ಈ ದಿನ ಸಂಪಾದಕೀಯ | ಇರಾನ್ ಅಣ್ವಸ್ತ್ರ ಹೊಂದುವುದು ಅಪಾಯಕಾರಿಯೇ?

Date:

ದುಷ್ಟ ಅಮೆರಿಕ ತನಗೆ ಬೇಕಾದಾಗ ಅಣ್ವಸ್ತ್ರ ಹೊಂದಬಹುದು, ಪುಟ್ಟ ದೇಶಗಳ ಮೇಲೆ ಪ್ರಯೋಗಿಸಬಹುದು. ಹಾಗೆಯೇ ಎನ್‌ಪಿಟಿಯ ರೀತಿರಿವಾಜುಗಳನ್ನು ತಿರಸ್ಕರಿಸಿ ಇಸ್ರೇಲ್ ಅಣ್ವಸ್ತ್ರ ಹೊಂದಿರುವುದನ್ನು ಪ್ರಶ್ನಿಸದೆ ಇರಬಹುದು. ಆದರೆ ಇರಾನ್ ಅಣ್ವಸ್ತ್ರ ಹೊಂದುವುದು ಅಪಾಯಕಾರಿ ಮತ್ತು ಅಪರಾಧವಾಗುತ್ತದೆ... ಏಕೆ? 

ದೈತ್ಯ ಅಮೆರಿಕ ದುಷ್ಟ ಇಸ್ರೇಲ್‌ನೊಂದಿಗೆ ಸೇರಿ ಇರಾನ್ ಮೇಲೆ ಬಾಂಬ್‌ಗಳ ಸುರಿಮಳೆ ಸುರಿಸುತ್ತಿದೆ. ಇರಾನ್ ಕೂಡ ಪ್ರತಿದಾಳಿ ಮಾಡುತ್ತಿದೆ. ಕೊಲ್ಲಿ ರಾಷ್ಟ್ರಗಳು ಕೊಲ್ಲುವ ಕದನಭೂಮಿಯಾಗಿ ಮಾರ್ಪಟ್ಟಿವೆ. ಯುದ್ಧ ವಾರ ದಾಟಿ ಮುನ್ನುಗ್ಗುತ್ತಿದೆ. ಎರಡೂ ಕಡೆ ಸಾವು ಸಂಭವಿಸಿದೆ. ನಷ್ಟ ಲೆಕ್ಕಕ್ಕೆ ಸಿಗದಾಗಿದೆ.

ಕದನಖೂಳ ಅಮೆರಿಕ-ಇಸ್ರೇಲ್ ದೇಶಗಳು ಇರಾನ್ ಮೇಲಿನ ದಾಳಿಗೆ ಕೊಡುತ್ತಿರುವ ಕಾರಣ- ಇರಾನ್ ಅಣ್ವಸ್ತ್ರ ಹೊಂದದಂತೆ ತಡೆಯುವುದು. ಕುತೂಹಲಕರ ಸಂಗತಿ ಎಂದರೆ, ದಾಳಿ ಮಾಡುತ್ತಿರುವ ಅಮೆರಿಕ ಮತ್ತು ಇಸ್ರೇಲ್- ಎರಡೂ ದೇಶಗಳು ಅಣ್ವಸ್ತ್ರ ಹೊಂದಿವೆ. ಇರಾನ್ ಅಣ್ವಸ್ತ್ರ ಹೊಂದಲು ಹಾತೊರೆದರೆ ಅದು ಇವರಿಗೆ ಅಪರಾಧದಂತೆ ಕಾಣುತ್ತಿದೆ.

ಇದಕ್ಕಿಂತಲೂ ಆಶ್ಚರ್ಯಕರ ಸಂಗತಿ ಎಂದರೆ, ಒಂದು ಕಾಲದಲ್ಲಿ ಇರಾನ್, ಅಮೆರಿಕದ ಮಿತ್ರರಾಷ್ಟ್ರಗಳೊಂದಾಗಿತ್ತು. ಆಗ ಆ ದೇಶಕ್ಕೆ ಅಣ್ವಸ್ತ್ರ ಹೊಂದಬೇಕೆಂಬ ಆಸೆ ಹುಟ್ಟಿಸಿದ್ದು ಮತ್ತು ಆಸರೆಯಾಗಿ ನಿಂತದ್ದು ಇದೇ ಅಮೆರಿಕವಾಗಿತ್ತು.  

