ಈ ದಿನ ಸಂಪಾದಕೀಯ | ಕುಸ್ತಿ ಅಖಾಡಕ್ಕೆ ಮರಳುವ ವಿನೇಶ್‌ ಫೋಗಟ್‌ ನಿರ್ಧಾರಕ್ಕೆ ಸ್ವಾಗತ!

Date:

ತೂಕದ ಕಾರಣಕ್ಕೆ ಅನರ್ಹಗೊಂಡು ಪದಕ ಗೆಲ್ಲುವ ಕನಸು ಸೋತು ಭಾರತಕ್ಕೆ ಮರಳಿದ ಫೋಗಟ್‌ರನ್ನು ಇಡೀ ಭಾರತ ಪ್ರೀತಿಯಿಂದ ಸ್ವಾಗತಿಸಿತು. ಹೂವಿನ ಮಳೆಗರೆಯಿತು. ಕುಸ್ತಿಗೆ ವಿದಾಯ ಹೇಳಿದ್ದ ಫೋಗಟ್, ರಾಜಕೀಯ ಪ್ರವೇಶಿಸಿದರು. ಹರಿಯಾಣದ ಶಾಸಕಿಯೂ ಆದರು. ಈಗ ಮತ್ತೆ ಕುಸ್ತಿಗೆ ಮರಳಲಿದ್ದಾರೆ!

ಭಾರತೀಯ ಮಹಿಳಾ ಕುಸ್ತಿಯಲ್ಲಿ ಅಚ್ಚಳಿಯದ ಹೆಸರು ವಿನೇಶ್ ಫೋಗಟ್. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತೀವ್ರ ಆಘಾತ ಅನುಭವಿಸಿ, ಕುಸ್ತಿಯಿಂದಲೇ ದೂರ ಉಳಿದಿದ್ದರು. ಇದೀಗ, ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂಪಡೆದು, ಈಗ ಕುಸ್ತಿ ಮ್ಯಾಟ್‌ಗೆ ಮರುಳುವುದಾಗಿ ಘೋಷಿಸಿದ್ದಾರೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮಹದಾಸೆ, ಗುರಿಯೊಂದಿಗೆ ಕುಸ್ತಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ಅವರ ಮರಳುವಿಕೆ ಕ್ರೀಡಾಭಿಮಾನಿಗಳಲ್ಲಿ ಹೊಸ ಹರ್ಷ, ಹುರುಪು ತಂದಿದೆ. ಇದು ಫೋಗಟ್‌ ಹೋರಾಟದ ಮನೋಭಾವದ ಪ್ರತಿಬಿಂಬ. ಅನ್ಯಾಯದ ವಿರುದ್ಧದ ಆಕೆಯ ಐತಿಹಾಸಿಕ ಹೋರಾಟ ಕುಸ್ತಿ ಅಂಗಣದಲ್ಲಿನ ಹೋರಾಟ ಭಾರತದ ಚರಿತ್ರೆಯಲ್ಲಿ ಸ್ವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಅಂತಹ ಮತ್ತೊಂದು ಸಾಹಸಕ್ಕೆ ಫೋಗಟ್‌ ಮನಸ್ಸು ಮಾಡಿರುವುದು ಆಕೆಯಲ್ಲಿ ಬತ್ತದ ಹೋರಾಟವನ್ನು ತೋರಿಸುತ್ತದೆ.

