ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

Date:

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ. ಅದು ಉಂಟು ಮಾಡುವ ಸಂಚಲನ ಬಡವರನ್ನು ಬದುಕಿಸುತ್ತದೆ. ಬಡವರು ಉಳಿದರೆ ಇಂದಿರಾ ಗಾಂಧಿಯ ಹೆಸರೂ ಉಳಿಯುತ್ತದೆ.

2017ರ ಡಿಸೆಂಬರ್‍‌ನಲ್ಲಿ, ರಾಜ್ಯದ ಮುಖ್ಯ ಕಾರ್ಯದರ್ಶಿ ಕೆ. ರತ್ನ ಪ್ರಭಾ ಅವರು, ಆಗತಾನೆ ಆರಂಭಗೊಂಡಿದ್ದ ಕಾಂಗ್ರೆಸ್ಸಿನ ಕಲ್ಯಾಣ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್‌ಗೆ ದಿಢೀರ್ ಭೇಟಿ ಕೊಟ್ಟಿದ್ದರು. ಕೆ.ಆರ್. ಮಾರುಕಟ್ಟೆಗೆ ಬರುವ ಸಾಮಾನ್ಯರಂತೆ ಸಾಲಾಗಿ ನಿಂತು ಟೋಕನ್ ಪಡೆದು, ಎಲ್ಲರೊಂದಿಗೆ ಕಲೆತು ಊಟ ಮಾಡಿದ್ದರು. ಬಡವರನ್ನು ಬದುಕಿಸುವ ಸರ್ಕಾರದ ಯೋಜನೆ ಬಗ್ಗೆ ತಿಳಿವಳಿಕೆ ತುಂಬಿ, ಬಳಸುವಂತೆ ಮನವಿ ಮಾಡಿಕೊಂಡಿದ್ದರು.  

ಇದು ಇಂದಿರಾ ಕ್ಯಾಂಟೀನ್‌ನಲ್ಲಿ ನಿತ್ಯ ಊಟ-ತಿಂಡಿ ಮಾಡುವ ಬಡವರು ಮತ್ತು ಮಧ್ಯಮವರ್ಗದವರಲ್ಲಿ ಆತ್ಮವಿಶ್ವಾಸ ಮೂಡಿಸಿತ್ತು. ಬಡವ-ಬಲ್ಲಿದರ ನಡುವಿನ ತಾರತಮ್ಯವನ್ನು ತೊಡೆದುಹಾಕಿತ್ತು. ಸಮಾಜಕ್ಕೆ ಸಮಾನತೆಯ ಸಂದೇಶವನ್ನು ಸಾರಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಗರೀಬಿ ಹಠಾವೋ ಕಾರ್ಯಕ್ರಮಗಳ ಮೂಲಕ ಜನಪ್ರಿಯರಾಗಿದ್ದರು. ಬಡವರ ಹಸಿವಿಗೆ ಸ್ಪಂದಿಸುವ ಮೂಲಕ ಕಾಂಗ್ರೆಸ್ ಪಕ್ಷ, ಇಂದಿರಾ ಗಾಂಧಿಯವರ ಕಾರ್ಯಕ್ರಮಗಳನ್ನು ಮುಂದುವರೆಸಿತ್ತು.

ಇಂದಿರಾ ಕ್ಯಾಂಟೀನ್, ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ನಡೆಸುತ್ತಿರುವ ಆಹಾರ ಸಬ್ಸಿಡಿ ಕಾರ್ಯಕ್ರಮವಾಗಿದೆ. ಪಕ್ಕದ ತಮಿಳುನಾಡಿನಲ್ಲಿ ಆರಂಭವಾದ ‘ಅಮ್ಮ ಕ್ಯಾಂಟೀನ್’ನಿಂದ ಪ್ರೇರಿತವಾಗಿದೆ. ಕಾಂಗ್ರೆಸ್ ಸರ್ಕಾರದ ಯೋಜನೆಯಾದ್ದರಿಂದ, ಭಾರತದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರು ಇಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಹೆಡೆಯೆತ್ತಿ ಫೂತ್ಕರಿಸುತ್ತಿರುವ ಬಹುಸಂಖ್ಯಾತವಾದದ ಬೇರುಗಳನ್ನು ಗುರುತಿಸಿದ್ದರು ಪಣಿಕ್ಕರ್

