ಈ ದಿನ ಸಂಪಾದಕೀಯ | ಬಿಹಾರದಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

Date:

ಬಿಹಾರದಲ್ಲಿ ಎನ್‌ಡಿಎ ಗೆಲುವಿಗಾಗಿ ಆರ್‌ಎಸ್‌ಎಸ್‌ 'ಮಿಷನ್ ತ್ರಿಶೂಲ್' ಎಂಬ ತಂತ್ರ ರೂಪಿಸಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನೆಲಮಟ್ಟದಿಂದ ಮತದಾರರನ್ನು ‘ಮೊಬಿಲೈಸೇಷನ್’ ಮಾಡಲು 20,000 ಕಾರ್ಯಕರ್ತರನ್ನು ಕಣಕ್ಕಿಳಿಸಿದೆ.

ಪ್ರಾಚೀನ ಗ್ರೀಕ್ ಕಥೆಗಳಲ್ಲಿ ‘ಹೂ ವಿಲ್ ಬೆಲ್ ದಿ ಕ್ಯಾಟ್’ (ಬೆಕ್ಕಿಗೆ ಗಂಟೆ ಕಟ್ಟುವವರು ಯಾರು) ಎಂಬ ಕತೆಯೂ ಒಂದು. ಮನೆಯೊಂದರಲ್ಲಿ ಹಲವಾರು ಇಲಿಗಳು ವಾಸಿಸುತ್ತಿದ್ದವು. ಅಲ್ಲಿ ದೊಡ್ಡ ಬೆಕ್ಕು ಕೂಡ ಇತ್ತು. ಅದರಿಂದ ತಪ್ಪಿಸಿಕೊಳ್ಳಲು ಇಲಿಗಳು ಮಾಡಿದ ಉಪಾಯ, ಬೆಕ್ಕಿಗೆ ಗಂಟೆ ಕಟ್ಟುವುದು. ಗಂಟೆ ಸದ್ದು ಬಂದ ತಕ್ಷಣ ಎಲ್ಲರೂ ತಪ್ಪಿಸಿಕೊಳ್ಳುವುದು. ಆದರೆ, ಈಗ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಎದುರಾಯಿತು. ಉತ್ತರ ಸಿಗದೆ, ಇಲಿಗಳು ಮೌನವಾದವು – ಇದು ಆ ಕತೆಯ ಸಾರ. ಇದೇ ಕತೆ ಈಗ ಚುನಾವಣಾ ಕಣವಾದ ಬಿಹಾರಕ್ಕೂ ಅನ್ವಯವಾಗುತ್ತಿದೆ.

ಬಿಹಾರದ ಪಾಲಿಗೆ ಈಗ ರಾಷ್ಟ್ರೀಯ ಸ್ವಯಂಸೇವಾ ಸಂಘ (ಆರ್‌ಎಸ್‌ಎಸ್‌) ದೊಡ್ಡ ಕಳ್ಳ ಬೆಕ್ಕು. ಬಿಹಾರದಲ್ಲಿ ಬಹುತೇಕ 20 ವರ್ಷಗಳ ಕಾಲ ಬಿಜೆಪಿ-ಜೆಡಿಯು ಮೈತ್ರಿಕೂಟ ಆಡಳಿತ ನಡೆದಿದೆ. ಆದರೆ, ಬಡತನ, ನಿರುದ್ಯೋಗ, ಅಭಿವೃದ್ಧಿಯಲ್ಲಿ ಕುಂಠಿತ ಹಾಗೂ ಸೇತುವೆಗಳ ನಿರಂತರ ಕುಸಿತವು ಆಡಳಿತ ವೈಫಲ್ಯಕ್ಕೆ ಬೊಟ್ಟು ಮಾಡಿ ತೋರುತ್ತಿವೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಭುಗಿಲೆದ್ದಿದೆ. ಈ ಚುನಾವಣೆಯಲ್ಲಿ ಎನ್‌ಡಿಎ ಸೋಲುವುದು ಖಚಿತವೆಂದು ಅಭಿಪ್ರಾಯಗಳಿವೆ. ಆದರೆ, ಎನ್‌ಡಿಎ ಗೆಲುವಿಗಾಗಿ ಆರ್‌ಎಸ್‌ಎಸ್‌ ಸದ್ದಿಲ್ಲದೆ, ಕಳ್ಳ ಬೆಕ್ಕಿನಂತೆ ಕೆಲಸ ಮಾಡುತ್ತಿದೆ. ಜನಾಭಿಪ್ರಾಯವನ್ನು ಬದಲಿಸುವ ತಂತ್ರ-ಕುತಂತ್ರಗಳಲ್ಲಿ ತಲ್ಲೀನವಾಗಿದೆ.

