ಈ ದಿನ ಸಂಪಾದಕೀಯ | ಭಾಗವತರ ಭಾರತ ಮತ್ತು ಬಾಬಾ ಸಾಹೇಬರ ಸಂವಿಧಾನ

Date:

ಬಾಬಾ ಸಾಹೇಬರ ಸಂವಿಧಾನ ಬಹುತ್ವ ಭಾರತವನ್ನು ಬಯಸಿದರೆ; ಭಾಗವತರ ಭಾರತ ಮನು ಭಾರತವನ್ನು ಬಯಸುತ್ತದೆ. ಸಂವಿಧಾನ ಸ್ವಾತಂತ್ರ್ಯ, ಸಮಾನತೆ, ಸಹಬಾಳ್ವೆ ಮತ್ತು ಸೌಹಾರ್ದ ಭಾರತದ ಕನಸು ಕಂಡರೆ; ಭಾಗವತರು ಮತ್ತವರ ಬಿಜೆಪಿಗೆ ಸಂವಿಧಾನವೇ ಶತ್ರು.

ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್‌ರಿಗೂ 75, ಬಾಬಾ ಸಾಹೇಬರ ಭಾರತದ ಸಂವಿಧಾನಕ್ಕೂ 75. ಬದಲಾದ ಭಾರತಕ್ಕೆ ತಕ್ಕಂತೆ, ಪ್ರಜಾಪ್ರಭುತ್ವವನ್ನು ಪೊರೆಯುತ್ತಿರುವ ಪ್ರಜೆಗಳಿಗೆ ಪೂರಕವಾಗಿ ಸಂವಿಧಾನ ತಿದ್ದುಪಡಿಗಳನ್ನು ಕಾಣುತ್ತಿದೆ. ಆದರೆ ಭಾಗವತರು, ಅಂದು ಹೇಗಿದ್ದರೋ, ಇಂದು ಕೂಡ ಹಾಗೆಯೇ ಇದ್ದಾರೆ. ಅದೇ ಹಿಂದೂ ರಾಷ್ಟ್ರ, ಅದೇ ಜಾತಿ ಅಸಮಾನತೆ, ಅದೇ ಮನುಸ್ಮೃತಿ, ಅದೇ ಸನಾತನ ಧರ್ಮ.

ಭಾಗವತರು ಹಿರಿಯ ನಾಗರಿಕರು. ಸ್ವಾತಂತ್ರ್ಯಾನಂತರದ ದೇಶದ ದಿಕ್ಕೆಟ್ಟ ಸ್ಥಿತಿಯನ್ನು ಖುದ್ದಾಗಿ ಕಂಡವರು. ಬಡತನ, ಅನಕ್ಷರತೆ, ಹಸಿವಿನಿಂದ ಅರುಗಾಗಿ, ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವನ್ನು ನೋಡಿದವರು. ಹೀಗೆ ತಮ್ಮ ಜೀವಿತದುದ್ದಕ್ಕೂ ದೇಶದ ಬೆಳವಣಿಗೆಯ ಭಾಗವಾಗಿರುವ ಭಾಗವತರು, ರಾಷ್ಟ್ರೀಯ ಸ್ವಯಂ ಸಂಘಕ್ಕೆ ನೂರು ವರ್ಷಗಳು ತುಂಬಿದ ನೆಪದಲ್ಲಿ ಭಾರತದಾದ್ಯಂತ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಆರ್‌ಎಸ್‌ಎಸ್ ಅಜೆಂಡಾವನ್ನು ಮತ್ತೆ ಮತ್ತೆ ಬಿಚ್ಚಿಡುತ್ತಿದ್ದಾರೆ.  