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ವಿವಿ ಕ್ಯಾಂಪಸ್‌ಗಳಿಗೆ ಕೇಸರಿ ಗರ ಬಡಿದಿದೆ; ದೊಡ್ಡರೋಗದ ಅಪಾಯವಿದು!

1939ರಲ್ಲಿ ದ್ವಿತೀಯ ವಿಶ್ವಯುದ್ಧ ಆರಂಭವಾದಾಗ, ಹಿಟ್ಲರ್ ನೇತೃತ್ವದ ಜರ್ಮನಿ ಅಣ್ವಸ್ತ್ರ ತಯಾರಿಸಬಹುದು ಎಂಬ ಭೀತಿಗೆ ಬಿದ್ದ ಅಮೆರಿಕ, 1942ರಲ್ಲಿ ‘ಮ್ಯಾನ್‌ಹಟನ್ ಪ್ರಾಜೆಕ್ಟ್’ ಎಂಬ ರಹಸ್ಯ ಯೋಜನೆಯನ್ನು ಆರಂಭಿಸಿತು. ಆ ಯೋಜನೆಯ ನೇತೃತ್ವವನ್ನು ರಾಬರ್ಟ್ ಓಪನ್ ಹೈಮರ್ ವಹಿಸಿದ್ದರು. ಈ ಯೋಜನೆಯಡಿಯಲ್ಲಿ ತಯಾರಾದ ಮೊದಲ ಅಣುಬಾಂಬ್ ಪರೀಕ್ಷೆಯನ್ನು 1945 ಜುಲೈ 16ರಂದು ‘ಟ್ರಿನಿಟಿ ಟೆಸ್ಟ್’ ಎಂದು ನಡೆಸಲಾಯಿತು.

ಅಷ್ಟಕ್ಕೇ ಸುಮ್ಮನಾಗದ ಅಮೆರಿಕ, 1945 ಆಗಸ್ಟ್ 6 ಮತ್ತು 9ರಂದು ಜಪಾನ್‌ನ ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಹಾಕಿತು. ಜಪಾನ್ ಯುದ್ಧದಿಂದ ತತ್ತರಿಸಿಹೋಗಿತ್ತು, ಶರಣಾಗಲು ಸಿದ್ಧವಾಗಿತ್ತು. ಆದರೂ ಅಮೆರಿಕ, ಅಣ್ವಸ್ತ್ರ ಪರೀಕ್ಷಿಸಲು ಹಿರೋಷಿಮಾ-ನಾಗಸಾಕಿಗಳ ಮೇಲೆ ಹಾಕಿತ್ತು. ದ್ವಿತೀಯ ವಿಶ್ವಯುದ್ಧ ಅಂತ್ಯವಾಯಿತು. ಆದರೆ ಹಿರೋಷಿಮಾ-ನಾಗಸಾಕಿಯ ಜನರ ಬದುಕು ಛಿದ್ರವಾಯಿತು. ಆ ದಾಳಿಯ ದುಷ್ಪರಿಣಾಮಗಳು ಇಂದಿಗೂ ಅವರಿಗೆ ದುಃಸ್ವಪ್ನದಂತೆ ಕಾಣುತ್ತಿದೆ.

ಮನುಕುಲದ ವಿನಾಶಕ್ಕೆ ನಾಂದಿಯಾಡುವ ಅಣ್ವಸ್ತ್ರಗಳನ್ನು ಹೊಂದುವುದು ಅಪರಾಧವೇ ಸರಿ. ಆದರೆ, ಒಂದು ದೇಶ ಹೊಂದುವುದು, ಮತ್ತೊಂದು ದೇಶ ಹೊಂದದಿರುವುದು ನ್ಯಾಯವೇ? ವಿಪರ್ಯಾಸಕರ ಸಂಗತಿ ಎಂದರೆ, ನ್ಯಾಯ ನಿರ್ಣಯಿಸುವವರು ಕೂಡ ಅವರೇ- ಅಣ್ವಸ್ತ್ರ ಹೊಂದಿದವರೇ!

