‘ಈ ದಿನ’ ಸಂಪಾದಕೀಯ | ಏರ್‌ಲೈನ್ಸ್ ಹಗಲುಗನಸಿನಿಂದ ರಾಜ್ಯ ಸರ್ಕಾರ ಹಿಂದೆ ಸರಿಯಲಿ

Date:

ಚುನಾವಣೆ ವೇಳೆ ಮಾತು ಕೊಟ್ಟಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆಗೆ ಹಣಕಾಸು ಹೊಂದಿಸಿಕೊಳ್ಳುವತ್ತ ಗಂಭೀರ ಲೆಕ್ಕಾಚಾರಗಳನ್ನು ನಡೆಸಬೇಕಿರುವ ರಾಜ್ಯ ಸರ್ಕಾರ, ಏರ್‌ಲೈನ್ಸ್ ಸ್ಥಾಪನೆಯ  ದುಬಾರಿ ಕನಸು ಕಾಣುತ್ತಿರುವುದು ವಿಪರ್ಯಾಸ

ರಾಜ್ಯದ ನಾನಾ ನಗರಗಳ ನಡುವೆ ವಿಮಾನಯಾನ ಸೇವೆಗೆಂದು ಸ್ವಂತ ಏರ್‌ಲೈನ್ಸ್ ಆರಂಭಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಈ ವಿಷಯವನ್ನು ಖುದ್ದು ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಖಚಿತಪಡಿಸಿದ್ದಾರೆ. ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಎರಡು ವಿಮಾನ ಸಂಚರಿಸಿದ ಕೂಡಲೇ ರಾಜ್ಯ ಸರ್ಕಾರಕ್ಕೆ ಇಂಥದ್ದೊಂದು ದುಬಾರಿ ಕನಸು ಶುರುವಾಗಿರುವುದು ಸೋಜಿಗ.

ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳ ಪೈಕಿ, ರಾಜ್ಯ ಸರ್ಕಾರದ ನಿರ್ವಹಣೆಯಲ್ಲಿ ಇರುವುದು ಶಿವಮೊಗ್ಗ ನಿಲ್ದಾಣ ಮಾತ್ರ. ಇದರೊಟ್ಟಿಗೆ ಇನ್ನೂ ನಾಲ್ಕು ವಿಮಾನ ನಿಲ್ದಾಣಗಳ (ವಿಜಯಪುರ, ಬಳ್ಳಾರಿ, ಕಾರವಾರ, ಹಾಸನ) ನಿರ್ವಹಣೆ ವಹಿಸಿಕೊಳ್ಳುವುದು, ಅದಕ್ಕಾಗಿ ರಾಜ್ಯ ಮಟ್ಟದ ವಿಮಾನ ನಿಲ್ದಾಣ ಪ್ರಾಧಿಕಾರ ರಚಿಸುವುದು, ಮುಂದುವರಿದ ಭಾಗವಾಗಿ ವಿಮಾನಯಾನ ಸಂಸ್ಥೆ ಸ್ಥಾಪನೆ ಮಾಡುವುದು ಸದ್ಯಕ್ಕೆ ಸರ್ಕಾರದ ಎದುರಿರುವ ಪ್ರಸ್ತಾಪ.