ಇದನ್ನು ಓದಿದ್ದೀರಾ?: ಕೇರಳಕ್ಕೆ ಕಾಲಿಟ್ಟ ಕೋಮುದ್ವೇಷಿ ಗುಂಪುಹತ್ಯೆಯ ಪಿಡುಗು!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೊನ್ನೆ ಭಾನುವಾರ ಭಾಗವತರು ಕೋಲ್ಕತ್ತದಲ್ಲಿ ‘ಪ್ರಧಾನಿ ಮೋದಿಯವರ ಮುಂದಾಳತ್ವದಲ್ಲಿ ದೇಶವು ಮತ್ತೊಮ್ಮೆ ವಿಶ್ವಗುರು ಆಗುತ್ತದೆ’ ಎಂದಿದ್ದಾರೆ. ಭಾಗವತರ ಈ ಮಾತು ಇವತ್ತಿನ ಮಾಧ್ಯಮಗಳಿಗೆ ಆಪ್ಯಾಯಮಾನ. ಆದ್ಯತೆ ನೀಡಿ ಭಾರತದಾದ್ಯಂತ ಅರುಹಿದ್ದಾರೆ. ಆದರೆ ಆ ಮಾತು ದೇಶದ ಮಾನವಂತರ ಅನುಮಾನಕ್ಕೆ ಕಾರಣವಾಗಿದೆ. ಆಶ್ಚರ್ಯ ಹುಟ್ಟಿಸುತ್ತಿದೆ. ಈ ಮೊದಲು, ಯಾವಾಗ ದೇಶ ವಿಶ್ವಗುರು ಆಗಿತ್ತು ಎಂಬ ಪ್ರಶ್ನೆಯನ್ನೂ ಹುಟ್ಟುಹಾಕುತ್ತಿದೆ.  

ಅಷ್ಟೆ ಅಲ್ಲ, ಭಾಗವತರು ‘ಆರ್‌ಎಸ್‌ಎಸ್ ಯಾವುದೇ ರಾಜಕೀಯ ಅಜೆಂಡಾ ಹೊಂದಿಲ್ಲ’ ಎನ್ನುವುದನ್ನು ಆಗಾಗ ಹೇಳುತ್ತಲೇ ಇರುತ್ತಾರೆ, ಈಗಲೂ ಹೇಳಿದ್ದಾರೆ. ಆದರೆ, 2023ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಚಾರ್ ಸೌ ಪಾರ್ ಎಂದು ಬೀಗುತ್ತಿದ್ದಾಗ, 240 ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಳ್ಳುವಂತಾದಾಗ, ಇದೇ ಭಾಗವತರು ಬೆಂಕಿಯಾಗಿದ್ದರು. ಬಿಜೆಪಿ ನಾಯಕರ ವರ್ತನೆ ಹಾಗೂ ಪಕ್ಷದ ಕಾರ್ಯವಿಧಾನದ ಬಗ್ಗೆ ಹಿಗ್ಗಾಮುಗ್ಗಾ ಜಾಡಿಸಿದ್ದರು.

ಜಾಡಿಸುವ ಹಿಂದೆ ಬಿಜೆಪಿ ಎಂಬ ರಾಜಕೀಯ ಪಕ್ಷ ಹಾದಿ ತಪ್ಪದಿರಲಿ ಎಂಬ ಎಚ್ಚರಿಕೆ ಇದೆ. ಆರ್‌ಎಸ್‌ಎಸ್ ತಾನು ರಾಜಕೀಯದಿಂದ ಆಚೆಗಿರುವ ಸಂಘಟನೆ ಎಂದು ಹೇಳಿಕೊಳ್ಳುತ್ತದೆ. ಆದರೆ, ಬಿಜೆಪಿ ಆರ್‌ಎಸ್‌ಎಸ್‌ನ ರಾಜಕೀಯ ಅಂಗ ಎಂಬುದನ್ನು ಸಾಬೀತು ಮಾಡುತ್ತಲೇ ಇರುತ್ತದೆ. ಅಲ್ಲದೆ, ಬಿಜೆಪಿಗೆ ಸೈದ್ಧಾಂತಿಕ ತಳಹದಿಯನ್ನು ಹಾಕಿಕೊಟ್ಟಿದ್ದೇ ಸಂಘ. ಸಂಘಟನಾ ಶಕ್ತಿಯನ್ನು ಒದಗಿಸುವುದು ಹಾಗೂ ಚುನಾವಣೆಗಳಲ್ಲಿ ತಂತ್ರಗಳನ್ನು ರೂಪಿಸುವುದು ಆರ್‌ಎಸ್‌ಎಸ್ ಎನ್ನುವುದನ್ನು ಬಹಿರಂಗಗೊಳಿಸುತ್ತಲೇ ಸಾಗಿದೆ.