ಅಮೆರಿಕಾದ ಬಳಿಕ, 1949ರಲ್ಲಿ ರಷ್ಯಾ ಕೂಡ ಅಣುಬಾಂಬ್ ಪರೀಕ್ಷೆ ನಡೆಸಿತು. ನಂತರ ಇಂಗ್ಲೆಂಡ್, ಫ್ರಾನ್ಸ್ ಮತ್ತು ಚೀನಾ ರಾಷ್ಟ್ರಗಳು ಅಣ್ವಸ್ತ್ರ ಹೊಂದಿದವು. ಇವುಗಳನ್ನು 1968ರ ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣರಹಿತ ಒಪ್ಪಂದದ (Nuclear Non-Proliferation Treaty -NPT) ಅಡಿಯಲ್ಲಿ ಅಧಿಕೃತ ಅಣ್ವಸ್ತ್ರ ರಾಷ್ಟ್ರಗಳೆಂದು ಘೋಷಿಸಲಾಯಿತು.

ಆನಂತರ ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣರಹಿತ ಒಪ್ಪಂದ(NPT)ದ ಹೊರಗೆ, ಭಾರತ, ಪಾಕಿಸ್ತಾನ ಮತ್ತು ಉತ್ತರ ಕೊರಿಯಾ ದೇಶಗಳು ಅಣ್ವಸ್ತ್ರ ಅಭಿವೃದ್ಧಿ ಪಡಿಸಿದ ದೇಶಗಳೆಂದು ಘೋಷಿಸಿಕೊಂಡವು. ಅಣ್ವಸ್ತ್ರ ಅಭಿವೃದ್ಧಿಪಡಿಸಲು ಆಗದ, ಅಣ್ವಸ್ತ್ರ ಹೊಂದಿದ ದೇಶಗಳೊಂದಿಗೆ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ 191 ದೇಶಗಳು ಎನ್‌ಪಿಟಿಯ ಸದಸ್ಯರಾಷ್ಟ್ರಗಳಾದವು. ಆದರೆ ಅಂತಾರಾಷ್ಟ್ರೀಯ ಮಟ್ಟದ ಎನ್‌ಪಿಟಿಯ ಯಾವುದೇ ರೀತಿ-ನೀತಿಗೂ ಒಳಪಡದ ಇಸ್ರೇಲ್, ಅಣ್ವಸ್ತ್ರ ಹೊಂದಿದೆ. ಜಗತ್ತಿನ ಮುಂದೆ ಬಹಿರಂಗವಾಗಿ ಘೋಷಿಸದಿದ್ದರೂ ಅಣ್ವಸ್ತ್ರ ಹೊಂದಿದ ದೇಶ ಎಂದು ನಂಬಲಾಗಿದೆ.

ಈ ಅಂಡಾಗುಂಡಿ ಇಸ್ರೇಲ್ ಬೆನ್ನಿಗೆ ಈಗ ಅಮೆರಿಕ ನಿಂತಿದೆ. ಇರಾನ್ ಮೇಲೆ ಬಾಂಬ್‌ಗಳ ಸುರಿಮಳೆ ಸುರಿಸುತ್ತಿದೆ.

