ಈ ದಿನ ಸಂಪಾದಕೀಯ | ಹಾಲುಗಲ್ಲದ ಹುಡುಗ ವೈಭವ್ ಮತ್ತು ಕ್ರಿಕೆಟ್ ಕಲಾತ್ಮಕತೆ

Date:

ಬದಲಾದ ಕಾಲ ಕ್ರಿಕೆಟ್ ಆಟವನ್ನು, ಕಲಾತ್ಮಕತೆಯನ್ನು, ಕ್ರೀಡಾಸ್ಫೂರ್ತಿಯನ್ನು ಕೆಡಿಸಿದೆಯೇ? ಕಾಲಕ್ಕೆ ತಕ್ಕಂತೆ ಆಟ ಮತ್ತು ಆಟಗಾರರು ಬದಲಾಗಿದ್ದಾರೆಯೇ? ಅಥವಾ ನೋಡುವ ನೋಟ ಬದಲಾಗಿದೆಯೇ?

‘ಜಗತ್ತಿನ ಶ್ರೇಷ್ಠ ಬೌಲರ್‍‌ಗಳ ಎಸೆತಗಳನ್ನೆಲ್ಲ ಪುಡಿ ಪುಡಿ ಮಾಡ್ತಿಯಲ್ಲಾ… ನಿನಗೆ ಭಯ ಆಗಲ್ವಾ’ ಎಂದು ಸಂದರ್ಶಕರು ಕೇಳಿದರು. ಆತ, ‘ನಾನು ಯಾರು ಬೌಲ್ ಮಾಡ್ತಿದ್ದಾರೆ ಅಂತ ಹೆಚ್ಚು ನೋಡಲ್ಲ… ಬಾಲ್ ಹೇಗೆ ಬರ್ತಿದೆ ಅಂತಷ್ಟೇ ಗಮನಿಸುತ್ತೇನೆ’ ಎನ್ನುತ್ತಾನೆ.

ಇದು ಹದಿನಾಲ್ಕರ ಹರೆಯದ ಹಾಲುಗಲ್ಲದ ಹುಡುಗ ವೈಭವ್ ಸೂರ್ಯವಂಶಿಯ ಮಾತು. ದೇಶೀಯ ಕ್ರಿಕೆಟ್‌ನಲ್ಲಿ ಬಿಹಾರವನ್ನು ಪ್ರತಿನಿಧಿಸುವ ವೈಭವ್, ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿದ್ದಾನೆ. ಬಿರುಸಿನ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿದ್ದಾನೆ. ಭರವಸೆಯ ಆಟಗಾರ ಎನಿಸಿಕೊಂಡಿದ್ದಾನೆ. ಹದಿನಾಲ್ಕನೇ ವಯಸ್ಸಿಗೇ ಐಪಿಎಲ್‌ನಲ್ಲಿ 34 ಎಸೆತಗಳಿಗೆ ಶತಕ ಸಿಡಿಸಿ, ಕ್ರಿಕೆಟ್‌ ಪ್ರೇಮಿಗಳು ಪುಲಕಗೊಳ್ಳುವಂತೆ ಮಾಡಿದ್ದಾನೆ. ಅತಿ ಸಣ್ಣ ವಯಸ್ಸಿಗೇ ಭಾರೀ ಬಹುಮಾನಗಳನ್ನು, ಬಿರುದು ಬಾವಲಿಗಳನ್ನು ಪಡೆದು ಬೀಗುತ್ತಿದ್ದಾನೆ. ಈತನ ಸಾಧನೆಗೆ ಗರಿಮೂಡಿಸುವಂತೆ, ಕಳೆದ ಡಿಸೆಂಬರ್‍‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ಪ್ರದಾನ ಮಾಡಿ ಪುರಸ್ಕರಿಸಿದ್ದಾರೆ.