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಇತಿಹಾಸ ನಿರ್ಮಿಸಿದ್ದರು. ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಸತತ ಗೆಲುವುಗಳೊಂದಿಗೆ ಫೈನಲ್ ತಲುಪಿದ್ದರು. ಜಪಾನ್‌ನ ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಯುಯಿ ಸುಸಾಕಿ ಸೇರಿದಂತೆ ಬಲಿಷ್ಠ ಪ್ರತಿಸ್ಪರ್ಧಿಗಳನ್ನು ಸೋಲಿಸಿ ಫೈನಲ್‌ಗೇರಿದ್ದರು. ಈ ವಿಭಾಗದಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಆದರೆ ಫೈನಲ್‌ಗೆ ಮುಂಚಿತವಾಗಿ ನಡೆದ ತೂಕ ಪರೀಕ್ಷೆಯಲ್ಲಿ ಕೇವಲ 100 ಗ್ರಾಂ ಹೆಚ್ಚುವರಿ ತೂಕದ ಕಾರಣದಿಂದ ಅವರನ್ನು ಅನರ್ಹಗೊಳಿಸಲಾಯಿತು. ಇದು ಅವರಿಗೆ ಮಾತ್ರವಲ್ಲ, ದೇಶದ ಕೋಟ್ಯಂತರ ಕ್ರೀಡಾಭಿಮಾನಿಗಳಿಗೂ ದೊಡ್ಡ ಆಘಾತ ಉಂಟುಮಾಡಿತ್ತು. ಈ ಘಟನೆಯು ಭಾರತೀಯರನ್ನು ಭಾವುಕರನ್ನಾಗಿಸಿತ್ತು. ಅವರ ಅನರ್ಹತೆಯ ಹಿಂದೆ ಬಿಜೆಪಿಯ ಕೊಳಕು ರಾಜಕಾರಣವೂ ಇದೆ ಎಂಬ ಆರೋಪ ಕೇಳಿಬಂದಿತು. ವಿನೇಶ್ ಫೋಗಟ್ ಕುಸ್ತಿಯಿಂದ ಸನ್ಯಾಸ ಪಡೆದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಮೊದಲು, 2023ರಲ್ಲಿ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ, ವಿನೇಶ್‌ ಫೋಗಟ್ ಸೇರಿದಂತೆ ಹಲವು ಮಹಿಳಾ ಕುಸ್ತಿಪಟುಗಳು ದೆಹಲಿಯ ಜಂತರ್‌ ಮಂತರ್‌ನಲ್ಲಿ ತಿಂಗಳ ಕಾಲ ಪ್ರತಿಭಟನೆ ನಡೆಸಿದ್ದರು. ಕುಸ್ತಿ ಫೆಡರೇಷನ್‌ನ ಅಧ್ಯಕ್ಷರಾಗಿದ್ದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್‌ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿದ್ದರು. ಕ್ರಮಕ್ಕಾಗಿ ಆಗ್ರಹಿಸಿದ್ದರು.

ಆದರೆ, ಅವರ ಅಳಲು-ಆಕ್ರಂದನಕ್ಕೆ ಮೋದಿ ಸರ್ಕಾರ ತೀವ್ರ ತುಚ್ಛವಾಗಿ ಪ್ರತಿಕ್ರಿಯಿಸಿತು. ಪ್ರತಿಭಟನೆ ನಡೆಸುತ್ತಿದ್ದ ದೇಶದ ಹೆಮ್ಮೆಯ ಕುಸ್ತಿಪಟುಗಳನ್ನು ಹೀನಾಯವಾಗಿ ನಡೆಸಿಕೊಂಡಿತು. ಪೊಲೀಸರನ್ನು ಮುಂದೆ ಬಿಟ್ಟು ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿತು. ಅವರನ್ನು ದೆಹಲಿಯ ಬೀದಿಗಳಲ್ಲಿ ಪೊಲೀಸರು ಎಳೆದಾಡಿ, ದೌರ್ಜನ್ಯ ಎಸಗಿದರು.

ಮಹಿಳಾ ಕುಸ್ತಿಪಟುಗಳ ಹೋರಾಟದ ಬಿಸಿ ಇದ್ದಾಗಲೇ, 2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಆರಂಭವಾಯಿತು. ವಿನೇಶ್‌ ಭಾರೀ ಕಸರತ್ತು-ತಯಾರಿಯೊಂದಿಗೆ ಒಲಿಂಪಿಕ್ಸ್‌ನಲ್ಲಿ ಭಾಗಿಯಾದರು. ನಿರಂತರ ಗೆಲುವುಗಳೊಂದಿಗೆ ಫೈನಲ್ ಪ್ರವೇಶಿಸಿದರು. ತೂಕ ಪರೀಕ್ಷೆಯಲ್ಲಿ 100 ಗ್ರಾಂ ಕಾರಣಕ್ಕೆ ಅನರ್ಹಗೊಂಡರು. ಅವರು ‘ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್’ (CAS)ಗೆ ಅಪೀಲು ಮಾಡಿದರೂ ತೀರ್ಪು ಬದಲಾಗಲಿಲ್ಲ.

