ಈ ದಿನ ಸಂಪಾದಕೀಯ | ಬೀಫ್‌ ಕಂಪನಿಗಳಿಂದ ದೇಣಿಗೆ ಪಡೆದ ಬಿಜೆಪಿ; ದನದ ಹೆಸರಿನಲ್ಲಿ ಜನರನ್ನು ಕೊಲ್ಲುವುದು ಇನ್ನಾದರೂ ನಿಲ್ಲಲಿ

Date:

ʼಗೋವು ತಾಯಿಗೆ ಸಮಾನʼ ಎಂದು ಭಾಷಣ ಬಿಗಿಯುತ್ತಾ ಪ್ರವರ್ಧಮಾನಕ್ಕೆ ಬಂದ ಮೋದಿ, ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಭಾರತ ಗೋಮಾಂಸ ರಫ್ತಿನಲ್ಲಿ ನಂ ವನ್‌ ಸ್ಥಾನದಲ್ಲಿದೆ ಎಂದು ಗೇಲಿ ಮಾಡಿದ್ದರು. 2014 ಏಪ್ರಿಲ್‌ನಲ್ಲಿ ಬಿಹಾರದ ನವಾದದಲ್ಲಿ ಚುನಾವಣಾ ಭಾಷಣ ಮಾಡುತ್ತಾ, ನರೇಂದ್ರ ಮೋದಿ ಅವರು “ಪಿಂಕ್‌ ರೆವಲೂಷನ್‌” ಎಂದು ಜರೆದಿದ್ದರು.

 

ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಗೋಮಾತೆಯ ಬಾಲ ಹಿಡಿದುಕೊಂಡು. ʼಗೋವು ತಾಯಿಗೆ ಸಮಾನʼ ಎಂದು ಭಾಷಣ ಬಿಗಿಯುತ್ತಾ ಪ್ರವರ್ಧಮಾನಕ್ಕೆ ಬಂದ ಮೋದಿ, ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಭಾರತ ಗೋಮಾಂಸ ರಫ್ತಿನಲ್ಲಿ ನಂ ವನ್‌ ಸ್ಥಾನದಲ್ಲಿದೆ ಎಂದು ಗೇಲಿ ಮಾಡಿದ್ದರು. 2014 ಏಪ್ರಿಲ್‌ನಲ್ಲಿ ಬಿಹಾರದ ನವಾದದಲ್ಲಿ ಚುನಾವಣಾ ಭಾಷಣ ಮಾಡುತ್ತಾ, ನರೇಂದ್ರ ಮೋದಿ ಅವರು “ಪಿಂಕ್‌ ರೆವಲೂಷನ್‌” ಎಂದು ಜರೆದಿದ್ದರು.

ಅವರು ಮೊದಲ ಅವಧಿಗೆ ಪ್ರಧಾನಿಯಾದ ಕೂಡಲೇ ಹಿಂದುತ್ವದ ಮದವೇರಿಸಿಕೊಂಡ ಗುಂಪು ಮುಸ್ಲಿಮರ ಮನೆಯ ಅಡುಗೆ ಮನೆಗೆ ಹೋಗಿ ಒಲೆಯಲ್ಲಿ ಬೇಯುತ್ತಿದ್ದ ಮಾಂಸವನ್ನು ದನದ ಮಾಂಸ ಎಂದು ಮನೆಯವನನ್ನು ಹೊಡೆದು ಕೊಂದಿದ್ದವು. ಮಾಂಸ ಕೊಂಡೊಯ್ಯುವ ಮುಸ್ಲಿಮರನ್ನು, ಗೋ ಸಾಗಾಟ ಮಾಡುತ್ತಿದ್ದ ವ್ಯಾಪಾರಿಗಳನ್ನು ಹೊಡೆಯುವುದು, ರೈತರ ಸಂತೆಯಿಂದ ಗೋವುಗಳನ್ನು ಖರೀದಿ ಮಾಡಿ ಕೊಂಡೊಯ್ಯುತ್ತಿದ್ದ ವಾಹನವನ್ನು ತಡೆಯುವುದು, ಹಲ್ಲೆ ಮಾಡುವುದು ನಿತ್ಯದ ಸುದ್ದಿಯಾಗಿತ್ತು. ನಮ್ಮ ರಾಜ್ಯದಲ್ಲಿಯೇ ಗೋ ವ್ಯಾಪಾರಿಯನ್ನು ಹೊಡೆದು ಕೊಂದ ಘಟನೆ ಕಳೆದ ವರ್ಷ ನಡೆದಿತ್ತು. ಗೋ ರಕ್ಷಣೆಯ ಹೆಸರಿನಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ತಡೆದು ಸುಲಿಗೆ ಮಾಡುವ ದಂಧೆ ನಿರಂತರವಾಗಿ ನಡೆಯುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಲ್ಲಿ ಬಿಜೆಪಿಯ ಹಿಂದುತ್ವದ ಕಾರ್ಯಕರ್ತರು ಗೋವ್ಯಾಪಾರಿಗಳನ್ನು ಸುಲಿಗೆ ಮಾಡಿದ್ರೆ, ಅತ್ತ ಮೋದಿ ಸರ್ಕಾರ ಗೋಮಾಂಸ ರಫ್ತು ಕಂಪನಿಗಳಿಂದ ಎಲೆಕ್ಟೋರಲ್‌ ಬಾಂಡ್‌ ಹೆಸರಿನಲ್ಲಿ ಚಂದಾ ಎತ್ತಿದೆ! ಹಿಂದುತ್ವ, ಗೋಮಾತೆ ಎಂದು ಹೇಳಿ ದೇಶದಲ್ಲಿ ಅಶಾಂತಿ, ದ್ವೇಷ ಹುಟ್ಟಿಸಿದ ಪಕ್ಷಕ್ಕೆ ಗೋಮಾಂಸ ರಫ್ತು ಕಂಪನಿಗಳಿಂದ ದೇಣಿಗೆ ಪಡೆಯುವಾಗ ಗೋಮಾತೆ ನೆನಪಿಗೆ ಬರಲಿಲ್ಲವೇ?

