ಈ ದಿನ ಸಂಪಾದಕೀಯ | ಕಾಯ್ದೆ-ಕಾನೂನುಗಳು ಬಡವರ ವಿರುದ್ಧವೇ ಅಥವಾ ಪ್ರಭಾವಿಗಳ ಪರವೇ?

Date:

ಶ್ರೀಮಂತರು ಮತ್ತು ಬಡವರು, ಬಲಿಷ್ಠರು ಮತ್ತು ದುರ್ಬಲರ ನಡುವಿನ ಪ್ರತಿಯೊಂದು ಹಿತಾಸಕ್ತಿ ಸಂಘರ್ಷದಲ್ಲಿ, ಯಾವುದೇ ವಿನಾಯಿತಿಯಿಲ್ಲದೆ ಎರಡನೆಯದರೊಂದಿಗೆ ನಿಲ್ಲಬೇಕಾದ್ದು ಮನುಷ್ಯರ ಮೊದಲ ಕರ್ತವ್ಯ. ಆಳುವ ಸರ್ಕಾರ, ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳ ಆದ್ಯತೆ ಇವತ್ತು ಯಾವುದಾಗಿದೆ? ಕಾಯ್ದೆ-ಕಾನೂನು ಯಾರ ಪರವಾಗಿದೆ? 

ಡಿಸೆಂಬರ್ 20ರ ಕೊರೆಯುವ ಚಳಿಯಲ್ಲಿ, ಸಣ್ಣ ಸಣ್ಣ ಜೋಪಡಿಗಳಲ್ಲಿ ಮುದುಡಿ ಮಲಗಿದ್ದ ಕೋಗಿಲು ಬಡಾವಣೆಯ ಬಡವರ ಮೇಲೆ ಅಧಿಕಾರಸ್ಥರ ಬುಲ್ಡೋಜರ್‍‌ಗಳು ಅಟ್ಟಹಾಸಗೈದಿದ್ದವು. ಆ ದೈತ್ಯ ಯಂತ್ರಗಳಿಗೆ ಬಲಿಯಾಗಿ ನೆಲೆ ಕಳೆದುಕೊಂಡು ಬೀದಿಗೆ ಬಿದ್ದ ಬಡವರು, ಇವತ್ತಿಗೂ ನಡುಬೀದಿಯಲ್ಲಿ ನಡುಗುತ್ತಲೇ ನಿಂತಿದ್ದಾರೆ.

ಕೋಗಿಲು ಬಡಾವಣೆಯಲ್ಲಿ ಅಕ್ರಮ ತೆರವು ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತೆರವು ಕಾರ್ಯಾಚರಣೆ ನಡೆಸಿತ್ತು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಕೇರಳದ ಸಿಎಂ ಪಿಣರಾಯಿ ವಿಜಯನ್ ಈ ಬಗ್ಗೆ ಟ್ವೀಟ್ ಮಾಡಿದ್ದರು. ಬಳಿಕ ಕೇರಳದ ಸಂಸದರು, ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ್ದರು. ಕಾಂಗ್ರೆಸ್ ಮುಖಂಡ ಕೆ.ಸಿ. ವೇಣುಗೋಪಾಲ್ ಕೂಡ ಟ್ವೀಟ್ ಮಾಡಿ, ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದರು. ಸ್ಥಳೀಯ ಸಂಘ-ಸಂಸ್ಥೆಗಳು ಸಂತ್ರಸ್ತರ ಪರ ವಹಿಸಿ, ಸರ್ಕಾರದ ಕ್ರಮ ಕಾನೂನುಬಾಹಿರ, ಸಂವಿಧಾನಬಾಹಿರ ಮತ್ತು ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ ಎಂದು ಉಗ್ರವಾಗಿ ಖಂಡಿಸಿದ್ದವು.