ಅಸಲಿಗೆ, ಇದೇ ಅಮೆರಿಕ 1953ರಲ್ಲಿ ಇರಾನಿನ ಜನತಾಂತ್ರಿಕ ನಾಯಕ ಮೊಸಡೆಕ್‌ನನ್ನು ಅಧಿಕಾರದಿಂದ ಕೆಳಗಿಳಿಸಿ, ದೇಶದಿಂದ ಹೊರಹಾಕಿತು. ಹಿಂದಿನ ರಾಜ ರಜ್ಹಾ ಪೆಹ್ಲವಿಯವರ ಮಗ, ಮೊಹಮ್ಮದ್ ರಜ್ಹಾ ಪೆಹ್ಲವಿಯನ್ನು ಪ್ರತಿಷ್ಠಾಪಿಸಿತು. 1953ರಿಂದ 1979ರವರೆಗೆ ಆಡಳಿತ ನಡೆಸಿದ ಈತ ಅಮೆರಿಕದ ಕೈಗೊಂಬೆಯಾಗಿದ್ದ. ಇರಾನ್ ಜನರನ್ನು ನಿರ್ಲಕ್ಷಿಸಿ, ಅಮೆರಿಕ ಹಿತಾಸಕ್ತಿಗೆ ತಕ್ಕಂತೆ ಕುಣಿಯುತ್ತಿದ್ದ. 1957ರಲ್ಲಿ ಅಮೆರಿಕವೇ ಮುಂದೆ ನಿಂತು, ‘ಆಟಂ ಫಾರ್ ಪೀಸ್’ ಕಾರ್ಯಕ್ರಮದಡಿ ಅಮೆರಿಕ-ಇರಾನ್ ನಡುವೆ ಸಿವಿಲ್ ನ್ಯೂಕ್ಲಿಯರ್ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿತು. ಇದರಡಿ 1967ರಲ್ಲಿ ಇರಾನ್‌ಗೆ ಮೊದಲ ಪರಮಾಣು ರಿಯಾಕ್ಟರ್ ಅನ್ನು ಒದಗಿಸಿತು. ಯುರೇನಿಯಂ ಇಂಧನ ಪೂರೈಸಿತು. ತಾಂತ್ರಿಕ ನೆರವು ಮತ್ತು ತರಬೇತಿ ನೀಡಿತು.

ಅಮೆರಿಕಕ್ಕೆ ಅಲ್ಲೂ ಒಂದು ಕಾರಣವಿತ್ತು, ಅದು ಪಶ್ಚಿಮ ಏಷ್ಯಾದಲ್ಲಿ ಸೋವಿಯತ್ ರಷ್ಯಾದ ಪ್ರಭಾವ ಕುಗ್ಗಿಸುವ ತಂತ್ರವಾಗಿತ್ತು.

1979ರಲ್ಲಿ ಇರಾನಿನಲ್ಲಿ ಜನಕ್ರಾಂತಿಯಾಗಿ, ಖೊಮೇನಿ ಅಧಿಕಾರಕ್ಕೇರಿದ ನಂತರ, ಇಸ್ಲಾಮಿಕ್ ದೇಶವಾಯಿತು. ತನ್ನ ಅಭಿವೃದ್ಧಿಯತ್ತ ಗಮನ ಹರಿಸಿತು. ಪಶ್ಚಿಮದ ದೇಶಗಳಿಂದ ದೂರ ಸರಿಯಿತು. ಅದರಲ್ಲೂ ಅಮೆರಿಕದಿಂದ ಅಂತರ ಕಾಯ್ದುಕೊಂಡಿತು. ಡಾಲರ್ ವ್ಯವಹಾರ ತಿರಸ್ಕರಿಸಿ, ಆಯಾಯ ರಾಷ್ಟ್ರಗಳ ಕರೆನ್ಸಿಯಲ್ಲಿ ವ್ಯವಹರಿಸತೊಡಗಿತು. ಅಮೆರಿಕದ ಪ್ರತಿಷ್ಠೆಗೆ ಪೆಟ್ಟು ಬಿತ್ತು. ಪಕ್ಕದ ಇರಾಕಿನ ಸದ್ದಾಂ ಹುಸೇನ್‌ಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿ ಇರಾನ್ ಮೇಲೆ ದಾಳಿ ಮಾಡಲು ಸೂಚಿಸಿತು. ಎಂಟು ವರ್ಷಗಳ ಕಾಲ ನಡೆದ ಇರಾನ್-ಇರಾಕ್ ಯುದ್ಧದಲ್ಲಿ, ಅಮೆರಿಕ ಇರಾಕ್ ಪರವಾಗಿತ್ತು. ಇರಾನ್ ಅನ್ನು ಭಯೋತ್ಪಾದನೆ ಬೆಂಬಲಿಸುವ ದೇಶವೆಂದು ಕರೆದು ಆರ್ಥಿಕ ದಿಗ್ಬಂಧನ ಹೇರಿತು. 1989ರಲ್ಲಿ ಖೊಮೇನಿ ನಿಧನ ಹೊಂದಿ, ಸೋದರ ಸಂಬಂಧಿ ಖಮೇನಿ ಅಧಿಕಾರಕ್ಕೇರಿದಾಗ ದೇಶದ ಸ್ಥಿತಿ ತೀರಾ ಹದಗೆಟ್ಟಿತ್ತು. ಆದಾಯದ ಮೂಲವಾದ ತೈಲ ಸಂಪನ್ಮೂಲದ ರಕ್ಷಣೆ ಮುಖ್ಯವಾಗಿತ್ತು. ಹಾಗೆಯೇ ಅಮೆರಿಕದ ಚಿತಾವಣೆಯಿಂದಾಗಿ ಶತ್ರುಗಳ ಸಂಖ್ಯೆಯೂ ಹೆಚ್ಚಾಗಿತ್ತು.

