ಈ ದಿನ ಸಂಪಾದಕೀಯ | ವಿದೇಶಗಳಲ್ಲಿ ದ್ವೇಷಕ್ಕೆ ಭಾರತೀಯರ ಬಲಿ- ಕೈಕಟ್ಟಿ ಕುಳಿತಿರುವರೇ ‘ವಿಶ್ವಗುರು’?

Date:

ಬಹಳ ಕಳವಳ ಮೂಡಿಸುವ ಸಂಗತಿಯೆಂದರೆ ಎಲ್ಲೆಡೆ  ಜನಾಂಗೀಯ ದ್ವೇಷ ಹೆಚ್ಚುತ್ತಿದೆ. ಮೆಲ್ಬೋರ್ನ್‌ನ ಯುವಕರು ಹರ್ಮನ್‌ಪ್ರೀತ್ ಸಿಂಗ್‌ಗೆ “ನೀನು ಭಾರತೀಯ, ಇಲ್ಲಿ ಯಾಕೆ ಬಂದೆ? ನಿನ್ನ ದೇಶಕ್ಕೆ ಹೋಗು” ಎಂದು ಹೇಳುತ್ತಾ ಹಿಂಸೆ ನೀಡಿದ್ದಾರೆ ಎಂದರೆ, ಇದು ಕೇಂದ್ರ ಸರ್ಕಾರ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾದ ಸಂಗತಿ. ಅಷ್ಟೇ ಅಲ್ಲ ಭಾರತದೊಳಗೆ ಇಲ್ಲಿಯದೇ ಪ್ರಜೆಗಳನ್ನು ಧರ್ಮ, ಆಹಾರ, ಸಂಸ್ಕೃತಿ, ಆಚಾರ-ವಿಚಾರದ ಕಾರಣಕ್ಕೆ ಹಿಂಸೆ ನೀಡುವ ಸಂಘಟನೆಗಳ ಬಗ್ಗೆ ಕೂಡ ಕ್ರಮ ಕೈಗೊಳ್ಳಬೇಕಾದ ಸಂದರ್ಭವಿದು.

ಜಗತ್ತಿನೆಲ್ಲೆಡೆ ಜನಾಂಗೀಯ ದ್ವೇಷ, ಮೈಬಣ್ಣ-ಧರ್ಮ, ದೇಶದ ಕಾರಣಕ್ಕೆ ಜೀವ ತೆಗೆಯುವ ಪ್ರವೃತ್ತಿ ಯುವಕರಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಎಂತಹ ದೇಶವೇ ಆಗಲಿ, ಯಾವುದೇ ನಗರವಿರಲಿ ಮನುಷ್ಯ ಜೀವ ಬಹಳ ಅಗ್ಗವಾಗಿ ಹೋಗಿದೆ. ಅನ್ಯ ದೇಶೀಯರು, ಅನ್ಯ ಧರ್ಮೀಯರು, ಕಪ್ಪು ಮೈಬಣ್ಣದವರು, ಅನ್ಯ ಮುಖಚಹರೆಯವರು ಎಂಬೆಲ್ಲ ಭೇದಭಾವಗಳು ಮನುಷ್ಯತ್ವವನ್ನೇ ಮರೆಸಿ, ಕ್ಷಣ ಮಾತ್ರದಲ್ಲಿ ಜೀವ ತೆಗೆಯಲು ಪ್ರಚೋದಿಸುತ್ತಿವೆ ಎಂಬುದು ಅರಗಿಸಿಕೊಳ್ಳಲಾಗದ ದುರಂತ ಸತ್ಯ.

