ಈ ದಿನ ಸಂಪಾದಕೀಯ | ಜಗತ್ತು ಬಯಸುತ್ತಿರುವುದು ಯುದ್ಧವನ್ನಲ್ಲ; ಶಾಂತಿ-ನೆಮ್ಮದಿಯನ್ನು

Date:

ಬಲಿಷ್ಠರ ಯುದ್ಧ ದಾಹದಿಂದ ಸಂಘರ್ಷಗಳು ನಿಲ್ಲುತ್ತಿಲ್ಲ. ನಿಂತರೂ ಅದು ಶಾಶ್ವತವಲ್ಲ. ಪ್ರಸ್ತುತ ಸಂದರ್ಭದಲ್ಲಿ ಶಾಂತಿಯ ದಾರಿ ಜಟಿಲವಾಗಿದೆ. ಶಾಂತಿಯನ್ನು ಸಾಕಾರಗೊಳಿಸಲು ಜಗತ್ತಿನ ನಾಗರಿಕರು ಒಗ್ಗಟ್ಟಾಗಿ ನಿಲ್ಲಬೇಕಿದೆ. 

ಟ್ರಂಪ್ ಅಧ್ಯಕ್ಷರಾದ ನಂತರ, ಅಮೆರಿಕದ ಧೋರಣೆಗಳು ತ್ವರಿತವಾಗಿ ಬದಲಾಗುತ್ತಿವೆ. ಆರ್ಥಿಕ ನಿರ್ಬಂಧಗಳು, ಯುದ್ಧದ ಬೆದರಿಕೆಗಳು, ಸುಂಕ ಹೇರಿಕೆಗಳು ಹೆಚ್ಚುತ್ತಿವೆ. ಇದೇ ಸಮಯದಲ್ಲಿ, ನಾನಾ ರಾಷ್ಟ್ರಗಳ ನಡುವೆ ಯುದ್ಧದ ಕಾರ್ಮೋಡವೂ ಕವಿದಿದೆ. ಈ ಯುದ್ಧಗಳ ಹಿಂದೆ ಅಮೆರಿಕದ ಕುಮ್ಮಕು ಇರುವುದು ಅದೇ ಸ್ಪಷ್ಟವಾಗಿ ಕಾಣುತ್ತಿದೆ.

ಶನಿವಾರ ಬೆಳಗ್ಗೆ, ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿವೆ. ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಭಾರೀ ಸದ್ದುಗಳು ಕೇಳಿಬಂದಿವೆ. ಇರಾನ್ ಸರ್ಕಾರ ತನ್ನ ಪ್ರಜೆಗಳಿಗೆ ಸುರಕ್ಷತೆ ಮತ್ತು ಪ್ರತಿದಾಳಿಯ ಸೈರನ್ ಮೊಳಗಿಸಿದೆ. ಪ್ರತಿಯಾಗಿ ಇಸ್ರೇಲ್‌ ಮೇಲೆ ವಾಯುದಾಳಿ ನಡೆಸಲು ಮುಂದಾಗಿದೆ. ಇರಾನ್ ಮೇಲಿನ ದಾಳಿಗೆ ಇಸ್ರೇಲ್‌ಅನ್ನು ಪ್ರಮುಖ ಕಾರಣವಾಗಿ ನೋಡಲಾಗುತ್ತಿದೆಯಾದರೂ, ದಾಳಿಯ ಹಿಂದಿನ ರೂವಾರಿ ಅಮೆರಿಕ.