ಮೊದಲ ಹಂತದಲ್ಲಿ ಕರ್ನಾಟಕದ ನಗರ ಪ್ರದೇಶಗಳ ಬಡ ವಿದ್ಯಾರ್ಥಿಗಳು, ದಿನಗೂಲಿ ನೌಕರರು, ವಲಸೆ ಕಾರ್ಮಿಕರು, ಆಟೋ-ಕ್ಯಾಬ್ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಮತ್ತು ನಿರಾಶ್ರಿತರಿಗೆ ಕಡಿಮೆ ದರದಲ್ಲಿ ಪೌಷ್ಟಿಕ ಆಹಾರವನ್ನು ಒದಗಿಸುವುದು ಇಂದಿರಾ ಕ್ಯಾಂಟೀನ್‌ಗಳ ಮೂಲ ಉದ್ದೇಶವಾಗಿತ್ತು. ಕೇವಲ ಐದು ರೂಪಾಯಿಗೆ ಉಪಾಹಾರ ಹಾಗೂ ಹತ್ತು ರೂಪಾಯಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡುವ ಮಹತ್ವದ ಯೋಜನೆಯಾಗಿತ್ತು. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಈ ಯೋಜನೆ ವಿಶೇಷ ಮಹತ್ವ ಪಡೆದುಕೊಂಡಿತ್ತು. ಹಸಿವಿನ ಮಹತ್ವ ಗೊತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಳಜಿಗೆ ತಕ್ಕಂತೆ ಇಂದಿರಾ ಕ್ಯಾಂಟೀನ್ ಕಾರ್ಯರೂಪಕ್ಕಿಳಿದಿತ್ತು.

2017ರಲ್ಲಿ ಸರ್ಕಾರ ಬೆಂಗಳೂರು ನಗರದಲ್ಲಿ 198 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಿತು. ನಿರ್ಮಾಣ ವೆಚ್ಚವಾಗಿ ಸುಮಾರು 100 ಕೋಟಿ ಖರ್ಚು ಮಾಡಿತ್ತು. ಆ ನಂತರದಲ್ಲಿ ಪ್ರತಿ ಕ್ಯಾಂಟೀನ್‌ಗೆ ಪ್ರತಿ ತಿಂಗಳು 10 ಕೋಟಿಯಂತೆ, ವಾರ್ಷಿಕ 200 ಕೋಟಿ ರೂ.ಗಳನ್ನು ಖರ್ಚು ಮಾಡುತ್ತ ಬಂದಿದೆ. ಇಂದಿರಾ ಕ್ಯಾಂಟೀನ್‌ಗಳ ಯಶಸ್ಸು ನಿಂತಿರುವುದೇ ಬಡವರಿಗೆ ಅಗ್ಗದ ದರದಲ್ಲಿ ಆಹಾರ ನೀಡುವುದರಲ್ಲಿ. ಇದು ಬಡವರಿಗೆ ದೊಡ್ಡ ಮಟ್ಟದಲ್ಲಿ ಸಹಾಯವಾಗಿದೆ, ಲಕ್ಷಾಂತರ ಜನರ ಹಸಿವನ್ನು ತಣಿಸಿದೆ.

ಹಾಗೆ ನೋಡಿದರೆ, ಇಂದಿರಾ ಕ್ಯಾಂಟೀನ್‌ಗಳು ಕೇವಲ ಆಹಾರ ವಿತರಿಸುವ ಜಾಗಗಳಲ್ಲ; ಅವು ಸಾಮಾಜಿಕ ಸಮಾನತೆ ಸಾರುವ ಕೇಂದ್ರಗಳು. ಸಮಾಜದ ವಿವಿಧ ವರ್ಗದ ಜನರು ಒಂದೇ ಸ್ಥಳದಲ್ಲಿ ಕಲೆತು ಉಣ್ಣುವುದರಿಂದ ಸಮಾಜದಲ್ಲಿ ಸಮಾನತೆಯ ಭಾವನೆ ಬೆಳೆಸುವ ಪ್ರಯತ್ನವಾಗಿದೆ. ಸಾಮರಸ್ಯ ಮತ್ತು ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ಇದೊಂದು ಮಹತ್ವದ ಕಲ್ಯಾಣ ಕ್ರಮವೆಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿರುವುದೂ ಇದೆ.

