ಈ ದಿನ ಸಂಪಾದಕೀಯ | ‘ಬೋರ್ಡ್ ಆಫ್ ಪೀಸ್‌’ಗೆ ಸೇರದ ಭಾರತದ ನಿಲುವು ಸ್ವಾಗತಾರ್ಹ

Date:

ಗಾಜಾ ಅಭಿವೃದ್ಧಿ ನೆಪದಲ್ಲಿ ಗಾಜಾವನ್ನು ಕಬಳಿಸಲು ಟ್ರಂಪ್ ನೇತೃತ್ವದಲ್ಲಿ 'ಬೋರ್ಡ್ ಆಫ್ ಪೀಸ್‌' ರಚನೆಯಾಗಿದೆ. ಆದರೆ, ಗಾಜಾ ಮೇಲಿನ ಇಸ್ರೇಲ್ ಕ್ರೌರ್ಯವನ್ನು ಮೋದಿ ನೇತೃತ್ವದ ಭಾರತ ಈವರೆಗೆ ಖಂಡಿಸಿಲ್ಲ. ಹಾಗೆಯೇ ಕುತಂತ್ರದಿಂದ ಕೂಡಿದ 'ಶಾಂತಿ ಮಂಡಳಿ'ಗೆ ಸೇರಲು ಕೂಡ ಭಾರತ ಆಸಕ್ತಿ ತೋರಿಸಿಲ್ಲ.

ದಶಕಗಳಿಂದಲೂ ಉದ್ವಿಗ್ನತೆಯಲ್ಲೇ ಇರುವ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷವು ಮಾರಣಹೋಮಕ್ಕೆ ತಿರುಗಿದೆ. ಕಳೆದ ಮೂರು ವರ್ಷಗಳಿಂದ ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿದೆ. 2023ರ ಅಕ್ಟೋಬರ್‌ನಿಂದ ಈವರೆಗೆ 73 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಕೊಂದಿದೆ. ರಕ್ತಪಾತ ನಡೆಸಿ, ಗಹಗಹಿಸಿ ನಗುತ್ತಿದೆ. ಇಸ್ರೇಲ್‌ ಕ್ರೌರ್ಯಕ್ಕೆ ಅಮೆರಿಕ ಕುಮ್ಮಕ್ಕು ನೀಡುತ್ತಿರುವುದು ಗೌಪ್ಯವಾಗೇನೂ ಉಳಿದಿಲ್ಲ. ಆದರೂ, ಅಮೆರಿಕ ಶಾಂತಿಯ ನಾಟಕವಾಡುತ್ತಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ‘ಬೋರ್ಡ್ ಆಫ್ ಪೀಸ್‌’ (ಶಾಂತಿ ಮಂಡಳಿ) ರಚನೆಯಾಗಿದೆ. ಆದರೆ, ಇದೂ ಕೂಡ ಬಹಿರಂಗ ಪಕ್ಷಪಾತಿಯಾಗಿ ವರ್ತಿಸುತ್ತಿದೆ.

