ಈ ದಿನ ಸಂಪಾದಕೀಯ | ಮಾಧ್ಯಮಗಳ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಸಿಟ್ಟಿಗೆದ್ದದ್ದು ಏಕೆ?

Date:

ಡಿ.ಕೆ. ಶಿವಕುಮಾರ್ ಅವರ ಆಕ್ರೋಶವು ಮಾಧ್ಯಮಗಳ ಮೇಲಿನ ಅಸಹನೆಯನ್ನು ಮಾತ್ರ ಪ್ರತಿಬಿಂಬಿಸುವುದಿಲ್ಲ, ಈ ಮಾಧ್ಯಮಗಳ ನೈತಿಕತೆಯನ್ನೂ ಪ್ರಶ್ನಿಸುತ್ತದೆ. ಮಾಧ್ಯಮಗಳು ಕಾವಲುನಾಯಿಯೋ ಅಥವಾ ಸಾಕು ನಾಯಿಯೋ ಎಂಬ ಅನುಮಾನವನ್ನೂ ಹುಟ್ಟಿಸುತ್ತಿವೆ.

ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳಿಗೆ ವಿಶಿಷ್ಟ ಸ್ಥಾನವಿದೆ. ಪ್ರಜಾಪ್ರಭುತ್ವದ ಕಾವಲುನಾಯಿ, ನಾಲ್ಕನೇ ಸ್ತಂಭ ಎಂದೆಲ್ಲ ಮಾಧ್ಯಮಗಳನ್ನು ಬಣ್ಣಿಸಲಾಗಿದೆ. ಭಾರತದ ಮಟ್ಟಿಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಮತ್ತು ಸ್ವಾತಂತ್ರ್ಯಾ ನಂತರದಲ್ಲಿ ಹಾಗೂ ತುರ್ತುಪರಿಸ್ಥಿತಿಯ ಕಾಲದಲ್ಲಿಯೂ ಪತ್ರಿಕೆಗಳು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿವೆ. ನಾಲ್ಕನೇ ಸ್ತಂಭವಾಗಿ ಮೆರೆದಿವೆ. ಆದರೆ, ಈಗ ಮಾಧ್ಯಮಗಳೆಂದರೆ ಪ್ರಜಾಪ್ರಭುತ್ವದ ಕಾವಲುನಾಯಿಗಳಲ್ಲ, ಆಳುವವರ ಸಾಕು ನಾಯಿಗಳು ಎಂಬ ಅಪಹಾಸ್ಯಕ್ಕೆ ಗುರಿಯಾಗಿವೆ.

ಕರ್ನಾಟಕದಲ್ಲಂತೂ ಮಾಧ್ಯಮಗಳು ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಿಯೇ ತೀರಬೇಕೆಂಬ ಧಾವಂತಕ್ಕೆ ಬಿದ್ದಂತೆ ವರ್ತಿಸುತ್ತಿವೆ. 2023ರಲ್ಲಿ, ಕಾಂಗ್ರೆಸ್‌ ಅಭೂತಪೂರ್ವ ಗೆಲುವಿನೊಂದಿಗೆ 136 ಸ್ಥಾನಗಳನ್ನು ಪಡೆದು, ಸುಭದ್ರ ಸರ್ಕಾರವನ್ನು ರಚಿಸಿತು. ಆದರೂ, ಅಂದಿನಿಂದ ಇಂದಿನವರೆಗೂ ಮಾಧ್ಯಮಗಳು ಮಾತ್ರ ಸರ್ಕಾರದ ಭದ್ರತೆಗಿಂತಲೂ, ಪತನದ ಬಗ್ಗೆಯೇ ಮಾತನಾಡುತ್ತಿವೆ. ಜನ ಮಾನಸದಲ್ಲಿ ಸರ್ಕಾರವು ಅಭದ್ರವಾಗಿದೆ ಎಂಬ ಭ್ರಾಂತಿಯನ್ನು ಹುಟ್ಟುಹಾಕಲು ಹವಣಿಸುತ್ತಿವೆ. ಸುಳ್ಳು-ನಕಲಿ-ತಪ್ಪು ಹೂರಣಗಳನ್ನು ಬಿತ್ತರಿಸುತ್ತಿವೆ.

