ಈ ದಿನ ಸಂಪಾದಕೀಯ | ಮೋದಿ-ಕ್ಸಿ-ಪುಟಿನ್ ಭೇಟಿ: ಅಮೆರಿಕ ವಿರುದ್ಧ ಪ್ರಬಲ ಗುಂಪು ರಚನೆ ಸಾಧ್ಯವೇ?

Date:

ಮೂರು ರಾಷ್ಟ್ರಗಳು ತ್ರಿಕೋನದಲ್ಲಿ ಮಿತ್ರರೂ-ಶತ್ರುಗಳೂ ಆಗಿದ್ದಾರೆ. ಜೊತೆಗೆ, ಮೋದಿ ಆಡಳಿತದಲ್ಲಿ ಭಾರತವು ಅಮೆರಿಕದ ಸಖ್ಯವನ್ನೂ ಬಯಸುತ್ತಿದೆ. ಹೀಗಿರುವಾಗ, ಅಮೆರಿಕ ವಿರುದ್ಧ ರಷ್ಯಾ-ಚೀನಾ-ಭಾರತವು ಪ್ರಬಲ ಗುಂಪಾಗಿ ರಚನೆಯಾಗುವುದು ಸುಲಭ ಸಾಧ್ಯವೇ?

ಪ್ರಧಾನಿ ನರೇಂದ್ರ ಮೋದಿ ಅವರ ಚೀನಾ ಭೇಟಿ ಮುಗಿದಿದೆ. ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಪ್ರಧಾನಿ ಮೋದಿ ಭೇಟಿಯಾಗಿ, ಕೈಕುಲುಕಿದ್ದಾರೆ. ಈ ಭೇಟಿಯನ್ನು ಅತ್ಯಂತ ‘ಪರಿಣಾಮಕಾರಿ’ ಭೇಟಿ ಎಂದು ಬಣ್ಣಿಸಲಾಗುತ್ತಿದೆ. ಇತ್ತೀಚೆಗೆ, ಅಮೆರಿಕ ನಡೆದುಕೊಳ್ಳುತ್ತಿರುವ ಏಕಪಕ್ಷೀಯ ಸವಾರ್ಧಿಕಾರಿ ಧೋರಣೆ ವಿರುದ್ಧದ ಬಲವಾದ ಗುಂಪು ರಚನೆಯೆಂದೂ ಹೇಳಲಾಗುತ್ತಿದೆ.

ಆದಾಗ್ಯೂ, 2001ರಲ್ಲಿ ಶಾಂಘೈ ಸಹಕಾರ ಸಂಸ್ಥೆ ರಚನೆಯಾದಾಗಿನಿಂದ ಈವರೆಗೆ ಎಂದಿಗೂ ಅದು ವಿಶಿಷ್ಟ ಅಥವಾ ರೋಮಾಂಚಕಾರಿಯಾದ ರೀತಿಯಲ್ಲಿ ಏನನ್ನೂ ಮಾಡಿಲ್ಲ. ಜಗತ್ತಿಗೆ ಸಂದೇಶ ನೀಡುವ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಅದು, ಪರಸ್ಪರರ ನಡುವಿನ ಚರ್ಚೆಯ ಕೂಟವಾಗಿ ಮಾತ್ರವೇ ಕಂಡುಬಂದಿದೆ. ಆದರೆ, ಈಗ ಟ್ರಂಪ್ ನೇತೃತ್ವದ ಅಮೆರಿಕ ಧೋರಣೆಯಿಂದ ಏನಾದರೂ ವಿಶಿಷ್ಟತೆ ಕಾಣಬಹುದು ಎಂಬ ನಿರೀಕ್ಷೆಗಳಿವೆ.