ಇದನ್ನು ಓದಿದ್ದೀರಾ?: ಅಮೆರಿಕ ಕೈಯಿಟ್ಟ ಕಡೆಯೆಲ್ಲ ವಿನಾಶವೇ ಎಂಬುದು ಚಾರಿತ್ರಿಕ ಸತ್ಯ!

ಜೊತೆಗೆ ಪ್ಯಾಲೆಸ್ತೀನ್-ಇಸ್ರೇಲ್ ನಡುವಿನ ಯುದ್ಧದಲ್ಲಿ ಇರಾನ್, ಪ್ಯಾಲೆಸ್ತೀನ್ ಪರ ನಿಲುವು ತಳೆಯುವುದರ ಮೂಲಕ, ಇಸ್ರೇಲ್ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿತು. ಆ ಸಂದರ್ಭದಲ್ಲಿ, ತನ್ನ ಸುತ್ತಮುತ್ತಲ ದೇಶಗಳಾದ ಇಸ್ರೇಲ್, ಇರಾಕ್, ಕುವೈತ್, ಬಹರೇನ್, ಸೌದಿ, ಜೋರ್ಡಾನ್ ಹಾಗೂ ಯುಎಇ ಜೊತೆಗಿನ ವೈರತ್ವವನ್ನು ನಿಭಾಯಿಸಲು ಇರಾನಿಗೆ ಅಣ್ವಸ್ತ್ರ ಅಗತ್ಯವೆನಿಸಿತು. ಪರಮಾಣು ಯೋಜನೆಯನ್ನು ಮುಂದುವರಿಸಿತು. ಅಮೆರಿಕ ಅಧ್ಯಕ್ಷ ಒಬಾಮ ಅವಧಿಯಲ್ಲಿ ಪರಮಾಣು ಒಪ್ಪಂದಕ್ಕೆ ಇರಾನ್ ಸಹಿ ಹಾಕಿತು. 2014ರ ಹೊತ್ತಿಗೆ ಅಣ್ವಸ್ತ್ರ ಯೋಜನೆ ಕೊನೆಯ ಹಂತ ತಲಪಿತ್ತು.

ಅದೇ ಸಂದರ್ಭದಲ್ಲಿ ಇರಾನ್, ಚೀನಾದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡು ಆರ್ಥಿಕವಾಗಿ ಸದೃಢ ಸ್ಥಿತಿಯಲ್ಲಿತ್ತು. ಇದು ಇಸ್ರೇಲ್‌ಗೆ ಸಹಿಸಲಸಾಧ್ಯವಾದ ಸಂಕಟಕ್ಕೆ ಕಾರಣವಾಗಿ, ಅಮೆರಿಕ ಅಧ್ಯಕ್ಷ ಟ್ರಂಪ್ ಕಿವಿಯೂದಿತು. ಅದಕ್ಕೆ ಪೂರಕವಾಗಿ ಹಮಾಸ್, ಹಿಜ್ಬುಲ್ಲಾ ಮತ್ತು ಹೂತಿ ಭಯೋತ್ಪಾದಕ ಸಂಘಟನೆಗಳು ಇರಾನ್ ಬೆಂಬಲಿಸಿದ್ದು, ಅಮೆರಿಕ ಮತ್ತು ಇಸ್ರೇಲ್‌ಗೆ ಜಾಗತಿಕ ಮಟ್ಟದಲ್ಲಿ ಸಮರ್ಥನೆಗೆ ಕಾರಣವೊದಗಿಸಿತು.