ಈಗ ‘ನವೆಂಬರ್ ಕ್ರಾಂತಿ’ ಎಂಬ ಪದವನ್ನು ಕಾಂಗ್ರೆಸ್‌ ನಾಯಕರ ಬಾಯಿಯಿಂದ ಉದುರಿಸಿ, ಆ ಪದವನ್ನೇ ಇಟ್ಟುಕೊಂಡು ದಿನ ಬೆಳಗಾದರೆ, ‘ನವೆಂಬರ್ ಕ್ರಾಂತಿ’– ಇಂದು, ನಾಳೆ, ನಾಳಿದ್ದು ಎಂದು ಬೊಬ್ಬೆಹೊಡೆಯುತ್ತಿವೆ. ಮಾಧ್ಯಮಗಳ ವರ್ತನೆಯಿಂದ ಬೇಸತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಡೆಗೂ ಸುದ್ದಿವಾಹಿನಿಗಳ ವಿರುದ್ಧ ಹರಿಹಾಯ್ದಿದ್ದಾರೆ. ತಮ್ಮೊಳಗಿನ ಆಕ್ರೋಶವನ್ನು ಹೊರಹಾಕಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಭಾನುವಾರ, ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡ ಡಿ.ಕೆ ಶಿವಕುಮಾರ್, “ಸುದ್ದಿ ಪ್ರಕಟಿಸುವ ಬದಲು ನಾಯಕರ ನಡುವೆ ವಿವಾದ ಸೃಷ್ಟಿಸುತ್ತಿದ್ದೀರಿ. ಮನೆ ಹಾಳು ಕೆಲಸ ಮಾಡುತ್ತಿದ್ದೀರಿ. ಪತ್ರಕರ್ತರ ವೃತ್ತಿಪರತೆಯನ್ನು ಕಳೆದುಕೊಂಡಿದ್ದೀರಿ. ಏನಾದ್ರು ಹೆಚ್ಚು-ಕಮ್ಮಿ ಮಾಡಿದರೆ, ನಾನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಿಮ್ಮ ಬೆನ್ನತ್ತುತ್ತೇನೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಡಿ.ಕೆ. ಶಿವಕುಮಾರ್ ಆಕ್ರೋಶಗೊಳ್ಳುವ ಪ್ರಮೇಯ ಬಂದದ್ದು, ಪತ್ರಕರ್ತರು ತಮ್ಮದೇ ಅಭಿಪ್ರಾಯವನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಬಾಯಿಗೆ ಹಾಕಲು ಯತ್ನಿಸಿದ್ದರಿಂದ. ‘ಡಿ.ಕೆ ಶಿವಕುಮಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು’ ಎಂದು ಪತ್ರಕರ್ತರು ಡಿ.ಕೆ. ಶಿವಕುಮಾರ್ ಅವರ ಬಾಯಿಗೆ ಮೈಕ್ ಹಿಡಿದರು. ಕುಮಾರಸ್ವಾಮಿ ಅವರು ಅಂತಹ ಹೇಳಿಕೆ ನೀಡಿಲ್ಲ ಎಂಬುದನ್ನು ಅರಿತಿದ್ದ ಶಿವಕುಮಾರ್, ಪತ್ರಕರ್ತರನ್ನು ಜಾಡಿಸಿದರು.

ಇಂತಹ ಪ್ರಮೇಯಗಳು, ಸನ್ನಿವೇಶಗಳು ನಡೆದಿರುವುದು ಇದೇ ಮೊದಲೇನೂ ಅಲ್ಲ. ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮಾಧ್ಯಮಗಳು ‘ಬಿಜೆಪಿ ಐಟಿ ಸೆಲ್‌’ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಬಿಜೆಪಿ ಐಟಿ ಸೆಲ್ ಸೃಷ್ಟಿಸುವ ನಕಲಿ ಸುದ್ದಿಗಳನ್ನೇ ಅಸಲಿ ಸುದ್ದಿಯೆಂದು ಬಿತ್ತರಿಸಿ, ಚರ್ಚಿಸುತ್ತಲೇ ‘ಹಾಗಂತೆ-ಹೀಗಂತೆ’ ಎಂದೆಲ್ಲ ಬಣ್ಣಿಸುತ್ತ, ಕಾಂಗ್ರೆಸ್ ಸಚಿವರ-ಶಾಸಕರ ಸರಬರ ಓಡಾಟವನ್ನು ತೋರಿಸುತ್ತ ಬೊಬ್ಬೆ ಹೊಡೆಯುತ್ತಿವೆ.