ಜಗತ್ತನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು, ವಿಶ್ವದ ದೊಡ್ಡಣ್ಣನಾಗಿ ಎಂದಿಗೂ ತಾನೇ ಇರಬೇಕೆಂದು ಅಮೆರಿಕ, ತೈಲದ ಮೇಲೆ ನಿಯಂತ್ರಣ ಸಾಧಿಸಲು ಹವಣಿಸುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಅತೀ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ವೆನೆಜುವೆಲಾ ಮತ್ತು ಇರಾನ್‌ ಅಗ್ರ ಸ್ಥಾನದಲ್ಲಿವೆ. ಆದ್ದರಿಂದ, ಈ ಎರಡೂ ರಾಷ್ಟ್ರಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡರೆ, ಜಗತ್ತು ತಾನು ಹೇಳಿದಂತೆ ಕೇಳುತ್ತದೆ ಎಂಬುದು ಟ್ರಂಪ್‌ ನೇತೃತ್ವದ ಅಮೆರಿಕದ ಭ್ರಮೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈಗಾಗಲೇ, ವೆನೆಜುವೆಲಾ ಮೇಲೆ ದಾಳಿ ಮಾಡಿ, ಆ ರಾಷ್ಟ್ರವನ್ನು ಅಮೆರಿಕ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ವೆನೆಜುವೆಲಾದಲ್ಲಿನ ತೈಲವನ್ನು ಅಮೆರಿಕ ಮಾರಾಟ ಮಾಡುತ್ತಿದೆ. ಆ ತೈಲವನ್ನೇ ಖರೀದಿಸುವಂತೆ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಿಗೆ ಟ್ರಂಪ್ ತಾಕೀತು ಮಾಡಿದ್ದಾರೆ. ಪ್ರಧಾನಿ ಮೋದಿಯಂತಹವರು ಟ್ರಂಪ್‌ಗೆ ಶರಣಾಗಿ, ತೈಲ ಖರೀದಿಯನ್ನೂ ಮಾಡುತ್ತಿದ್ದಾರೆ.

ಈಗ, ಮಧ್ಯಪ್ರಾಚ್ಯದ ಬೃಹತ್‌ ರಾಷ್ಟ್ರ ಇರಾನ್‌ಅನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಮೆರಿಕ ಹವಣಿಸಿದೆ. ಅದಕ್ಕಾಗಿ, ಈ ಹಿಂದೆ, ಅಮೆರಿಕ ಬೆಂಬಲಿತ ಇಸ್ರೇಲ್‌, 2025ರ ಜೂನ್‌ನಲ್ಲಿ ಇರಾನ್‌ ಮೇಲೆ ದಾಳಿ ನಡೆಸಿತ್ತು. ಆ ಸಂದರ್ಭವನ್ನೇ ಬಳಸಿಕೊಂಡು ಇರಾನ್ ಮೇಲೆ ಯುದ್ಧ ಸಾರಲು ಅಮೆರಿಕ ಹೊಂಚುಹಾಕಿತ್ತು. ಆದರೆ, ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಹಾತೊರೆಯುತ್ತಿದ್ದ ಟ್ರಂಪ್, ಆಗ ಕದನ ವಿರಾಮವೆಂದು ನಾಟಕವಾಡಿದರು. ಆದರೆ, ನೊಬೆಲ್ ಪ್ರಶಸ್ತಿ ಒಲಿಯಲಿಲ್ಲ. ಈಗ, ತಮ್ಮ ಕ್ರೌರ್ಯವನ್ನು ಹೊರಹಾಕುತ್ತಿದ್ದಾರೆ. ಇರಾನ್ ಮೇಲೆ ದಾಳಿ ನಡೆಸಿದ್ದಾರೆ.

