ಈ ದಿನ ಸಂಪಾದಕೀಯ | ಭಾರತವನ್ನು ಜಗತ್ತಿನ ಎದುರು ನಡುಬಗ್ಗಿ ನಿಲ್ಲುವಂತೆ ಮಾಡಿದ ಮಹಾತ್ಮ!

Date:

ಅವಕಾಶವಾದಿ ಅಧಿಕಾರಕ್ಕೆ ಬಂದರೆ ಆ ದೇಶದ ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ಸಂಬಂಧ, ಆಮದು-ರಫ್ತು ವಹಿವಾಟು ವಲಯದಲ್ಲಿ ಏನೆಲ್ಲ ಏರುಪೇರುಗಳಾಗುತ್ತವೆ; ಅದು ದೇಶದ ಜನರನ್ನು ಎಂತಹ ಅನಾಹುತಗಳಿಗೆ ದೂಡುತ್ತದೆ ಎಂಬುದಕ್ಕೆ ಭಾರತದ ಇಂದಿನ ಸ್ಥಿತಿ ಅತ್ಯುತ್ತಮ ಉದಾಹರಣೆಯಾಗಿದೆ.

ಗಲ್ಫ್‌ ಕೋ-ಆಪರೇಷನ್ ಕೌನ್ಸಿಲ್(GCC)- ಇದು ಪ್ರಾದೇಶಿಕ, ರಾಜಕೀಯ ಮತ್ತು ಆರ್ಥಿಕ ಒಕ್ಕೂಟವಾಗಿದ್ದು, ಮಿಲಿಟರಿ ಮೈತ್ರಿಯನ್ನೂ ಒಳಗೊಂಡಿದೆ. ಈ ಒಕ್ಕೂಟದಲ್ಲಿ ಬಹ್ರೈನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ಸೇರಿವೆ. ಈ ಎಲ್ಲ ಪರ್ಷಿಯನ್ ರಾಷ್ಟ್ರಗಳು ಮೊದಲಿನಿಂದಲೂ ಬಲಿಷ್ಠ ರಾಷ್ಟ್ರಗಳಾದ ರಷ್ಯಾ ಮತ್ತು ಅಮೆರಿಕದ ಸ್ನೇಹ ಸಂಪರ್ಕದಲ್ಲಿವೆ. ಇತ್ತೀಚಿನ ವರ್ಷಗಳಲ್ಲಿ ಅಮೆರಿಕ ಪರವಾಗಿದ್ದು, ಸೇನಾ ನೆಲೆಗಳನ್ನು ಹೊಂದಲು ಅವಕಾಶ ಮಾಡಿಕೊಟ್ಟಿವೆ.

ಇಸ್ರೇಲ್-ಅಮೆರಿಕ ಒಂದಾಗಿ ಇರಾನ್ ಮೇಲೆ ಯುದ್ಧ ಸಾರಿ, ಬಾಂಬ್‌ಗಳ ಸುರಿಮಳೆ ಸುರಿಸುತ್ತಿರುವ ಸದ್ಯದ ಸಂದರ್ಭದಲ್ಲಿ, ಅದಕ್ಕೆ ಪ್ರತಿಯಾಗಿ ಇರಾನ್ ಕೂಡ, ಇಸ್ರೇಲ್ ಮತ್ತು ಕೊಲ್ಲಿ ರಾಷ್ಟ್ರಗಳ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿದೆ. ಆ ಸಾವು-ನೋವು, ಕಷ್ಟ-ನಷ್ಟ ಅಂಕೆಗೆ ಸಿಗದಾಗಿದೆ.  

ಇದನ್ನು ಓದಿದ್ದೀರಾ?: ಅರಣ್ಯ ಬೊಕ್ಕಸಗಳ ಬರಿದುಗೊಳಿಸಿ, ಇತರೆಡೆ ಕಾಡು ಬೆಳೆಸುವುದು ವ್ಯರ್ಥ ಕಸರತ್ತು!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದರಿಂದ ಜರ್ಜರಿತಗೊಂಡಿರುವ ಕೊಲ್ಲಿ ರಾಷ್ಟ್ರಗಳ ರಾಯಭಾರಿಗಳು ಕಳೆದವಾರ ಮಾಸ್ಕೋಗೆ ಭೇಟಿ ನೀಡಿದ್ದರು. ಅಂದರೆ ಬಿಕ್ಕಟ್ಟು ಬಿಗಡಾಯಿಸಿದೆ. ಪರಿಸ್ಥಿತಿ ಕೈಮೀರಿಹೋಗಿದೆ. ಪರಿಹಾರಕ್ಕಾಗಿ ರಷ್ಯಾದ ಮೊರೆ ಹೋಗಿದ್ದಾರೆ. ರಷ್ಯಾದ ವಿದೇಶಾಂಗ ಸಚಿವ ಮತ್ತು ರಾಜತಾಂತ್ರಿಕ ಸರ್ಗಿ ಲಾವ್ರೋವ್‌ರನ್ನು ತುರ್ತಾಗಿ ಭೇಟಿಯಾಗಿ, ಯುದ್ಧ ನಿಲ್ಲಿಸುವಂತೆ, ಅದಕ್ಕೆ ವ್ಲಾದಿಮಿರ್ ಪುಟಿನ್ ಮಧ್ಯಸ್ಥಿಕೆ ವಹಿಸುವಂತೆ ವಿನಂತಿಸಿಕೊಂಡಿದ್ದಾರೆ.