ಈ ಹಿಂದೆ, ಜುಲೈನಲ್ಲಿ ನಡೆದ ಮಳೆಗಾಲದ ಅಧಿವೇಶನದಲ್ಲಿ ಡಿ.ಕೆ. ಶಿವಕುಮಾರ್ ‘ಆರ್‌ಎಸ್‌ಎಸ್‌ ಗೀತೆ’ಯನ್ನು ಹಾಡಿದ್ದರು. ಅದಕ್ಕಾಗಿ, ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿದೆ ಎಂದು ಆಗಸ್ಟ್‌ 27ರಂದು ಜೆಡಿಎಸ್‌ ‘ಎಕ್ಸ್‌’ನಲ್ಲಿ ನಕಲಿ ಪೋಸ್ಟರ್ ಹಂಚಿಕೊಂಡಿತ್ತು. ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸದೆ, ಮಾಧ್ಯಮಗಳು ಆ ಪೋಸ್ಟರ್ ಇಟ್ಟುಕೊಂಡು ಭಾರೀ ಸುದ್ದಿ ಬಿತ್ತರಿಸಿದ್ದವು.

ಆ ನಂತರ, ಅಕ್ಟೋಬರ್ 11ರಂದು ಲಾಲ್‌ಬಾಗ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ನಮ್ಮ ಬೆಂಬಲಿಗರೊಬ್ಬರು ನಾನು ಸಿಎಂ ಆಗುವ ಕಾಲ ಬಂದಿದೆ ಎನ್ನುತ್ತಿದ್ದಾರೆ. ಅವರ ಅಭಿಲಾಷೆಯದು’ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು. ಆದರೆ, ಅವರ ಮಾತನ್ನು ತುಂಡರಿಸಿ, ‘ನಾನು ಸಿಎಂ ಆಗುವ ಕಾಲ ಬಂದಿದೆ’ ಎಂದು ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರೆಂದು ಇದೇ ಸುದ್ದಿವಾಹಿನಿಗಳು ಗಂಟಲು ಕಿತ್ತುಕೊಂಡಿದ್ದವು. ಹೇಳಿಕೆಯನ್ನು ತಿರುಚಿದ ಮಾಧ್ಯಮಗಳ ವಿರುದ್ಧ ಮಾನಹಾನಿ ಕೇಸ್ ದಾಖಲಿಸುವುದಾಗಿ ಶಿವಕುಮಾರ್ ಎಚ್ಚರಿಕೆ ಕೊಟ್ಟಿದ್ದರು.

ಈಗ, ನವೆಂಬರ್ ಕ್ರಾಂತಿ, ಸಂಪುಟ ಪುನಾರಚನೆ, ಅಧಿಕಾರ ಹಸ್ತಾಂತರ, ನಾಯಕತ್ವ ಬದಲಾವಣೆ, ಡಿ.ಕೆ. ಶಿವಕುಮಾರ್ ಕಾಂಗ್ರೆಸ್‌ ತೊರೆಯುತ್ತಾರೆ, ಅಮಿತ್ ಶಾ ಭೇಟಿ ಮಾಡಿದ್ದಾರೆ, ಬಿಜೆಪಿ ಸೇರುತ್ತಾರೆ ಎಂಬಿತ್ಯಾದಿ ಕಪೋಲಕಲ್ಪಿತ ವಿಚಾರಗಳನ್ನು ಸೃಷ್ಟಿಸಿ, ಸರ್ಕಾರದ ವಿರುದ್ಧ ನಿರಂತರ ಸುದ್ದಿ ಮಾಡುತ್ತಲೇ ಇವೆ.

ಈ ಲೇಖನ ಓದಿದ್ದೀರಾ?:ಬಿಹಾರ ಫಲಿತಾಂಶ ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಪಾಠವಾಗಲಿದೆಯೇ?

ಹಾಗೆ ನೋಡಿದರೆ, ಅಧಿಕಾರ ಹಸ್ತಾಂತರ ಅಥವಾ ನಾಯಕತ್ವ ಬದಲಾವಣೆ ವಿಚಾರವನ್ನು ಸೃಷ್ಟಿಸಿದ್ದೇ ಈ ಮಾಧ್ಯಮಗಳು. ತಮ್ಮ ಅಭಿಪ್ರಾಯವನ್ನು ಪಕ್ಷದ ನಾಯಕರೊಬ್ಬರ ಬಾಯಿಗೆ ಮೈಕ್‌ ಹಿಡಿದು, ಪ್ರಶ್ನಿಸುವುದು, ಅವರ ಉತ್ತರವನ್ನು ದಾಳವಾಗಿ ಬಳಸಿಕೊಂಡು ಮತ್ತೊಂದಷ್ಟು ನಾಯಕರ ಬಾಯಿಗೆ ಬೈಕ್ ಹಿಡಿಯುವುದು, ಇಲ್ಲದ ವಿಚಾರದಲ್ಲಿ ವಿವಾದ ಸೃಷ್ಟಿಸಿ ಇಡೀ ಪಕ್ಷವೇ ಆ ವಿಚಾರದ ಬಗ್ಗೆ ಹೇಳಿಕೆ-ಪ್ರತಿಹೇಳಿಕೆಗಳಲ್ಲಿ ಮುಳುಗುವಂತೆ ಮಾಡುವುದು– ಇದೇ ಇಂದಿನ ಮಾಧ್ಯಮಗಳು ಛಾಳಿಯಾಗಿಬಿಟ್ಟಿದೆ.

