ಈ ದಿನ ಸಂಪಾದಕೀಯ |ಮುಂಬಯಿ TISS ವಿದ್ಯಾರ್ಥಿಗಳ ‘ಕ್ಯಾಂಪಸ್‌ ರಾಜಕೀಯ’ ದಮನ ಸಲ್ಲದು!

Date:

ಟಿಐಎಸ್‌ಎಸ್‌ ತನ್ನ ಎಲ್ಲ ಘಾತಕ ನೀತಿ-ನಿರ್ಧಾರಗಳನ್ನೂ ಏಕಪಕ್ಷೀಯವಾಗಿ ತೆಗೆದುಕೊಂಡಿದೆ. ವಿದ್ಯಾರ್ಥಿಗಳಿಂದ ಪ್ರತಿಕ್ರಿಯೆ, ಸಲಹೆಗಳನ್ನು ಪಡೆದೇ ಇಲ್ಲವೆಂದು ಕ್ಯಾಂಪಸ್‌ನ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ. ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಮುಂಬೈನಲ್ಲಿರುವ ಟಿಐಎಸ್‌ಎಸ್‌ ಭಾರತದ ಪ್ರತಿಷ್ಠಿತ ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ‘ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್’ (TISS) ಒಂದು. ಸಂಸ್ಥೆಯು ಒಂದು ಕಾಲದಲ್ಲಿ, ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು ಮತ್ತು ವಿಮರ್ಶಾತ್ಮಕ ಚಿಂತನೆಗೆ ಕೇಂದ್ರವೂ ಆಗಿತ್ತು. ಆದರೆ, ಈಗ ಸಂಸ್ಥೆಯು ವಿದ್ಯಾರ್ಥಿ ಧ್ವನಿಯನ್ನು ಹತ್ತಿಕ್ಕಲು ಮುಂದಾಗಿದೆ. ವಿದ್ಯಾರ್ಥಿಗಳು ರಾಜಕೀಯ ಚಟುವಟಿಕೆ ಮತ್ತು ಸಾಮಾಜಿಕ ಚಿಂತನೆಯಲ್ಲಿ ತೊಡಗದಂತೆ ನಿರ್ಬಂಧ-ನಿಯಂತ್ರಣ ಹೇರುತ್ತಿದೆ. ದಮನಕಾರಿ ನೀತಿ-ನಿಯಮಗಳನ್ನು ರೂಪಿಸಿದೆ. ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಗಿದೆ.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಲ್ಲಿ ಹಲವಾರು ವಿಶ್ವವಿದ್ಯಾಲಯಗಳೂ ವಿದ್ಯಾರ್ಥಿಗಳ ರಾಜಕೀಯ ಚಟುವಟಿಕೆ ಮತ್ತು ಕ್ಯಾಂಪಸ್‌ ರಾಜಕಾರಣವನ್ನು ನಿರಂತರವಾಗಿ ಹತ್ತಿರುವ ಪ್ರಯತ್ನದಲ್ಲಿವೆ.  ಆ ಪಟ್ಟಿಗೆ ಈಗ ಟಾಟಾ ಇನ್‌ಸ್ಟಿಟ್ಯೂಟ್‌ ಕೂಡ ಸೇರಿಕೊಂಡಿದೆ. ತನ್ನ ವಿದ್ಯಾರ್ಥಿಗಳನ್ನು ತರಗತಿ ಕೊಠಡಿಗಳಲ್ಲಿ ‘ಕೂಡಿಡುವ ಕುತಂತ್ರಕ್ಕೆ ಮುಂದಾಗಿದೆ. ಕ್ಯಾಂಪಸ್‌ ಚಟುವಟಿಕೆಗಳನ್ನು ಮೊಟಕುಗೊಳಿಸುವ ಹುನ್ನಾರ ರೂಪಿಸಿದೆ.

