ಈ ದಿನ ಸಂಪಾದಕೀಯ | ಕೋವಿಡ್‌ ದುರಂತದಲ್ಲೂ ʼಹೆಣದ ಮೇಲೆ ಹಣʼ ಎತ್ತಿದವರ ಅಮಾನವೀಯತೆ

Date:

ಕೋವಿಡ್‌ ಸಂದರ್ಭದಲ್ಲಿ ನಡೆದಿರಬಹುದಾದ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ರಾಜ್ಯದ, ದೇಶದ ಜನತೆಗೆ ತಿಳಿಯದ್ದೇನಲ್ಲ. ಇದೀಗ ರಾಜ್ಯ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದ ಎಲ್ಲಾ ಪ್ರಕರಣಗಳ ಕುರಿತು ನಿಷ್ಠುರವಾದ ತನಿಖೆ ಮತ್ತು ಕ್ರಮಗಳಿಗೆ ಮುಂದಾಗಬೇಕಿದೆ.

ಇಂದು ʼದಿ ಹಿಂದೂʼ ಇಂಗ್ಲಿಷ್‌ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಮತ್ತು ಈದಿನ.ಕಾಮ್‌ಗೂ ಲಭ್ಯವಾಗಿರುವ ಕೋವಿಡ್‌ ಹಗರಣದ ತನಿಖಾ ವರದಿ ಆತಂಕಕ್ಕಿಂತಲೂ ಹೆಚ್ಚು ನೋವು ಹಾಗೂ ಆಕ್ರೋಶವನ್ನು ಹುಟ್ಟಿಸುತ್ತದೆ. ಇಡೀ ಮನುಕುಲವೇ ಮಾನವೀಯತೆಯಿಂದ ಸ್ಪಂದಿಸಿದ ಘಳಿಗೆಯಲ್ಲೂ ಕರುನಾಡ ಸರ್ಕಾರವನ್ನು ನಡೆಸುತ್ತಿದ್ದ ಜನನಾಯಕರು ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂಬುದು ದುಃಖದಾಯಕ ಸಂಗತಿ.

ಕೋವಿಡ್‌ ಬಂದ ಸಂದರ್ಭದಲ್ಲಿ ಕತ್ತಲಲ್ಲಿ ಕಳೆದುಹೋದ ಭಾವವಿತ್ತು. ಅದರಲ್ಲೂ ಎರಡನೆಯ ಅಲೆಯ ಹೊತ್ತಿನಲ್ಲಿ ಸಂಭವಿಸಿದ ಸರಣಿ ಸಾವುಗಳು ‘ಭೂಲೋಕದಲ್ಲಿ ಮನುಕುಲ ಎಷ್ಟರಮಟ್ಟಿಗೆ ಉಳಿಯುತ್ತದೋ?’ ಎಂಬ ಪ್ರಶ್ನೆಯನ್ನು ಹುಟ್ಟಿಸಿತ್ತು.

