ಈ ದಿನ ಸಂಪಾದಕೀಯ | ಸಂವಿಧಾನ ಸಮರ್ಪಣೆ- ಬಿಜೆಪಿ ಆಡುವುದೊಂದು, ಮಾಡುವುದು ಮತ್ತೊಂದು!

Date:

ಮೂರನೆಯ ಎರಡರಷ್ಟು ಬಹುಮತ ಬಂದಿದ್ದರೆ ಪ್ರಾಯಶಃ ಸಂವಿಧಾನ ತಿದ್ದುಪಡಿಯ ಸಂಘಪರಿವಾರದ ಬಹುಕಾಲದ ಬಯಕೆಯನ್ನು ಮೋಶಾ ಸರ್ಕಾರ ಈಡೇರಿಸುತ್ತಿತ್ತೋ ಏನೋ. ಆದರೆ ಮೂರನೆಯ ಸಲ ಗೆದ್ದಿರುವ ಮೋಶಾ ಸರ್ಕಾರ ಮೂರನೆಯ ಎರಡರಷ್ಟು ಬಹುಮತವನ್ನೇ ನಂಬಿ ಕುಳಿತಿಲ್ಲ. ಕಳೆದ ಹನ್ನೆರಡು ವರ್ಷಗಳಿಂದ ಸಂವಿಧಾನಕ್ಕೆ ಒಳಗಿನಿಂದಲೇ ಗೆದ್ದಲು ಹಿಡಿಸುವ ಹುನ್ನಾರಗಳನ್ನು ಹೆಣೆಯುತ್ತಲೇ ಬಂದಿದೆ.

ಸುಪ್ರೀಮ್ ಕೋರ್ಟು 1973ರಲ್ಲಿ ನೀಡಿದ ಕೇಶವಾನಂದ ಭಾರತಿ ತೀರ್ಪು ಸ್ವತಂತ್ರ ಭಾರತದ ಸಾಂವಿಧಾನಿಕ ಇತಿಹಾಸದ ಮಹತ್ತರ ಮೈಲಿಗಲ್ಲು. ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರ ಭಾರತದ ಸಂಸತ್ತಿಗೆ ಇದೆ, ಆದರೆ ಅದು ಅಪರಿಮಿತವಲ್ಲ. ಸಂವಿಧಾನದ ‘ಮೂಲ ರಚನೆ ಅಥವಾ ಮೂಲ ಸ್ವರೂಪ’ವನ್ನು ಅಥವಾ ಅಡಿಗಲ್ಲುಗಳ ಗುರುತು ಚಹರೆಗಳನ್ನು ಬದಲಾಯಿಸುವ ಅಧಿಕಾರ ಸಂಸತ್ತಿಗೆ ಇಲ್ಲ, ಅಂತಹ ತಿದ್ದುಪಡಿಗಳನ್ನು ತರುವಂತಿಲ್ಲ ಎಂದು ವಿಧಿಸಿತು. ತಂದರೆ ಊರ್ಜಿತ ಆಗುವುದಿಲ್ಲ ಎಂದು ಕಾಲ ಕಾಲಕ್ಕೆ ತೋರುತ್ತ ಬಂದಿದೆ.

