ಈ ದಿನ ಸಂಪಾದಕೀಯ | ಗಂಡಿಗೊಂದು ಅಳತೆಗೋಲು, ಹೆಣ್ಣಿಗೆ ಮತ್ತೊಂದೇ?

Date:

ಪ್ರಕರಣದ ನಂತರ ಯಥಾಪ್ರಕಾರ ಪುರುಷಾಧಿಪತ್ಯದ ಸಮಾಜ, ಬಲಿಪಶುವನ್ನೇ ಕಟಕಟೆಯಲ್ಲಿ ನಿಲ್ಲಿಸಿತ್ತು. ರಾತ್ರಿ ಏಳರ ನಂತರ ಪ್ರಯಾಣ ಮಾಡಿದ್ದು ಯಾಕೆಂದು ಪ್ರಶ್ನಿಸಿತ್ತು. ಆಕೆಯ ನೈತಿಕತೆಯನ್ನು ಪ್ರಶ್ನಿಸಿತ್ತು. ರಾಶಿ ಬೈಗುಳ ಸುರಿಸಿತ್ತು. ಆಕೆ ಹೇಳಿರುವುದು ಕಟ್ಟುಕತೆ ಎಂದು ಅಲ್ಲಗಳೆದಿತ್ತು.

ಪ್ರಮುಖ ಚಿತ್ರನಟಿಯೊಬ್ಬರ ಅಪಹರಣ ಮತ್ತು ರೇಪ್ ಪ್ರಕರಣದ ಆಪಾದಿತನಾಗಿದ್ದ ಸ್ಟಾರ್ ನಟ ದಿಲೀಪ್ ದೋಷಮುಕ್ತ ಎಂದು ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಈ ಅನ್ಯಾಯವನ್ನು ವಿರೋಧಿಸಿದ್ದವರ ಪಾಲಿಗೆ ನ್ಯಾಯಾಲಯದ ತೀರ್ಪು ಆಘಾತಕಾರಿ ಮತ್ತು ಯಾತನಾಮಯ.

ಆಪಾದಿತ ದಿಲೀಪ್ ದೋಷಮುಕ್ತ ಎಂದು ಸಾರಿರುವುದು ತಾಂತ್ರಿಕ ಅಂಶಗಳ ಆಧಾರದ ಮೇಲೆ ಎಂಬುದನ್ನು ಗಮನಿಸಬೇಕಿದೆ. ಆಪಾದಿತನನ್ನು ತಪ್ಪಿತಸ್ಥ ಎಂದು ನ್ಯಾಯಾಲಯದ ಮುಂದೆ ಸಾಬೀತುಪಡಿಸಲು ಮತ್ತು ಅಪಹರಣ ಹಾಗೂ ಅತ್ಯಾಚಾರದ ಪಿತೂರಿಗೂ ದಿಲೀಪ್‌ಗೂ ಸಂಬಂಧವಿತ್ತೆಂದು ನಿರ್ಣಾಯಕವಾಗಿ ಸಾಧಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದೂ ತೀರ್ಪಿನಲ್ಲಿ ಹೇಳಲಾಗಿದೆ.

ನಟಿಯ ಮೇಲೆ ಸೇಡು ತೀರಿಸಿಕೊಳ್ಳಲು ದಿಲೀಪ್ ಹೆಣೆದು ಕಾರ್ಯರೂಪಕ್ಕಿಳಿಸಿದ್ದೇ ಅಲ್ಲದೆ, ಹಣಕಾಸನ್ನು ಒದಗಿಸಿದ್ದಾಗಿ ಸರ್ಕಾರಿ ವಕೀಲರು ವಾದಿಸಿದ್ದರು. ಈ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿಲ್ಲ. ಕೇರಳದ ಗಡಿಯಾಚೆಗೆ ದೇಶಾದ್ಯಂತ ಪ್ರತಿಧ್ವನಿಸಿದ್ದ ಪ್ರಕರಣವಿದು. ಈ ಪ್ರಕರಣದ ಉಳಿದ ಆರು ಮಂದಿ ಆಪಾದಿತರು ತಪ್ಪಿತಸ್ಥರೆಂದು ನ್ಯಾಯಾಲಯ ಹೇಳಿದ್ದು, ಶಿಕ್ಷೆಯ ಪ್ರಮಾಣ ಗುರುವಾರದಂದು (ಡಿ.12) ಪ್ರಕಟವಾಗಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತ್ರಿಶೂರ್‌ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದಾಗ ಅಭಿನೇತ್ರಿಯ ಅಪಹರಣವಾಗಿತ್ತು. ಅಪಹರಣ ಮಾಡಿದ ಹಲ್ಲೆಕೋರರು ತಮ್ಮ  ಹೀನಕೃತ್ಯದ ವಿಡಿಯೋ ರೆಕಾರ್ಡ್ ಮಾಡಿದ್ದರು. ‘ಬ್ಲ್ಯಾಕ್ ಮೇಲ್’ ಮಾಡುವುದು ಅವರ ಉದ್ದೇಶ ಆಗಿದ್ದಿರಬಹುದು. ನಾನು ನರಕ ಅನುಭವಿಸಿ ವಾಪಸು ಬಂದಿದ್ದೇನೆ ಎಂದು 2022ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ನಟಿ ತಮ್ಮ ಮನೋಯಾತನೆಯನ್ನು ತೋಡಿಕೊಂಡಿದ್ದರು.