ಇದು ಇಂದು ನೆನ್ನೆಯ ವಿಷಯವಲ್ಲ. 2013ರಲ್ಲಿಯೇ ಅಂದರೆ ಮೋದಿ ಪ್ರಧಾನಿಯಾಗುವ ಮುನ್ನವೇ ಬಿಜೆಪಿ ಬೀಫ್‌ ರಫ್ತು ಕಂಪನಿಗಳಿಂದ ದೇಣಿಗೆ ಪಡೆದಿದೆ ಎಂಬ ಆರೋಪ ಬಂದಿತ್ತು. “ಗೋಮಾಂಸ ರಫ್ತು ವಿರೋಧಿಸುತ್ತಿರುವ ಬಿಜೆಪಿ ಗೋಮಾಂಸ ರಫ್ತು ಮಾಡುವ ವ್ಯಕ್ತಿಯಿಂದಲೇ ಪಕ್ಷಕ್ಕೆ ರೂ. 200 ಕೋಟಿ ದೇಣಿಗೆ ಪಡೆದಿದೆ” ಎಂದು ಉತ್ತರ ಪ್ರದೇಶ ಸಚಿವ ಆಜಂ ಖಾನ್ 2015ರಲ್ಲಿ ಆರೋಪಿಸಿದ್ದರು.

2018ರಲ್ಲಿ ಆಗಿನ ಕೇಂದ್ರ ಸಚಿವ ಅರುಣ್‌ ಜೇಟ್ಲಿ ರಾಜಕೀಯ ಪಕ್ಷಗಳು ಖಾಸಗಿಯವರಿಂದ ದೇಣಿಗೆ ಪಡೆಯುವ ಎಲೆಕ್ಟೋರಲ್‌ ಬಾಂಡ್‌ ಯೋಜನೆಯನ್ನು ಘೋಷಿಸಿದ್ದರು. ಅದಾದ ನಂತರ ಬಿಜೆಪಿಗೆ ದೇಣಿಗೆಯ ಮಹಾಪೂರವೇ ಹರಿದುಬಂದಿದೆ. ಮೋದಿ ಸರ್ಕಾರ ಅಕ್ರಮವಾಗಿ ದೇಣಿಗೆ ಪಡೆಯುತ್ತಿದೆ. ಎಲೆಕ್ಟೋರಲ್‌ ಬಾಂಡ್‌ ಖರೀದಿಸಿದ ಕಂಪನಿಗಳಿಗೆ ಗುತ್ತಿಗೆ ನೀಡುವುದು, ಅವರ ಮೇಲಿನ ಭ್ರಷ್ಟಾಚಾರ ಪ್ರಕರಣಗಳನ್ನು ಕೊನೆಗೊಳಿಸುವುದು, ಐಟಿ ಇಡಿ ರೇಡ್‌ ಬೆದರಿಕೆ ಒಡ್ಡಿ ಬಾಂಡ್‌ ಖರೀದಿಸುವಂತೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿದ ಆದೇಶದಂತೆ ಈಗ ಬಾಂಡ್‌ ಖರೀದಿಸಿದವರ ಪಟ್ಟಿ ಬಹಿರಂಗಪಡಿಸಲಾಗಿದೆ. ಅದರಲ್ಲಿ ಬಿಜೆಪಿ ಮತ್ತು ಅದರ ಸಮಾನ ಮನಸ್ಕ ಪಕ್ಷ ಶಿವಸೇನೆಗೆ ಮಹಾರಾಷ್ಟ್ರದ ಬೀಫ್‌ ರಫ್ತು ಕಂಪನಿ ಅಲ್ಲಾನ ಗ್ರೂಪ್‌ (Allana Group)2019ರಲ್ಲಿ ರೂ. 5 ಕೋಟಿ ದೇಣಿಗೆ ನೀಡಿದೆ. ಶಿವಸೇನಾಗೆ ರೂ. 3ಕೋಟಿ, ಬಿಜೆಪಿಗೆ ರೂ. 2ಕೋಟಿ! ಅಲ್ಲಿಗೆ ಹಿಂದುತ್ವ, ಗೋಮಾತೆ ಎಲ್ಲವೂ ಇವರಿಗೆ ರಾಜಕೀಯದ ವಿಷಯ ಅಷ್ಟೇ. ಭಾವನಾತ್ಮಕ ಸಂಗತಿಗಳನ್ನು ಹೇಳುತ್ತಾ ಬಹುಸಂಖ್ಯಾತರ ಮತಗಳನ್ನು ಕ್ರೋಢೀಕರಿಸುವುದು ಇವರ ಏಕಮಾತ್ರ ಅಜೆಂಡಾ ಎಂಬುದು ಸ್ಪಷ್ಟವಾಗುತ್ತದೆ.