ಹೊಸ ಯೋಜನೆಯ ಸಂಬಂಧ, ತಮಗೆ ಆಪ್ತರೂ ಆದ ಸ್ಟಾರ್ ಏರ್‌ಲೈನ್ಸ್ ಮಾಲೀಕರ ಜೊತೆ ಚರ್ಚೆ ನಡೆಸಿರುವುದಾಗಿ ಸಚಿವ ಎಂ ಬಿ ಪಾಟೀಲ್ ಹೇಳಿಕೊಂಡಿದ್ದಾರೆ. ಆದರೆ, ಸಚಿವರ ಆಪ್ತರ ಈ ವಿಮಾನಯಾನ ಸಂಸ್ಥೆಯ ಸೇವೆ ಶುರುವಾಗಿದ್ದೇ ನಾಲ್ಕು ವರ್ಷಗಳ ಹಿಂದೆ. ಅದಕ್ಕಿಂತ ಮುಖ್ಯವಾಗಿ, ಸ್ಟಾರ್‌ ಏರ್‌ಲೈನ್ಸ್‌ನ ಸೇವಾ ಗುಣಮಟ್ಟಕ್ಕೆ ಪ್ರಯಾಣಿಕರು ಇದುವರೆಗೂ ಕೊಟ್ಟಿರುವ ಅಂಕ ಹತ್ತಕ್ಕೆ ಆರು ಮಾತ್ರ. ಇನ್ನು, ಏರ್ ಇಂಡಿಯಾ ಸಂಸ್ಥೆಯ ಮಾಜಿ ಅಧಿಕಾರಿಗಳೊಂದಿಗೂ ಸಚಿವರು ಚರ್ಚಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಸ್ವತಃ ಏರ್ ಇಂಡಿಯಾ ಸಂಸ್ಥೆ ಈಗಾಗಲೇ ಟಾಟಾ ಸಂಸ್ಥೆಯ ಪಾಲಾಗಿದೆ. ಹಾಗಾಗಿ, ಈ ಚರ್ಚೆಗಳಿಂದ ಸಚಿವರಿಗೆ ನಿಜಕ್ಕೂ ವಾಸ್ತವ ಚಿತ್ರಣ ಸಿಕ್ಕಿರಬಹುದೇ ಎಂಬ ಪ್ರಶ್ನೆ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಶಿವಮೊಗ್ಗದಲ್ಲಿ ತರಾತುರಿಯಲ್ಲಿ ಉದ್ಘಾಟನೆಯಾದ ವಿಮಾನ ನಿಲ್ದಾಣದಲ್ಲಿ ನಾಲ್ಕು ತಿಂಗಳಾದರೂ ವಿಮಾನ ಕಾಣಿಸಿಕೊಂಡಿರಲಿಲ್ಲ. ಇದೀಗ ಇಂಡಿಗೋ ವಿಮಾನ ಹಾರಾಟ ಸೇವೆ ಶುರುವಾಗಿದ್ದು, ಸದ್ಯಕ್ಕೆ ಎಲ್ಲ ಟಿಕೆಟ್‌ಗಳೂ ಬಿಕರಿಯಾಗಿವೆ ಎಂದು ಹೇಳಲಾಗಿದೆ. ಆದರೆ, ಪರಿಸ್ಥಿತಿ ಮುಂದೆಯೂ ಹೀಗೆಯೇ ಇರಲಿದೆ ಎಂಬ ಸಾಧ್ಯತೆ ಖಂಡಿತ ಇಲ್ಲ. ಏಕೆಂದರೆ, ಆರಂಭದಲ್ಲಿ ಇಂಥದ್ದೇ ಉಮೇದಿನಲ್ಲಿ ಮೈಸೂರು-ಬೆಂಗಳೂರು ನಡುವೆ ಸೇವೆ ಆರಂಭಿಸಿದ್ದ ಅಲಯನ್ಸ್ ಏರ್ ಸಂಸ್ಥೆ, ನಂತರದಲ್ಲಿ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು. ಇದಕ್ಕೆ ಕಾರಣವಾಗಿದ್ದು, ಪ್ರಯಾಣಿಕರ ಕೊರತೆ. ಮೈಸೂರು-ಬೆಳಗಾವಿ ನಡುವಿನ ವಿಮಾನಯಾನ ಸೇವೆ ಕೂಡ ಇದೇ ಕಾರಣಕ್ಕೆ ರದ್ದಾಯಿತು. ಇದೆಲ್ಲವನ್ನೂ ರಾಜ್ಯ ಸರ್ಕಾರ, ಸಚಿವ ಎಂ ಬಿ ಪಾಟೀಲ್ ಇಷ್ಟು ಬೇಗ ಮರೆತಿದ್ದಾರೆಯೇ? ಅಥವಾ ಇದೆಲ್ಲ ತಮ್ಮ ಸರ್ಕಾರದ ಅವಧಿಯಲ್ಲಿ ಆಗಿದ್ದಲ್ಲ ಎಂಬ ಉಡಾಫೆಯೇ?

ಈ ಆಡಿಯೊ ಕೇಳಿದ್ದೀರಾ?: ನಮ್ ಜನ | ಕೋಲೆ ಬಸವನೊಂದಿಗೆ ಬೀದಿಯಲ್ಲಿ ಬದುಕುವ ನೆಲೆ ಇಲ್ಲದ ಅಲೆಮಾರಿಗಳು

