ಈ ದಿನ ಸಂಪಾದಕೀಯ | ಇದು ಆತ್ಮಾವಲೋಕನದ ಕಾಲ ಮಾತ್ರವಲ್ಲ, ಪ್ರಬಲವಾಗಿ ಸಜ್ಜುಗೊಳ್ಳುವ ಸಮಯ!

Date:

ಕಳೆದ ಐದು ವರ್ಷಗಳಲ್ಲಿ, ರಾಹುಲ್-ತೇಜಸ್ವಿ ಜೋಡಿಯು ನಿತೀಶ್-ಮೋದಿಯನ್ನು ಎದುರಿಸಲು ಅತ್ಯುತ್ಸಾಹ ಮತ್ತು ಹಲವು ಗಮನಾರ್ಹ ವಿಷಯಗಳೊಂದಿಗೆ ಸಕ್ರಿಯವಾಗಿತ್ತು. ಆದರೂ, ಚುನಾವಣೆಯಲ್ಲಿ ಮಹಾಘಟಬಂಧನ್‌ಗೆ ಶೋಚನೀಯ ಫಲಿತಾಂಶ ಬಂದಿದೆ. ಇಬ್ಬರು ಯುವ ನಾಯಕರ ಹೋರಾಟ-ಪ್ರಯತ್ನಗಳನ್ನು ವಿಫಲಗೊಳಿಸಿದೆ.

ಬಿಹಾರದಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸಿದೆ ಎಂಬುದು ವಾಸ್ತವ. ಎನ್‌ಡಿಎ ಗೆಲುವು ಆರ್‌ಜೆಡಿ-ಕಾಂಗ್ರೆಸ್‌ ನೇತೃತ್ವದ ಮಹಾಘಟಬಂಧನ್‌ ಮೈತ್ರಿಕೂಟದ ಹುರುಪು, ಉತ್ಸಾಹ, ವಿಶ್ವಾಸವನ್ನು ಛಿದ್ರಗೊಳಿಸಿದೆ. 20 ವರ್ಷ ಆಡಳಿತ ನಡೆಸಿದ್ದ ನಿತೀಶ್‌ ಕುಮಾರ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆಯಿಂದಾಗಿ ಮಹಾಘಟಬಂಧನ್‌ ಗೆಲ್ಲಬಹುದು ಎಂಬ ನಂಬಿಕೆಯೂ ಹುಸಿಯಾಗಿದೆ. ವಿಪಕ್ಷಗಳು ಹೀನಾಯವಾಗಿ ಸೋತಿವೆ.

2020ರಲ್ಲಿ ನಡೆದಿದ್ದ ವಿಧಾನಸಭೆಯಲ್ಲಿ ಮಹಾಘಟಬಂಧನ್‌, ಮುಖ್ಯವಾಗಿ ಆರ್‌ಜೆಡಿ ಅತ್ಯುತ್ತಮ ಪ್ರದರ್ಶನ ನೀಡಿತ್ತು. 75 ಸ್ಥಾನಗಳನ್ನು ಗೆದ್ದು ಬಿಹಾರ ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಕಾಂಗ್ರೆಸ್‌ನ (19) ಕಳಪೆ ಪ್ರದರ್ಶನದಿಂದ ಸರ್ಕಾರ ರಚಿಸುವ ಅವಕಾಶವನ್ನು ಕಳೆದುಕೊಂಡಿತ್ತು. ಆದಾಗ್ಯೂ, ಆ ಸಂದರ್ಭಕ್ಕೆ ಹೋಲಿಸಿದರೆ, ಈ ಬಾರಿಯ, 2025ರ ಚುನಾವಣೆಯಲ್ಲಿ ನಿತೀಶ್‌ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಭುಗಿಲೆದ್ದಿತ್ತು. ಜೊತೆಗೆ, ಆರ್‌ಜೆಡಿ-ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವೂ ಅತ್ಯುತ್ತಮವಾಗಿ ಚುನಾವಣೆಗೆ ಸಿದ್ಧವಾಗಿರುವಂತೆ ತೋರುತ್ತಿತ್ತು. ಅಭಿವೃದ್ಧಿಯಲ್ಲಿ ಹಿನ್ನಡೆ, ಮತಗಳವು, ಎಸ್‌ಐಆರ್‌ ವಿರೋಧಿ ಪ್ರತಿಭಟನೆಗಳು ಮಹಾಘಟಬಂಧನ್‌ನ ಅಸ್ತ್ರಗಳಾಗಿದ್ದವು.

ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ'(ಎಸ್‌ಐಆರ್‌) ವಿರುದ್ಧ ರಾಹುಲ್ ಗಾಂಧಿ ಎರಡು ವಾರಗಳ ಕಾಲ ‘ಮತ ಅಧಿಕಾರ ಯಾತ್ರೆ’ ನಡೆಸಿದ್ದರು. ಇದು, ದೀರ್ಘಾವಧಿಯ ನಂತರ, ಬಿಹಾರ ಕಾಂಗ್ರೆಸ್ ಕಾರ್ಯಕರ್ತರನ್ನು ಬಡಿದೆಬ್ಬಿಸಿತ್ತು, ಸಕ್ರಿಯಗೊಳಿಸಿತ್ತು. ರಾಹುಲ್ ನಂತರ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಯಾತ್ರೆ ನಡೆಸಿದರು. ಕಳೆದ ಐದು ವರ್ಷಗಳಲ್ಲಿ, ರಾಹುಲ್-ತೇಜಸ್ವಿ ಜೋಡಿಯು ನಿತೀಶ್-ಮೋದಿಯನ್ನು ಎದುರಿಸಲು ಅತ್ಯುತ್ಸಾಹ ಮತ್ತು ಹಲವು ಗಮನಾರ್ಹ ವಿಷಯಗಳೊಂದಿಗೆ ಸಕ್ರಿಯವಾಗಿತ್ತು. ಆದರೂ, ಚುನಾವಣೆಯಲ್ಲಿ ಮಹಾಘಟಬಂಧನ್‌ಗೆ ಶೋಚನೀಯ ಫಲಿತಾಂಶ ಬಂದಿದೆ. ಇಬ್ಬರು ಯುವ ನಾಯಕ ಹೋರಾಟ-ಪ್ರಯತ್ನಗಳನ್ನು ವಿಫಲಗೊಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಚುನಾವಣೆಗೂ ಮುನ್ನ ತೇಜಸ್ವಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಬಿಂಬಿಸಲು ಕಾಂಗ್ರೆಸ್‌ ಹಿಂಜರಿದಿತ್ತು. ಪರಿಣಾಮ, ರಾಜ್ಯದ ಜನರಿಗೆ ‘ಆರ್‌ಜೆಡಿ-ಕಾಂಗ್ರೆಸ್‌ ಪರಸ್ಪರ ಕಿತ್ತಾಟ ನಡೆಸುತ್ತಿವೆ’ ಎಂಬ ಅಭಿಪ್ರಾಯ ರವಾನೆಯಾಯಿತು. ಅಂತಿಮವಾಗಿ, ತೇಜಸ್ವಿ ಮುಖ್ಯಮಂತ್ರಿ ಮುಖವಾಗಿ ಘೋಷಣೆಗೊಂಡರೂ ಬಿಜೆಪಿ 20 ವರ್ಷಗಳ ಹಿಂದಿನ ಆರ್‌ಜೆಡಿ ಆಡಳಿತಕ್ಕೆ ಅಂಟಿದ್ದ ‘ಜಂಗಲ್‌ರಾಜ್‌’ ಆರೋಪವನ್ನು ಎಳೆದುತಂದು ಪ್ರಚಾರದಲ್ಲಿ ಬಳಸಿಕೊಂಡಿತು. ಪ್ರಧಾನಿ ಮೋದಿ ಆದಿಯಾಗಿ ಎಲ್ಲ ಬಿಜೆಪಿ ಸ್ಟಾರ್‌ ಪ್ರಚಾರಕರೂ ‘ತೇಜಸ್ವಿ ಮುಖ್ಯಮಂತ್ರಿಯಾದರೆ, ಕಾನೂನುಬಾಹಿರ ಕೃತ್ಯಗಳು ದಿನನಿತ್ಯ ಜಾರಿಯಲ್ಲಿರುತ್ತವೆ. ಜಂಗಲ್‌ರಾಜ್ ಮರುಕಳಿಸುತ್ತದೆ’ ಎಂದು ನಿರಂತರವಾಗಿ ಹೇಳಲಾರಂಭಿಸಿದರು. ಇದು ಮತದಾರರನ್ನು ಹೆಚ್ಚಲ್ಲದಿದ್ದರೂ, ಅಲ್ಪ ಪ್ರಮಾಣದಲ್ಲಿ ಚಿಂತೆಗೀಡುಮಾಡಿತು.