ಈ ‘ಶಾಂತಿ ಮಂಡಳಿ’ಯು ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಯಲ್ಲಿ ಶಾಂತಿ ನೆಲೆಸುವುದು, ಮೂಲಸೌಕರ್ಯಗಳನ್ನು ಪುನರ್ನಿರ್ಮಾಣ ಮಾಡುವುದು, ಇಸ್ರೇಲ್-ಹಮಾಸ್ ಕದನ ವಿರಾಮವನ್ನು ಗಟ್ಟಿಗೊಳಿಸುವುದು ಹಾಗೂ ಪ್ಯಾಲೆಸ್ತೀನ್ ಪ್ರದೇಶದಲ್ಲಿ ತಾತ್ಕಾಲಿಕ ಸರ್ಕಾರವನ್ನು ರಚಿಸುವ ಉದ್ದೇಶವನ್ನು ಹೊಂದಿದೆ. ಟ್ರಂಪ್ ಅವರ ‘ಶಾಂತಿ ಮಂಡಳಿ’ ಎಷ್ಟು ಪಕ್ಷಪಾತಿಯೆಂದರೆ, ಮಂಡಳಿಯಲ್ಲಿ ಹಂತಕ, ಕ್ರೂರಿ ಇಸ್ರೇಲ್ಅನ್ನೂ ಒಳಗೊಳ್ಳಲಾಗಿದೆ. ಆದರೆ, ಬಲಿಪಶು ಪ್ಯಾಲೆಸ್ತೀನ್‌ಅನ್ನು ಹೊರಗಿಡಲಾಗಿದೆ. ಆದ್ದರಿಂದ, ಮಂಡಳಿಯ ಉದ್ದೇಶವು ಶಾಂತಿ ನೆಲೆಸುವುದಲ್ಲ, ಗಾಜಾವನ್ನು ಅಮೆರಿಕ ವಶಕ್ಕೆ ಪಡೆದು, ಅಲ್ಲಿ ರಿಯಲ್ ಎಸ್ಟೇಟ್ ಉದ್ಯಮವನ್ನು ಬೆಳೆಸುವುದು ಎಂದೇ ವಿಶ್ಲೇಷಿಸಲಾಗಿದೆ.

ಅಂದಹಾಗೆ, ಕಳೆದ ವರ್ಷ (2025 ಜನವರಿ) 2ನೇ ಬಾರಿಗೆ ಅಧ್ಯಕ್ಷರಾದ ಟ್ರಂಪ್, ತಾವು ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಸಂಘರ್ಷ ನಿಲ್ಲಬೇಕೆಂದು ತಾಕೀತು ಮಾಡಿದ್ದರು. ಅದರಂತೆ, ಇಸ್ರೇಲ್ ತನ್ನ ಆಕ್ರಮಣವನ್ನು ನಿಲ್ಲಿಸಿದರೂ, ಕದನ ವಿರಾಮ ಹೆಚ್ಚು ದಿನ ಉಳಿಯಲಿಲ್ಲ. ಸಂಘರ್ಷ ಮತ್ತೆ ಸ್ಫೋಟಿಸಿತು. ಗಾಜಾ ಮೇಲೆ ಇಸ್ರೇಲ್ ಭೀಕರ ದಾಳಿ ಮಾಡಿತು. ವಿದೇಶಗಳಿಂದ ಹರಿದುಬರುತ್ತಿದ್ದ ನೆರವು ಗಾಜಾ ತಲುಪದಂತೆ ನಿರ್ಬಂಧ ಹೇರಿತು. ನೆರವು ಹೊತ್ತು ಗಾಜಾ ಎಡೆಗೆ ಹೊರಟವರನ್ನು ಬಂಧಿಸಿತು. ಇಸ್ರೇಲ್ ಕ್ರೌರ್ಯ ಪರಾಕಾಷ್ಠೆ ತಲುಪಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸಂದರ್ಭವನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡ ಟ್ರಂಪ್, ಶಾಂತಿ ಮಾತುಕತೆಯ ನೆಪದಲ್ಲಿ ಮಧ್ಯಪ್ರವೇಶಿಸಿದರು. ‘ಗಾಜಾದಲ್ಲಿ ಶಾಂತಿ ನೆಲೆಸಿ, ಮೂಲಸೌಕರ್ಯಗಳ ಮರುಸ್ಥಾಪನೆ ಮಾಡುತ್ತೇವೆ. ಅಮೆರಿಕವು ಗಾಜಾವನ್ನು ತನ್ನ ಬತ್ತಳಿಕೆಗೆ ತೆಗೆದುಕೊಂಡು ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡುತ್ತದೆ’ ಎಂದು ಟ್ರಂಪ್ ಘೋಷಿಸಿದರು. ಇದು ಅಕ್ಷರಶಃ, ಈಗ ಗ್ರೀನ್‌ಲ್ಯಾಂಡ್‌ಅನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿರುವ ರೀತಿಯ, ಹುನ್ನಾರವೇ ಆಗಿತ್ತು. ಪ್ಯಾಲೆಸ್ತೀನಿಯರನ್ನು ಗಾಜಾದಿಂದ ಓಡಿಸಿ ಅಥವಾ ತಮ್ಮ ಕೂಲಿಯಾಳುಗಳನ್ನಾಗಿ ಮಾಡಿ ದುಡಿಸಿಕೊಂಡು ಇಡೀ ಗಾಜಾವನ್ನು ರಿಯಲ್‌ ಎಸ್ಟೇಟ್ ಉದ್ಯಮವಾಗಿ ಪರಿವರ್ತಿಸುವುದು ಟ್ರಂಪ್/ಅಮೆರಿಕದ ಕುತಂತ್ರವಾಗಿತ್ತು.