ದೇಶದಲ್ಲಿ ಸದ್ಯಕ್ಕೆ ಸರ್ಕಾರಿ ಸ್ವಾಮ್ಯದ ಏಕೈಕ ಏರ್‌ಲೈನ್ಸ್ ಸಂಸ್ಥೆಯಾಗಿ ಉಳಿದುಕೊಂಡಿರುವುದು ಕೇರಳದ ‘ಏರ್ ಕೇರಳ.’ ಈಗಿನ ಕರ್ನಾಟಕ ಸರ್ಕಾರದಂತೆಯೇ 2006ರಲ್ಲಿ ಕೇರಳ ಸರ್ಕಾರ ಬಹಳ ಉತ್ಸಾಹದಲ್ಲಿ ಈ ಸಂಸ್ಥೆ ಸ್ಥಾಪಿಸಿತಾದರೂ, ಇದುವರೆಗೆ ಒಂದೂ ವಿಮಾನ ಸೇವೆ ಒದಗಿಸಲಾಗಿಲ್ಲ. ಕೇರಳಕ್ಕಾದರೂ, ಅಲ್ಲಿನ ಜನರ ಕೊಲ್ಲಿ ದೇಶಗಳೊಂದಿಗಿನ ಔದ್ಯಮಿಕ ನಂಟು ನೆರವಿಗೆ ಬಂದೀತು. ಅಲ್ಲದೆ, ಕತಾರ್ ಏರ್‌ವೇಯ್ಸ್, ಇತಿಹಾದ್ ಏರ್‌ಲೈನ್ಸ್‌ನ ಅತ್ಯಂತ ದುಬಾರಿ ಪ್ರಯಾಣ ದರಗಳಿಂದ ಬಚಾವಾಗಲು ಪ್ರಯಾಣಿಕರು ‘ಏರ್ ಕೇರಳ’ದ ಕೈ ಹಿಡಿಯುವ ಸಾಧ್ಯತೆ ಇದೆ. ಆದರೆ, ಕರ್ನಾಟಕದಲ್ಲಿ ಅಂತಹ ಯಾವುದೇ ಪ್ರಯಾಣಿಕರ ಜಾಲ ಇಲ್ಲ. ಹಾಗಾಗಿ, ಒಂದು ವೇಳೆ ಸರ್ಕಾರ ವಿಮಾನಯಾನ ಸಂಸ್ಥೆ ಆರಂಭಿಸಿದರೂ, ಪ್ರಯಾಣಿಕರ ಸಂಖ್ಯೆಯಲ್ಲಿ ಲಾಭದಾಯಕ ಸಮತೋಲನ ಕಂಡುಕೊಳ್ಳುವುದಂತೂ ಅಸಾಧ್ಯ.

ಚುನಾವಣೆಯಲ್ಲಿ ಮಾತು ಕೊಟ್ಟಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆಗೆ ಹಣಕಾಸು ಹೊಂದಿಸಿಕೊಳ್ಳುವತ್ತ ಗಂಭೀರ ಲೆಕ್ಕಾಚಾರಗಳನ್ನು ನಡೆಸಬೇಕಿರುವ ರಾಜ್ಯ ಸರ್ಕಾರ, ಏರ್‌ಲೈನ್ಸ್ ಸ್ಥಾಪನೆಯ ಹಗಲುಗನಸು ಕಾಣುತ್ತಿರುವುದು ವಿಪರ್ಯಾಸ. ಈಗಾಗಲೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಯಿಂದ 11 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬಳಸಿಕೊಳ್ಳುವ ನಿರ್ಧಾರ ಮಾಡಿ ಮುಖಭಂಗಕ್ಕೆ ಈಡಾಗಿದ್ದು ಸರ್ಕಾರಕ್ಕೆ ಸಾಲದಾಯಿತೇ? ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಸಂಬಂಧ ಕೈಗೊಳ್ಳಬಹುದಾದ ನೂರಾರು ಕೆಲಸಗಳು ಬಾಕಿ ಇವೆ. ಅದನ್ನೆಲ್ಲ ಬಿಟ್ಟು, ದೊಡ್ಡ-ದೊಡ್ಡ ಸರ್ಕಾರಗಳೇ ಏರ್‌ಲೈನ್ಸ್‌ ಒಡೆತನದಿಂದ ಪೆಟ್ಟು ತಿಂದು ಖಾಸಗಿಯವರಿಗೆ ವಹಿಸುತ್ತಿರುವಾಗ ರಾಜ್ಯ ಸರ್ಕಾರ ಇಂತಹ ಹೆಜ್ಜೆ ಇಟ್ಟಿರುವುದು ಮೂರ್ಖತನ. ಹೀಗಾಗಿ, ಏರ್‌ಲೈನ್ಸ್ ಸ್ಥಾಪನೆಯ ಹಗಲುಗನಸಿನಿಂದ ಹಿಂದೆ ಸರಿಯುವುದು ಎಲ್ಲ ಕೋನದಿಂದಲೂ ಒಳಿತು.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....