ಪ್ರಸ್ತುತ ಸಂದರ್ಭದಲ್ಲಿ, ಇರಾನ್ ಮಾತ್ರವೇ ಸಂಘರ್ಷ, ದಾಳಿ ಅಥವಾ ಯುದ್ಧವನ್ನು ಎದುರಿಸುತ್ತಿಲ್ಲ. ಜಗತ್ತಿನಲ್ಲಿ ಸುಮಾರು 130ಕ್ಕೂ ಹೆಚ್ಚು ಸಶಸ್ತ್ರ ಸಂಘರ್ಷಗಳು ನಡೆಯುತ್ತಿವೆ. ಗಾಜಾ ಮೇಲೆ ಇಸ್ರೇಲ್‌ ಕಳೆದ 3 ವರ್ಷಗಳಿಂದ ನಿರಂತರ ದಾಳಿ ನಡೆಸುತ್ತಿದ್ದು, 70 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನಿಯರನ್ನು ಕೊಂದಿದೆ. 2022ರಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್‌ ಯುದ್ಧಕ್ಕೆ ಸುಮಾರು 77 ಸಾವಿರ ನಾಗಕರಿರು ಬಲಿಯಾಗಿದ್ದಾರೆ. ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ಯುದ್ಧ ಘೋಷಿಸಿದ್ದು, ಈವರೆಗೆ ಸುಮಾರು 200ಕ್ಕೂ ಹೆಚ್ಚು ಮಂದಿ ಹತರಾಗಿದ್ದಾರೆ. ಪಾಕಿಸ್ತಾನ-ಭಾರತ ಮತ್ತು ಭಾರತ-ಚೀನಾ ನಡುವೆಯೂ ಗಡಿ ಸಂಘರ್ಷಗಳು ನಡೆಯುತ್ತಲೇ ಇವೆ

ಈ ಸಂಘರ್ಷಗಳಲ್ಲಿ ಅಮೆರಿಕದ ಸ್ವಾರ್ಥಕ್ಕಾಗಿಯೇ ಕೆಲವು ಯುದ್ಧಗಳು ನಡೆಯುತ್ತಿವೆ. ಇಸ್ರೇಲ್‌ ಮುಂದಿಟ್ಟುಕೊಂಡು ಗಾಜಾ ಮತ್ತು ವೆಸ್ಟ್‌ಬ್ಯಾಂಕ್‌ಗಳ ಮೇಲೆ ನಿಯಂತ್ರಣ ಸಾಧಿಸಲು, ಗಾಜಾವನ್ನು ತನ್ನ ಪ್ರವಾಸೋದ್ಯಮ ತಾಣವಾಗಿ ಮಾಡಿಕೊಳ್ಳಲು ಯತ್ನಿಸುತ್ತಿದೆ. ಉಕ್ರೇನ್‌ ಮುಖಾಂತರ ರಷ್ಯಾವನ್ನು ಹಣಿಯಬಹುದೇ ಎಂದು ನೋಡುತ್ತಿದೆ. ಮಾತ್ರವಲ್ಲದೆ, ಅಮೆರಿಕವು ನೇರವಾಗಿ ವೆನೆಜುವೆಲಾ ಮೇಲೆ ಆಕ್ರಮಣ ನಡೆಸಿ, ವಶಕ್ಕೆ ಪಡೆದಿದೆ. ಗ್ರೀನ್‌ಲ್ಯಾಂಡ್‌ಅನ್ನು ಆಕ್ರಮಿಸಿಕೊಳ್ಳಲು ತಂತ್ರ-ಕುತಂತ್ರ ಹೆಣೆಯುತ್ತಿದೆ.

ಈ ಲೇಖನ ಓದಿದ್ದೀರಾ?: ವಿದೇಶಗಳಲ್ಲಿ ದ್ವೇಷಕ್ಕೆ ಭಾರತೀಯರ ಬಲಿ- ಕೈಕಟ್ಟಿ ಕುಳಿತಿರುವರೇ ‘ವಿಶ್ವಗುರು’?