ಜೊತೆಗೆ, ಮಹಾಘಟಬಂಧನ್‌ ಏನೆಲ್ಲ ಭರವಸೆಗಳನ್ನು ನೀಡಲು ಆರಂಭಿಸಿತ್ತೋ, ಅದೆಲ್ಲವನ್ನೂ ಚುನಾವಣೆಗೂ ಮುನ್ನ ಎನ್‌ಡಿಎ ಜಾರಿಗೆ ತಂದುಬಿಟ್ಟಿತು. ಚುನಾವಣೆ ಘೋಷಣೆಗೂ ಕೆಲವೇ ವಾರಗಳ ಮುನ್ನ ‘ಮಹಿಳಾ ರೋಜ್‌ಗಾರ್ ಯೋಜನೆ’ಯಡಿ ಬಿಹಾರ ಮಹಿಳೆಯರಿಗೆ 10,000 ರೂ. ಹಣವನ್ನು ಎನ್‌ಡಿಎ ಜಮಾ ಮಾಡಿತು. ಇದು ಅಕ್ಷರಶಃ ಕಾನೂನಾತ್ಮಕ ಮತ ಖರೀದಿಯೇ ಆಗಿತ್ತು. ಯೋಜನೆಯಡಿ ಮಹಿಳೆಯರ ಖಾತೆಗಳಿಗೆ ಹಣ ಜಮಾಗೊಂಡ ಬೆನ್ನಲ್ಲೇ, ಚುನಾವಣಾ ಆಯೋಗ ಚುನಾವಣೆ ಘೋಷಿಸಿತು. ಇದು, ಹಣ ಜಮಾವಣೆಗಾಗಿಯೇ ಆಯೋಗವು ಕಾದು ಕುಳಿತಿತ್ತೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತು.

ಇದಲ್ಲದೆ, ಚುನಾವಣಾ ಸಮಯದಲ್ಲೇ ನಡೆದ ಛತ್‌ ಪೂಜೆಗಾಗಿ ರೈಲ್ವೆ ಸಚಿವಾಲಯವು ಬಿಹಾರಕ್ಕೆ ವಿಶೇಷ ರೈಲುಗಳನ್ನು ಪ್ರಾರಂಭಿಸಿತು. ಛತ್ ಪೂಜೆ ಮುಗಿದರೂ, ಚುನಾವಣೆ ಮುಗಿಯುವವರೆಗೂ ವಿಶೇಷ ರೈಲುಗಳು ಬಿಹಾರ ಮತ್ತು ಇತರ ರಾಜ್ಯಗಳ ನಡುವೆ ಸಂಚರಿಸುತ್ತಲೇ ಇದ್ದವು. ಆದಾಗ್ಯೂ, ಈ ವಿಶೇಷ ರೈಲು ಪ್ರಯಾಣದ ಮೂಲಕ ಲಕ್ಷಾಂತರ ಸಂಖ್ಯೆಯ(ನಕಲಿ) ಮತದಾರರನ್ನು ಬಿಹಾರಕ್ಕೆ ರವಾನಿಸಿದವರು ಎಂಬ ಆರೋಪಗಳಿವೆ. ಈ ಆರೋಪಗಳಿಗೆ ಬಿಹಾರಕ್ಕೆ ಹೊರಡುತ್ತಿದ್ದ ರೈಲುಗಳ ಬಳಿ ಬಿಜೆಪಿಗರು ಜನರಿಗೆ ಬಿಜೆಪಿ ಶಾಲು ಹೊದಿಸಿ ಕಳಿಸುತ್ತಿದ್ದದ್ದು, ಪುಷ್ಟಿ ನೀಡಿದೆ.