ಟ್ರಂಪ್ ಕುತಂತ್ರ ಈಗ ಮತ್ತೊಂದು ಹಂತಕ್ಕೆ ತಲುಪಿದೆ. 2026ರ ಜನವರಿಯಲ್ಲಿ ಡಾವೋಸ್‌ನಲ್ಲಿ ನಡೆದ ‘ವಿಶ್ವ ಆರ್ಥಿಕ ಸಮಾವೇಶ’ದಲ್ಲಿ ಟ್ರಂಪ್ ‘ಶಾಂತಿ ಮಂಡಳಿ’ಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಇದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯೂ ಅನುಮೋದಿಸಿದೆ. ಶಾಂತಿ ಮಂಡಳಿಯಲ್ಲಿ ಸದಸ್ಯತ್ವ ಪಡೆಯಲು ನಾನಾ ದೇಶಗಳನ್ನು ಆಹ್ವಾನಿಸಿದೆ. ಮಂಡಳಿಯಲ್ಲಿ ಸ್ಥಾಯಿ ಸದಸ್ಯತ್ವ ಪಡೆಯಲು 1 ಶತಕೋಟಿ ಡಾಲರ್ ಕೊಡಬೇಕೆಂದೂ ಹೇಳಿದೆ. ಮಂಡಳಿಯ ಅಧ್ಯಕ್ಷರಾಗಿ ಟ್ರಂಪ್ ಇದ್ದರೆ, ಕಾರ್ಯದರ್ಶಿಯಾಗಿ ಟ್ರಂಪ್ ಅಳಿಯ, ರಿಯಲ್ ಎಸ್ಟೇಟ್ ಉದ್ಯಮಿ ಜಾರೆಡ್ ಕುಶ್ನರ್ ಇದ್ದಾರೆ. ಜೊತೆಗೆ, ಸ್ಟೀವ್ ವಿಟ್‌ಕಾಫ್ ಮತ್ತು ಮಾರ್ಕ್ ರೋವನ್ ಕೂಡ ಸೇರಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಸದಸ್ಯತ್ವ ಪಡೆದಿದ್ದಾರೆ. ಆದರೆ, ಮಂಡಳಿಯು ಹಮಾಸ್‌ಅನ್ನು ಸಂಪೂರ್ಣವಾಗಿ ಹೊರಗಿಟ್ಟಿದೆ.

