ಈ ದಿನ ಸಂಪಾದಕೀಯ | ಮಾದಕ ವಸ್ತು ಉತ್ಪಾದನೆಗಿಳಿದ ಹೊರರಾಜ್ಯ ಮಾಫಿಯಾ ಗ್ಯಾಂಗ್‌; ಕರ್ನಾಟಕದ ಕಳಂಕ!

Date:

ದೇಶದ ಐಟಿ ರಾಜಧಾನಿಯನ್ನು ಮಹಾರಾಷ್ಟ್ರ, ರಾಜಸ್ಥಾನದ ಮಾಫಿಯಾ ಗ್ಯಾಂಗ್‌ ಡ್ರಗ್ಸ್‌ ಉತ್ಪಾದನೆಯ ಸುರಕ್ಷಿತ ತಾಣವನ್ನಾಗಿ ಮಾಡಿಕೊಂಡಿದ್ದು ಹೇಗೆ? ಕರ್ನಾಟಕ ಪೊಲೀಸರು ಇದಕ್ಕೆ ಉತ್ತರಿಸಬೇಕಿದೆ. ಇದರಲ್ಲಿ ಗೃಹ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ.

2025 ವರ್ಷಾಂತ್ಯದ ವೇಳೆಗೆ ಕರ್ನಾಟಕ ಕಳಂಕವೊಂದನ್ನು ಹೊತ್ತುಕೊಂಡಿದೆ. ಮಹಾರಾಷ್ಟ್ರದಲ್ಲಿ ಡ್ರಗ್ಸ್‌ ಪೆಡ್ಲರ್‌ ಗಳ ವಿಚಾರಣೆ ನಡೆಸುವಾಗ ಜಾಲದ ಬೆರಳುಗಳು ನೇರವಾಗಿ ಮೈಸೂರಿಗೆ ನೆಟ್ಟಿತ್ತು. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಗೆ ಮೊದಲ ಕಳಂಕ ಅಂಟಿತ್ತು. ಮಹಾರಾಷ್ಟ್ರ ಪೊಲೀಸರು ಮೈಸೂರು ಹೊರವಲಯದ ರಿಂಗ್ ರಸ್ತೆಯ ಬಳಿ ಇದ್ದ ಡ್ರಗ್ಸ್ ತಯಾರಕಾ ಘಟಕದ ಮೇಲೆ ದಿಢೀರ್ ದಾಳಿ ನಡೆಸಿದ್ದರು. ಈ ವೇಳೆ ‘ಎಕ್ಸ್ಟೆಸಿ’ ಎಂದು ಕರೆಯಲಾಗುವ ಕೋಟ್ಯಂತರ ಬೆಲೆಯ ಎಂಡಿಎಂಎ (Methylenedioxymethamphetamine) ಮಾದಕದ್ರವ್ಯವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇಲ್ಲಿಂದ ದೇಶ, ವಿದೇಶಕ್ಕೆ ಡ್ರಗ್ಸ್ ಪೂರೈಕೆ ಆಗುತ್ತಿತ್ತು. ಅದಾದ ನಂತರ ಮಹಾರಾಷ್ಟ್ರ ಮಾದಕ ವಸ್ತು ನಿಗ್ರಹ ಕಾರ್ಯಪಡೆ (ಎಎನ್‌ಟಿಎಎಫ್) ಕೊತ್ತನೂರು ಠಾಣೆ, ಬಾಗಲೂರು ಹಾಗೂ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿದ್ದಾರೆ. ಒಟ್ಟು 55.88 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ. ರಾಜಸ್ಥಾನ ಮೂಲದ ಉದ್ಯಮಿಗಳಾದ ಯೋಗಿರಾಜ್ ಕುಮಾರ್, ನಯನ್ ಪವಾರ್ ಮತ್ತಿತರರು  ಬೆಂಗಳೂರಿನಲ್ಲಿ ಡ್ರಗ್ಸ್ ತಯಾರಕಾ ಘಟಕ ನಡೆಸುತ್ತಿದ್ದರು. ಆರ್ ಜೆ ಇವೆಂಟ್ ಹೆಸರಿನಲ್ಲಿ ಡ್ರಗ್ಸ್ ಕಾರ್ಖಾನೆ ಪತ್ತೆಯಾಗಿದೆ. ದಾಳಿಯ ಸಂದರ್ಭದಲ್ಲಿ 4.1 ಕೆಜಿ ಘನರೂಪದ ಎಂಡಿಎಂಎ ಮತ್ತು 17 ಕೆಜಿ ದ್ರವರೂಪದ ಎಂಡಿಎಂಎ ಸೇರಿದಂತೆ ಒಟ್ಟು 21.4 ಕೆಜಿ ಡ್ರಗ್ಸ್ ವಶಕ್ಕೆ ಪಡೆದಿದ್ದರು.