ಜಿಸಿಸಿ ರಾಷ್ಟ್ರಗಳ ರಾಯಭಾರಿಗಳೊಂದಿಗೆ ಮಾತನಾಡಿದ ಸರ್ಗಿ ಲಾವ್ರೋವ್, ಅಮೆರಿಕಾ ಮತ್ತು ಇಸ್ರೇಲ್ ನಡೆಸಿದ ಇರಾನ್ ವಿರುದ್ಧದ ದಾಳಿಯನ್ನು ನೀವು ಖಂಡಿಸಿದ್ದೀರಾ? ಮಿನಾಬ್ ನಗರದಲ್ಲಿ ಅಮೆರಿಕಾ–ಇಸ್ರೇಲ್ ದಾಳಿಯಿಂದ 170 ಶಾಲಾ ಮಕ್ಕಳು ಸಾವನ್ನಪ್ಪಿದ ಘಟನೆ ಬಗ್ಗೆ ನೀವು ಏನು ಹೇಳುತ್ತೀರ ಎಂದು ಅವರನ್ನೇ ಪ್ರಶ್ನಿಸಿದ್ದಾರೆ. ಮುಂದುವರೆದು, ಕೇವಲ ಇರಾನ್‌ಅನ್ನು ಮಾತ್ರ ಖಂಡಿಸುವಂತಹ ಯಾವುದೇ ಅಮೆರಿಕದ ನಿರ್ಣಯಗಳನ್ನು ಬೆಂಬಲಿಸಬಾರದು. ಅಮೆರಿಕಾ ಮತ್ತು ಇಸ್ರೇಲ್ ನಡೆಸುತ್ತಿರುವ ಕೃತ್ಯಗಳು ಇರಾನ್ ಮತ್ತು ಅದರ ಅರಬ್ ರಾಷ್ಟ್ರಗಳ ನಡುವೆ ಬಿರುಕುಂಟುಮಾಡಲು ಉದ್ದೇಶಿಸಲಾಗಿದೆ ಎಂಬ ಸತ್ಯವನ್ನು ಸಂತ್ರಸ್ತರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಇದೇ ಸಭೆಯಲ್ಲಿ ಭಾರತ ನಿಲುವು ಕುರಿತು ಮಾತನಾಡಿದ ಸರ್ಗಿ ಲಾವ್ರೋವ್, ಭಾರತದ ಬದಲಾದ ವಿದೇಶಾಂಗ ನೀತಿಯನ್ನು, ಅಂತಾರಾಷ್ಟ್ರೀಯ ಸ್ನೇಹ-ಸಂಬಂಧವನ್ನು, ಪ್ರಧಾನಿ ಮೋದಿಯವರ ಅವಕಾಶವಾದಿ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಬ್ರಿಕ್ಸ್(BRICKS) ಒಕ್ಕೂಟದಲ್ಲಿ ಭಾರತದೊಂದಿಗೆ ಇರಾನ್, ಯುಎಇ ಇದ್ದರೂ; ಪರಸ್ಪರ ಅಭಿವೃದ್ಧಿಗಾಗಿ ಆ ದೇಶಗಳ ನಾಯಕರೊಂದಿಗೆ ನಿಂತು ವೇದಿಕೆ ಹಂಚಿಕೊಂಡಿದ್ದರೂ; ಇಸ್ರೇಲ್‌ಗೆ ಹೋಗಿ ಯುದ್ಧಕ್ಕೆ ಮುನ್ನುಡಿ ಬರೆದದ್ದು ಹೇಗೆ ಅಂತಾರಾಷ್ಟ್ರೀಯ ಸಂಬಂಧಗಳನ್ನು ಕೆಡಿಸುತ್ತದೆ ಎಂಬುದನ್ನು ಕಟುವಾಗಿ ಟೀಕಿಸಿದ್ದಾರೆ.

