ಈ ದಿನ ಸಂಪಾದಕೀಯ | ಕೇಜ್ರೀವಾಲ್ ಖುಲಾಸೆ, ಒಂದೊಂದಾಗಿ ಕುಸಿಯುತ್ತಿರುವ ಬಿಜೆಪಿ ಹುನ್ನಾರಗಳು

Date:

ವರ್ಷಗಳ ಹಿಂದೆ ಯಾವ ‘ನೈತಿಕ’ ನೆಲೆಗಟ್ಟನ್ನು ಮೋಶಾ ಜೋಡಿ ಕೇಜ್ರೀವಾಲ್ ಕಾಲ ಬುಡದಿಂದ ಕಿತ್ತುಕೊಳ್ಳಲಾಗಿತ್ತೋ, ಆ ನೈತಿಕ ನೆಲೆಗಟ್ಟನ್ನು ಆಮ್ ಆದ್ಮೀ ಪಾರ್ಟಿ ಆಂಶಿಕವಾಗಿಯಾದರೂ ಮರಳಿ ಗಳಿಸಿದೆ. ಭ್ರಷ್ಟಾಚಾರದ ಬಡಿಗೆಯನ್ನೇ ಬೀಸಿ ಕೆಡವಬೇಕೆಂಬುದು ಬಿಜೆಪಿ ರಣತಂತ್ರ. ಈ ಕಟ್ಟಕಡೆಯ ಹತಾರಿನ ಬೇಷರತ್ ಬಳಕೆಗೆ ನೈತಿಕ-ಅನೈತಿಕ, ನ್ಯಾಯ-ಅನ್ಯಾಯದ ಪರಿವೆಗಳು ಇರಲಿಲ್ಲ. ಎದ್ದರೆ ಕುಳಿತರೆ ಭ್ರಷ್ಟಾಚಾರದ ಆಪಾದನೆಗಳನ್ನು ಸುತ್ತಿ ಎಸೆಯಲಾಯಿತು.

ಆಮ್ ಆದ್ಮೀ ಪಕ್ಷದ ಇಬ್ಬರು ಹಿರಿಯ ಹುದ್ದರಿಗಳು ಭಾರೀ ಭ್ರಷ್ಟಾಚಾರದ ಆರೋಪದಿಂದ ಖುಲಾಸೆಯಾಗಿದ್ದಾರೆ. ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ವಿರುದ್ಧ ಹೂಡಲಾಗಿದ್ದ ಅಕ್ರಮ ಹಣ ವರ್ಗಾವಣೆಯ ಮೊಕದ್ದಮೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದು ಕೂಡ ಇತ್ತೀಚಿನ ವಿದ್ಯಮಾನ. ಹರಿಯಾಣದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಭೂಪಿಂದರ್ ಹುಡ್ಡಾ ಅವರ ವಿರುದ್ಧ ಹೂಡಿದ್ದ ಮತ್ತೊಂದು ಮೊಕದ್ದಮೆಯನ್ನು ಪಂಜಾಬ್-ಹರಿಯಾಣ ಹೈಕೋರ್ಟು ಇತ್ತೀಚೆಗಷ್ಟೇ ರದ್ದು ಮಾಡಿತ್ತು.

ಕೇಜ್ರೀವಾಲ್ ಸಂಪುಟದ ಮಂತ್ರಿಯಾಗಿದ್ದ ಸತ್ಯೇಂದರ್ ಜೈನ್ ಅವರನ್ನು ಕೂಡ ಹುಸಿ ಕೇಸಿನಲ್ಲಿ ಇರುಕಿಸಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಜಾಮೀನು- ವಿಚಾರಣೆ ಎರಡೂ ಇಲ್ಲದೆ ಕೊಳೆಯಿಸಲಾಯಿತು. 2025ರ ಆಗಸ್ಟ್ ನಲ್ಲಿ ದೋಷಮುಕ್ತರಾಗಿ ಹೊರಬಿದ್ದರು. ನಾಲ್ಕು ವರ್ಷಗಳ ತನಿಖೆಯ ನಂತರ ತಾನು ಹೂಡಿದ್ದ ಕೇಸಿನಲ್ಲಿ ಸಾಕ್ಷ್ಯಗಳಿಲ್ಲವೆಂದು ಸಿಬಿಐ ಮುಗಿತಾಯದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದೆಹಲಿಯ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರೀವಾಲ್ ಮತ್ತು ಉಪಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯ ಅವರೊಂದಿಗೆ ಇತರೆ 21 ಮಂದಿ ಆಪಾದಿತರನ್ನು ದೆಹಲಿಯ ನ್ಯಾಯಾಲಯ ದೋಷಮುಕ್ತರೆಂದು ಸಾರಿದೆ. ಅಬಕಾರಿ ನೀತಿಗೆ ಸಂಬಂಧ ಇವರ ಮೇಲೆ ಹೂಡಲಾಗಿರುವ ಮೊಕದ್ದಮೆಗಳು ನಿರಾಧಾರ ಎಂದು ತೀರ್ಪು ನೀಡಿದೆ. ಸಾಕ್ಷ್ಯಗಳೇ ಇಲ್ಲವೆಂದು ಹೇಳಿದೆ.

