿ” ಎಂದು ಸಿಎಂ, ಡಿಸಿಎಂ ಹೇಳಿದ್ದಾರೆ. ಆದರೆ ಸದ್ಯದಲ್ಲಿ ಕಂಡು ಬಂದಿರುವ ಸಾಮರಸ್ಯ ಕೇವಲ ಅಧಿವೇಶನ ಮುಗಿಯುವವರೆಗಷ್ಟೇ, ನಂತರ ಮತ್ತದೇ ಕಿತ್ತಾಟಗಳು ಮುನ್ನಲೆಗೆ ಬರುತ್ತವೆ ಎಂದು ವಿಶ್ಲೇಷಣೆಗಳು ಮೂಡಿಬರದೆ ಇರುವುದಿಲ್ಲ. 142 ಶಾಸಕರ ಬಲವನ್ನು ಕಾಂಗ್ರೆಸ್ ಸರ್ಕಾರ ಹೊಂದಿದ್ದರೂ, ಸರ್ಕಾರವನ್ನು ಕೆಡವಲು ನಿರಂತರ ಪ್ರಯತ್ನಗಳನ್ನು ವಿರೋಧ ಪಕ್ಷದ ನಾಯಕರು ಮಾಡುತ್ತಲೇ ಇರುವುದು ಕಾಂಗ್ರೆಸ್‌ನಲ್ಲಿನ ಒಡಕಿಗೂ ಕನ್ನಡಿ ಹಿಡಿದಂತಾಗುತ್ತದೆ. ಇಂತಹ ಚರ್ಚೆಗಳಲ್ಲೇ ಸರ್ಕಾರದ ಅವಧಿ ಮುಗಿಯದಂತೆ ಮತ್ತು ಜನರ ಆಶೋತ್ತರಗಳನ್ನು ಈಡೇರಿಸುವಂತೆ ಕಾಂಗ್ರೆಸ್ ನಾಯಕರು ಗಮನ ಹರಿಸಬೇಕಿದೆ.

ಉತ್ತರದ ಭಾರತದ ರಾಜ್ಯಗಳಲ್ಲಿ ನೆಲಕಚ್ಚಿರುವ ಕಾಂಗ್ರೆಸ್‌ ಪಕ್ಷವು ದಕ್ಷಿಣದ ಎರಡು ರಾಜ್ಯಗಳಲ್ಲಿ ನೇರವಾಗಿ ಅಧಿಕಾರ ನಡೆಸುತ್ತಿದೆ. ಬಣ ರಾಜಕಾರಣವೇ ದೊಡ್ಡದಾಗಿ, ಇರುವ ಅಧಿಕಾರವನ್ನು ಕಳೆದುಕೊಂಡರೆ ಫ್ಯಾಸಿಸ್ಟ್ ಶಕ್ತಿಗಳಿಗೆ ಮತ್ತಷ್ಟು ಅವಕಾಶವನ್ನು ತೆರೆದಂತಾಗುತ್ತದೆ ಎಂಬ ಸೈದ್ಧಾಂತಿಕ ಎಚ್ಚರಿಕೆಯೂ ಕಾಂಗ್ರೆಸ್ ನಾಯಕರಿಗೆ ಬೇಕಾಗುತ್ತದೆ. ಅಧಿಕಾರ ಹಂಚಿಕೆಯೋ ಅಥವಾ ಯಥಾಸ್ಥಿತಿ ಮುಂದುವರಿಕೆಯೋ ಅದು ಆ ಪಕ್ಷದ ನಾಯಕರಿಗೆ, ಶಾಸಕರಿಗೆ ಬಿಟ್ಟ ವಿಚಾರ. ಆದರೆ ಇಂತಹ ಚರ್ಚೆಗಳಿಂದ ಜನತೆಯ ಮೇಲೆ ಆಗುವ ಅಡ್ಡಪರಿಣಾಮಗಳು ಮತ್ತು ದೀರ್ಘಕಾಲೀನ ದುರಂತಗಳನ್ನು ಗಂಭೀರವಾಗಿ ನೋಡಬೇಕಾಗುತ್ತದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....