ದೇಶದ ಐಟಿ ರಾಜಧಾನಿಯನ್ನು ಮಹಾರಾಷ್ಟ್ರ, ರಾಜಸ್ಥಾನದ ಮಾಫಿಯಾ ಗ್ಯಾಂಗ್‌ ಡ್ರಗ್ಸ್‌ ಉತ್ಪಾದನೆಯ ಸುರಕ್ಷಿತ ತಾಣವನ್ನಾಗಿ ಮಾಡಿಕೊಂಡಿದ್ದು ಹೇಗೆ? ಕರ್ನಾಟಕ ಪೊಲೀಸರು ಇದಕ್ಕೆ ಉತ್ತರಿಸಬೇಕಿದೆ. ಇದರಲ್ಲಿ ಗೃಹ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ.  

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬೆಂಗಳೂರು ಮಹಾನಗರ ಬಹುರಾಷ್ಟ್ರೀಯ ಕಂಪನಿಗಳ ತಾಣ. ದೇಶದ ನಾನಾ ಭಾಗಗಳ ಜನರು ಉದ್ಯೋಗ ಅರಸಿ ಬಂದು ಇಲ್ಲೇ ಮನೆ ಮಾಡಿಕೊಂಡು ವಾಸವಿದ್ದಾರೆ. ಬಂದು ಹೋಗುವ ಮಂದಿಯದ್ದು ಲೆಕ್ಕವೇ ಇಲ್ಲ. ಬೆಂಗಳೂರು ಮಹಾನಗರದ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ವಿದೇಶಿ ಪ್ರಜೆಗಳು ನೆಲೆಸಿದ್ದಾರೆ. ಮಾದಕ ವಸ್ತು ಸಾಗಾಟ ಮಾಡುವಾಗ ಸಿಕ್ಕಿ ಹಾಕಿಕೊಳ್ಳುವ ಬಹುತೇಕರು ವಿದೇಶಿಗರು. ನೈಜೀರಿಯಾ, ಆಫ್ರಿಕದ ಪ್ರಜೆಗಳು ಬೆಂಗಳೂರಿನ ರಸ್ತೆಗಳಲ್ಲಿ ಮಾದಕ ವಸ್ತು ಸೇವನೆ ಮಾಡಿ ಗಲಾಟೆ ಮಾಡಿಕೊಳ್ಳುವ ಘಟನೆಗಳು ಆಗಾಗ ಸುದ್ದಿಯಾಗುತ್ತಿವೆ. ಪ್ರತಿಷ್ಠಿತರ ಪಾರ್ಟಿಗಳಲ್ಲಿ ಡ್ರಗ್ಸ್‌ ಸೇವನೆ ಎಲ್ಲರಿಗೂ ಗೊತ್ತಿರುವ ಸಂಗತಿ. ಬಹುತೇಕ ಸಿನಿಮಾ ರಂಗದವರು, ಉದ್ಯಮಿಗಳು, ಹಣವಂತರು ಸೇರಿ ಮಾಡುವ ವೀಕೆಂಡ್‌ ರೇವ್‌ ಪಾರ್ಟಿಗಳಲ್ಲಿ ಎಗ್ಗಿಲ್ಲದೇ ಡ್ರಗ್ಸ್‌ ವಿತರಿಸಲಾಗುತ್ತದೆ. ಇವೆಲ್ಲ ದಶಕಗಳಿಂದ ನಡೆಯುತ್ತಿರುವ ವ್ಯವಹಾರ. ಆಗಾಗ ಪೊಲೀಸರು ದಾಳಿ ನಡೆಸಿ ಸುದ್ದಿ ಕೊಡುತ್ತಾರೆ ಅಷ್ಟೇ. ಆ ನಂತರ ಏನಾಯಿತು ಎಂಬುದು ಯಾರಿಗೂ ಗೊತ್ತಿಲ್ಲ. ಮಾದಕ ವಸ್ತು ಸಾಗಿಸುವಾಗ, ಸೇವನೆ ಮಾಡುವಾಗ ಸಿಕ್ಕಿ ಹಾಕಿಕೊಂಡ ಸುದ್ದಿಗಳು ಮಾಮೂಲಿಯಾಗಿತ್ತು. ಆದರೆ, ನಮ್ಮ ರಾಜ್ಯದಲ್ಲಿಯೇ ಉತ್ಪಾದನೆ ಮಾಡಿ ವಿದೇಶಕ್ಕೆ ಸಾಗಿಸಲಾಗುತ್ತಿದೆ ಎಂಬ ಸುದ್ದಿ ಮಾತ್ರ ಕರ್ನಾಟಕದ ಪಾಲಿಗೆ ಅಳಿಸಲಾಗದ ಕಪ್ಪು ಚುಕ್ಕೆ. ಮಹಾರಾಷ್ಟ್ರ ಪೊಲೀಸರು ಈ ಜಾಡನ್ನು ಭೇದಿಸಿರುವುದು ಕರ್ನಾಟಕ ಪೊಲೀಸರ ನೈತಿಕತೆ ಮತ್ತು ಕಾರ್ಯದಕ್ಷತೆಯ ಬಗ್ಗೆ ಅನುಮಾನ ಹುಟ್ಟು ಹಾಕಿದೆ. ಸ್ಥಳೀಯ ಪೊಲೀಸರ ಅರಿವಿಗೆ ಬಾರದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾದಕದ್ರವ್ಯಗಳ ತಯಾರಿಕೆ ಸಾಧ್ಯವೇ ಇಲ್ಲ.  ಬೆಂಗಳೂರಿನ ಕೊತ್ತನೂರು, ಬಾಗಲೂರು ಹಾಗೂ ಅವಲಹಳ್ಳಿ ಪೊಲೀಸ್ ಠಾಣಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇನ್ನೂ ಎಲ್ಲೆಲ್ಲ ಇಂತಹ ದಂಧೆಯ ಕೇಂದ್ರಗಳಿವೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿ ಇಡೀ ಮಾಫಿಯಾವನ್ನು ಬೇರು ಸಹಿತ ಬಲಿ ಹಾಕಬೇಕಿದೆ. ಮೈಸೂರಿನಲ್ಲಿ ‘ಗ್ಯಾರೇಜ್‌’ ಎಂದು ಹೊರಗೆ ಬೋರ್ಡ್‌ ತಗುಲಿ ಹಾಕಿ ಒಳಗೆ ಡ್ರಗ್ಸ್‌ ತಯಾರಿಸಲಾಗುತ್ತಿತ್ತು. ಅಲ್ಲೇನು ನಡೆಯುತ್ತಿದೆ ಎಂಬ ಬಗ್ಗೆ ಪೊಲೀಸರಿಗೂ, ಸ್ಥಳೀಯರಿಗೂ ಅನುಮಾನ ಬರದಿರುವುದು ಸೋಜಿಗದ ಸಂಗತಿ.