ವರ್ಷಗಳ ಹಿಂದೆ ಯಾವ ‘ನೈತಿಕ’ ನೆಲೆಗಟ್ಟನ್ನು ಮೋಶಾ ಜೋಡಿ ಕೇಜ್ರೀವಾಲ್ ಕಾಲ ಬುಡದಿಂದ ಕಿತ್ತುಕೊಳ್ಳಲಾಗಿತ್ತೋ, ಆ ನೈತಿಕ ನೆಲೆಗಟ್ಟನ್ನು ಆಮ್ ಆದ್ಮೀ ಪಾರ್ಟಿ ಆಂಶಿಕವಾಗಿಯಾದರೂ ಮರಳಿ ಗಳಿಸಿದೆ. ಕಳೆದುಕೊಂಡಿದ್ದ ನೈತಿಕ ಭೂಮಿಕೆ ಮರಳಿ ಕೈವಶವಾದ ಸಂತಸದಲ್ಲಿದ್ದಾರೆ ಕೇಜ್ರೀವಾಲ್. ತಮ್ಮ ವಿರುದ್ಧ ಹೂಡಲಾಗಿದ್ದ ಈ ಮೊಕದ್ದಮೆಯು ಸ್ವತಂತ್ರ ಭಾರತದ ಬಹುದೊಡ್ಡ ಒಳಸಂಚು ಎಂದು ಬಣ್ಣಿಸಿ ಕಣ್ಣೀರಾಗಿದ್ದಾರೆ.

ಭ್ರಷ್ಟಾಚಾರ ಮೈತಳೆದರೆ ಹೇಗಿರುತ್ತದೆಂದರೆ ಅರವಿಂದ್ ಕೇಜ್ರೀವಾಲ್ ಅವರಂತೆ ಇರುತ್ತದೆ ಎಂದು ಮೋದಿ-ಶಾ ಅವರ ಬಿಜೆಪಿ ಪ್ರಚಾರದ ಪ್ರವಾಹವನ್ನೇ ಹರಿಸಿತ್ತು. ಅದು ಎರಡು ವರ್ಷಗಳ ಹಿಂದಿನ ಕತೆ. ಅರ್ಧಂಬರ್ಧ ರಾಜ್ಯವಾದ ದೆಹಲಿ ವಿಧಾನಸಭೆಗೆ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಕೇಜ್ರೀವಾಲ್ ಅವರ ಆಮ್ ಅದ್ಮೀ ಪಾರ್ಟಿ ಸೋತಿತು. 70ರಲ್ಲಿ 22 ಸೀಟುಗಳು ದಕ್ಕಿದ್ದವು. 70ರಲ್ಲಿ 48 ಸ್ಥಾನ ಗೆದ್ದು ಬಿಜೆಪಿ ಸರ್ಕಾರ ರಚಿಸಿತು. ದೇಶವನ್ನೇ ಗೆದ್ದರೂ, ಮೂಗಿನ ಕೆಳಗಿನ ದೆಹಲಿ ಕೈಗೆ ಸಿಗದಿದ್ದ ಹತಾಶೆ ಮೋಶಾ ಅವರನ್ನು ಬಹುಕಾಲದಿಂದ ಕಾಡಿತ್ತು.