ವಿಶೇಷವಾಗಿ, ಮೋದಿ ಅವರು ಚೀನಾಗೆ ಹೋಗುವುದಕ್ಕೂ ಮೊದಲು ಜಪಾನ್‌ಗೆ ಭೇಟಿ ನೀಡಿದ್ದರು. ರಕ್ಷಣಾ ಸಹಕಾರ ಒಪ್ಪಂದ, ಲಾಜಿಸ್ಟಿಕ್ಸ್‌ ಸಹಕಾರ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಹಭಾಗಿತ್ವದ ಬಗ್ಗೆ ಜಪಾನ್ ಪ್ರಧಾನಿ ಶಿಗೇರು ಇಶಿಬಾ ಜೊತೆ ಮೋದಿ ಚರ್ಚೆ ನಡೆಸಿದ್ದಾರೆ. ಇದು, ಭಾರತ-ಚೀನಾ ಸಂಬಂಧ ವಿಸ್ತರಣೆಯ ಭಾಗವಾಗಿ ಕಾಣುತ್ತಿದೆ. ಮಾತ್ರವಲ್ಲ, ಜಪಾನ್ ಜೊತೆಗಿನ ಸಖ್ಯವು ಭಾರತ ಮತ್ತು ಪಾಕಿಸ್ತಾನ– ಎರಡೂ ರಾಷ್ಟ್ರಗಳ ಒಡನಾಡಿ ಎಂಬಂತೆ ವರ್ತಿಸುತ್ತಿರುವ ಚೀನಾಗೆ ಅದರದ್ದೇ ರೀತಿಯಲ್ಲಿ ಸಂದೇಶ ನೀಡುವುದರ ಭಾಗವೆಂಬ ಅಭಿಪ್ರಾಯಗಳಿವೆ. ಯಾಕೆಂದರೆ, 2ನೇ ಮಹಾಯುದ್ಧದ ನಂತರ ಜಪಾನ್ ವಿರುದ್ಧದ ಗೆಲುವನ್ನು ಸಂಭ್ರಮಿಸಿ ಚೀನಾ ಬೃಹತ್ ಮೆರವಣಿಗೆ ನಡೆಸಿತ್ತು. ಅಂದಿನಿಂದ, ಚೀನಾ-ಜಪಾನ್ ಪರಸ್ಪರ ತಿಕ್ಕಾಟದಲ್ಲೇ ಮುಂದುವರೆದಿವೆ. ಮೋದಿ ಅವರ ಜಪಾನ್-ಚೀನಾ ಭೇಟಿಯು ಚೀನಾದ ಭಾರತ-ಪಾಕಿಸ್ತಾನದ ಜೊತೆಗಿನ ಸ್ನೇಹದ ತದ್ರೂಪವಾಗಿ ಕಾಣುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೋದಿ ಮತ್ತು ಕ್ಸಿ ಜಿನ್‌ಪಿಂಗ್‌ ಭೇಟಿಯು ನಿರ್ದಿಷ್ಟವಾದ ಸ್ನೇಹಪರತೆಯನ್ನು ತೋರಿಸಿಲ್ಲ. ಇಬ್ಬರೂ ತಾವು ‘ಪ್ರತಿಸ್ಪರ್ಧಿಗಳಲ್ಲ, ಅಭಿವೃದ್ಧಿಯ ಪಾಲುದಾರರು’ ಎಂದು ಘೋಷಿಸಿಕೊಂಡರು. ವಾಸ್ತವದಲ್ಲಿ ಕೇವಲ ಪಾಲುದಾರಿಕೆ ಇದೆ– ಪ್ರತಿಸ್ಪರ್ಧಿತ್ವ ಇಲ್ಲ ಎಂದು ನಂಬಲಾಗದು. ಚೀನಾ ಮತ್ತೊಮ್ಮೆ ‘ಮಲ್ಟಿಪೋಲರ್ ವರ್ಲ್ಡ್’ (ಒಗ್ಗಟ್ಟಿನ ಶಕ್ತಿ ಜಗತ್ತು) ಎಂದು ಹೇಳುತ್ತಿದೆ. ಇದೇ ಸಮಯದಲ್ಲಿ, ಭಾರತವು ‘ಮಲ್ಟಿಪೋಲರ್ ಏಷ್ಯಾ’ (ಒಗ್ಗಟ್ಟಿನ ಶಕ್ತಿಯಾಗಿ ಏಷ್ಯಾ) ಎಂದು ಹೇಳುತ್ತಿದೆ. ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಭಾರತಕ್ಕೆ ಭೇಟಿ ನೀಡಿದಾಗ ಕೆಲವು ಒಪ್ಪಂದದ ಮಾತುಕತೆಗಳು ನಡೆದವು. ಉಭಯ ರಾಷ್ಟ್ರಗಳ ನಡುವೆ ನೇರ ವಿಮಾನ ಹಾರಾಟ ಮತ್ತು ವ್ಯಾಪಾರ ಮಾರ್ಗಗಳನ್ನು ತೆರೆಯುವ ಬಗ್ಗೆ ಚರ್ಚೆಗಳು ನಡೆದವು. ಆದಾಗ್ಯೂ, ಈ ಮಾತುಕತೆಯನ್ನು ಭಾರತವು ಅಮೆರಿಕ ಅಥವಾ ಬೇರೆ ಯಾವುದೇ ರಾಷ್ಟ್ರದ ಗುಂಪುಗಾರಿಕೆಯಲ್ಲ ಎಂದು ಸ್ಪಷ್ಟವಾಗಿ ಹೇಳಿತು. ಅಮೆರಿಕ ಜೊತೆಗಿನ ಸಂಬಂಧಗಳನ್ನು ಸುಧಾರಿಸಲೂ ಮುಂದಾಯಿತು. ಆದರೆ, ಈಗ ಟ್ರಂಪ್ ಸುಂಕ ನೀತಿಯಿಂದ ಭಾರತ-ಅಮೆರಿಕ ನಡುವಿನ ಸಂಬಂಧಗಳಲ್ಲಿ ಅಡಚಣೆ ಕಂಡುಬಂದಿದೆ. ಇದೇ ಸಮಯದಲ್ಲಿ ನಡೆದ, ಶಾಂಘೈ ಸಭೆಯು ಭಾರತವು ಚೀನಾದ ವಿದೇಶಿ ನೇರ ಹೂಡಿಕೆಯ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವ ಸಾಧ್ಯತೆಯಿದೆ ಎಂಬುದನ್ನು ಸೂಚಿಸಿದೆ.