ಆಳುವವರು ನಡೆಸಿದ ಹಲವು ಹಲ್ಲೆಗಳು-ಆಕ್ರಮಣಗಳಿಂದ ಸಂವಿಧಾನದ ಮೂಲರಚನೆಯನ್ನು ಕಾಪಾಡಿರುವ ತೀರ್ಪು ಇದು. 1975ರ ತುರ್ತುಪರಿಸ್ಥಿತಿ ಅವಧಿಯಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಸಂವಿಧಾನಕ್ಕೆ ತಂದ 39ನೆಯ ತಿದ್ದುಪಡಿ ಮೂಲರಚನೆಯ ಉಲ್ಲಂಘನೆ ಎನಿಸಿದ್ದು ಇದೇ ತೀರ್ಪಿನಿಂದ. 1976ರಲ್ಲಿ ಅವರು ತಂದ 42ನೆಯ ತಿದ್ದುಪಡಿಯನ್ನು ಅನೂರ್ಜಿತಗೊಳಿಸಿದ್ದು 1980ರ ಮಿನರ್ವ ಮಿಲ್ಸ್ ತೀರ್ಪು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಭಾರತ ಗಣರಾಜ್ಯಕ್ಕೆ ಇಪ್ಪತ್ತು ವರ್ಷಗಳಷ್ಟೇ ಸಂದಿರುತ್ತವೆ. ಕಾರ್ಯಾಂಗ ಮತ್ತು ನ್ಯಾಯಾಂಗದ ತಿಸ್ರ-ತಿಕ್ಕಾಟಗಳು ನಡೆದಿರುತ್ತವೆ. ಸುಪ್ರೀಂ ಕೋರ್ಟು ಈ ಕುರಿತ ಕೇಸುಗಳ ಸರಣಿಯನ್ನೇ ಆಲಿಸಿ ಸಂವಿಧಾನಕ್ಕೆ ತಿದ್ದುಪಡಿ ತರುವ ಸಂಸತ್ತಿನ ಅಧಿಕಾರ ಅನಿರ್ಬಂಧಿತ ಮತ್ತು ಅಪರಿಮಿತ ಎಂದು ನ್ಯಾಯ ನಿರ್ಣಯಗಳನ್ನು ನೀಡುತ್ತದೆ.

ಆದರೆ 1967ರ ಫೆಬ್ರವರಿಯಲ್ಲಿ ಗೋಲಕನಾಥ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್ ಮೊಕದ್ದಮೆಯಲ್ಲಿ ತಾನೇ ನೀಡಿದ್ದ ಇಂತಹ ಎಲ್ಲ ತೀರ್ಪುಗಳನ್ನು ಸುಪ್ರೀಮ್ ಕೋರ್ಟು ತಲೆಕೆಳಗು ಮಾಡುತ್ತದೆ. ಸಂವಿಧಾನ ಖಾತರಿಯಾಗಿ ನೀಡಿರುವ ಯಾವುದೇ ಮೂಲಭೂತ ಹಕ್ಕುಗಳಿಗೆ ಸಂಸತ್ತು ತಿದ್ದುಪಡಿ ತರುವಂತಿಲ್ಲ ಎಂದು ಸಾರುತ್ತದೆ.

ಈ ತೀರ್ಪಿಗೆ ಪ್ರತಿಕ್ರಿಯಿಸುವ ಇಂದಿರಾಗಾಂಧೀ ಪ್ರಧಾನಿಯಾಗಿದ್ದ ಕಾಲದ ಸಂಸತ್ತು, ಸಂವಿಧಾನದ ಯಾವುದೇ ಭಾಗಕ್ಕೆ ತಿದ್ದುಪಡಿ ತರುವ ಅಧಿಕಾರವನ್ನು ತನಗೆ ನೀಡಿಕೊಳ್ಳುವ ಸಂವಿಧಾನ ತಿದ್ದಪಡಿಯನ್ನು ಪಾಸು ಮಾಡಿಕೊಳ್ಳುತ್ತದೆ. ಈ ಅಧಿಕಾರವನ್ನು ಮರುವಿಮರ್ಶಿಸುವ ಅಧಿಕಾರ ನ್ಯಾಯಾಲಯಗಳಿಗೆ ಇಲ್ಲ ಎಂಬ ಅಂಶವನ್ನೂ ಈ ತಿದ್ದುಪಡಿ ಒಳಗೊಂಡಿರುತ್ತದೆ. ರಾಜಕೀಯವಾಗಿ ಸುಪ್ರೀಮ್ ಕೋರ್ಟಿಗಿಂತ ಸಂಸತ್ತೇ ಶ್ರೇಷ್ಠ ಎಂಬ ವ್ಯಾಜ್ಯವಿದು. ಭೂಸುಧಾರಣೆಯ ಕಾನೂನುಗಳು ಆಸ್ತಿಯ ಹಕ್ಕಿಗೆ ಸವಾಲೆಸೆದಿದ್ದ ದಿನಗಳು.