ಸಂಸ್ಥೆಯು 2024ರಿಂದಲೇ ತನ್ನ ‘ಹಾನರ್ ಕೋಡ್’ (ಕ್ಯಾಂಪಸ್‌ ಸಂಹಿತೆ)ಅನ್ನು ಪರಿಷ್ಕರಿಸುತ್ತಿದೆ. ವಿದ್ಯಾರ್ಥಿಗಳು ರಾಜಕೀಯ ಪಕ್ಷಗಳು, ವಿದ್ಯಾರ್ಥಿಗಳ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರಬಾರದು, ಪ್ರತಿಭಟನೆ, ಧರಣಿಯಲ್ಲಿ ಭಾಗಿಯಾಗಬಾರದು ಹಾಗೂ ಶೈಕ್ಷಣಿಕ ವಾತಾವರಣಕ್ಕೆ ಅಡ್ಡಿಯಾಗುವ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ನಿರ್ಬಂಧ ಹೇರಿದೆ. ವಿದ್ಯಾರ್ಥಿಗಳ ಸಾಮಾಜಿಕ-ರಾಜಕೀಯ ಪ್ರಜ್ಞೆಯನ್ನು ನೇರವಾಗಿ ನಿಗ್ರಹಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮುಖ್ಯವಾಗಿ, ಈ ವರ್ಷ, ಫೆಬ್ರವರಿ 6ರಂದು ಟಿಐಎಎಸ್‌ಎಸ್‌ ಕ್ಯಾಂಪಸ್‌ನಲ್ಲಿನ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯಲಿದೆ. ಚುನಾವಣೆಗೂ ಮುನ್ನ, ಟಿಐಎಸ್‌ಎಸ್‌ ಆಡಳಿತವು ‘ವಿದ್ಯಾರ್ಥಿ ಸಂಘ’ವನ್ನು ‘ವಿದ್ಯಾರ್ಥಿ ಮಂಡಳಿ’ಯಾಗಿ ಬದಲಾಯಿಸಿದೆ. ವಿದ್ಯಾರ್ಥಿ ಸಂಘದ ಸಂವಿಧಾನ, ವಿದ್ಯಾರ್ಥಿ ಸಂಘದ ಚುನಾವಣೆಗಳು ಮತ್ತು ವಿದ್ಯಾರ್ಥಿ ಸಂಘದ ಕಾರ್ಯನಿರ್ವಾಹಕ ಸಮಿತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಸಂಘದ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವ ನಿಯಮಗಳನ್ನು ಪರಿಷ್ಕರಿಸಿದೆ.

ಮಾತ್ರವಲ್ಲ, ವಿದ್ಯಾರ್ಥಿ ಮಂಡಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ರಾಜಕೀಯ ಪಕ್ಷಗಳು-ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಂಘಗಳೊಂದಿಗೆ ತಾವು ಸಂಬಂಧ ಹೊಂದಿಲ್ಲ, ಹೊಂದುವುದಿಲ್ಲವೆಂದು ಒಪ್ಪಂದ ಪತ್ರ ಬರೆದುಕೊಡಬೇಕು, ಕನಿಷ್ಠ 75% ಹಾಜರಾತಿ ಹೊಂದಿರಬೇಕು, ಯಾವುದೇ ಶೈಕ್ಷಣಿಕ ಬಾಕಿ (ಬ್ಯಾಕ್‌ಲಾಗ್‌) ಇಲ್ಲ ಎಂಬುದನ್ನೂ ಘೋಷಿಸಬೇಕು. ಇದು, ಅಕ್ಷಶಃ ಸಂಸ್ಥೆಯ ಅಸಂಬದ್ಧ ಧೋರಣೆ. ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಚಿಂತನೆಗಳನ್ನು ವಿಶ್ವ ದರ್ಜೆಗೆ ಏರಿಸಬೇಕು. ಆದರೆ, ಟಿಐಎಸ್‌ಎಸ್‌ ವಿದ್ಯಾರ್ಥಿಗಳ ಚಿಂತನಾ ಕ್ರಮವನ್ನು ಸಂಕುಚಿತಗೊಳಿಸಲು ಮುಂದಾಗಿದೆ.