ಯುವಸಮೂಹ, ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್‌ ಗೆ ಬಲಿಯಾಗುತ್ತಿರುವುದು ಬಹುದೊಡ್ಡ ಸಾಮಾಜಿಕ ದುರಂತ ಮಾತ್ರವಲ್ಲದೆ, ಕಾನೂನು ಸುವ್ಯವಸ್ಥೆಗೆ ತಗುಲಿದ ಕಳಂಕ ಎಂದು ನಮ್ಮ ಸರ್ಕಾರಗಳು, ವ್ಯವಸ್ಥೆ ಇನ್ನೂ ಅರ್ಥ ಮಾಡಿಕೊಂಡಂತಿಲ್ಲ. ಮಕ್ಕಳಿಗೆ ಡ್ರಗ್ಸ್‌ ಚಟ ಹತ್ತಿಸುವುದು, ನಂತರ ಅವರನ್ನೇ ಪೆಡ್ಲರ್‌ಗಳ ರೀತಿಯಲ್ಲಿ ಬಳಸಿಕೊಳ್ಳುವುದು, ಕೇಕ್‌, ಜ್ಯೂಸ್‌ಗಳಲ್ಲಿ, ಐಸ್ ಕ್ರೀಮ್ ಗಳಲ್ಲಿ ಮಾದಕ ವಸ್ತು ಬೆರೆಸಿ ಅಮಾಯಕ ಮಕ್ಕಳನ್ನು, ಯುವ ಸಮುದಾಯವನ್ನು ಅಪಾಯಕಾರಿ ಮಾದಕ ವ್ಯಸನಕ್ಕೆ ದೂಡಲಾಗುತ್ತಿದೆ. ಇದೊಂದು ಸಾಮಾಜಿಕ ಪಿಡುಗು ಎಂದು ಸರ್ಕಾರ ವರ್ಷಕ್ಕೊಮ್ಮೆ ಮಾದಕ ವಸ್ತು ವಿರುದ್ಧ ಅಭಿಯಾನ ನಡೆಸಿ ಕೈ ತೊಳೆದುಕೊಂಡು ಪುನಃ ಗಾಢ ನಿದ್ದೆಗೆ ಜಾರುತ್ತಿದೆ. ಜಾಗೃತಿ ಕಾರ್ಯಕ್ರಮಗಳು ಯಾಂತ್ರಿಕವಾಗಿ ನಡೆಯುತ್ತಿದೆ. ಕಾನೂನು ಬಾಹಿರ ಕೃತ್ಯಗಳಲ್ಲಿ, ದಂಧೆಗಳಲ್ಲಿ ಭಾಗಿಯಾದವರ ಹೆಡೆಮುರಿ ಕಟ್ಟಬೇಕಿರುವ ಪೊಲೀಸರೇ ಡ್ರಗ್ಸ್‌ ಮಾಫಿಯಾ ಜೊತೆಗೆ ಕೈ ಜೋಡಿಸಿದ್ದಾರೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದರೆ ಅಚ್ಚರಿಯಿಲ್ಲ.

ಪೊಲೀಸರ ‘ಕಣ್ತಪ್ಪಿಸಿ’ ಇಷ್ಟೊಂದು ರಾಜಾರೋಷವಾಗಿ ಮಾದಕ ವಸ್ತು ಉತ್ಪಾದನೆಗಿಳಿದ ಭಂಡ ಧೈರ್ಯದ ಹಿಂದೆ ಯಾವ್ಯಾವ ಭಾರೀ ತಿಮಿಂಗಿಲಗಳಿವೆ ಎಂಬುದು ತನಿಖೆಯಾಗಬೇಕಿದೆ. ರಾಜಕಾರಣಿಗಳೇ, ಅಧಿಕಾರಿಗಳೇ, ಪೊಲೀಸರೇ ಯಾರು ಈ ದುಷ್ಟರ ಕೂಟಕ್ಕೆ ಬೆನ್ನೆಲುಬಾಗಿದ್ದಾರೆ ಎಂಬುದು ಪತ್ತೆಯಾದರೆ ಮಾಫಿಯಾದ ಬೇರುಗಳನ್ನು ಕಿತ್ತೆಸೆಯಲು ಸಾಧ್ಯ. ಪೊಲೀಸರು ಆ ಕೆಲಸ ಮಾಡುವರೇ? ಭಾವೀ ಜನಾಂಗವನ್ನು ಮಾದಕದ್ರವ್ಯ ವ್ಯಸನದ ‘ಜೀವಂತ ಮರಣ’ದ ಕತ್ತಲ ಕೂಪಕ್ಕೆ ತಳ್ಳಿ ಸೊಕ್ಕಿರುವ ಈ ಬೆಕ್ಕುಗಳಿಗೆ ಗಂಟೆ ಕಟ್ಟುವ ದಿಟ್ಟತನವನ್ನು ಸಿದ್ದರಾಮಯ್ಯ ಸರ್ಕಾರ ತೋರುವುದೇ, ಇಲ್ಲವೇ ಕೈ ಕಟ್ಟಿ ಬಾಯಿ ಮುಚ್ಚಿ ಕುಳಿತುಕೊಳ್ಳುವುದೇ?