ಆಸ್ಟ್ರೇಲಿಯಾದ ಮೆಲ್ಬೋರ್ನ್ ಬಳಿಯ ಗೀಲಾಂಗ್‌ನಲ್ಲಿರುವ ಜಿಮ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಪಂಜಾಬ್‌ ನ ಹರ್ಮನ್‌ಪ್ರೀತ್ ಸಿಂಗ್ (22) ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ ಎಂದು ನಿನ್ನೆ (ಗುರುವಾರ) ವರದಿಯಾಗಿದೆ. ‘ಭಾರತೀಯ ನಾಯಿ – ವಾಪಸ್‌ ಹೋಗು. ನೀನು ಎಲ್ಲಿಂದ ಬಂದಿದ್ದೀಯೋ ಅಲ್ಲಿಗೇ ಹೋಗು’ ಎಂದು ಬೆದರಿಕೆ ಹಾಕಿದ್ದಾಗಿ ಹಲ್ಲೆಗೊಳಗಾದ ಯುವಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನೀನು ಭಾರತೀಯ, ನೀನು ಹಿಂದೂ, ನೀನು ವಿದೇಶಿ ಎಂಬ ಕಾರಣಕ್ಕೆ ಹಲ್ಲೆ ಮಾಡುವುದು, ಹತ್ಯೆ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಮೂಲಭೂತವಾದಕ್ಕೆ ಯಾವ ದೇಶವಾದರೂ ಅಷ್ಟೇ. ಮನುಷ್ಯರನ್ನು ಮನುಷ್ಯರನ್ನಾಗಿ ನೋಡದೇ, ಆತನ ಧರ್ಮ, ಮೈಬಣ್ಣ ನೋಡಿ ಕೊಲೆ ಮಾಡುವ ಮಟ್ಟಿಗೆ ಯುವ ಸಮೂಹವನ್ನು ಅವಿವೇಕ ಆವರಿಸಿ ವಿವೇಚನಾಶೂನ್ಯರನ್ನಾಗಿಸುತ್ತಿರುವುದು ಕ್ರೂರ ವಾಸ್ತವ. ಇದನ್ನು ರಾಜತಾಂತ್ರಿಕ ಮಟ್ಟದಲ್ಲಿ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

ಕೆನಡಾದ ಟೊರಾಂಟೊದಲ್ಲಿ ಫೆಬ್ರವರಿ 7,2026 ರಂದು ನೆಲಮಂಗಲದ ಟೆಕಿ ಚಂದನ್‌ ಕುಮಾರ್‌ (30) ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕೆನಡಾದಲ್ಲಿಯೇ ವಾಸವಿದ್ದ ಚಂದನ್ ಮೇಲೆ ಪಾರ್ಕಿಂಗ್ ಲಾಟ್‌ನಲ್ಲಿ ನಡೆದ ಶೂಟೌಟ್, ಇದೊಂದು ‘ಟಾರ್ಗೆಟೆಡ್’ (Targeted) ದಾಳಿ ಎಂದು ಪೊಲೀಸರು ಶಂಕಿಸಿದ್ದಾರೆ. ಕಾರಣ ಇನ್ನೂ ಗೊತ್ತಾಗಿಲ್ಲ. ಟಾರ್ಗೆಟೆಡ್‌ ಅಂದ್ರೆ ವೈಯಕ್ತಿಕ ದ್ವೇಷವೇ ಅಥವಾ ಜನಾಂಗೀಯ ದ್ವೇಷವೇ ಗೊತ್ತಿಲ್ಲ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯಲ್ಲಿ ರಾಸಾಯನಿಕ ಮತ್ತು ಬಯೋಮಾಲಿಕ್ಯುಲರ್ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದ ಕರ್ನಾಟಕದ ಸಾಕೇತ್ ಶ್ರೀನಿವಾಸಯ್ಯ ಫೆಬ್ರವರಿ 9 ರಂದು ಕಾಣೆಯಾಗಿದ್ದರು. ಆರು ದಿನಗಳ ನಂತರ ಆತನ ಶವ ಪತ್ತೆಯಾಗಿದೆ. ಸಾಕೇತ್‌ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

