ಈ ದಿನ ಸಂಪಾದಕೀಯ | ಜೈಲಿಗೆ ಹೋಗಿ ಬಂದವರಿಗೆ ಸಂಭ್ರಮದ ಸ್ವಾಗತ; ಕರ್ನಾಟಕ ಹೀಗೇಕಾಯಿತು?

Date:

ಶಾಸಕರು, ಸಚಿವರು ಜೈಲಿಗೆ ಹೋಗಿ ಬರುವುದು; ಬಂದವರಿಗೆ ಸಂಭ್ರಮದ ಸ್ವಾಗತ ಸನ್ಮಾನ ಮಾಡುತ್ತಿರುವುದು ಸಾಮಾನ್ಯವಾಗಿದೆ. ತಪ್ಪು ಮಾಡುವುದು, ಮಾಡಿದ್ದನ್ನು ಸಮರ್ಥಿಸಿಕೊಳ್ಳುವುದು, ಮಾಡಿದ್ದಕ್ಕೆ ಸಂಭ್ರಮಿಸುವುದು ರಾಜಕೀಯ ನೈತಿಕತೆಯನ್ನು ಅಪವ್ಯಾಖ್ಯಾನಗೊಳಿಸುತ್ತಿದೆ. 

ಆನ್‌ಲೈನ್-ಆಫ್‌ಲೈನ್ ಬೆಟ್ಟಿಂಗ್ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯ(ಇಡಿ)ದಿಂದ ಬಂಧಿತರಾಗಿ, ಜೈಲಿನಲ್ಲಿದ್ದ ಶಾಸಕ ಕೆ.ಸಿ. ವೀರೇಂದ್ರ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ಕಳೆದ ನಾಲ್ಕು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಅಲಿಯಾಸ್ ಪಪ್ಪಿ ಬಿಡುಗಡೆಯಾಗಿ ಹೊರಬಂದಿದ್ದಾರೆ. ಶಾಸಕ ವೀರೇಂದ್ರ ಜೈಲಿನಿಂದ ಹೊರಬರುತ್ತಿದ್ದಂತೆ, ಅವರ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಸಿಕ್ಕಿದೆ. ಹಾರ ತುರಾಯಿ ಹಾಕಿ ಮೆರವಣಿಗೆ ಮಾಡಲಾಗಿದೆ. ಚಳ್ಳಕೆರೆಯಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಒಂದು ಕ್ಷೇತ್ರದ ಜನಪ್ರತಿನಿಧಿ ಎಂದಮೇಲೆ, ಅವರಿಗೆ ಪಕ್ಷದ ಕಾರ್ಯಕರ್ತರಿರುತ್ತಾರೆ, ಅಭಿಮಾನಿಗಳಿರುತ್ತಾರೆ, ಬೆಂಬಲಿಗರಿರುತ್ತಾರೆ. ಇದೆಲ್ಲವೂ ಈ ಕಾಲದ ರಾಜಕಾರಣದಲ್ಲಿ ಸಾಮಾನ್ಯ, ಇದರಲ್ಲೇನು ವಿಶೇಷ ಎಂದು ಕೇಳುವವರೂ ಇದ್ದಾರೆ. ಆದರೆ ಕರ್ನಾಟಕ ಕಂಡ ರಾಜಕಾರಣದಲ್ಲಿ, ಈ ಬೆಳವಣಿಗೆಯನ್ನು ಕಂಡವರಿಲ್ಲ. ಇದು ಕರ್ನಾಟಕದ ಸಂಸ್ಕೃತಿಯಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಕೋರೆಗಾಂವ್ ಭೀಮಾ ವಿಜಯೋತ್ಸವ ಎಂಬ ದಲಿತ ಅಸ್ಮಿತೆ