2014ರಲ್ಲಿ ಅಧಿಕಾರ ಹಿಡಿದು 10 ವರ್ಷಗಳಾದರೂ ದೆಹಲಿ ದಕ್ಕಲಿಲ್ಲವೆಂಬ ಕುದಿ, ಬಿಜೆಪಿ ನೇತೃತ್ವವನ್ನು ಕುರುಡು ಮಾಡಿತ್ತು. ಭ್ರಷ್ಟಾಚಾರದ ವಿರುದ್ಧ ಆಂದೋಲನದ ಅಲೆಯ ಮೇಲೆ ತೇಲಿ ಬಂದು ಅಧಿಕಾರ ಹಿಡಿದಿದ್ದ ಪಕ್ಷ, ಆಮ್ ಆದ್ಮಿ ಪಕ್ಷ. ಅದೇ ಭ್ರಷ್ಟಾಚಾರದ ಬಡಿಗೆಯನ್ನೇ ಬೀಸಿ ಕೆಡವಬೇಕೆಂಬುದು ಬಿಜೆಪಿ ರಣತಂತ್ರ. ಈ ಕಟ್ಟಕಡೆಯ ಹತಾರಿನ ಬೇಷರತ್ ಬಳಕೆಗೆ ನೈತಿಕ-ಅನೈತಿಕ, ನ್ಯಾಯ-ಅನ್ಯಾಯದ ಪರಿವೆಗಳು ಇರಲಿಲ್ಲ. ಎದ್ದರೆ ಕುಳಿತರೆ ಭ್ರಷ್ಟಾಚಾರದ ಆಪಾದನೆಗಳನ್ನು ಸುತ್ತಿ ಎಸೆಯಲಾಯಿತು. ಶಾಲಾ ಕಟ್ಟಡಗಳು, ಆಸ್ಪತ್ರೆಗಳು, ನೀರು ಸರಬರಾಜು, ವಿದ್ಯುತ್ ಪೂರೈಕೆಯಲ್ಲಿ ಹಗರಣಗಳು ನಡೆದಿವೆಯೆಂದು ಆಪಾದನೆಗಳನ್ನು ಹೊರಿಸಿ ಅವುಗಳಿಗೆ ಅಬ್ಬರದ ಪ್ರಚಾರವನ್ನೂ ನೀಡಲಾಯಿತು. ಗೋದೀ ಮೀಡಿಯಾ, ಮೋದಿಯವರ ಇಷಾರೆಗಳಿಗೆ ತಾಳ ಹಾಕಿತ್ತು.

ನಿತ್ಯ ಕಾಲು ಕೆದರಿ ಜಗಳ ಕಾಯುವ, ಚುನಾಯಿತ ಸರ್ಕಾರದ ಅಧಿಕಾರ ವ್ಯಾಪ್ತಿಯನ್ನೇ ಪ್ರಶ್ನಿಸುವ ಕದನಕುತೂಹಲಿ ಉಪರಾಜ್ಯಪಾಲರೊಬ್ಬರನ್ನು ಕೇಜ್ರೀವಾಲ್ ತಲೆಯ ಮೇಲೆ ಕೂರಿಸಲಾಯಿತು. ಹುಸಿ ಕದನಗಳಲ್ಲಿ ಆಪ್ ನ ಕೈಕಾಲುಗಳನ್ನು ಕಟ್ಟಿ ಹಾಕಲಾಯಿತು. ಸರ್ಕಾರಿ ಬಂಗಲೆ, ಸರ್ಕಾರಿ ವಾಹನ, ಕೆಂಪುದೀಪದ ಸೌಲಭ್ಯಗಳನ್ನು ನಿರಾಕರಿಸಿದ್ದ ಕೇಜ್ರೀವಾಲ್ ಪಕ್ಷ, ಆನಂತರ ಅವುಗಳಿಂದ ದೂರ ಉಳಿಯದೆ ಹೋಯಿತು. ಕೇಜ್ರೀವಾಲ್ ಖುದ್ದು ಸರ್ಕಾರಿ ನಿವಾಸ ಒಪ್ಪಿಕೊಂಡರು. ಸಾಲದೆಂಬಂತೆ ಹೊಸದೊಂದು ದೊಡ್ಡ ಬಂಗಲೆಯನ್ನು ಸಜ್ಜುಗೊಳಿಸಿಕೊಂಡರು. ಶೀಷ್ ಮಹಲ್ ಎಂಬ ಹೆಸರಿನ ಈ ಬಂಗಲೆಯ ವಿಲಾಸಿ ಸೌಲಭ್ಯಗಳ ಕುರಿತು ಬಿಜೆಪಿ ಬಹುದೊಡ್ಡ ಪ್ರಚಾರ ನಡೆಸಿತು.