ನಿರ್ಬಂಧ ತೆಗೆಯುವ ಕಾರಣಕ್ಕಾಗಿ, ಭಾರತ-ಚೀನಾ ಭಾಯಿ-ಭಾಯಿ ಎಂದುಕೊಳ್ಳುವುದು ವಾಸ್ತವವಲ್ಲ. ಭಾರತ-ಚೀನಾ ನಡುವೆ ಗಡಿ ಸಮಸ್ಯೆ ತೀವ್ರವಾಗಿದೆ. ಗಲ್ವಾನ್ ಗಡಿ ಸಂಘರ್ಷದ ಬಳಿಕ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಿದೆ ಭಾರತದ ಭೂಪ್ರದೇಶವನ್ನು ಚೀನಾ ಅತಿಕ್ರಮಿಸಿಕೊಂಡಿದೆ. ಟಿಬೆಟ್‌ನಲ್ಲಿ ಯಾರ್ಲುಂಗ್ ತ್ಸಾಂಗ್‌ಪೊ (ಬ್ರಹ್ಮಪುತ್ರ) ನದಿಗೆ ಚೀನಾ ವಿಶ್ವದ ಬೃಹತ್ ಅಣೆಕಟ್ಟು ಕಟ್ಟುತ್ತಿದೆ. ಇದು ಈಶಾನ್ಯ ಭಾರತದಲ್ಲಿ ನೀರಿನ ಸಮಸ್ಯೆಗೆ ಕಾರಣವೂ ಆಗುತ್ತದೆ. ಇಂತಹ ಹತ್ತಾರು ಬಿಕ್ಕಟ್ಟುಗಳು ಉಭಯ ರಾಷ್ಟ್ರಗಳ ನಡುವೆ ಇರುವಾಗ, ಎರಡೂ ರಾಷ್ಟ್ರಗಳ ನಾಯಕರು ‘ನಾವು ಪಾಲುದಾರರು’ ಎಂದು ಹೇಳಿಕೊಳ್ಳುವುದನ್ನು ಭಾರತೀಯರು ಸ್ವಾಗತಿಸಲು ಸಾಧ್ಯವೇ?