2025ರಲ್ಲಿ ಕನಿಷ್ಠ 9 ಭಾರತೀಯರು (ವಿದ್ಯಾರ್ಥಿಗಳು ಸೇರಿದಂತೆ) ಗುಂಡಿನ ದಾಳಿ, ಚಾಕು ಇರಿತ ಮತ್ತು ಇತರ ಹಿಂಸೆಯಿಂದ ಸತ್ತಿದ್ದಾರೆ ಎಂಬ ವರದಿಗಳಿವೆ. ಭಾರತದಲ್ಲಿ ಶಿಕ್ಷಣ ಪಡೆದು ಉದ್ಯೋಗಕ್ಕೆಂದು ವಿದೇಶಗಳಿಗೆ ತೆರಳುವವರು ಮತ್ತು ಶಿಕ್ಷಣಕ್ಕೆಂದೇ ವಿದೇಶಿ ವಿಶ್ವವಿದ್ಯಾಲಯಗಳಿಗೆ ತೆರಳುವ ಯುವ ಸಮೂಹ ಇಂದು ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಭಾರತದಲ್ಲಿರುವ ಹೆತ್ತವರು ರಾತ್ರಿ ನಿದ್ರೆಗೆಡುವ ಸಂದರ್ಭ ಬಂದಿದೆ. ವಿದೇಶದಿಂದ ಬರುವ ಫೋನ್‌ ಕರೆಯನ್ನು ಆತಂಕದಿಂದ ನಡುಗುವ ಕೈಗಳಿಂದ ಸ್ವೀಕರಿಸುವ ಸರದಿ ಹೆತ್ತವರದ್ದು. ಗಡಿಯಲ್ಲಿ ದೇಶ ಕಾಯುವ ಸೈನಿಕರ ಕುಟುಂಬಗಳ ಆತಂಕದಂತೆ ವಿದೇಶಕ್ಕೆ ತೆರಳಿದವರ ಕುಟುಂಬಗಳ ಪರಿಸ್ಥಿತಿಯೂ ಆಗಿದೆ.

ಬಹಳ ಕಳವಳ ಮೂಡಿಸುವ ಸಂಗತಿಯೆಂದರೆ ಎಲ್ಲೆಡೆ  ಜನಾಂಗೀಯ ದ್ವೇಷ ಹೆಚ್ಚುತ್ತಿದೆ. ಮೆಲ್ಬೋರ್ನ್‌ನ ಯುವಕರು ಹರ್ಮನ್‌ಪ್ರೀತ್ ಸಿಂಗ್‌ಗೆ “ನೀನು ಭಾರತೀಯ ಇಲ್ಯಾಕೆ ಬಂದೆ” ಎಂದು ಪ್ರಶ್ನಿಸಿ ಹಿಂಸೆ ನೀಡಿದ್ದಾರೆ ಎಂದರೆ, ಇದು ಕೇಂದ್ರ ಸರ್ಕಾರ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾದ ಸಂಗತಿ. ಅಷ್ಟೇ ಅಲ್ಲ ಭಾರತದೊಳಗೆ ಇಲ್ಲಿಯದೇ ಪ್ರಜೆಗಳನ್ನು ಧರ್ಮ, ಆಹಾರ, ಸಂಸ್ಕೃತಿ, ಆಚಾರ-ವಿಚಾರದ ಕಾರಣಕ್ಕೆ ಹಿಂಸೆ ನೀಡುವ ಸಂಘಟನೆಗಳ ಬಗ್ಗೆ ಕೂಡ ಕ್ರಮ ಕೈಗೊಳ್ಳಬೇಕಾದ ಸಂದರ್ಭವಿದು. ಭಾರತದಲ್ಲಿ ಅನ್ಯತೆಯ ನೆಪದಲ್ಲಿ ನಡೆಯುತ್ತಿರುವ ಆಕ್ರಮಣಗಳಿಗೆ ಪ್ರಚೋದನೆ ನೀಡುತ್ತಿರುವ ಸಂಖ್ಯೆಯೂ ಭಾರೀ ದೊಡ್ಡದು. ಅಂತಹ ವಾತಾವರಣವನ್ನು ಆಳುವ ವ್ಯವಸ್ಥೆಯೇ ಪೋಷಿಸಿದೆ.

ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಬಹುಸಂಖ್ಯಾತ ಮುಸ್ಲೀಮರು ಅಲ್ಪಸಂಖ್ಯಾತ ಹಿಂದೂಗಳನ್ನು ಚಿತ್ರ ಹಿಂಸೆ ಕೊಟ್ಟು ಕೊಂದಿರುವ ಬಗ್ಗೆ ಸಂಘಪರಿವಾರ ಭಾರೀ ಆಕ್ರೋಶ ವ್ಯಕ್ತಪಡಿಸಿತ್ತು. ಅದೇ ರೀತಿ ಭಾರತದಲ್ಲಿ ಮುಖ ಚಹರೆ, ಭಾಷೆ ನೋಡಿ ಬಾಂಗ್ಲಾ ದೇಶಿಯಾ ಎಂದು ಕೇಳಿ ಕೊಂದು ಹಾಕುವ ಬೆಳವಣಿಗೆಗಳು ನಡೆದಿದ್ದವು. ಭಾರತದಲ್ಲಿಯೇ ಹುಟ್ಟಿ ಬದುಕುತ್ತಿರುವ ಅಪ್ಪಟ ಭಾರತೀಯ ಮುಸ್ಲಿಮರನ್ನು ಅವರ ಆಹಾರ, ಉಡುಗೆ, ಧಾರ್ಮಿಕ ಆಚರಣೆಯ ಕಾರಣಕ್ಕೆ ಹಿಂಸಿಸಲಾಗುತ್ತಿದೆ. ಆದರೆ, ಭಾರತ ಶಿಕ್ಷಿತ ಯುವಕರು ಮುಸ್ಲಿಂ ಮತ್ತು ಕ್ರೈಸ್ತರ ದೇಶದಲ್ಲಿ ಕೈ ತುಂಬ ಸಂಬಳದ ಆಸೆಗಾಗಿ ನೆಲೆಸಿದ್ದಾರೆ. ಇಲ್ಲಿ ಮಸೀದಿಗಳನ್ನು ಕಡವಲು ಯತ್ನಿಸುವ, ಮಸೀದಿಯ ತಳದಲ್ಲಿ ಮಂದಿರ ಹುಡುಕುವ ಮಂದಿ ಅದೇ ಮುಸ್ಲಿಮರ, ಕ್ರೈಸ್ತರ ನಾಡಿನಲ್ಲಿ ದೇವಮಂದಿರಗಳನ್ನು ಕಟ್ಟಿಕೊಂಡು ಹಬ್ಬಗಳನ್ನು ಆಚರಿಸಿಕೊಂಡು ಸ್ವತಂತ್ರವಾಗಿ ಬದುಕಲು ಬಯಸುತ್ತಿದ್ದಾರೆ. ಧರ್ಮಗಳನ್ನು ರಾಜಕೀಯ ಗುರಾಣಿ ಮಾಡಿಕೊಂಡ ನಾಯಕರು ಮಾಡುವ ತಪ್ಪಿಗೆ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಕೆಲ ವರ್ಷಗಳ ಹಿಂದೆ ಆಸ್ಪ್ರೇಲಿಯಾದಲ್ಲಿ ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಭಾರತೀಯ ಮಹಿಳೆಯನ್ನು ಅಪರಿಚಿತರು ಗುಂಡಿಟ್ಟು ಸಾಯಿಸಿದ್ದರು. ಅವರಿಗೆ ದರೋಡೆ ಮಾಡುವ ಉದ್ದೇಶ ಇರಲಿಲ್ಲ. ಜನಾಂಗೀಯ ದ್ವೇಷ ಈ ಕೃತ್ಯ ಮಾಡಿಸಿತ್ತು. ಮೊನ್ನೆಯಷ್ಟೇ ಕೆನಡಾದಲ್ಲಿ ಟೆಕ್ಕಿ ಚಂದನ್‌ ದೇಹವನ್ನು ಆರು ಗುಂಡುಗಳು ಪ್ರವೇಶಿಸಿದ್ದವು. ಕಾರಣ ಇನ್ನೂ ನಿಗೂಢ. ಆದರೆ ಆತ ಅಲ್ಲಿ ಕನ್ನಡ ಸಂಘ ಕಟ್ಟಿ, ಕಾರ್ಯಕ್ರಮಗಳನ್ನು ಆಯೋಜಿಸುತ್ತ ಸಕ್ರಿಯನಾಗಿದ್ದ ಎಂದು ಆತನ ಸ್ನೇಹಿತರು ತಿಳಿಸಿದ್ದಾರೆ. ಇವೆಲ್ಲ ಸ್ಥಳೀಯರ ವಿರೋಧಕ್ಕೆ ಕಾರಣವಾಗಿರಲೂ ಬಹುದು ಎಂಬ ಅನುಮಾನವಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ಅಂಕಿಅಂಶಗಳ ಪ್ರಕಾರ 2021ರಲ್ಲಿ 29,  2022ರಲ್ಲಿ 57,  2023ರಲ್ಲಿ 86 ಭಾರತೀಯರು ಹೀಗೆ 3 ವರ್ಷಗಳಲ್ಲಿ ಒಟ್ಟು 172 ಮಂದಿ ವಿದೇಶದಲ್ಲಿ ದಾಳಿಗೆ ಒಳಗಾಗಿ ಮೃತಪಟ್ಟಿದ್ದಾರೆ. ಈ ಪೈಕಿ ಹೆಚ್ಚಿನವು ಸೌದಿ ಅರೇಬಿಯಾ, ಅಮೆರಿಕಾ, ಫಿಲಿಪ್ಪೀನ್ಸ್, ಯುಎಇ, ಕೆನಡಾ, ಯುಕೆ ಮತ್ತು ಇತರ ದೇಶಗಳಲ್ಲಿ ನಡೆದ ಹತ್ಯೆಗಳು.

ವಿದೇಶಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಲೋಕಸಭೆಯಲ್ಲಿ ಸಂಸದ ಅಸದುದ್ದೀನ್ ಓವೈಸಿ ಕೇಳಿದ ಪ್ರಶ್ನೆಗೆ ಉತ್ತರವಾಗಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದೆ.

ಇದನ್ನೂ ಓದಿ ಮಾಟಮಂತ್ರ ‘ಶಂಕೆ’ ಎಂಬ ನೆಪ: ವದಂತಿಗೆ ಮಹಿಳೆಯರೇ ಬಲಿಯಾಗುವುದೇಕೆ?

ವಿದೇಶದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳು ಮತ್ತು ದೂತಾವಾಸಗಳು ತಮ್ಮ ವ್ಯಾಪ್ತಿಯಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುವ ಭಾರತೀಯ ವಿದ್ಯಾರ್ಥಿಗಳೊಂದಿಗೆ ನಿಯಮಿತ ಸಂಪರ್ಕದಲ್ಲಿರುತ್ತವೆ. ವಿದೇಶಗಳಿಗೆ ಆಗಮಿಸಿದ ಬಳಿಕ ಅವರಿಗೆ Orientation ಕಾರ್ಯಕ್ರಮಗಳನ್ನು ನಡೆಸಿ, ಎದುರಾಗಬಹುದಾದ ಸವಾಲುಗಳು, ಅಪಾಯಗಳು ಮತ್ತು ವಿದೇಶದಲ್ಲಿ ಅಧ್ಯಯನ ಮಾಡುವ ವೇಳೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ, ಅವಶ್ಯಕತೆ ಇದ್ದಾಗ ಸಲಹೆಗಳನ್ನು ನೀಡಲಾಗುತ್ತದೆ ಎಂದು  ತಿಳಿಸಿದೆ. ಇದು ಒಂದು ದೇಶದ ಸರ್ಕಾರವಾಗಿ ಮಾಡಬಹುದಾದ ಮೂಲಭೂತ ಕರ್ತವ್ಯ. ಅದರಾಚೆಗೆ ವಿದೇಶದಲ್ಲಿ ಶಿಕ್ಷಣ- ವೃತ್ತಿಯ ಸಲುವಾಗಿ ತೆರಳಿದವರ ಜೀವಕ್ಕೆ ಭದ್ರತೆಯ ಭರವಸೆ ನೀಡುವುದು, ಭಾರತೀಯರನ್ನು ಬಚಾವ್‌ ಮಾಡುವುದು ಸವಾಲಿನ ಕೆಲಸ. ಆ ನಿಟ್ಟಿನಲ್ಲಿ ಒಕ್ಕೂಟ ಸರ್ಕಾರ ಕಾರ್ಯಪ್ರವೃತ್ತವಾಗಬೇಕಿದೆ.

ವಿಶ್ವಗುರು ಎಂದು ತಮಗೆ ತಾವೇ ಹೇಳಿಕೊಂಡರೇನು ಪ್ರಯೋಜನ? ವಿದೇಶದಲ್ಲಿನ ತನ್ನ ಪ್ರಜೆಗಳ ಪ್ರಾಣಗಳನ್ನು ಕೂಡ ಕಾಪಾಡದೇ ಹೋದರೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಪೊಳ್ಳು ಆತ್ಮರತಿಯ ‘ಅರ್ಹತೆ’ ಕೂಡ ಉಳಿಯುವುದಿಲ್ಲ. 

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....