ಈ ದಿನ ಸಂಪಾದಕೀಯ | ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಯಾವಾಗ?

Date:

ಸಮಯೋಚಿತ ರೀತಿಯಲ್ಲಿ ಕ್ರಮಗಳನ್ನು ಜಾರಿಗೊಳಿಸಿದರೆ, ಪ್ಲಾಸ್ಟಿಕ್ ತ್ಯಾಜ್ಯದ ಹಾವಳಿಯನ್ನು ನಿಯಂತ್ರಿಸಲು ಅವಕಾಶವಿದೆ. ಸರ್ಕಾರ ಮತ್ತು ಆಡಳಿತ ವರ್ಗ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ತಮ್ಮ ಹೊಣೆಯನ್ನು ನಿರ್ವಹಿಸಬೇಕಿದೆ.

ಭಾರತದಲ್ಲಿ ಪ್ಲಾಸ್ಟಿಕ್ ಸಮಸ್ಯೆ ಮುಂದುವರೆದೇ ಇದೆ. ಸರ್ಕಾರಗಳು ನಾನಾ ರೀತಿಯ ಕ್ರಮಗಳು, ನೀತಿ-ನಿಯಮಗಳನ್ನು ರೂಪಿಸುತ್ತಿವೆ. ಅಧಿಕಾರಿಗಳು ಪ್ಲಾಸ್ಟಿಕ್ ನಿರ್ಮೂಲನೆಗೆ ಭಾರೀ ಕ್ರಮಗಳನ್ನು ಜರುಗಿಸುತ್ತಿರುವುದಾಗಿ ಅಬ್ಬರಿಸುತ್ತಿದ್ದಾರೆ. ಪ್ಲಾಸ್ಟಿಕ್ ನಿರ್ಮೂಲನೆಯ ವಿಚಾರದಲ್ಲಿ ಚಿಲ್ಲರೆ ಅಂಗಡಿಗಳ ಮೇಲಷ್ಟೇ ದಾಳಿ ಮಾಡಿ, ಒಂದಷ್ಟು ಪ್ಲಾಸ್ಟಿಕ್ ವಶಕ್ಕೆ ಪಡೆದು, ದಂಡ ವಿಧಿಸಿ, ಅದೇ ತಮ್ಮ ಸಾಧನೆ ಎಂಬಂತೆ ಸರ್ಕಾರ ಮತ್ತು ಅಧಿಕಾರಗಳು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ.

ದೇಶದಲ್ಲಿ ಪ್ಲಾಸ್ಟಿಕ್ ಮತ್ತು ಅದರ ತ್ಯಾಜ್ಯ ಸಮಸ್ಯೆಯನ್ನು ನಿರ್ವಹಿಸಲು ಎಕ್ಸ್‌ಟೆಂಡೆಡ್ ಪ್ರೊಡ್ಯೂಸರ್ ರೆಸ್ಪಾನ್ಸಿಬಿಲಿಟಿ (ವಿಸ್ತೃತ ಉತ್ಪಾದಕರ ಜವಾಬ್ದಾರಿ – ಇಪಿಆರ್) ಮಾರ್ಗಸೂಚಿಗಳು ನೆರವಾಗಬಹುದು. ಪ್ಲಾಸ್ಟಿಕ್ ತಡೆಗೆ ಸರ್ಕಾರಗಳು ನಾನಾ ಕ್ರಮಗಳನ್ನು ತೆಗೆದುಕೊಂಡರೂ, ಪ್ರಯತ್ನಗಳು ಸಾಕಾಗುತ್ತಿದೆ. ಪರಿಣಾಮ ಫಲ ಕೊಡುತ್ತಿಲ್ಲ ಎಂದು ದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ (ಸಿಎಸ್ಇ)ನ ಹೊಸ ಅಧ್ಯಯನ ಹೇಳುತ್ತಿದೆ.