ಇದನ್ನು ಓದಿದ್ದೀರಾ?: ‘ಸುಪ್ರೀಮ್’ ನೀಡಿದ ಎರಡು ವ್ಯತಿರಿಕ್ತ ತೀರ್ಪುಗಳು! ಅರವಿಂದ್ ಗೆ ಒಂದು ನ್ಯಾಯ, ಉಮರ್ ಗೆ ಮತ್ತೊಂದೇ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸದ್ಯ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ವೈಭವ್ ಸೂರ್ಯವಂಶಿ ನಾಯಕತ್ವದ 19 ವರ್ಷದೊಳಗಿನವರ ಭಾರತ ತಂಡ 3-0 ಅಂತರದಲ್ಲಿ ಸರಣಿ ಗೆದ್ದು ಬೀಗಿದೆ. ಅದರಲ್ಲೂ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವೈಭವ್, ಕೇವಲ 74 ಎಸೆತಗಳಲ್ಲಿ 10 ಸಿಕ್ಸರ್, 9 ಬೌಂಡರಿ ಸಹಿತ ಸ್ಫೋಟಕ ಶತಕ ಸಿಡಿಸಿದ್ದಾನೆ. ಕಳೆದ ಒಂದು ವರ್ಷದಿಂದ ಈತ ಆಡುತ್ತಿರುವ ಆಟವನ್ನು, ಅದರ ವೈಖರಿಯನ್ನು, ದಾಖಲೆಗಳನ್ನು ಪುಡಿಗಟ್ಟುತ್ತಿರುವುದನ್ನು ಗಮನಿಸಿದರೆ, ಈ ಹುಡುಗ- ಎಐ ಕಾಲ ಕಡೆದಿಟ್ಟ ಆಟಗಾರನೇ ಎಂಬ ಅನುಮಾನವೂ ಕಾಡುತ್ತದೆ.

ವೈಭವ್ ಸೂರ್ಯವಂಶಿ ಬಿಹಾರದ ಸಮಷ್ಟಿಪುರದವನು. ಮಧ್ಯಮವರ್ಗಕ್ಕೆ ಸೇರಿದ ಕುಟುಂಬದಿಂದ ಬಂದವನು. ಅಪ್ಪ ಸಂಜೀವ್‌ ಸೂರ್ಯವಂಶಿ ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಜೀವನಕ್ಕೆ ಆಧಾರವಾಗಿದ್ದ ತುಂಡು ಭೂಮಿಯನ್ನು ಅಡವಿಟ್ಟು ಆಡಿಸಿದ್ದರು. ಇವತ್ತು ಆ ತಂದೆಗೆ ಮಗನ ಆಟವನ್ನು ನೋಡಿ ಹೆಮ್ಮೆಯಾಗಿರಬಹುದು. ಹಣದ ಹೊಳೆಯೇ ಹರಿದು ಅವರ ಕಷ್ಟ ಕಾರ್ಪಣ್ಯಗಳೆಲ್ಲ ಕಳೆದು ಅವರ ಬದುಕು ಹಸನಾಗಿರಬಹುದು. ಆಗಲಿ, ಒಳ್ಳೆಯದು.

ಇಂಗ್ಲಿಷರಿಂದ ಕಲಿತ ಈ ಆಟವನ್ನು ಇಂದು ನಾವು ಇಡೀ ವಿಶ್ವವೇ ಬೆರಗಿನಿಂದ ನೋಡುವಂತೆ ಆಡುತ್ತಿದ್ದೇವೆ. ನಮ್ಮ ಆತ್ಮಾಭಿಮಾನ, ರಾಷ್ಟ್ರೀಯತೆ ಜತೆಗೆ ಕ್ರಿಕೆಟ್‌ ತಳಕು ಹಾಕಿಕೊಂಡಿದೆ. ಈ ದೃಷ್ಟಿಯಿಂದ ಭಾರತದ ಹೊಸ ಪೀಳಿಗೆಯ ಧರ್ಮ ಕ್ರಿಕೆಟ್‌ ಆಗಿದೆ. ಕೋಟ್ಯಂತರ ಜನರನ್ನು ಸೆಳೆಯುವ ಮನರಂಜನೆಯ ಮಾಧ್ಯಮವಾಗಿದೆ. ದುಃಖ-ದುಮ್ಮಾನಗಳನ್ನು ಮರೆಸುವ ಮೆರವಣಿಗೆಯಾಗಿದೆ. ಹಾಗೆಯೇ ಅಂದಾಭಿಮಾನ, ಅತಿರೇಕಗಳಿಗೂ ಕಾರಣವಾಗಿದೆ.