ಇದನ್ನು ಓದಿದ್ದೀರಾ?: ‘ರೋಮಿಯೋ-ಜ್ಯೂಲಿಯೆಟ್ ವಿನಾಯಿತಿ’ ಸಲಹೆ ಪರಿಶೀಲನಾರ್ಹ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಜಕೀಯ ಕಾರಣಕ್ಕಾಗಿ ಎಚ್ಚೆತ್ತ ರಾಜ್ಯ ಸರ್ಕಾರ, ಸಂತ್ರಸ್ತರಿಗೆ ತಾತ್ಕಾಲಿಕ ನೆರವು ನೀಡಿ, ಸೂರು ಒದಗಿಸಲು ಮುಂದಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳೇ ಖುದ್ದಾಗಿ ಸಂತ್ರಸ್ತರ ಬಳಿ ಸಾಗಿ, ಸಂತೈಸಿದರು. ಕೆಡವಿದ್ದು 400 ಮನೆಗಳನ್ನಾದರೂ, ಆ ನಂತರ ಸಂತ್ರಸ್ತರ ಸಂಖ್ಯೆ ಕ್ಷೀಣಿಸುತ್ತಾ, 161ಕ್ಕೆ ಬಂದು ನಿಂತಿತು. ಮೊದಲಿಗೆ ಸರ್ಕಾರ, ಎಲ್ಲರಿಗೂ ಮನೆ ಎಂದಿದ್ದು ಕೊನೆಗೆ ಕೇವಲ 25 ಜನರಿಗೆ ಸೀಮಿತವಾಯಿತು.

ಈಗ ಅದು ಕೂಡ ಮುಂದೂಡಲ್ಪಟ್ಟಿದೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಮೂಲ ಸ್ಥಳದ ಬಗ್ಗೆ ತನಿಖೆಗೊಳಗಾಗಿ; ಸ್ಥಳೀಯರು ಮತ್ತು ವಲಸಿಗರು ಎಂದು ವಿಂಗಡಣೆಯಾಗಿ; ಪೊಲೀಸರ ಕೂಲಂಕಷ ಪರಿಶೀಲನೆಗೊಳಗಾಗಿ ದಿನದಿಂದ ದಿನಕ್ಕೆ ಸಂತ್ರಸ್ತರ ಸಂಖ್ಯೆ ಕಡಿತಗೊಳ್ಳುತ್ತಿದೆ. 25 ಕುಟುಂಬಗಳಿಗೆ ಮನೆ ಸಿಗುವುದು ಕೂಡ ಕಷ್ಟವೇನೋ ಎನಿಸುತ್ತಿದೆ.

ಬಡವರೆಂದರೆ ಎಲ್ಲರೂ ಅಯ್ಯೋ ಎನ್ನುತ್ತಾರೆ. ಅವರ ಬಗ್ಗೆ ಬರೆಹ-ಭಾಷಣ ಮಾಡುತ್ತಾರೆ. ಅನುಕಂಪ ತೋರುತ್ತಾರೆ. ಆದರೆ ಅವರ ಬದುಕಿನ ಸ್ಥಿತಿಯನ್ನು ಮತ್ತು ಹಸಿವು-ಅವಮಾನವನ್ನು ಅರಿತು, ಅಭಯಹಸ್ತ ಚಾಚುವವರು ಬಹಳ ಕಡಿಮೆ.