 ಜೊತಗೆ, ಶುಲ್ಕ ನಿಗದಿ, ಪಠ್ಯಕ್ರಮ ಚರ್ಚೆಗಳು, ಶಿಸ್ತು ಸಮಿತಿ ಹಾಗೂ ಸಾಮಾನ್ಯ ದೂರು ಸಮಿತಿ ಸೇರಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಮಿತಿಗಳಿಂದ ವಿದ್ಯಾರ್ಥಿ ಪ್ರತಿನಿಧಿಗಳನ್ನು ಹೊರಹಾಕಿದೆ. ಇದು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಸಂಘದ ಮೂಲಕ ತಮ್ಮ ಹಕ್ಕುಗಳನ್ನು ಕೇಳುವ, ಸಾಮಾಜಿಕ ವಿಚಾರಗಳಿಗೆ ಪ್ರತಿಕ್ರಿಯಿಸುವ, ಕ್ಯಾಂಪಸ್‌ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದನ್ನು ನಿರ್ಬಂಧಿಸಿದೆ..

ಆಘಾತಕಾರಿಯಾಗಿ, ವಿದ್ಯಾರ್ಥಿಗಳ ಒಗ್ಗಟ್ಟನ್ನು ಮುರಿಯಲು ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಯನ್ನು ಒಳಗೊಂಡ 7 ಸದಸ್ಯರ ಕಾರ್ಯಕಾರಿ ಸಮಿತಿಯನ್ನೇ ಟಿಐಎಸ್‌ಎಸ್‌ ರದ್ದುಗೊಳಿಸಿದೆ. ವಿದ್ಯಾರ್ಥಿಗಳ ಬಲಿಷ್ಠ ಸಮಿತಿಯಿಲ್ಲದಂತೆ ಮಾಡಿ, ಪ್ರತಿಯೊಂದು ಕಾರ್ಯಕ್ರಮ ಮತ್ತು ವರ್ಗದಿಂದ (ತರಗತಿ ಮತ್ತು ಪಠ್ಯೇತರ ಚಟುವಟಿಕೆ) ಆಯ್ಕೆಯಾಗುವ ತಲಾ ಒಬ್ಬ ಪ್ರತಿನಿಧಿಯನ್ನು ಒಳಗೊಂಡ ವಿದ್ಯಾರ್ಥಿ ಪರಿಷತ್ತನ್ನು ರಚಿಸಲು ಮುಂದಾಗಿದೆ. ಈ ಪರಿಷತ್ತಿನ ಸದಸ್ಯರನ್ನು ಹಣಕಾಸು, ಸಂಸ್ಕೃತಿ, ಸಾಹಿತ್ಯ ಮತ್ತು ಕ್ರೀಡೆಗಳಂತಹ ವಿವಿಧ ಸಮಿತಿಗಳಿಗೆ ವಿದ್ಯಾರ್ಥಿ ವ್ಯವಹಾರಗಳ ಕಚೇರಿ (OSA) ನಾಮನಿರ್ದೇಶನ ಮಾಡುತ್ತದೆ. ಜೊತೆಗೆ, ಚುನಾಯಿತರಲ್ಲದ ವಿದ್ಯಾರ್ಥಿಗಳನ್ನೂ ಸಮಿತಿಗೆ ಆಯ್ಕೆ ಮಾಡುವ ಪರಮಾಧಿಕಾರವೂ ಆಡಳಿತದ್ದೇ ಆಗಿದೆ.

ಚುನಾಯಿತ ಸದಸ್ಯರ ಕಾರ್ಯಕಾರಿ ಮಂಡಳಿ ಇಲ್ಲದ, ಈ ವಿಕೇಂದ್ರೀಕರಣವು ವಿದ್ಯಾರ್ಥಿಗಳ ಪ್ರಾತಿನಿಧಿಕ ಅಧಿಕಾರವನ್ನು ದುರ್ಬಲಗೊಳಿಸಿದೆ. ಸಾಮೂಹಿಕ ಚೌಕಾಸಿ ಶಕ್ತಿಯನ್ನು ಬುಡಮೇಲು ಮಾಡಿದೆ. ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ದನಿ ಎತ್ತುವ ಹಕ್ಕು-ಸ್ವಾತಂತ್ರವನ್ನು ಕಸಿದುಕೊಂಡಿದೆ. ವಿದ್ಯಾರ್ಥಿ ಸಂಘದ ಅಧಿಕಾರವನ್ನು ದುರ್ಬಲಗೊಳಿಸಿ, ಆಡಳಿತದ ನಿಯಂತ್ರಣದ ಅಧಿಕಾರವನ್ನು ಹೆಚ್ಚಿಸಿದೆ.