ಒಂದೆಡೆ ಹತ್ತಾರು ರಾಷ್ಟ್ರಗಳು ಯುದ್ಧದಲ್ಲಿ ತೊಡಗಿದ್ದರೆ, ಹಲವು ರಾಷ್ಟ್ರಗಳು ಅಂತರ್‌ಯುದ್ಧಗಳು ಮತ್ತು ಘರ್ಷಣೆಯಲ್ಲಿವೆ. ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಂತಹ ರಾಷ್ಟ್ರಗಳು ಆಂತರಿಕ ಸಂಘರ್ಷ ಎದುರಿಸಿ, ಹೊಸ ಸರ್ಕಾರಗಳನ್ನು ರಚಿಸಿಕೊಂಡಿವೆ. ಸುಡಾನ್, ಮೆಹನ್ಮಾರ್, ನೈಜೀರಿಯಾ, ಸಿರಿಯಾ, ಇರಾಕ್, ಯೆಮೆನ್‌ ಹಾಗೂ ಆಫ್ರಿಕಾದ ಹಲವು ಪ್ರಾಂತ್ಯಗಳಲ್ಲಿ ಇಂದಿಗೂ ಅಂತರ್ಯದ್ಧಗಳು ನಡೆಯುತ್ತಿವೆ.

ಈ ಯುದ್ಧ ಮತ್ತು ಅಂತರ್ಯುದ್ಧಗಳಿಂದಾಗಿ 2020ರಿಂದೀಚೆಗೆ 12ರಿಂದ 15 ಲಕ್ಷ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಇಂತಹ ಯುದ್ಧಗಳಿಂದಾಗಿ ದಾಳಿಕೋರ ಮತ್ತು ದಾಳಿಗೆ ಗುರಿಯಾಗುವ ಎರಡೂ ರಾಷ್ಟ್ರಗಳಲ್ಲಿ ಲಕ್ಷಾಂತರ ಜನರ ಸಾವು-ನೋವು, ಕೋಟ್ಯಂತರ ಜನರ ಸ್ಥಳಾಂತರಗೊಳ್ಳುವಿಕೆ, ಹಸಿವು, ರೋಗಗಳು, ಆರ್ಥಿಕ ನಾಶದಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ.

ಹಾಗಾದರೆ, ಈ ಯುದ್ಧಗಳು ಯಾರಿಗಾಗಿ ನಡೆಯುತ್ತಿವೆ? ಅಮೆರಿಕದಂತಹ ಬಲಿಷ್ಠ ರಾಷ್ಟ್ರಗಳ ಸ್ವಾರ್ಥಕ್ಕಾಗಿಯಷ್ಟೇ. ಈ ರಾಷ್ಟ್ರಗಳು ಇತರ ರಾಷ್ಟ್ರಗಳಲ್ಲಿನ ಭೂಪ್ರದೇಶ, ಅಧಿಕಾರ ಹಾಗೂ ಸಂಪನ್ಮೂಲಗಳ ನಿಯಂತ್ರಣವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ದಾಹದಿಂದ ನಡೆಯುತ್ತಿವೆ. ಜೊತೆಗೆ, ಅಮೆರಿಕವು ತನ್ನ ಆರ್ಥಿಕ ಲಾಭಕ್ಕಾಗಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಯುದ್ಧಗಳನ್ನು ಪ್ರಚೋದಿಸುತ್ತಿದೆ. ತಾನೂ ಯುದ್ಧಕ್ಕಿಳಿದಿದೆ.

ಪ್ರಸ್ತುತ, ಜಗತ್ತಿನ ಸಂಘರ್ಷಗಳನ್ನು 3ನೇ ಮಹಾಯುದ್ಧದ ಸೂಚನೆಯೆಂದೂ ಹಲವರು ಬಣ್ಣಿಸುತ್ತಿದ್ದಾರೆ. ಆದರೆ, ಈಗಾಗಲೇ ನಡೆದಿರುವ ಎರಡು ಮಹಾಯುದ್ಧಗಳಿಂದ ಜಗತ್ತಿನ ಸಾಮಾನ್ಯ ಜನರಿಗಾದ ಲಾಭವಾದರೂ ಏನು? ಆಗ ಸಂಭವಿಸಿದ್ದೂ ಮಾರಣಹೋಮಗಳೇ. ಅದರಿಂದ, ಲಾಭ ಮಾಡಿಕೊಂಡವರು ಆಳುವವರು ಮಾತ್ರವೇ!