ಕೋಗಿಲು ಸಂತ್ರಸ್ತರ ವಿಷಯದಲ್ಲೂ ಅದೇ ಆಗಿದೆ. ಮೊದಲು ನಿರ್ದಯವಾಗಿ ಬಡವರ ಮನೆಗಳನ್ನು ಕೆಡವಿದ ಸರ್ಕಾರ, ನಂತರ ಯಾರದೋ ಒತ್ತಡಕ್ಕೆ ಒಳಗಾಗಿ, ಎಲ್ಲರಿಗೂ ಸೂರು ಎಂದಿತು. ಆ ತಕ್ಷಣವೇ ವಿರೋಧ ಪಕ್ಷ ಎದ್ದು ನಿಂತು, ವಲಸಿಗರು ಮತ್ತು ಸ್ಥಳೀಯರೆಂದು ವಿಂಗಡಿಸಿ, ಒಡೆದಾಳುವ ನೀತಿ ಅನುಸರಿಸಿತು. ಈಗಾಗಲೇ ಹಣ ಕಟ್ಟಿ ಕಾಯುತ್ತಿದ್ದ ಸ್ಥಳೀಯರನ್ನು ಎತ್ತಿ ಕಟ್ಟಲಾಯಿತು. ಅವರು ಏಳು ವರ್ಷದಿಂದ ಹಣ ಕಟ್ಟಿದ್ದೇವೆ, ನಾವು ಕಟ್ಟಿದ ಹಣದಲ್ಲಿ ಅಪಾರ್ಟ್‌ಮೆಂಟ್ ಕಟ್ಟಿ, ಕನ್ನಡಿಗರಲ್ಲದವರಿಗೆ ಮನೆ ಕೊಡುತ್ತಿದ್ದೀರಾ; ನಮಗೆ ಮೊದಲು ಮನೆ ಕೊಡಿ, ಇಲ್ಲವೆಂದರೆ ವಿಷ ಕುಡಿಯುತ್ತೇವೆ ಎಂದು ರಾಜೀವ್ ಗಾಂಧಿ ವಸತಿ ನಿಗಮದ ಮುಂದೆ ಪ್ರತಿಭಟನೆಗಿಳಿದರು.

ಇನ್ನು ಬಡವರ ಪರ ನಿಲುವು ತಳೆಯಬೇಕಾದ ಸುದ್ದಿ ಮಾಧ್ಯಮಗಳು, ಕೆಲವು ಜಾಹೀರಾತಿಗೆ- ಹಲವು ಜನಿವಾರಕ್ಕೆ ಜೋತುಬಿದ್ದವು. ಕೆಲವು ಪ್ರಭುತ್ವದ ಪರವಾದವು. ಹಲವು ವಿರೋಧ ಪಕ್ಷಗಳ ಪರ ವಕಾಲತ್ತು ವಹಿಸಿದವು. ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು- ಇಬ್ಬರೂ ಸೇರಿ ಬೀದಿಗೆ ಬಿದ್ದ ಬಡವರ ಬದುಕನ್ನು ಹರಿದು ಚಿಂದಿ ಮಾಡಿಬಿಟ್ಟರು. ಅದರಲ್ಲೂ ವಿರೋಧ ಪಕ್ಷವಾದ ಬಿಜೆಪಿ, ಸಂತ್ರಸ್ತರಲ್ಲಿ ಮುಸ್ಲಿಂ ಹುಡುಕಿತು. ಬಾಂಗ್ಲಾ ಪ್ರಜೆಗಳಿಗೆ ಮನೆ ನೀಡದಂತೆ ಕ್ರಮ ವಹಿಸಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿತು.

ಇಂತಹ ಇಕ್ಕಟ್ಟಿನ ಸಂದರ್ಭ ಸೃಷ್ಟಿಗಾಗಿ ಕಾಯುತ್ತಿದ್ದಂತೆ ಭಾಸವಾಗುವ ಆಳುವ ಸರ್ಕಾರ- ಅಕ್ರಮವಾಗಿ ನೆಲೆಸಿರುವವರು ಮತ್ತು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಸೌಲಭ್ಯ ಪಡೆಯಲು ಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದಿತು. ಸಂತ್ರಸ್ತರ ವಿರುದ್ಧ ನಿಲುವು ತಳೆದು, ಅಂತಿಮ ವರದಿ ಬರುವವರೆಗೂ ಮನೆ ಹಂಚಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ; ಪ್ರತಿಯೊಂದು ದಾಖಲೆಯನ್ನು ಹತ್ತು ಬಾರಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿತು.

ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ಬಡ ವಲಸಿಗರೇ ಆಗಲಿ, ಸ್ಥಳೀಯರೇ ಆಗಲಿ ಒಂದು ಅಡಿ ಜಾಗ ಆಕ್ರಮಿಸಿಕೊಳ್ಳುವುದು ಸುಲಭವಲ್ಲ; ಸಾಧ್ಯವೂ ಇಲ್ಲ. ಆದರೂ ಇಲ್ಲಿ ಹಲವಾರು ಅಕ್ರಮ ಬಡಾವಣೆಗಳು ತಲೆ ಎತ್ತಿವೆ. ಸರ್ಕಾರಿ ಭೂಮಿ, ಜೌಗು ಪ್ರದೇಶ, ಕೆರೆ ಅಂಗಳ, ರಾಜಕಾಲುವೆ ಜಾಗಗಳನ್ನು ಒತ್ತುವರಿ ಮಾಡಿಕೊಂಡು, ಕಾಗದ-ಪತ್ರಗಳನ್ನೂ ಹೊಂದಲಾಗಿದೆ. ಅದರಲ್ಲೂ ಕೊಳೆಗೇರಿಗಳು- ಕೇವಲ ದಾರಿದ್ರ್ಯದ ಆಕಸ್ಮಿಕ ವಠಾರಗಳಲ್ಲ. ಅವು ಅನೇಕ ಲೋಕಲ್ ರೌಡಿಗಳು, ಭೂಗತ ಜಗತ್ತು, ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಿಗಳ ಅನೈತಿಕ ಸಂಬಂಧದಿಂದ ಸೃಷ್ಟಿಯಾದ ಸಮುದಾಯಗಳಾಗಿರುತ್ತವೆ. ಅವು ಬಯಸಿದಂತೆ ಬಳಕೆಗೆ ಬರುವ ಬಡಾವಣೆಗಳಾಗಿರುತ್ತವೆ. ಮತಬ್ಯಾಂಕ್ ಆಗಿರುತ್ತವೆ.

90ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರ ಹೆಸರ ಮುಂದೆ ‘ಸ್ಲಂ’ ಜೋಡಣೆಯಾಗಿತ್ತು. ಅವರು ಶಾಸಕರಾಗಿ, ಸಚಿವರಾಗಿ ಪ್ರಸಿದ್ಧಿ ಪಡೆದಿದ್ದರು. ಈಗಲೂ, ಪಕ್ಷಾತೀತವಾಗಿ ಹಲವು ಶಾಸಕರು ಇಂತಹ ಕೊಳೆಗೇರಿಗಳ ಪೋಷಕರೇ ಆಗಿದ್ದಾರೆ. ಅವುಗಳ ಬೆಂಬಲದಿಂದ ಗೆದ್ದು ಬರುತ್ತಲೂ ಇದ್ದಾರೆ. ಹಾಗಾಗಿ ಕೊಳೆಗೇರಿಗಳು ಮತ್ತು ಚುನಾವಣಾ ರಾಜಕಾರಣದ ನಡುವಿನ ಸಂಬಂಧ ಹೊಸದೂ ಅಲ್ಲ, ಆಕಸ್ಮಿಕವೂ ಅಲ್ಲ. ಆಳುವ ಸರ್ಕಾರಕ್ಕೆ ಕೊಳೆಗೇರಿಗಳು ಮತ್ತು ಬಡವರು ಬೇಕು- ರಾಜಕಾರಣ ಮಾಡುವುದಕ್ಕೂ, ಅವರ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಹಣ ವಿನಿಯೋಗಿಸುವುದಕ್ಕೂ. ಬಾಯಿಲ್ಲದ ಬಡವರ ವಂಚಿಸುವುದಕ್ಕೂ.