ಪ್ರಮುಖ ನೀತಿ-ನಿರ್ಧಾರಗಳನ್ನು ರೂಪಿಸುವ ಸಮಿತಿಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾತಿನಿಧ್ಯ ಇಲ್ಲದೇ ಇರುವುದು ಸಾಂಸ್ಥಿಕ ನಿರ್ಧಾರಗಳಲ್ಲಿ ವಿದ್ಯಾರ್ಥಿಗಳ ದನಿಯನ್ನು ಹತ್ತಿಕ್ಕಿದೆ. ಸಂಸ್ಥೆಯ ಎಲ್ಲ ಪ್ರಮುಖ ಶೈಕ್ಷಣಿಕ ವಿಷಯಗಳಲ್ಲಿ ಶೈಕ್ಷಣಿಕ ಮಂಡಳಿಯು ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುತ್ತದೆ. ಇದು, ಕಠಿಣ ನೀತಿ-ನಿಮಯಗಳ ಮೂಲಕ ವಿದ್ಯಾರ್ಥಿಗಳನ್ನು ದಮನಿಸುವ ತಂತ್ರವೇ ಆಗಿದೆ.

ಈ ಲೇಖನ ಓದಿದ್ದೀರಾ?: ಇರಾನ್‌ ಮೇಲೆ ಮರುದಾಳಿಗೆ ಸಜ್ಜಾಗಿದೆ ಅಮೆರಿಕ- ಇಸ್ರೇಲ್ ಯುದ್ಧಕೋರ ಜೋಡಿ

ಗಮನಾರ್ಹವಾಗಿ, ಟಿಐಎಸ್‌ಎಸ್‌ ತನ್ನ ಈ ಎಲ್ಲ ಘಾತಕ ನೀತಿಗಳನ್ನೂ ಏಕಪಕ್ಷೀಯವಾಗಿ ತೆಗೆದುಕೊಂಡಿದೆ. ವಿದ್ಯಾರ್ಥಿಗಳಿಂದ ಪ್ರತಿಕ್ರಿಯೆ, ಸಲಹೆಗಳನ್ನು ಪಡೆದೇ ಇಲ್ಲವೆಂದು ಕ್ಯಾಂಪಸ್‌ನ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಸಂಸ್ಥೆಯ ಆಡಳಿತ, ‘ಕ್ಯಾಂಪಸ್‌ನಲ್ಲಿ ಆಡಳಿತವನ್ನು ಸುಗಮಗೊಳಿಸಲು ಮತ್ತು ವಿದ್ಯಾರ್ಥಿ ಕಲ್ಯಾಣದ ಮೇಲೆ ಹೆಚ್ಚು ಕೇಂದ್ರೀಕರಿಸಲು ಈ ಬದಲಾವಣೆಗೆ ನೆರವಾಗುತ್ತವೆ’ ಎಂದು ವಾದಿಸಿದೆ. ವಿದ್ಯಾರ್ಥಿಗಳ ಅಭಿಪ್ರಾಯವನ್ನೂ ಕೇಳಿದ್ದೇವೆಂದು ಹೇಳಿಕೊಂಡಿದೆ.

ಆದರೆ, ವಿದ್ಯಾರ್ಥಿಗಳ ಅಭಿಪ್ರಾಯ ಪಡೆಯುವುದಕ್ಕೂ ಮುನ್ನವೇ, ಚುನಾವಣೆ  ನಿಗದಿಯಾಗಿದೆ. ಇದು ಪಾರದರ್ಶಕತೆಯ ಹೆಸರಿನಲ್ಲಿ ನಡೆಯುತ್ತಿರುವ ಸರ್ವಾಧಿಕಾರಿ ದಮನವೆಂದು ವಿದ್ಯಾರ್ಥಿಗಳು ಭಾವಿಸಿದ್ದಾರೆ.