2022ರ ಫೆಬ್ರವರಿ 16ರಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಇಪಿಆರ್ ಮಾರ್ಗಸೂಚಿ ಪ್ರಕಾರ, ಪ್ಲಾಸ್ಟಿಕ್ ತ್ಯಾಜ್ಯಗಳಿಗೆ ಪ್ಲಾಸ್ಟಿಕ್ ವಸ್ತುಗಳ ಉತ್ಪಾದಕರು ಮತ್ತು ಇತರ ಪಾಲುದಾರರು (ಕೊಳ್ಳುವವರು ಮತ್ತು ಮಾರುವವರು) ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಇದರರ್ಥ, ಪ್ಲಾಸ್ಟಿಕ್ ತ್ಯಾಜ್ಯಗಳ ಸಂಗ್ರಹಣೆ, ಸಾಗಣೆ ಹಾಗೂ ಮರುಬಳಕೆಗೆ ಒಳಪಡಿಸುವುದು ಉತ್ಪಾದಕರು, ಮಾರಾಟಗಾರರ ಹೊಣೆಯಾಗುತ್ತದೆ. ಅಲ್ಲದೆ, ಅವರೆಲ್ಲರೂ ಇಪಿಆರ್ ಪೋರ್ಟಲ್‌ನಲ್ಲಿ ತಮ್ಮ ಸಂಸ್ಥೆಯನ್ನು ನೋಂದಣಿ ಮಾಡಿಸಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹೊಸ ಅಧ್ಯಯನದ ಪ್ರಕಾರ, ಇಪಿಆರ್ ಪೋರ್ಟಲ್ ಒಟ್ಟು 41,577 ಸಂಸ್ಥೆಗಳು ನೋಂದಣಿಯಾಗಿವೆ. ಅವುಗಳಲ್ಲಿ 83% ಆಮದುದಾರರು, 11% ಉತ್ಪಾದಕರು ಹಾಗೂ 6% ಬ್ರ್ಯಾಂಡ್ ಮಾಲೀಕರು. ಇವುಗಳಲ್ಲಿ, ಹೆಚ್ಚಿನ ಪ್ಲಾಸ್ಟಿಕ್ ನಿರ್ವಹಣ ಮತ್ತು ಮರುಬಳಕೆಗೆ ಉತ್ಪಾದಕರು ಹೆಚ್ಚಿನ ಜವಾಬ್ದಾರರಾಗಿರುತ್ತಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ವಕ್ಫ್‌ ವಿವಾದವೆಂಬ ಕೃತಕ ಸೃಷ್ಟಿ – ಮತ್ತೊಮ್ಮೆ ಮಾಧ್ಯಮಗಳ ಬಣ್ಣ ಬಯಲು

ಗಂಭೀರ ವಿಚಾರವೆಂದರೆ, 2022ರ ಏಪ್ರಿಲ್ ನಂತರ ಇಪಿಆರ್ ಪೋರ್ಟಲ್‌ನಲ್ಲಿ ದಾಖಲಾಗಿರುವಂತೆ, ಭಾರತೀಯ ಮಾರುಕಟ್ಟೆಗೆ ವಾರ್ಷಿಕ 23.9 ದಶಲಕ್ಷ ಟನ್ ಪ್ಯಾಕೇಜಿಂಗ್ ಪ್ಲಾಸ್ಟಿಕ್ ಉತ್ಪನ್ನಗಳು ಬರುತ್ತಿವೆ. ಆ ಪ್ಲಾಸ್ಟಿಕ್ ಬಳಸುವವರಲ್ಲಿ ನಾನಾ ರೀತಿಯ ಉತ್ಪನ್ನಗಳನ್ನು ತಯಾರಿಸುವ ಉತ್ಪಾದಕರದ್ದೇ ಸಿಂಹಪಾಲಿದೆ. ಒಟ್ಟು ಪ್ಲಾಸ್ಟಿಕ್ ಬಳಕೆಯಲ್ಲಿ ಉತ್ಪಾದಕರು 65% ಪಾಲು ಹೊಂದಿದ್ದಾರೆ. ಬ್ರ್ಯಾಂಡ್ ಮಾಲೀಕರು 26% ಪಾಲು ಹೊಂದಿದ್ದರೆ, ಮಾರಾಟಗಾರರು ಕೇವಲ 9% ಪಾಲು ಹೊಂದಿದ್ದಾರೆ. ಆದರೆ, ಸರ್ಕಾರ ಮತ್ತು ಅಧಿಕಾರಗಳ ದಾಳಿ, ಕ್ರಮಗಳು ಈ 9% ಪ್ಲಾಸ್ಟಿಕ್ ಬಳಸುವ ಚಿಲ್ಲರೆ ಮಾರಾಟಗಾರರ ಮೇಲೆ ಮಾತ್ರವೇ ಕೇಂದ್ರೀಕರಿಸಿವೆ.