ಬಿಹಾರದಲ್ಲಿ ಎನ್‌ಡಿಎ ಗೆಲುವಿಗಾಗಿ ಆರ್‌ಎಸ್‌ಎಸ್‌ ‘ಮಿಷನ್ ತ್ರಿಶೂಲ್’ ಎಂಬ ತಂತ್ರವನ್ನು ರೂಪಿಸಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನೆಲಮಟ್ಟದಿಂದ ‘ಮೊಬಿಲೈಸೇಷನ್’ ಮಾಡಲು ತಮ್ಮ ಕಾರ್ಯಕರ್ತರನ್ನು ಕಣಕ್ಕಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2025ರ ಮಾರ್ಚ್‌ನಲ್ಲಿ ಆರ್‌ಎಸ್‌ಎಸ್‌ ಸೈಲೆಂಟ್‌ ಕ್ಯಾಂಪೇನ್’ ಹೆಸರಿನಲ್ಲಿ ಸಮೀಕ್ಷೆ ನಡೆಸಿತ್ತು. ಆ ಮೂಲಕ, ಬಿಜೆಪಿ ಗೆಲುವು ಅಸಾಧ್ಯವೆಂದು ಕ್ಷೇತ್ರಗಳು ಮತ್ತು ಬೂತ್‌ಗಳನ್ನು ಗುರುತಿಸಿತ್ತು. ಇದೀಗ, ಆ ಬೂತ್‌ಗಳಲ್ಲಿ ಬಿಜೆಪಿ ಪರವಾಗಿ ಆರ್‌ಎಸ್‌ಎಸ್‌ ಜನಾಭಿಪ್ರಾಯ ರೂಪಿಸುತ್ತಿದೆ. ಅದಕ್ಕಾಗಿ, ಈಗಾಗಲೇ, ಚಾಟ್ ಮೈಯ್ಯಾ (ಚೈತ್ರೀ ಉತ್ಸವ)ದಂತಹ ಹಿಂದೂ ಉತ್ಸವಗಳನ್ನು ನಡೆಸಿದೆ.

ಈಗ ಬಿಹಾರದಲ್ಲಿ 20,000ಕ್ಕೂ ಹೆಚ್ಚು ಕಾರ್ಯಕರ್ತರನ್ನು ಎಲ್ಲ ಜಿಲ್ಲೆಗಳಲ್ಲಿ ಬೂತ್‌ ಮಟ್ಟದಲ್ಲಿ ಆರ್‌ಎಸ್‌ಎಸ್‌ ನಿಯೋಜಿಸಿದೆ. ಇವರೆಲ್ಲರೂ, ಉತ್ತರ ಪ್ರದೇಶ, ಹರಿಯಾಣ, ಉತ್ತರಾಖಂಡ್ ಹಾಗೂ ಜಾರ್ಖಂಡ್‌ ರಾಜ್ಯಗಳಿಂದ ಬಂದಿದ್ದಾರೆ. ಮುಖ್ಯವಾಗಿ ಸೀವಾನ್, ಬಕ್ಸರ್, ಆರಾ, ಪಟ್ನಾ, ಮುಜಾಫರ್‌ಪುರ್ ಜಿಲ್ಲೆಗಳಲ್ಲಿ ಮತದಾರರ ಮನವೊಲಿಸುವ ಕೆಲಸಗಳಲ್ಲಿ ನಿರತರಾಗಿದ್ದಾರೆ.