ಹಿಂದೊಮ್ಮೆ ಮಾಜಿ ಶಾಸಕ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಶಾಸಕರನ್ನು ಮತ್ತು ಶಾಸನಸಭೆಯನ್ನು ಬಣ್ಣಿಸಿದ್ದರು. ಕರ್ನಾಟಕ ಕಂಡ ರಾಜಕಾರಣ ಎಂಥದು ಎನ್ನುವುದನ್ನು ಕಣ್ಮುಂದೆ ಇರಿಸಿದ್ದರು. ’70ರ ದಶಕದಲ್ಲಿ ವಿಧಾನಸೌಧ ದೇವಸ್ಥಾನದಂತಿತ್ತು. ಶಾಸನಸಭೆ ಪವಿತ್ರ ಸ್ಥಳವಾಗಿತ್ತು. ನಾಡಿನ ಜನರ ಕಲ್ಯಾಣಕ್ಕಾಗಿ ನಡೆಯುವ ಗಂಭೀರ ಚರ್ಚೆಗಳ ಕೇಂದ್ರವಾಗಿತ್ತು. ಅದರೊಳಕ್ಕೆ ಪ್ರವೇಶ ಪಡೆಯುವುದು ಪವಿತ್ರಕಾರ್ಯವಾಗಿತ್ತು. ಪ್ರವೇಶ ಪಡೆದ ಶಾಸಕರು ದೇವರಂತೆ ಕಾಣುತ್ತಿದ್ದರು. ಅವರ ಪರಿಶುದ್ಧತೆ, ಪ್ರಾಮಾಣಿಕತೆ, ಜನಪರ ಪ್ರೀತಿ, ಕಾಳಜಿ, ಕಳಕಳಿ ಪ್ರಶ್ನಾತೀತ. ಅವರ ತಿಳಿವಳಿಕೆ, ಅನುಭವ, ಬುದ್ಧಿವಂತಿಕೆಯೂ ಕೂಡ. ಅವರ ಆದರ್ಶ, ಜನಪರ ನಿಲುವುಗಳಿಂದಾಗಿ ಶಾಸನಸಭೆ ಪ್ರಜಾತಂತ್ರದ ಸ್ವರ್ಗದಂತಿತ್ತು. ಅಂತಹ ಕಾಲವನ್ನು, ಆ ಜನರನ್ನು ನೋಡಿ ಬೆಳೆದವನು ನಾನು’ ಎಂದು ಸ್ಮರಿಸಿದ್ದರು.

ಈಗ ಏನಾಗಿದೆ? ಕಾಲವೂ ಬದಲಾಗಿದೆ. ರಾಜಕಾರಣವೂ ಬದಲಾಗಿದೆ. ಬದಲಾದ ಕಾಲದಲ್ಲಿ, ಅಕ್ರಮವೆಸಗಿ ಜೈಲಿಗೆ ಹೋಗಿ ಬಂದ ರಾಜಕೀಯ ನಾಯಕರಿಗೆ ಅದ್ದೂರಿ ಸ್ವಾಗತ ನೀಡಿ, ಮೆರವಣಿಗೆ ಮಾಡಿ ಸಂಭ್ರಮಿಸುವುದು ಸಾಮಾನ್ಯವಾಗಿದೆ. ಈ ಮಾದರಿ ದೇಶದ ಇತರ ರಾಜ್ಯಗಳಲ್ಲಿ ಕಂಡುಬರುತ್ತಿತ್ತು. ಕರ್ನಾಟಕದಲ್ಲಿ ಇರಲಿಲ್ಲ. ಮುಖ್ಯಮಂತ್ರಿಯೊಬ್ಬ ಭ್ರಷ್ಟಾಚಾರದ ಆಪಾದನೆಯ ಮೇಲೆ ಜೈಲಿಗೆ ಹೋಗಿದ್ದನ್ನು ಕನ್ನಡಿಗರು ಕಂಡಿದ್ದಿಲ್ಲ. ಅದನ್ನು ಕರ್ನಾಟಕಕ್ಕೂ ಕರೆತಂದ ‘ಕೀರ್ತಿ’ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸಲ್ಲಬೇಕು. ಅದರಲ್ಲೂ ಸಮಾಜವನ್ನು ತಿದ್ದುವ, ಬುದ್ಧಿ ಹೇಳುವ ಮಠಾಧೀಶರು, ಸ್ವಾಮೀಜಿಗಳೇ ಮುಂದಾಗಿ, ಜಾತಿಕಾರಣಕ್ಕಾಗಿ ಯಡಿಯೂರಪ್ಪನವರ ಬೆನ್ನಿಗೆ ನಿಂತು, ಬೆಂಬಲಿಸಿದ್ದು- ಕರ್ನಾಟಕ ಕಂಡ ದುರಂತವೆಂದೇ ಹೇಳಬೇಕು.