ಇದಿಷ್ಟೇ ಎನ್‌ಡಿಎಗೆ ಅಭೂತಪೂರ್ವ ಗೆಲುವು ತಂದುಕೊಟ್ಟಿತೇ? ಭಾಗಶಃ ಇರಬಹುದು. ಮಿಗಿಲಾಗಿ, ವಿಪಕ್ಷಗಳ ಆರೋಪದಂತೆ ಸುಮಾರು 50 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಹೊರಗಿಟ್ಟು, ವೋಟ್‌ ಚೋರಿ ನಡೆಸಿದ್ದೂ ಒಂದು ಕಾರಣವಿರಬಹುದು.

ಇದೆಲ್ಲದರ ನಡುವೆ, ಎನ್‌ಡಿಎ, ವಿಶೇಷವಾಗಿ ಬಿಜೆಪಿ ಈ ಭಾರೀ ಗೆಲುವಿನ ಮೂಲ ಆರಂಭವಾಗಿದ್ದು ಹರಿಯಾಣದಲ್ಲಿ. ಹರಿಯಾಣ ಚುನಾವಣೆಯಿಂದ ಈವರೆಗೆ ನಡೆದಿರುವ ಬಹುತೇಕ ಎಲ್ಲ ಚುನಾವಣೆಗಳಲ್ಲಿಯೂ ಬಿಜೆಪಿ/ಎನ್‌ಡಿಎ ಭಾರೀ  ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಅದೂ, ಆಡಳಿತ ವಿರೋಧಿ ಅಲೆಯಿದ್ದು, ಬಿಜೆಪಿ ಗೆಲುವು ಸಾಧ್ಯವೇ ಇಲ್ಲವೆಂಬ ಪರಿಸ್ಥಿತಿ ಇದ್ದಾಗಲೂ ಇಂತಹ ಗೆಲುವುಗಳನ್ನು ಬಿಜೆಪಿ ಪಡೆದಿದೆ. ಹರಿಯಾಣದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಆದರೆ ಫಲಿತಾಂಶಗಳು ಬೇರೆಯದೇ ಕಥೆ ಹೇಳಿದವು. ಕಾಂಗ್ರೆಸ್ ಕೈಯಿಂದ ಗೆಲುವನ್ನು ಕಸಿದುಕೊಂಡಿತು. ಮಹಾರಾಷ್ಟ್ರದಲ್ಲಿಯೂ ಇದೇ ಕಥೆಯಾಯಿತು.

ವಿಪರ್ಯಾಸವೆಂದರೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಹಿಂದೆ ನಡೆದಿದ್ದ, ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ತೀವ್ರ ಆಘಾತ ಕಂಡಿತ್ತು. ಮಹಾರಾಷ್ಟ್ರದ ಮುಕ್ಕಾಲು ಭಾಗದಷ್ಟು ಸ್ಥಾನಗಳನ್ನು ‘ಮಹಾ ವಿಕಾಸ್‌ ಅಘಾಡಿ'(ಎಂವಿಎ) ಗೆದ್ದುಕೊಂಡಿತ್ತು. ಆದರೆ, ವಿಧಾನಸಭಾ ಚುನಾವಣೆಯ ಫಲಿತಾಂಶವು ಎಂವಿಎ ಪಕ್ಷಗಳನ್ನು ಮಾತ್ರವಲ್ಲ, ಇಡೀ ದೇಶವನ್ನೇ ಆಚ್ಚರಿಗೊಳಿಸಿತು. ಎಂವಿಎ ಆಘಾತಕಾರಿಯಾಗಿ ಸೋತರೆ, ಎನ್‌ಡಿಎ(ಮಹಾಯುತಿ) ಭರ್ಜರಿ ಗೆಲುವು ಕಂಡಿತು. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿಯೂ ಇದೇ ರೀತಿಯ ಫಲಿತಾಂಶಗಳು ಪುನರಾವರ್ತನೆಗೊಂಡವು.