ನಿರಾಸೆಯಿಂದಲೇ 2024ರ ಆಗಸ್ಟ್‌ನಲ್ಲಿ ನಿವೃತ್ತಿ ಘೋಷಿಸಿದರು. ಅನರ್ಹತೆಯಿಂದಾಗಿ ಪದಕ ಗೆಲ್ಲುವ ಕನಸು ಸೋತು ಭಾರತಕ್ಕೆ ಮರಳಿದ ಫೋಗಟ್‌ರನ್ನು ಇಡೀ ಭಾರತ ಪ್ರೀತಿಯಿಂದ ಸ್ವಾಗತಿಸಿತು. ಹೂವಿನ ಮಳೆಗರೆಯಿತು. ಕುಸ್ತಿಗೆ ವಿದಾಯ ಹೇಳಿದ್ದ ಫೋಗಟ್, ರಾಜಕೀಯ ಪ್ರವೇಶಿಸಿದರು. 2024ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜುಲಾನಾ ಕ್ಷೇತ್ರದಲ್ಲಿ ಸ್ಪರ್ಧಿಸಿದರು. ರಾಜಕೀಯವಾಗಿ ಪ್ರೀತಿಯ ಹೊಳೆಹರಿಸಿದ ಹರಿಯಾಣ ಜನರು ಫೋಗಟ್‌ರನ್ನು ಶಾಸಕಿಯಾಗಿ ಆರಿಸಿ, ವಿಧಾನಸಭೆಗೆ ಕಳಿಸಿದರು.

ಈ ಲೇಖನ ಓದಿದ್ದೀರಾ?: ಚುನಾವಣಾ ಕಣಕ್ಕೆ ಇಳಿಯುವ ಸ್ಥಿತಿಯಲ್ಲಿದೆಯೇ ಶೇಖ್ ಹಸೀನಾ ಪಕ್ಷ?

ಇದೆಲ್ಲದರ ನಡುವೆ, 2025ರ ಜುಲೈನಲ್ಲಿ ಮಗುವಿಗೆ ಜನ್ಮವಿತ್ತರು. ಕುಸ್ತಿಯಿಂದ 18 ತಿಂಗಳು ಹೊರಗಿದ್ದ ಫೋಗಟ್, ಈಗ ಕುಸ್ತಿಗೆ ಮರಳುವುದಾಗಿ ಘೋಷಿಸಿದ್ದಾರೆ. ಡಿಸೆಂಬರ್ 12ರಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಫೋಗಟ್, “ಪ್ಯಾರಿಸ್ ಒಲಿಂಪಿಕ್ಸ್‌ ಕೊನೆಯೇ ಎಂದು ಅನೇಕರು ಕೇಳಿದ್ದರು. ಬಹಳ ದಿನಗಳ ಕಾಲ ನನ್ನಲ್ಲಿ ಉತ್ತರ ಇರಲಿಲ್ಲ. ಅಖಾಡದಿಂದ ದೂರ ಸರಿದು, ಒತ್ತಡದಿಂದ, ನಿರೀಕ್ಷೆಗಳಿಂದ ಹಾಗೂ ನನ್ನ ಸ್ವಂತ ಆಸೆಗಳಿಂದಲೂ ದೂರ ಉಳಿದಿದ್ದೆ. ಮೊದಲು ನಾನು ಉಸಿರಾಡಲು ಅವಕಾಶ ಮಾಡಿಕೊಂಡೆ. ಆದರೆ, ಕುಸ್ತಿಯ ಜ್ವಾಲೆ ನನ್ನಲ್ಲಿ ಎಂದೂ ಆರಿರಲಿಲ್ಲ. ಅದು ಕೇವಲ ಆಯಾಸ ಮತ್ತು ಗದ್ದಲದಡಿ ಹೂತುಹೋಗಿತ್ತು. ಶಿಸ್ತು, ದಿನಚರಿ, ಹೋರಾಟ ಇದೆಲ್ಲ ನನ್ನ ರಕ್ತದಲ್ಲಿದೆ. ನಾನು ಎಷ್ಟೇ ದೂರ ಸರಿದರೂ, ನನ್ನ ಮನಸ್ಸು ಅಖಾಡದಲ್ಲೇ ಉಳಿದಿತ್ತು. ಇನ್ನೂ ಈ ಕ್ರೀಡೆಯನ್ನು ಪ್ರೀತಿಸುತ್ತೇನೆ. ಇನ್ನೂ ಸ್ಪರ್ಧಿಸಲು ಬಯಸುತ್ತೇನೆ. ಈಗ ನಾನು ಏಕಾಂಗಿಯಾಗಿ ನಡೆಯುತ್ತಿಲ್ಲ. ನನ್ನ ಮಗ ನನ್ನೊಂದಿಗೆ ಸೇರ್ಪಡೆಯಾಗುತ್ತಿದ್ದಾನೆ. ಆತನೇ ನನ್ನ ಪ್ರೇರಣೆ. ಲಾಸ್ ಏಂಜಲೀಸ್ ಒಲಿಂಪಿಕ್ಸ್‌ ಹಾದಿಯಲ್ಲಿ ನನಗೆ ಆತನೇ ಪುಟ್ಟ ಚಿಯರ್‌ಲೀಡರ್” ಎಂದಿದ್ದಾರೆ.