ಈ ತಂಡಗಳು ‘ಸಜಗ್ ರಹೋ’ (ಜಾಗೃತರಾಗಿ) ಅಭಿಯಾನದಡಿ ಮತದಾರರ ಬಾಗಿಲಿಗೆ ತೆರಳಿ ಚರ್ಚೆ ನಡೆಸುತ್ತಿವೆ. ಬೂತ್‌ ಮಟ್ಟದಲ್ಲಿ ಸುಮಾರು 50,000ಕ್ಕೂ ಹೆಚ್ಚು ಸಣ್ಣ ಸಭೆಗಳನ್ನು ನಡೆದಿವೆ. ಸ್ಥಳೀಯ ಸಮಸ್ಯೆಗಳಾದ ನಿರುದ್ಯೋಗ, ಕಾರ್ಮಿಕರ ವಲಸೆ, ಅಭಿವೃದ್ಧಿಯನ್ನು ಬದಿಗೊತ್ತಿರುವ ತಂಡಗಳು, ಹಿಂದುತ್ವ, ರಾಷ್ಟ್ರೀಯತೆ ಹಾಗೂ ಒಳನುಸುಳುಕೋರರು ಎಂಬ ದೂರದ ಗುಮ್ಮನನ್ನು ತೋರಿಸಿ, ಮನವೊಲಿಸುತ್ತಿವೆ.

ಆರ್‌ಎಸ್‌ಎಸ್‌ ಈ ತಂತ್ರ-ಕುತಂತ್ರಗಳು ಫಲಿಸುವ ಸಾಧ್ಯತೆಗಳು ಹೆಚ್ಚು. ಈಗಾಗಲೇ, ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಗಳಲ್ಲಿ ಆರ್‌ಎಸ್‌ಎಸ್‌ನ ಮೌನ ಕೆಲಸವು ಫಲ ನೀಡಿದೆ. ಹರಿಯಾಣದಲ್ಲಿ ಒಬಿಸಿ ಜಾಟ್‌ ಮೀಸಲಾತಿ ಹೋರಾಟ ಮತ್ತು ರೈತ ಹೋರಾಟಗಳು ಭುಗಿಲೆದ್ದಿದ್ದವು. 2020ರಲ್ಲಿ ಎಸ್‌ಎಸ್‌ಪಿಗೆ ಕಾನೂನು ಖಾತರಿಗಾಗಿ ಹೋರಾಟ ಆರಂಭಿಸಿದ ರೈತರನ್ನು ಹರಿಯಾಣ ಮತ್ತು ಕೇಂದ್ರದಲ್ಲಿನ ಬಿಜೆಪಿ ಸರ್ಕಾರಗಳು ನಡೆಸಿಕೊಂಡ ಧೋರಣೆಯಿಂದ ರೈತರು ಆಕ್ರೋಶಗೊಂಡಿದ್ದರು. 2024ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ನೂರಕ್ಕೆ ನೂರರಷ್ಟು ಖಚಿತವೆಂದು ಹೇಳಲಾಗಿತ್ತು.

ಆದರೆ, ಸೈಲೆಂಟ್‌ ಆಗಿಯೇ ಹರಿಯಾಣಕ್ಕೆ ಕಾಲಿಟ್ಟ ಆರ್‌ಎಸ್‌ಎಸ್‌ ಸಣ್ಣ-ಸಣ್ಣ ತಂಡಗಳನ್ನು ರಚಿಸಿ, ಸುಮಾರು 1.25 ಲಕ್ಷ ಸಭೆಗಳನ್ನು ನಡೆಸಿತು. ಈ ತಂಡಗಳು ರಾಷ್ಟ್ರೀಯತೆ, ಭಯೋತ್ಪಾದನೆ, ಹಿಂದುತ್ವದಂತಹ ವಿಚಾರಗಳನ್ನು ಮತದಾರರ ಮನಸ್ಸಿನೊಳಗೆ ಬಿತ್ತಿದವು. ಹೋರಾಟನಿರತ ರೈತರು ಮತ್ತು ಜಾಟ್‌ ಸಮುದಾಯವನ್ನೂ ಮನವೊಲಿಸಿದವು. ಪರಿಣಾಮವಾಗಿ, ಬಿಜೆಪಿ 48 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಪಡೆದು ಮತ್ತೆ ಸರ್ಕಾರ ರಚಿಸಿತು.