ಬೆಂಗಳೂರು ನಗರದಲ್ಲಿ 2024ರಲ್ಲಿ ಎನ್ ಡಿ ಪಿ ಎಸ್ ಕಾಯ್ದೆ ಅಡಿಯಲ್ಲಿ 520 ಪ್ರಕರಣಗಳು ದಾಖಲಾಗಿವೆ. 2025ರಲ್ಲಿ ಗಾಂಜಾ ಮತ್ತು ಸಿಂಥೆಟಿಕ್ ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 1099 ಪ್ರಕರಣ ದಾಖಲಾಗಿದೆ. ಅಂದ್ರೆ ಒಂದು ವರ್ಷದಲ್ಲಿ ಪ್ರಕರಣಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಹಾಗಿದ್ದರೆ ಪೊಲೀಸರು, ಕಾನೂನಿನ ಭಯ ಇಲ್ಲ ಎಂಬುದು ಸ್ಪಷ್ಟ. ಡ್ರಗ್ಸ್‌ ಜಾಲಕ್ಕೆ ಬಿದ್ದು ಅನೇಕ ಯುವಕರು, ಯುವತಿಯರು ತಮ್ಮ ಬದುಕನ್ನೇ ಅಂತ್ಯಗೊಳಿಸಿಕೊಂಡಿದ್ದಾರೆ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಮಾದಕ ವಸ್ತು ಸುಲಭದಲ್ಲಿ ಯುವಜನರ ಕೈಗೆ ಸಿಗದಂತೆ ಮಾಡುವುದು ಮೊದಲ ಆದ್ಯತೆಯಾಗಬೇಕಿತ್ತು. ಈಗ ನೋಡಿದರೆ ನಮ್ಮ ರಾಜ್ಯದಲ್ಲಿಯೇ ಉತ್ಪಾದನೆಯೂ ಆಗುತ್ತಿದೆ. ಇಂತಹ ಅದೆಷ್ಟು ಜಾಗಗಳಿವೆಯೋ ಗೊತ್ತಿಲ್ಲ.

ಇತ್ತೀಚೆಗೆ ನಡೆದ ವಿಧಾನಮಂಡಲದ ಬೆಳಗಾವಿ ಅಧಿವೇಶನದಲ್ಲಿ ಗೃಹಸಚಿವ ಡಾ.ಜಿ. ಪರಮೇಶ್ವರ ಅವರು ಮಾದಕ ವಸ್ತುಗಳ ಮಾರಾಟದ ವಿರುದ್ಧ ಅತ್ಯಂತ ಕಠಿಣ ಕ್ರಮದ ಮಾತಾಡಿದ್ದರು. ‘ಮಾದಕ ವಸ್ತುಗಳ ಮಾರಾಟ ಮಾಡುವವರ ಮನೆಗಳ ಮೇಲೆ ಬುಲ್ಡೋಜರ್‌ ಹತ್ತಿಸಿ ಅವುಗಳನ್ನು ಕೆಡವಲು ಸಿದ್ದವಿದೆ. ಇಂತಹ ಕೃತ್ಯಗಳಲ್ಲಿ ಪೊಲೀಸರು ಭಾಗಿಯಾಗಿರುವುದು ಕಂಡುಬಂದರೆ, ಸರ್ಕಾರ ಅವರನ್ನು ಸೇವೆಯಿಂದ ವಜಾಗೊಳಿಸುವುದಲ್ಲದೆ, ಅವರ ಮೇಲೆ ಆರೋಪ ಹೊರಿಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದೆಲ್ಲ ಹೇಳಿದ್ದರು. 