ಪ್ರಕರಣದ ನಂತರ ಯಥಾಪ್ರಕಾರ ಪುರುಷಾಧಿಪತ್ಯದ ಸಮಾಜ, ಬಲಿಪಶುವನ್ನೇ ಕಟಕಟೆಯಲ್ಲಿ ನಿಲ್ಲಿಸಿತ್ತು. ರಾತ್ರಿ ಏಳರ ನಂತರ ಪ್ರಯಾಣ ಮಾಡಿದ್ದು ಯಾಕೆಂದು ಪ್ರಶ್ನಿಸಿತ್ತು. ಆಕೆಯ ನೈತಿಕತೆಯನ್ನು ಪ್ರಶ್ನಿಸಿತ್ತು. ರಾಶಿ ಬೈಗುಳ ಸುರಿಸಿತ್ತು. ಆಕೆ ಹೇಳಿರುವುದು ಕಟ್ಟುಕತೆ ಎಂದು ಅಲ್ಲಗಳೆದಿತ್ತು.

ಘಟನೆಯು ದೇಶಾದ್ಯಂತ ಸುದ್ದಿ ಮಾಡಿದ ನಂತರ ಕೇರಳ ಸರ್ಕಾರ ನ್ಯಾಯಮೂರ್ತಿ ಹೇಮಾ ಸಮಿತಿಯನ್ನು ನೇಮಕ ಮಾಡಿತ್ತು. ಸಮಿತಿ ನೀಡಿದ್ದ ವರದಿ ಕೇರಳದ ಚಲನಚಿತ್ರ ರಂಗದ ಕೊಳಕನ್ನು ಬಯಲಿಗೆಳೆದಿತ್ತು. ಕೇರಳ ಚಿತ್ರೋದ್ಯಮವನ್ನು ಅತ್ಯಂತ ಬಲಿಷ್ಠ ಪುರುಷರ ಮಾಫಿಯಾ ಆಳುತ್ತಿದ್ದು, ಮಹಿಳೆಯರಿಗೆ ಲೈಂಗಿಕ ಕಿರುಕುಳ ತೀವ್ರತರವಾಗಿದೆ ಎಂದು ಸಮಿತಿ ಹೇಳಿತ್ತು. ಸಮಿತಿಯ ಈ ಮಾತು ಕೇರಳ ಚಿತ್ರೋದ್ಯಮಕ್ಕೆ ಸೀಮಿತವಾಗಿದ್ದರೂ, ಕನ್ನಡ, ಹಿಂದಿ ಸೇರಿದಂತೆ ದೇಶದ ಹಲವಾರು ಭಾಷಾ ಚಿತ್ರೋದ್ಯಮಗಳಿಗೂ ಅನ್ವಯಿಸುತ್ತದೆ. ಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಬಹುತೇಕ ಹೆಣ್ಣುಮಕ್ಕಳು ತುಟಿ ಬಿಚ್ಚದೆ ಪುರುಷರ ಅನಾಚಾರ ಸಹಿಸಿಕೊಂಡಿದ್ದಾರೆ. ಅಪರೂಪಕ್ಕೆ ಬಂಡೆದ್ದು ಬಾಯಿ ತೆಗೆದ ಹೆಣ್ಣುಮಕ್ಕಳನ್ನು ಪುರುಷಾಧಿಪತ್ಯ ಕ್ರೂರವಾಗಿ ಬಲಿ ಹಾಕಿರುವ ಉದಾಹರಣೆಗಳಿವೆ.