2017ರಲ್ಲಿದ್ದ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಳಜಿಯ ಫಲವಾಗಿ ಪಕ್ಷದ ನಾಯಕಿ ಇಂದಿರಾ ಗಾಂಧಿಯವರ ಹೆಸರನ್ನು ಚಿರಸ್ಥಾಯಿಯಾಗಿಸಲು ಕ್ಯಾಂಟೀನ್‌ಗಳಿಗೆ ಅವರ ಹೆಸರನ್ನಿಟ್ಟಿತ್ತು. ಇಂದಿರಾ ಗಾಂಧಿಯವರ ಮಹತ್ವದ ಗರೀಬಿ ಹಠಾವೋ ಯೋಜನೆಗಳು ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದರಿಂದ, ಆ ಹೆಸರು ಕೂಡ ಸೂಕ್ತವಾಗಿತ್ತು. ಯೋಜನೆಗೆ ಜನರಿಂದ ಉತ್ತಮ ಸ್ಪಂದನೆ ಕೂಡ ಸಿಕ್ಕಿತ್ತು.

ಆದರೆ ಇಂದಿರಾ ಗಾಂಧಿ ಹೆಸರು ಕಂಡರೆ ಉರಿದುಬೀಳುವ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್, ಅವರ ಆಡಳಿತಾವಧಿಯಲ್ಲಿ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಲು ಯೋಚಿಸಿದ್ದರು. ಆಗದಿದ್ದಾಗ ಅನುದಾನ ನೀಡದೆ ಸ್ಥಗಿತಗೊಳಿಸಿದ್ದರು. ಬಡವರ ಅನ್ನಕ್ಕೆ ಕಲ್ಲು ಹಾಕಿದ್ದರು. ಇದೆಲ್ಲವನ್ನು ಕಣ್ಣಾರೆ ಕಂಡಿದ್ದ ಸಿದ್ದರಾಮಯ್ಯನವರು, 2023ರಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತಿದ್ದಂತೆ, ನಿಷ್ಕ್ರಿಯಗೊಂಡಿದ್ದ ಇಂದಿರಾ ಕ್ಯಾಂಟೀನ್‌ಗಳಿಗೆ ಚಾಲನೆ ನೀಡಿದರು. ಪುನರುಜ್ಜೀವನಗೊಳಿಸುವ ಭರವಸೆ ನೀಡಿದರು.

ದುರದೃಷ್ಟಕರ ಸಂಗತಿ ಎಂದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸರಿಸುಮಾರು ಮೂರು ವರ್ಷಗಳಾಗುತ್ತ ಬಂದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಕ್ಯಾಂಟೀನ್ ಆರಂಭವಾಗಿದ್ದು ಬಿಟ್ಟರೆ, ಪುನರುಜ್ಜೀವನ, ಕಾಯಕಲ್ಪವೆಲ್ಲ ಬರಿಮಾತಿನ ಭರವಸೆಗಳಾಗಿಯೇ ಉಳಿದಿವೆ. ಬೆಂಗಳೂರಿನ 175 ಇಂದಿರಾ ಕ್ಯಾಂಟೀನ್ ಮತ್ತು 23 ಮೊಬೈಲ್ ಕ್ಯಾಂಟೀನ್‌ಗಳ ಪೈಕಿ, ಈಗ 169 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. 23 ಮೊಬೈಲ್ ಕ್ಯಾಂಟೀನ್ ಸ್ಥಗಿತಗೊಂಡಿವೆ. 27 ಅಡುಗೆ ಮನೆಗಳ ಪೈಕಿ 16 ಅಡುಗೆ ಮನೆಗಳು ಮುಚ್ಚಲ್ಪಟ್ಟಿವೆ. ಹೊಸ ಸರ್ಕಾರ ಬಂದನಂತರ, ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸುವ ಗುತ್ತಿಗೆ ಸಂಸ್ಥೆಗಳು ಬದಲಾದವೇ ಹೊರತು, ಆಮೂಲಾಗ್ರ ಬದಲಾವಣೆಯೇನೂ ಕಾಣದಾಗಿದೆ.

ಕಾಂಗ್ರೆಸ್ಸಿಗರು, ತಮ್ಮ ಪಕ್ಷದ ಅಧಿನಾಯಕಿಯ ಹೆಸರಿಟ್ಟ ಕಾರಣಕ್ಕಾದರೂ ಕ್ಯಾಂಟೀನ್‌ಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕಾಗಿತ್ತು. ಆದರೆ ಕಾಂಗ್ರೆಸ್ಸಿಗರ ಆರಂಭಶೂರತ್ವವೋ, ನಿರಾಸಕ್ತಿಯೋ ಅಥವಾ ಅದರಲ್ಲೂ ಪರ್ಸಂಟೇಜ್ ಪೀಕುವ ರೋಗವೋ- ಇಂದಿರಾ ಕ್ಯಾಂಟೀನ್‌ಗಳು ನಿರ್ವಹಣಾ ಕೊರತೆಯಿಂದ ಬಳಲುತ್ತಿವೆ.