‘ಬಹಳಷ್ಟು ವಿದೇಶಿ ಪ್ರಜೆಗಳು, ಅವರಲ್ಲಿ ಹಲವರು ಆಫ್ರಿಕನ್ ದೇಶಗಳಿಂದ ಬಂದವರು, ಮಾದಕ ವಸ್ತು ಕಳ್ಳಸಾಗಣೆ ಮತ್ತು ಮಾರಾಟದಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರು ಅದನ್ನು ಹೇಗೆ ತರುತ್ತಾರೆ ಅಥವಾ ಪೂರೈಸುತ್ತಾರೆ ಎಂಬುದು ನಮಗೆ ತಿಳಿದಿಲ್ಲ. ನಾವು ಅವರ ಚಲನವಲನಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಈ ಜನರಿಗೆ ಮನೆಗಳನ್ನು ಬಾಡಿಗೆಗೆ ನೀಡಿರುವ ಮನೆ ಮಾಲೀಕರನ್ನು ಸಹ ಗುರುತಿಸಿದ್ದೇವೆ. ಮಾದಕ ವಸ್ತು ಮಾರಾಟಗಾರರು ಬಾಡಿಗೆಗೆ ವಾಸಿಸುವ ಮನೆಗಳನ್ನು ಸಹ ನಾವು ಕೆಡವಲು ಸಿದ್ಧರಿದ್ದೇವೆ’ ಎಂದು ಸಾರಿ ಹೇಳಿದ್ದರು. 

ಆದರೆ, ವಿದೇಶೀ ಪ್ರಜೆಗಳ ಮೇಲೆ ಮಾತ್ರವೇ ದೋಷ ಹೊರಿಸಿ ಪಾರಾಗುವ ಪರಿಸ್ಥಿತಿಯಿಲ್ಲವೆಂದು ಮಹಾರಾಷ್ಟ್ರದ ಪೊಲೀಸ್ ಕಾರ್ಯಾಚರಣೆ ತೋರಿಸಿಕೊಟ್ಟಿದೆ. ರಾಜಸ್ಥಾನಿ ಮೂಲದ ‘ಉದ್ಯಮಿ’ಗಳು ಡ್ರಗ್ಸ್ ಉತ್ಪಾದನೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ. ಬುಲ್ಡೋಜರ್ ಕಾರ್ಯಾಚರಣೆ ಕಾನೂನುಬಾಹಿರ ಕ್ರಮದ ಮಾತಾಡಿ ದೇಶಾದ್ಯಂತ ವಿವಾದಕ್ಕೆ ಸಿಲುಕಿದ್ದರು ಡಾ.ಪರಮೇಶ್ವರ. ಡ್ರಗ್ಸ್ ಮಾರಾಟ ಬಿಡಿ, ಡ್ರಗ್ಸ್ ತಯಾರಿಕೆಯಂತಹ ಮನೆಮುರುಕ ಕೆಲಸಕ್ಕೆ ಕೈ ಹಾಕಿರುವವರು ಮತ್ತು ಅವರ ಕುರಿತು ಕುರುಡುಗಣ್ಣು ಹರಿಸಿರುವ ಪೊಲೀಸರ ವಿರುದ್ಧ ಯಾವ ಕಠಿಣ ಕ್ರಮ ಕೈಗೊಂಡಿದ್ದಾರೆಂದು ರಾಜ್ಯದ ಪ್ರಜೆಗಳಿಗೆ ಸಮಜಾಯಿಷಿ ಒದಗಿಸಬೇಕಿದೆ. 

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....