ಆಪಾದನೆಯನ್ನು ಅಲ್ಲಗಳೆದಿದ್ದ ದಿಲೀಪ್, 2017ರಲ್ಲಿ ಮೂರು ತಿಂಗಳು ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಹೊರಬಿದ್ದಿದ್ದರು. ತೀರ್ಪಿನ ನಂತರ ಪ್ರತಿಕ್ರಿಯಿಸಿರುವ ದಿಲೀಪ್, ತಮ್ಮ ನಟನಾ ವೃತ್ತಿ, ವರ್ಚಸ್ಸು ಹಾಗೂ ಸಾಮಾಜಿಕ ಬದುಕನ್ನು ಹಾಳು ಮಾಡಲೆಂದೇ ನಡೆಸಲಾಗಿದ್ದ ಪಿತೂರಿಯಿದು ಎಂದಿದ್ದಾರೆ.

ದಿಲೀಪ್ ಅವರ ಈ ಪಿತೂರಿ ಆಪಾದನೆಯನ್ನು ಕೇರಳದ ಕಾನೂನು ಮಂತ್ರಿ ತಳ್ಳಿ ಹಾಕಿದ್ದಾರೆ. ‘ಅಪಹರಣ-ಅತ್ಯಾಚಾರಕ್ಕೀಡಾದ ಹೆಣ್ಣುಮಗಳಿಗೆ ಪೂರ್ಣ ನ್ಯಾಯ ಸಿಕ್ಕಿಲ್ಲ, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು. ನ್ಯಾಯ ದೊರೆಯುವ ತನಕ ಸಂತ್ರಸ್ತೆಯ ಬೆಂಬಲಕ್ಕೆ ನಿಲ್ಲುತ್ತೇವೆ’ ಎಂದಿರುವುದು ಸಮಾಧಾನದ ಸಂಗತಿ.

ದುಷ್ಕೃತ್ಯ ಜರುಗಿದ್ದು 2017ರಲ್ಲಾದರೂ, ವಿಚಾರಣೆ ಶುರುವಾದದ್ದು 2020ರಲ್ಲಿ. ತೀರ್ಪು ನೀಡಿರುವ ನ್ಯಾಯಾಧೀಶ ಹನಿ ವರ್ಗೀಸ್ ನೇಮಕ ಆದದ್ದು 2019ರಲ್ಲಿ. ವಿಚಾರಣೆ ಮುಂದುವರೆದಿದ್ದಂತೆ ಹನಿ ವರ್ಗೀಸ್ ಬದಲಿಗೆ ಬೇರೆ ನ್ಯಾಯಾಧೀಶರನ್ನು ನೇಮಿಸುವಂತೆ ಸಂತ್ರಸ್ತ ಚಿತ್ರನಟಿ ಮತ್ತು ರಾಜ್ಯ ಸರ್ಕಾರ ಮತ್ತೆ ಮತ್ತೆ ಮಾಡಿದ ಮನವಿಗಳನ್ನು ಸುಪ್ರೀಮ್ ಕೋರ್ಟ್ ಕೂಡ ತಳ್ಳಿ ಹಾಕಿತ್ತು. ನ್ಯಾಯಾಧೀಶ ಹನಿ ವರ್ಗೀಸ್ ಪೂರ್ವಗ್ರಹ ಪೀಡಿತರು ಎಂಬುದು ಬದಲಾವಣೆ ಕೋರಿಕೆಯ ಆಧಾರವಾಗಿತ್ತು. ಡಿಜಿಟಲ್ ಸಾಕ್ಷ್ಯಗಳನ್ನು ತಿರುಚಲಾಗಿರುವ ಆಪಾದನೆಗಳೂ ಇದ್ದವು. ವಿಚಾರಣೆಯನ್ನು ವಿಳಂಬಗೊಳಿಸುತ್ತಿದ್ದಾರೆ ಮತ್ತು ಅಡಚಣೆ ಉಂಟು ಮಾಡುತ್ತಿದ್ದಾರೆಂದು ದಿಲೀಪ್ ವಿರುದ್ಧ ಕೇರಳ ಸರ್ಕಾರ ಕೂಡ ದೂರಿತ್ತು.  