ಏಪ್ರಿಲ್ 23, 2024ರಂದು ರಾಜಸ್ಥಾನದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಪ್ರಧಾನಿ ಮೋದಿಯವರು, ‘ನಿಮ್ಮ ಮಂಗಳಸೂತ್ರ ಕಿತ್ತು ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಹೊಂದಿರುವವರಿಗೆ ಹಂಚಲಾಗುತ್ತದೆ, ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರು ಮೊದಲ ಹಕ್ಕು ಹೊಂದಿದ್ದಾರೆ’ ಎಂದರು. ಪ್ರಧಾನಿ ಮೋದಿಯವರ ಈ ಹೇಳಿಕೆ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಗ್ರಹಿಸಿದ ಆರ್‌ಎಸ್‌ಎಸ್‌ನ ಭಾಗವತರು, ‘ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕೆ ಇರುವ ಮೀಸಲಾತಿಯನ್ನು ತೆಗೆದುಹಾಕುತ್ತೇವೆ ಎಂಬುದೆಲ್ಲ ಸುಳ್ಳು. ಆರ್‌ಎಸ್‌ಎಸ್ ಯಾವುದೇ ಷರತ್ತುಗಳಿಲ್ಲದೆ ಮೀಸಲಾತಿಯನ್ನು ಬೆಂಬಲಿಸುತ್ತದೆ’ ಎಂದು ತೇಪೆ ಹಾಕಿದ್ದರು.

ಹೀಗಿರುವಾಗ ಆರ್‌ಎಸ್‌ಎಸ್ ರಾಜಕೀಯ ಅಜೆಂಡಾ ಹೊಂದಿಲ್ಲ ಎಂದರೆ, ನಂಬಲಾಗುತ್ತದೆಯೇ?

ಮುಂದುವರೆದು ಭಾಗವತರು, ಸಂಘವು ಹಿಂದೂ ಸಮಾಜದ ರಕ್ಷಣೆ ಹಾಗೂ ಏಳ್ಗೆಗಾಗಿ ಶ್ರಮಿಸುತ್ತದೆ ಎಂದಿದ್ದಾರೆ. ಆದರೆ, ದೇಶದ ಭಾಗವೇ ಆಗಿರುವ ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿದರೂ, ಚರ್ಚ್‌ಗಳಿಗೆ ಬೆಂಕಿ ಹಚ್ಚಿದರೂ, ಹಿಂಸಾಚಾರ ತಾರಕಕ್ಕೇರಿದರೂ ಹಿರಿಯರಾದ ಭಾಗವತರು, ‘ಮಣಿಪುರದಲ್ಲಿ ಹಿಂಸಾಚಾರ ನಡೆದಿಲ್ಲ. ಅದು ಸಂಭವಿಸುವಂತೆ ಮಾಡಲಾಗುತ್ತಿದೆ’ ಎಂಬ ಉಡಾಫೆಯ ಮಾತುಗಳನ್ನಾಡಿದ್ದರು.

ಮಣಿಪುರದ ಮೈತೇಯಿ ಮಹಿಳೆಯರು ಹಿಂದೂಗಳಲ್ಲವೇ, ಅವರ ರಕ್ಷಣೆ ಮತ್ತು ಏಳ್ಗೆಗಾಗಿ ಶ್ರಮಿಸುವುದು ಸಂಘದ ಕೆಲಸವಲ್ಲವೇ?

ಅದೇ ಭಾಗವತರು, ಜೂ.11, 2024ರಂದು, ‘ಕಳೆದ ಒಂದು ವರ್ಷದಿಂದ ಮಣಿಪುರ ಹಿಂಸಾಚಾರದಲ್ಲಿ ಬೆಂದಿದೆ, ಶಾಂತಿಗಾಗಿ ಕಾಯುತ್ತಿದೆ’ ಎಂದು ಕೇಂದ್ರ ಸರ್ಕಾರದ ಕಿವಿ ಹಿಂಡಿದ್ದರು. ಹೀಗೆ ಹೇಳಿದ ಸಂದರ್ಭದಲ್ಲಿ ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಕುರ್ಚಿಯಲ್ಲಿ ಕೂತಿದ್ದರು. ಹಾಗಾದರೆ ಭಾಗವತರಿಗೆ ಬೇಕಾಗಿದ್ದೇನು?