ಭಾರತದ ಬದಲಾದ ವಿದೇಶಾಂಗ ನೀತಿಯ ಫಲವಾಗಿ, ರಷ್ಯಾ ಕಚ್ಚಾ ತೈಲ ಬೆಲೆ ಏರಿಸಿದೆ. ಈ ಮುಂಚೆ, ಬ್ರೆಂಟ್ ದರಕ್ಕಿಂತ ಬ್ಯಾರಲ್‌ಗೆ 10–13 ಡಾಲರ್ ಕಡಿಮೆ ದರದಲ್ಲಿ ತೈಲ ಮಾರುತ್ತಿತ್ತು. ಈಗ ಮಾರ್ಚ್ ಮತ್ತು ಏಪ್ರಿಲ್ ವಿತರಣೆಗಳಿಗೆ ಬ್ರೆಂಟ್ ದರಕ್ಕಿಂತ 4–5 ಡಾಲರ್ ಹೆಚ್ಚುವರಿ ದರ ಕೇಳಿದೆ. ಅಂದರೆ, ಒಂದು ಬ್ಯಾರೆಲ್ ಕಚ್ಚಾ ತೈಲಕ್ಕೆ 120 ಡಾಲರ್ ಕೊಟ್ಟು ಖರೀದಿಸಬೇಕಾಗಿದೆ. ಸ್ನೇಹದ ಆಧಾರದ ಮೇಲೆ ನೀಡುತ್ತಿದ್ದ ರಿಯಾಯಿತಿಗಳನ್ನು ಈಗ ವ್ಯಾಪಾರದ ದೃಷ್ಟಿಯಿಂದ ಪರಿಗಣಿಸಲಾಗುತ್ತಿದೆ ಎಂದೂ ಹೇಳಿದ್ದಾರೆ.  

ಭಾರತ ತನ್ನ ಕಚ್ಚಾ ತೈಲದ ಅಗತ್ಯದ ಶೇ. 85–88ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ದಿನಕ್ಕೆ ಸುಮಾರು 50 ಲಕ್ಷ ಬ್ಯಾರಲ್ ಕಚ್ಚಾ ತೈಲ ಭಾರತಕ್ಕೆ ಹರಿದು ಬರುತ್ತದೆ. ಈ ತೈಲದ ಬಹುಭಾಗ ಪರ್ಷಿಯನ್ ರಾಷ್ಟ್ರಗಳಿಂದ, ವಿಶೇಷವಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಬರುತ್ತದೆ. ಈಗ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ. ಭಾರತಕ್ಕೆ ತುರ್ತು ಪರಿಸ್ಥಿತಿ ಎದುರಾಗಿದೆ.

ಏತನ್ಮಧ್ಯೆ, ಅಮೆರಿಕದ ಅಧ್ಯಕ್ಷ ಟ್ರಂಪ್ ಕೊಂಚ ಧಾರಾಳತನ ತೋರಿ, ರಷ್ಯಾದ ತೈಲ ಖರೀದಿಗೆ 30 ದಿನಗಳ ತಾತ್ಕಾಲಿಕ ವಿನಾಯಿತಿ ನೀಡಿದ್ದರೂ, ರಷ್ಯಾ ವಿಧಿಸುತ್ತಿರುವ ಈ ಹೆಚ್ಚಿನ ಬೆಲೆಯು ಭಾರತದ ಸಂಸ್ಕರಣಾ ಘಟಕಗಳಿಗೆ ಹೊಸ ಸವಾಲೊಡ್ಡಿದೆ. ಇದು ಭಾರತದಲ್ಲಿ ಇಂಧನ-ಅನಿಲ ಕೊರತೆಗೆ ಕಾರಣವಾಗಿದೆ. ಈಗಾಗಲೇ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲೆಂಡರ್ ಸರಬರಾಜು ಸ್ಥಗಿತಗೊಂಡಿದೆ. ಹೋಟೆಲ್-ರೆಸ್ಟೋರೆಂಟ್‌ಗಳು ಬಂದ್‌ಗೆ ಕರೆ ಕೊಟ್ಟಿವೆ.

ಇದನ್ನು ಓದಿದ್ದೀರಾ?: ಯುದ್ಧ | ಬೆಂಗಳೂರಿನಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ; ಬಂದ್‌ ಆಗಲಿವೆ ಹೋಟೆಲ್‌ಗಳು!