ಭಾರತದಲ್ಲಿ ಕ್ರಿಕೆಟ್‌ ಎನ್ನುವುದು ಇವತ್ತು ಕ್ರೀಡೆಯಾಗಿ ಉಳಿದಿಲ್ಲ. ಆಟದ ಕಲಾತ್ಮಕತೆಯನ್ನೂ ಉಳಿಸಿಕೊಂಡಿಲ್ಲ. ಹೆಚ್ಚಿಗೆ ಏನೂ ಬೇಡ, ಕಳೆದ ಒಂದು ತಿಂಗಳಿನಲ್ಲಿ ನಡೆದ ರಣಜಿ ಕ್ರಿಕೆಟ್‌ ಪಂದ್ಯಗಳನ್ನು ಗಮನಿಸಿದರೂ ಸಾಕು, ಲೆಕ್ಕವಿಲ್ಲದಷ್ಟು ಕ್ರಿಕೆಟ್ ಕಲಿಗಳು- ಕರುಣ್‌ ನಾಯರ್‌, ಇಶಾಂತ್‌ ಕಿಶನ್‌, ಪೃಥ್ವಿ ಶಾ, ಮಯಾಂಕ್‌ ಅಗರ್ವಾಲ್‌, ಪ್ರೇರಕ್‌ ಮಂಕಡ್‌, ಸಮರ್‌ ಗುಜ್ಜರ್‌- ದಿನಕ್ಕೆ ಎರಡೆರಡು ಶತಕ ಬಾರಿಸಿದ್ದಾರೆ, ಶತಕದ ಮೇಲೆ ಶತಕ ಸಿಡಿಸಿದ್ದಾರೆ. ಒಬ್ಬರ ದಾಖಲೆಯನ್ನು ಮತ್ತೊಬ್ಬರು, ಕೆಲವೇ ಗಂಟೆಗಳಲ್ಲಿ ಪುಡಿಗಟ್ಟಿದ್ದಾರೆ. ಶತಕದ ಸಂಭ್ರಮವನ್ನು ಸವಿಯಲು ಸಮಯವನ್ನೇ ಕೊಡದೆ, ಅವರ ಶತಕವನ್ನು ಅವರೇ ಸೈಡಿಗೆ ಸರಿಸಿದ್ದಾರೆ.

ಕ್ರಿಕೆಟ್‌ ಒಂದು ಸಾಂಘಿಕ ಆಟ ಎಂದೆನಿಸಿದರೂ, ನಾಯಕ ಆರಾಧನೆಯ ನಮ್ಮಂಥ ದೇಶಗಳಲ್ಲಿ ವಿಜಯದ ರೂವಾರಿಗಳು ಆದರ್ಶ ಪುರುಷರಾಗುವುದು ಸಾಮಾನ್ಯವಾಗಿದೆ. ವ್ಯಕ್ತಿಪೂಜೆ, ಆರಾಧನೆ, ವಿಜೃಂಭಣೆ ಅತಿಗೆ ಹೋಗುತ್ತಿದೆ. ಆ ಸಂಭ್ರಮ, ಸಡಗರ ಆ ಕ್ಷಣವೇ ಕಣ್ಮರೆಯಾಗುತ್ತಿದೆ. 