ಭೂಸುಧಾರಣೆ ಕಾಯ್ದೆಯ ಪ್ರಕಾರ ಕೇರಳ ಸರ್ಕಾರ 1970ರಲ್ಲಿ ಕಾಸರಗೋಡಿನ ಸನಿಹದ ಎಡನೀರು ಮಠಕ್ಕೆ ಸೇರಿದ ಆಸ್ತಿಪಾಸ್ತಿಗಳ ಸ್ವಾಧೀನ ಕುರಿತು ನೋಟೀಸು ಜಾರಿ ಮಾಡುತ್ತದೆ. ಎಡನೀರು ಮಠದ ಮುಖ್ಯಸ್ಥ ಕೇಶವಾನಂದ ಭಾರತಿಯವರು ಈ ಕ್ರಮವನ್ನು ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸುತ್ತಾರೆ. ಅಂದಿನ ಪ್ರಖ್ಯಾತ ನ್ಯಾಯವೇತ್ತ ನಾನಿ ಪಾಲ್ಖೀವಾಲ ಕೇಶವಾನಂದ ಭಾರತಿಯವರ ಪರವಾಗಿಯೂ ಮತ್ತೊಬ್ಬ ನ್ಯಾಯಕೋವಿದ ಎಚ್.ಎಂ.ಸೀರ್ವೈ ಕೇರಳ ಸರ್ಕಾರದ ಪರವಾಗಿ ವಾದಿಸುತ್ತಾರೆ.  ಆಸ್ತಿಯನ್ನು ಹೊಂದುವುದು ಸಾಂವಿಧಾನಿಕ ಮೂಲಭೂತ ಹಕ್ಕು ಹೌದೋ ಅಲ್ಲವೋ ಎಂಬುದು ಈ ಕೇಸಿನ ತಿರುಳು ಪ್ರಶ್ನೆಯಾಗಿರುತ್ತದೆ.

ಭಾರತದ ನ್ಯಾಯಾಂಗ ಚರಿತ್ರೆಯಲ್ಲೇ ಅತಿ ದೊಡ್ಡದು ಎನ್ನಲಾದ 13 ಮಂದಿ ನ್ಯಾಯಮೂರ್ತಿಗಳ ನ್ಯಾಯಪೀಠ ಈ ಕೇಸನ್ನು ಪರಾಂಬರಿಸುತ್ತದೆ. ನ್ಯಾಯಪೀಠದ ಏಳು ಮಂದಿ ನ್ಯಾಯಮೂರ್ತಿಗಳು ಒಂದೆಡೆ ಮತ್ತು ಆರು ಮಂದಿ ಮತ್ತೊಂದೆಡೆ ವಾಲಿದ ಅಪರೂಪದ ಮೊಕದ್ದಮೆ. ಮೂಲಭೂತ ಹಕ್ಕುಗಳ ಕುರಿತು 64 ದಿನಗಳ ಕಾಲ ವ್ಯಾಪಕ ವಾದ-ಪ್ರತಿವಾದಗಳು ನಡೆಯುತ್ತವೆ. ಸಂಸತ್ತು ಮತ್ತು ಸಂವಿಧಾನದ ನಡುವಣ ಸಂಬಂಧವನ್ನು ಮರುವ್ಯಾಖ್ಯೆ ಮಾಡಿದ ಚರಿತ್ರಾರ್ಹ ತೀರ್ಪು ಹೊರಬೀಳುತ್ತದೆ.

ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳನ್ನು, ಅದೇ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಮೂಲಕ ಮೊಟಕುಗೊಳಿಸಲು ಬರುವುದಿಲ್ಲ ಎಂದು ನ್ಯಾಯಪೀಠ ಬಹುಮತದ (ಏಳು ಮಂದಿ ನ್ಯಾಯಮೂರ್ತಿಗಳು) ತೀರ್ಪು ನೀಡುತ್ತದೆ. ಸಂವಿಧಾನಕ್ಕೆ ತಿದ್ದುಪಡಿ ತರುವ ವ್ಯಾಪಕ ಅಧಿಕಾರಗಳು ಸಂಸತ್ತಿಗೆ ಇದೆ ಎಂದು ಸಾರಿದ ಈ ಬಹುಮತದ ತೀರ್ಪು, ಈ ಅಧಿಕಾರಗಳಿಗೆ ಒಂದು ಮಿತಿಯ ಗೆರೆಯನ್ನೂ ಎಳೆಯುತ್ತದೆ. ಸಂವಿಧಾನದ ಕೆಲವು ಭಾಗಗಳು ಸಂವಿಧಾನಕ್ಕೆ ಯಾವ ಪರಿಯಲ್ಲಿ ಅಂತರ್ಗತವಾಗಿ ಹೋಗಿವೆಯೆಂದರೆ, ಸಂಸತ್ತು ಕೂಡ ಅವುಗಳನ್ನು ತಡವಲು ಬರುವುದಿಲ್ಲ ಎಂದು ಸಾರುತ್ತದೆ. ಆದರೆ ಆಸ್ತಿಯ ಹಕ್ಕು ಮೂಲಭೂತ ಅಲ್ಲವೆಂದು ಇಂದಿರಾಗಾಂಧೀ ಸರ್ಕಾರ ತಂದಿದ್ದ ತಿದ್ದುಪಡಿಯನ್ನು ಈ ತೀರ್ಪು ಎತ್ತಿ ಹಿಡಿಯುತ್ತದೆ. ಈ ತಿದ್ದುಪಡಿಯು ಸಂವಿಧಾನದ ಮೂಲರಚನೆಯನ್ನು ಉಲ್ಲಂಘಿಸಿಲ್ಲ ಎಂದು ಹೇಳುತ್ತದೆ. ಕೇಶವಾನಂದ ಭಾರತಿ ಸೋಲುತ್ತಾರೆ. ಆದರೆ ಇಂದಿರಾ ಸರ್ಕಾರ ಕೇಸನ್ನು ಗೆಲ್ಲುವುದೂ ಇಲ್ಲ.

ಆದರೆ ಇಂದಿರಾ ಸರ್ಕಾರ ಈ ಸೋಲನ್ನು ಸವಾಲೆಂದು ಬಗೆಯುತ್ತದೆ. ಈ ಬಹುಮತದ ತೀರ್ಪು ನೀಡಿದ್ದ ಏಳು ಮಂದಿಯಲ್ಲಿ ಮೂವರ ಜ್ಯೇಷ್ಠತೆಯನ್ನು ಪಕ್ಕಕ್ಕೆ ಸರಿಸಿ, ಕಿರಿಯರಾದ ಎ.ಎನ್.ರೇ ಅವರನ್ನು ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸುತ್ತದೆ. ಎ.ಎನ್.ರೇ ಅವರು ಕೇಶವಾನಂದ ಭಾರತಿ ಕೇಸಿನಲ್ಲಿ ಬಹುಮತದ ತೀರ್ಪಿನ ವಿರುದ್ಧ ಭಿನ್ನಮತದ ತೀರ್ಪನ್ನು ನೀಡಿದ್ದವರು. ಸಂವಿಧಾನಕ್ಕೆ ತಿದ್ದುಪಡಿ ತರುವ ಸಂಸತ್ತಿನ ಅಧಿಕಾರ ಅಪರಿಮಿತ ಎಂದು ಒಪ್ಪಿಕೊಂಡವರು.

ಆದರೆ ಕೇಶವಾನಂದ ಭಾರತಿ ಮೊಕದ್ದಮೆಯ ಬಹುಮತದ ತೀರ್ಪು ಸಂವಿಧಾನವನ್ನು ತಡವುವ ಕುಚೋದ್ಯಗಳಿಗೆ ಗಟ್ಟಿ ಗುರಾಣಿ ಕಟ್ಟಿಕೊಟ್ಟಿತು. ಸಂವಿಧಾನ ನಿರ್ಮಾತೃಗಳು ಆಧುನಿಕ ಪ್ರಜಾಪ್ರಭುತ್ವಕ್ಕೆ ಹಾಕಿ ಕೊಟ್ಟ ಅಡಿಪಾಯವನ್ನು ಮತ್ತಷ್ಟು ಬಲಿಷ್ಠಗೊಳಿಸಿತು.