ಇತ್ತೀಚಿನ ವರ್ಷಗಳಲ್ಲಿ ಯುದ್ಧ-ಸಂಘರ್ಷವನ್ನು ಎರಡು ಆಯಾಮಗಳಲ್ಲಿ ನೋಡಲಾಗುತ್ತಿದೆ. ಒಂದು, ಒಂದು ರಾಷ್ಟ್ರವು ಮತ್ತೊಂದು ರಾಷ್ಟ್ರವನ್ನು ತನ್ನ ಸ್ವಾರ್ಥಕ್ಕಾಗಿ ಬಲಿಪಡೆಯುವುದು. ಮತ್ತೊಂದು, ಆಳುವವರು ತಮ್ಮ ಆಡಳಿತದ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಮತ್ತೊಂದು ರಾಷ್ಟ್ರದೊಂದಿಗೆ ಸೆಣೆಸಾಡುವುದು. ಭಾರತದ ಮೋದಿ ಸರ್ಕಾರದ್ದು ಎರಡನೇ ಆಯ್ಕೆ. ಅಮೆರಿಕ-ಇಸ್ರೇಲ್‌ನಂತಹ ಕ್ರೂರಿಗಳದ್ದು ಮೊದಲ ಆಯ್ಕೆ.

ಸದ್ಯ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಇರಾನ್, ಇಸ್ರೇಲ್ ಸೇರಿದಂತೆ ಹತ್ತಾರು ರಾಷ್ಟ್ರಗಳು ನಿರುದ್ಯೋಗ, ಹಣದುಬ್ಬರ, ಬಡತನದಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಎಲ್ಲ ರಾಷ್ಟ್ರಗಳ ಜನರು ನೆಮ್ಮದಿಯ ಬದುಕಿಗಾಗಿ, ಸುಭದ್ರ ಉದ್ಯೋಗ ಮತ್ತು ಶಾಂತಿಗಾಗಿ ಹೋರಾಟ ನಡೆಸುತ್ತಿದ್ದಾರೆ.

ಕಳೆದೊಂದು ದಶಕದಿಂದ ‘ಯುದ್ಧ ಬೇಡ – ಶಾಂತಿ ಬೇಕು’ ಎಂಬ ಘೋಷಣೆ ಜಗತ್ತಿನಾದ್ಯಂತ ಕೇಳಿಬರುತ್ತಿದೆ. ಶಾಂತಿ ಸಮ್ಮೇಳನಗಳಲ್ಲಿ, ರ್‍ಯಾಲಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ರಾಜಕೀಯ ವೇದಿಕೆಗಳಲ್ಲಿ ಈ ಮಾತು ಮಾರ್ದನಿಸುತ್ತಿದೆ. ಶಾಂತಿಗಾಗಿ, ಮಾನವೀಯತೆಗಾಗಿ ಹಂಬಲಿಸುತ್ತಿದೆ.

ಬಲಿಷ್ಠರ ಯುದ್ಧ ದಾಹದಿಂದ ಸಂಘರ್ಷಗಳು ನಿಲ್ಲುತ್ತಿಲ್ಲ. ನಿಂತರೂ ಅದು ಶಾಶ್ವತವಲ್ಲ. ಪ್ರಸ್ತುತ ಸಂದರ್ಭದಲ್ಲಿ ಶಾಂತಿಯ ದಾರಿ ಜಟಿಲವಾಗಿದೆ. ಶಾಂತಿಯನ್ನು ಸಾಕಾರಗೊಳಿಸಲು ಜಗತ್ತಿನ ನಾಗರಿಕರು ಒಗ್ಗಟ್ಟಾಗಿ ನಿಲ್ಲಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....