ಒಂದು ವೇಳೆ, ಒಪ್ಪಿಕೊಂಡರೆ, ಅದು ಸ್ನೇಹ-ಸಹಕಾರವಾಗಿ ಕಾಣುವುದೇ? ಭಾರತ-ಚೀನಾ ಅಭಿವೃದ್ಧಿಯ ಪಾಲುದಾರರು ಎಂದಾದರೆ, ಎರಡೂ ರಾಷ್ಟ್ರಗಳ ನಡುವಿನ ಹಲವು ಬಿಕ್ಕಟ್ಟುಗಳಿಗೆ ಪರಿಹಾರವೇನು? ಈ ಬಿಕ್ಕಟ್ಟಿನ ನಿವಾರಣೆಗೆ ಮೋದಿ ಸರ್ಕಾರ ತೆಗೆದುಕೊಳ್ಳುವ ಕ್ರಮಗಳೇನು? ಅಥವಾ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೆ, ‘ಭಾರತ-ಚೀನಾ ಭಾಯಿ-ಭಾಯಿ’ ಎಂದು ಮೋದಿ ಅವರು ಚೀನಾ ಜೊತೆಗೆ ರಾಜಿ ಮಾಡಿಕೊಂಡರೆ, ಚೀನಾದ ಅತಿಕ್ರಮಣವನ್ನು ಸಮ್ಮತಿಸಿದರೆ, ಭಾರತಕ್ಕಾದ ಲಾಭವೇನು? ಹಾಗೇನಾದರೂ ಆದರೆ, ಅದು ಪಾಲುದಾರಿಕೆಯಾಗಿ ಕಾಣುವುದಿಲ್ಲ. ಶರಣಾಗತಿಯಂತೆ ಬಿಂಬಿತವಾಗುತ್ತದೆ.

ಈ ಲೇಖನ ಓದಿದ್ದೀರಾ?: ಭಾರತ-ಚೀನಾ-ರಷ್ಯಾ ದೋಸ್ತಿ: ಅಮೆರಿಕದ ನಿಲುವೇನು?

ಭಾರತ-ಚೀನಾ ಅಥವಾ ಭಾರತ-ಪಾಕಿಸ್ತಾನ ಸಂಘರ್ಷಗಳ ವಿಚಾರ ಬಂದಾಗ, ರಷ್ಯಾ ಎಂದಿಗೂ ಭಾರತದ ಜೊತೆಗಿದೆ. 2020ರಲ್ಲಿ ನಡೆದ ಗಲ್ವಾನ್ ಘರ್ಷಣೆಯ ಸಮಯದಲ್ಲಿಯೂ, ಶಸ್ತ್ರಾಸ್ತ್ರಗಳೊಂದಿಗೆ ಭಾರತಕ್ಕೆ ರಷ್ಯಾ ಸಹಕಾರ ನೀಡಿತು ಎಂಬ ಅಂಶವು ಈಗ ಬಹಿರಂಗವಾಗಿದೆ. ಜೊತೆಗೆ, ಭಾರತಕ್ಕೆ ರಷ್ಯಾ ಅಗ್ಗದ ಬೆಲೆಗೆ ಕಚ್ಚಾ ತೈಲವನ್ನು ರಫ್ತು ಮಾಡುತ್ತಿದೆ. ಭಾರತಕ್ಕಾಗಿ ರಷ್ಯಾ S-500 ಮತ್ತು 5ನೇ ಜನರೇಷನ್‌ನ Su-57 ಯುದ್ಧ ವಿಮಾನಗಳನ್ನು ತಯಾರಿಸುತ್ತಿದೆ. ಭಾರತ-ರಷ್ಯಾ ಶಸ್ತ್ರಾಸ್ತ್ರ ಒಪ್ಪಂದಗಳು ಚೀನಾ-ಪಾಕಿಸ್ತಾನವನ್ನು ಗಮನದಲ್ಲಿಟ್ಟುಕೊಂಡೇ ನಡೆಯುತ್ತವೆ. ಹೀಗಾಗಿ, ಭಾರತ-ರಷ್ಯಾ ಸಂಬಂಧವು ಚೀನಾಗೆ ಬೆದರಿಕೆಯಂತೆಯೇ ಕಾಣುತ್ತದೆ.