ಈಗಾಗಲೇ, ದೆಹಲಿಯ ‘ಜವಹರಲಾಲ್ ನೆಹರು ವಿಶ್ವವಿದ್ಯಾಲಯ’ದಲ್ಲಿ (ಜೆಎನ್‌ಯು) 2016ರ ನಂತರ ಅಲ್ಲಿನ ಆಡಳಿತವು ದಮನಕಾರಿ ಕ್ರಮಗಳನ್ನು ವಿದ್ಯಾರ್ಥಿಗಳ ಮೇಲೆ ಹೇರಿದೆ. ಎಡ ವಿದ್ಯಾರ್ಥಿಗಳ ಸಂಘವು ಸಕ್ರಿಯವಾಗಿದ್ದ ಜೆಎನ್‌ಯುನಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಬಿವಿಪಿ ಬಾಲ ಬಿಚ್ಚಲಾರಂಭಿಸಿತು. ಜೆಎನ್‌ಯು ಆಡಳಿತವೂ ಎಬಿವಿಪಿ ತಂತ್ರ-ಕುತಂತ್ರಗಳಿಗೆ ನೆರವು ನೀಡುತ್ತಿದೆ. ಎಡ ಚಿಂತನೆಯುಳ್ಳ ವಿದ್ಯಾರ್ಥಿಗಳನ್ನು ಹತ್ತಿಕ್ಕಲು ಹಲವು ನಿಯಂತ್ರಣಗಳನ್ನು ಹೇರಿದೆ. ವಿದ್ಯಾರ್ಥಿಗಳ ಚಟುವಟಿಕೆಯನ್ನು ಕ್ಯಾಂಪಸ್‌ ವಿಚಾರಗಳಿಗೆ ಮಾತ್ರ ಸೀಮಿತಗೊಳಿಸಿದೆ.

ಅದೇ ರೀತಿ, ಪಶ್ಚಿಮ ಬಂಗಾಳದ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿಯೂ ವಿದ್ಯಾರ್ಥಿಗಳ ರಾಜಕೀಯ ಚಟುವಟಿಕೆಗಳನ್ನು ನಿಗ್ರಹಿಸುವ ಆಳಿತಾತ್ಮಕ ಕೃತ್ಯಗಳು ನಡೆದಿವೆ. ಹಲವಾರು ವಿಶ್ವವಿದ್ಯಾಲಯಗಳಲ್ಲಿ ಸಾಮಾಜಿಕ-ರಾಜಕೀಯ ವಿಚಾರಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮತ್ತು ಪ್ರತಿಕ್ರಿಯೆಗಳನ್ನು ದಮನಿಸಲಾಗಿದೆ. ವಿಶ್ವವಿದ್ಯಾಲಯಗಳು ಖಾಸಗಿ ಪ್ರಾಥಮಿಕ ಶಾಲೆಗಳನ್ನು ವಿದ್ಯಾರ್ಥಿಗಳನ್ನು ತರಗತಿಯೊಳಗೆ ಕೂಡಿಹಾಕುತ್ತಿದೆ. ಈಗ, ಟಾಟಾ ಇನ್‌ಸ್ಟಿಟ್ಯೂಟ್‌ ಕೂಡ ವಿದ್ಯಾರ್ಥಿಗಳನ್ನು ಕಟ್ಟಿಹಾಕುತ್ತಿದೆ. ಇದು, ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸ್ವಾಯತ್ತತೆ ಮತ್ತು ರಾಜಕೀಯ ಅಭಿವ್ಯಕ್ತಿಯ ಹರಣವನ್ನು ಪ್ರತಿಬಿಂಬಿಸುತ್ತದೆ.

ಟಿಐಎಸ್‌ಎಸ್‌ನ ದಮನಕಾರಿ ಧೋರಣೆಗಳು ಸಂಸ್ಥೆಯು ಈ ಹಿಂದೆ ಹೊಂದಿದ್ದ, ‘ಸಾಮಾಜಿಕ-ಬೌದ್ಧಿಕ ಕೇಂದ್ರ’ ಎಂಬ ಹೆಗ್ಗಳಿಕೆಗೆ ಮಸಿ ಬಳಿಯುತ್ತವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....