ಸಂವಿಧಾನದ ಮೂಲರಚನೆ ಎಂಬ ತತ್ವದ ಮೂಲ ಎಲ್ಲಿಯದೆಂಬುದೇ ಒಂದು ಸ್ವಾರಸ್ಯಕರ ಸಂಗತಿ. ಸಂವಿಧಾನವನ್ನು ತಡವುವವರ ಬೇರುಗಳು ಸರ್ವಾಧಿಕಾರ ಮತ್ತು ಫ್ಯಾಸಿಸಮ್ಮಿನ ಮೂಲದಲ್ಲಿವೆ ಎಂಬುದನ್ನು ಅಡಿರೇಖೆ ಎಳೆದು ಮತ್ತೆ ಸಾಬೀತು ಮಾಡುವ ಸಂಗತಿಯಿದು.

ಹಿಟ್ಲರನ ನಾಜಿ ಆಳ್ವಿಕೆ ಪತನದ ನಂತರ ಜರ್ಮನಿಯ ಸಂವಿಧಾನಕ್ಕೆ ತಿದ್ದುಪಡಿ ತರಲಾಗುತ್ತದೆ. ಕೆಲವು ಮೂಲ ಕಾನೂನುಗಳನ್ನು ರಕ್ಷಿಸುವುದು ಈ ತಿದ್ದುಪಡಿಯ ಉದ್ದೇಶವಾಗಿರುತ್ತದೆ. ಜರ್ಮನಿಯ ಮೂಲ ಸಂವಿಧಾನವು ಮೂರನೆಯ ಎರಡರಷ್ಟು ಬಹುಮತವಿದ್ದರೆ ಸಂವಿಧಾನಕ್ಕೆ ತಿದ್ದುಪಡಿ ತರುವ ಅಧಿಕಾರವನ್ನು ಸಂಸತ್ತಿಗೆ ನೀಡಿರುತ್ತದೆ. ಈ ಅಂಶವನ್ನು ಹಿಟ್ಲರ್ ದುರುಪಯೋಗ ಮಾಡಿಕೊಂಡು ತೀವ್ರಗಾಮಿ ಬದಲಾವಣೆಗಳನ್ನು ಮಾಡುತ್ತಾನೆ. ಈ ಕಹಿ ಅನುಭವದಿಂದ ಪಾಠ ಕಲಿತ ಜರ್ಮನಿ ಕೆಲವು ಕಾಯ್ದೆ ಕಾನೂನುಗಳಿಗೆ ತಿದ್ದುಪಡಿ ತರಕೂಡದೆಂದೂ ಅವು ಸಂವಿಧಾನದ ಮೂಲರಚನೆಯ ಭಾಗವೆಂದೂ ಸಾರುತ್ತದೆ.

ಸಂಸತ್ತು ಪಾಸು ಮಾಡಿದ ಎಲ್ಲ ಕಾಯ್ದೆ ಕಾನೂನುಗಳ ನ್ಯಾಯಾಂಗ ವಿಮರ್ಶೆಯ ಅಡಿಗಲ್ಲು ಭಾರತ ಸಂವಿಧಾನದ ಮೂಲರಚನೆಯೇ ಆಗಿದೆ. ಈ ಮೂಲರಚನೆಯನ್ನು ಯಾವ ಕಾಯ್ದೆ ಕಾನೂನು ಕೂಡ ಅಲ್ಲಾಡಿಸುವುದು ಸಾಧ್ಯವಿಲ್ಲ.