ಭಾಗವತರು ಮೊನ್ನೆ ಕೋಲ್ಕತ್ತದಲ್ಲಿ, ‘ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಹಿಂದೂ ರಾಷ್ಟ್ರಕ್ಕೆ ಸಾಂವಿಧಾನಿಕ ಅನುಮೋದನೆಯ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ. ಈ ಹೇಳಿಕೆಯು ಸಂವಿಧಾನದ ಮೂಲ ಆಶಯಗಳನ್ನು ಪ್ರಶ್ನಿಸುತ್ತದೆ ಹಾಗೂ ನೇರವಾಗಿ ಸಂವಿಧಾನದ ಉಲ್ಲಂಘನೆಯಾಗುತ್ತದೆ. 

ಇದನ್ನು ಓದಿದ್ದೀರಾ?: ದೇಶದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಬಿಜೆಪಿಯಿಂದ ದಾಳಿ: ರಾಹುಲ್ ಗಾಂಧಿ

ಬಾಬಾ ಸಾಹೇಬ್‌ ಅಂಬೇಡ್ಕರ್‌ ರಚಿಸಿದ ಸಂವಿಧಾನದ ಮುನ್ನುಡಿ ಭಾರತವನ್ನು ಸಾರ್ವಭೌಮ ಸಮಾಜವಾದಿ ಧರ್ಮನಿರಪೇಕ್ಷ ಗಣರಾಜ್ಯ ಎಂದು ಘೋಷಿಸುತ್ತದೆ. ಧರ್ಮನಿರಪೇಕ್ಷ(ಸೆಕ್ಯುಲರ್) ಎಂದರೆ ದೇಶಕ್ಕೆ ಯಾವುದೇ ಧರ್ಮವಿಲ್ಲ ಹಾಗೂ ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸಬೇಕೆನ್ನುತ್ತದೆ. ಆದರೆ ಭಾಗವತರು ಹಿಂದೂ ರಾಷ್ಟ್ರಕ್ಕೆ ಸಾಂವಿಧಾನಿಕ ಅನುಮೋದನೆಯ ಅಗತ್ಯವಿಲ್ಲ ಎನ್ನುತ್ತಾರೆ. ಇದು ಅಲ್ಪಸಂಖ್ಯಾತರನ್ನು ಹೊರಗಿಡುವಂತೆ ಮಾಡುತ್ತದೆ ಮತ್ತು ದ್ವೇಷಾಸೂಯೆಗಳನ್ನು ಪ್ರೋತ್ಸಾಹಿಸುತ್ತದೆ.

ಬಾಬಾ ಸಾಹೇಬರ ಸಂವಿಧಾನ ಬಹುತ್ವ ಭಾರತವನ್ನು ಬಯಸಿದರೆ; ಭಾಗವತರ ಭಾರತ ಮನು ಭಾರತವನ್ನು ಬಯಸುತ್ತದೆ. ಸಂವಿಧಾನ ಸ್ವಾತಂತ್ರ್ಯ, ಸಮಾನತೆ, ಸಹಬಾಳ್ವೆ ಮತ್ತು ಸೌಹಾರ್ದ ಭಾರತದ ಕನಸು ಕಂಡರೆ; ಭಾಗವತರು ಮತ್ತವರ ಬಿಜೆಪಿಗೆ ಸಂವಿಧಾನವೇ ಶತ್ರು. ಅದನ್ನು ಬದಲಾಯಿಸಲಿಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದಿರುವುದು ಎಂದು ಎದೆಯುಬ್ಬಿಸಿ ಹೇಳುತ್ತಾರೆ. ಆದರೆ, ಪ್ರಧಾನಿ ಮೋದಿಯವರು, ಸಂವಿಧಾನಕ್ಕೆ ಹಣೆಹಚ್ಚಿ ನಮಸ್ಕರಿಸುತ್ತಾರೆ. ಒಳಗೆ ವಿಷ, ಹೊರಗೆ ವೇಷ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....