ಇದೆಲ್ಲ ನಡೆಯುತ್ತಿರುವ ಸಮಯಲ್ಲಿಯೇ, ಅಮೆರಿಕ-ಭಾರತ ಸಂಬಂಧ ಅಸ್ಥಿರವಾಗಿರುವಂತೆ ಕಾಣುತ್ತಿದೆ. ಉಭಯ ರಾಷ್ಟ್ರಗಳ ನಡುವೆ ವ್ಯಾಪಾರದ ವಿಷಯದಲ್ಲಿ ಮಾತ್ರವಲ್ಲದೆ, ವಲಸಿಗರು/ಅನಿವಾಸಿ ಭಾರತೀಯರ ವಿಚಾರವು ಗಮನಾರ್ಹವಾಗಿದೆ. ಹೀಗಾಗಿ, ಭಾರತವು ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಆದ್ದರಿಂದ, ಟಿಯಾಂಜಿನ್‌ನಲ್ಲಿ ಶಾಂಘೈ ಸಭೆ ಘೋಷಿಸಲಾದ 26 ಅಂಶಗಳನ್ನೂ ಅಳವಡಿಸಿಕೊಳ್ಳಲು ಭಾರತಕ್ಕೆ ಕಷ್ಟವಾಗಬಹುದು.

ಒಂದೆಡೆ – ಚೀನಾ ಜೊತೆಗಿನ ಸಂಘರ್ಷ, ಮತ್ತೊಂದೆಡೆ – ಪಾಕಿಸ್ತಾನ ಜೊತೆಗಿನ ಭಾರತದ ಘರ್ಷಣೆಯಲ್ಲಿ ಪಾಕ್ ಪರ ಚೀನಾ ನಿಲುವು/ಧೋರಣೆಗಳು, ಮಗದೊಂದೆಡೆ ವ್ಯಾಪಾರ ಪಾಲುದಾರಿಕೆ; ಇದೆಲ್ಲವೂ ಭಾರತಕ್ಕೆ ಚೀನಾ ಸ್ನೇಹಿತ ಮತ್ತು ವೈರಿ ಎರಡೂ ಆಗಿದೆ. ಅಂತೆಯೇ, ಗಡಿ ಸಂಘರ್ಷಗಳು ಬಂದಾಗ ಭಾರತಕ್ಕೆ ರಷ್ಯಾ ನೀಡುವ ಸಹಕಾರವು ಚೀನಾಕ್ಕೆ ಅಡೆತಡೆಯಾಗುತ್ತಿದೆ. ಮೂರು ರಾಷ್ಟ್ರಗಳು ತ್ರಿಕೋನದಲ್ಲಿ ಮಿತ್ರರೂ-ಶತ್ರುಗಳೂ ಆಗಿದ್ದಾರೆ. ಜೊತೆಗೆ, ಮೋದಿ ಆಡಳಿತದಲ್ಲಿ ಭಾರತವು ಅಮೆರಿಕದ ಸಖ್ಯವನ್ನೂ ಬಯಸುತ್ತಿದೆ. ಹೀಗಿರುವಾಗ, ಅಮೆರಿಕ ವಿರುದ್ಧ ರಷ್ಯಾ-ಚೀನಾ-ಭಾರತವು ಪ್ರಬಲ ಗುಂಪಾಗಿ ರಚನೆಯಾಗುವುದು ಸುಲಭ ಸಾಧ್ಯವೇ?

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....