ಈ ಅಂಶಗಳಲ್ಲಿ ಕೆಲವಕ್ಕೆ ಕಾಲಕಾಲಕ್ಕೆ ಧಕ್ಕೆ ಒದಗಿದೆ. ಆದರೆ ಕಳೆದ 10-12 ವರ್ಷಗಳಲ್ಲಿ ಹಲವಕ್ಕೆ ಏಟು ಬಿದ್ದಿದೆ. ಈ ಏಟುಗಳಲ್ಲಿ ಬಹುಪಾಲು ಒಳ ಏಟುಗಳು. ಹೊರಗೆ ಕಾಣಿಸಿಕೊಳ್ಳದೆ ಒಳಗೇ ಗೆದ್ದಲು ಹಿಡಿಸಿ ಬಲಹೀನಗೊಳಿಸುವ ಪರೋಕ್ಷ ಹುನ್ನಾರಗಳು. ರೂಪವನ್ನು ಮಾತ್ರ ಒಪ್ಪಿ ತಲೆಯ ಮೇಲಿಟ್ಟು ಮರೆಸಿದಂತೆ ನಟಿಸಿ, ಸಾರವನ್ನು ಗಾಳಿಗೆ ತೂರುವ ಕಪಟ ಜರುಗಿದೆ. ಈ ಕಪಟ ನಟನೆ ಹುನ್ನಾರಗಳಿಂದ ಯಾವ ಬಹುಜನರ ಹಿತಗಳ ಬುಡಕ್ಕೆ ಕೊಡಲಿ ಬೀಳುವುದೋ, ಆ ಬಹುಜನರಿಗೆ ಮಾಯೆಯ ಮಂಕುಬೂದಿ ಎರಚಿ, ಹುಸಿ ದೇಶಭಕ್ತಿ, ಅಪ್ಪಟ ದ್ವೇಷ, ದಯೆಯಿಲ್ಲದ ಧರ್ಮದ ಜಾಲದಲ್ಲಿ ಮೈಮರೆಯಿಸಲಾಗುತ್ತಿದೆ. ಈ ಬಹುಜನರ ‘ದೇಹಕ್ಕೆ ಬಿದ್ದಿರುವ ಮರ್ಮಾಘಾತ ಪೆಟ್ಟುಗಳನ್ನು, ಅವರ ಮಿದುಳಿಗೆ ತಿಳಿಯದಂತೆ’ ತಡೆಯಲಾಗಿದೆ. ತಾವು ಕಳೆದುಕೊಂಡಿದ್ದೇನು ಮತ್ತು ಗಳಿಸಿಕೊಂಡಿದ್ದೇನು ಎಂಬುದು ಈಗ ತಿಳಿಯದಾಗಿದೆ. ಗಳಿಸಿಕೊಂಡಿದ್ದೇನಿಲ್ಲ, ಕಳೆದುಕೊಂಡದ್ದೇ ಎಲ್ಲ ಎಂದು ತಿಳಿಯುವ ಹೊತ್ತಿಗೆ ಬಹಳ ತಡವಾಗಿಹೋಗಬಹುದು. ಇದು ಅತ್ಯಂತ ಆಘಾತಕಾರಿ ಮತ್ತು ಕಳವಳಕಾರಿ ಸಂಗತಿ.

ಇಂದಿನ ‘ಸರ್ವಾಧಿಕಾರಿ-ಫ್ಯಾಸಿಸ್ಟ್’ ಮೋ-ಶಾ ಆಳ್ವಿಕೆಗೆ ಒಂದು ಅನುಕೂಲವಿದೆ. ಅದೆಂದರೆ ಈ ಹಿಂದಿನ ತಮ್ಮ  ‘ಸರ್ವಾಧಿಕಾರಿ ಅಧ್ಯಾಯ’ದಲ್ಲಿ ಇಂದಿರಾಗಾಂಧೀ ಅವರು ಎಡವಿದ್ದೆಲ್ಲಿ ಎಂಬ ಪೂರ್ವನಿದರ್ಶನದ ಅನುಕೂಲ. ಈ ಅನುಕೂಲದಿಂದ ಪಾಠ ಕಲಿತಿರುವ ಹಾಲಿ ಆಡಳಿತ ಸಂವಿಧಾನಕ್ಕೆ ನೇರ ತಿದ್ದುಪಡಿ ತರುವ ಸಾಹಸಕ್ಕೆ ಕೈ ಹಾಕಿಲ್ಲ. ತಿದ್ದುಪಡಿ ತರಬೇಕೆಂದರೂ ಮೂರನೆಯ ಎರಡರಷ್ಟು ಬಹುಮತ ಈ ಸರ್ಕಾರಕ್ಕೆ ಇಲ್ಲ. ‘ಅಬ್ ಕೀ ಬಾರ್, ಚಾರ್ ಸೌ ಪಾರ್’ ಘೋಷಣೆ 2024ರ ಲೋಕಸಭಾ ಚುನಾವಣೆಯಲ್ಲಿ ಇನ್ನಿಲ್ಲದಂತೆ ಮಣ್ಣು ಮುಕ್ಕಿತು. 400 ಸೀಟುಗಳಿರಲಿ, ಬಿಜೆಪಿಗೆ 272ರ ಸರಳ ಬಹುಮತವೂ ದಕ್ಕದೆ, ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಎಂಬ ಊರುಗೋಲುಗಳನ್ನು ಹಿಡಿದು ಸರ್ಕಾರ ರಚಿಸಬೇಕಾಯಿತು.