ಸ್ವಾರ್ಥ, ದುಷ್ಟ ಕಾರಣಗಳನ್ನು ಹಿಂಬದಿಗೆ ಸರಿಸಿ; ಅಣ್ವಸ್ತ್ರ ಮತ್ತು ಭಯೋತ್ಪಾದಕರಿಗೆ ಬೆಂಬಲದ ಕಾರಣವನ್ನು ಮುನ್ನಲೆಗೆ ತಂದು ಇರಾನ್ ಮೇಲೆ ದಾಳಿ ಮಾಡಲಾಯಿತು. ಸೋಜಿಗದ ಸಂಗತಿ ಎಂದರೆ, ಇರಾನ್ ಮೇಲೆ ದಾಳಿ ಮಾಡುತ್ತಿರುವ ಅಮೆರಿಕ-ಇಸ್ರೇಲ್, ಎರಡೂ ರಾಷ್ಟ್ರಗಳು ಅಣ್ವಸ್ತ್ರ ಹೊಂದಿವೆ. ಅಕಸ್ಮಾತ್ ಇರಾನ್ ಕೂಡ ಅಣ್ವಸ್ತ್ರ ಹೊಂದಿದ್ದರೆ, ಈ ಯುದ್ಧ ನಡೆಯುತ್ತಿತ್ತೇ ಎಂಬ ಪ್ರಶ್ನೆ ಎದುರಾಗುತ್ತದೆ.

ಇದನ್ನು ಓದಿದ್ದೀರಾ?: ಇರಾನ್ ಇತಿಹಾಸ, ಕಚ್ಚಾತೈಲ ಮತ್ತು ಅಮೆರಿಕದ ಆಟ!

ದುಷ್ಟ ಅಮೆರಿಕ ತನಗೆ ಬೇಕಾದಾಗ ಅಣ್ವಸ್ತ್ರ ಹೊಂದಬಹುದು, ಪುಟ್ಟ ದೇಶಗಳ ಮೇಲೆ ಪ್ರಯೋಗಿಸಬಹುದು. ಹಾಗೆಯೇ ಎನ್‌ಪಿಟಿಯ ರೀತಿರಿವಾಜುಗಳನ್ನು ತಿರಸ್ಕರಿಸಿ ಇಸ್ರೇಲ್ ಅಣ್ವಸ್ತ್ರ ಹೊಂದಿರುವುದನ್ನು ಪ್ರಶ್ನಿಸದೆ ಇರಬಹುದು. ಭಾರತದ ಶತ್ರುರಾಷ್ಟ್ರ, ಅಮೆರಿಕದ ಮಿತ್ರರಾಷ್ಟ್ರ ಪಾಕಿಸ್ತಾನ ಕೂಡ ಅಣ್ವಸ್ತ್ರ ಹೊಂದಿರುವುದಕ್ಕೆ ಚಕಾರವೆತ್ತದಿರಬಹುದು. ಆದರೆ ಇರಾನ್ ಅಣ್ವಸ್ತ್ರ ಹೊಂದುವುದು ಅಪಾಯಕಾರಿ ಮತ್ತು ಅಪರಾಧವಾಗುತ್ತದೆ ಏಕೆ? ಇದು ಅಮೆರಿಕದ ದ್ವಿಮುಖ ನೀತಿಯಲ್ಲವೇ? ಅದು ಅಹಂಕಾರ ಮತ್ತು ಅವಿವೇಕದಂತೆ ಕಾಣವುದಿಲ್ಲವೇ?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....