ರಾಜಕೀಯ ಕ್ಷೇತ್ರದಲ್ಲಿ ನಕಲಿ ಸುದ್ದಿಗಳಿಗೆ ಹೆಚ್ಚು ಸ್ಪಷ್ಟತೆ ಸಿಗುವುದಿಲ್ಲ. ಯಾಕೆಂದರೆ, ಅಂತಹ ಸುದ್ದಿಗಳಿಗೆ ಪ್ರಶ್ನಾರ್ಥಕ ಚಿಹ್ನೆ ಹಾಕಿ, ಸುದ್ದಿ ಮಾಡಿದರೆ, ಅದೊಂದು ಸಂದೇಹದಂತೆ ವ್ಯಕ್ತವಾಗುತ್ತದೆ. ಆ ಬಗ್ಗೆ ರಾಜಕೀಯ ನಾಯಕರು ಹೆಚ್ಚು ಪ್ರಶ್ನಿಸಲು ಹೋಗುವುದಿಲ್ಲ. ಇದು ಮಾಧ್ಯಮಗಳಿಗೆ, ವರಪ್ರಸಾದ. ಹಾಗಾಗಿ, ತಮ್ಮ ತಲೆಯಲ್ಲಿ ಮೂಡುವ ವಿಚಾರಕ್ಕೆ ಸುದ್ದಿಯ ರೂಪಕೊಡುವುದು, ಅದಕ್ಕೆ ಪ್ರಶ್ನಾರ್ಥಕ ಚಿಹ್ನೆ ಹಾಕುವುದು, ಅದೇ ಸತ್ಯವೆಂಬಂತೆ ತಮ್ಮಲ್ಲಿರುವ ಕಸವನ್ನೆಲ್ಲ ಆ ಸುದ್ದಿಯೊಳಗೆ ಸುರಿಯುವುದು, ಚರ್ಚೆಗೆ ತರುವುದು, ನಿಜವಿಚಾರವನ್ನು ಮರೆಮಾಚುವುದು ಮಾಧ್ಯಮಗಳಿಗೆ ಹೆಚ್ಚು ರುಚಿಸುತ್ತದೆ. ಇದನ್ನೇ ಕರ್ನಾಟಕದಲ್ಲಿ ಬಹುತೇಕ ಮಾಧ್ಯಮಗಳು ಮಾಡುತ್ತಿವೆ. ‘ಬಿಜೆಪಿಯ ಮಡಿಲ ಮಾಧ್ಯಮಗಳು’ ಎಂಬ ಹಣೆಪಟ್ಟಿ ಕಟ್ಟಿಕೊಂಡಿವೆ.

ಆದ್ದರಿಂದಲೇ, ಕಾಂಗ್ರೆಸ್‌ ಹಿರಿಯ ನಾಯಕ ರಣದೀಪ್ ಸುರ್ಜೇವಾಲಾ ಅವರೂ ಕೂಡ ನವೆಂಬರ್ 21ರಂದು ‘ಕೆಲವು ಮಾಧ್ಯಮಗಳು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ದುರ್ಬಲಗೊಳಿಸಲು ಯತ್ನಿಸುತ್ತಿವೆ. ಅಭಿಯಾನ ನಡೆಸುತ್ತಿವೆ’ ಎಂದು ಆರೋಪಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರ ಆಕ್ರೋಶವು ಮಾಧ್ಯಮಗಳ ಮೇಲಿನ ಅಸಹನೆಯನ್ನು ಮಾತ್ರ ಪ್ರತಿಬಿಂಬಿಸುವುದಿಲ್ಲ, ಈ ಮಾಧ್ಯಮಗಳ ನೈತಿಕತೆಯನ್ನೂ ಪ್ರಶ್ನಿಸುತ್ತದೆ. ಮಾಧ್ಯಮಗಳು ಸರ್ಕಾರದ ತಪ್ಪನ್ನು ಪ್ರಶ್ನಿಸುವ ಕಾವಲುನಾಯಿಯೋ ಅಥವಾ ಸರ್ಕಾರ ಉರುಳಿಸಲು ನಿಂತವರ ಸಾಕು ನಾಯಿಯೋ ಎಂಬ ಅನುಮಾನವನ್ನೂ ಹುಟ್ಟಿಸುತ್ತಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....