ಅತ್ಯಾಚಾರಕ್ಕೆ ಬಲಿಯಾದ ಚಿತ್ರನಟಿ, ಈ ಮೊಕದ್ದಮೆಯನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಬೇಕೆಂಬ ದಿಟ್ಟತನ ತೋರಿದರು. ಅಸಾಧಾರಣ ಕೆಚ್ಚಿನಿಂದ ಕಾನೂನು ಹೋರಾಟ ನಡೆಸಿದರು. ತೀರ್ಪು ಅವರಿಗೆ ನಿರಾಶೆ ಉಂಟುಮಾಡಿದೆ. ಆದರೆ ಈ ಮೊಕದ್ದಮೆಯು ಇತರೆ ಹಲವು ಕಾರಣಗಳಿಗಾಗಿ ಮಹಿಳಾ ಪ್ರತಿರೋಧದ ದಾರಿಯ ಮಹತ್ವದ ಮೈಲಿಗಲ್ಲಾಗಿರುವುದು ನಿಚ್ಚಳ. ಪ್ರಮುಖ ಚಲನಚಿತ್ರ ನಟ ಮತ್ತು ನಿರ್ಮಾಪಕ ದಿಲೀಪ್ ದಸ್ತಗಿರಿ ಕೂಡ ಪ್ರಬಲ ಸಂದೇಶವನ್ನು ರವಾನಿಸಿದ ಅಂಶ. ಕಾಮಿಡಿಯ ಹೆಸರಿನಲ್ಲಿ ಅಪ್ಪಟ ಲೈಂಗಿಕ ಜೋಕ್‌ಗಳಿಗೆ ದಿಲೀಪ್ ಚಲನಚಿತ್ರಗಳು ಹೆಸರಾಗಿದ್ದವು. ಈ ಮೊಕದ್ದಮೆಯ ನಂತರ ಈ ಕೆಟ್ಟ ಪ್ರವೃತ್ತಿ ಇಳಿಮುಖವಾಯಿತು.

ಹೆಣ್ಣುಮಕ್ಕಳಲ್ಲಿ ದೀರ್ಘಕಾಲದಿಂದ ಹೆಪ್ಪುಗಟ್ಟಿದ ನೋವು ಅಪಮಾನಗಳ ಮೌನವನ್ನು ಒಡೆದು, ಯಥಾಸ್ಥಿತಿಯನ್ನು ಕದಡಿರುವುದು ಕೇರಳ ಚಿತ್ರೋದ್ಯಮದಲ್ಲಿ ನಡೆದಿರುವುದೇ ಒಂದು ದೊಡ್ಡ ಸಕಾರಾತ್ಮಕ ಬೆಳವಣಿಗೆ. ಅತ್ಯಾಚಾರಕ್ಕೆ ಈಡಾದ ಅಭಿನೇತ್ರಿ ಸಿನೆಮಾ ಕ್ಷೇತ್ರದಿಂದ ನಿರ್ಗಮಿಸದೆ ಮುಂದುವರೆದ ದಿಟ್ಟತನವು ಇಂತಹುದೇ ದೌರ್ಜನ್ಯ ಎದುರಿಸಿದ ಇತರೆ ಮಹಿಳೆಯರಿಗೆ ಮಾದರಿಯಾದ ನಡೆ. ದೇಶದ ಇತರೆ ಚಿತ್ರೋದ್ಯಮಗಳ ಮಹಿಳೆಯರಿಗೆ ಕೆಲಮಟ್ಟಿಗಾದರೂ ನೈತಿಕ ಸ್ಥೈರ್ಯ ತುಂಬಿರುವ ವಿದ್ಯಮಾನ. ಅಪಹರಣ- ಅತ್ಯಾಚಾರಕ್ಕೊಳಗಾದ ಕೇರಳದ ಅಭಿನೇತ್ರಿಗೆ ಸಂಪೂರ್ಣ ನ್ಯಾಯ ಇನ್ನೂ ಬಿಸಿಲುಕುದುರೆಯಾಗಿ ಉಳಿದಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡೂ ಈ ಮಾತುಗಳನ್ನು ಹೇಳಬೇಕಿದೆ.