ಸಾಮಾನ್ಯವಾಗಿ ಒಂದು ಸಮಾಜವು ಭಿಕ್ಷುಕರನ್ನೂ ಸಾಕುತ್ತದೆ. ಭಿಕ್ಷಾಟನೆಯೇ ಇಲ್ಲದ ಸಮಾಜ ಬೇಕು ಎಂಬ ಆದರ್ಶವೇ ನಮ್ಮನ್ನು ಮನುಷ್ಯರನ್ನಾಗಿಸುತ್ತದೆ. ಆದರೆ, ಭಿಕ್ಷಾಟನೆ ನಡೆಯುತ್ತಿದ್ದರೆ ಆಗಲೂ ಸಮಾಜ ಅವರನ್ನು ಪೊರೆಯುತ್ತದೆ. ಆದರೆ, ಲಾಕ್‌ಡೌನ್‌ ಕಾರಣಕ್ಕೆ ಬೀದಿಯಲ್ಲಿದ್ದ ಬಡಜನರ ಸ್ಥಿತಿಯಂತೂ ಕರುಣಾಜನಕವಾಗಿತ್ತು. 5 ರೂ.ಗೆ ತಿಂಡಿ, 10 ರೂ.ಗೆ ಊಟ ಕೊಡುತ್ತಿದ್ದ ಇಂದಿರಾ ಕ್ಯಾಂಟೀನನ್ನೂ ಕೋವಿಡ್‌ ಹರಡುತ್ತದೆಂಬ ನೆಪ ಹೇಳಿ ಮುಚ್ಚಿಬಿಟ್ಟಿತ್ತು ಯಡಿಯೂರಪ್ಪನವರ ಸರ್ಕಾರ. ಬೀದಿ ವ್ಯಾಪಾರ ಮಾಡುವವರು ಅಂದಂದಿನ ಬದುಕ ನಡೆಸಲು ರಸ್ತೆಗಿಳಿದರೆ ಪೊಲೀಸ್‌ ಲಾಠಿಗಳು ಝಳಪಿಸುತ್ತಿದ್ದವು. ಈ ಜನರ ಬದುಕಿಗೆ ವ್ಯವಸ್ಥೆ ಮಾಡಿ ಎಂದು ಹೇಳಬೇಕಾದ ಮಾಧ್ಯಮಗಳು, ಈ ದಾಳಿಯನ್ನು ‘ಬಿಸಿ ಬಿಸಿ ಕಜ್ಜಾಯ’ ಎಂದು ಸಂಭ್ರಮಿಸುತ್ತಿದ್ದವು. ಇದೇ ಹೊತ್ತಿನಲ್ಲಿ ದೇಶದ ಇಬ್ಬರು ಅತಿ ದೊಡ್ಡ ಶ್ರೀಮಂತರು, ಜಗತ್‌ ಕುಬೇರರಾದರು. ಸತ್ತವರ ಲೆಕ್ಕವನ್ನೇ ಇಡದೇ ತಪ್ಪು ಲೆಕ್ಕ ಕೊಟ್ಟ ಸರ್ಕಾರಗಳು, ಲಕ್ಷ ಲಕ್ಷ ಕೋಟಿ ಪ್ಯಾಕೇಜ್‌ ಎಂಬ ಹಸೀ ಸುಳ್ಳು ಹೇಳಿ, ಪುಡಿಗಾಸನ್ನೂ ನೀಡದ ವಿಶ್ವಗುರುಗಳು ಭಾರತದಲ್ಲಿ ಅಂಧಾ ದರ್ಬಾರ್‌ ನಡೆಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಂತಹವರನ್ನು ಹೊರತುಪಡಿಸಿದರೆ, ಮನುಷ್ಯರೆಲ್ಲರೂ ನೆರೆಮನೆಯ ದುಃಖಕ್ಕೂ ಅತ್ತರು; ಹಸಿವಿಗೂ ಸ್ಪಂದಿಸಿದರು. ಜಾತಿ, ಧರ್ಮದ ಭೇದವಿಲ್ಲದೇ ಮುಸಲ್ಮಾನ ಬಂಧುಗಳು ಎಲ್ಲರ ಶವಸಂಸ್ಕಾರ ಮಾಡಿದರು. ಅದೆಷ್ಟು ಜನರಿಗೆ ‘ಆಹಾರದ ಪೊಟ್ಟಣಗಳ’ ಸರಬರಾಜನ್ನು ಧರ್ಮಾತ್ಮರು ಮಾಡಿದರೋ ಲೆಕ್ಕವಿಲ್ಲ. ವಿದೇಶದಲ್ಲಿದ್ದ ಜನ ಭಾರತಕ್ಕೆ ಆಕ್ಸಿಜನ್‌ ಕಾನ್ಸಂಟ್ರೇಟರುಗಳನ್ನು ದೊಡ್ಡ ಪ್ರಮಾಣದಲ್ಲಿ ಕಳಿಸಿದರು. ಸ್ವಯಂಪ್ರೇರಿತವಾಗಿ ಕನ್ಸಲ್ಟೇಷನ್‌, ಕೌನ್ಸೆಲಿಂಗ್‌ ಮಾಡಲು ಮುಂದೆ ಬಂದವರೂ ದೊಡ್ಡ ಸಂಖ್ಯೆಯಲ್ಲೇ ಇದ್ದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಕ್ಕಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್;‌ ಭವಿಷ್ಯದ‌ ಯುವ ಭಾರತಕ್ಕೂ ಮಾರಕ