ಕ್ರಿಕೆಟ್ ಎನ್ನುವುದು ಇವತ್ತಿನ ದಿನಗಳಲ್ಲಿ ಕೋಟ್ಯಂತರ ರೂಪಾಯಿಗಳ ವಹಿವಾಟುಳ್ಳ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಕ್ರಿಕೆಟ್ ಆಟಗಾರ ರನ್ ಹೊಳೆ ಹರಿಸುವ, ವಿಕೆಟ್ ಉರುಳಿಸುವ, ಕ್ಯಾಚ್ ಹಿಡಿಯುವ ಮಷೀನ್ ಆಗಿದ್ದಾನೆ. ಪ್ರೇಕ್ಷಕರು ಹುಚ್ಚು ಅಭಿಮಾನಿಗಳಾಗಿ, ದೇಶಪ್ರೇಮಿಗಳಾಗಿ ರೂಪಾಂತರಗೊಂಡಿದ್ದಾರೆ. ಗೆದ್ದರೆ ಹೊಗಳುವ, ಸೋತರೆ ಕೆರಳುವ ಜನ, ಅದನ್ನೊಂದು ಆಟ, ಅಲ್ಲಿ ಸೋಲು-ಗೆಲುವು ಸಾಮಾನ್ಯ ಎನ್ನುವುದನ್ನೇ ಮರೆತಿದ್ದಾರೆ. ಇಂತಹ ಒತ್ತಡದಲ್ಲಿ ಆಡಬೇಕಾದ ಆಟಗಾರ, ಆಟದ ಸೊಗಸನ್ನು, ಕಲಾತ್ಮಕತೆಯನ್ನು ಕಡೆಗಣಿಸಿ, ತಂತ್ರಗಾರಿಕೆಗೆ ತಲೆಬಾಗಿದ್ದಾನೆ. ಪ್ರೇಕ್ಷಕರು, ಆಯ್ಕೆದಾರರು, ಜಾಹೀರಾತುದಾರರು, ಬೆಟ್ಟಿಂಗ್ ಕಟ್ಟುವವರ ಒತ್ತಡಕ್ಕೆ ಒಳಗಾಗಿ ಜೀವವನ್ನು ಒತ್ತೆಯಿಟ್ಟು ಮೈದಾನಕ್ಕಿಳಿಯುತ್ತಿದ್ದಾನೆ. ತೆರೆಮರೆಯ ಶಕ್ತಿಗಳು ನಿರ್ದೇಶಿಸುವ ಆಟದಲ್ಲಿ ಆಟಗಾರ ಬರಿ ಪಾತ್ರಧಾರಿಯಾಗುತ್ತಿದ್ದಾನೆ.

ಇದನ್ನು ಓದಿದ್ದೀರಾ?: ದೇವರಾಜ ಅರಸು ದಾಖಲೆ ದಾಟಿದರೇ ಸಿದ್ದರಾಮಯ್ಯ?

ಹಿಂದೆ, 70-80ರ ದಶಕದಲ್ಲಿ ಕ್ರಿಕೆಟ್‌ ಹೀಗಿರಲಿಲ್ಲ. ಆಟಗಾರನೂ ಬೇರೆ, ಆಟವೂ ಬೇರೆ. ಕಲಾತ್ಮಕತೆಯಂತೂ ಅದ್ಭುತ. ಅವರ ಬೌಲಿಂಗ್‌, ಬ್ಯಾಟಿಂಗ್‌ ಅನ್ನು ಕ್ರಿಕೆಟ್ ಪ್ರೇಮಿಗಳು ಆಸ್ವಾದಿಸುವಂತೆ, ಎದುರಾಳಿ ತಂಡ ಕೂತು ನೋಡಿ ಕಲಿಯುವಂತೆ, ಯೋಚಿಸುವಂತೆ ಆಡುತ್ತಿದ್ದರು. ಶತಕ ಸಿಡಿಸಲಿ, ಪಂದ್ಯ ಗೆಲ್ಲಲಿ ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದಿಲ್ಲ, ಮೆರೆದಾಡಿದ್ದಂತೂ ಇಲ್ಲವೇ ಇಲ್ಲ. ಅವರ ಶಿಸ್ತು, ಶ್ರದ್ಧೆ ಮತ್ತು ತನ್ಮಯತೆ ಮಿಕ್ಕವರಿಗೆ ಮಾದರಿಯಾಗುವಂಥದ್ದು. ಆಶ್ಚರ್ಯವೆಂದರೆ, ಅವರು ಆಡುವಾಗಲೂ ಅಭಿಮಾನಿಗಳಿದ್ದರು. ಆಟವನ್ನು ಆಟವನ್ನಾಗಿ ನೋಡಿ ಆನಂದಿಸುತ್ತಿದ್ದರು. ಆರೋಗ್ಯಕರವಾಗಿ ಚರ್ಚಿಸುತ್ತಿದ್ದರು.

ಬದಲಾದ ಕಾಲ ಆಟವನ್ನು, ಕಲಾತ್ಮಕತೆಯನ್ನು, ಕ್ರೀಡಾಸ್ಫೂರ್ತಿಯನ್ನು ಕೆಡಿಸಿದೆಯೇ? ಕಾಲಕ್ಕೆ ತಕ್ಕಂತೆ ಆಟ ಮತ್ತು ಆಟಗಾರರು ಬದಲಾಗಿದ್ದಾರೆಯೇ? ಅಥವಾ ನೋಡುವ ನೋಟ ಬದಲಾಗಿದೆಯೇ?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....