ವ್ಯವಸ್ಥೆಯೊಳಗೆ ಅಂತರ್ಗತವಾಗಿ ನೆಲೆಸಿರುವ ಸ್ತ್ರೀದ್ವೇಷ, ಅಧಿಕಾರ ದುರ್ಬಳಕೆ, ಮಲಯಾಳಂ ಚಿತ್ರೋದ್ಯಮದಲ್ಲಿ ಕೆಲಸಕಾರ್ಯದ ಸಮಸ್ಯಾತ್ಮಕ ಸ್ಥಿತಿಗತಿಗಳ ಕುರಿತು ಈ ಮೊಕದ್ದಮೆಯು ನ್ಯಾಯಾಲಯದ ನಾಲ್ಕು ಗೋಡೆಗಳಾಚೆಗೂ ಸಂಭಾಷಣೆ-ಸಂವಾದಗಳನ್ನು ಮರುನಿರ್ಮಿಸಿತು. ‘ವಿಮೆನ್ ಇನ್ ಸಿನೆಮಾ ಕಲೆಕ್ಟಿವ್’ (WCC) ಎಂಬ ಹೋರಾಟ ಸ್ವರೂಪದ ಸಂಘಟನೆ ತಲೆಯತ್ತಲು ಕಾರಣವಾಯಿತು. 2019ರಲ್ಲಿ ಕೇರಳ ಸರ್ಕಾರದಿಂದ ಹೇಮಾ ಸಮಿತಿ ರಚನೆ ಹಿಂದೆ WCCಯ ಪ್ರಬಲ ಒತ್ತಾಸೆ ಇತ್ತು. ಕೇರಳ ಚಲನಚಿತ್ರೋದ್ಯಮದಲ್ಲಿ ಲಿಂಗ ತಾರತಮ್ಯ ಮತ್ತು ಕಿರುಕುಳ ಕುರಿತು ವಿಚಾರಣೆ ನಡೆಸಿದ ಹೇಮಾ ಸಮಿತಿ ನೀಡಿದ ವರದಿಯು ಬಹಿರಂಗವಾಗಲು ಹೈಕೋರ್ಟ್ ಆದೇಶವೇ ಬೇಕಾಯಿತು ಎಂಬುದು ವಿಡಂಬನೆಯ ಸಂಗತಿ. ಈ ಸಮಿತಿಯ ವರದಿಯಲ್ಲಿ ಕೆಲವು ಭಾಗಗಳನ್ನು ಬಿಡುಗಡೆ ಮಾಡದೆ ಹಿಂದಿಟ್ಟುಕೊಳ್ಳಲಾಯಿತು. ಈ ನಡೆಯು ಚಿತ್ರೋದ್ಯಮದ ಹಲವು ಮಹಿಳೆಯರು ತಾವಾಗಿ ಮುಂದೆ ಬಂದು ತಮ್ಮ ಮೇಲೂ ದೌರ್ಜನ್ಯ-ಅತ್ಯಾಚಾರ ನಡೆದಿವೆ ಎಂದು ಹೇಳಿಕೊಳ್ಳಲು ಪ್ರೇರೇಪಿಸಿತ್ತು.

ಇದನ್ನೂ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಗಳು ಬದಲಾದರೂ ಉತ್ತರ ಕರ್ನಾಟಕದ ಜನರ ಬದುಕು ಬದಲಾಗಲಿಲ್ಲವೇಕೆ?

ಅತ್ಯಾಚಾರಕ್ಕೆ ಈಡಾದ ಚಿತ್ರನಟಿಗೆ ತನ್ನ ಎಲ್ಲ ಬೆಂಬಲ ಮುಂದುವರೆಸುವುದಾಗಿ WCC  ಸಾರಿದೆ. ಆದರೆ ಮಲಯಾಳಂ ಚಿತ್ರನಟರ ಸಂಘ ಮತ್ತು ಮಲಯಾಳಂ ಚಲನಚಿತ್ರ ತಂತ್ರಜ್ಞರ ಸಂಘ ತೀರ್ಪನ್ನು ಒಡನೆಯೇ ಅತ್ಯುತ್ಸಾಹದಿಂದ ಸ್ವಾಗತಿಸಿ, ದಿಲೀಪ್‌ಗೆ ನಡೆಮುಡಿ ಹಾಸಿದ್ದು ಕಳವಳದ ಬೆಳವಣಿಗೆ. ಹಾಗಿದ್ದರೆ ಅತ್ಯಾಚಾರಕ್ಕೆ ಈಡಾದ ಚಿತ್ರನಟಿ ಇದೇ ಚಲನಚಿತ್ರ ಉದ್ಯಮಕ್ಕೆ ಸೇರಿದವರಲ್ಲವೇ? ಗಂಡಿಗೊಂದು ಅಳತೆಗೋಲು, ಹೆಣ್ಣಿಗೆ ಮತ್ತೊಂದೇ?

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....