ಚುನಾವಣೆಗಳನ್ನು ಗೆಲ್ಲಲು ಬಿಜೆಪಿ ಏನು ಬೇಕಾದರೂ ಮಾಡುತ್ತದೆ ಎಂಬ ಮಾತುಗಳಿವೆ. ಅಂತೆಯೇ, ಚುನಾವಣೆ ಗೆಲ್ಲಲು ಬಿಜೆಪಿ ತನ್ನದೇ ಆದ ಸೂತ್ರವನ್ನೂ ಕಂಡುಕೊಂಡಿದೆ. ಈ ಸೂತ್ರಕ್ಕೆ ಮುಖ್ಯ ಅಸ್ತ್ರವೇ ಚುನಾವಣಾ ಆಯೋಗ. ಆಯೋಗವನ್ನೇ ಬಳಸಿಕೊಂಡು ಚುನಾವಣೆಗಳನ್ನು ತನ್ನಿಚ್ಛೆಗೆ ತಕ್ಕಂತೆ ಬಿಜೆಪಿ ನಡೆಸುತ್ತಿದೆ ಎಂಬ ಆರೋಪ ಗಹನವಾಗಿದೆ.

ಮತ್ತೊಂದು ಸೂತ್ರ, ಮಹಿಳೆಯರ ಮೂಲಕ ಫಲಿತಾಂಶವನ್ನು ಬದಲಿಸುವುದು. ಚುನಾವಣೆಗೂ ಮುನ್ನ ಮಹಿಳೆಯರಿಗೆ ನಗದು ನೀಡುವ ಮೂಲಕ ಮಹಿಳಾ ಮತದಾರರ ಚಿತ್ತವನ್ನೇ ಬಿಜೆಪಿ ಬದಲಿಸುತ್ತಿದೆ. ಈ ಸೂತ್ರವನ್ನು ಮೊದಲು ಮಧ್ಯಪ್ರದೇಶದಲ್ಲಿ ಪ್ರಯೋಗಿಸಲಾಯಿತು. ಅಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವು ‘ಲಾಡ್ಲಿ ಬೆಹನ್ ಯೋಜನೆ’ಯಡಿ ಚುನಾವಣೆಗೆ ಕೆಲವೇ ವಾರಗಳು ಇದ್ದಾಗ, ಮಹಿಳೆಯರ ಖಾತೆಗಳಿಗೆ 1,500 ರೂ.ಗಳನ್ನು ಜಮಾ ಮಾಡಿತು. ಎಲ್ಲ ಪಕ್ಷಗಳಿಗೂ ಸಮಾನ ಸ್ಪರ್ಧಾ ಕಣವನ್ನು ಖಾತ್ರಿಗೊಳಿಸಲು ಚುನಾವಣಾ ಆಯೋಗವು ಮಧ್ಯಪ್ರವೇಶಿಸಿ, ಚುನಾವಣೆಗೂ ಮುನ್ನ ಇಂತಹ ನಗದು ವರ್ಗಾವಣೆ ಮಾಡುವುದನ್ನು ತಡೆಯಬೇಕಿತ್ತು. ಆದರೆ, ಅದು ಹಾಗೆ ಮಾಡಲಿಲ್ಲ. ನಗದು ವರ್ಗಾವಣೆಯ ಸೂತ್ರವು ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಯಶಸ್ಸು ತಂದುಕೊಟ್ಟಿತು.