ಈ ಹಂಚಿಕೆ-ಹುನ್ನಾರಗಳ ಪೈಕಿ ಕಡೆಗೂ ಬಲವಾಗಿ ಕಚ್ಚಿಕೊಂಡದ್ದು ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರದ ಆಪಾದನೆ. ಹಗರಣ- ಅಕ್ರಮ ಹಣ ವರ್ಗಾವಣೆ ಮೊಕದ್ದಮೆಗಳ ಅಡಕತ್ತರಿಯಲ್ಲಿ ಪೊರಕೆ ಪಕ್ಷವನ್ನು ಇರುಕಿಸಲಾಯಿತು. ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಸಿಬಿಐ ಎರಡೂ ಮುಗಿಬಿದ್ದವು. ಉಪಮುಖ್ಯಮಂತ್ರಿ ಸಿಸೋಡಿಯಾ ಒಂದೂವರೆ ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದರು. ಕೇಜ್ರೀವಾಲ್ ಗೆ ಐದು ತಿಂಗಳ ಸೆರೆವಾಸದ ನಂತರ ಜಾಮೀನು ದೊರೆಯಿತು. ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾಗಲೇ ಬಂಧನಕ್ಕೊಳಗಾದ ಮೊದಲಿಗರೆನಿಸಿದರು ಕೇಜ್ರೀವಾಲ್.

ಇಂಡಿಯಾ ಒಕ್ಕೂಟದಲ್ಲಿ ಕಾಂಗ್ರೆಸ್ ಪಕ್ಷದ ವಿನಾ ಉಳಿದೆಲ್ಲ ಘಟಕ ಪಕ್ಷಗಳು ಕೇಜ್ರೀವಾಲ್ ಖುಲಾಸೆಯನ್ನು ಸ್ವಾಗತಿಸಿವೆ. ಪ್ರತಿಪಕ್ಷಗಳ ನಡುವಣ ಒಡಕಿಗೂ ಕನ್ನಡಿ ಹಿಡಿದಿರುವ ವಿದ್ಯಮಾನವಿದು.

ದೆಹಲಿಯನ್ನು ಬಿಟ್ಟರೆ ಆಮ್ ಆದ್ಮೀ ಪಾರ್ಟಿ ಬಹುಮತ ಪಡೆದು ಸರ್ಕಾರ ರಚಿಸಿದ್ದು ಪಂಜಾಬಿನಲ್ಲಿ. ಪಂಜಾಬ್ ಇದೀಗ ಮತ್ತೊಂದು ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿದೆ. ಪುಟ್ಟ ರಾಜ್ಯ ಗೋವಾದ ಮೇಲೆಯೂ ಕಣ್ಣಿಟ್ಟಿರುವ ಪಕ್ಷವಿದು. ಈ ಸಂದರ್ಭಕ್ಕೆ ಸರಿಯಾಗಿ ಕೇಜ್ರೀವಾಲ್ ಖುಲಾಸೆಯಾಗಿದೆ. ದೆಹಲಿ ಚುನಾವಣೆ ಸೋಲಿನ ನಂತರ ಅಜ್ಞಾತವಾಸಿಯೇ ಆಗಿದ್ದರು ಕೇಜ್ರೀವಾಲ್. ಇದೀಗ ಪುನಃ ಪ್ರಚಾರದ ಮುಂಬೆಳಕಿಗೆ ಬರುತ್ತಾರೆಯೇ ಅಥವಾ ತೆರೆಮರೆಯಲ್ಲೇ ಉಳಿದು ಭಿನ್ನ ರಣತಂತ್ರ ಹೆಣೆಯುತ್ತಾರೆಯೇ ಎಂಬುದು ಕಾಲದ ತೀರ್ಮಾನಕ್ಕೆ ಬಿಟ್ಟ ವಿಚಾರ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....