ಈ ಲೇಖನ ಓದಿದ್ದೀರಾ?: ಕನ್ನಡಿಗರ ಹಕ್ಕುಗಳನ್ನು ಕೊಲ್ಲದಿರಲಿ ಕೇರಳ, ಒಡನೆಯೇ ತಿದ್ದುಪಡಿ ತರಲಿ

ಮಂಡಳಿಗೆ ಗಾಜಾದಲ್ಲಿ 25 ಶತಕೋಟಿ ಡಾಲರ್ ಹೂಡಿಕೆ ಮಾಡಿ, ಆಧುನಿಕ ನಗರವನ್ನಾಗಿ ಬದಲಾಯಿಸುವುದು ಆದ್ಯತೆಯ ಗುರಿಯಾಗಿದೆ. ಅಂದರೆ, ಈ ಹೂಡಿಕೆಯು ಗಾಜಾ ಜನರಿಗೆ ನೆರವು ನೀಡುವುದು, ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದಲ್ಲ. ಬದಲಾಗಿ, ಗಾಜಾವನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಿ, ಅದರ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವುದು, ಗಾಜಾಗೆ ಪ್ರವಾಸಿಗರ ಹರಿವನ್ನು ಹೆಚ್ಚಿಸಿ, ಹಣವನ್ನು ದೋಚುವುದು.

ಈ ಯೋಜನೆಯ ‘ಮಾಸ್ಟರ್ ಮೈಂಡ್’ ಟ್ರಂಪ್ ಅವರ ಅಳಿಯ ಕುಶ್ನರ್ ಆಗಿದ್ದಾರೆ. ಅವರು ಗಾಜಾವನ್ನು ‘ವಾಟರ್‌ಫ್ರಂಟ್ ಪ್ರಾಪರ್ಟಿ’ ಎಂದು ಕರೆದಿದ್ದಾರೆ. ಇದನ್ನು ಶುಚಿಗೊಳಿಸಿ, ಅಭಿವೃದ್ಧಿಪಡಿಸಬೇಕೆಂದು ಹೇಳಿದ್ದಾರೆ. ಅವರ ಯೋಜನೆಯಂತೆ ಗಾಜಾ ಪಟ್ಟಿಯನ್ನು ರಫಾ, ಖಾನ್ ಯೂನಿಸ್, ಸೆಂಟರ್ ಕ್ಯಾಂಪ್ಸ್ ಹಾಗೂ ಗಾಜಾ ಸಿಟಿ ಎಂಬ ನಾಲ್ಕು ಭಾಗಗಳನ್ನಾಗಿ ವಿಂಗಡಿಸುವುದು, ಆಧುನಿಕ ಮನೆಗಳು, ಶಿಕ್ಷಣ ಕೇಂದ್ರಗಳು, ಸಾಂಸ್ಕೃತಿಕ ಸ್ಥಳಗಳು, ಆಸ್ಪತ್ರೆಗಳು, ಐಷಾರಾಮಿ ಹೋಟೆಲ್‌ಗಳು, ಲಕ್ಷುರಿ ವಿಲ್ಲಾಗಳು, ಉದ್ಯಾನಗಳು, ಕೈಗಾರಿಕಾ ಕಾಂಪ್ಲೆಕ್ಸ್‌ಗಳು ಹಾಗೂ ಡೇಟಾ ಸೆಂಟರ್‌ಗಳನ್ನು ನಿರ್ಮಿಸುವುದು ಸೇರಿದೆ. ಜೊತೆಗೆ, ಗಾಜಾ ಕರಾವಳಿ ಪ್ರದೇಶವನ್ನು ‘ರಿವಿಯೆರಾ ಆಫ್ ದಿ ಮಿಡಲ್ ಈಸ್ಟ್’ ಎಂದು ಕರೆದು, ಇಡೀ ನಗರವನ್ನು ಪ್ರವಾಸಿತಾಣವಾಗಿ ಬದಲಿಸಲಿದೆ. ಈ ಯೋಜನೆಯು ಇಸ್ರೇಲ್ ಕ್ರೌರ್ಯಕ್ಕೆ ಬಳಿಯಾದ ಸಾವಿರಾರು ಪ್ಯಾಲೆಸ್ತೀನಿಯರ ಸಮಾಧಿಗಳ ಮೇಲೆ ಕಟ್ಟುತ್ತಿರುವ ರಿಯಲ್ ಎಸ್ಟೇಟ್ ಆಗಿದೆ.