ಆ ನಂತರ, ಮಹಾರಾಷ್ಟ್ರದಲ್ಲಿಯೂ ಇದೇ ತಂತ್ರವನ್ನು ಜಾರಿಗೊಳಿಸಿತು. ಚುನಾವಣೆಗೂ ಮುನ್ನ ‘ಲಡ್ಕಿ ಬಹಿನ್’ ಯೋಜನೆಯಡಿ ಮಹಿಳೆಯರಿಗೆ 2,500 ರೂ. ವರ್ಗಾಯಿಸಿತು. ಚುನಾವಣಾ ಆಯೋಗದ ದುರ್ಬಳಕೆ, ಮತ ಕಳವು ಆರೋಪಗಳ ಜೊತೆಗೆ, ‘ಲಡ್ಕಿ ಬಹಿನ್’ ಕೂಡ ಬಿಜೆಪಿ ಗೆಲುವಿಗೆ ಕಾರಣವಾದ ಪ್ರಮುಖ ಅಂಶ. ಅದೇ ಸೂತ್ರ ಈಗ ಬಿಹಾರದಲ್ಲಿಯೂ ಬಳಕೆಯಾಗಿದೆ.

ಈ ಲೇಖನ ಓದಿದ್ದೀರಾ?: ʼವಂದೇ ಮಾತರಂ’ವಿವಾದ; ಪರಿವಾರ- ಪ್ರಧಾನಿ ಪೋಣಿಸಿದ ಸುಳ್ಳುಗಳ ಬೊಂತೆ

ಎನ್‌ಡಿಎ ಸರ್ಕಾರದ 10,000 ರೂ. ನಗದು ವರ್ಗಾವಣೆ ಯೋಜನೆಯು ತನ್ನ ನಿರೀಕ್ಷೆಗಳನ್ನು ತೀವ್ರವಾಗಿ ಹಾಳುಮಾಡಬಹುದು ಎಂದು ಮಹಾಘಟಬಂಧನ್ ಅರಿತುಕೊಂಡಿತ್ತು. ಅದನ್ನು ಎದುರಿಸಲು, ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ, 2026ರ ಜನವರಿಯಲ್ಲಿ ಮಹಿಳೆಯರ ಖಾತೆಗಳಿಗೆ 30,000 ರೂ. ಜಮಾ ಮಾಡುವುದಾಗಿ ಘೋಷಿಸಿತು. ಆದರೆ, ಈಗಾಗಲೇ, ಕೈಯಲ್ಲಿದ್ದ ಹಣವು ತೇಜಸ್ವಿಯ ಭರವಸೆಗಿಂತ ಅಧಿಕಾರದಲ್ಲಿದ್ದ ನಿತೀಶ್‌ ಮೇಲೆಯೇ ಮಹಿಳೆಯರು ಹೆಚ್ಚು ವಿಶ್ವಾಸ ಇಡುವಂತೆ ಮಾಡಿರಬಹುದು.

ಮುಖ್ಯವಾಗಿ, ಈ ಚುನಾವಣೆಯಲ್ಲಿ, ಎನ್‌ಡಿಎ ಜಾತಿ ಸಮೀಕರಣವನ್ನು ಅತ್ಯುತ್ತಮವಾಗಿ ಹೆಣೆದಿತ್ತು ಎಂಬುದನ್ನು ಅಲ್ಲಗಳೆಯಲಾಗದು. 2020ರ ಚುನಾವಣೆಯಲ್ಲಿ ಎನ್‌ಡಿಎಯಿಂದ ಹೊರಗುಳಿದಿದ್ದ ಲೋಕ ಜನಶಕ್ತಿ ಪಕ್ಷ(ಎಲ್‌ಜೆಪಿ) ಮತ್ತು ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮಂಚ್(ಆರ್‌ಎಲ್‌ಎಂ) ಮರಳಿ ಮೈತ್ರಿಕೂಟಕ್ಕೆ ಬಿಜೆಪಿ ತಂದಿತು. ಪರಿಣಾಮವಾಗಿ, ಒಬಿಸಿ, ಇಬಿಸಿ ಹಾಗೂ ಎಸ್‌ಸಿ ಮತಗಳು ಸರಾಗವಾಗಿ ಎನ್‌ಡಿಎ ಮೈತ್ರಿಕೂಟಕ್ಕೆ ಹರಿದುಬರುವಂತಾಯಿತು.