ಆಹಾರದ ರುಚಿ, ಗುಣಮಟ್ಟ, ಪೌಷ್ಟಿಕತೆ ಕಣ್ಮರೆಯಾಗಿದೆ. ಸ್ವಚ್ಛತೆ ಮತ್ತು ಮೂಲಸೌಕರ್ಯಗಳ ಕೊರತೆಯಿಂದಾಗಿ ಜನ ಅತ್ತ ಕಾಲಿಡದಂತಾಗಿದೆ. ಜನರಿಲ್ಲದ ಕಾರಣಕ್ಕೆ ಕೆಲವು ಕಡೆ ಕ್ಯಾಂಟೀನ್‌ಗಳು ತ್ಯಾಜ್ಯ ತೊಟ್ಟಿಗಳಾಗಿ ಪರಿವರ್ತನೆಯಾಗಿವೆ. ಕ್ಯಾಂಟೀನ್‌ಗಳಿಗೆ ಊಟ-ತಿಂಡಿ-ನೀರು ಸರಬರಾಜು ಮಾಡಲು ಗುತ್ತಿಗೆ ಪಡೆದಿದ್ದ ಸಂಸ್ಥೆಗಳ ಗುತ್ತಿಗೆದಾರರು ಜಲಮಂಡಲಿಗೆ ಹಣ ಪಾವತಿಸದೇ ಇದ್ದುದರಿಂದ, ಕಾವೇರಿ ನೀರು ಪೂರೈಕೆಯನ್ನು ನಿಲ್ಲಿಸಲಾಗಿದೆ. ಯುದ್ಧದಿಂದಾಗಿ ಈಗ ಗ್ಯಾಸ್ ಸಿಲೆಂಡರ್ ಸರಬರಾಜಿಗೆ ಕಂಟಕ ಎದುರಾಗಿದೆ. ಕ್ಯಾಂಟೀನ್ ಸಿಬ್ಬಂದಿಗೆ ವೇತನ ವಿಳಂಬದಿಂದಾಗಿ ಕೆಲಸಗಾರರಿಲ್ಲದೆ ನಿರಂತರ ನಿರ್ವಹಣೆಗೆ ತೊಡಕಾಗಿದೆ. ಒಟ್ಟಾರೆ ಬಡವರ ಹಸಿವು ನೀಗಿಸುವ ಯೋಜನೆ ಹಳ್ಳ ಹಿಡಿದಿದೆ. ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ಸಿಟ್ಟಿಗೆ ಗುರಿಯಾಗಿದೆ.

ಇದನ್ನು ಓದಿದ್ದೀರಾ?: ಭಾರತವನ್ನು ಜಗತ್ತಿನ ಎದುರು ನಡುಬಗ್ಗಿ ನಿಲ್ಲುವಂತೆ ಮಾಡಿದ ಮಹಾತ್ಮ!

ಈಗಲೂ ಕಾಲ ಮಿಂಚಿಲ್ಲ. ಇಂದಿರಾ ಕ್ಯಾಂಟೀನ್‌ಗಳು ಬಡ ಜನರಿಗೆ ಅಗತ್ಯವಾದ, ಹಸಿವು ನೀಗಿಸುವ ಯೋಜನೆ ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಸರ್ಕಾರ ಕ್ಯಾಂಟೀನ್‌ಗಳನ್ನು ನವೀಕರಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹಾಗೆಯೇ ಆಹಾರದ ಗುಣಮಟ್ಟವನ್ನು ಸುಧಾರಿಸಿ, ಹಣಕಾಸಿನ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕಾಗಿದೆ. ಹೊಸಗಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಂಡು, ಬಡವರಷ್ಟೇ ಅಲ್ಲ ಎಲ್ಲರೂ ಬಳಸುವ ಕ್ಯಾಂಟೀನ್‌ಗಳಾಗಿ ಬದಲಾಗಬೇಕಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ಸಿಗರು ಜಡತ್ವ ಕೊಡವಿಕೊಂಡು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ. ಜೊತೆಗೆ ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ. ಅದು ಉಂಟು ಮಾಡುವ ಸಂಚಲನ ಬಡವರನ್ನು ಬದುಕಿಸುತ್ತದೆ. ಬಡವರು ಉಳಿದರೆ ಇಂದಿರಾ ಗಾಂಧಿಯ ಹೆಸರೂ ಉಳಿಯುತ್ತದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....