Allanasons Private Limited ಮಹಾರಾಷ್ಟ್ರದ ಅತಿದೊಡ್ಡ ಗೋಮಾಂಸ ರಫ್ತು ಕಂಪನಿ. 2019ರ ಏಪ್ರಿಲ್‌ನಲ್ಲಿ ಈ ಕಂಪನಿಯ ಮೇಲೆ ಆದಾಯ ಇಲಾಖೆ ದಾಳಿ ನಡೆಸಿತ್ತು. ತೆರಿಗೆ ವಂಚನೆಯ ಆರೋಪ ಈ ಕಂಪನಿಯ ಮೇಲೆ ಬಂದಿತ್ತು. ಅಕ್ಟೋಬರ್‌ನಲ್ಲಿ ರೂ.5 ಕೋಟಿಯ ಬಾಂಡ್‌ ಖರೀದಿ ಮಾಡಿತ್ತು. ಚುನಾವಣಾ ಆಯೋಗ ವೆಬ್‌ಸೈಟ್‌ನಲ್ಲಿರುವ ಮಾಹಿತಿಯ ಪ್ರಕಾರ ಅಲ್ಲಾನ ಗ್ರೂಪ್‌ನ ಕಂಪನಿಗಳು ಶಿವಸೇನಾ ಮತ್ತು ಬಿಜೆಪಿಗೆ ಒಟ್ಟು ರೂ.9ಕೋಟಿ 10ಲಕ್ಷ ದೇಣಿಗೆ ಕೊಟ್ಟಿವೆ. ಇವೆರಡು ಪಕ್ಷಗಳು ಮಹಾರಾಷ್ಟ್ರದಲ್ಲಿ ಸರ್ಕಾರ ನಡೆಸುತ್ತಿವೆ ಎಂಬುದು ಗಮನಾರ್ಹ.