ದುರಂತ ಏಕೆಂದರೆ, ಅಲ್ಲಿಯವರೆಗೆ ಸಾರ್ವಜನಿಕ ಬದುಕಿನಲ್ಲಿರುವವರು ಏನಾದರೂ ತಪ್ಪು ಮಾಡಿದರೆ, ಆ ತಕ್ಷಣವೇ ಪ್ರಶ್ನಿಸುವ, ಪ್ರತಿಭಟಿಸುವ ಜನರಿದ್ದರು. ಇತ್ತೀಚೆಗೆ ಆ ಪ್ರತಿರೋಧದ ಸಂಖ್ಯೆ ಕ್ಷೀಣಿಸುತ್ತಿದೆ. ಸಹಿಸಿಕೊಳ್ಳುವ ಸ್ವಭಾವ ನಿಧಾನವಾಗಿ ಮೈಗೂಡುತ್ತಿದೆ. ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗದಿರುವುದು ಅಧಿಕಾರಸ್ಥ ರಾಜಕಾರಣಿಗಳಿಗೆ ಅಕ್ರಮಗಳಿಗೆ ಪರವಾನಗಿಯಂತೆ ಕಾಣತೊಡಗಿದೆ. ಅಲ್ಲಿಂದ ಆರಂಭವಾದ ಸಹಿಸಿಕೊಳ್ಳುವ ಸ್ವಭಾವ ಈಗ ಸಾರ್ವಜನಿಕ ಸಂಭ್ರಮವಾಗಿ ಬದಲಾಗಿದೆ.

ನಾಡಿನ ಭೂಮಿ ಬಗೆದು ಕಣ್ಣುಬಿಡುವುದರೊಳಗೆ ಕೋಟ್ಯಧಿಪತಿಯಾದ ಬಿಜೆಪಿಯ ಗಣಿ ಕುಳ ಜನಾರ್ದನ ರೆಡ್ಡಿ, ಜೈಲಿಗೆ ಹೋಗಿಬಂದರು. ಕಾಂಗ್ರೆಸ್ ಮುಖಂಡ, ಪ್ರಸ್ತುತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅಕ್ರಮ ಹಣ ವರ್ಗಾವಣೆಗೆ ಸಂಬಂಧ ಸೆರೆವಾಸ ಅನುಭವಿಸಿದರು. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಸಚಿವ ನಾಗೇಂದ್ರರನ್ನು ಬಂಧಿಸಿ, ಜೈಲಿಗಟ್ಟಲಾಯಿತು. ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಾಗೇಂದ್ರ, ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ, ಕೊಲೆ ಕೇಸಿನಲ್ಲಿ ಈಗಲೂ ಜೈಲಿನಲ್ಲಿಯೇ ಇದ್ದಾರೆ. ಇನ್ನು ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರು ರಫ್ತು ಮಾಡಿದ ಆರೋಪದ ಮೇಲೆ ಕಾರವಾರ-ಅಂಕೋಲದ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್, ಜೈಲು ಪಾಲಾಗಿದ್ದವರು, ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜೆಡಿಎಸ್‌ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಅತ್ಯಾಚಾರದ ಆಪಾದನೆಯ ಮೇಲೆ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. ಬಿಜೆಪಿ ಶಾಸಕ ಬೈರತಿ ಬಸವರಾಜ್, ಕೊಲೆ ಕೇಸಿನಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಇವರ ಸಾಲಿಗೆ ಈಗ ಚಿತ್ರದುರ್ಗ ಶಾಸಕ ರವೀಂದ್ರ, ಹೊಸ ಸೇರ್ಪಡೆಗೊಂಡಿದ್ದಾರೆ.