ಅಂತೆಯೇ, ಮಹಾರಾಷ್ಟ್ರದಲ್ಲಿ ಆರ್‌ಎಸ್‌ಎಸ್‌ ರಹಸ್ಯ ಕಾರ್ಯಾಚರಣೆ ನಡೆಸಿತು. 20,000ಕ್ಕೂ ಹೆಚ್ಚು ಬೂತ್‌ ಮಟ್ಟದ ಸಭೆಗಳನ್ನು ನಡೆಸಿದ ಸಂಘಪರಿವಾರ, ‘ವೋಟ್ ಜಿಹಾದ್ ವಿರುದ್ಧ ಹಿಂದುತ್ವ ಏಕೀಕರಣಕ್ಕಾಗಿ ಧರ್ಮಯುದ್ಧ’ ಎಂಬ ನಿರೂಪಣೆಯನ್ನು ಸೃಷ್ಟಿಸಿ, ಜನರ ಮುಂದಿಟ್ಟಿತು. ಒಬಿಸಿ ಮತ್ತು ಮರಾಠ ಮತಗಳು ವಿಭಜನೆಯಾಗದಂತೆ ತಡೆಯಿತು. ಎಲ್ಲ ಮತಗಳು ಬಿಜೆಪಿಗೆ ನಿರಾಯಾಸವಾಗಿ ಹರಿದುಬರುವಂತೆ ಮತದಾರರ ಮನಸ್ಸನ್ನು ಬದಲಿಸಿತು. ಪರಿಣಾಮವಾಗಿ ಬಿಜೆಪಿ 132 ಸೀಟುಗಳನ್ನೂ, ಮಹಾಯುತಿ 230 ಸ್ಥಾನಗಳನ್ನೂ ಗೆದ್ದು ಅಧಿಕಾರ ಉಳಿಸಿಕೊಂಡಿತು.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಜಾತಿ ಸಮೀಕರಣ, ಮತ ವಿಭಜನೆ ಸವಾಲು; ಹ್ಯಾಟ್ರಿಕ್ ಗೆಲುವಿನತ್ತ ತೇಜಸ್ವಿ ಚಿತ್ತ

ಈಗ, ಬಿಹಾರ ಚುನಾವಣೆಯಲ್ಲಿ ಮೂಲಸೌಕರ್ಯ ಮತ್ತು ಉದ್ಯೋಗವು ನಿರ್ಣಾಯಕ ಅಂಶಗಳಾಗಿವೆ. 89% ಗ್ರಾಮೀಣ ಭಾಗವನ್ನು ಹೊಂದಿರುವ ಬಿಹಾರದ ಯುವಜನರಲ್ಲಿ ನಿರುದ್ಯೋಗ ಪ್ರಮಾಣವು 10% ಇದೆ. ಇತ್ತೀಚೆಗೆ ನಡದ ಸಮೀಕ್ಷೆಯಲ್ಲಿ, ಬಿಹಾರದ 56.7% ಜನರು ನಿತೀಶ್‌ ನೇತೃತ್ವದ ಎನ್‌ಡಿಎ ಸರ್ಕಾರವು ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ. ಅಲ್ಲಿನ ಯುವಜನರು ದೆಹಲಿ, ಬೆಂಗಳೂರು ಸೇರಿದಂತೆ ಇತರ ರಾಜ್ಯಗಳ ಪ್ರಮುಖ ನಗರಗಳಿಗೆ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಇನ್ನು, ಭ್ರಷ್ಟಾಚಾರವು ಮಿತಿ ಮೀರಿದೆ. ಬಿಹಾರದ ಭ್ರಷ್ಟಾಚಾರಕ್ಕೆ ಸೇತುವೆ ಕುಸಿತಗಳು ಕನ್ನಡಿ ಹಿಡಿದಿವೆ. ಸರ್ಕಾರವು ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿವೆ ಎಂದು ಮತದಾರರು ಆಕ್ರೋಶಗೊಂಡಿದ್ದಾರೆ.

ಈ ಜನಾಕ್ರೋಶವನ್ನು ಶಮನ ಮಾಡಲು ಆರ್‌ಎಸ್‌ಎಸ್‌ ರಹಸ್ಯ ಕಾರ್ಯಾಚರಣೆ ನಡೆಸುತ್ತಿದೆ. ಆರ್‌ಎಸ್‌ಎಸ್‌ ತಂತ್ರದಿಂದಾಗಿ ಬಿಹಾರದಲ್ಲಿ 69ರಿಂದ 73 ಸ್ಥಾನಗಳಲ್ಲಿ ಎನ್‌ಡಿಎ ವಿರೋಧಿ ಮತಗಳು ಎನ್‌ಡಿಎ ಪರವಾಗಿ ಚಲಾವಣೆಯಾಗಬಹುದು. ಸೋಲುವ ಅಂಚಿನಲ್ಲಿದ್ದ ಕ್ಷೇತ್ರಗಳಲ್ಲಿಯೂ ಬಿಜೆಪಿ-ಜೆಡಿಯು ಅಭ್ಯರ್ಥಿಗಳು ಗೆಲುವು ಸಾಧಿಸಬಹುದು ಎಂದು ಊಹಿಸಲಾಗಿದೆ.