ಬಿಜೆಪಿಗೆ ಗೋವು ಮತ ತಂದುಕೊಡುವ ಕಾಮಧೇನು ಎಂಬುದಂತು ಗೊತ್ತಿತ್ತು. ಆ ಕಾರಣಕ್ಕಾಗಿಯೇ ಗೋವಿನ ವಿಚಾರವನ್ನು ಧರ್ಮ, ಆಚರಣೆ, ಸಂಪ್ರದಾಯದ ಹೆಸರಿನಲ್ಲಿ ವೈಭವೀಕರಿಸುವ ಕೆಲಸ ಬಿಜೆಪಿ ನಿರಂತರವಾಗಿ ಮಾಡಿತ್ತು. ಆದರೆ, ಮೋದಿ ಅಧಿಕಾರಕ್ಕೆ ಬಂದು ಹತ್ತು ವರ್ಷ ಆದರೂ ಗೋಮಾಂಸ ರಫ್ತು ಕಡಿಮೆಯಾಗಲಿಲ್ಲ. ಹೆಚ್ಚೇ ಆಗಿದೆ. ಸದ್ಯ ಗೋಮಾಂಸ ರಫ್ತಿನಲ್ಲಿ ಭಾರತ ಎರಡನೇ ಸ್ಥಾನಕ್ಕೇರಿದೆ. ಗೋಮಾಂಸ ರಫ್ತು ಮಾಡುವ ಕಂಪನಿಗಳನ್ನು ನಡೆಸುತ್ತಿರುವವರು ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಗುಜರಾತಿನವರೇ ಹೆಚ್ಚು ಇದ್ದಾರೆ. ಅವು ಸಂಪೂರ್ಣ ಬಿಜೆಪಿಯ ಹಿಡಿತದಲ್ಲಿರುವ ರಾಜ್ಯಗಳು. ಗೋಮಾಂಸದ ಉದ್ಯಮಿಗಳಲ್ಲಿ ಅಪ್ಪಟ ಸಸ್ಯಾಹಾರಿಗಳಾದ ಜೈನರೂ ಇದ್ದಾರೆ. ಗೋವಿನ ಮೇಲೆ ನಿಜವಾದ ಭಕ್ತಿ ಇದ್ದಿದ್ದರೆ ಬಿಜೆಪಿ ಪ್ರಾಬಲ್ಯ ಇರುವ ರಾಜ್ಯಗಳಲ್ಲಿ ಸಂಪೂರ್ಣ ನಿಷೇಧ ಮಾಡಬೇಕಿತ್ತು ಅಲ್ಲವೇ? ಅಂತಹ ಯಾವುದೇ ಹೆಜ್ಜೆ ಇಡದ ಬಿಜೆಪಿಗೆ ಅಷ್ಟೇ ಅಲ್ಲ ಗೋಮಾಂಸ ರಫ್ತು ಮಾಡುವ ಕಂಪನಿಗಳಿಂದಲೇ ದೇಣಿಗೆ ಪಡೆದ ಬಿಜೆಪಿಗೆ ಗೋವಿನ ಹೆಸರಿನಲ್ಲಿ ಮತ ಕೇಳುವ ನೈತಿಕತೆ ಉಳಿದಿದೆಯೇ?

ಭಾವನಾತ್ಮಕವಾಗಿ ಜನರನ್ನು ಪ್ರಚೋದಿಸುತ್ತಾ, ಗೋಮಾಂಸ ಸೇವಿಸುವ ಮುಸ್ಲಿಮರನ್ನು ತುಚ್ಛವಾಗಿ ನಿಂದಿಸುವ ಹಿಂದುತ್ವ ಕಾರ್ಯಕರ್ತರು ಅಥವಾ ಬಿಜೆಪಿಯ ನಾಯಕರು ಯಾವತ್ತೂ ಈ ದೇಶದಲ್ಲಿ ಗೋಮಾಂಸವನ್ನು ತಿನ್ನುವ ಹಿಂದೂಗಳ ಬಗ್ಗೆ ಮಾತಾಡಿಲ್ಲ. ಗೋಹತ್ಯೆ ನಿಷೇಧ ಮಾಡಬೇಕು ಎಂದು ಯಾರೂ ಮೋದಿ ಸರ್ಕಾರವನ್ನು ಒತ್ತಾಯಿಸಿಲ್ಲ. ದೇಶದಲ್ಲಿ ಗೋಮಾಂಸ ರಫ್ತಿಗೆ ಅನುಮತಿ ಕೊಟ್ಟು ಇಲ್ಲಿನ ಜನ ಕೊಳ್ಳಬಾರದು, ತಿನ್ನಬಾರದು, ಅದು ನಮ್ಮ ತಾಯಿ ಎಂದರೆ ಹೇಗೆ? ವಾಸ್ತವದಲ್ಲಿ ಹಾಲುಕೊಡುವ ಹಸುವನ್ನು ಕೊಲ್ಲಬಾರದು ಎಂದಿದೆ. ಆದರೆ, ಎತ್ತು, ಎಮ್ಮೆ, ಕೋಣವನ್ನು ಮಾಂಸಕ್ಕಾಗಿ ಬಳಸಬಹುದು. ಮಾಂಸಕ್ಕಾಗಿಯೇ ಕೋಣಗಳನ್ನು ಸಾಕಲಾಗುತ್ತಿದೆ. ಅಷ್ಟೇ ಏಕೆ ಬಿಜೆಪಿಯವರು ಸದಾ ಟೀಕಿಸುವ ಪಾಕಿಸ್ತಾನಕ್ಕೆ ಅತಿ ಹೆಚ್ಚು ಗೋಮಾಂಸ ರಫ್ತಾಗುವುದು ಭಾರತದಿಂದ! ಬಿಜೆಪಿಯವರು ಇನ್ನಾದರೂ ಗೋಮಾತೆಗೆ ಚುನಾವಣಾ ಪ್ರಚಾರದಿಂದ ವಿಶ್ರಾಂತಿ ನೀಡಬೇಕಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....