ಹೀಗಿದ್ದಾಗ, ಕರ್ನಾಟಕದ ಮುಖ್ಯಮಂತ್ರಿ ಮತ್ತು ಆರೋಗ್ಯ ಮಂತ್ರಿ ಭ್ರಷ್ಟಾಚಾರದಲ್ಲಿ ತೊಡಗಿದ್ದರೆನ್ನುವ ಆರೋಪಗಳನ್ನು ವಿರೋಧ ಪಕ್ಷಗಳು ಮಾಡಿದ್ದವು. ಅದೇ ವಿರೋಧ ಪಕ್ಷ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರದ ತನಿಖೆ ನಡೆಸುವ ಜವಾಬ್ದಾರಿ ಹೊತ್ತಿತ್ತು. ತಡ ಮಾಡಿ, ಅಳೆದೂ ಸುರಿದೂ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಮೈಕೆಲ್‌ ಡಿ ಕುನ್ಹಾ ಅವರ ನೇತೃತ್ವದಲ್ಲಿ ತನಿಖೆಯೂ ಆರಂಭವಾಗಿತ್ತು. ಇದೀಗ ಅವರ ವರದಿಯ ಕೆಲ ಭಾಗಗಳು ಹೊರಬಿದ್ದಿವೆ. 330 ರೂ.ಗೆ ಸ್ಥಳೀಯರೇ ಸರಬರಾಜು ಮಾಡಲು ಸಿದ್ಧವಿದ್ದ ಪಿಪಿಇ ಕಿಟ್‌ಗೆ 2000 ರೂ.ಗೂ ಹೆಚ್ಚು ಹಣ ನೀಡಿ ಚೀನಾದಿಂದ ತರಿಸಿಕೊಳ್ಳಲಾಯಿತು ಎಂದು ಹೇಳಲಾಗುತ್ತಿದೆ.

ಅದು ಕಷ್ಟದ ಕಾಲವಾಗಿತ್ತು; ತುರ್ತಿನ ಸಂದರ್ಭವಾಗಿತ್ತು. ಹೇಗಾದರೂ ಸರಿ, ಎಲ್ಲಿಂದಲಾದರೂ ಸರಿ ಅಗತ್ಯವಿದ್ದ ಉಪಕರಣಗಳು ಬೇಕು, ಎಷ್ಟು ದುಡ್ಡು ಕೊಟ್ಟಾದರೂ ತೆಗೆದುಕೊಳ್ಳೋಣ ಎಂದು ಹೀಗೆ ಮಾಡಿರಬಹುದೇ ಎಂಬ ಸಂಶಯ ಮೊದಲು ಬಂದು ಹೋಗುತ್ತದೆ. ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಉಪಕರಣಗಳನ್ನು ತರಲು ಅಧಿಕಾರಸ್ಥರು ಏನೇನೋ ಸರ್ಕಸ್‌ ಮಾಡಿರಬಹುದು– ಹಾಗಾಗಿ ಇದನ್ನು ಅಷ್ಟೊಂದು ಸಂಶಯದಿಂದ ನೋಡಬೇಕೇ ಎಂಬ ಚಿಂತನೆ ನಡೆಯುತ್ತಿದ್ದ ಸಂದರ್ಭದಲ್ಲೇ ಆಂಗ್ಲ ಸುದ್ದಿತಾಣ ‘ದಿ ನ್ಯೂಸ್‌ ಮಿನಿಟ್‌’ ಹೊರತಂದ ಇನ್ನೊಂದು ಸಂಗತಿ ಅಸಲಿಯತ್ತನ್ನು ಹೊರಹಾಕಿದೆ.