ಟ್ರಂಪ್ ನೇತೃತ್ವದ ಶಾಂತಿ ಮಂಡಳಿ ಮತ್ತು ಅದರ ಯೋಜನೆಯನ್ನು ‘ಅನ್ಯಾಯದ ಬಾವಿ’ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಇಸ್ರೇಲ್‌ನಂತಹ ಕ್ರೂರಿ ರಾಷ್ಟ್ರಕ್ಕೆ ಮಂಡಳಿಯಲ್ಲಿ ಸ್ಥಾನ ನೀಡಿ, ಪ್ಯಾಲೆಸ್ತೀನ್ ಮತ್ತು ಹಮಾಸ್‌ನ್ನು ಹೊರಗಿಟ್ಟಿರುವುದು ಏಕಪಕ್ಷೀಯ ಧೋರಣೆ ಎಂದು ಟೀಕಿಸಿದ್ದಾರೆ. ಗಾಜಾದಲ್ಲಿ ಜನಾಂಗೀಯ ಹತ್ಯೆಗೈದ ಇಸ್ರೇಲ್‌ಅನ್ನು ಸೇರಿಸಿಕೊಂಡು ಇಡೀ ಗಾಜಾವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಅಮೆರಿಕದ ನಿಲುವು ಕೊಳಕು ಸ್ವಾರ್ಥದಿಂದ ಕೂಡಿದೆ ಎಂದು ಬಣ್ಣಿಸಿದ್ದಾರೆ.

ಸದ್ಯಕ್ಕೆ, ಟ್ರಂಪ್ ಕುತಂತ್ರದಿಂದ ರಚನೆಯಾಗಿರುವ ‘ಬೋರ್ಡ್ ಆಫ್ ಪೀಸ್‌’ ಸೇರಲು ಭಾರತವು ಆಸಕ್ತಿ ತೋರಿಸಿಲ್ಲ. ಗಾಜಾ ಮೇಲಿನ ಇಸ್ರೇಲ್ ಕ್ರೌರ್ಯವನ್ನು ಮೋದಿ ನೇತೃತ್ವದ ಭಾರತ ಈವರೆಗೆ ಖಂಡಿಸಿಲ್ಲ. ಇಸ್ರೇಲ್ ಪರವಾರ ಧೋರಣೆ, ವ್ಯಾಪಾರ ಸಂಬಂಧ ಹಾಗೂ ಟ್ರಂಪ್‌ ಮೇಲಿನ ಭಯದಿಂದ ಇಸ್ರೇಲ್‌ ಕ್ರೌರ್ಯವನ್ನು ಮೋದಿ ಸರ್ಕಾರ ವಿರೋಧಿಸಿಲ್ಲವೆಂದು ಆರೋಪಿಸಲಾಗಿದೆ. ಆದರೂ, ಗಾಜಾಗೆ ಅಗತ್ಯ ವೈದ್ಯಕೀಯ ಮತ್ತು ಮೂಲಸೌಕರ್ಯದ ನೆರವನ್ನು ನೀಡಿದೆ. ಕದನ ವಿರಾಮಕ್ಕಾಗಿ ಕರೆ ಕೊಟ್ಟಿದೆ. ಯುಎನ್‌ಆರ್‌ಡಬ್ಲ್ಯೂಎಗೆ ವಾರ್ಷಿಕ 50 ಲಕ್ಷ ಡಾಲರ್‌ ಸಹಾಯಾಸ್ತ ಚಾಚಿದೆ. ಜೊತೆಗೆ, ಈಗ ಟ್ರಂಪ್ ನೇತೃತ್ವದ ಅನ್ಯಾಯ, ಕುತಂತ್ರ, ಸ್ವಾರ್ಥದಿಂದ ಕೂಡಿರುವ ‘ಶಾಂತಿ ಮಂಡಳಿ’ಗೆ ಸೇರಲು ಭಾರತ ಆಸಕ್ತಿ ತೋರಿಸದೆ ಮೌನವಾಗಿದೆ. ಇಂದಿನ ಪರಿಸ್ಥಿತಿಗೆ ಭಾರತದ ನಿಲುವು ಸ್ವಾಗತಾರ್ಹ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....