ಮೂರನೆಯ ಎರಡರಷ್ಟು ಬಹುಮತ ಬಂದಿದ್ದರೆ ಪ್ರಾಯಶಃ ಸಂವಿಧಾನ ತಿದ್ದುಪಡಿಯ ಸಂಘಪರಿವಾರದ ಬಹುಕಾಲದ ಬಯಕೆಯನ್ನು ಮೋಶಾ ಸರ್ಕಾರ ಈಡೇರಿಸುತ್ತಿತ್ತೋ ಏನೋ. ಆದರೆ ಮೂರನೆಯ ಸಲ ಗೆದ್ದಿರುವ ಮೋಶಾ ಸರ್ಕಾರ ಮೂರನೆಯ ಎರಡರಷ್ಟು ಬಹುಮತವನ್ನೇ ನಂಬಿ ಕುಳಿತಿಲ್ಲ. ಕಳೆದ ಹನ್ನೆರಡು ವರ್ಷಗಳಿಂದ ಸಂವಿಧಾನಕ್ಕೆ ಒಳಗಿನಿಂದಲೇ ಗೆದ್ದಲು ಹಿಡಿಸುವ ಹುನ್ನಾರಗಳನ್ನು ಹೆಣೆಯುತ್ತಲೇ ಬಂದಿದೆ.

ಸಂವಿಧಾನದ ಮೂಲರಚನೆಯ ಬಹುಮುಖ್ಯ ಅಂಶಗಳೆಂದರೆ- ಸಂವಿಧಾನದ ಪಾರಮ್ಯ, ಸರ್ಕಾರದ ಸಾರ್ವಭೌಮ ಮತ್ತು ಜನತಾಂತ್ರಿಕ ಸ್ವರೂಪ, ಸಂವಿಧಾನದ ಜಾತ್ಯತೀತ ಗುಣ, ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ  ಅಧಿಕಾರಗಳನ್ನು ಪ್ರತ್ಯೇಕವಾಗಿ ನಿಗದಿ ಮಾಡಲಾಗಿದ್ದು, ಈ ಅಧಿಕಾರ ಹಂಚಿಕೆಯನ್ನು ಉಲ್ಲಂಘಿಸದಿರುವುದು, ಸಂವಿಧಾನದ ಒಕ್ಕೂಟ ಸ್ವರೂಪ, ಆಡಳಿತವು ಕಾನೂನು ಪ್ರಕಾರವೇ ನಡೆಯತಕ್ಕದ್ದು, ನ್ಯಾಯಾಂಗ ವಿಮರ್ಶೆ, ನ್ಯಾಯಾಂಗದ ಸ್ವಾತಂತ್ರ್ಯ, ವ್ಯಕ್ತಿಗತ ಘನತೆ, ದೇಶದ ಏಕತೆ ಮತ್ತು ಸಮಗ್ರತೆ, ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ಹಾಗೂ ಸಮಾನತೆ.

ಮೂಲರಚನೆಯ ಈ ಮುಖ್ಯ ಅಂಶಗಳನ್ನು ಒಂದೊಂದಾಗಿ ಗಮನಿಸಿ ಪರಿಶೀಲಿಸಿದರೆ ಈ ಹುನ್ನಾರಗಳು ಯಾವುವು ಮತ್ತು ಅವುಗಳನ್ನು ಹೇಗೆ ಜಾರಿಗೊಳಿಸಲಾಗುತ್ತಿದೆ ಎಂಬುದು ಅಂಧ ಭಕ್ತಿಯ ಹಳ್ಳಕ್ಕೆ ಬೀಳದಿರುವ ಸಜ್ಜನಶಕ್ತಿಗೆ ಹೊಳೆದೇ ಹೊಳೆಯುತ್ತದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....