ಮಹಿಳೆಯರಿಗೆ ನಗದು ವರ್ಗಾವಣೆ, ಜಾತಿ ಸಮೀಕರಣ, ಜೆಎಸ್‌ಪಿ ಮತ್ತು ಎಐಎಂಐಎಂಗಳಿಂದಾಗಿ ಮತ ವಿಭಜನೆಗಳು ಚುನಾವಣೆಯಲ್ಲಿ ಎನ್‌ಡಿಎ ಗೆಲುವಿಗೆ ಸಹಕಾರಿಯಾಗಿರಬಹುದು. ಆದರೆ, ಇದರಲ್ಲಿ, ಮತ ಕಳ್ಳತನವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಮತದಾರರನ್ನು ಹೊರಗಿಟ್ಟಿದ್ದು ಒಂದೆಡೆಯಾದರೆ, ಮತ್ತೊಂದೆಡೆ, ಅಧಿಕ ಮತದಾನ ದಾಖಲಾಗಿದ್ದು ನಕಲಿ ಮತದಾನ ನಡೆದಿರಬಹುದು ಎಂಬ ಸಂದೇಹವನ್ನು ಬಲಗೊಳಿಸಿದೆ. ಜೊತೆಗೆ, ಆಯೋಗ ಪ್ರಕಟಿಸಿದ ಮತದಾನ ಅಂಕಿಅಂಶದಲ್ಲಿ 3 ಲಕ್ಷಕ್ಕೂ ಅಧಿಕ ಹೆಚ್ಚುವರಿ ಮತಗಳ ಲೆಕ್ಕ ನೀಡಲಾಗಿದೆ. ಇದೆಲ್ಲವೂ ‘ಮತ ಕಳವಿನ’ ಆರೋಪಕ್ಕೆ ಪುಷ್ಟಿ ನೀಡುತ್ತವೆ.

ಇದನ್ನೂ ಓದಿ ಈ ದಿನ ಸಂಪಾದಕೀಯ | ಬಿಹಾರದಲ್ಲಿ ಗೆದ್ದಿದ್ದು ಜನತಂತ್ರವವೋ ಅಥವಾ ಮತಗಳ್ಳತನವೋ?

ಆದರೆ, ಚುನಾವಣಾ ಸೋಲಿನಿಂದ ವಿಪಕ್ಷಗಳು ಧೃತಿಗೆಡಬೇಕಿಲ್ಲ. ಬದಲಾಗಿ, ತಮ್ಮ ಹೋರಾಟಗಳನ್ನು ಮತ್ತಷ್ಟು ಬಲಗೊಳಿಸಬೇಕು. ಪ್ರಜಾತಂತ್ರದ ಮೇಲೆ ಬಿಜೆಪಿ ನಡೆಸುತ್ತಿರುವ ದಾಳಿಯನ್ನು ತಡೆಯಲು ತಳಮಟ್ಟದಿಂದ ಸಜ್ಜುಗೊಳ್ಳಬೇಕು. ಕಾರ್ಯಕರ್ತರನ್ನು ಸಿದ್ದಪಡಿಸಬೇಕು. ಜನರಲ್ಲಿ ಅರಿವು ಮೂಡಿಸಲು ನಿರಂತರವಾಗಿ ಕೆಲಸ ಮಾಡಬೇಕು. ಚುನಾವಣಾ ಗೆಲುವಿಗಾಗಿ ಬಿಜೆಪಿ ಮಾಡಬಹುದಾದ ಎಲ್ಲ ತಂತ್ರಗಳನ್ನು ಬುಡಮೇಲು ಮಾಡಲು ಪ್ರತಿತಂತ್ರ ರೂಪಿಸಬೇಕು. ಆಗ ಮಾತ್ರವೇ, ಬಿಜೆಪಿಯ ಸರ್ವಾಧಿಕಾರಕ್ಕೆ ಪೂರ್ಣವಿರಾಮ ಹಾಕಲು ಸಾಧ್ಯ. ಇದು, ಕೇವಲ ಆತ್ಮಾವಲೋಕನದ ಸಮಯವಲ್ಲ, ಪ್ರಬಲಗೊಳ್ಳುವ ಸಮಯವೂ ಕೂಡ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....