ಒಂದು ವೇಳೆ, ಆರ್‌ಎಸ್‌ಎಸ್‌ ಗೌಪ್ಯ ಕಾರ್ಯಾಚರಣೆಗಳು ಯಶಸ್ವಿಯಾಗಿದರೆ, ಬಿಹಾರದಲ್ಲಿ ಮತ್ತೆ ಎನ್‌ಡಿಎ ಅಧಿಕಾರದ ಗದ್ದುಗೆ ಉಳಿಸಿಕೊಳ್ಳಬಹುದು. ಆದರೆ, ಸಂಘಪರಿವಾರದ ಈ ‘ಮಿಷನ್ ತ್ರಿಶೂಲ್‌’ಗೆ ಪ್ರತಿಯಾಗಿ ಕಾಂಗ್ರೆಸ್‌-ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ ಬಳಿ ಯಾವುದೇ ಯೋಜನೆ-ಕಾರ್ಯಸೂಚಿಗಳಿಲ್ಲ. ಆರ್‌ಎಸ್‌ಎಸ್‌ನ ತಂತ್ರದ ವಿಚಾರವಾಗಿ ವಿಪಕ್ಷಗಳ ಮೈತ್ರಿಕೂಟ ಎಚ್ಚೆತ್ತುಕೊಂಡಂತೆ, ಪ್ರತಿತಂತ್ರಗಳನ್ನು ರೂಪಿಸಿದಂತೆ ಕಾಣುತ್ತಿಲ್ಲ.

ಮಹಾಘಟಬಂಧನ್‌ಗೆ ಬಿಹಾರದಲ್ಲಿ ಅತ್ಯುತ್ತಮ ಅವಕಾಶವಿದೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಯಶಸ್ಸು, ಭರವಸೆಯನ್ನು ಪೂರೈಸದೆ ಮಹಾರಾಷ್ಟ್ರ, ದೆಹಲಿಯಲ್ಲಿ ಮಾತು ತಪ್ಪಿರುವ ಬಿಜೆಪಿ, ಆಡಳಿತ ವಿರೋಧಿ ಅಲೆ, ವೋಟ್‌ ಚೋರಿ, 20 ವರ್ಷಗಳ ಆಡಳಿತ ವೈಫಲ್ಯ ಸೇರಿದಂತೆ ನಾನಾ ಅಸ್ತ್ರಗಳು ಮಹಾಘಟಬಂಧನ್‌ ಬತ್ತಳಿಕೆಯಲ್ಲಿದ್ದವು. ಆದರೆ, ಈ ಯಾವುದೇ ಬಾಣಗಳನ್ನು ಮೈತ್ರಿಕೂಟ ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ. ಹೀಗಿರುವಾಗ, ಆರ್‌ಎಸ್‌ಎಸ್‌ ಎಂಬ ಕಳ್ಳ ಬೆಕ್ಕು ಸದ್ದಿಲ್ಲದೆ ಬಂದು ಹಾಲು (ಮತ) ಕದ್ದು ಹೋಗುವಾಗ, ಅದರ ಕೊರಳಿಗೆ ವಿಪಕ್ಷಗಳು ಗಂಟೆ ಕಟ್ಟಬೇಕಿತ್ತು. ಅದರ ತಂತ್ರವನ್ನು ವಿಫಲಗೊಳಿಸಬೇಕಿತ್ತು. ಆದರೆ, ಅದಾಗಲಿಲ್ಲ. ನಾಳೆ (ನ.6) ಮೊದಲ ಹಂತದ ಮತದಾನ ನಡೆಯಲಿದೆ. ಈಗಲಾದರೂ ಎಚ್ಚೆತ್ತುಕೊಂಡು ಎರಡನೇ ಹಂತದ ಮತದಾನದ ವೇಳೆ ಆರ್‌ಎಸ್‌ಎಸ್‌ ಕೊರಳಿಗೆ ಗಂಟೆ ಕಟ್ಟುವ ಮೂಲಕ, ಅದರ ತಂತ್ರವನ್ನು ವಿಫಲಗೊಳಿಸಲು ಅವಕಾಶವಿದೆ. ಬಳಸಿಕೊಳ್ಳಬೇಕಷ್ಟೇ…..!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....