ಅಂದರೆ, ಪಕ್ಷಾತೀತವಾಗಿ ಚುನಾಯಿತ ಪ್ರತಿನಿಧಿಗಳು ಅತ್ಯಾಚಾರ, ಅಕ್ರಮ, ಕೊಲೆ, ಸುಲಿಗೆ, ದರೋಡೆಗಳಲ್ಲಿ ಭಾಗಿಯಾಗಿದ್ದಾರೆ. ಇವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿಕೊಂಡ ಕ್ಷೇತ್ರದ ಜನ, ಇವರು ಅಕ್ರಮಗಳನ್ನು ಎಸಗಿ ಜೈಲು ಪಾಲಾದರೆ ಏನು ಮಾಡಬೇಕು? ಕ್ಷೇತ್ರದ ಸಮಸ್ಯೆಗಳು, ಅಭಿವೃದ್ಧಿಯ ಕತೆ ಏನು? ಅಥವಾ ಇದ್ದೂ ಇಲ್ಲದಂತಿರುವ ಜನಪ್ರತಿನಿಧಿಗಳನ್ನು ಕಂಡು, ಅವರು ಅಲ್ಲಿರುವುದೇ ವಾಸಿ ಎಂದುಕೊಂಡಿದ್ದಾರೆಯೇ?

ಇದನ್ನು ಓದಿದ್ದೀರಾ?: ಪತ್ರಕರ್ತರ ಪ್ರಶ್ನೆಗೆ ಉದ್ಧಟ ಉತ್ತರ ನೀಡಿದ ಅಮಿತ್ ಶಾ, ವಿಜಯವರ್ಗೀಯಾ: ವಿಡಿಯೋ ವೈರಲ್

ಯಾರಾದರೂ ಕ್ರೀಡೆಯಲ್ಲಿ ಗೆದ್ದು ಬಂದರೆ, ನಾಡಿಗೆ ಹೆಸರು ತರುವಂತಹ ಕೆಲಸ ಮಾಡಿದರೆ, ಸಮಾಜಕ್ಕೆ ಕೊಡುಗೆ ನೀಡಿದರೆ, ಉನ್ನತ ಮೌಲ್ಯಗಳ ಉದಾತ್ತತೆ ಮೆರೆದರೆ ಅವರಿಗೆ ಅದ್ದೂರಿ ಸ್ವಾಗತ, ಸನ್ಮಾನ ಸಿಗುವುದು ಸಾಮಾನ್ಯವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ, ನಾವು ಆಯ್ಕೆ ಮಾಡಿ ಕಳಿಸಿದ ಶಾಸಕರು, ಸಚಿವರು ಜೈಲಿಗೆ ಹೋಗಿ ಬರುವುದು; ಬಂದವರಿಗೆ ಸಂಭ್ರಮದ ಸ್ವಾಗತ ಸನ್ಮಾನ ಮಾಡುತ್ತಿರುವುದು ಸಾಮಾನ್ಯವಾಗಿದೆ. ತಪ್ಪು ಮಾಡುವುದು, ಮಾಡಿದ್ದನ್ನು ಸಮರ್ಥಿಸಿಕೊಳ್ಳುವುದು, ಮಾಡಿದ್ದಕ್ಕೆ ಸಂಭ್ರಮಿಸುವುದು ರಾಜಕೀಯ ನೈತಿಕತೆಯನ್ನು ಅಪವ್ಯಾಖ್ಯಾನಗೊಳಿಸುತ್ತಿದೆ. ರಾಜಕೀಯ ವ್ಯವಸ್ಥೆ ಸ್ವಚ್ಛಗೊಳ್ಳಬೇಕು ಎನ್ನುವುದು ಬರಹಕ್ಕೆ-ಭಾಷಣಕ್ಕಷ್ಟೇ ಸೀಮಿತವಾಗುತ್ತಿದೆ.

ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡ, ಕೆ.ಎಚ್. ರಂಗನಾಥ್, ಅಬ್ದುಲ್ ನಜೀರ್ ಸಾಬ್, ವೈ.ಕೆ. ರಾಮಯ್ಯ, ಎಚ್. ಏಕಾಂತಯ್ಯ, ಎಸ್.ಕೆ. ಕಾಂತ, ಎಚ್.ಜಿ. ಗೋವಿಂದೇಗೌಡರಂತಹ ಧೀಮಂತ ನಾಯಕರನ್ನು ಕಂಡ ಕರ್ನಾಟಕ, ಹೀಗೇಕಾಯಿತು? ಬದುಕಿನ ಭಾಗವಾದ ಪ್ರಜಾಪ್ರಭುತ್ವ, ಸಂವಿಧಾನ, ರಾಜಕಾರಣವನ್ನು ಅರ್ಥ ಮಾಡಿಕೊಳ್ಳದಿರುವುದರಿಂದ ಹೀಗಾಯಿತೇ?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....