ಡಿಎಚ್‌ಬಿ ಗ್ಲೋಬಲ್‌ ಮತ್ತು ಬಿಗ್‌ ಫಾರ್ಮಾಸುಟಿಕಲ್ಸ್‌ ಎಂಬೆರಡು ಕಂಪೆನಿಗಳಿಗೆ ‘ವಿಶೇಷ ಆಫರ್’ ನೀಡಿದ ಕುರಿತು ವರದಿಯಾಗಿತ್ತು. ಅದರಲ್ಲಿ ಬಿಗ್‌ ಫಾರ್ಮಾ ಎಂಬ ಕಂಪೆನಿಯು 2019ರಲ್ಲಿ ಕೋವಿಡ್‌ ಸಾಂಕ್ರಾಮಿಕ ತಲೆದೋರುವ ಕೇವಲ ಒಂದು ತಿಂಗಳ ಮುಂಚೆಯಷ್ಟೇ ಶುರುವಾಗಿತ್ತು ಎಂಬುದು ಸಂಶಯಗಳನ್ನು ಹುಟ್ಟುಹಾಕಿದೆ. ಅಷ್ಟು ದೊಡ್ಡ ವ್ಯವಹಾರ ನಡೆಸಿದ ಆ ಕಂಪೆನಿಯು ಈಗ ಪತ್ತೆಯೇ ಇಲ್ಲವಂತೆ. ಸದರಿ ಕಂಪೆನಿಯ ನೋಂದಾಯಿತ ವಿಳಾಸವು ಬೆಂಗಳೂರಿನ ಜೀವನ್‌ ಬಿಮಾ ನಗರದ್ದಾಗಿದ್ದು, ಈಗ ಅಲ್ಲಿ ಕಂಪೆನಿಯಿಲ್ಲವೆಂದು ಕಟ್ಟಡದ ಮಾಲೀಕರು ಹೇಳುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಆಗಷ್ಟೇ ಹುಟ್ಟಿದ್ದ ಕಂಪನಿಗಳಿಂದ ದುಬಾರಿ ಬೆಲೆಗೆ ಪಿಪಿಇ ಕಿಟ್ ಖರೀದಿ; ಚೀನಾ ಲಾಭಕ್ಕಾಗಿ ಬಿಎಸ್‌ವೈ, ಶ್ರೀರಾಮುಲು ಭ್ರಷ್ಟಾಚಾರ!

ಇವೆಲ್ಲವೂ ಕೋವಿಡ್‌ ಸಂದರ್ಭದಲ್ಲಿ ನಡೆದಿರಬಹುದಾದ ಅಕ್ರಮಗಳ ಕುರಿತು ದುರ್ಗಂಧ ಬೀರುತ್ತಿವೆ. ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ರಾಜ್ಯದ, ದೇಶದ ಜನತೆಗೆ ತಿಳಿಯದ್ದೇನಲ್ಲ. ಆದರೆ, ಕಾಂಗ್ರೆಸ್ಸು ಈ ಪ್ರಕರಣವನ್ನು ನಿಷ್ಠುರವಾಗಿ ಹೊರತರುವ ಜವಾಬ್ದಾರಿಯನ್ನಂತೂ ಹೊಂದಿದೆ. ಬಿ.ಎಸ್.ಯಡಿಯೂರಪ್ಪನವರ ಪೋಕ್ಸೋ ಕೇಸಿನ ಕುರಿತು ಈಗ ಮಾತನಾಡುತ್ತಿರುವ ಕಾಂಗ್ರೆಸ್‌ ನಾಯಕರು, ಆ ಪ್ರಕರಣ ದಾಖಲಾದಾಗ ಇಷ್ಟೇ ಕಟ್ಟುನಿಟ್ಟಾಗಿ ವರ್ತಿಸಿದ್ದರೇ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. 80 ವಯಸ್ಸು ದಾಟಿರುವ ಯಡಿಯೂರಪ್ಪನವರ ಮೇಲೆ ಹೀನಕೃತ್ಯದ ಆರೋಪವಿತ್ತು. ಆದರೆ, ಅವರಿಗೆ ಘನನ್ಯಾಯಾಲಯವೂ ಸುಲಭದಲ್ಲಿ ಜಾಮೀನು ಕೊಟ್ಟುಬಿಟ್ಟಿತ್ತು. ಹಾಗಾಗಿ ಅವರು ರಾಜಾರೋಷವಾಗಿ ಚುನಾವಣಾ ಪ್ರಚಾರದಲ್ಲೂ ನಿರತರಾಗಿಬಿಟ್ಟಿದ್ದಾರೆ.

ಇದೀಗ ರಾಜ್ಯ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದ ಎಲ್ಲಾ ಪ್ರಕರಣಗಳ ಕುರಿತು ನಿಷ್ಠುರವಾದ ತನಿಖೆ ಮತ್ತು ಕ್ರಮಗಳಿಗೆ ಮುಂದಾಗಬೇಕಿದೆ. ಆ ಮೂಲಕ ರಾಜ್ಯದಲ್ಲಿ ಹಂತಹಂತವಾಗಿಯಾದರೂ ಭ್ರಷ್ಟಾಚಾರ ಕಡಿಮೆಯಾಗುವ ಕಡೆಗೆ ಹೆಜ್ಜೆಗಳನ್ನಿಡಬೇಕು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....