ವಿಪರ್ಯಾಸಕರ ಸಂಗತಿ ಎಂದರೆ, ಸರ್ಕಾರಿ ಜಾಗ ಒತ್ತುವರಿಗೆ ಸಂಬಂಧಪಟ್ಟಂತೆ ಸರ್ಕಾರ 2007ರಲ್ಲಿ ಎ.ಟಿ. ರಾಮಸ್ವಾಮಿಯವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅವರು ದಕ್ಷತೆಯಿಂದ ಕಾರ್ಯನಿರ್ವಹಿಸಿ, ಬೆಂಗಳೂರು ಸುತ್ತಮುತ್ತ 40 ಸಾವಿರ ಕೋಟಿ ರೂ. ಮೌಲ್ಯದ 27 ಸಾವಿರ ಎಕರೆ ಕಂದಾಯ, ಅರಣ್ಯ, ಪಶು ಸಂಗೋಪನಾ ಇಲಾಖೆ ಸೇರಿದಂತೆ; ಬಿಡಿಎ, ಬಿಬಿಎಂಪಿ ಹಾಗೂ ಕೆಎಚ್‌ಬಿಗೆ ಸಂಬಂಧಿಸಿದ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಎಲ್ಲಾ ಪಕ್ಷಗಳ ಪ್ರಭಾವಿ ನಾಯಕರು, ಶ್ರೀಮಂತರು ಭಾಗಿಯಾಗಿದ್ದಾರೆಂದು ಸರ್ಕಾರಕ್ಕೆ ವರದಿ ನೀಡಿದ್ದರು.

ಇದನ್ನು ಓದಿದ್ದೀರಾ?: ದೇವರಾಜ ಅರಸು ದಾಖಲೆ ದಾಟಿದರೇ ಸಿದ್ದರಾಮಯ್ಯ?

ಆ ವರದಿ ಸರ್ಕಾರಕ್ಕೆ ಸಲ್ಲಿಸಿ ಇಲ್ಲಿಗೆ 18 ವರ್ಷಗಳಾದವು. ಯಾರ ಮೇಲೂ ಕ್ರಮ ಕೈಗೊಂಡಿದ್ದಾಗಲೀ, ಒಂದೇ ಒಂದು ಎಕರೆ ಸರ್ಕಾರದ ವಶಕ್ಕೆ ಪಡೆದದ್ದಾಗಲೀ ಇಲ್ಲ. ಅಷ್ಟೇ ಅಲ್ಲ, ಕರ್ನಾಟಕ ಭೂಮಿ ಒತ್ತುವರಿ ನಿಷೇಧ ಕಾಯ್ದೆಯೂ ಅಸ್ತಿತ್ವದಲ್ಲಿದೆ. ಆದರೆ ಶ್ರೀಮಂತರ, ಪ್ರಭಾವಿಗಳ ಒತ್ತುವರಿ ನಿಂತಿಲ್ಲ. ಅವರನ್ನು ಮುಟ್ಟುವವರೂ ಇಲ್ಲ.  

ಶ್ರೀಮಂತರು ಮತ್ತು ಬಡವರು, ಬಲಿಷ್ಠರು ಮತ್ತು ದುರ್ಬಲರ ನಡುವಿನ ಪ್ರತಿಯೊಂದು ಹಿತಾಸಕ್ತಿ ಸಂಘರ್ಷದಲ್ಲಿ, ಯಾವುದೇ ವಿನಾಯಿತಿಯಿಲ್ಲದೆ ಎರಡನೆಯದರೊಂದಿಗೆ ನಿಲ್ಲಬೇಕಾದ್ದು ಮನುಷ್ಯರ ಮೊದಲ ಕರ್ತವ್ಯ. ಬಡವರ, ಕಾರ್ಮಿಕರ, ರಾಜಕೀಯವಾಗಿ ಶಕ್ತಿಹೀನರ ಹಿತಾಸಕ್ತಿಗಳು ಮತ್ತು ಕಲ್ಯಾಣಕ್ಕಾಗಿ ಸ್ಪಷ್ಟ ನಿಲುವು ತಳೆಯಬೇಕಾದ ಆಳುವ ಸರ್ಕಾರ, ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳ ಆದ್ಯತೆ ಇವತ್ತು ಯಾವುದಾಗಿದೆ? ಕಾಯ್ದೆ-ಕಾನೂನು ಯಾರ ಪರವಾಗಿದೆ? ಬಡವರೂ ಬದುಕುವ ಬೆಂಗಳೂರು ನಗರವನ್ನಾಗಿಸುವುದು ಯಾರಿಗೆ ಬೇಕಾಗಿದೆ?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....