ಭಾರತದ ಮಾರುಕಟ್ಟೆಗೆ ಬರುತ್ತಿರುವ ಪ್ಯಾಕೇಜಿಂಗ್ ಪ್ಲಾಸ್ಟಿಕ್‌ನ ಪೈಕಿ ಬರೋಬ್ಬರಿ 66% ಪ್ಲಾಸ್ಟಿಕ್ ಮರುಬಳಕೆಗೆ ದೊರೆಯುತ್ತಿಲ್ಲ. ಅದು ಇತರ ತ್ಯಾಜ್ಯಗಳೊಂದಿಗೆ ಭೂಮಿಯಲ್ಲಿ ಸೇರುತ್ತಿದೆ. ಅಂತಹ ಪ್ಲಾಸ್ಟಿಕ್ಅನ್ನು ಸಂಗ್ರಹಿಸಲು ಮತ್ತು ಮರುಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ಉತ್ಪಾದನೆಯಾಗುವ ಪ್ಲಾಸ್ಟಿಕ್ ತ್ಯಾಜ್ಯಗಳ ಪೈಕಿ ಒಂದು ಸಣ್ಣ ಭಾಗ ಮಾತ್ರ ಮರುಬಳಕೆಗೆ ಹೋಗುತ್ತದೆ ಎಂಬ ಅಂಶವನ್ನು ಸಿಎಸ್ಇ ಎತ್ತಿತೋರಿಸಿದೆ.

ಪ್ಲಾಸ್ಟಿಕ್ ತ್ಯಾಜ್ಯದಿಂದ ತೈಲ, ವಿದ್ಯುತ್, ಸಿಮೆಂಟ್ಅನ್ನು ಉತ್ಪಾದಿಸಬಹುದಾಗಿದ್ದರೂ, ಈ ಕಾರ್ಖಾನೆಗಳಿಗೂ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಪೂರೈಕೆಯಾಗುತ್ತಿಲ್ಲ ಅಥವಾ ಸಂಗ್ರಹಣೆಯಾಗುತ್ತಿಲ್ಲ. ದೇಶಾದ್ಯಂತ ಸಿಮೆಂಟ್ ಕಾರ್ಖಾನೆಗಳು ವಾರ್ಷಿಕ 335.4 ದಶಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯ ಬಳಸಬಹುದಾದ ಸಾಮರ್ಥ್ಯ ಹೊಂದಿವೆ. ಆದರೆ, ಅವು ಕೇವಲ 11.4 ದಶಲಕ್ಷ ಟನ್ ಪ್ಲಾಸ್ಟಿಕ್ಅನ್ನು ಮಾತ್ರ ಬಳಸುತ್ತಿವೆ.

2023ರ ಅಕ್ಟೋಬರ್‍‌ನಲ್ಲಿ ಆಯಾ ರಾಜ್ಯಗಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ನಕಲಿ ಪ್ರಮಾಣಪತ್ರ ಹೊಂದಿರುವ ಉತ್ಪಾದಕರನ್ನು ಕಂಡುಹಿಡಿದಿದ್ದವು. ಅವರಿಗೆ ದಂಡವನ್ನೂ ವಿಧಿಸಿದ್ದವು. ಆದರೂ, ಪ್ಲಾಸ್ಟಿಕ್ ಉತ್ಪಾದನೆ ಮತ್ತು ಬಳಕೆ ಮೇಲೆ ಹೆಚ್ಚಿನ ನಿಯಂತ್ರಣ ಸಾಧ್ಯವಾಗಲಿಲ್ಲ.

ಈ ರೀತಿಯಲ್ಲಿ ನಕಲಿ ಪ್ರಮಾಣಪತ್ರಗಳೊಂದಿಗೆ ಪ್ಲಾಸ್ಟಿಕ್ ಉತ್ಪಾದನೆಯು, ವ್ಯವಸ್ಥೆಯ ಮೇಲಿನ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸುತ್ತವೆ. ನಕಲಿ ಉತ್ಪಾದಕರ ಜಾಲವು ಮತ್ತಷ್ಟು ವಿಸ್ತರಿಸುತ್ತದೆ. ಹೀಗಾಗಿ, ಪ್ಯಾಕೇಜಿಂಗ್ ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆ, ಸಂಗ್ರಹಣೆ ಹಾಗೂ ಮರುಬಳಕೆಗಾಗಿ ಇಪಿಆರ್ ಮಾರ್ಗಸೂಚಿಗಳನ್ನು ಮತ್ತಷ್ಟು ದೃಢವಾಗಿಸುವ ಅಗತ್ಯವಿದೆ. ಸಮಯೋಚಿತ ರೀತಿಯಲ್ಲಿ ಕ್ರಮಗಳನ್ನು ಜಾರಿಗೊಳಿಸಿದರೆ, ಪ್ಲಾಸ್ಟಿಕ್ ತ್ಯಾಜ್ಯದ ಹಾವಳಿಯನ್ನು ನಿಯಂತ್ರಿಸಲು ಅವಕಾಶವಿದೆ. ಸರ್ಕಾರ ಮತ್ತು ಆಡಳಿತ ವರ್ಗ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ತಮ್ಮ ಹೊಣೆಯನ್ನು ನಿರ್ವಹಿಸಬೇಕಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....