31 ವರ್ಷದ ವಿನೇಶ್ ಫೋಗಟ್ ಅವರು ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೂರು ಚಿನ್ನಗಳು, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಕಂಚುಗಳು ಸೇರಿದಂತೆ ಅನೇಕ ಕಿರೀಟಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಏಷ್ಯನ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಚಿನ್ನ ಗೆದ್ದ ಏಕೈಕ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಯೂ ಅವರಲ್ಲಿದೆ.

ಕುಸ್ತಿ ಅಖಾಡಕ್ಕೆ ಮರಳುವಿಕೆ ಸ್ವಾಗತಾರ್ಹ. ಅವರ ಮರಳುವಿಕೆಯನ್ನು ಕುಸ್ತಿ ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್ ಕೂಡ ಸ್ವಾಗತಿಸಿದ್ದಾರೆ. ಫೋಗಟ್‌ 53 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಬಹುದು ಎನ್ನಲಾಗಿದೆ. ಅವರ ಹೋರಾಟದ ಮನೋಭಾವವು ಲಕ್ಷಾಂತರ ಯುವ ಕುಸ್ತಿಪಟುಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಪ್ರೇರಣೆಯಾಗಲಿದೆ. ಪ್ಯಾರಿಸ್‌ನ ಆಘಾತ ಮತ್ತು ನೋವನ್ನು ಮೀರಿ, ಹೊಸ ಉತ್ಸಾಹದೊಂದಿಗೆ ಮರಳುತ್ತಿರುವ ಅವರೊಂದಿಗೆ ದೇಶದ ಕ್ರೀಡಾಭಿಮಾನಿಗಳು ಜೊತೆಯಾಗಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್‌ನಲ್ಲಿ ಅವರು ಚಿನ್ನ ಗೆಲ್ಲುವಂತಾಗಲಿ.

ಕುಸ್ತಿ ಫೆಡರೇಷನ್‌ನ ಅಧ್ಯಕ್ಷನ ದೌರ್ಜನ್ಯಕ್ಕೆ ಬೀದಿಯಲ್ಲಿ ನಿಂತು ನ್ಯಾಯ ಕೇಳಿದ ಆಕೆಯನ್ನು ಹಂಗಿಸಿದ, ಸುಳ್ಳು ಆರೋಪ ಮಾಡಿದವರ ಬಾಯಿ ಮುಚ್ಚಿಸಲಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....