ಇದಲ್ಲದೆ, ಕೊಲ್ಲಿ ರಾಷ್ಟ್ರಗಳಲ್ಲಿ ಭಾರತದ ಒಂದು ಕೋಟಿ ಪ್ರಜೆಗಳು ಉದ್ಯೋಗ ಮಾಡುತ್ತಾ ಜೀವನ ನಿರ್ವಹಿಸುತ್ತಿದ್ದಾರೆ. ಇರಾನಿನಲ್ಲಿಯೂ ಭಾರತದ ಅಸಂಖ್ಯ ಪ್ರಜೆಗಳು ವಿದ್ಯಾಭಾಸ ಹಾಗೂ ಉದ್ಯೋಗಕ್ಕಾಗಿ ನೆಲೆಸಿದ್ದಾರೆ. ಯುದ್ಧದಿಂದಾಗಿ ಹಣಕಾಸಿನ ಹರಿವು ನಿಂತಿದೆ. ಇವರ ರಕ್ಷಣೆ ಮತ್ತು ಸುರಕ್ಷತೆ ದೇಶದಲ್ಲಿ ಕಳವಳಕಾರಿ ವಾತಾವರಣವನ್ನು ಸೃಷ್ಟಿಸಿದೆ.

ಕಳೆದ ಸೆಪ್ಟೆಂಬರ್‍‌ನಲ್ಲಿ ರಷ್ಯಾದ ಪುಟಿನ್, ಭಾರತದ ಮೋದಿ- ಇಬ್ಬರೂ ಚೀನಾಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ನನ್ನ ಹತ್ಯೆಗೆ ಸಂಚು ನಡೆದಿತ್ತು, ಪುಟಿನ್ ನನ್ನ ಜೀವ ಉಳಿಸಿದರು ಎಂದು ಹೇಳಿ ಪುಟಿನ್‌ರನ್ನು ಅಪ್ಪಿ ಮುದ್ದಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಗಿಟ್ಟಿಸಿದ್ದ ಮೋದಿಯವರು, ಕೇವಲ ಆರು ತಿಂಗಳ ಅವಧಿಯಲ್ಲಿ ಚೀನಾ-ರಷ್ಯಾಕ್ಕೆ ಬೆನ್ನು ತಿರುಗಿಸಿ, ಅಮೆರಿಕ ಅಧ್ಯಕ್ಷ ಟ್ರಂಪ್ ಕೈಗೊಂಬೆಯಾದರು. ಇಸ್ರೇಲಿನ ರಕ್ತದಾಹಿ ನೆತನ್ಯಾಹು ಅವರನ್ನು ಅಪ್ಪಿಕೊಂಡರು. ಬ್ರಿಕ್ಸ್‌ನ ಭಾಗವಾಗಿದ್ದ ಇರಾನ್‌ನಿಂದ ದೂರ ಸರಿದರು.

ಒಂದು ದೇಶದ ವಿದೇಶಾಂಗ ನೀತಿ ಎನ್ನುವುದು ಏಕಕಾಲಕ್ಕೆ ಆ ದೇಶ ಹಾಗೂ ಅದು ವಿಶ್ವದ ವಿವಿಧ ದೇಶಗಳೊಂದಿಗೆ ಹೊಂದಿರುವ ಸಂಬಂಧವನ್ನು ವ್ಯಾಖ್ಯಾನಿಸುತ್ತದೆ. ಅದು ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಸಂಬಂಧಗಳ ಕುರಿತಾದ ನೀಲನಕ್ಷೆಯೂ ಆಗಿರುತ್ತದೆ. ದೇಶದ ಹಿತಾಸಕ್ತಿಗಳ ಸಂರಕ್ಷಣೆಯಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಹೀಗಾಗಿ ವಿದೇಶಾಂಗ ನೀತಿಗೆ ಅಪಾರ ಮಹತ್ವವಿದೆ.

ಆದರೆ, ಒಬ್ಬ ಅವಕಾಶವಾದಿ ಅಧಿಕಾರಕ್ಕೆ ಬಂದರೆ ಆ ದೇಶದ ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ಸಂಬಂಧ, ಆಮದು-ರಫ್ತು ವಹಿವಾಟು ವಲಯದಲ್ಲಿ ಏನೆಲ್ಲ ಏರುಪೇರುಗಳಾಗುತ್ತವೆ; ಅದು ದೇಶದ ಜನರನ್ನು ಎಂತಹ ಅನಾಹುತಗಳಿಗೆ ದೂಡುತ್ತದೆ ಎಂಬುದಕ್ಕೆ ಭಾರತದ ಇಂದಿನ ಸ್ಥಿತಿ ಅತ್ಯುತ್ತಮ ಉದಾಹರಣೆಯಾಗಿದೆ. ಹಾಗೆಯೇ ಸ್ವಾಭಿಮಾನಿ ಸದೃಢ ಭಾರತವನ್ನು ಜಗತ್ತಿನ ಎದುರು ನಡುಬಗ್ಗಿ ನಿಲ್ಲುವಂತೆ ಮಾಡಿದ್ದು ಕೂಡ- ಭಾರತ ವಿಶ್ವಗುರು ಎನ್ನುವವರ ಮಹತ್ಸಾಧನೆಯೇ ಆಗಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....